ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ಕಂಗ್ಲಿಷನ್ನು ಯುನಿಕೋಡ್ ಗೆ ಪರಿವರ್ತಿಸಲು ಆನ್ಲೈನ್ ಸ್ಕ್ರಿಪ್ಟ್

November 20, 2005 - 8:48pm — hpn

(ತ ವಿ ಶ್ರೀ ಯವರು ಕಳುಹಿಸಿದ PM ನಿಂದ)

ಕಂಗ್ಲಿಷನ್ನು ಯುನಿಕೋಡಿಗೆ ಕನ್ವರ್ಟ್ ಮಾಡಲು ಇಲ್ಲೊಂದು ಆನ್ಲೈನ್ ಸ್ಕ್ರಿಪ್ಟ್ ಇದೆ. ಇನ್ನೂ ಯುನಿಕೋಡ್ IME install ಮಾಡಿಕೊಂಡಿಲ್ಲದವರು ಕಂಗ್ಲಿಷಿನಲ್ಲಿ ಬರೆದು ಮೇಲಿನ ಸಂಪರ್ಕದಲ್ಲಿ ಅದನ್ನು ಯುನಿಕೋಡಿಗೆ ಪರಿವರ್ತಿಸಬಹುದು. Smiling

‹ ಕೂಟು : ಒಂದು 'ಪದಾರ್ಥ' ಚಿಂತಾಮಣಿ...
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 922 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 21, 2005 - 11:20am — honnung

ಇದನ್ನು ಸಂಪದದಲ್ಲಿ ಅಳವಡಿಸಬಹುದೇ?

honnung's picture

ಇದು ತುಂಬಾ ಸರಳ ಪದ್ಧತಿ. ಇದನ್ನು ಸಂಪದದಲ್ಲಿ ಉಪಯೋಗಿಸಲು ಸಾಧ್ಯವಾ? ನಾನು ಹೆಚ್ಚು ಬಾರಿ internet cafe ಬಳಸುತ್ತೇನೆ. ಅನೇಕ ಕಡೆ ಕನ್ನಡ ಫಾಂಟ್ ಗಳು ಇರುವುದಿಲ್ಲ. ಈ ರೀತಿ ಮಾಡುವುದರಿಂದ ನನ್ನಂತಹ ಅನೇಕ ಜನರಿಗೆ ಉಪಯೋಗವಾಗುವುದು.
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 21, 2005 - 1:10pm — hpn

Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ?

hpn's picture

ಕನ್ನಡ ಯುನಿಕೋಡ್ ಫಾಂಟು ಇಲ್ಲದೇ ಈ ಮೇಲಿನ ಸ್ಕ್ರಿಪ್ಟು ಕೂಡ ಕೆಲಸ ಮಾಡೋದಿಲ್ಲ. ಯುನಿಕೋಡಿನಲ್ಲಿ ಕನ್ನಡ ಓದಲು ಯುನಿಕೋಡ್ ಕನ್ನಡ ಫಾಂಟೊಂದು ಬೇಕೇಬೇಕು.

ಈ ಸ್ಕ್ರಿಪ್ಟು ಕನ್ನಡ ಐ ಎಮ್ ಇ (IME) ಅಥವಾ Input method ಇಲ್ಲದಿದ್ದವರಿಗೆ ಅಥವಾ ಅದನ್ನು ಉಪಯೋಗಿಸಿ ಬಲ್ಲದವರಿಗೆ ಮೊದಮೊದಲಿಗೆ ಸಹಾಯವಾಗುವಂತದ್ದು. ಕೊನೆಗೊಂದು ದಿನ ನೀವು ಕನ್ನಡ ಟೈಪಿಸಲು ಬರಹ ಅಥವಾ ಇನ್ಯಾವುದಾದರೂ ಒಂದು IME ಬಳಸಲು ಕಲಿಯಲೇಬೇಕು. Smiling
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 2:04pm — chidananda_b

Re:Re: ಇದನ್ನು ಸಂಪದದಲ್ಲಿ ಅಳವಡಿಸಬಹುದೇ?

chidananda_b's picture

ನಾಡಿಗ್ ಅವರು ಹೇಳಿರುವಂತೆ, ಇದೂ ಕೂಡ ಯುನಿಕೋಡ್ ಕನ್ನಡ ೞಾನ್ಟ್ (font) ಇಲ್ಲದೆ ಕೆಲಸ ಮಾಡಲಾರದು. ನಿಮ್ಮ ಹತ್ತಿರ ಯಾವುದೇ ಕನ್ನಡ ತಂತ್ರಾಂಶ (ಬರಹ, ನುಡಿ ಇತ್ಯಾದಿ) ಇಲ್ಲದೇ ಇರುವಾಗ ಇದು ತುಂಬಾ ಸಹಾಯಕಾರಿ. ಉದಾಹರಣೆಗೆ: ನಾನು ಉಪಯೋಗಿಸುವ ಗಣಕಯಂತ್ರದಲ್ಲಿ ಯಾವುದೇ ಕನ್ನಡ ತಂತ್ರಾಂಶವನ್ನು ಇನ್ಸ್ಸ್ಟಾಲ್ (install) ಮಾಡಿಲ್ಲ. ಇದರಿಂದಾಗಿ ನಾನು ಯಾವಾಗಲೂ ಇದೇ ಕೊಂಡಿಯನ್ನು ಉಪಯೋಗಿಸುತ್ತಿದ್ದೇನೆ.ಅಲ್ಲದೆ ಇದು ಕನ್ನಡ ಟೈಪಿಂಗ್ ಕಲಿಯಲು ತುಂಬ ಸಹಾಯಕಾರಿ ಎಂದು ನನ್ನ ಅನಿಸಿಕೆ.
(ದಯಮಾಡಿ font ಮತ್ತು install ಗೆ ಕನ್ನಡ ಪದ ಏನೆಂದು ಹೇಳುವಿರ?)

-ಚಿದಾನಂದ ಬಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 2:08pm — Yamini

ಕನ್ನಡ ಪದ

Yamini's picture

ಫಾಂಟ್ ಮತ್ತು ಇನ್ಸ್ಟಾಲ್ ಗೆ ಕನ್ನಡ ಪದಗಳು ಹೀಗಿವೆ. ಫಾಂಟು, ಇನ್ ಸ್ಟಾಲು.

ಯಾಮಿನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 4:20pm — Rohit

ಇನ್ಸ್ಟಾಲ್ : ಪರ್ಯಾಯ ಪದ

Rohit's picture

ಈ ಇನ್ಸ್ಟಾಲ್ ಅನ್ನೋ ಪದಕ್ಕೆ ಪರ್ಯಾಯವಾಗಿ ತವಿಶ್ರೀ ಯವರು ಒಮ್ಮೆ 'ಏರಿಸು' ಎಂಬ ಪದವನ್ನು ಬಳಸಿದ್ದರು. ನನಗೆ ಈ ಪ್ರಯೋಗ ಇಷ್ಟವಾಯಿತು...ಬಳಸುತ್ತೇನೆ...ಎಲ್ಲರಿಗೂ ಅದು ಇಷ್ಟವಾದಲ್ಲಿ ಅದನ್ನೇ ಉಪಯೋಗಿಸಿಕೊಂಡುಹೋಗಬಹುದು.

ಹಿಂದೆ ಚರ್ಚಿಸಿದಂತೆ ತಾತ್ರಿಕ ಪದಗಳನ್ನೆಲ್ಲ ಕನ್ನಡ/ಸಂಸ್ಕೃತಕ್ಕೆ ಅನುವಾದಿಸಿಯೇ ಬಳಸಬೇಕು ಅನ್ನೋ ಮಡಿವಂತಿಕೆ ಬೇಡ ಅನಸುತ್ತೆ...ಸೋ ಚಿದಾನಂದ್ ನಿಮಗೆ install ಅನ್ನೋದೇ ಸುಲಭ ಅನ್ಸುದ್ರೆ ಅದನ್ನೇ ಬಳಸ್ತಾ ಹೋಗಬಹುದಲ್ವೇ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 4:30pm — ಶ್ಯಾಮ ಕಶ್ಯಪ

ಅನುಷ್ಠಾಪನೆ

ಶ್ಯಾಮ ಕಶ್ಯಪ's picture

ಅನುಷ್ಠಾಪನೆ ಸರಿಯಾದ ಪದ ಅನ್ನಿಸುತ್ತದೆ. ಅದನ್ನ ಮುಂಚೆಯೂ ಬಳಸಿದ ನೆನಪು
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 9:07pm — karthik

ಸ್ಥಾಪಿಸು

karthik's picture

ನನ್ನ ಪ್ರಕಾರ "ಸ್ಥಾಪಿಸು" ಕೂಡ ಅದೆ ಅರ್ಥ ಕೊಡುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 22, 2005 - 10:05pm — ismail

ಪಾರಿಭಾಷಿಕಗಳ ಅನುವಾದ ಅನಗತ್ಯ

ismail's picture

ನನ್ನದೊಂದು ಸರಳ ಪ್ರಶ್ನೆ. ಸಾಫ್ಟವೇರ್ ಇನ್ಸ್ಟಾಲ್ ಮಾಡಿದರೆ ಅದು 'ನೀನು ನನ್ನನ್ನು ಇನ್ಸ್ಟಾಲ್ ಮಾಡಿದ್ದೀಯಾ ಹಾಗಾಗಿ ನನಗೆ ಕನ್ನಡ ಬರುವುದಿಲ್ಲ'ಎಂದು ಹೇಳುತ್ತದೆಯೇ?
ಕನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ಇದುವೇ. ನಮ್ಮ ಸಂಸ್ಕೃತಿಯಲ್ಲಿ ಇಲ್ಲದ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಅಭಿವ್ಯಕ್ತಿಸಲು ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಹೊರಗಿನಿಂದ ಪದಗಳನ್ನು ಎರವಲು ಪಡೆದು ಭಾಷೆ ಬೆಳೆಯುತ್ತದೆ. ಈಗ Install ಎಂಬ ಪದಕ್ಕೆ ಬರೋಣ. ಈ ಇಂಗ್ಲಿಷ್ ಪದಕ್ಕೆ ಹಲವು ಅರ್ಥಗಳಿವೆ. ಕಂಪ್ಯೂಟರ್ ನ ಸಂದರ್ಭದಲ್ಲಿ ಇದಕ್ಕೆ ವಿಶಿಷ್ಟಾರ್ಥವಿದೆ. ಅಂದರೆ ಅದೊಂದು ಪಾರಿಭಾಷಿಕವಾಗಿ ಬಳಕೆಯಾಗುತ್ತದೆ. ಇದನ್ನು ಅನುವಾದಿಸುವ ಬದಲಿಗೆ ಹಾಗೆಯೇ ಉಳಿಸಿಕೊಳ್ಳುವುದು ಉತ್ತಮ. ಕಂಪ್ಯೂಟರ್ ನಂಥ ಅಂತಾರಾಷ್ಟ್ರೀಯ ವ್ಯಾಪ್ತಿಯುಳ್ಳ ತಂತ್ರಜ್ಞಾನದ ಸಂದರ್ಭದಲ್ಲಿ ಇದು ಅಗತ್ಯ ಕೂಡಾ. ಕೇವಲ ಕನ್ನಡ ಮಾತ್ರ ಬಲ್ಲವರೂ ಕಂಪ್ಯೂಟರ್ ಪಾರಿಭಾಷಿಕಗಳನ್ನು ಅವುಗಳ ಮೂಲ ರೂಪದಲ್ಲಿಯೇ ಅರಿತುಕೊಳ್ಳುವುದು ಅವರ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇಸ್ಮಾಯಿಲ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2006 - 4:01pm — hpn

ಸದ್ಯಕ್ಕೆ ಒಂದು ರೂಪದಲ್ಲಿ ಲಭ್ಯ

hpn's picture

ಸದ್ಯಕ್ಕೆ ನೀವು ಮೇಲೆ ಕೇಳಿದ ಸವಲತ್ತು ಸಂಪದದಲ್ಲಿ 'ಲಭ್ಯ'. Converter ಪುಟದಲ್ಲಿ ನೀವೀಗ ಕಂಗ್ಲಿಷ್ ಬರೆದು ಯೂನಿಕೋಡ್ ಪಡೆಯಬಹುದು. ILC ನಲ್ಲಿದ್ದ ಆಕರವನ್ನು ಸ್ವಲ್ಪ ಬದಲಾವಣೆ ಮಾಡಿ ಬಹಳಷ್ಟು ಜನಪ್ರಿಯವಾಗಿರುವ ಬರಹ transliteratioನ್ನಿಗನುಗುಣವಾಗಿ ಸೇರಿಸಿದ್ದೇನೆ.

ಆದರೂ ಇದನ್ನು ಬಳಸಲು ನಿಮ್ಮ ಕಂಪ್ಯೂಟರಿನಲ್ಲಿ ಯೂನಿಕೋಡ್ ಸೌಲಭ್ಯ ಎನೇಬಲ್ ಮಾಡಿಕೊಂಡಿರಲೇಬೇಕು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
  • ಕನ್ನಡ ಯುನಿಕೋಡ್ ಫಾಂಟ್
  • ರಿಲಯನ್ಸ್‌ನಲ್ಲಿ ಕನ್ನಡ
  • ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ
  • ಕಂಗ್ಲಿಷ್ ಲೇಖನಗಳು ಅಳಿಸಿಹಾಕಲಾಗುತ್ತವೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನಸು, ಕಣಸು
  • ತಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
ಇನ್ನಷ್ಟು


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator