ಸ್ವಲ್ಪ ಅಡ್ಜಸ್ಟ ಮಾಡ್ಕೊಳ್ಳಿ
ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. ಸುನಿಲ ಎಂಬುದು ನನ್ನ ಪ್ರಿಯ ನಾಮಧೇಯ. ವಾಸಸ್ಥಳ ಬೆಂಗಳೂರು. ಸಂಪದ ವಾರ್ತಾಪತ್ರಿಕೆಯಿಂದಾಗಿ ಸಂಪದ.netಗೆ ಪರಿಚಿತ. ಈ ಪೋರ್ಟಲ್ ಬಹಳ ಪ್ರಿಯವಾಗಲು ಕಾರಣ, ಕನ್ನಡದಲ್ಲೆ ಬ್ಲಾಗಿಸುವ, ಚಾಟಿಸುವ, ಚರ್ಚಿಸುವ ಸಾಧ್ಯತೆ ಸಾಕಾರಗೊಳಿಸಿದ್ದಕ್ಕೆ. ಇದರ ಕಾರಣಕರ್ತರಿಗೆ ನನ್ನ ವಿಶೇಷ ಅಭನಂದನೆಗಳು ಮತ್ತು ಧನ್ಯವಾದಗಳು. ಸಧ್ಯಕ್ಕೆ, ತಂತ್ರಾಂಶ ಅಭಿಯಂತರನಾಗಿ ಉದ್ಯೋಗ. ನಾಟಕ ನೋಡುವುದೆಂದರೆ ಪಂಚಪ್ರಾಣ. ಸದ್ಯಕ್ಕೆ ಒಂದು ದೊಡ್ಡ ಆಸೆಯನ್ನಿಟ್ಟುಕೊಡಿದ್ದೇನೆ. ವಯೋಲೀನ್ ಕಲಿಯುವುದು (ನನಗೆ ಸಿನಿಮಾ ಸಂಗೀತ ಆಷ್ಟೆ ಗೊತ್ತಿರೋದು ಶಾಸ್ತ್ರೀಯ ಸಂಗೀತದಲ್ಲಿ ನಾನು ಸೊನ್ನೆ.). ಆಸೆಗಳ ಪಟ್ಟಿ ಬೆಳೆಯುತ್ತಿದೆ.... - ನಾಟಕ ಮಾಡುವುದು. ಇರಲಿ ಉಳಿದದ್ದು ನಿಧಾನವಾಗಿ ನೋಡುವ.
_______________________________________________
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.

- Login or register to post comments
- 658 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
'ಸಂಪದ' ಅನ್ನೋ ವಾರ್ತಾಪತ್ರಿಕೇನೂ ಉಂಟೇನ್ರಿ?
'ಸಂಪದ'ಕ್ಕೆ ಸ್ವಾಗತ್ರೀ!
'ಸಂಪದ' ಅನ್ನೋ ವಾರ್ತಾಪತ್ರಿಕೇನೂ ಉಂಟೇನ್ರಿ? ಗೊತ್ತಿರ್ಲಿಲ್ಲ!
Update:
ಅಥವಾ 'ಸಂಪದ' ನ್ಯೂಸ್ ಲೆಟ್ಟರ್ರನ್ನ 'ಸಂಪದ' ವಾರ್ತಾಪತ್ರಿಕೆ ಎಂದು ಬರೆದ್ರೇನೋ...
(ನೀವು ವಾರ್ತಾ ಪತ್ರಿಕೆ ಅಂತ ಬರ್ದ್ರೆ ಕನ್ಫ್ಯೂಸ್ ಆಗತ್ತೆ... ನ್ಯೂಸ್ ಲೆಟ್ಟರ್ ಅಂತಾನೇ ಬರೆಯೋದು ಒಳ್ಳೇದು)
> ಸದ್ಯಕ್ಕೆ ಒಂದು ದೊಡ್ಡ ಆಸೆಯನ್ನಿಟ್ಟುಕೊಡಿದ್ದೇನೆ. ವಯೋಲೀನ್ ಕಲಿಯುವುದು
ಒಳ್ಳೇ hobby

ನಾನು ಸಣ್ಣವನಾಗಿದ್ದಾಗ ಕೊಳಲು ಕಲ್ತಿದ್ದೆ. ಈಗ ಮ್ಯೂಸಿಕ್ ಬರಿ ಕೇಳೋದಷ್ಟೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅಯ್ಯೊ ಅಲ್ಲ. Nov 2005 newsletter. ಮಹಿಮೆ.
ಅಯ್ಯೊ ಅಲ್ಲ. ನಾನು newsletterge ಸದಸ್ಯನಾಗಿದ್ದೆ. ಮೊನ್ನೆ ನನ್ನ ಐಡಿಗೆ ನಿಮ್ಮ ನವೆಂಬರ್ ಸಂಚಿಕೆ ಬಂತು ,ತೆರೆದು ಓದಿದ ಮೇಲೆ ಙ್ಞಾನೋದಯವಾಗಿ ಸಂಪದಕ್ಕೆ ಸೇರ್ಪಡೆಗೊಂಡೆ.