ಕಟವಾಯಿ, ಓರಗೆ, ಕರ್ಬೊನ್.......
ಸುಮ್ನೆ, ಅಂಗೆ ಪದಗಳ ಜೊತೆ ಆಟ...ಇವುಗಳ ಅರಿತ ಹೇಳಿ?
೧. ಕಟವಾಯಿ/ಕಟ್ಟವಾಯಿ
೨. ಓರಗೆ/ವಾರ್ಗೆ
೩. ಕರ್ಬೊನ್
೪. ಅನಿಬರು
೫. ಕೆಮ್ಮನೆ
೬. ಬಿರ್ದಿನನ್
೭. ಕಿಸುರು
೮. ಬರ್ದುಂಕು
೯.ಗಳ
೧೦.ಕೂರ್ಪನ್ ( ನಮ್ಮ ಸುನಿಲ ಜಯಪ್ರಕಾಶರು ಬರೆದಿರುವ ಬರಹಗಳನ್ನು ಗಮನಿಸುತ್ತಿದ್ದರೆ ಇದು ಸಲೀಸು)
೧೧.ಕೂರನ್

- Login or register to post comments
- 456 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕಟವಾಯಿ, ಓರಗೆ, ಕರ್ಬೊನ್.......
೧. ಬಾಯಿಗೆ ಸಂಬಂಧಿಸಿದೆ ...
೨. ವಾರಿಗಿ - ಸಮಕಾಲೀನ ಅನ್ನೋ ಸಂಸ್ಕೃತ / ಕಂಟೆಂಪೊರರಿ ಅನ್ನೋ ಇಂಗ್ಲೀಷ್ ಶಬ್ದಕ್ ಬದಲಾಗಿಕೆ ಇದನ್ನು ಬಳಸ್ಬಹುದು
೪. ಅನಿಬರು - ಎಷ್ಟೋ ಜನ ?
೭ . ಕಿಸರು ? ಕಣ್ಣ ಕೀಸರು ?
ಅಥವಾ ಬೇಸರ ?
೯ ಬಿದಿರು ಗಳ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕಟವಾಯಿ, ಓರಗೆ, ಕರ್ಬೊನ್.......
ಕೆಮ್ಮನೆ=ಸುಮ್ಮನೆ
ಗಳ=ಅಡ್ಡ, ಬೀಮು
ಕರ್ಬೊನ್= ಕರಿ ಹೊನ್ನು
ಕೂರನ್=ಮೊನಚಾದ, ಹರಿತವಾದ
______
ಬೊಳುಂಬು
ಉ: ಕಟವಾಯಿ, ಓರಗೆ, ಕರ್ಬೊನ್.......
ಸಕ್ಕತ್,
ಎಲ್ಲ ಸರಿ (ಗಳ= ತೆಳುಗಿರುವ ಉದ್ದನೆ ಕೋಲು), ಆದರೆ ಕೂರನ್ =ಮೊನಚಾದ....ಇದು ಸರಿಯೋ ತಪ್ಪೊ ನಂಗೆ ಗೊತ್ತಿಲ್ಲ...ಆದರೆ ನನಗೆ ಗೊತ್ತಿರುವ ಅರಿತವೇ ಬೇರೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಟವಾಯಿ, ಓರಗೆ, ಕರ್ಬೊನ್.......
ಬರ್ದುಂಕು ಬಗ್ಗೆ ಕುತೂಹಲಕಾರಿಯಾದ ಚರ್ಚೆ ಹಿಂದೆ ಸಂಪದದಲ್ಲಿ ಆಗಿತ್ತು. ಹಾಗೆಯೇ ನೆನ್ನೆಯ ಪ್ರಜಾವಾಣಿಯಲ್ಲಿಯೂ ಬರ್ದುಂಕು ಕುರಿತಾಗಿ ಡಾ||ಕೆ.ವಿ.ನಾರಾಯಣ ಅವರು ಸ್ವಲ್ಪ ವಿವರಿಸಿದ್ದಾರೆ. ನೋಡಿ ಇಲ್ಲಿ
ಉ: ಕಟವಾಯಿ, ಓರಗೆ, ಕರ್ಬೊನ್.......
೧. ಕಟವಾಯಿ/ಕಟ್ಟವಾಯಿ = ಬಾಯಿಯ ಬದಿ, ತುಟಿಗಳು ಸೇರುವೆಡೆ
೨. ಓರಗೆ/ವಾರ್ಗೆ = ಜೊತೆಯವನು, ಸಮಾಂತರ (parallel) - ಓರಗಿತ್ತಿ, ವಾರಗೊತ್ತಿ ನೆನೆಸಿಕೊಳ್ಳಿ!
೩. ಕರ್ಬೊನ್ = ಕಬ್ಬಿಣ
೪. ಅನಿಬರು = ಹಲವರು?
೫. ಕೆಮ್ಮನೆ = ಸುಮ್ಮನೆ?
೬. ಬಿರ್ದಿನನ್ = ಬೆದ್ದವನು
೭. ಕಿಸುರು = ಕೊಳಕು
೮. ಬರ್ದುಂಕು = ಬದುಕು
೯.ಗಳ = ಬೊಂಬು
೧೦.ಕೂರ್ಪನ್ = ಪ್ರೀತಿಪಾತ್ರ
೧೧.ಕೂರನ್ = ಮೇಲಿನದೇ?
-ಹಂಸಾನಂದಿ
ಉ: ಕಟವಾಯಿ, ಓರಗೆ, ಕರ್ಬೊನ್.......
ಸೂಪರ್ ಹಂಸಾನಂದಿಗಳೆ,
೧,೨,೩,೮,೯,೧೦ - ಒಪ್ಪು
೪. ಅನಿಬರು = ಅಶ್ಟು ಜನರು ( ಇನಿಬರು=ಇಶ್ಟು ಜನರು, ಉನಿಬರು=ಉಶ್ಟು ಜನರು, ಎನಿಬರು=ಎಶ್ಟು ಜನರು)
'ಉಶ್ಟು' ( ಸರಿಯಾಗಿ ಗೊತ್ತಿಲ್ಲ, ಅಶ್ಟು , ಇಶ್ಟು ಇವುಗಳ ನಡುವೆ) ಇದು 'ಹೊಸಗನ್ನಡ'ದಲ್ಲಿ ಇಲ್ಲ.
೫. ಕೆಮ್ಮನೆ = ಸುಮ್ಮನೆ
೬. ಬಿರ್ದಿನನ್ = ಆತಿಥ್ಯಕ್ಕೆ ಯೋಗ್ಯವಾದವನು, ಅತಿಥಿ
೭. ಕಿಸುರು = ಜಗಳ, ಅಸೂಯೆ
೧೧. ಕೂರನ್ = ಕೂರದನ್ = ಪ್ರೀತಿಪಾತ್ರನಲ್ಲ, ಪ್ರೀತಿಗೆ ಯೋಗ್ಯನಲ್ಲ
ಎದುರುಪದಗಳು : ಕೂರ್ಪನ್ x ಕೂರನ್
ಓರೆಗೆ/ವಾರ್ಗೆ ಬಗ್ಗೆ : ರಾಮ, ಸೋಮ ಇಬ್ಬರು ಒಂದೇ ವಾರ್ಗೆಯವರು ಅಂದ್ರೆ ಒಂದೆ ವಯಸ್ಸಿನವರು/ಸಮವಯಸ್ಕರು
ಕರ್ಬೊನ್ ಬಗ್ಗೆ: ಕರ್+ಪೊನ್ = ಕರ್ಬೊನ್ => ಹೊಸಗನ್ನಡದಲ್ಲಿ 'ಕರ್ಬೊನ್' ಕಬ್ಬಿಣವಾಗಿದೆ. ಕಬ್ಬಿಣ ಸಾಮಾನಿಯ ಅಲ್ಲ ಕರಿ ಚಿನ್ನ ಅದು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಟವಾಯಿ, ಓರಗೆ, ಕರ್ಬೊನ್.......
೧. ಕಟವಾಯಿ/ಕಟ್ಟವಾಯಿ = ಬಾಯಿಯ ಬದಿ, ತುಟಿಗಳು ಸೇರುವೆಡೆ
೨. ಓರಗೆ/ವಾರ್ಗೆ = ಜೊತೆಯವನು, ಸಮಾಂತರ (parallel) - ಓರಗಿತ್ತಿ, ವಾರಗೊತ್ತಿ ನೆನೆಸಿಕೊಳ್ಳಿ!
೩. ಕರ್ಬೊನ್ = ಕಬ್ಬಿಣ
೪. ಅನಿಬರು = ಹಲವರು?
೫. ಕೆಮ್ಮನೆ = ಸುಮ್ಮನೆ?
೬. ಬಿರ್ದಿನನ್ = ಬೆದ್ದವನು
೭. ಕಿಸುರು = ಕೊಳಕು
೮. ಬರ್ದುಂಕು = ಬದುಕು
೯.ಗಳ = ಬೊಂಬು
೧೦.ಕೂರ್ಪನ್ = ಪ್ರೀತಿಪಾತ್ರ
೧೧.ಕೂರನ್ = ಮೇಲಿನದೇ?
-ಹಂಸಾನಂದಿ
ಉ: ಕಟವಾಯಿ, ಓರಗೆ, ಕರ್ಬೊನ್.......
೧. ಕಟವಾಯಿ/ಕಟ್ಟವಾಯಿ = ಬಾಯಿಯ ಬದಿ, ತುಟಿಗಳು ಸೇರುವೆಡೆ
೨. ಓರಗೆ/ವಾರ್ಗೆ = ಜೊತೆಯವನು, ಸಮಾಂತರ (parallel) - ಓರಗಿತ್ತಿ, ವಾರಗೊತ್ತಿ ನೆನೆಸಿಕೊಳ್ಳಿ!
೩. ಕರ್ಬೊನ್ = ಕಬ್ಬಿಣ
೪. ಅನಿಬರು = ಹಲವರು?
೫. ಕೆಮ್ಮನೆ = ಸುಮ್ಮನೆ?
೬. ಬಿರ್ದಿನನ್ = ಬೆದ್ದವನು
೭. ಕಿಸುರು = ಕೊಳಕು
೮. ಬರ್ದುಂಕು = ಬದುಕು
೯.ಗಳ = ಬೊಂಬು
೧೦.ಕೂರ್ಪನ್ = ಪ್ರೀತಿಪಾತ್ರ
೧೧.ಕೂರನ್ = ಮೇಲಿನದೇ?
-ಹಂಸಾನಂದಿ-ಹಂಸಾನಂದಿ
ಉ: ಕಟವಾಯಿ, ಓರಗೆ, ಕರ್ಬೊನ್.......
೪. ಅನಿಬರು = ಅಷ್ಟು ಮಂದಿ, ಅಂದರು(ತೆಲುಗು).
http://dsal.uchicago.edu/cgi-bin/philologic/getobject.pl?c.0:1:4.burrow
anibar so many persons
ಇನಿಬರು = ಇಷ್ಟು ಮಂದಿ
http://dsal.uchicago.edu/cgi-bin/philologic/getobject.pl?c.0:1:413.burro...
inibar so many persons as these;
ಎನಿಬರು = ಎಷ್ಟು ಮಂದಿ
ಉನಿಬರು = ಎಷ್ಟೋ ಮಂದಿ.. ಲೆಕ್ಕವಿಲ್ಲದಷ್ಟು..!!