ಈ ಪದದ ಮೂಲ
ನಮಸ್ಕಾರ,
ಪ್ರಣೌತಿ ಅನ್ನೊ ಪದ ಕನ್ನಡದ್ದು ಎಂದು ಹಲವಾರು websites ನಲ್ಲಿ ಬರೆದಿದೆ.
http://www.hamaranews.com/babynamehome.jsp?typ=hindu&bg=girl<r=P
http://www.nameandfame.org/p.html
http://www.eknazar.com/Parenting/viewbabynames.php?&g=F&n=P&r=Hindu
http://indianames.indviews.com/indian-hindu-girl-name-p.htm
http://www.hiren.info/indian-baby-names/Girl/P
ಆದರೆ, ಈ ಪದ ಸಂಸ್ಕೃತದಿಂದ ಬಂದಿರಬಹುದು ಅಂತ ನನ್ನ ಗೇಳೆಯನೊಮ್ಮ ಅಭಿಪ್ರಾಯಪಟ್ಟ.
ದಯವಿಟ್ಟು, ಯಾರದರು ಈ ಪದದ ಹಿನ್ನೆಲೆಯನ್ನು ತಿಳಿಸುವಂತವರಾಗಿ. ಇದು ಕನ್ನಡದ್ದ ಅಥವ ಸಂಸ್ಕೃತದ್ದ ಅಂತ.
ಸಿಗುವ,
ದೀಪಕ್

- Login or register to post comments
- 274 hits
- Email this forum




RSS:
ಉ: ಈ ಪದದ ಮೂಲ
ಅಚ್ಚಗನ್ನಡದಲ್ಲಿ 'ದೀಪ'(ಸಕ್ಕದ) ಕ್ಕೆ 'ಸೊಡರು' ಅಂತಾರೆ.
ದೀಪಕ = ದೀವಿಗೆ ..ಇದು ತದ್ಬವ.
ನಮ್ಮ ಆಂಡಯ್ಯ ಹೇಳಿರೋ ಹಾಗೆ ತದ್ಬವಗಳು ಕೂಡ ಅಚ್ಚಗನ್ನಡ ಪದಗಳೇ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಪದದ ಮೂಲ
ಧನ್ಯವಾದಗಳು ವೈಭವ್ ಅವರೆ.
ಆದರು, ಪ್ರಣೌತಿ ಪದದ ಮೂಲ ಇನ್ನೂ ಗೊತ್ತಾಗಲಿಲ್ಲ.
ಉ: ಈ ಪದದ ಮೂಲ
ದೀಪಕ್ ನನಗನ್ನಿಸುವ ಮಟ್ಟಿಗೆ ಅದು "ಪ್ರಣೌತಿ" ಅಲ್ಲ "ಪ್ರಣತಿ" ಇರಬೇಕು. "ಪ್ರಣತಿ" ಸರಿಯಾದರೆ ಅದು ಸಂಸ್ಕೃತ ಪದ. ಕನ್ನಡದಲ್ಲಿ ತದ್ಭವ ಮಾಡಿದರೆ ಹಣತೆ. ಆದರೆ "ಪ್ರಣತಿ" ಎಂಬ ಪದ ಸಂಸ್ಕೃತ ಸಾಹಿತ್ಯದಲ್ಲಿ ಹೇಗೆ ಬಳಕೆಯಾಗಿದೆ ನನಗೆ ತಿಳಿಯದು.
ಹಾಗೆಯೇ "ಪ್ರಣತಿ" ಎಂಬುದನ್ನು ಕ್ರಿಯಾಪದ ಅಂತ ಮಾಡಿದರೆ "ನಮಿಸುತ್ತಾನೆ/ತ್ತಾಳೆ/ತ್ತದೆ" ಎಂಬ ಅರ್ಥವೂ ಬರುವಂತೆ ಮಾಡಬಹುದು.
ಪ್ರಣೌತಿ ಪದದ ವಿವರಣೆ.
ಸಂಸ್ಕೃತದಲ್ಲಿ "ಪ್ರಣವ" ಎಂಬ ಪದವಿದೆ. "ಓಂ"ಕಾರ ಎಂಬರ್ಥದಲ್ಲಿ ಬಳಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಪ್ರಣೌತಿ ಎಂಬುದಕ್ಕೆ "ಓಂಕಾರವನ್ನು ಸೇವಿಸುವುದು" ಎಂಬರ್ಥ ಸಿಗುತ್ತದೆ. ಶೃಣೋತಿ, ಕರೋತಿ, ಆಪ್ನೋತಿ ತರಹ. ಆದರೆ ಇಲ್ಲಿ "ಶೃಣ್", "ಕೃ" ಗಳು ಕ್ರಿಯಾಧಾತುಗಳು. ಪ್ರಣವ ಎಂಬುದರ ಧಾತು (ಅದು ಏನು ಎಂಬುದು ದೊಡ್ಡ ಪ್ರಶ್ನೆ??) ನಾಮಪದದಧಾತು.