ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?
ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.
ಅದರ ಬದಲು ಜಾಗತಿಕ ವೇದಿಕೆಯಲ್ಲಿ ಸೆಣೆಸಲು ಎಲ್ಲರೂ ಇಂಗ್ಲಿಷನ್ನು ಉಪಭಾಷೆಯಾಗಿ ಕಲಿತರೆ ಒಳ್ಳೆಯದು. ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಇಂಗ್ಲಿಷನ್ನು ಒಂದು ಸಂಪರ್ಕಭಾಷೆಯಾಗಿ ನೆಲೆಗೊಳಿಸುವುದು ಸುಲಭ. ವಿಪರ್ಯಾಸವೆಂದರೆ ಅವುಗಳಲ್ಲಿ ಹಿಂದೀಯನ್ನು ಜಾರಿಗೆ ತರಲಿಕ್ಕಾಗಿ ಅಪಾರ ಹಣ ವ್ಯಯ ಮಾಡಲಾಗುತ್ತಿದೆ. ಕೆಲವೊಮ್ಮೆಯಂತೂ ಹಿಂದೀಯನ್ನು ಬಲವಂತವಾಗಿ ಹೇರಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನೆಲೆಗೊಂಡ ಅಂಥ ಸಂಸ್ಥೆಗಳಲ್ಲಿ ಆಯಾ ರಾಜ್ಯಭಾಷೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹಿಂದೀಯನ್ನು ಬಲವಂತವಾಗಿ ಹೇರಬಾರದು.
ಆದರೆ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಹಿಂದೀ ಭಾಷೆಯೇ ಪ್ರಧಾನ ಎಂಬುದಾಗಿ ಕೆಲ ಮುಟ್ಠಾಳರು ಪ್ರತಿಪಾದಿಸುತ್ತಿದ್ದಾರೆ. ಅವರನ್ನು ಮುಟ್ಠಾಳರು ಎಂದು ಏಕೆ ಕರೆಯುತ್ತಿದ್ದೇನೆ ಎಂದರೆ ಅವರಿಗೆ ಹಿಂದೀ ಕುರಿತ ವಾಸ್ತವತೆಯ ಅರಿವಿಲ್ಲ. ಹಿಂದೀಗಾಗಿ ನೀಡಲಾಗುವ ಪುಡಿಗಾಸಿನ ಎಂಜಲಿಗಾಗಿ ಅವರು ಕನ್ನಡವನ್ನು ಬಲಿಗೊಡುತ್ತಿದ್ದಾರೆ. ಅದೇ ನೇರದಲ್ಲಿ ಅವರು ತಮ್ಮ ಮುಂದಿನ ಪೀಳಿಗೆಗೂ ವಂಚನೆ ಮಾಡುತ್ತಿದ್ದಾರೆ.
ಈ ಸಂಸ್ಥೆಗಳಲ್ಲಿ ನಡೆವ ಹಿಂದೀ ಪಕ್ಷಾಚರಣೆಯನ್ನೇ ನೋಡೋಣ. ಅದರಲ್ಲಿ ಭಾಗವಹಿಸುವವರಾದರೂ ಎಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು ಮಂದಿ. ಪ್ರತಿವರ್ಷವೂ ನೋಟಿಂಗ್ ಅಂಡ್ ಡ್ರಾಫ್ಟಿಂಗ್, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಗಾಯನಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಅದೇ ನಾಲ್ಕೈದು ಮಂದಿ. ಅದರ ಬಹುಮಾನಗಳನ್ನು ಅವರವರೇ ಹಂಚಿಕೊಳ್ಳುತ್ತಾರೆ.
ಅದೇ ಹಣವನ್ನು ಅದೇ ಸ್ಪರ್ಧೆಗಳನ್ನು ಕನ್ನಡದಲ್ಲಿ ನಡೆಸಿ ನೋಡಿ, ಅದಕ್ಕಿರುವ ಸ್ಪಂದನವೇ ಬೇರೆ. ಏಕೆಂದರೆ ಅದು ಜನರ ನಾಡಿಮಿಡಿತಕ್ಕೆ ತಕ್ಕುನಾದ ಕಾರ್ಯಚಟುವಟಿಕೆ. ಒಂದು ಕನ್ನಡ ಗೀತೆಗಳ ಗಾಯನ ಸ್ಪರ್ಧೆ ನಡೆಸಿ ನೋಡಿ, ಅದಕ್ಕಿರುವ ಜನಜಾತ್ರೆಯ ಕಾಲುಭಾಗವೂ ಹಿಂದೀ ಸ್ಪರ್ಧೆಗಳಿಗೆ ಇರುವುದಿಲ್ಲ. ಹಿಂದೀ ಸ್ಪರ್ಧೆಗಳಲ್ಲಿ ಭಾಗವಹಿಸುವವರೆಲ್ಲ ಹಿಂದೀ ಹೆಸರಲ್ಲಿ ಎಂಜಲಿಗೆ ಆಸೆಪಡುವವರೆಂಬುದು ನಿಜ. ಮನೆಯಲ್ಲಿ ಮೃಷ್ಟಾನ್ನಭೋಜನವಿದ್ದರೂ ಗುಡಿಯಲ್ಲಿ ಪೂಜಾರಿಯು ಎಸೆಯುವ ಅನ್ನಕ್ಕೆ ರುಚಿ ಹೆಚ್ಚು. ಅದಕ್ಕೆ ಮುಗಿಬೀಳುವ ಜನರನ್ನು ಕೇಳಿ, ಅವರೆನ್ನುತ್ತಾರೆ ಅದು ದೇವರ ಪ್ರಸಾದ ಎಂದು.

- Login or register to post comments
- 750 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ನನ್ನಿ!
ಒಂದು ಸಂಗತಿ..
ನಮ್ಮ ದೇಸಕ್ಕೆ national ನುಡಿ ಅಂತ ಇಲ್ಲ. ಇದ್ರೆ ಅದು ಈಗ ಎಲ್ಲ ೨೪ ನುಡಿಗಳು.
ಲಾಲ್ ಬಹುದ್ದೂರ್ ಶಾಸ್ತ್ರೀ ಹಿಂದಿ ಹೇರಲು ಹೋಗಿ ತಮಿಳರ ಕೆಂಗಣ್ಣಿಗೆ ನುಲುಗಿದ್ದು ಗೊತ್ತಿರುವ ಸಂಗತಿ... ಈಗ ಅದೇ ಹೇರಿಕೆಯನ್ನು ಕಳ್ಳತನದಲ್ಲಿ ನಡೆಸುತ್ತಿದ್ದಾರೆ.
ಸಂವಿದಾನದಂತೆ ಇಂಡಿಯ ದೇಸಕ್ಕೆ national ನುಡಿ ಇಲ್ಲ! ಹಿಂದಿ ಮತ್ತು ಇಂಗ್ಲೀಸು "ಕೇಂದ್ರ ಸರಕಾರ" ಅನ್ನೋವ ಒಂದು ಸಂಸ್ಥೆಯ ಆಡಳಿತ ನುಡಿಯಷ್ಟೇ..!
ಆದ್ರೆ ಕನ್ನಡ ಕರ್ನಾಟಕ ರಾಜ್ಯದ( ರಾಜ್ಯ ಅಂದ್ರೆ ನಾಡು/ದೇಶ/... ) ಬರೀ ಆಡಳಿತ ನುಡಿ ಅಲ್ಲ, ಜತೆಗೆ ನಾಡ, ನಾಡಿಗರ ನುಡಿಯಾಗಿದೆ.. ಕರ್ನಾಟಕ ಹುಟ್ಟಿದ್ದೇ ಕನ್ನಡ ನುಡಿಯಿಂದ. ಆದುದರಿಂದ ಕನ್ನಡ ರಾಷ್ಟ್ರದ ರಾಷ್ಟ್ರಭಾಷೆ ಕನ್ನಡವೇ. ನಾವು ಕನ್ನಡ ರಾಷ್ಟ್ರದಲ್ಲೇ ಇರೋದು.
ರಾಷ್ಟ್ರ ಒರೆಯ ಬಳಕೆ ಬಗ್ಗೆ ಹೆಚ್ಚು ತಿಳಿಯ ಬೇಕಿದ್ರೆ, ಆಂದ್ರರಲ್ಲಿ ನೋಡಿ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ನಮ್ಮ ಬಾಷೆ ಬೆಳೆಸೊದು ಇನ್ನೊಂದು ಬಾಷೆಯನ್ನು ತುಳಿಯೊದ್ರಿಂದ ಅಲ್ಲ. ಹಿಂದಿಗೆ ಅದರದೇ ಆದ ಸೌಂದರ್ಯ ಇದೆ, ಇದನ್ನು ನಾವು ಬಾಷೆ ಅಂತಲ್ಲೆ ನೋಡಬೇಕು, ಅಲ್ಲಿ ಒಳೆಯದು ಸಿಕ್ಕಿದರೆ ಉಪಯೊಗಿಸಬೇಕು. ಹಿಂದಿ ರಾಸ್ಟ್ರ್‍ಅ ಬಾಷೆಯೊ ಅಲ್ಲವೊ ಬೇರ್‍ಎವಿಷಯ. ಆದರೆ ಬೇರೆ ಎರಡು ರಾಜ್ಯದವರು ಜೊತೆಆದ್ರೆ ಮಾತ್ನಾಡುವುದು ಹೆಚ್ಚಾಗಿ ಈ ಬಾಷೆ (ನಾನು ನೊಡಿದ್ದು). ಕೇರಳದವನು ಮತ್ತು ಕನ್ನಡದವರು ಒಟ್ಟಾದರೆ ನಮ್ಮೂರಲ್ಲಿ ಮಾತನಾಡುವುದು ಅವರಿಗೆ ಗೊತ್ತಿರುವ ಅರ್ದಂಬರ್ದ ಹಿಂದಿಯಲ್ಲಿ. ಅಸ್ಸಾಂ ನವನು ಇಲ್ಲಿಬಂದು ಮಾತನಾಡುವುದು ಹಿಂದಿಯಲ್ಲಿ. ಆದುದರಿಂದ ಹಿಂದಿ ಬಗ್ಗೆ ಯಾಕೆ ಅಸ್ಟೋಂದು ದ್ವೇಷ ಬೆಳೆಸುತ್ತೀರಿ? ಕನ್ನಡ ದ ಉದ್ದಾರ ಇತರ ಬಾಷೆಯ ಸಮಾದಿಮೇಲೆ ಇಲ್ಲ ಅನ್ನುವುದು ತಿಳಿದುಕೊಳ್ಳಿ. ನಾನೇನು ಹಿಂದಿ ಅಭಿಮಾನಿ ಅಲ್ಲ, ನನಗೆ ಎಳೆಂಟು ಬಾಷೆ ಬರುತ್ತದೆ ಅದು ನನ್ನ ಆಸಕ್ತಿ ಇಂದ ಕಲಿತಿರುವುದು. ಒಂದೊಂದು ಬಾಷೆಯಲ್ಲಿ ಒಂದುಂದು ರುಚಿ ಇದೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ನಮ್ಮ ಬಾಷೆ ಬೆಳೆಸೊದು ಇನ್ನೊಂದು ಬಾಷೆಯನ್ನು ತುಳಿಯೊದ್ರಿಂದ ಅಲ್ಲ. ಹಿಂದಿಗೆ ಅದರದೇ ಆದ ಸೌಂದರ್ಯ ಇದೆ, ಇದನ್ನು ನಾವು ಬಾಷೆ ಅಂತಲ್ಲೆ ನೋಡಬೇಕು, ಅಲ್ಲಿ ಒಳೆಯದು ಸಿಕ್ಕಿದರೆ ಉಪಯೊಗಿಸಬೇಕು. ಹಿಂದಿ ರಾಸ್ಟ್ರ್‍ಅ ಬಾಷೆಯೊ ಅಲ್ಲವೊ ಬೇರ್‍ಎವಿಷಯ. ಆದರೆ ಬೇರೆ ಎರಡು ರಾಜ್ಯದವರು ಜೊತೆಆದ್ರೆ ಮಾತ್ನಾಡುವುದು ಹೆಚ್ಚಾಗಿ ಈ ಬಾಷೆ (ನಾನು ನೊಡಿದ್ದು). ಕೇರಳದವನು ಮತ್ತು ಕನ್ನಡದವರು ಒಟ್ಟಾದರೆ ನಮ್ಮೂರಲ್ಲಿ ಮಾತನಾಡುವುದು ಅವರಿಗೆ ಗೊತ್ತಿರುವ ಅರ್ದಂಬರ್ದ ಹಿಂದಿಯಲ್ಲಿ. ಅಸ್ಸಾಂ ನವನು ಇಲ್ಲಿಬಂದು ಮಾತನಾಡುವುದು ಹಿಂದಿಯಲ್ಲಿ. ಆದುದರಿಂದ ಹಿಂದಿ ಬಗ್ಗೆ ಯಾಕೆ ಅಸ್ಟೋಂದು ದ್ವೇಷ ಬೆಳೆಸುತ್ತೀರಿ? ಕನ್ನಡ ದ ಉದ್ದಾರ ಇತರ ಬಾಷೆಯ ಸಮಾದಿಮೇಲೆ ಇಲ್ಲ ಅನ್ನುವುದು ತಿಳಿದುಕೊಳ್ಳಿ. ನಾನೇನು ಹಿಂದಿ ಅಭಿಮಾನಿ ಅಲ್ಲ, ನನಗೆ ಎಳೆಂಟು ಬಾಷೆ ಬರುತ್ತದೆ ಅದು ನನ್ನ ಆಸಕ್ತಿ ಇಂದ ಕಲಿತಿರುವುದು. ಒಂದೊಂದು ಬಾಷೆಯಲ್ಲಿ ಒಂದುಂದು ರುಚಿ ಇದೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಅಯ್ಯೋ ರೀಈಈ ರೋಶನ್ ನೇಟ್ಲಾ (ನಿಮ್ಮ ಹೆಸರನ್ನು ತಪ್ಪಾಗಿ ಓದಿಕೊಂಡಿದ್ದರೆ ಕ್ಷಮಿಸಿ). ಯಾವ ಭಾಷೇಯನ್ನೂ ಯಾರೂ ದ್ವೇಷಿಸಲ್ಲ ರೀ, ಆದರೆ ಭಾಷೆಯ ವಿಷಯವನ್ನು ಹಿಡಿದುಕೊಂಡು, ನಾನು ಮೇಲು, ನೀನು ಕೀಳು ಎಂಬಂತೆ ಮಾತಾಡಿಸುವುದು, ನಮ್ಮದೇ ಸರ್ಕಾರ ಕೆಲವರಿಗಷ್ಟೇ ಸೀಮಿತ ದೃಷ್ಟಿಕೋನದಿಂದ ಸ್ಕಾಲರ್ಶಿಪ್ ಕೊಡುವುದು, ಹಿಂದಿ ಗೊತ್ತಿದ್ದರೆ ಮಾತ್ರವೇ ಚಿಕಿತ್ಸೆ ನೀಡಲಾಗುವುದು (ಇದು HALನಲ್ಲಿ ವರದಿಯಾಗಿತ್ತು) ಎನ್ನುವುದು ಇವುಗಳ ಬಗ್ಗೆಯಷ್ಟೇ ಎಲ್ಲರದ್ದೂ ತಕರಾರು.
ಸರಿ, ನಾನು ಜಾಸ್ತಿ ಕೊರೆಯಲ್ಲ, ನೀವು ಮೇರಿಜೋಸೇಫರು ಬರೆದ ಲೇಖನದ ಆಶಯವನ್ನು ಸರಿಯಾಗಿ ಗ್ರಹಿಸಿಲ್ಲವೆಂದು ನಿಮ್ಮ ಕಾಮೆಂಟಿನಿಂದ ತಿಳಿಯುತ್ತಿದೆ.
ಈ ಲೇಖನದಲ್ಲಿ ಇರೋದು ಇದೊಂದೇ ವಿಷಯ. ಇದರ ಬಗ್ಗೆ ಹೇಳಿ.
ರೀ, ಇದು ತುಂಬಾ ಸೌಜನ್ಯರಹಿತವಾದ ಮಾತು. ಇದನ್ನ ಯಾರಿಗೆ ಹೇಳ್ತಾ ಇದ್ದೀರಾ ? ಮೇರಿಜೋಸೇಫರೇನು ನಿಮ್ಮ ಹತ್ತಿರ ಬಂದು, "ನನಗೆ ಹಿಂದಿ ಕಂಡರೆ ಆಗಲ್ಲ" ಹೇಳಿದ್ರಾ ? ಅಥವಾ ಮೇರಿಜೋಸೇಫರಿಗೆ ಬರೀ ಕನ್ನಡವಷ್ಟೇ ಬರೋದು ಅಂತ ನಿಮ್ಮ ಎಣಿಕೆಯೇ ? ದಯವಿಟ್ಟು ಲೇಖನದ ಆಶಯವನ್ನು ಮೊದಲು ತಿಳಿದುಕೊಂಡು ನಂತರ ಪ್ರತಿಕ್ರಿಯಿಸಿ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ನನ್ನ ಪ್ರತಿಕ್ರೀಯೆ ಯನ್ನು ನನ್ಗಿಂತ ಚೆನ್ನಾಗಿ ಅರ್ಥ ಮಾಡಿ ಕೊಂಡಿದಕ್ಕೆ ನಿಮ್ಮ ಅದ್ಬುತ ಜ್ಞಾನಕ್ಕೆ ನಮೊ ನಮೊ ..ಹ ಹ ಹ..
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ರೀ ರೋಶನ್,
ಹಿಂದಿ ಅಕೆಡೆಮಿ ಕರ್ನಾಟಕದಲ್ಲೇ ಏಕೆ(ಮಾನ್ಯ ರಾಜ್ಯಪಾಲರು ಹೇಳಿರುವುದು)? ಆಂದ್ರ, ತಮಿಳುನಾಡು, ಕೇರಳದಲ್ಲಿ ಏಕಿಲ್ಲ. ನಾವೇನ್ ಬಿಟ್ಟಿಗ್ ಬಿದ್ದಿದಿವಾ?
ಹೀಗೆ ನೀವ್ ಹೇಳೋ ತರ ತಣ್ಣಗ್ ಇದ್ರೆ ಸವಾರಿ ಮಾಡ್ತಾರೆ ಅಶ್ಟೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಯಾಕಿಲ್ಲ?
http://hindisahithyaacademy.com/
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಬೊಳುಂಬು,
ತಮಿಳುನಾಡು ಬಿಟ್ಬುಟ್ರಿ. ಅಲ್ಲಿ ಹಿನ್ದಿ ಅಕೆಡೆಮಿ ಇಲ್ಲ ತಾನೆ?
ಕೇರಳ, ಆಂದ್ರ ಹಳ್ಳಕ್ಕೆ ಬಿದ್ರು ಅಂತ ನಾವು ಬೀಳಬೇಕಾ?
ಬಡಗು ಬಾರತದವ್ರು 'ನಮಗೆ ಎಲ್ಲ ತೆಂಕ ನುಡಿಗಳು ಒಂದೇ, ಯಾವುದು ಗೊತ್ತಿಲ್ಲ" ಅಂತ ಬಾರಿ ಹೆಮ್ಮೆಯಿಂದ ಹೇಳ್ಕೊತಾರೆ. ಇದು ಸರಿಯೇ?
ಹೋಕ್ಕಳ್ಳಲಿ, ಹಿನ್ದಿ ಅಕೆಡೆಮಿಯಿಂದ ನಮಗೆ( ಕನ್ನಡಿಗರಿಗೆ) ಆಗುವ ಬಳಕೆಯಾದರೂ ಏನು? ಅದನ್ನಾದರೂ ಹೇಳಿ.
ತಮಿಳ್ನವರು ಬಹಳ ಬೇಗ ಎಚ್ಚೆತ್ತರು. ಕನ್ನಡಿಗರು ಈಗ ಎದ್ದಿದ್ದಾರೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಆಂಧ್ರದಲ್ಲೂ ಇದೆ
http://www.apassemblylive.com/html/departments.htm
ಇಲ್ಲಿ ಕ್ಲಿಕ್ಕಿಸಿ "hindi" ಎನ್ನಿ, ಸಿಗುತ್ತದೆ.
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಇವರ ಉತ್ರ ಸಕ್ಕತ್...
ವೈಬವರು ಕೇರಳ ಮತ್ತು ತಮಿಳು ನಾಡಲ್ಲಿ ಇಲ್ಲ ಅಂದ್ರೆ.. ಇವರು ಆಂದ್ರದಲ್ಲಿದೆ ಅಂತಾರೆ!!
ಪಡುವಣ ಬಂಗಾಳ, ಮಣಿಪುರ, ಅಸಮ, ಜಮ್ಮು-ಕಾಶ್ಮೀರ, ನಾಗಲೇಂಡು, ಮಿಸುರಂ, ತಮಿಳುನಾಡು, ಕೇರಳ, ಕರ್ನಾಟಕ, ಪುದುಚೆರಿ ಇವರೆಲ್ಲ ಬೇಡ ಅಂತ ಇರೋದು ಸಾಲದ?
ಆಂದ್ರದಂಗೆ ಎಲ್ಲ ಮಾಡಕ್ಕೆ ಹೋದ್ರೆ... ಆಂದ್ರದಲ್ಲಿ ಉರ್ದುಗೆ ಇರೋ ಮೇಲ್ಮೆ-ಅನ್ನು ನಾವು ಕರ್ನಾಟಕದಲ್ಲಿ ಕೊಡಕ್ಕೆ ಆಯ್ತದ?
ಕರ್ನಾಟಕಕ್ಕೆ ಕನ್ನಡವೊಂದೇ ಸಾಕು.. ಮಿಕ್ಕವು ಆ ಆ ನುಡಿಗಳ ನೆಲಗಳಲ್ಲೇ ಇರಲಿ.!
ನಮ್ಮ ನೆಲದಲ್ಲೂ ಈ ಹಿಂದಿ ಹೇರಿಕೆಯನ್ನು ಬಗ್ಗು ಬಡೆಯೋ ಪಡೆಹುಟ್ಟಿಕೊಂಡಿರುವುದು ನಲಿವೇ..!
ನೋಡೋಣ.. ಯಾ ಯಾ ಹಿಂದಿ ರಾಜ್ಯಗಳು ನಮ್ಮ ತೆಂಕಣ ನುಡಿಗಳಿಗೆ ಏ ಏನು ಮರ್ಯಾದೆ, ಅಕಾಡೆಮಿ ಕಟ್ತಾರೆ ಅಂತ.! ಅವರಿಗೆ ನಮ್ಮ ನುಡಿಗಳ ಬಗ್ಗೆ ಇರುವ ಅಗೌರವ, ಅಸಡ್ಡೆ ಕಣ್ಣುಮುಂದೆ ಇದೆ. ಆದ್ರೆ ನಾವು ಮಾತ್ರ ಬಲು ಉದಾರಿಗಳಂತೆ ಅವಕ್ಕೆ ಮಣೆ ಹಾಕಬೇಕಂತೆ.!
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಮಹೇಶ,
ಆಂದ್ರ, ತಮಿಳುನಾಡು, ಕೇರಳದಲ್ಲಿ ಏಕಿಲ್ಲ ಅಂತ ವೈಭವ ಕೇಳಿದ್ದರಿಂದ 'ಇದೆ' ಅಂದೆ.(ಕೇರಳ ಮತ್ತು ತಮಿಳು ನಾಡಲ್ಲಿ ಇಲ್ಲ ಅ೦ತ ಅಲ್ಲ) ಎರಡು ಪ್ರಾ೦ತ್ಯಗಳಲ್ಲಿ ಇರುವುದಕ್ಕೆ ಉದಾಹರಣೆ ಕೊಟ್ಟಿದ್ದೇನೆ. ಒಂದು ನುಡಿ ಇರುವುದರಿಂದ ಅದು ಇನ್ನೊಂದು ನುಡಿಗೆ ಅಡಚಣೆಯಾಗುವುದು ನಮ್ಮ ಕಲ್ಪನೆ ಅಷ್ಟೇ. ಹಿಂದಿಯೊಂದಿಗೆ ಕನ್ನಡಕ್ಕಿರುವ ನಂಟು ತಮಿಳಿಗಿಲ್ಲ. ಆದರೆ ಉಳಿದ ಎರಡು ಭಾಷೆಗಳಿಗೆ ಇದೆ, ಅದರಲ್ಲೂ ತೆಲುಗಿಗೆ ಹೆಚ್ಚೇ ಇದೆ. ತಮಿಳಿನಲ್ಲಿ ಇಲ್ಲದಿರುವುದೊಂದು ಸಮರ್ಥನೆಯಲ್ಲ.
ವೈಭವ,
ಇಂತಹವುಗಳನ್ನು ಆದರ್ಶವಾಗಿ ಪರಿಗಣಿಸಬೇಡಿ.
ಹಿಂದಿ ಅಕಾಡೆಮಿಯಿಂದ ನಮಗೆ( ಕನ್ನಡಿಗರಿಗೆ) ಆಗುವ ಬಳಕೆಯ ಬಗೆಗೆ:
ಅದರ ಕುರಿತು ನಾನು ಮಾತಾಡುತ್ತಿಲ್ಲ. ಹಿಂದಿ ಕನ್ನಡಕ್ಕೆ ಅಡಚಣೆಯಾಗುವುದಾರೆ ಇತರ ನುಡಿಗಳಿಗೆ ಆಗುವುದಿಲ್ಲವೇ - ಇದರ ಕುರಿತು ಯೋಚಿಸಿ.
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಹೌದ..ನಿಜವಾಗಿ....ನನಿಗೆ ಗೊತ್ತಿರ್‍ಲಿಲ್ಲ....ಕನ್ನಡ ಮಾಸ್ಟ್ರು ಸ್ವಲ್ಪ ಪಾಠ ಮಾಡಿ.
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಆಯಾ ಪ್ರದೇಶದ ಜನ ತಮ್ಮ ಸ್ಥಳೀಯ ಭಾಷೆಯಲ್ಲಿ ಅಂದರೆ ಭೋಜಪುರಿಯಲ್ಲೋ ಮೈಥಿಲಿಯಲ್ಲೋ ಬರೆದರೆ ಇತರರು ಅರ್ಥೈಸಿಕೊಳ್ಳಲಾರರೇನೋ....ಆದರೆ ಹಿಂದಿಯಲ್ಲಿ ಬರೆದರೆ! ಕನ್ನಡ ಮಾಸ್ಟರ್‍ಗೇ ಗೊತ್ತು.
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಇಲ್ಲಿ ಅವ್ರು ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅನ್ನು ವುದು ಯಾಕೆ? ಕನ್ನಡದವ್ರು (ನಾವು) ಯಕೆ ಮಾಡಿಲ್ಲ? ನಮ್ಮ MP, MLC ಗಳಲ್ಲಿ ಜನಾರ್ದನ ಪೂಜಾರಿ ಮತ್ತು ಅನಂತಕುಮಾರಿಗೆ ಗೆ ಮಾತ್ರ ಕನ್ನಡ ದ ಅಭಿಮಾನವ? ಬಾಕಿಯವರು ಮಣ್ಣೂ ತಿನಲಿಕ್ಕೆ ಹೋಗಿದ್ದಾ? ಇದನ್ನು ಕೇಳಿ. ಹಿಂದಿಯವರು ಹಾಗೆ ಮಾಡಿದ್ರು ಅಂದ್ರೆ ನಾವು ಮಾಡಬಾರದು ಅಂತ ಹೇಳಿದ್ದಾರ? ನಾನು ಹೇಳಿದ್ದು ಬಾಷೆಗಳ ನಡುವೆ ವೈಷಮ್ಯ ಹೇಚಿಸಬೇಡಿ ಅಂತ ಲೇಖಕರಿಗೆ ಇಥರ ಬಾಷೆ ಬರೊಲ್ಲ, ಅವರಿಗೆ ಅಭಿಮಾನ ಇಲ್ಲ ಅಂತ ಅಲ್ಲ.ಈಗ ಕನ್ನಡ ಪರ ಸಂಗಟಣೆಗಳು ಹೆಚ್ಚಾಗಿ ಅವುಗಳ ನಡುವೆ ಪೈಪೊಟಿ ಸುರುವಾಗಿದೆ ಅದರಿಂದ ಕನ್ನಡದ ಉದ್ದಾರ ಸಾಧ್ಯವ. ನಾನು ಜನರಲ್ ಆಗಿ ಪ್ರತಿಕ್ರೀಯಿಸಿದ್ದು .
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಎಚ್ ಎ ಎಲ್ ಕಾರ್ಖಾನೆಯ ವಿಷಯವನ್ನೇ ತೆಗೆದುಕೊಂಡರೆ ಕೇವಲ ಕಳೆದ ಎರಡು ಮೂರು ವರ್ಷಗಳಿಂದೀಚೆಗೆ ಈ ಸಂಸ್ಥೆಗೆ ನೂರಾರು ಅಲ್ಲ ಸಹಸ್ರಾರು ಮಂದಿ ಉತ್ತರ ಭಾರತೀಯರು ನೌಕರಿ ಗಿಟ್ಟಿಸಿದ್ದಾರೆ. ನಾನೇ ನೋಡಿದಂತೆ ಇವರಲ್ಲಿ ಹಲವರಿಗೆ ಇಂಗ್ಲಿಷ್ ಜ್ಞಾನ ಅತ್ಯಲ್ಪವಾದ್ದರಿಂದ ಸ್ಥಳೀಯರೊಂದಿಗೆ ಮಾತನಾಡಲು ಹಿಂದೀಯನ್ನೇ ಬಳಸುತ್ತಾರೆ. ಇನ್ನು ಅವರು ಇಂಜಿನಿಯರಿಂಗ್ ಪದವಿಯನ್ನು ಹೇಗೆ ಪಡೆದರೆಂಬುದೇ ಸೋಜಿಗದ ಸಂಗತಿ. ಬಹುಶಃ ಅವರು ಹಿಂದೀಯಲ್ಲೇ ತಮ್ಮ ಇಂಜಿನಿಯರಿಂಗ್ ಪರೀಕ್ಷೆಗಳನ್ನು ಬರೆದರೋ ಏನೋ ಎಂಬ ಸಂದೇಹ ಕಾಡುತ್ತದೆ. ಕರ್ನಾಟಕದ ವಿವಿಗಳ ಪರೀಕ್ಷಾ ಮೌಲ್ಯಮಾಪನ ಕಠಿಣವಾಗಿದ್ದು ಗರಿಷ್ಠ ಅಂಕಗಳು ಶೇ.೬೦ ದಾಟುವುದು ಕಷ್ಟವಾದ್ದರಿಂದ ಕನ್ನಡಿಗರಲ್ಲಿ ಎಚ್ ಎ ಎಲ್ ಗೆ ಅರ್ಹರಾದ ಕನ್ನಡಿಗ ಇಂಜಿನಿಯರರು ಇಲ್ಲವೇ ಇಲ್ಲ ಎನ್ನುಬಹುದಾದಷ್ಟು ಅವರ ಸಂಖ್ಯೆ ನಗಣ್ಯ. ಅಂಥದ್ದರಲ್ಲಿ ಎಚ್ ಎ ಎಲ್ ನಿಗದಿಪಡಿಸಿದ cutoff ಶೇ.೭೪ನ್ನು ಈ ಹಿಂದೀ ಜನ ಹೇಗೆ ಲಂಘಿಸಿ ಬರುತ್ತಾರೆನ್ನುವುದು ಮತ್ತಷ್ಟು ಆಶ್ಚರ್ಯ ಹುಟ್ಟಿಸುತ್ತದೆ. ತಾವು ಕನ್ನಡದ ನೆಲಕ್ಕೆ ಬಂದಿದ್ದೇವೆ, ಈ ಜನರ ಆಡುನುಡಿಯಾದ ಕನ್ನಡದಲ್ಲಿ ತಾವು ಮಾತನಾಡಲು ಪ್ರಯತ್ನಿಸಬೇಕು ಎನ್ನುವುದಕ್ಕಿಂತ ತಮ್ಮ ಹಿಂದೀಯನ್ನು ಈ ಜನ ಕಲಿತಿಲ್ಲವೇಕೆ ಎಂದು ಜಬರಿಸುವ ಪರಿಯನ್ನು ನೋಡಿದರೆ ಮೈ ಉರಿಯುತ್ತದೆ. ಹಿಂದೀ ಬಾರದವರೆಂದರೆ ತಾತ್ಸಾರದಿಂದ ಕಾಣುವ ಚರ್ಯೆಗಳೂ ಇಲ್ಲದಿಲ್ಲ.
ಇಂದು ಎಚ್ ಎ ಎಲ್ ಮತ್ತು ಮಾರತ್ತಹಳ್ಳಿ ಪ್ರದೇಶವೆಲ್ಲವೂ ಅನ್ಯ ಭಾಷಿಕರಿಂದ ತುಂಬಿ ಹೋಗಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ, ಕನ್ನಡ ಭಾಷೆ ಅನಾಥವಾಗಿದೆ. ಈ ಜನ ಇಲ್ಲಿ ತುಂಬಿಹೋಗಿ ನಮ್ಮ ವ್ಯಾಪಾರ ವಹಿವಾಟು ಮಾತ್ರವಲ್ಲ ದಿನನಿತ್ಯದ ಆಗುಹೋಗುಗಳನ್ನು ಬಎಚ್ ಎ ಎಲ್ ಕಾರ್ಖಾನೆಯ ವಿಷಯವನ್ನೇ ತೆಗೆದುಕೊಂಡರೆ ಕೇವಲ ಕಳೆದ ಎರಡು ಮೂರು ವರ್ಷಗಳಿಂದೀಚೆಗೆ ಈ ಸಂಸ್ಥೆಗೆ ನೂರಾರು ಅಲ್ಲ ಸಹಸ್ರಾರು ಮಂದಿ ಉತ್ತರ ಭಾರತೀಯರು ನೌಕರಿ ಗಿಟ್ಟಿಸಿದ್ದಾರೆ. ನಾನೇ ನೋಡಿದಂತೆ ಇವರಲ್ಲಿ ಹಲವರಿಗೆ ಇಂಗ್ಲಿಷ್ ಜ್ಞಾನ ಅತ್ಯಲ್ಪವಾದ್ದರಿಂದ ಸ್ಥಳೀಯರೊಂದಿಗೆ ಮಾತನಾಡಲು ಹಿಂದೀಯನ್ನೇ ಬಳಸುತ್ತಾರೆ. ಇನ್ನು ಅವರು ಇಂಜಿನಿಯರಿಂಗ್ ಪದವಿಯನ್ನು ಹೇಗೆ ಪಡೆದರೆಂಬುದೇ ಸೋಜಿಗದ ಸಂಗತಿ. ಬಹುಶಃ ಅವರು ಹಿಂದೀಯಲ್ಲೇ ತಮ್ಮ ಇಂಜಿನಿಯರಿಂಗ್ ಪರೀಕ್ಷೆಗಳನ್ನು ಬರೆದರೋ ಏನೋ ಎಂಬ ಸಂದೇಹ ಕಾಡುತ್ತದೆ. ಕರ್ನಾಟಕದ ವಿವಿಗಳ ಪರೀಕ್ಷಾ ಮೌಲ್ಯಮಾಪನ ಕಠಿಣವಾಗಿದ್ದು ಗರಿಷ್ಠ ಅಂಕಗಳು ಶೇ.೬೦ ದಾಟುವುದು ಕಷ್ಟವಾದ್ದರಿಂದ ಕನ್ನಡಿಗರಲ್ಲಿ ಎಚ್ ಎ ಎಲ್ ಗೆ ಅರ್ಹರಾದ ಕನ್ನಡಿಗ ಇಂಜಿನಿಯರರು ಇಲ್ಲವೇ ಇಲ್ಲ ಎನ್ನುಬಹುದಾದಷ್ಟು ಅವರ ಸಂಖ್ಯೆ ನಗಣ್ಯ. ಅಂಥದ್ದರಲ್ಲಿ ಎಚ್ ಎ ಎಲ್ ನಿಗದಿಪಡಿಸಿದ cutoff ಶೇ.೭೪ನ್ನು ಈ ಹಿಂದೀ ಜನ ಹೇಗೆ ಲಂಘಿಸಿ ಬರುತ್ತಾರೆನ್ನುವುದು ಮತ್ತಷ್ಟು ಆಶ್ಚರ್ಯ ಹುಟ್ಟಿಸುತ್ತದೆ. ತಾವು ಕನ್ನಡದ ನೆಲಕ್ಕೆ ಬಂದಿದ್ದೇವೆ, ಈ ಜನರ ಆಡುನುಡಿಯಾದ ಕನ್ನಡದಲ್ಲಿ ತಾವು ಮಾತನಾಡಲು ಪ್ರಯತ್ನಿಸಬೇಕು ಎನ್ನುವುದಕ್ಕಿಂತ ತಮ್ಮ ಹಿಂದೀಯನ್ನು ಈ ಜನ ಕಲಿತಿಲ್ಲವೇಕೆ ಎಂದು ಜಬರಿಸುವ ಪರಿಯನ್ನು ನೋಡಿದರೆ ಮೈ ಉರಿಯುತ್ತದೆ. ಹಿಂದೀ ಬಾರದವರೆಂದರೆ ತಾತ್ಸಾರದಿಂದ ಕಾಣುವ ಚರ್ಯೆಗಳೂ ಇಲ್ಲದಿಲ್ಲ.
ಇಂದು ಎಚ್ ಎ ಎಲ್ ಮತ್ತು ಮಾರತ್ತಹಳ್ಳಿ ಪ್ರದೇಶವೆಲ್ಲವೂ ಅನ್ಯ ಭಾಷಿಕರಿಂದ ತುಂಬಿ ಹೋಗಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ, ಕನ್ನಡ ಭಾಷೆ ಅನಾಥವಾಗಿದೆ. ಈ ಜನ ಇಲ್ಲಿ ತುಂಬಿಹೋಗಿ ನಮ್ಮ ವ್ಯಾಪಾರ ವಹಿವಾಟು ಮಾತ್ರವಲ್ಲ ದಿನನಿತ್ಯದ ಆಗುಹೋಗುಗಳನ್ನು ಬದಲಾಯಿಸಿಬಿಟ್ಟಿದ್ದಾರೆ. ಕರ್ನಾಟಕದ ಪಠ್ಯಕ್ರಮವಿದ್ದ ಇಲ್ಲಿನ ನಮ್ಮ ಶಾಲೆಗಳೆಲ್ಲ ಇಂದು ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳಾಗಿ ಬದಲಾಗಿವೆ. ಇನ್ನು ಇಲ್ಲಿಗೆ ವಲಸೆ ಬಂದಿರುವ ಆಂಧ್ರ ತಮಿಳುನಾಡು ಮತ್ತು ಕೇರಳಗಳಂಥ ಇತರ ದಕ್ಷಿಣಇಂಡಿಯಾದ ರಾಜ್ಯಗಳವರು ಕನ್ನಡಿಗರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಾಣುತ್ತಾರಲ್ಲದೆ ಅವರೂ ಸಹ ನಮ್ಮನ್ನು ಅವರ ಮಾತೃಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನಿಸುತ್ತಾರೆ, ಆ ಪ್ರಯತ್ನ ಸೋತಾಗ ಹಿಂದೀಯನ್ನು ನಮ್ಮ ಮೇಲೆ ದಾರ್ಷ್ಟ್ಯದಿಂದ (ಈ ಮಾತನ್ನು ನಾನು ಒತ್ತಿ ಹೇಳುತ್ತಿದ್ದೇನೆ) ಪ್ರಯೋಗಿಸುತ್ತಾರೆ. ಇತರ ಭಾಷೆಗಳನ್ನು ದ್ವೇಷಿಸಬಾರದೆಂದು ಹೇಳುವುದು ಬಲು ಸುಲಭ, ಆದರೆ ತನ್ನದೇ ಭಾಷೆ ಅಪಮಾನಕ್ಕೀಡಾದಾಗ ಆಗುವ ಸಂಕಟ ಅನುಭವಿಸಿದವರಿಗೇ ಗೊತ್ತು.
ತಾವು ಕನ್ನಡದ ಈ ಪ್ರಲಾಪವನ್ನು ಕನ್ನಡದ ಮಾಸ್ತರಿಕೆ ಎಂದಿದ್ದೀರಿ. ಹಾಗಿದ್ದರೆ ಸ್ವಾಮಿಗಳೇ,
ವರನ್ತೇಜಸ್ವಿನೋ ಮೃತ್ಯುರ್ನತು ಮಾನಾವಖಣ್ಡನಮ್
ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಙ್ಗನ್ದಿನೇದಿನೇ
ಎಂಬುದರ ಅರ್ಥವನ್ನು ತಾವು ಹೇಳೋಣವಾಗಲಿ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಸ್ವಾಮಿ ನೀವು ಮಂಗಳೊರಿನ ಕೆಲವು ಸರಕಾರಿ ಕಚೆರಿಗೆ ಬನ್ನಿ ಅಲ್ಲಿ ಕನ್ನಡದವರು ನೀವು ಹೇಳಿದ ಹಿಂದಿಯವರಂತೆ ನಮ್ಮ ಇಲ್ಲಿನ ಕೆಲ ಬಡಪಾಯಿ ತುಳು ವಿನವರ ಹತ್ತಿರ ಕೂಡ ನಡೆದುಕೊಳ್ಳುವುದನ್ನು ತೊರಿಸುತ್ತೇನೆ. ಇದು ಬಾಷೆಯ ತೊಂದರೆ ಅಲ್ಲ ಜನರ ತೊಂದರೆ. ಇಲ್ಲಿ ಕೆಲವು ಹಿಂದುಳಿದ ಪ್ರದೇಶದ ಜನರಿಗೆ ಕನ್ನಡ ಸರಿ ಬರೊದಿಲ್ಲ, ಇಲ್ಲಿ ತುಳು ಅತವ ಕೊಂಕಣಿ ಮಾತಾಡುತ್ತಾರೆ ಆದರೆ ಕನ್ನಡ ವನ್ನು ದ್ವೇಷಿಸುವುದಿಲ್ಲ. ಇದ್ದಕ್ಕೆ ಪರಿಹಾರ ಹಿಂದಿಯನ್ನು ದ್ವೇಶಿಸುವುದಲ್ಲ ಅಂತ ನನ್ನ ಅನಿಸಿಕೆ. ಕನ್ನಡಿಗರು ಹಿಂದಿ ಕಲಿತು ಹಿಂದೀಪ್ರಾದಿಕಾರದಲ್ಲಿ ಕೆಲಸಕ್ಕೆ ಇದ್ದಾರೆ ಅಂತಲೂ ಕೇಳಿದ್ದೇನೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
“ ಇದ್ದಕ್ಕೆ ಪರಿಹಾರ ಹಿಂದಿಯನ್ನು ದ್ವೇಶಿಸುವುದಲ್ಲ ಅಂತ ನನ್ನ ಅನಿಸಿಕೆ. “
ಮಾನ್ಯ ರೋಶನ್ ಅವರೇ, (ರೋಶನ್ ಎಂದರೆ ಹಿಂದೀಯಲ್ಲಿ ಬೆಳಕಿನ ಕಿರಣ ಅಥವಾ ರಶ್ಮಿ ಅಲ್ಲವೇ?) ನನ್ನ ಲೇಖನದಲ್ಲಿ ಹಿಂದೀಯನ್ನು ದ್ವೇಷಿಸಬೇಕೆಂಬ ಆಶಯ ಇಲ್ಲ. ಅದನ್ನು ನೀವು ಹೇಗೆ ಗ್ರಹಿಸಿದಿರೋ ಎಂದು ಆಶ್ಚರ್ಯವಾಗುತ್ತದೆ. ಹಿಂದೀಯನ್ನು ಒಂದು ಭಾಷೆಯಾಗಿ ನಾನು ಪ್ರೀತಿಸುತ್ತೇನೆ. ಆದರೆ ಅದನ್ನು ರಾಷ್ಟ್ರಭಾಷೆಯ ನೆವದಲ್ಲಿ ಒತ್ತಾಯಪೂರ್ವಕವಾಗಿ ಹೇರುವುದನ್ನು ವಿರೋಧಿಸುತ್ತೇನೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಒಂದು ರಾಷ್ಟ್ರ ಅಂದರೆ ಅದಕ್ಕೆ ಒಂದು ದ್ವಜ, ಒಂದು ಗೀತೆ, ಒಂದು ಪ್ರಾಣಿ,ಪಕ್ಷಿ ಅಂತ ಇರುವ ಹಾಗೆ ಒಂದು ಬಾಷೆ ಕೂಡ ಬೇಕು. ಅದಕ್ಕೆ ಹಿಂದಿಗಿಂತ ಉತ್ತಮ ಬಾಷೆ ಬೇರೆ ಯಾವುದಾದರು ಇದೆಯೆ? ಒತ್ತಾಯ ವಾಗಿ ಹೇರುವುದು ಅಂದರೆ ಹೇಗೆ? ಒಂದು ಬಾಷೆ ಯನ್ನು ಒತ್ತಾಯವಾಗಿ ಹೇರಲಾಗುವುದೇ? ಸ್ವಾತಂತ್ರ್ಯ ಚಳುವಳಿಯ ಮುಂಚೆ ನಿಮ್ಮ ಆಲೊಚನೆಗಳು ಇದಿದ್ದರೆ ಹೊರಾಟಗಾರರಿಗೆ ತುಂಬಾ ಕಷ್ಟ ಆಗುತಿತ್ತು, ಹಾಗು ನಮಗೆ ಸ್ವಾತಂತ್ರ್ಯ ಸಿಗುತಿತ್ತೊ ಗೊತ್ತಿಲ್ಲ. ಬಾಷೆ ಯನ್ನು ನೀವು ದ್ವೇಷಿಸುತ್ತೀರಿ ಅನ್ನುವುದಿಲ್ಲ ಆದರೆ ನಿಮ್ಮ ಲೇಖನ ಮತ್ತು ನಿಮ್ಮ ಪ್ರತಿಕ್ರೀಯೆ ಯಲ್ಲಿ ಅದನ್ನು ಉತ್ತೇಜಿಸುತೀರಿ. ನನ್ನ ಅನಿಸಿಕೆ ನಿಮಗೆ ಅರ್ಥ ಆಗಿರಬಹುದು ಅನಿಸುತಿದೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರಭಾಷೆ ಇರಬೇಕೆಂದೇನು ಇಲ್ಲ ಎನ್ನುವುದು ನನ್ನೆಣಿಕೆ. ಈಗ ನಮ್ಮಲ್ಲಿರುವುದೂ ಹಾಗೆಯೇ ! ನಮ್ಮ ದೇಶ ವೈವಿಧ್ಯಮಯವಾಗಿರುವಾಗ ಒಂದೇ ರಾಷ್ಟ್ರಭಾಷೆಯ ಅಗತ್ಯವೇನು? ಎಷ್ಟೋ ದೇಶಗಳಲ್ಲಿ ಹಲವು ಭಾಷೆಗಳಿಗೆ ಮನ್ನಣೆ ಇರುವುದು ನೋಡಿಲ್ಲವೇ?. ನಮ್ಮಲ್ಲೂ ಹಾಗೇ!
-ಹಂಸಾನಂದಿ
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಬಾಷೆ ಬಾವನೆಗಳನ್ನು ವ್ಯಕ್ತ ಪಡಿಸುವ ಸಾದನ, ಒಂದೇ ಬಾಷೆ ಯೇಕೆ ಬೇಕೆಂದರೆ ಆಡಳಿತನಡೆಸಲು ಸುಲಭವಾಗಲು, ಆದರೆ ಅದನ್ನು ಯೆಲ್ಲರು ಕಲಿಯಬೇಕೆಂದಿಲ್ಲ ಕಲಿಯದಿದ್ದರೆ ಅದರೆ ಅನುವಾದಕರ ಅವಶ್ಯಕತೆ ಬೇಕು. ನೀವು ಡಿಲ್ಲಿ ಯಲ್ಲಿ ಹೊಗಿ ಯೆನಾದರು ನಮ್ಮ ನಾಡಿಗಾಗಿ ಸವಲತ್ತಿಗೆ ಕನ್ನಡದಲ್ಲಿ ಮಾತಾಡಿದರೆ ನಡೆಯಬಹುದೊ ಯೊಚಿಸಿ. ಇಲ್ಲ ಆಗ ಇನ್ನೊಬನ ಅವಶ್ಯಕತೆ ಬೇಕಾಗುತ್ತೆ. ಆದುದರಿಂದ ನಿಮಗೆ ಹಿಂದಿಯ ಸ್ವಲ್ಪ ಜ್ಞಾನ ಇದ್ದರೆ ಉಪಯೊಗ ವಾಗುತದ್ದೆ. ಹಾಗೆಯೆ ನಮ್ಮ ದೇಶಕ್ಕೆ ಯೆನಾದರು ಆಪತ್ತು ಬಂದರೆ .. (ಸ್ವಾತಂತ್ರ್ಯ ಪೂರ್ವ ದ ಹಾಗೆ) ದೇಶದ ಜನರನ್ನು ಒಗೂಡಿಸಲು ಒಂದು ಬಾಷೆ ಒಳ್ಳೆಯ ಕೆಲಸ ಮಾಡುತದೆ ಅಂತ ನನ್ನ ಅನಿಸಿಕೆ. ನಾನು ಹೇಳೊದು ಒಂದೇಬಾಷೆ ಬೇಕು ಅಂತ ಅಲ್ಲ. ಆದರೆ ಒಂದು ಬಾಷೆ ನಮ್ಮ ದೇಶದವರನ್ನು ಒಗ್ಗೂಡಿಸಲು ಬೇಕು , ಹಾಗೆ ನಮ್ಮ ತಾಯಿನುಡಿ ಕೂಡ ಬೇಕು.ಯಾಕಂದರೆ ನಮ್ಮ ದೇಶದಲ್ಲಿ ತುಂಬಾ ಬಾಷೆಗಳಿರುವುದರಿಂದ ಅದೇ ನಮ್ಮ ನಮ್ಮಲಿನ ದ್ವೇಷಕ್ಕೆ ಕಾರಣವಾಗಬಾರದಲ್ಲ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಮೇಲಿನವನೆಲ್ಲ ನಾವಿಂದು ಇಂಗ್ಲೀಸಲ್ಲೇ ಮಾಡ್ತಿದ್ದೀವಿ.. ಅದಕ್ಕೆ ಇಂಗ್ಲೀಸೇ ನಮ್ಮ ರಾಷ್ಟ್ರಬಾಸೆ ಆಗ್ಲಿ..
ಏಸ್ಟೇ ಆದ್ರು
"ಬಾಷೆ ಬಾವನೆಗಳನ್ನು ವ್ಯಕ್ತ ಪಡಿಸುವ ಸಾದನ, ಒಂದೇ ಬಾಷೆ ಯೇಕೆ ಬೇಕೆಂದರೆ ಆಡಳಿತನಡೆಸಲು ಸುಲಭವಾಗಲು, ಆದರೆ ಅದನ್ನು ಯೆಲ್ಲರು ಕಲಿಯಬೇಕೆಂದಿಲ್ಲ ಕಲಿಯದಿದ್ದರೆ ಅದರೆ ಅನುವಾದಕರ ಅವಶ್ಯಕತೆ ಬೇಕು." ತಾನೆ!!
( ಹೀಗಿದ್ದಾಗ, ಚೀಣಿಯೂ ನಮ್ಮ ರಾಸ್ಟ್ರಬಾಸೆ ಆಗಲು ಅಡ್ಡಯಿಲ್ಲ.. ಸಂಸ್ಕೃತವೇ ಅಫಗಾನಿ-ಇರಾನಿ ಬಾಸೆ, ಇನ್ನು ಅದರಿಂದ ಹುಟ್ಟಿದ ಹಿಂದಿ ನಮ್ಮ ನೆಲದ್ದೇ ಅಲ್ಲ ...ಹೀಗೆ ನಾವೂ ಮೊಂಡುಕೂರಬೋದು
.. )
ನಮ್ಮ ಸಂವಿದಾನ ಮೊದಲು ಬರೆದುದ್ದೇ ಇಂಗ್ಲೀಸಲ್ಲಿ!
(ನಂನಂತ ಹಲವರು)ಕನ್ನಡಿರಿಗೆ, ದ್ರಾವಿಡರಿಗೆ ಆರ್ಯನುಡಿಯಾದ ಹಿಂದಿ ರಾಷ್ಟ್ರಬಾಸೆ ಆಗೋದು ಒಪ್ಪದು... ಮತ್ತೆ 1967 ಮರುಕಳಿಸೀತು.!!
ಲಾಲ್ ಬಹುದ್ದೂರ ಶಾಸ್ತ್ರಿ ಮಣ್ಣು ತಿಂದಿದ್ದು, ಗೊತ್ತೇ ಗೊತ್ತು... ಇನ್ನು ಈಗಿನ ಸಿಂಗ್, ಗಾಂದಿಗೆ ಈ ಉಸಾಬರಿ ಇಲ್ಲ ಕಡವಳ!
ಇನ್ನು ೧೦೦೦೦೦೦೦೦೦೦೦೦೦೦ ಏಡುಗಳು ಸಂದಿಹೋದರು, ಹಿಂದಿ ನಮ್ಮ ರಾಸ್ಟ್ರಬಾಸೆ ಆಗದು.. ಯಾರು ಎಸ್ಟು ಕೂಗಿದರು, ಅರಚಿದರು... ಅವರ ಕುಂಡೆಗಳಿಗೆ ಬಿಸಿಬರೆಯಿಕ್ಕಲು ದ್ರಾಮುಕ ಇದ್ದೇ ಇದೆ!!
ಹಿಂದಿ ರಾಸ್ಟ್ರಬಾಸೆ ಆದ ದಿನ, ತಮಿಳುನಾಡು, ಮಣಿಪುರ, ಅಸಮ, ಮತ್ತು ನಾವು ಕನ್ನಡಿಗರು ನಮ್ಮದೇ ಹೊಸ ರಾಸ್ಟ್ರದಲ್ಲಿ ಇರ್ತೀವಿ( ಇದಕ್ಕೆ ಬೇಕಾದ ಕನ್ನಡಪಡೆ ಈಗಾಗಲೇ ಅಣಿಯಾಗಿದೆ
)
ಗುಡ್ ಬಾಯ್!
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಕನ್ನಡ ರಾಷ್ಟ್ರ ಆದಂದು ತುಳು ನಾಡು, ಕೊಡವರ ದೇಶ ಅಂತ ಇನ್ನು ಯೆನೇನೊ ಹುಟಿಕೋಳುತ್ತವೆ, ಅವಕ್ಕು ಪಡೆಗಳಿಗೇನೂ ಕಮ್ಮಿ ಇಲ್ಲ. ಪಡೆ ಗಳು ಹಾಲವಾಗಿವೆ ... ಪಲಿತಾಂಶ ಕೂಡ ನಮ್ಮ ಮುಂದೆ ಕಾಣುತ್ತಿದೆ. ದ್ರಾವಿಡ, ಆರ್ಯ, ಕನ್ನಡ, ತಮಿಳ.. ದೇಷವನ್ನು ದೇವರೇ ಕಾಪಾಡಲಿ.. (ದೇವರು ಆರ್ಯರದ್ದೂ ಆಗಬಹುದು ದ್ರಾವಿಡರದ್ದೂ ಆಗಬಹುದು). ಲಾಲ್ಬಹುದ್ದೂರರು ಸೊತಿರಬಹುದು ಯೆಂದೂ ಮಣ್ಣುತಿನ್ನಲಿಲ್ಲ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಇದು ತಮಾಷೆ...
ಹಿಂದಿಯಿಂ ಪಿಡಿದು ತುಳು ಕೊಡವ ವೆರಗೂ.. ಎತ್ತಿಂದೆಂತ್ತಣ...
ಪಾಪಾ!!
ಯಾರೇ ಕೂಗಾಡಲಿ, ಯಾರೇ ಹೋರಾಡಲಿ.. ನಮ್ಮ ದ್ರಾಮುಕಕ್ಕೇ ಗೆಲುವು..
ಇನ್ನು ತುಳು, ಕೊಡವ ಪಡೆಗಳು.. ಅವಕ್ಕೂ ಗೆಲುವಾಗಲಿ...
...
ರೋಶನ್ ನೇತ್ಲಾ/ನೇತ್ಳಾ ನೀವು ತುಳುವರೇ? ನಿಮ್ಮ ತುಳುವನ್ನೂ ಕೂಡ ಹಿಂದಿಯರಿಂದ, ಕನ್ನಡರಿಂದ ಉಳಿಸಿಕೊಳ್ಳಿ
. ಕನ್ನಡವೇನೋ ಗಟ್ಟಿಮುಟ್ಟು.. ಹಿಂದಿಯನ್ನೂ, ಸಕ್ಕದವನ್ನೂ ಎದುರಿಸಬಲ್ಲದು.. ಪಾಪಾ ತುಳು!
(ಕೊಡವ ಕನ್ನಡದ ಕವಲಾದುದರಿಂದ.. ಕನ್ನಡ ಉಳಿದರೆ, ಕೊಡವವು ಉಳಿದಂತೆ)
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಎದುರಿಸಬಲ್ಲದು... ಗಟ್ಟಿಮುಟ್ಟು
ಹಾಗಾದರೆ ಯಾಕೆ ಕೂಗಾಟ, ಹಾರಾಟ... ತುಳು ಉಳಿಸಿ ಕೊಳ್ಳಲು ಕನ್ನಡ ಹಿಂದಿಯ ತುಳಿಯುವ ಅಗತ್ಯ ಇಲ್ಲ ಅನ್ನಿಸುತಿದೆ.
ಕೊಡವ ಕನ್ನಡದ ಕವಲು ಅದಕ್ಕೆ ಮೊನ್ನೆ ಕನ್ನಡ ರಾಜ್ಯೊತ್ಸವದಂದು ಬಂದ್ ಆಚರಿಸಿದ್ದು.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಇಲ್ಲಿ ನಾನು ಬರೆಯುವುದನ್ನು ದಯವಿಟ್ಟು ಪೂರ್ವಾಗ್ರಹ ಇಲ್ಲದೆ ಓದಿ.
೧. ನೀವು ದಿಲ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದರೆ ಕೆಲಸ ಆಗೋಲ್ಲ ಅಂದ್ರಲ್ಲ, ಹಾಗೆಯೇ ದಿಲ್ಲಿಯವರು ಇಲ್ಲಿಗೆ ಬಂದಾಗಲೂ ಹಿಂದಿಯಲ್ಲಿಯೇ ಕೆಲಸ ಆಗಬೇಕು ಅಂದರೆ ಅದನ್ನು ಹೇಗೆ ಸಮರ್ಥಿಸುತ್ತೀರಿ. HALನವರ ಆಸ್ಪತ್ರೆಗಳಲ್ಲಿ ಹಿಂದಿಯಲ್ಲಿ ಮಾತಾಡಿದರೆ ಮಾತ್ರವೇ ಚಿಕಿತ್ಸೆ ಕೊಡೋದು. ನಿಮಗೆ ಇದು ಗೊತ್ತೇ? Sports Authority Of Indiaದಲ್ಲಿನ ನನ್ನ ಅನುಭವ ಹಿಂದೆಯೇ ಬರೆದಿದ್ದೇನೆ.
೨. ಒಂದು ತಿಳ್ಕೊಳ್ಳಿ ರೋಶನ್, ಕರ್ನಾಟಕದ ಪ್ರತಿಯೊಬ್ಬರೂ ದಿಲ್ಲಿಗೋಸ್ಕರ ಬದುಕುತ್ತಿಲ್ಲ. ಕರ್ನಾಟಕದಲ್ಲಿಯೂ ಸರ್ಕಾರವಿದೆ. ಭಾರತದ ಶಕ್ತಿ ಇರೋದು ಒಕ್ಕೂಟ ವ್ಯವಸ್ಥೆಯಲ್ಲಿಯೇ ಹೊರತು ಕೇಂದ್ರ-ರಾಜ್ಯಗಳೆಂಬ ತಾರತಮ್ಯದಲ್ಲಲ್ಲ.
೩. ಇನ್ನು "ಒಂದು ದೇಶಕ್ಕೆ ಒಂದು ಭಾಷೆ" ವಿಷಯ. ನಾವುಗಳೂ ಚಿಕ್ಕವರಿದ್ದಾಗ ಹೀಗೆಯೇ ಅಂದುಕೊಳ್ಳುತ್ತಿದ್ದುದು. ಆದರೆ ಈಗ ಅದು ತೀರಾ ತೀರಾ ಎಳಸು ಎನಿಸುತ್ತದೆ. ಈ ದಿನ "ಯುರೋಪಿಯನ್ ಒಕ್ಕೂಟ" ಬಲಾಢ್ಯವಾಗಿ ಬೆಳೆದಿರೋದು ಪ್ರತಿಯೊಂದು ದೇಶದವರೂ ತಮ್ಮ ತಮ್ಮ ಸಂಸ್ಕೃತಿಗಳಿಗೆ ಒತ್ತುಕೊಟ್ಟಿರುವುದು. ದಯವಿಟ್ಟು ನೀವು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ವಿಚಾರಗಳನ್ನೋದಿ (ಇನ್ನೂ ಓದಿಲ್ಲವಾದರೆ). ೭ ಭಾಷೆಯನ್ನು ಸ್ವಇಚ್ಛೆಯಿಂದಲೇ ಕಲಿತಿರುವ ನಿಮ್ಮಲ್ಲಿ ಇದು ನನ್ನ ಸಣ್ಣ ಕೋರಿಕೆ.
೩. "ತುಳು ಭಾಷಿಕರ ಮೇಲೆ ಕನ್ನಡ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಾರೆ", ಎನ್ನುತ್ತಾ ಅದನ್ನು ಖಂಡಿಸುವ, ನಿಮಗೆ, ಅದೇ "ಅಖಂಡ ಕರ್ನಾಟಕದವರ ಮೇಲೆ ಹಿಂದಿಯವರು ಎಸಗುತ್ತಿರುವುದು ತಪ್ಪು" ಎನಿಸದೇ ಇರುವುದು ನನಗೆ ಆಶ್ಚರ್ಯ ಉಂಟು ಮಾಡುತ್ತದೆ!!!!!
೩.೧ ರಾಜ್ಯದಲ್ಲಿರುವ ರೈಲುಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ನಾಮಫಲಕಗಳೇ ಇರಬೇಕು ಎನ್ನುವುದು. ಹೀಗೆ.
೩.೨ National Book Trust Of Indiaದ ಪ್ರಕಟಣೆಗಳನ್ನು ನೋಡಿ. ತಿಳಿಯುತ್ತೆ.
೪. ಅಂದಹಾಗೆ, ದಿಲ್ಲಿಯಲ್ಲಿ ಕನ್ನಡ ಮಾತನಾಡಿದರೆ ಸವಲತ್ತು ಸಿಗಲ್ಲ ಎಂದುಕೊಂಡಿರುವ ನಿಮ್ಮ ನಿಲುವೂ ಕೂಡ ತಪ್ಪು. ಸಂಸತ್ತಿನಲ್ಲಿ ಕನ್ನಡ ಮಾತಾಡಬಹುದು. ಕನ್ನಡದಲ್ಲಿ ಚರ್ಚೆಗಳು ಆಗಿವೆ ಕೂಡ. ಒಮ್ಮೆ ರೇಷ್ಮೆ ಬೆಳೆಗಾರರ ಸವಲತ್ತುಗಳಿಗಾಗಿ ಕನ್ನಡದಲ್ಲಿಯೇ ಚರ್ಚೆಯಾಗಿತ್ತು. ಇವೆಲ್ಲ ನಿಮಗೆ ಸಣ್ಣ ವಿಚಾರವಾಗಿ ಕಂಡರೆ ಅಥವಾ ಕಂಡೂ ಕಾಣದವರಾಗಿ ಇದ್ದರೆ ಅದಕ್ಕೆ ಬೇರೆಯವರು ಏನೂ ಮಾಡಲಾಗುವುದಿಲ್ಲ.
ಉಫ್. ಮುಂದಿನ ಕಾಮೆಂಟ್ ರೋಶನ್ ಅವರಿಗೆ ವೈಯಕ್ತಿಕವಾಗಿ ಅಲ್ಲ. ನಮ್ಮ ದೇಶದಲ್ಲಿ ಕಷ್ಟದಲ್ಲಿರುವವರಿಗೆ, "ಆಯಾ ಕಷ್ಟದಿಂದ ಆಚೆಬರುವುದು ಹೇಗೆ" ಎನ್ನುವ ಉಪದೇಶಗಳಿಗಿಂತ ಹೆಚ್ಚಾಗಿ, "ಆಯಾ ಸಂಕಟಗಳಿಗೆ ಹೇಗೆ ಹೊಂದಿಕೊಳ್ಳಬೇಕು, ಅದು ಕಷ್ಟವೇ ಅಲ್ಲ" ಎಂಬಂತಹ ಅಪ್ರಬುದ್ಧ ಉಪದೇಶಗಳೇ ಪುಕ್ಕಟೆಯಾಗಿ ಹೇರಳವಾಗಿ ಸಿಗುತ್ತವೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಯಾರಿಗೆ ಪೂರ್ವಾಗ್ರಹ ಯೆನ್ನುವುದು ಇದನ್ನು ಓದಿದವರಿಗೆ ತಿಳಿಯುತ್ತದೆ, ನೀವು ಕೂಡ ನಾನು ಬರೆದವುಗಳನ್ನು ಇನ್ನೊಮ್ಮೆ ಓದಿ. ಪುಕ್ಸಟೆ ಸಲಹೆ ನಾನು ಕೊಡುತಿಲ್ಲ ನನ್ನ ನಿಲುವನ್ನು ಪ್ರತಿಕ್ರಿಸಿದ್ದೇನೆ ಅದನ್ನೇ ಸರಿ ನೀವೆಲ್ಲ ಅದ್ಕ್ಕೆ ಹೊಂದಿಕೊಳಬೇಕು ಅಂತ ಯೆಲ್ಲೂ ಹೇಳಲಿಲ್ಲ ಹಾಗಂತ ಅನ್ಯಾಯವನ್ನು ಒಪ್ಪಿಕೊಳಬೇಕು ಅಂತಲು ಹೇಳಿಲ್ಲ. ಡೆಲ್ಲಿ ಬರಿಯ ಉದಾಹರಣೆ. ಡೆಲ್ಲಿಗೆ ಹೋಗಿ ಅಲ್ಲಿ ಆಫೀಸ್ ನಲ್ಲಿ ನಿಮ್ಮ ದ್ರಾವಿಡ ತಮಿಳರು ಹಿಂದಿಯಲ್ಲಿ ಮಾತನಾಡಿ ಕೆಲಸ ಮಾಡಿಸಿಕೊಳುವುದನ್ನು ನೋಡಿ. ಮತ್ತು ಡೆಲ್ಲಿಗೆ ಬೇಕಾಗಿ ಬದುಕುವುದು ಬೆಂಗಳೂರಿಗೆ ಬೇಕಾಗಿ ಬದುಕುವುದು ಅಂದರೆ ಯೇನು?. ಕನ್ನಡಿಗರು ತುಳ್ವಿನವರ ಮೇಲೆ ಮಾಡುವುದನ್ನು ನಾನು ಬಾಷೆ ದ್ವೇಷಿಸಿ ವಿರೊದಿಸುವುದಿಲ್ಲ..(ನಿಮ್ಮಗಳಂತೆ). ಪ್ರ್ಯಾಕ್ಟಿಕಲ್ ಆಗಿ ಯೊಚಿಸದಿದ್ದರೆ ಚಿಣಿ ಯೂ ನಮ್ಮ ರಾಷ್ಟ್ರ ಬಾಷೆ ಆಗಬಹುದು.. ಕರ್ನಾಟಕ ದೇಶವೂ ಆಗಬಹುದು.
ನರ್ಮದಾ ಬಚಾವೊ ಅಂತ ಬಹುಗುಣ ಉಪವಾಸ ಹೂಡಿದರು, ಅವರ ಉಪವಾಸ ಮಾತುಕತೆ ಮೂಲಕ ಅಂತ್ಯ ಆಯಿತು. ಆಗಿನ ನಮ್ಮ ಪ್ರದಾನಿ ಹೆಚ್.ಡಿ. ದೆವೇಗೌಡ ಅಲ್ಲಿ ಕನ್ನಡದಲ್ಲಿ ಬಾಷಣ ಬಿಗಿದರು. ಪಾಪ ಮೊದಲೇ ಹಸಿದಿದ್ದ ಬಹುಗುಣ ಆಗಲಿ ಅಲ್ಲಿ ಇದ್ದ ಇತರಲಾಗಲಿ ಅರ್ಥ ಆಗದೆ ಮುಖ ಮುಖ ನೋಡಿಕೋಳುತಿದ್ದರು. ಅದೇ ಗೌಡರು ಸ್ವಾತಂತ್ರ್ಯ ದಿನ ತನಗೆ ಬರದ ಹಿಂದಿಯಲ್ಲಿ ತಪ್ಪು ತಪ್ಪು ಬಾಷಣ ಮಾಡಿದರು. ಯೆಲ್ಲಿ ಯೇನು ಮಾಡಬೇಕು ಅನ್ನುವುದು ಮುಖ್ಯ ಆಗುತ್ತೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಅದನ್ನೇ ನಾವು ಹೇಳ್ತಾ ಇರೋದು, ರೋಶನ್. ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿಯ ಹೇರಿಕೆ (ರೈಲಿನಲ್ಲಿ ಹಿಂದಿಯೇ ಇರಬೇಕು, ಹಿಂದಿಯವರಿಗೆ ಮಾತ್ರವೇ ಚಿಕಿತ್ಸೆ..ಇದರ ಬಗ್ಗೆ ನೀವು ಒಂದು ಮಾತೂ ಹೇಳಿಲ್ಲ) ಇದೆಲ್ಲ ತಪ್ಪು ಅಂತ. "ಹಿಂದಿ ಮಾತ್ರವೇ ರಾಷ್ಟ್ರ ಭಾಷೆ" ಎನ್ನುವ ತಪ್ಪುಕಲ್ಪನೆ ಮತ್ತು ಆ ರೀತಿಯಾದ ಹುಂಬತನ ಇರೋದರಿಂದಲೇ ಕನ್ನಡಿಗರಿಗೆ ಎಷ್ಟೋ ಕಡೆ ಕಷ್ಟ ಆಗ್ತಾ ಇರೋದು. ಕನ್ನಡವೂ ರಾಷ್ಟ್ರ ಭಾಷೆ ಎನ್ನುವ ಸತ್ಯವನ್ನು ಅರಿತು ಎಲ್ಲರೂ ಆತ್ಮವಿಶ್ವಾಸದಿಂದ ಬಾಳೋಣ.
ಒಮ್ಮೆ ನಮ್ಮ ಊರಿಗೆ ರಾಜೀವ್ ಗಾಂಧಿ ಬಂದಿದ್ದ(ಬದುಕಿದ್ದಾಗ). ಆಗ ಅವನು ಹಿಂದಿಯಲ್ಲಿ ಮಾತಾಡಿದ. ನಮ್ಮ ಊರಿನ ಜನರೂ ಕೂಡ ಹೀಗೆ ಮುಖ ಮುಖ ನೋಡಿಕೊಂಡ್ರು. ಯಾರಿಗೂ ಅರ್ಥ ಆಗಲಿಲ್ಲ. ಆಗ ಯಾರೋ ಒಬ್ಬರು ರಾಜೀವ್ ಗಾಂಧಿಯ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದ. ಈ ದಿನ ಚೈನಾದವರು(ತೈವಾನ್ ಚೈನೀಸ್ ಅಂತ ಕೂಡ ಇದೆ), ಜಪಾನೀಯರು, ಮಾಡೋದು ಇದನ್ನೇ. ಅದಕ್ಕೇ ಅವರ ದೇಶ ಮುಂದುವರಿದಿರೋದು. ಆದರೆ ನಾವು ಕನ್ನಡಿಗರು, "ಅಯ್ಯೋ ಪಾಪ, ಅವರಿಗೆ ತೊಂದರೆ ಆಗ್ಬಿಟ್ರೆ" ಅಂತ ಮರುಕಪಟ್ಟು, ಕೊನೆಗೆ ನಾವೇ ಕೀಳರಿಮೆ ಬೆಳೆಸಿಕೊಳ್ತೀವಿ.
ಇದೇ ರೀತಿ ಹಿಂದಿ ದೊಡ್ಡದು, ಕನ್ನಡ ಚಿಕ್ದು ಅಂತ ಒಗ್ಗರಣೆ ಹಾಕ್ತಾ ಇದ್ರೆ, "ಭಾರತ-ಇಂಡಿಯಾ" ಮತ್ತಷ್ಟು ದೂರ ಆಗ್ತಾ ಹೋಗತ್ತೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಸುನಿಲ್,
ಹೀಗೆ ಒಗ್ಗರಿಸಿದವರು ಯಾರು?
______
ಬೊಳುಂಬು
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಮೊಟ್ಟಮೊದಲು, ರೋಶನ್, FYI. "ಕನ್ನಡವು ರಾಷ್ಟ್ರಭಾಷೆ" ಅಂತ ನಾವು ಅಲ್ಲ ಹೇಳ್ತಾ ಇರೋದು, "ಭಾರತೀಯ ಸಂವಿಧಾನದಲ್ಲಿ" ಹಾಗೆ ಇದೆ. ಆ ಸತ್ಯದ ಮೇಲಷ್ಟೇ ಈ ಬರಹ ನಿಂತಿರೋದು. ಬೇರೆ ಕಾಮೆಂಟ್ ಹಾಕುವ ಮೊದಲು, "ಹಿಂದಿ ಒಂದೇ ರಾಷ್ಟ್ರ ಭಾಷೆ, ಎಂದು ಸಾರುವ ಅಧಿಕೃತವಾದ ದಾಖಲೆ ಎಲ್ಲಿದೆ" ಅದನ್ನು ಹೇಳಿ ಸಾಕು. "ಕನ್ನಡವು ಕೇವಲ ಮನೆ ಭಾಷೆ, ಹಿಂದಿಯೇ ದೊಡ್ಡದಾದ ರಾಷ್ಟ್ರ ಭಾಷೆ" ಎನ್ನುವ ಕೀಳರಿಮೆ ನಮಗಂತೂ ಇಲ್ಲ. ಅದನ್ನೇ ಅಹಂಕಾರ ಎನ್ನುವ ಹಾಗಿದ್ದರೆ ಅದು ಅವರವರ ಭಾವಕ್ಕೆ, ಅವರವರ ಬಕುತಿಗೆ. ಈ "ಕನ್ನಡವನು ಕುರಿತಾದ ಆತ್ಮವಿಶ್ವಾಸವನ್ನು", "ಹಿಂದಿ ಭಾಷಾದ್ವೇಷ" ಎಂದು ಬಗೆಯುವ ಮನಸ್ಥಿತಿಯನ್ನು ನೋಡಿದರೆ ಕನಿಕರ ಮೂಡುತ್ತದೆಯೇ ಹೊರತು ಏನೂ ಅಲ್ಲ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ನನ್ನ ಲೇಖನದ ಆಶಯ ಇದೇ ಆಗಿದೆ. ಸಹ್ರುದಯ ಸುನಿಲ್ ಜೈಪ್ರಕಾಶರಿಗೆ ವಂದನೆಗಳು.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ರೋಶನ್, ಇಲ್ಲಿ ನೀವು ತಪ್ಪು ತಪ್ಪು ಕನ್ನಡ ಬರೆಯುತ್ತಿಲ್ಲವೇ ? ಇದೆಲ್ಲ ಯಾಕೆ ? ಒಂದು ಹೇಳಿ ಬಿಡಿ ಸಾಕು. "ಹಿಂದಿ ಒಂದೇ ರಾಷ್ಟ್ರಭಾಷೆ ಎನ್ನುವ ಅಧಿಕೃತ ದಾಖಲೆ" ಎಲ್ಲಿದೆ ಹೇಳಿ, ಅಷ್ಟು ಸಾಕು.
ಇನ್ನು ತಮಿಳರು ಡೆಲ್ಲಿಯಿಂದ ಕೆಲಸ ಮಾಡಿಸಿಕೊಳ್ಳುವ ವಿಚಾರ. ಇದಕ್ಕೆ ನಾವು-ನೀವೇಕೆ ತಲೆಕೆಡಿಸಿಕೊಳ್ಳಬೇಕು. ನಾವು ಕನ್ನಡಿಗರು. ಅಷ್ಟಕ್ಕೂ ಒಂದು ವಿಚಾರ ಗಮನಿಸಿ. ಕೆಲವೇ ತಿಂಗಳ ಹಿಂದೆ, ಕರುಣಾನಿಧಿ ಚೆನ್ನೈನಲ್ಲಿ ಕುಳಿತು, ತಮಿಳಿನಲ್ಲಿಯೇ ಮಾತಾಡುತ್ತ, ನೈವೇಲಿ ಪ್ರಾಜೆಕ್ಟನ್ನು ದೆಹಲಿಯಿಂದ ಸಾಂಕ್ಷನ್ ಮಾಡಿಸಿಕೊಳ್ಳಲಿಲ್ಲವೇ ? ಇದು ನಿಮ್ಮ ಕಣ್ಣಿಗೆ ಕಾಣವುದಿಲ್ಲವೇಕೆ ?
"ಭಾರತೀಯ ಒಕ್ಕೂಟ ವ್ಯವಸ್ಥೆ" ಅಂದರೇನು ಅಂತ ಇನ್ನೂ ಅರ್ಥವಾಗದಿದ್ದರೆ ನಾವೇನು ಮಾಡಕ್ಕಾಗುವುದಿಲ್ಲ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಕರುಣನಿದಿ ಬಾಷಣ ಮಾಡಿದ ಕೂಡಲೆ ಪ್ರೊಜೆಚ್ಟ್ ಸ್ಯಾಂಕ್ಷನ್ ಆಯಿತ?..ನಮಸ್ಕಾರ!!ಅದು ಬರಿ ಪಪರ್ ಗಳಲ್ಲಿ ಬರುವುದು.
ಬಿಡಿ ನಿಮ್ಮ ಒಕ್ಕೂಟ ದ ವ್ಯವಸ್ತೆಯ ಯೊಚ್ನೆ ತುಂಭಾ ಚೆನ್ನಾಗಿದೆ.
ಉ: ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?
ಜೋಸೆಫ್,
ನಮ್ಮನ್ನು ನಾವು ಉದಾರಿಗೆಳೆಂದುಕೊಳ್ಳುತ್ತೇವೆ. ನೆನಪಿಟ್ಟುಕೊಳ್ಳೋಣ, ಇದು ನಮಗೆ ಯಾರೂ ಹೊರೆಸಿದ್ದಲ್ಲ. ಇನ್ನು ನೀವು ಹೇಳುವಂತೆ ಅವರ ಧಾರ್ಷ್ಟ್ಯವೇನೇ ಇದ್ದರೂ ಇದಕ್ಕೆ ಉತ್ತರ ಹಿಂದಿಯೆಂಬ ನುಡಿಯನ್ನು ವಿರೋಧಿಸುವ ಅಸ್ತ್ರವಾಗಬಾರದು. "ಕಲಬೆರಕೆಯಾಗಿ ಹುಟ್ಟಿದ ಹಿಂದಿ ನುಡಿ" ಎಂಬ ಮಾತನ್ನು ತಾವು ಆಡಿದ್ದೀರಿ. ಇದೇ ಕಾರಣಕ್ಕೆ 'ಕನ್ನಡ ಮಾಸ್ಟರ್' ಎಂದೆನು. ಪ್ರಾದೇಶಿಕ ಪ್ರಭೇದಗಳಿರದ ನುಡಿ ಯಾವುದೂ ಇಲ್ಲ ಮತ್ತು ಕನ್ನಡವೂ ಇದಕ್ಕೆ ಹೊರತಲ್ಲ. ಉದಾಹರಣೆಗಾಗಿ ಬಡಗಣ ಕನ್ನಡ ಮತ್ತು ತೆಂಕಣ ಕನ್ನಡ. ಬಡಗಣ ಕನ್ನಡದಲ್ಲಿ ಮಾತನಾಡಿದರೆ ನನ್ನನ್ನೂ ಸೇರಿ ತೆಂಕಿನವರಿಗೆ ತಿಳಿಯುವುದು ಶೇ.೭೫ ಮಾತ್ರ. ಬಡಗಣ ಕನ್ನಡವೆಂಬುದೂ ಒಂದೇ ಅಲ್ಲ. ಅದರಲ್ಲೂ ಪ್ರಭೇದಗಳಿವೆ.
ಹಿಂ