ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
http://thatskannada.oneindia.in/movies/controversy/2007/2112-mano-murthy...
http://thatskannada.oneindia.in/movies/controversy/2007/2212-mano-murthy-reply-to-piracy.html

- Login or register to post comments
- 551 hits
- Email this forum





RSS:
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಭಟ್ಟಿ ಇಳಿಸಿರುವ ಹಾಡುಗಳು:
೧.http://www.musicindiaonline.com/p/x/lBb_Q2Vp_t.As1NMvHdW/
೨.http://www.musicindiaonline.com/p/x/V6b_9enkTd.As1NMvHdW/
೩.http://www.musicindiaonline.com/p/x/VBb_6phtTt.As1NMvHdW/
೪.http://www.musicindiaonline.com/p/x/lWb_BSh._9.As1NMvHdW/
______
ಬೊಳುಂಬು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ನಮ್ಮ ಎಷ್ಟು ಜನ ಸಂಗೀತ ನಿರ್ದೇಶಕರು ಬೇರೆ ಭಾಷಿಗಳಿಂದ tune ಭಟ್ಟಿ ಇಳಿಸಿಲ್ಲ ಹೇಳಿ. ಸಿನಿಮಾ ಜಗತ್ತಿನಲ್ಲಿ ಇವೆಲ್ಲ ನಡಿತನೇ ಇರ್ತಾವೆ. ಅದಕ್ಕೆಲ್ಲಾ ಇದು ಭಾಷೆಗೆ ಆದ ಅವಮಾನ ಅಂತ ಹೇಳ್ಕೋಂತ ಕೂತರೆ?
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ನನಗನ್ನಿಸುವಂತೆ ಕನ್ನಡಿಗರು ಮನೋಮೂರ್ತಿಯವರನ್ನು ಸಪೋರ್ಟ್ ಮಾಡಬೇಕು.
______
ಬೊಳುಂಬು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಕಾರ್ತಿಕ್ ಹೇಳುವುದರಲ್ಲಿ ಅರ್ಥವಿದೆ. ಹಾಗೆ ಮಾಡಿದ್ದನ್ನು ಭಾಷೆಗಾದ ಅವಮಾನವೆಂದು ಹೇಳಿಕೊಳ್ಳೋದು ಸಮಂಜಸವಲ್ಲ.
ಬಹಳ ಯಶಸ್ಸು ಕಂಡಿರುವ ಸಂಗೀತ ನಿರ್ದೇಶಕರ ಪೈಕಿ ಏ ಅರ್ ರೆಹ್ಮಾನ್ ನಂತವರೂ ಕೂಡ ಸಂಗೀತ ಹಾಗೂ ಟ್ಯೂನುಗಳು ಭಟ್ಟಿ ಇಳಿಸಿದ್ದಾರೆ. ಇವರು ಎಷ್ಟು ಭಟ್ಟಿ ಇಳಿಸಿದ್ದಾರೆಂಬುದು ಗೊತ್ತಿಲ್ಲ - ಹಾಡಿನ ಟ್ಯೂನನ್ನು ಇಡಿಯಾಗಿ ಭಟ್ಟಿ ಇಳಿಸಿದ್ದರೆ ಮನೋಮೂರ್ತಿಯವರು ಖಂಡಿತ ಅವರ ಮೇಲೊಂದು ದಾವೆ ಹೂಡಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಬಟ್ಟಿ ಇಳ್ಸಿರೋದು ತಪ್ಪಲ್ಲ. ಅವರ(ಮನೊ ಮೂರುತಿ) ಹೆಸರು ಹಾಕದೆ ಬಟ್ಟಿ ಇಳ್ಸಿರೋದು ತಪ್ಪು ಅಂತ ಮನೋ ಮೂರುತಿಯವರೆ ಹೇಳಿದ್ದಾರೆ.(ದಟ್ಸ್ ಕನ್ನಡ ನೋಡಿ).
ಇತ್ತೀಚೆಗೆ ಕನ್ನಡದಲ್ಲಿ ಎ.ಆರ್. ರೆಹ್ಮಾನ್ ಸಂಗೀತವನ್ನ 'ಸಜಿನಿ' ಸಿನಿಮಾದಲ್ಲಿ ಬಟ್ಟಿ ಇಳಿಸಲಾಗಿತ್ತು. ಆದರೆ ರೆಹಮಾನ್ ನ ಹೆಸರು,ಪಾಪೆ ಆ ಸಿನಿಮಾದ ಎಲ್ಲ ಪೋಸ್ಟರ್ ಗಳಲ್ಲು ಇತ್ತು.
ತೆಲುಗಿನವರು ಕೂಡ ಹೀಗೆ ಮಾಡಬಹುದಿತ್ತಲ್ಲವೆ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಭರತ್, ಎಲ್ಲರೂ ಒಂದೇ ತರಹ ಇರುವುದಿಲ್ಲ. ಹೆಸರು ಹಾಕದೆ ಭಟ್ಟಿ ಇಳಿಸಿರುವುದು ಖಂಡಿತ ತಪ್ಪು. ಇದರ ಬಗ್ಗೆ ಸಂಬಂಧಪಟ್ಟ ಸಂಗೀತ ನಿರ್ದೇಶಕರೊಂದಿಗೆ ಮನೋಮೂರ್ತಿ ಅಥವ ಅವರ ಪ್ರತಿನಿಧಿಗಳು ಮಾತನಾಡುವುದು ಹೆಚ್ಚು ಸರಿಯಾದದ್ದು. ಮಾತುಕತೆಯಲ್ಲಿ ಒಪ್ಪದಿದ್ದರೆ ಕಾಪಿರೈಟ್ ವಯೋಲೇಶನ್ ದಾವೆ ಹೂಡುವುದು. ನಾನು (ಮತ್ತು ಬಹುಶಃ ಕಾರ್ತಿಕ್ ಕೂಡ) ಹೇಳಹೊರಟಿರುವುದು - ಇದಕ್ಕೆ ಕನ್ನಡ vs ತೆಲುಗು ಬಣ್ಣ ಯಾಕೆ ಎಂದು.
"ತೆಲುಗಿನವರು ಕೂಡ ಹೀಗೆ ಮಾಡಬಹುದಿತ್ತಲ್ಲವೆ" ಎಂದು ದ್ವೇಷದಿಂದ ಜೆನರಲೈಸ್ ಮಾಡುವುದಕ್ಕಿಂತ "ಈ particular ಸಿನಿಮಾದ ನಿರ್ದೇಶಕರು ಹೀಗೆ ಮಾಡಲಿಲ್ಲ ಏಕೆ" ಎಂದು ಕೇಳುವುದು ಹೆಚ್ಚು ಔಚಿತ್ಯಪೂರ್ಣವಾದುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಇಲ್ಲಿ ಕರುಬು/ದ್ವೇಶ ಕಂಡಿತ ಇಲ್ಲ. ಆ ಸಿನಿಮಾ ಮಾಡಿದವರು ತೆಲುಗಿನವರಾದ್ದರಿಂದ ಹಾಗೆ ಹೇಳಿದೆ. ಇಲ್ಲಿ ಕನ್ನಡ,ತೆಲುಗು ವಿಶ್ಯ ಅಲ್ಲ.
ಬೇರೆಯವರದನ್ನ(ಅದ್ರಲ್ಲೂ ಅಂತ ಸೂಪರ ಹಿಟ್ ಟ್ಯೂನ್ಗಳನ್ನ) ಕದ್ದು ನನ್ನದು ಎಂತ ಹೇಳುವವರು ಯಾರೇ ಆದರೂ ನಾವು ಅವರನ್ನು ಹೀಗಳೆಯಲೇಬೇಕು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಭಾಷೆಗಾದ ಅಪಮಾನವೆಂದಲ್ಲ ನಾನು ಹೇಳಲಿಲ್ಲ.
ಮೇಲಿನ ಕೊಂಡಿಗಳಿಂದ ಹಾಡುಗಳನ್ನು ಕೇಳಬಹುದು.
ಮನೋಮೂರ್ತಿಯವರು ದಾವೆ ಹೂಡುವುದೇನೋ ಸರಿ, ಆದರೆ ಕನ್ನಡಿಗರು ಕನ್ನಡದಲ್ಲೂ ಎಷ್ಟೋ ಹಾಡುಗಳು ಭಟ್ಟಿ ಇಳಿಸಲ್ಪಟ್ಟಿವೆ ಎನ್ನುತ್ತ ಅವರನ್ನು ನೈತಿಕವಾಗಿ ಬೆಂಬಲಿಸದೆ ಕೂತರೆ..........
ಸರಿಯಾಗಿ ಓದದೆ ಅವಸರದಲ್ಲಿ ಪ್ರತಿಕ್ರಿಯೆ ನೀಡಬೇಡಿ. ಮನೋಮೂರ್ತಿಯವರಿಗೆ ಶೀರ್ಷಿಕೆಗಳಲ್ಲಿ ಹೆಸರು ಹಾಕುತ್ತೇವೆಂದು ಮಾತು ಕೊಟ್ಟ ನಿರ್ಮಾಪಕರು ಹಾಗೆ ಮಾಡಲಿಲ್ಲ. ಇದರಿಂದ ಕನ್ನಡಕ್ಕೆ ಅಪಮಾನವಾಗದಿದ್ದರೂ ಮನೋಮೂರ್ತಿಯವರಿಗೆ ಅಪಮಾನವಾಗಿದೆ.
______
ಬೊಳುಂಬು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಬೊಳುಂಬು, ನೈತಿಕವಾದ ಬೆಂಬಲ ಇಲ್ಲ ಎಂದು ಯಾಕೆ ಓದಿಕೊಂಡಿರಿ?
ಮೇಲಿನದು ಅವಸರದ ಪ್ರತಿಕ್ರಿಯೆ ಖಂಡಿತ ಅಲ್ಲ. ನೈತಿಕ ಬೆಂಬಲಕ್ಕಿಂತ ಅಥವ ಹೊಡಿ ಬಡಿ ದೂಷಿಸು ಎನ್ನುವುದಕ್ಕಿಂತ ಕೋರ್ಟಿನಲ್ಲಿ ದಾವೆ ಹೂಡುವುದು ಈ ಸಂದರ್ಭಕ್ಕೆ ಬಹಳ ಸಮಂಜಸವಾದುದು. ಸುಮ್ಮನೆ ತೆಲುಗು vs ಕನ್ನಡ ಎಂಬ ಬಣ್ಣ ಹಚ್ಚಬಾರದು, ಯಾರಿಗೂ ಅದು ಒಳ್ಳೆಯದಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
"ತೆಲುಗು ನಿರ್ಮಾಪಕರಿಂದ ಅಪಚಾರ" ಎಂಬ ಪ್ರಯೋಗ ನನ್ನದಲ್ಲ. thatskannadaದ್ದು. ಹೊಡೆಯುವುದು, ಬಡಿಯುವುದು, ದೂಷಿಸುವುದು ನನ್ನ ಉದ್ದೇಶವಲ್ಲ. ತೆಲುಗು vs ಕನ್ನಡ ಎನ್ನುವುದೂ ಅಲ್ಲ. ಭಾಷೆಗೆ ಆದ ಅವಮಾನ ಅಂತ ಕೂಡ ನಾನು ಹೇಳಿದ್ದಲ್ಲ, ಕಾರ್ತಿಕ್ ಹೇಳಿದ್ದು. ಅವರಿಗೆ ಹೀಗನ್ನಿಸಲು ಏನು ಕಾರಣ ಅಂತ ನನಗೆ ಗೊತ್ತಿಲ್ಲ.
______
ಬೊಳುಂಬು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಬೊಳಂಬು,
ನೀವು ನಿಮ್ಮ ಪೊಸ್ಟ್ ನಲ್ಲಿ thatskannada ಲೇಖನಗಳ ಕೊಂಡಿ ಬಿಟ್ಟರೆ ಬೇರೇನನ್ನೂ ಬರೆದಿಲ್ಲ. ನನ್ನ ಪ್ರತಿಕ್ರಿಯೆ ಕೂಡ ಆ ಲೇಖನಗಳ ಮೇಲೆ ಮಾತ್ರ. ಇದನ್ನು ನೀವು ವೈಯಕ್ತಿಕವಾಗಿ ತೆಗೆದುಕೊಂಡಿದ್ದರೆ ಕ್ಷಮೆಯಿರಲಿ.
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಈ ಸುದ್ದಿಯನ್ನು ಕೆಲವು ವಾಹಿನಿಗಳಲ್ಲಿ ಭಾಷೆಗಾದ ಅಪಮಾನ ಎಂದೇ ಬಿಂಬಿಸುತ್ತಿರುವುದರಿಂದ ಬಹುಶಃ ಕಾರ್ತಿಕ್ ಗೆ ಹಾಗೆ ಅನ್ನಿಸಿತೇನೊ.
ಒಂದು ವಿಷಯ ಮಾತ್ರ ಖರೆ. ನೀವು ಚರ್ಚೆಯ ಪುಟ ಸೇರಿಸುವಾಗ ಬರೇ ಲಿಂಕು ಕೊಟ್ಟು ಏನೂ ಬರೆಯದೆ ಮುಗಿಸಿದರೆ ಆ ಕೊಂಡಿಯಲ್ಲಿರುವ ಪುಟದ ಪ್ರತಿಯೊಂದು ಮಾತನ್ನೂ ನೀವು ಅನುಮೋದಿಸಿದಂತೆ. ದಯವಿಟ್ಟು ಬರೇ ಲಿಂಕು ಹಾಕಿ ಮುಗಿಸಬೇಡಿ. ನಿಮ್ಮ ಅಭಿಪ್ರಾಯ ಏನು, ಈ ಲಿಂಕು ಯಾಕೆ ಇಲ್ಲಿ ಹಾಕುತ್ತಿದ್ದೀರಿ ಎಂಬ ಬಗ್ಗೆ ಒಂದೆರಡು ಪದಗಳನ್ನಾದರೂ ಸೇರಿಸಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಈಗಲೂ ನೀವು ಕೊಂಡಿಯಲ್ಲಿ ಇರುವ ಮಾತನ್ನು ಓದದಿರುವುದು ನಿಜ. ಭಾಷೆಗೆ ಅಪಮಾನವೆಂದು ಅಲ್ಲಿ ಬರೆಯಲಾಗಿಲ್ಲ. ನನ್ನ ಅನ್ನಿಸಿಕೆಗಳ ಬಗ್ಗೆ:
೧. ಭಟ್ಟಿಯನ್ನೇನೋ ಎಲ್ಲರೂ ಇಳಿಸುತ್ತಾರೆ, ಆದರೆ ಚಿತ್ರವೊಂದಕ್ಕೆ ಸಂಬಂಧಿಸಿದ ಎಲ್ಲರಿಗೂ ವಿಷಯ ತಿಳಿಸದೆ ಇಳಿಸಿದ್ದು ತಪ್ಪು .
೨. ಮನೋಮೂರ್ತಿಯವರಿಗೆ ಭಟ್ಟಿ ಇಳಿಸುತ್ತಿರುವ ವಿಚಾರ ಚೆನ್ನೈಯಿಂದ ಗೊತ್ತಾಯಿತು .
೩. ನಾಲ್ಕು ಹಾಡುಗಳು 'ಮುಂಗಾರು ಮಳೆ' ಹಾಡಿನ ಪಡಿಯಚ್ಚುಗಳು .
೪. ಇದು ಭಾಷೆಗೆ ಆದ ಅಪಮಾನವಲ್ಲ, ಮನೋಮೂರ್ತಿಯವರಿಗೆ ಆದ ಅಪಮಾನ.
೫. "ಧ್ವನಿಸುರುಳಿಯಲ್ಲಿ ನನ್ನ ಹೆಸರನ್ನು ನೀಡುವ ಸೌಜನ್ಯತೆಯನ್ನು ಅವರು ತೋರಿಸಿಲ್ಲ. ಇದು ಪೈರೆಸಿಗಿಂತಾ ನೀಚವಾದ ಕೆಲಸ. ಸೃಜನಶೀಲ ಕೃತಿಯೊಂದನ್ನು ಹಗಲು ಹೊತ್ತಿನಲ್ಲೇ ಹರಣ ಮಾಡಿದಂತಾಗಿದೆ. ಯಾರದೋ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮದೇ ಆ ಮಗು ಎನ್ನುವಂತಿದೆ ಈ ಪ್ರಸಂಗ. ಇದರಿಂದ ನನಗೆ ನೋವಾಗಿದ್ದು, ನಾನು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇನೆ. ತೆಲುಗು ನಿರ್ಮಾಪಕರಿಗೆ ಸರಿಯಾದ ಪಾಠ ಕಲಿಸುವ ನಿರ್ಧಾರ ಮಾಡಿದ್ದೇನೆ." -ಮನೋಮೂರ್ತಿ.
ಹೇಳಿ ಕಾರ್ತಿಕ್,
ಇಲ್ಲಿ ನಿರ್ಮಾಪಕರು ತೆಲುಗಿನವರು ಎಂದಲ್ಲದೆ ಅಪಮಾನದ ಬಗ್ಗೆ ಏನಿದೆ?ನಿಮ್ಮ ಪ್ರತಿಕ್ರಿಯೆ ಆ ಲೇಖನಗಳ ಮೇಲಲ್ಲ, ಟಿ.ವಿ. ಚಾನೆಲ್‍ಗಳ ಮೇಲೆ. ಇದಕ್ಕೇ ಹೇಳಿದ್ದು-ಓದಿ ನೋಡಿ ಅಂತ.
ಎಚ್.ಪಿ.ಎನ್.,
ಹೊಡೆಯುವುದು, ಬಡಿಯುವುದು, ದೂಷಿಸುವುದು ಇದರಲ್ಲಿ ಏನಿದೆ, ಅಥವಾ ನನ್ನನ್ನೇ ಅಂಥವನೆನ್ನುತ್ತೀರೋ...
ಸಂಪದದಿಂದ ಹೊರಹೋಗಲು ದಾರಿಗಳೇನು?
______
ಬೊಳುಂಬು
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಬೊಳುಂಬು,
ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೀರ. ಈ ಚರ್ಚೆ ನನ್ನ ಕಡೆಯಿಂದ ಇಲ್ಲಿಗೇ ಅಂತ್ಯಗೊಳಿಸುವೆ. ವೈಯಕ್ತಿಕವಾಗಿ ತೆಗೆದುಕೊಳ್ಳದ ಪಕ್ಷದಲ್ಲಿ ಚರ್ಚೆ ಮುಂದುವರೆಸಬಹುದಿತ್ತು.
ಸಂಪದ ಮುಕ್ತ ಸಮುದಾಯ. ಇಲ್ಲಿ ಭಾಗವಹಿಸುವುದು ಬಿಡುವುದು ನಿಮ್ಮ ಉತ್ಸಾಹ/ಆಯ್ಕೆಗೆ ಬಿಟ್ಟದ್ದು. ಆದರೆ ಹೀಗೆಲ್ಲ ಚಿಕ್ಕ ವಿಚಾರಕ್ಕೆ ಬೇಸರ ಮಾಡಿಕೊಂಡು ಹೊರಹೋಗುತ್ತೇನೆಂದರೆ ಉಳಿದ ಸದಸ್ಯರಿಗೆ ಬೇಸರವಾಗದೆ ಇರುವುದಿಲ್ಲ. ಹೊರಹೋಗುವ ದಾರಿಯನ್ನು ನಿಮಗೆ ತೋರಿಸುತ್ತಿರುವಂತೆ ಕಂಡರೆ ನೀವು ತಪ್ಪಾಗಿ ತಿಳಿದಿದ್ದೀರಿ.
ವೈಯಕ್ತಿಕವಾಗಿ ತೆಗೆದುಕೊಂಡಿದ್ದರೆ ಕ್ಷಮೆಯಿರಲಿ ಎಂದು ಕಾರ್ತಿಕ್ ಈಗಾಗಲೇ ಬರೆದಿದ್ದಾರೆ. ನಾನೂ ಕೂಡ ಅದನ್ನೇ ಹೇಳುವೆನು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಈ ವಿವಾದದ(?) ಬಗ್ಗೆ ಯೋಚಿಸುತ್ತಿದ್ದೆ. ಕನ್ನಡ/ತೆಲುಗು ಹೊರತಾಗಿ ಈ ಪ್ರಶ್ನೆಗಳು ಎದ್ದವು...
ನಿರ್ಮಾಪಕರು ದುಡ್ಡು ಕೊಟ್ಟು ಸಂಯೋಜಿಸಿದ ಸಂಗೀತದ ಮೇಲೆ ಸಂಗೀತ ನಿರ್ದೇಶಕರಿಗೆ ಎಷ್ಟು ಹಕ್ಕಿದೆ? ತಮ್ಮ ಸೃಜನಾತ್ಮಕ ಕೃತಿಯೆಂದು ಹೇಳಿಕೊಳ್ಳಬಹುದಾದರೂ ದಾವೆ ಹಾಕಲು ಬರುವುದೆ? ಸಂಬಳ ಪಡೆದು ಕೆಲಸದಲ್ಲಿ ಬರೆದ ಕಂಪ್ಯೂಟರ್ ಪ್ರೋಗ್ರಾಮನ್ನು ತನ್ನದೆಂದು/ಅದನ್ನು ಯಾರಾದರೂ ಭಟ್ಟಿಯಿಳಿಸಿದರೆಂದು ದಾವೆ ಹಾಕಬಹುದೆ?
ಅಥವಾ ತೆಲುಗು ಸಿನೆಮಾಕ್ಕೆ ನಿರ್ಮಾಪಕರು ಏನೇನು ಮಾರಿದ್ದಾರೆ? ಅದೂ ಗೊತ್ತಿಲ್ಲ; ಅದರ ಬಗ್ಗೆ ಏನೂ ಸುದ್ದಿ ಇಲ್ಲ. ನಿರ್ಮಾಪಕರೂ ತುಟಿಪಿಟಿಕ್ಕೆನ್ನದೆ ಕೂತಿರುವಂತಿದೆ...
ಮಂಡೆ ಬಿಸಿ ಮಾಡಿಕೊಳ್ಳುವ ಬದಲು ತಣ್ಣಗೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕೇನೋ...
ಉ: ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
ಹದಿಮೂರು ವರ್ಷಗಳ ಹಿಂದೆ ಮಲೆಯಾಳದಲ್ಲಿ ತಯಾರಾಗಿದ್ದ 'ಮಣಿಚಿತ್ರತಾೞ್' (೧೯೯೩) ಸಣ್ಣ ಪುಟ್ಟ ಸರ್ಜರಿಗಳೊಂದಿಗೆ ಕನ್ನಡದಲ್ಲಿ 'ಆಪ್ತಮಿತ್ರ'(೨೦೦೪) ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಬಿಡುಗಡೆಯಾಯಿತು. ಇದಾದ ನಂತರ 'ಆಪ್ತಮಿತ್ರ'ದ ನಿರ್ದೇಶಕ ವಾಸು ನೇತೃತ್ವದಲ್ಲೇ ತಮಿಳಿನಲ್ಲೂ ಆಯಿತು. ಮುಂದೆ ಪ್ರಿಯದರ್ಶನ್ ಸಾರಥ್ಯದಲ್ಲಿ ಹಿಂದಿಯಲ್ಲೂ ರೀಮೇಕ್ ಆಯಿತು. ಈ ಮಧ್ಯೆ ಮೂಲಚಿತ್ರದ ಕತೆಯನ್ನು ಬರೆದ ಮಧುಮುಟ್ಟಂ ಕೇರಳದ ಹೈಕೋರ್ಟಿನಲ್ಲಿ ದಾವೆ ಹೂಡಿದರು ಮತ್ತು ಶೀರ್ಷಿಕೆಯಲ್ಲಿ ಅವರ ಹೆಸರನ್ನೇ ಉಳಿಸಿಕೊಳ್ಳಬೇಕೆಂದು ಕೋರ್ಟ್ ತೀರ್ಮಾನಿಸಿತು. ಹಣ ಪಡೆದು ಕತೆ ಬರೆದದ್ದಕ್ಕೇಕೆ intellectual property rightಸು ಎಂದು ಕೋರ್ಟ್ ಕೇಳಲಿಲ್ಲ.
ನಿರ್ಮಾಪಕರು ಇಡಿಯಾಗಿ ಮಾರಿದ್ದರೂ ಬಿಡಿಯಾಗಿ ಮಾರಿದ್ದರೂ ಮನೋಮೂರ್ತಿಯವರಿಗೆ ಒಂದು ಮಾತನ್ನೂ ತಿಳಿಸದೆ ಅವರು ಮುಂದುವರಿದದ್ದು ತಪ್ಪು.
______
ಬೊಳುಂಬು