ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
"ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ"
ನೆನ್ನೆ ವೈಕುಂಟ( ಹೀಗೇ ಬರೆದಿತ್ತು ) ಏಕಾದಸಿ ಅಂತ ನಮ್ಮನೆ ಮುಂದಿನ ರಾಮದೇವ್ರು ಗುಡಿಗೆ ಹೋಗಿದ್ವು. ಅಲ್ಲಿ ಈ ಹಾಡು ಕೇಳಿಸ್ತಿದ್ರು.
ಈ ಸಾಲಿನ ಹುರುಳು ಹೇಗೆ ತಿಳಿದುಕೊಳ್ಳಬೇಕು?

- Login or register to post comments
- 468 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಅಂದ್ರೆ ನಿನ್ನ ಕಾಲೇ ನನ್ನ ಬದುಕಿಗೆ ಬೇಕು/ಆಧಾರ.
ಬದುಕಿಗೆ ತಿನಿಸು ಸೇವಿಸುವುದು ಹೇಗೊ ಹಾಗೆ ನಿನ್ನ ಪಾದ ನನಗೆ ಅಶ್ಟರ ಮಟ್ಟಿಗೆ ಬೇಕು/ಅಗತ್ಯ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಇಲ್ಲಿ ಸೇವಿಸುವೆನು ಅಂದರೆ ತಿನ್ನೋದು ಅಲ್ರೀ
, ಸೇವೆ ಮಾಡುವೆನು ಅಂತ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ನನ್ನಿ. ನನಗೆ ಗೊಂದಲವಾಗಿತ್ತು. ಈಗ ಸರಿವೋಯ್ತು
ಸೇವೆ+ಇಸು(ಸಕ್ಕದ+ಕನ್ನಡ) = ಸೇವಿಸು
ಸೇವನೆ+ಇಸು(ಸಕ್ಕದ+ಕನ್ನಡ) = ಸೇವನಿಸು
ಅಂದಹಾಗೆ ಸಕ್ಕದ ಮತ್ತು ಕನ್ನಡದ ಪದಗಳನ್ನು ಸೇರಿಸಿ ಸಂದಿ/ಸೇರಿಕೆ ಮಾಡುವುದು ಬಲು ಗೊಂದಲಕ್ಕೆಡೆ ಮಾಡಿಕೊಡುತ್ತದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಇದನ್ನು `ಅರಿಸಮಾಸ` ಎನ್ನುತ್ತಾರೆ!
ಯಾರಿಗೆ ಯಾರು `ಅರಿ`ಯೋ?!
- ನಾಸೋ
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಸಾರ್,
ಹೌದು. ಈ ಅರಿಸಮಾಸ ಕನ್ನಡದ 'ಪಂಡಿತರು' ಸಕ್ಕದ ಬಳಸುವುದಕ್ಕೆ ಕೊಟ್ಟ ಹೆಸರು.
ಆದರೆ ನಮ್ಮ ಶಂಕರಬಟ್ಟರು ಇದೆಲ್ಲ ದೊಡ್ಡ ಬೊಗಳೆ, ಕನ್ನಡ ಸಕ್ಕದ ಪದಗಳನ್ನು ಕೂಡಿ ಸಮಾಸ ಮಾಡುವುದು ಸರಿಯಿಲ್ಲ ಅಂತ ಹೇಳಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದಲ್ಲಿ ಸಮಾಸ ಎಂಬುದಿಲ್ಲ. ಬರೀ ಜೋಡುಪದಗಳೆ ಯಾಕೆಂದರೆ ಕನ್ನಡದಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಕೂಡುವುದಿಲ್ಲ.
ನಮ್ಮ ಕವಿರಾಜಮಾರ್ಗದ ಸಿರಿವಿಜಯನು ಕೂಡ ಕನ್ನಡ, ಸಕ್ಕದ ಕೂಡಿ ಜೋಡುಪದಗಳನ್ನು( ಸಮಾಸಗಳನ್ನು) ಮಾಡಬಾರದು ಎಂದು ಹೇಳಿದ್ದಾನೆ, ಮಾಡಿದರೆ ಬಿಸಿಹಾಲಿಗೆ ಮಜ್ಜಿಗೆ ಹನಿಗಳನ್ನು ಹಾಕಿದಾಗೆ ಅಂತ ಹೇಳಿದ್ದನೆ.
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಹೌದು. ಸಿರಿವಿಜಯ ಸರಿಯಾಗಿಯೇ ಹೇಳಿದ್ದಾನೆ. ಕನ್ನಡ ಸಂಸ್ಕೃತ ಶಬ್ದಗಳಿಂದ ರೂಪುಗೊಳ್ಳುವ ಜೋಡಿ ಪದಗಳು ಕೇಳುವುದಕ್ಕೆ ಅಷ್ಟು ಹಿತವಾಗಿರುವುದಿಲ್ಲ!
ನಾಸೋ
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಸೇವನಿಸು ಅಂತ ಕನ್ನಡದಲ್ಲಿ ಇಲ್ಲ .
ಸೇವಿಸು ಶಬ್ದಕ್ಕೇ ಎರಡೂ ಅರ್ಥ - ತಿನ್ನು , ಸೇವೆ ಮಾಡು ಅಂತ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ನಾನೆಲ್ಲೋ
ಇಂಗ್ಲೀಸ್ save ಅಂತ ಅಂದುಕೊಂಡೆ...
ಆಗ ಆ ಸಾಲು...
O Govinda, I save your lotus feet.!!
ಅಂದ್ರೆ ಗೋವಿಂದ ನಾ savಇಸುವೆನು ನಿನ್ನ ಪಾದಾರವಿಂದವ
ಹೀಗೂ ಆಗಬೋದಲ್ಲ!!
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
"ರಾಮದೇವ್ರು " ಗುಡಿಗೆ ಹೋಗಿದ್ವು.
>> ಆಶ್ಚರ್ಯ ! ತರುವ೦ತಹ ವಿಷಯವೇ ಇದು.
ಉ: ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
ಮುರುಳಿ ದ್ಯಾವ್ರು
ಗಮನ : ಹೋಗಿದ್ವು....
ಹೋಗಿದ್ದೆ, ಇಲ್ವೇ ಹೋಗಿಕೊಂಡಿದ್ದೆ ಅಲ್ಲ!