ಹೊಂಗನಸು - ಎಂಬ ಕೆಡುಗನಸು
ನೆನ್ನೆ ಅದು ಯಾವ ಗರವೋ, ಬಸವನಗುಡಿಯ ಉಮಾದಲ್ಲಿ ’ಹೊಂಗನಸು’ ಎಂದು ಸಿನಿಮಕ್ಕೆ ಹೋದ್ವು.
ಅಪ್ಪ... ಯಾವಾಗ ಮುಗಿಯತ್ತೆ ಅನ್ನಿಸ್ತಿತ್ತು..
ನನ್ನ ಅನಿಸಿಕೆಯಲ್ಲಿ ಸಿನಿಮ ಒಂದು ಎಂಟರ್‌ಟಯ್ನಮೆಂಟು, ಹೋಗಿ ಒಂದು ಹೂದೋಟವನ್ನೂ, ಕಡಲ-ತೀರವನ್ನು ನೋಡಿದಂತೆ. ಅದರ ಚಲುವು ಸವಿಯುವುದ ಅಶ್ಟೇ, ಅದನ್ನು ಬಿಟ್ಟು "ಈ ಗುಲಾಬಿಯಾಕೆ ಕೆಂಪಗೇ ಇದೆ" ಅಂತೆಲ್ಲ ತೆಲೆಗೆಡಿಸಿಕೊಳ್ಳೋದು ಸರಿಯಲ್ಲ.
ಆದ್ರೆ, ಈ ಸಿನಿಮ ಹೂದೋಟದ ಜಾಗದಲ್ಲಿ ಮುಳ್ಳುದೋಟವನ್ನು, ಕಡಲ-ತೀರದ ಜಾಗ ನೀರೇ ಇಲ್ಲದ ತೊರೆಯ ಹರಿವನ್ನು ನೋಡಿದಂತಾಯ್ತು..
ನಂನಂತ ಹುಡುಗರಿಗೆ ಹಿಡಿಸುವ ಕೆಲವು ಸಂಗತಿಗಳೂ ಇಲ್ಲ
. ಹಿರೊಯಿನ್ ಚನ್ನಾಗಿ ಮಾಡಿಲ್ಲ. ಅವರ ಬಟ್ಟೆ-ಸಿಂಗಾರ ಚನ್ನಾಗಿಲ್ಲ. ಇನ್ನೂ ಹಿರೋಗೋ ಹಾಡುಗಳಲ್ಲಿ ಕೆಟ್ಟಕೆಟ್ಟದಾಗಿ ಬಟ್ಟೆಗಳನ್ನು ತೊಡಿಸಿದ್ದಾರೆ.
ಟಯಿಮ್ಸ್ ಆಪ್ ಇಂಡಿಯದಲ್ಲಿ ಈ ಹೊಂಗನಸಿಗೆ ಮೂರು ಚುಕ್ಕಿ ಬಂದಿತ್ತು. ಕನ್ನಡ ಸುದ್ದಿಯೋಲೆಗಳು ಚನ್ನಾಗಿಲ್ಲ ಅಂತ ಬರೆದಿದ್ವು. ’ಗಾಳಿಪಟ’ ಚನ್ನಾಗಿತ್ತಲ್ಲ.. ಅದಕ್ಕೆ ಹೋಗಿದ್ದು.
ನಂಗೆ ತೀರಾ ಬೇಸರವಾಗಿದ್ದು ಹಂಸಲೇಕ ಅವರ ಮ್ಯೂಸಿಕ್ಕು!!

- Login or register to post comments
- 392 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಹೊಂಗನಸು - ಎಂಬ ಕೆಡುಗನಸು
ಟೈಮ್ಸ್ ಆಫಿಂಡಿಯಾದಲ್ಲಿ ಮೂರು ಚುಕ್ಕೆ ಬಂದ್ರೆ ಏನಂತೆ? ಅದನ್ಯಾಕೆ ಪ್ರಸ್ತಾಪಿಸಿ ತಲೆ ಮೇಲೆ ಹೊತ್ಕೊಂಡ್ರಿ?
ಉ: ಹೊಂಗನಸು - ಎಂಬ ಕೆಡುಗನಸು
ಓಸುಗರ ಕನ್ನಡ ಸುದ್ದಿಯೋಲೆಗಳ ಅನಿಸಿಕೆಗಳು ಸರಿಯಿಲ್ಲ ಅಂತ ಇಲ್ಲೇ ಮಂದಿ ಬರೆದಿದ್ರಿ..
ಎಗಡೆಯವರೇ, ನೀವೀ ಸಿನಿಮ ನೋಡೀರ?
ಉ: ಹೊಂಗನಸು - ಎಂಬ ಕೆಡುಗನಸು
ಸುಖ ಸ್ವಪ್ನ ಹೋಗಿ ಸಿಂಹ ಸ್ವಪ್ನವಾದ ಹಾಗಾಯಿತು ಅನ್ನಿ.
ರತ್ನಜ ತುಂಬಾ ...ತುಂಬಾ ...ಪ್ರತಿಭಾವಂತ, ಸಂವೇದನಾಶೀಲ ನಿರ್ದೇಶಕ ಅಂತ ಅವರೇ ಬಹಳಷ್ಟು ಸಂದರ್ಭಗಳಲ್ಲಿ ಹೇಳಿದ್ದನ್ನು ಕೇಳಿದ್ದೆ. ಸಿನೆಮಾ ನೋಡುವ ಕುತೂಹಲ ಉಂಟಾಗಿತ್ತು ಸಧ್ಯ ಸಿಂಹಸ್ವಪ್ನದಿಂದ ನನ್ನನ್ನು ಪಾರುಮಾಡಿದಿರಿ....
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ
ಉ: ಹೊಂಗನಸು - ಎಂಬ ಕೆಡುಗನಸು
ಅರೆರೆ....
ನಾನೆಂದು ಕನ್ನಡ ಸಿನಿಮ ನೋಡಬ್ಯಾಡಿ ಅನ್ನಲ್ರಿ.
"ಪ್ರತಿಭಾವಂತ, ಸಂವೇದನಾಶೀಲ ನಿರ್ದೇಶಕ" ಹಿಂಗ್ರೆ ಬಲು ಮಂದಿ ತಿಳಿಯಕ್ಕೆಲ್ಲಿ, ಅದಕ್ಕೆ..!!
ಸುಕ ಸೊಪ್ನ, ಸಿಮ್ಮ ಸೊಪ್ನ ಇವೆಲ್ಲ ಏನಿಲ್ಲ...
ಹೋಗಿ ಸಿನಿಮ ನೋಡಲು ಕೂತ್ರೆ, ಸೀಟ್ನಾಗೆ ತಿಗಣೆ ಕಚ್ಚಿದಂಗ್ ಆಯ್ತದ!