"ಗುಬ್ಬಚ್ಚಿಗಳು"
ಸಿಟೀಲಿ ಗುಬ್ಬಚ್ಚಿಗಳು ಮಾಯವಾದವು. ಗಮನಿಸಿದ್ದೀರಾ?
ಇದೇ subtle ವಿಷಯದ ಸುತ್ತ ಹೆಣೆದಿರುವ ಕಥೆಯೊಂದು ಅರ್ಥಪೂರ್ಣ ಹಾಗೂ ಕಲಾತ್ಮಕ ಚಿತ್ರವಾಗಿ ಹೊರಬರಲಿದೆ.
ಬಿ ಸುರೇಶ್ ರವರು ನಿರ್ಮಿಸುತ್ತಿರುವ "ಗುಬ್ಬಚ್ಚಿಗಳು" ಚಿತ್ರದ ನಿರ್ದೇಶಕ ಅಭಯ್ ಸಿಂಹ. ಕಥೆ ಇಸ್ಮಾಯಿಲರದ್ದು.
ಈ ದಿನದ ಪ್ರಜಾವಾಣಿ ಹಾಗೂ ಕನ್ನಡಪ್ರಭದಲ್ಲಿ ಈ ಚಿತ್ರದ ಬಗ್ಗೆ ವರದಿ ಬಂದಿದೆ. ಓದಿ.

- Login or register to post comments
- 524 hits
- Email this forum





RSS:
ಉ: "ಗುಬ್ಬಚ್ಚಿಗಳು"
ವಿಜಯಕರ್ನಾಟಕದಲ್ಲೂ ಪ್ರಕಟವಾಗಿದೆ. ಸಂಪದಿಗರ ಪರವಾಗಿ ಅಭಯಸಿಂಹ ಮತ್ತು ಇಸ್ಮಾಯಿಲರಿಗೆ ಅಭಿನಂದನೆಗಳು. ಚಿತ್ರಕ್ಕೆ ಗೆಲುವಾಗಲಿ.
______
ಬೊಳುಂಬು
ಉ: "ಗುಬ್ಬಚ್ಚಿಗಳು"
ಎಲ್ಲ ಸಿಟಿಯ ಎಲ್ಲ ಭಾಗಗಳಲ್ಲೂ ಗುಬ್ಬಿಗಳು ಮರೆಯಾಗಿಲ್ಲ. ತಮ್ಮನ್ನು ನೋಡಿಕೊಳ್ಳುವವರು ಇದ್ದಾರೆಂದರೆ ಅವು ಎಷ್ಟು domesticat ಆಗ್ತವೆ ಅನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೀನಿ. ಶಿವಮೊಗ್ಗಾದ ನನ್ನ ಅಣ್ಣನ ಮನೆಯ ಪಕ್ಕದಲ್ಲಿ ಲಾಂಟಾನಾ ಪೊದೆಯಲ್ಲಿ ಮನೆಮಾಡಿರುವ ನೂರಾರು ಗುಬ್ಬಿ ಸಂಸಾರಗಳು ದಿನಾಗಲೂ ನನ್ನಣ್ಣನ ಮನೆಯಲ್ಲಿ ಸುಮಾರು ೪-೫ ಸಾರಿ ಹಾಕುವ ಅಕ್ಕಿಯ ಕಾಳುಗಳಿಗಾಗಿ ಅವನ motorcycle, gate, ತೋರಣ, ಕಿಟಕಿಗಳಲ್ನಿ ಕಾಯುವುದು, ಯಾರೂ ಬರದಿದ್ದರೆ ಗದ್ದಲ ಮಾಡಿ ಗಮನ ಸೆಳೆಯುವುದು ತೀರ ಸಾಮಾನ್ಯ. ಸಾಧ್ಯವಾದರೆ ಆ ಬಗ್ಗೆ ಒಂದು ಬೇರೆ ಲೇಖನ ಬರೆಯುವ ಉದ್ದೇಶ ನನ್ನದು
ಉ: "ಗುಬ್ಬಚ್ಚಿಗಳು"
ಶಿವಮೊಗ್ಗದಲ್ಲಿ ಗುಬ್ಬಚ್ಚಿಗಳಿದ್ದವು, ಗಮನಿಸಿದ್ದೆ. ಗೋಪಾಲಗೌಡ ಬಡಾವಣೆ ಹಾಗೂ ವಿನೋಬಾನಗರದಲ್ಲಿ ಬಹಳ ಇದ್ದವು. ನಿತ್ಯ ಎದುರಿಗಿರುವ ಲೈಟು ಕಂಬ ಹಾಗೂ ವೈರುಗಳ ಮೇಲೆ ಕುಳಿತು ಬೆಳಗಿನ ಎಳೆ ಬಿಸಿಲಲ್ಲಿ ಚಿಲಿಪಿಲಿಗುಟ್ಟುತ್ತಿದ್ದವು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಗುಬ್ಬಚ್ಚಿಗಳು"
ಗುಬ್ಬಚ್ಚಿಗಳು ಕಣ್ಮರೆಯಾಗಿಲ್ಲ. ಇನ್ನು ಇವೆ.!!
ನಮ್ಮ ಮನೆಯ ಹತ್ತಿರ ಕಿರಿದಾದ ದಾರಿಗಳಿವೆ(ಓಣಿ). ಅಲ್ಲಿ ಬೆಳಗ್ಗೆ ನಾನು ದಿನಾಲು ಗುಬ್ಬಚ್ಚಿಗಳನ್ನ ನೋಡುತ್ತೇನೆ.
ದೊಡ್ಡ ದೊಡ್ಡ ಕಟ್ಟಡಗಳಿರುವ ಕಡೆ ಗುಬ್ಬಚ್ಚಿಗಳು ಸುಳಿಯುವುದಿಲ್ಲ !
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: "ಗುಬ್ಬಚ್ಚಿಗಳು"
ತೀರ ಕಾಣದೇ ಇರುವಂತಾಗಿಲ್ಲ, ನಿಜ. ಆದರೆ ಗುಬ್ಬಿಗಳು ಕಡಿಮೆ, ಪಾರಿವಾಳಗಳು ಹೆಚ್ಚು ಎಂಬಂತಾಗಿದೆ.
ಬೆಂಗಳೂರೊಳಗೆ ಕಪ್ಪೆಗಳನ್ನು ನೋಡಿದ್ದೀರಾ? ಕಪ್ಪೆ ಕಾಣಿಸುವುದು ಈಗೀಗ ಊರಾಚೆಯ ಜಾಗಗಳಲ್ಲೇ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಗುಬ್ಬಚ್ಚಿಗಳು"
ಹಿ೦ದೂಗಳು ಅ೦ತ್ಯಕ್ರಿಯೆ ಮಾಡುವಗ ಪಿ೦ಡ ವಿಟ್ಟು ಕಾಗೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ.
ಮುಸಲ್ಮಾನರು ಕೂಡ ಪಾರಿವಾಳಕ್ಕೆ ಕಾಳು ಹಾಕಿ ಬೆಳೆಸಿದ್ದಾರೆ.
ಅದರಿ೦ದ ಮಿಕ್ ಪಕ್ಷಿಗಳಿಗೆ ರಾಜಕೀಯ/ಧಾರ್ಮಿಕ ಸಪೋರ್ಟ್ ಇಲ್ಲದೇ ಬೆ೦ಗಳೂರನ್ನು ಬಿಡುವ೦ತಾಗಿದೆ.
ಆದರೆ ಇವರಿಗೆ ವಲಸೆ ಹೋಗುವುದಕ್ಕೆ ನಮ್ಮ ಹಳಿಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲಾ.
ಮುರಳಿ,
ಉ: "ಗುಬ್ಬಚ್ಚಿಗಳು"
ಪಾಪದ ಗುಬ್ಬಚ್ಚಿಗಳು. ವಲಸೆ ಹೋಗಿವೆಯೋ extinct ಆಗುತ್ತಿವೆಯೋ ಇದರ ಬಗ್ಗೆ ರಿಸರ್ಚ್ ಮಾಡಿದವರಿಗೇ ಗೊತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಗುಬ್ಬಚ್ಚಿಗಳು"
ಮುರಳಿ, ಎಂಥ ಪಾಯಿಂಟ್ ಹುಡ್ಕೀದ್ದೀಯೋ ನೀನು. ಇರಲಿ, ಮೆತ್ತಗೆ ಹೇಳ್ತೀನಿ ಕೇಳು. ಗುಬ್ಬಚ್ಚಿಗೂ ಒಂದು ಟೈಟಲ್ ಕಣೋ, "ಬ್ರಾಹ್ಮಣರ ಪಕ್ಷಿ" ಅಂತ
ಉ: "ಗುಬ್ಬಚ್ಚಿಗಳು"
ನಮ್ಮೂರು ದೊಡ್ಡ ಪೇಟೆಯಲ್ಲ. ಆದರೆ ಗುಬ್ಬಚ್ಚಿಗಳು ನಮ್ಮೂರಲ್ಲು ಇಲ್ಲ..ಯಾವಾಗದಿಂದ ಇಲ್ಲ ಅನ್ನೋದು ನೆನಪಿಲ್ಲ..
'ಗುಬ್ಬಚ್ಚಿಗಳು' ಸಿನೆಮಾ ತಂಡಕ್ಕೆ ಹಾರೈಕೆಗಳು.ತಿಯೇಟರ್‍ನಲ್ಲಿ ರಿಲೀಸ್ ಆಗುವ ಸಿನೆಮಾ ಮಾಡಿ.ಗೆಲುವು ನಿಮ್ಮದಾಗಲಿ.
ಉ: "ಗುಬ್ಬಚ್ಚಿಗಳು"
ಇದೊಳ್ಳೆ ಗುಬ್ಬಚ್ಚಿಗಳ ಸೀಸನ್ ಇದ್ದಹಾಗಿದೆಯಲ್ಲ!
ಮೊನ್ನೆ ೧೧ ಜನವರಿ ೨೦೦೮ರ thatskannada.com ನಲ್ಲಿ ಶ್ರೀ ಶಿಕಾರಿಪುರ ಹರಿಹರೇಶ್ವರ ಬರೆದ ಸೊಗಸಾದ ಮಾಹಿತಿಪೂರ್ಣ ಲೇಖನ ’ ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ!" ಪ್ರಕಟವಾಗಿದೆ. ಕೊಂಡಿ ಕೆಳಗಿದೆ. ಓದಲು ಮರೆಯಬೇಡಿ.
http://thatskannada.oneindia.in/column/hari/2008/1101-sparrow-the-little...
ಹಾಗೇನೆ ನಾನು ಇಂಗ್ಲೀಷ್‍ನಿಂದ ಅನುವಾದಿಸಿದ " ಬಡವಾ ನೀ ಮಡಗಿದಹಾಂಗಿರು - ಒಂದು ತರಲೆ ಗುಬ್ಬಿಯ ನೀತಿ ಕಥೆ" ಸಂಪದದಲ್ಲೇ ಪ್ರಕಟವಾಗಿತ್ತು. ( http://sampada.net/article/6796 )
ಧನ್ಯ ಗುಬ್ಬಚ್ಚಿಗಳು. ಜನ ಇವನ್ನು ನೆನೆಸಿಕೊಳ್ಳುತ್ತರಲ್ಲ!
-ನವರತ್ನ ಸುಧೀರ್
ಉ: "ಗುಬ್ಬಚ್ಚಿಗಳು"
ನವರತ್ನ ಸುಧೀರ್, ನೀವು ದಟ್ಸಕನ್ನಡದ ಕೊಂಡಿ ನೀಡಿದ್ದು ಸಮಯೋಚಿತವಾಗಿದೆ. ಗುಬ್ಬಚ್ಚಿ ಬಾಳೆಎಲೆಯ ಬೋಂಡ ನಿಜಕ್ಕೂ ತುಂಬಾ ರುಚಿಯಾಗಿರುತ್ತದೆ. ನಮ್ಮ ಮನೆಯಲ್ಲಿ ಬೆಳೀತಾ ಇತ್ತು. ಈಗ ಗುಬ್ಬಿಬಾಳೆಎಲೆ ಮಾಯವಾಗಿದ್ದರೂ ಗುಬ್ಬಚ್ಚಿಗಳು ನಮ್ಮ ಮನೆಗೆ ಬರುವುದು ಮಾತ್ರ ನಿಂತಿಲ್ಲ.
ಉ: "ಗುಬ್ಬಚ್ಚಿಗಳು"
ಪ್ರೀತಿಯ ಸಂಪದ ನಿವಾಸಿಗಳಿಗೆ ನಮಸ್ಕಾರ,
ಗುಬ್ಬಚ್ಚಿಗಳು ಚಿತ್ರೀಕರಣ ಇಂದು ಏಳನೇ ದಿನ ತಲುಪಿದೆ. ಒಟ್ಟು ೧೮ ದಿನದ ಚಿತ್ರೀಕರಣದ ಯೋಜನೆ ಇದೆ. ಇಲ್ಲಿಯವರೆಗಿನ ಚಿತ್ರೀಕರಣ ಸಾಂಗವಾಗಿ ನಡೆದಿದೆ. ನನಗೆ ಹಾಗೂ ನನ್ನ ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿಮಗೆಲ್ಲರಿಗೂ ನನ್ನ ಅನಂತಾನಂತ ಕೃತಜ್ಞತೆಗಳು.
ಇಂತು,
ಅಭಯ ಸಿಂಹ
-----------------------------------
Abhaya Simha
www.rlp.in
ಉ: "ಗುಬ್ಬಚ್ಚಿಗಳು"
ಗುಬ್ಬಚ್ಚಿಗಳು ಸಿಂಹದ ಗುಹೆಯಿಂದ ಬೇಗ ಹಾರುತ್ತಾ ಹೊರ ಬರಲಿ.



ಉ: "ಗುಬ್ಬಚ್ಚಿಗಳು"
ಶ್ರೀ ಮತ್ತು ಶ್ರೀಮತಿ ಗುಬ್ಬಚ್ಚಿ ಶೇಷಾದ್ರಿಯವರ ಸಂಗ್ರಹದಿಂದ:
http://www.indianaturewatch.net/images/album/photo/141992531946dfdbd7f2b...
______
ಬೊಳುಂಬು
ಉ: "ಗುಬ್ಬಚ್ಚಿಗಳು"
ಮೊಬೈಲ್ ಬಳಕೆ ಜಾಸ್ತಿಯಾದಾಗಿನಿಂದ ಗುಬ್ಬಿಗಳು ಕಡಿಮೆಯಾಗ್ತಾ ಇದೆ ಅಂತ ನನಗನ್ನಿಸಿತ್ತೆ..ಹಳ್ಳಿಗಳಲ್ಲೂ ಸಹ ಗುಬ್ಬಿಗಳ ಸಂಖ್ಯೆ ಕಡಿಮೆಯಾಗ್ತಾಯಿದೆ..ಬಹಶ: ಇದು ನಗರೀಕರಣದ ಪ್ರಭಾವವೂ ಇರಬಹುದು..ಅವಕ್ಕೆ ಗೂಡು ಕಟ್ಟಿಕೊಳ್ಳೋದಕ್ಕೆ ಅನಕೂಲವಾಗುವ ವಾತಾವರಣ ಈಗಿಲ್ಲ..ವಾಹನದಟ್ಟನೆ, ಪ್ರದೂಷಣೆ ಇದಕ್ಕೆ ಕಾರಣ ಇರಬಹುದಾ ಅಂತ....
ಇತಿ,
ಗಿರೀಶ ರಾಜನಾಳ
Be Indian, Buy Indian.