ನೀವೇನಂತೀರಿ ?????
ಒಂದು ಕಾಲ ಇತ್ತು.....ಹೆಣ್ಣು ಹೆತ್ತವರ ಪರಿಸ್ಥಿತಿ ಆ ದೇವರಿಗೂ ಬೇಡ ಅನ್ನುವಂತೆ.....ಆದ್ರೆ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಅನ್ನೊ ಹಾಗೆ ಇವತ್ತು...ಗಂಡು ಹೆತ್ತವರು ತಮ್ಮ ಮಕ್ಕಳ ಮದುವೆಮಾಡಲಿಕ್ಕೆ ಪರಿತಪಿಸುತ್ತಿದ್ದಾರೆ. ಅದ್ಕೇ ಇರ್ಬೇಕು ನೋಡಿ ಇವತ್ತಿನ ಹುಡುಗಿಯರಲ್ಲಿ ಧಿಮಾಕು ತುಂಬಿಕೊಂಡು ಇರುತ್ತೆ.....ಯಾರು ಏನೆ ಹೇಳ್ಲಿ...ಆ ಕಾಲಾನೆ ಚೆನ್ನಾಗಿತ್ತು..ಹುಡುಗರಿಗೆ ಎಷ್ಟೇ ಡಿಮಾಂಡ್ ಇದ್ರೂನೂ..ಈಗಿನ ಹುಡುಗಿಯರ ತರಹ ಧಿಮಾಕು ಇರ್ಲಿಲ್ಲಾ. ಅದ್ಕೇ ಇರ್ಬೇಕು " ಹುಡುಗಿಯರ ಬುದ್ಧಿ ...........ಕೆಳಗೆ" ಅಂತ ಹೇಳೋದು. ಅಲ್ಲಾ ಸ್ವಾಮಿ...ಎಲ್ಲಾ ಹುಡುಗಿರೂ ಸಾಫ಼್ಟ್ ವೇರ್ ಇಂಜಿನಿಯರೇ ಅಗ್ಬೇಕು ಅಂದ್ರೆ...ಉಳಿದವರೆಲ್ಲ ಏನ್ಮಾಡೊದು?...ಅಂದ್ರೆ ಸಂಸಾರ ನಡೆಸಲಿಕ್ಕೆ ಬರೀ ಹಣ ಇದ್ರೆ ಸಾಕಾ?....ಏನೇ ಆಗ್ಲಿ...ಹುಡುಗರಿಗೂ ಒಂದು ಕಾಲಾ ಬರುತ್ತೆ ಅಲ್ವಾ..ನೀವೇನಂತೀರಿ?

- Login or register to post comments
- 345 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ನೀವೇನಂತೀರಿ ?????
ಈ ನಿರ್ಧಾರ ಮಕ್ಕಳದ್ದಲ್ಲ , ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕ್ತಾರೆ ಅಷ್ಟೆ.
ಉ: ನೀವೇನಂತೀರಿ ?????
ಸಾಪ್ಟ್‌ವೇರ್ ಇಂಜಿನಿಯರ್‍ಗಳಿಗೂ ಸಿಕ್ತಾ ಇಲ್ಲ
ಏನು ಮಾಡಕ್ಕೆ ಆಗಲ್ಲ.. ನಮ್ಮ ದೇಸದಲ್ಲಿ ಹುಡುಗೀರ ಕೊರತೆ !!
ಉ: ನೀವೇನಂತೀರಿ ?????
ಏನೆಂದು ನಾ ಹೇಳಲಾರೆ, ಮೌನವೇ ಕಾಡಿದೆ

ಉ: ನೀವೇನಂತೀರಿ ?????
ಬದುಕು ಬರಡಾಗದಿರಲಿ..........
ಮೊದಲೆಲ್ಲ ನಿಮಗೆ(ಹುಡುಗರಿಗೆ),ನಿಮಗಿಂತ ಕಡಿಮೆ ಓದಿರುವ ಹುಡುಗಿ ಸಿಗುವುದು ಸುಲಭವಾಗಿತ್ತು...ಅದ್ರೆ ಈಗ ಸ್ವಲ್ಪ ಕಷ್ಟಾನೆ..
ಉ: ನೀವೇನಂತೀರಿ ?????
ಹೌದು.. ಈಗ ಸುಮ್ನೇ ಹೆಸರಿಗೆ ಆದ್ರೂ ಇಂಜಿನಿಯರಿಂಗ್ ಮಾಡಿರುತ್ತಾರೆ ಹುಡುಗಿಯರು. ಆದಕೆ ಇಂಜಿನಿಯರ್ ಹುಡುಗ ಬೇಕು ಅಂತ ಹೇಳೋದು/ಕೇಳೋದು.
ಉ: ನೀವೇನಂತೀರಿ ?????
ನಮ್ಮ ಅಮ್ಮನ ಮದುವೆ ಕಾಲದಲ್ಲಿ(20 ವರ್ಷಗಳ ಹಿಂದೆ), ಹುಡುಗ ಡಿಗ್ರಿ ಮಾಡಿದ್ರೆ ಅದೇ ಹೆಚ್ಚಂತೆ..ಅದು ತುಂಬ ಗರ್ವ ಪಡುವ ವಿಷ್ಯ ಆಗಿತ್ತಂತೆ..ಯಾಕಂದ್ರೆ ಆಗಿನ ಕಾಲದ ಹುಡಗಿಯರು ಹತ್ತನೆ ಈಯತ್ತೆ ಓದಿದ್ರೆ ಹೆಚ್ಚಂತೆ..ಒಂದು ಒಳ್ಳೆ ವಿಷಯ ಅಂದ್ರೆ ಆ ಕಾಲದಲ್ಲಿ ಹುಡುಗ ಮೇಷ್ಟ್ರಾಗಿದ್ರೆ ಡಿಮಾಂಡಂತೆ..ಇತ್ತೀಚೆಗೆ ಮೇಷ್ಟ್ರಿಗೆ,ಮೇಷ್ಟ್ರ ಕೆಲ್ಸಕ್ಕೆ ಗೌರವ ತುಂಬ ಕಡಿಮೆ ಆಗೋಗಿದೆ
ಉ: ನೀವೇನಂತೀರಿ ?????
ಅದೆಲ್ಲ ಏನಿಲ್ಲ, ಹಿಂದೆಲ್ಲ ಗಂಡುಗಳ ವರದಕ್ಷಿಣೆ ಕಾಟ, ಸಮಾಜದಲ್ಲಿ ಹೆಣ್ಣು ಮಕ್ಕಳಿಗಿದ್ದ ಎರಡನೇ ಮಟ್ಟ, ಮುಂತಾದ ಕಾರಣಗಳಿಂದ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂಗೆ ಅಂದ್ಕೋತಿದ್ರು. ಈಗ ಅದೆಲ್ಲ ಹಳೇ ಕಾಲ. ಹೆಣ್ಮಕ್ಕಳಿಗೆ ಎಲ್ಲಿಲ್ಲದ ಆದರ. ಇದು ಒಳ್ಳೇ ಬೆಳವಣಿಗೆ.
ಗಂಡ-ಹೆಂಡತಿ ಇಬ್ಬರೂ ಕಲಿತವರರಾದರೆ ಒಳ್ಳೇ ಹೊಂದಾಣಿಕೆ ಇದ್ದು, ಬದುಕು ಚೆನ್ನಾಗಿರುತ್ತೆ. ಅಲ್ವಾ?