ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು
ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟನ ಶಾಸನ ಇದೆ)
ಅರವಟ್ಟಿಗೆ ಅಂದ್ರೆ ಏನು? ( ಧಾರವಾಡದ ಸುಬಾಸ್ ರೋಡಿನಲ್ಲಿ, ಪೊಲೀಸ್ ಟಾಣೆ ಎದುರು ಈ ಅರವಟ್ಟಿಗೆ ಇದೆ).
ಇವೆರಡನ್ನು ಇಲ್ಲಿ ಚನ್ನಾಗಿ ಬಿಡಿಸಿ ಹೇಳಲಾಗಿದೆ(ಬರೆದಿರುವವರು: ಶಿಕಾರಿಪುರ ಕೆ. ಹರಿಹರೇಶ್ವರ,ಸರಸ್ವತೀಪುರಂ, ಮೈಸೂರು)
http://thatskannada.oneindia.in/literature/hari/040204badami_shasana.html
ಮುಂದೆ ನನ್ನ ತಿರುಳ್ಗನ್ನಡ ನಾಡಿನ ಬೆಟ್ಟಿಯ ಬಗ್ಗೆ ಹೆಚ್ಚು ಬರೆಯುವೆ. ಎದುರು ನೋಡಿ

- Login or register to post comments
- 442 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
Ka. aṟa(ಅರ), aṟu virtue, charity, alms, law, dharma, Yama.
http://dsal.uchicago.edu/cgi-bin/philologic/getobject.pl?c.0:1:314.burro...
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
aṟa = ಅಱ
ಅರ = ಚೂಪು ಮಾಡಲು ಬಳಸುವ ಕೈದು
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
--
ಅರವಟ್ಟಿಗೆ: ಅಱ ಅಂದರೆ ಧರ್ಮ. ಈಗ ಅರವಟ್ಟಿಗೆ ಅನ್ನುವ ಪದವೂ ಕಾಣೆಯಾಗಿದೆ. ಅದರ ಅರ್ಥ ಧರ್ಮದ ಕಟ್ಟಿಗೆ. ಬಿಸಿಲಲ್ಲಿ ಬಳಲಿ ಬಂದವರಿಗೆ ನೀರು, ತಣ್ಣನೆ ಮಜ್ಜಿಗೆ, ಪಾನಕ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಿ ದಣಿವಾರಿಸುತ್ತಿದ್ದ ತಾಣ.
ಅರಭಟ್ಟ ಚಾಲುಕ್ಯರ ಕಾಲದವನು, ಬಹುಶಃ ಒಬ್ಬ ಮಂತ್ರಿ. ಅವನ ಪ್ರಸ್ತಾಪವಿರುವ ಶಾಸನ ಕನ್ನಡದಲ್ಲಿ ಪ್ರಸಿದ್ದ. ಅದರ ಪದ್ಯದ ಸಾಲುಗಳು ಯಥಾವತ್ ಈಗ ಹೇಳಲಾರೆ, ಅದರ ಸಾರಾಂಶ ಹೀಗೆ: ಕೆರಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ಜನರಿಗೆ ಒಳ್ಳೆಯದು ಮಾಡು ಎಂದು ಅರಭಟ್ಟನ ತಾಯಿ ಹಾಲು ಕುಡಿಸುತ್ತಾ ಅವನಿಗೆ ಹೇಳಿಕೊಟ್ಟಳು. ಅವನು 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ' ಒಳ್ಳೆಯವರಿಗೆ ಒಳ್ಳೆಯವನಾಗಿ ಎಲ್ಲರನ್ನೂ ಬಾಧಿಸುವ ಕಲಿಯನ್ನೂ ಸೋಲಿಸಿದವನಾಗಿ, ಮಾಧವನೇ ಇವನು ಎಂಬಂತೆ ಪ್ರಸಿದ್ಧನಾದ ಅನ್ನುತ್ತದೆ ಶಾನಸ.
ಕನ್ನಡದ ಮೊದಲ ಶಾನಸ ಹಲ್ಮಿಡಿ ಶಾಸನದಷ್ಟೇ ಪ್ರಸಿದ್ಧವಾದದ್ದು ಇದು.
ಧಾರವಾಡದಲ್ಲಿ ಅರವಟ್ಟಿಗೆ ಎಂಬ ಬೋರ್ಡು ಇನ್ನೂ ಇದ್ದರೆ ಅಲ್ಲಿನ ಜನ ಸುಮಾರು ಸಾವಿರ ವರ್ಷಗಳ ಕನ್ನಡಪದವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ ಅಂತ ಸಂತೋಷಪಡೋಣ!
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
>>>ಅವನು 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ'
ಸ್ವಾಮಿಯವ್ರೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಆದ್ರೆ ಸ್ವಲ್ಪ ತಿದ್ದು ಬೇಕಿದೆ.
ಸಾಧೂನ್ಗೆ ಸಾಧು, ಮಾದೂರ್ಯಂಗೆ ಮಾದೂರ್ಯಂ,
ಬಾದಿಪ್ಪ ಕಾಲಿಗೆ , ಕಲಿಯುಗ ವಿಪರೀತನ್,
ಮಾಧವನೀತನ್ ಪೆರನಲ್ಲ.
ನಾನು ತುಂಬಾ ಹಿಂದೆ ಎಲ್ಲೂ ಕೇಳಿದ್ದು.
ಇಲ್ಲಿ ಮಾದೂರ್ಯ ಅಂದ್ರೆ ಮಹಾ ದೂರ್ಯ ( ದೂರ್ತ) ಅಂತ ಕಾಣುತ್ತೆ.
ತನ್ನ ಹೆಸರು ಮಾಧವ, ಅತ್ವ ತನ್ನನ್ನು ತಾನು ಮಾಧವ( ವಿಷ್ಣು ) ಅಂತ ಕರೆದುಕೊಂಡಿದ್ದಾನೋ ತಿಳಿದವರು ಹೇಳಬೇಕು.
ಸವಿತೃ
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
ಬಾದಿಪ್ಪ ಕಾಲಿಗೆ == ಬಾದಿಪ್ಪ ಕಲಿಗೆ
ಎಲ್ಲೂ == ಎಲ್ಲೋ
ಅಂದಹಾಗೆ ನಾನು ದಟ್ಸ್ ಕನ್ನಡ ದಲ್ಲಿ ಇದು ಬಂದಿರುವುದು ಮುಂಚೆ ಓದಿರಲಿಲ್ಲ. ಹಾಗಾಗಿ ರಿಪ್ಲೈ ಮಾಡಿದೆ. ಅಲ್ಲಿ ಸ್ವಲ್ಪ ವಿವರವಾಗಿಯೇ ಇದೆ.
ಉ: ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು?
ತಮಿಳಲ್ಲಿ ಈ ಅಱ ಇನ್ನೂ ಬಳಕೆಯಲ್ಲಿದೆ? ಎಂದು ಕೇಳಿದ್ದೀನಿ...
ಹಾಗೇ ತಿರುಕ್ಕುಱಳ್ ಅಲ್ಲಿ (ಮೂರಲ್ಲಿ) ಒಂದು ಪಾಲು ಈ ’ಅಱ’ದ ಬಗ್ಗೇ ಇದೆಯಂತೆ!
http://www.britannica.com/eb/article-9100030/Tirukkural
An all-inclusive ethical guide, the Tirukkural has as its foremost moral imperatives the avoidance of killing and the avoidance of falsehood. It also commends to the reader a feeling of compassion for all individuals, regardless of caste or creed. Its 133 sections of 10 couplets each are divided into three books: aram (virtue), porul (government and society), and kamam (love).
http://nvkashraf.myweb.io/kurkan/KanCONT.htm