Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

December 11, 2007 - 10:54pm — Sunil Jayaprakash

"ಭರತೇಶ ವೈಭವ" ಕಲ್ಪಿನ ಈ ನಾಲ್ಕನೇ ಭಾಗವನ್ನು ಮುಂಚಿನಂತಲ್ಲದೆ (ಅಂದರೆ ಲೇಖನದಡಿ ಹಾಕದೆ), ಒಂದು ಚರ್ಚೆಯ ವಿಷಯವಾಗಿ ಹಾಕುತ್ತಿದ್ದೇನೆ. ಕಾರಣ, ಇದರಲ್ಲಿ ನಿಮ್ಮೆಲ್ಲರ ನೆರವು, ಭಾಗವಹಿಸುವಿಕೆ ಬೇಕು. ನಾನು ಗಮನಿಸಿದ ಒಂದು ಕುತೂಹಲಕಾರಿಯಾದ ಮತ್ತು ಅಷ್ಟೇ ಸ್ವಾರಸ್ಯವೆನಿಸಬಹುದಾದಂತಹ ಒಂದು ವಿಷಯವನ್ನು ನಿಮಗೆಲ್ಲರಿಗೂ ತಿಳಿಸುತ್ತೇನೆ.

ಭರತೇಶ ವೈಭವದ "ಉತ್ತರನಾಟಕ ಸಂಧಿ" ಎಂಬಲ್ಲಿ ಈ ರೀತಿಯ ಒಂದು ಪದ್ಯ ಬರುತ್ತದೆ.

ಗದ್ದುಗೆಯೊಳಗೊಂದು ಹೊನ್ನಪುತ್ತಳಿಯನು
ತಿದ್ದಿ ಸಿಂಗರಿಸಲಂತದಕೆ
ಇದ್ದಂತೆ ಪ್ರಾಣ ಬಂದೀಕ್ಷಿಸುವುದೊಯೆನ
ಲಿದ್ದನಾ ಚೆಲುವರ ದೇವ || 3 ||

ಗದ್ದುಗೆಯೊಳಗೆ ಒಂದು ಹೊನ್ನಪುತ್ತಳಿಯನು ತಿದ್ದಿ ಸಿಂಗರಿಸಲಂತೂ, ಅದಕೆ ಇದ್ದಂತೆ ಪ್ರಾಣ ಬಂದು ಈಕ್ಷಿಸುವುದೋ ಎನಲು ಇದ್ದನಾ ಚೆಲುವರ ದೇವ. (ಭರತೇಶನನ್ನು ಹೊಗಳುವ ಪರಿ ಇದು)

ತೋರುವ ಚಂದ್ರಬಿಂಬದೊಳಡಗಿದ ಹದಿ
ನಾರು ಕಲೆಗಳೊಯೆಂಬಂತೆ
ಮಾರೊಡ್ಡಿ ಮುತ್ತಿನ ಜವನಿಕೆಯೊಳು ಹದಿ
ನಾರು ಪಾತ್ರಗಳಿದ್ದುವಾಗ || 4 ||

"ತೋರುವ ಚಂದ್ರಬಿಂಬದೊಳು ಅಡಗಿದ ಹದಿನಾರು ಕಲೆಗಳೊ", ಎಂಬಂತೆ, ಮಾರ ಒಡ್ಡಿ ಮುತ್ತಿನ ಜವನಿಕೆಯೊಳು ಹದಿನಾರು ಪಾತ್ರಗಳು ಇದ್ದುವಾಗ.

ಇಲ್ಲಿ ಹದಿನಾರು ಕಲೆ ಎಂದರೆ ಆವುವು ? ಕುತೂಹಲಕಾರಿ ಅಂಶವೆಂದರೆ, ಒಮ್ಮೆ ನಾನು "ಛಾಂದೋಗ್ಯೋಪನಿಷತ್ತನ್ನು" ಓದುವಾಗಲೂ ಇದೇ ಪ್ರಶ್ನೆ ಕಾಡಿತ್ತು. ನೋಡಿ ಛಾಂದೋಗ್ಯೋಪನಿಷತ್ತಿನಲ್ಲಿ ಹೀಗೊಂದು ಶ್ಲೋಕ ಬರುತ್ತದೆ.

ಷೋಡಶಕಲಃ ಸೋಮ್ಯ ಪುರುಷಃ ಪಂಚದಶಾಹಾನಿ ಮಾಶೀ ಕಾಮಮಾಪಃ
ಪಿಬಾಪೋಮಯಃ ಪ್ರಾಣೋ ನ ಪಿಬತೋ ವಿಚ್ಛೇತ್ಸ್ಯತ ಇತಿ ||

ಸೋಮ್ಯನೇ, ಮನುಷ್ಯನು ಹದಿನಾರು ಕಲೆಗಳಿಂದ ಕೂಡಿದವನು. ಒಂದು ಕೆಲಸ ಮಾಡು, ಹದಿನೈದು ದಿನ ನೀನು ಊಟಮಾಡಬೇಡ, ಆದರೆ ಬೇಕಿದ್ದರೆ ತೃಪ್ತಿಯಾಗುವಷ್ಟು ನೀರು ಕುಡಿ. ಪ್ರಾಣವು ನೀರುಮಯವಾಗಿದೆ, (ನೀರನ್ನು) ಕುಡಿಯುವವನನ್ನು ಪ್ರಾಣವು ಬಿಟ್ಟುಹೋಗುವುದಿಲ್ಲ...ಹೀಗೆ.

ಇಲ್ಲಿಯೂ ಅದೇ ಪ್ರಶ್ನೆ ಕಾಡುತ್ತದೆ, "ಆ ಹದಿನಾರು ಕಲೆಗಳು ಆವುವು ?"

‹ ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ ಶಂಕರ ಮತ್ತು ಅಲ್ಲಮ ಪ್ರಭು ›
  • ತತ್ವಜ್ಞಾನ
Ornamental seperator
  • Login or register to post comments
  • 427 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 12, 2007 - 8:36am — Sunil Jayaprakash

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

Sunil Jayaprakash's picture

ಒಂದು ಸುಳುಹು - ಇದಕ್ಕೆ ಉತ್ತರ ಛಾಂದೋಗ್ಯೋಪನಿಷತ್ತಿನಲ್ಲಿಯೇ ಇದೆ Eye-wink

  • Login or register to post comments
  • link
  • Email this ಪ್ರತಿಕ್ರಿಯೆ
December 23, 2007 - 4:10am — benaka

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

benaka's picture

ಸುನಿಲರೆ,

ಹದಿನಾರು ಕಲೆಗಳು ವಿವಿಧ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ತೋರುತ್ತವೆ. ಉದಾ:ಚಂದ್ರನ ಹದಿನಾರು ಕಲೆಗಳು, ನಿತ್ಯಾದೇವಿಯರ ರೂಪದ ದೇವಿಯ ಕಲೆಗಳು, ತಂತ್ರದಲ್ಲಿನ ತಿಥಿದಿನದ ಕಳೆಗಳು ಇತ್ಯಾದಿ. ಆದರೆ ನೀವಿಲ್ಲಿ ಉಪನಿಷತ್ತಿಗೆ ಸಂಬಂಧ ಬೆಸೆದಿರುವುದರಿಂದ ಆ ಹದಿನಾರು ಕಲೆಗಳು ಹೀಗಾಗುತ್ತವೆ:

ವ್ಯಾಹೃತಿಗಳು ಏಳು : ಭೂಃ , ಭುವಃ , ಸುವಃ, ಮಹಃ, ಜನಃ, ತಪಃ, ಸತ್ಯಂ.
ಈ ಏಳು ವ್ಯಾಹೃತಿಗಳು ಮರ್ತ್ಯಲೋಕಕ್ಕಿಂತ ಮಿಗಿಲಾದ ಗುಣಗಳು/ ಏಳು ಲೋಕಗಳನ್ನು ತೋರುತ್ತವೆ. ಇವುಗಳಲ್ಲಿ ಮೊದಲ ನಾಲ್ಕಕ್ಕೆ ನಾಲ್ಕು ರೂಪಗಳಿವೆ. ಅಂದರೆ ೪ ರ ನಾಲ್ಕು = ೧೬ ರೂಪಗಳು; ಇವೇ ಷೋಡಶಕಲೆಗಳು ಹಾಗೂ ಇವುಗಳನ್ನು ಉಳ್ಳವನೇ ಷೋಡಶಕಲಾಪುರುಷ - ಸಾಕ್ಷಾತ್ ಪರಬ್ರಹ್ಮ. ಆ ರೂಪಗಳೆಂದರೆ:

ಭೂ: -> ಭೂಮಿ, ಅಗ್ನಿ, ಋತ, ಪ್ರಾಣ
ಭುವಃ -> ಆಕಾಶ, ಗಾಳಿ, ಸಾಮ, ಅಪಾನ
ಸುವಃ -> ಸ್ವರ್ಗ, ಸೂರ್ಯ, ಯಜುಸ್, ವ್ಯಾನ
ಮಹಃ -> ರವಿ, ಚಂದ್ರ, ಓಂಕಾರ, ಆಹಾರ

ಇವುಗಳನ್ನರಿತು ಧ್ಯಾನಮಾಡಬೇಕೆಂದು ತೈತ್ತಿರೀಯ ಉಪನಿಷತ್ ಹೇಳುತ್ತದೆ.(ಛಾಂದೋಗ್ಯದಲ್ಲಿನ ವಿವರದ ಬಗ್ಗೆ ತಿಳಿಯದು)

ಮರೆತಿದ್ದೆ: ಸರಪಳಿ ಪ್ರಸಂಗದ ಪದ್ಯಕ್ಕಾಗಿ ಧನ್ಯವಾದಗಳು!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • Email this ಪ್ರತಿಕ್ರಿಯೆ
December 28, 2007 - 9:50pm — Sunil Jayaprakash

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

Sunil Jayaprakash's picture

ಹದಿನಾರು ಕಲೆಗಳು ವಿವಿಧ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ತೋರುತ್ತವೆ

ಹೌದು, ಬೆನಕರೇ ನನಗೂ ಹಾಗೆಯೇ ತೋರುತ್ತಿದೆ. ನೋಡಿ, ೧೬ ಅಂಕಿಗೆ ಅದೇನೋ ತುಂಬಾ ಮಹತ್ವವಿದೆ ಅಂತ ಕಾಣತ್ತೆ. ಹಾಡೇ ಇದೆಯಲ್ಲವೇ. "ಹುಚ್ಚುಕೋಡಿ ಮನಸು ಅದು ೧೬ರ ವಯಸು" ಎನ್ನುವ ಹಾಗೆ Laughing out loud

ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಡೆ, "ಸತ್ಯಕಾಮ-ಜಾಬಾಲನ" ಕತೆ ಆದಮೇಲೆ ನಾಲ್ಕು ಬ್ರಹ್ಮಗಳ ಬಗ್ಗೆ ಬರತ್ತೆ. ಒಂದೊಂದು ಬ್ರಹ್ಮರೂಪವೂ ಚತುಷ್ಕಲಪಾದಬ್ರಹ್ಮ ಎಂಬುದಾಗಿ ಹೇಳತ್ತೆ.

ಪ್ರಕಾಶವಾನ್ ಬ್ರಹ್ಮ - ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ
ಅನಂತವಾನ್ ಬ್ರಹ್ಮ - ಪೃಥ್ವಿ, ಅಂತರಿಕ್ಷ, ದ್ಯುಲೋಕ, ಸಮುದ್ರ
ಜ್ಯೋತಿಷ್ಮಾನ್ ಬ್ರಹ್ಮ - ಅಗ್ನಿ, ಸೂರ್ಯ, ಚಂದ್ರ, ವಿದ್ಯುತ್
ಆಯತನವಾನ್ ಬ್ರಹ್ಮ - ಪ್ರಾಣ, ಚಕ್ಷುಸ್, ಶ್ರೋತ್ರಂ, ಮನಃ

ಅದರ ಶ್ಲೋಕಗಳು ಇಲ್ಲಿವೆ. ಇವನ್ನು ತಿಳಿದುಕೊಂಡವನು ಷೋಡಶಕಲಾಪುರುಷನಾಗಬಲ್ಲನು.

  • Login or register to post comments
  • link
  • Email this ಪ್ರತಿಕ್ರಿಯೆ
December 12, 2007 - 9:06am — savithru

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

savithru's picture

ನಾನು ಒಮ್ಮೆ ಬೆಂಗಳೂರಿನಲ್ಲಿ ನೆಲಸಿರುವ ಉತ್ತರಭಾರತದ ಒಬ್ಬ ಮಾರವಾಡಿ ( ಜೈನ) ವ್ಯಕ್ತಿಯೊಬ್ಬರನ್ನು ಆಗಾಗ್ಗೆ ಭೇಟಿಯಾಗಿತ್ತಿದ್ದೆ.

ಅವರ ಪ್ರಕಾರ

ಕೇವಲ ಕೃಷ್ಣ ನೊಬ್ಬನೇ ಎಲ್ಲಾ ಹದಿನಾರು ಕಲೆಗಳಣ್ಣು ಉಳ್ಳವನು. ರಾಮ 12 ಕಲೆಗಳನ್ನು ಉಳ್ಳವನು. ಅವರು ಇನ್ನೂ ಯಾವ ಯಾವ ದೇವರಿಗೋ ಎಸ್ಟು ಎಶ್ಟು ಅನ್ಕಗಳನ್ನೋ ಕೊಡುತ್ತಾ ಹೋದರು. ಈಗ ಮರೆತು ಹೋಗಿದೆ.

ನಮ್ಮಂತಾ ಮನುಷ್ಯರಿಗೆ ಎಲ್ಲ ಹದಿನಾರು ಗುಣಗಳು ಇರುವುದಿಲ್ಲ. ನಮ್ಮಲ್ಲಿರುವ ಕಲೆಗಳು "ಜಾಸ್ತಿ ಎಂದರೆ 5 ರಿಂದ 6 ಅಂತೆ"!!

ಈ ಕಲೆಗಳ ಲಿಸ್ಟ್ ಮುಂದೆ ಯಾರಾದ್ರೂ ಬರೆಯಬಹುದು ಎಂದು ಕಾದಿದ್ದೇನೆ. ನನಗೆ ಕೆಲವೇ ಕೆಲವು ನೆನಪಿವೆ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
December 20, 2007 - 5:50pm — girish.rajanal

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

girish.rajanal's picture

ಜವನಿಕ ಅಂದರೆ ಯೌವನ ಅಂತ ಅರ್ಥಾನಾ?
ಭರತೇಶ ವೈಭವ ತುಂಬ ಕುತುಹಲಕಾರಿಯಾಗಿದೆ.
ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • Email this ಪ್ರತಿಕ್ರಿಯೆ
December 20, 2007 - 11:14pm — hamsanandi

ಉ: ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪

hamsanandi's picture

ಜವನಿಕೆ ಎಂದರೆ ತೆರೆ (ರಂಗದ ಮುಂದೆ ಸರಿಸುವಂತಹ) , ಅಥವಾ ಈ ಸಂದರ್ಭದಲ್ಲಿ, ಮುಖವನ್ನು ಮುಚ್ಚುವಂತಹ ತೆರೆ ಎಂದರ್ಥ.

ತಲೆಯಮೇಲೆ ಹಾಕಿದ ಕಿರೀಟದಿಂದ ತೂಗುತ್ತಿರುವ ಮುತ್ತುಗಳೇ ಮುಖ ಮುಚ್ಚುವ ತೆರೆಯಾಗೊದ್ದಿರಬೇಕು.

ಯವನಿಕಾ (ಸಂಸ್ಕೃತ) -> ಜವನಿಕೆ

ಸಂಸ್ಜೃತ ನಾಟಕಕ್ಕೆ ತೆರೆಯ ಸೇರ್ಪಡೆ ಯವನರ (ಗ್ರೀಕರ) ಸಂಪರ್ಕ ಬಂದ ಮೇಲೆ ಆಗಿದ್ದೆಂಬ ಮಾತಿದೆ. ಅದಕ್ಕೇ ತೆರೆಗೆ ಯವನಿಕಾ ಎಂಬ ಹೆಸರು.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವ ಕಲ್ಪು ೭ - ರತ್ನಾಕರವರ್ಣಿಯ ಕಾಲದ ವಿಚಾರ
  • ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಭರತೇಶ ವೈಭವ ಕಲ್ಪು ೧೪ - ಪ್ರಾಸದೊಡನೆ ಆಟ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator