ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

December 15, 2007 - 8:43pm — Sunil Jayaprakash

ಇಂದು "ನಮ್ಮ ದೇಶ" ವಿಶ್ವದಲ್ಲಿಯೇ ಅತ್ಯುತ್ತಮ ನೌಕಾಪಡೆಯನ್ನು ಹೊಂದಿದೆ. ಇದೇನು ಸಣ್ಣ ವಿಷಯವಲ್ಲ. ತುಂಬಾ ಹೆಮ್ಮೆಪಡತಕ್ಕ ವಿಷಯ. ಆದರೆ ವಸಾಹತುಪೂರ್ವದ ಭಾರತದಲ್ಲಿ ನೌಕಾನೆಲೆ ಹೇಗಿತ್ತು ? ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟನಲ್ಲಿ ಭರತೇಶ ವೈಭವದ ಕಲ್ಪು - ೬

ವಸಾಹತುಪೂರ್ವ ಕರ್ನಾಟಕದಲ್ಲಿ ಇದ್ದಿರಬಹುದಾದ ನೌಕಾನೆಲೆಗಳ ಬಗ್ಗೆ ರಿಸರ್ಚ್ ಆಗಿದೆಯೇ ಎಂಬುದಾಗಿ ಇತಿಹಾಸಜ್ಞರು, ಸಾಗರ ತಜ್ಞರು ಹೇಳಬೇಕು. ಸದ್ಯಕ್ಕೆ ಭರತೇಶ ವೈಭದ ಕರ್ತೃ ರತ್ನಾಕರವರ್ಣಿ ಏನು ಹೇಳಿದ್ದಾನೆ ಎಂಬುದನ್ನಷ್ಟೇ ಇಲ್ಲಿ ಹಾಕುತ್ತೇನೆ Smiling

ಭರತೇಶ ವೈಭವದ, "ಮುನಿಭುಕ್ತಿ ಸಂಧಿ" ಎನ್ನುವ ಕಡೆ ಕರ್ನಾಟಕದಲ್ಲಿ ಇದ್ದಿರಬಹುದಾದ ನೌಕಾನೆಲೆಯ ಬಗ್ಗೆ ಸಣ್ಣ ಬೆಳಕು ಚೆಲ್ಲುತ್ತದೆ.

ಹಡಗು ದ್ವೀಪಕೆ ಹೋಗುತಿರಲಲ್ಲಿ ವಸ್ತುವ
ಗಡಣಿಸಿ ಕಳುಹುವನಂತೆ
ಬಿಡದೆ ಮುಕ್ತಿಗೆ ಹೋಹ ಮುನಿಯ ಕೈಗನ್ನವ
ನಿಡಬೇಡವೆ ಎಂದು ನೆನೆವ || ೨೨ ||

"ಹಡಗು ದ್ವೀಪಕೆ ಹೋಗುತಿರಲು, ಅಲ್ಲಿ ವಸ್ತುವ ಗಡಣಿಸಿ ಕಳುಹುವನಂತೆ, ಬಿಡದೆ ಮುಕ್ತಿಗೆ ಹೋಹ ಮುನಿಯ ಕೈಗೆ, ಅನ್ನವ ನೀಡಬೇಡವೆ" ಎಂದು ನೆನೆವ.

ಹಿಂದೆ, ಹಡಗುಗಳ ಮೂಲಕ ಆಗುವ ವ್ಯಾಪಾರದ ಸಂದರ್ಭದಲ್ಲಿ ಪಾರಿಭಾಷಿಕವಾಗಿ "ಗಡಣಿಸು" ಎಂಬ ಪದ ಬಳಕೆಯಲ್ಲಿತ್ತು ಎಂಬುದಾಗಿ ತಿಳಿಯಬಹುದಾಗಿದೆ. ಇಂದು, ಈ ದಿನ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಡಗಿನ ಮೂಲಕ ವಸ್ತುವನ್ನು ಕಳುಹಿಸಬೇಕೆಂದರೆ "ಇನ್ವಾಯ್ಸ್, ಬಿಲ್ ಆಫ್ ಎಕ್ಸೇಂಜ್, ಡೆಲಿವರಿ ನೋಟ್, ಬಿಲ್ ಆಫ್ ಲೇಡಿಂಗ್(Lading)" ಎಲ್ಲವೂ ಬೇಕಾಗುತ್ತದೆ.

ಈ ಪದ್ಯ ಓದಿದ ಮೇಲೆ, ಕರ್ನಾಟಕದಲ್ಲಿ ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ, ನೌಕಾನೆಲೆಯಿತ್ತೇ ? ಎಂಬ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಹೆಚ್ಚಾಯಿತು.

ಉಫ್, ಸಾಹಿತ್ಯ ತುಂಬಾ ನಿಗೂಢ Laughing out loud Sad

‹ ಏನಿದು 'ಅದಿ'? awesome ಗೆ 'ಚಿಂದಿ' ಸರಿಯಾದ ಪದವೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 570 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 18, 2007 - 5:29pm — hpn

ಉ: ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

hpn's picture

ಭರತೇಶ ವೈಭವದ ಸಾಲುಗಳನ್ನು ಅವಲೋಕಿಸಿ ಬರೆಯುತ್ತಿರುವ ರೀತಿ ಬಹಳ ಇಷ್ಟವಾಯಿತು. ಭಾಷೆ ಬಲ್ಲವರು ಮತ್ತಷ್ಟು ಜನ ಈ ಬಗ್ಗೆ ಚರ್ಚೆ ನಡೆಸಿದರೆ ಬಲ್ಲದ ನನ್ನಂತವರಿಗೆ ತಿಳಿದುಕೊಳ್ಳಲು ಬಹಳಷ್ಟು ಸಿಕ್ಕೀತು.

ಭಾರತದ ನೌಕಾಪಡೆ ವಿಶ್ವದಲ್ಲೇ ಉತ್ತಮವಾದದ್ದು ಎಂಬುದು ನನಗನಿಸುವುದಿಲ್ಲ. ಹೀಗೆಂದು ನಾನು ಅವರ ಸಾಮರ್ಥ್ಯದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆಂದಲ್ಲ - ಹೊರನೋಟಕ್ಕೆ ಭಾರತದ ನೌಕಾಪಡೆ ಹಿಂದೆ ಬಿದ್ದಂತಿದೆ. ಯೂರೋಪ್ ಹಾಗೂ ಅಮೇರಿಕೆಯ ಸಾಮರ್ಥ್ಯ ಹೆಚ್ಚಿದ್ದಂತಿದೆ. ಅವರ ನೌಕಾ ಸಾಮರ್ಥ್ಯಕ್ಕೆ ಐತಿಹಾಸಿಕವಾದ ಪರಂಪರೆಯೂ ಇದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 18, 2007 - 11:19pm — hamsanandi

ಉ: ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

hamsanandi's picture

ಸುನಿಲರೆ,

ನಿಮ್ಮ ಭರತೇಶ ವೈಭವ ಸರಣಿಯಿಂದ ಹಲವಾರು ವಿಷಯಗಳನ್ನು ಕಲಿಯುತ್ತಿದ್ದೇನೆ Smiling

ಗಡಣಿಸು ಅನ್ನುವುದು ಗಡಣ ಅನ್ನುವ ನಾಮಪದದ ಕ್ರಿಯಾರೂಪವಿರಬೇಕೆಂದೆನಿಸುತ್ತೆ./

>>>"ಹಡಗು ದ್ವೀಪಕೆ ಹೋಗುತಿರಲು, ಅಲ್ಲಿ ವಸ್ತುವ ಗಡಣಿಸಿ ಕಳುಹುವನಂತೆ, ಬಿಡದೆ ಮುಕ್ತಿಗೆ ಹೋಹ ಮುನಿಯ ಕೈಗೆ,
>>> ಅನ್ನವ ನೀಡಬೇಡವೆ" ಎಂದು ನೆನೆವ.

ನನಗೆ ಹೀಗೆ ತೋರುತ್ತೆ:

ಗಡಣ -> (ಒಂದೇ ತರಹ ವಸ್ತುಗಳ) ಗುಂಪು, group
ಗಡಣಿಸು -> ಗುಂಪುಗೂಡಿಸು , classify, sort

ಕುಮಾರವ್ಯಾಸ ಉದ್ಯೋಗ ಪರ್ವದಲ್ಲಿ ಕೃಷ್ಣನಿಂದ ಕರ್ಣನಿಗೆ ಹೀಗೆ ಹೇಳಿಸುತ್ತಾನೆ:

" ಎಡದ ಕಡೆಯಲಿ ಕೌರವೇಂದ್ರನ ಗಡಣ ಬಲದ ಕಡೆಯಲಿ ಪಾಂಡು ಪುತ್ರರ ಗಡಣ ನಡುವೆ ಮದ್ರ ಮಾಗಧ ಯಾದವಾದಿಗಳು...."

ಇಲ್ಲಿನ ಕೌರವರು ಒಂದು distinct ಗುಂಪು, ಪಾಂಡವರು ಒಂದು distinct ಗುಂಪು. ಅಲ್ಲವೇ? ಹಾಗೇ ಬಂದರಿನಲ್ಲಿ, ಬೇರೆ ಬೇರೆ ಪದಾರ್ಥಗಳನ್ನು ಒಗ್ಗೂಡಿಸಿ, ಬೇರೆ ಬೇರೆ ರಾಶಿಗಳಲ್ಲೋ, ಕಟ್ಟುಗಳಲ್ಲೋ ಹಾಕಿ ಕಳಿಸುತ್ತಿದ್ದಿರಬಹುದಲ್ಲ? ಹಾಗಾಗಿ ಗಡಣಿಸು ಎನ್ನುವುದು classify, sort ಎನ್ನುವುದಕ್ಕೆ ಅಚ್ಚಕನ್ನಡಪದವಾಗಬಹುದೇ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 19, 2007 - 6:38pm — shreekant.mishrikoti

ಉ: ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

shreekant.mishrikoti's picture

ಗಡಣ ಅಂದ್ರೆ ಗುಂಪೇ ಇರಬೇಕು ... ಯಾವುದೋ ಹಾಡಿನಲ್ಲಿ ಚಿಕ್ಕೆಗಡಣ - ನಕ್ಷತ್ರಗಳ ಗುಂಪು ಅಂತ ಬರ್ತದೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 19, 2007 - 11:40am — Sunil Jayaprakash

ಉ: ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

Sunil Jayaprakash's picture

ಹರಿ ಮತ್ತು ಹಂಸಾನಂದಿ, ನಿಮಗೆ ಭರತೇಶ ವೈಭವದ ಸರಣಿ ಇಷ್ಟವಾಗುತ್ತಿರುವುದು ನನಗೂ ಸಂತೋಷ. ಗೆಳೆಯರೆ, ಮೇಲಿನ ಪದ್ಯದ ವಿಗ್ರಹ ವಾಕ್ಯ ಹೀಗಾಗಬೇಕಿತ್ತು.

"ಹಡಗು ದ್ವೀಪಕೆ ಹೋಗುತಿರಲು, ಅಲ್ಲಿ ವಸ್ತುವ ಗಡಣಿಸಿ ಕಳುಹುವನಂತೆ, ಬಿಡದೆ ಮುಕ್ತಿಗೆ ಹೋಹ ಮುನಿಯ ಕೈಗೆ, ಅನ್ನವನು ಇಡಬೇಡವೆ" ಎಂದು ನೆನೆವ.

ಹಂಸಾನಂದಿಯವರು, classify, sort ಎಂಬುದಕ್ಕೆ ಕನ್ನಡ ಪದಗಳು ಇರುವುದನ್ನು ಕುಮಾರವ್ಯಾಸ ಭಾರತದಿಂದ ಪದ್ಯಗಳನ್ನು ಉದಾಹರಿಸಿದ್ದು ಸಂತೋಷವಾಯಿತು. ಹೀಗೆ ಕನ್ನಡ ಪದಗಳ ಅರ್ಥವ್ಯಾಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವರೆಂದು ತಿಳಿಯುತ್ತೇನೆ.

ಗಡಣ -
ಈ ಪದದ ವಿಚಾರವಾಗಿ ಮಾಹಿತಿ ಕಲೆಹಾಕುತ್ತಿದ್ದಾಗ, ತುಂಬಾ ಆಶ್ಚರ್ಯಕರವಾದ ಒಂದು ಮಾಹಿತಿ ಸಿಕ್ಕಿತು. ಕನ್ನಡದಲ್ಲಿ ಗಡಂಗ, ಗಡಂಗು, ಗಿಡ್ಡಂಗಿ - storeroom, godown ಎಂಬ ಪದಗಳು ಇವೆಯಂತೆ. ಸಾಮಾನ್ಯವಾಗಿ ಇಂಗ್ಲೀಷಿನ ಗೋಡೌನ್ ಎಂಬುದಕ್ಕೆ "ಗೋದಾಮು" ಎಂಬುದಾಗಿ ಕನ್ನಡದಲ್ಲಿ ಗ್ರಾಂಥಿಕವಾಗಿ ಬಳುಸುವುದುಂಟು. ಆದರೆ, ಜನರಿಗೆ ಗೋದಾಮಿಗಿಂತ "ಗೊಡೋನ್" ಎಂಬುದೇ ಮೆಚ್ಚಿನ ಪದವಾಗಿದ್ದರೆ ಆಶ್ಚರ್ಯವಿಲ್ಲ. ಏಕೆಂದರೆ, 'ಗೊಡೋನ್' ಎಂಬ ಪದದ ವ್ಯುತ್ಪತ್ತಿಯನ್ನು ಕನ್ನಡದಲ್ಲಿಯೂ ನೀಡಬಹುದು. ಗೊಡೌನ್ ಎನ್ನುವುದು ಕನ್ನಡದಂತಿರುವ ಇಂಗ್ಲೀಷ್ ಪದ (ಅಥವಾ ಇಂಗ್ಲೀಷಿನಂತಿರುವ ಕನ್ನಡ ಪದ) ??. ಒಟ್ಟಿನಲ್ಲಿ ಇಲ್ಲಿ ಏನೋ "ಕೊಟ್ಟು-ತಂದು" ಆಗಿದೆ.

ಹಾಗೆಯೇ ಮತ್ತೊಂದು ವಿಚಾರ ಗಮನಿಸಿ, ಗಡಂಗ->ಗಡಣ->ಗಣ ಎಲ್ಲವೂ ಒಂದೇ ರೀತಿಯಾದ ಅರ್ಥವನ್ನು ಸೂಚಿಸುತ್ತಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 20, 2007 - 4:45am — hamsanandi

ಉ: ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬

hamsanandi's picture

ಗಡಂಗು ಎನ್ನೋದನ್ನ ಹೆಂಡದಂಗಡಿ ಅನ್ನೋ ಅರ್ಥದಲ್ಲಿ ಬಳಸಿರೋದನ್ನ ನಾನು ಓದಿದ್ದೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಭರತೇಶ ವೈಭವ ಕಲ್ಪು ೭ - ರತ್ನಾಕರವರ್ಣಿಯ ಕಾಲದ ವಿಚಾರ
  • ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
ಇನ್ನಷ್ಟು


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator