Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

January 30, 2008 - 2:07pm — prasadbshetty

"ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

‹ ಕಾಲ್ಡ್‌ವೆಲ್ ಕಾಲು ಜಾರಿದನೇ?!!! ಪಾಮರರ ಅಭಿಪ್ರಾಯವೇನು? ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 841 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 30, 2008 - 3:34pm — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ಅಯ್ಯೋ, ಪ್ರಸಾದ್, ಮೊದಲು "ಸಮಾನಾಂತರ" ಅಂದರೇನು ಅಂತ ಹೇಳಿ Eye-wink ಬಹುಶಃ ಸಮಾನಾರ್ಥಕ (ಅದೇ ಅರ್ಥದ) ಪದ ಅಂತ ಹೇಳಬೇಕಿತ್ತು ಅನಿಸತ್ತೆ. ಇರಲಿ, ಪ್ರಸಾದಕ್ಕೆ ಚುರ್ಪು ಅಂತಲೋ ಏನೋ ಹೇಳ್ತಾರೆ. ಮಹೇಶನಿಗೆ ಗೊತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 3:41pm — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

Smiling

ಸಮಾನಾಂತರ = parallel

ಸಮಪದ/ಸಮದೊರೆ

ಪ್ರಸಾದ = ಚರುಪು. ( ಇದು ತೆಲುಗಲ್ಲಿ ಹೆಚ್ಚು ಬಳಕೆ ಇದೆಯಂತೆ )

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 6:18pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

’ಚರುಪು’ ತೆಲುಗಿನಲ್ಲಿ ಉಪಯೋಗಿಸುವ ಪದ, ಕನ್ನಡದಲ್ಲೂ ಬಳಸಬಹುದು, ಹಾಗಾಗಿ ’ಪ್ರಸಾದ’ ಪದಕ್ಕೊಂದು ಸಮಾನಾರ್ಥಕ ಪದ ದ್ರಾವಿಡ ಮೂಲದ್ದೇ ಸಿಕ್ಕಿತು ಎಂದುಕೊಂಡಿರಾ?

ಈ ಕೆಳಗಿನ ವಿವರ ತಥಾಕಥಿತ (so called) ಸಂಸ್ಕೃತದ್ವೇಷಿಗಳಿಗೆ ಸ್ವಲ್ಪ ಕಿರಿಕಿರಿಯೆನಿಸಬಹುದು, ಆದರೆ ವಾಸ್ತವವೆಂದರೆ ’ಚರುಪು’ ಪದದ ಮೂಲ, ಸಂಸ್ಕೃತದ ’ಚರು’. ಯಜ್ಞಯಾಗಾದಿಗಳಲ್ಲಿ ದೇವತೆಗಳಿಗೆ ಹೋಮದಲ್ಲಿ ಅರ್ಪಿಸುವ ಹವಿಸ್ಸು ’ಚರು’. ಅನ್ನಕ್ಕೆ ವಿವಿಧ ಪರಿಮಳದ್ರವ್ಯಗಳನ್ನು ಸೇರಿಸಿ ತಯಾರಿಸಿದ್ದು.

’ಚ’ ಅಕ್ಷರದಿಂದ ’ಚರು’ ಅಷ್ಟೇ ಅಲ್ಲದೆ ಇನ್ನೂ ಅದೆಷ್ಟೋ ತಿಂಡಿತಿನಸುಗಳ ಹೆಸರು ಆರಂಭವಾಗುತ್ತದೆ. ವಿವರಗಳಿಗೆ ಓದಿ "ಚ ಉವಾಚಿಸಿದ ಚಾಗುಣಿತ".

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 10:57pm — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ಅಯ್ಯಯ್ಯಪ್ಪಾ, ಇದೇನ್ರೀ ಶ್ರೀವತ್ಸ. ನೀವೂ ಕೂಡ ಯಾವ ಯಾವುದೋ ವಿಷಯವನ್ನು ಎಲ್ಲೆಲ್ಲಿಯೋ ಪ್ರಸ್ತಾಪಿಸಲು ಶುರು ಮಾಡಿಬಿಟ್ರಿ.

’ಚರುಪು’ ತೆಲುಗಿನಲ್ಲಿ ಉಪಯೋಗಿಸುವ ಪದ, ಕನ್ನಡದಲ್ಲೂ ಬಳಸಬಹುದು, ಹಾಗಾಗಿ ’ಪ್ರಸಾದ’ ಪದಕ್ಕೊಂದು ಸಮಾನಾರ್ಥಕ ಪದ ದ್ರಾವಿಡ ಮೂಲದ್ದೇ ಸಿಕ್ಕಿತು ಎಂದುಕೊಂಡಿರಾ?

ನಾನಂತೂ ಈ ಎಳೆ ದ್ರಾವಿಡ v/s ಸಂಸ್ಕೃತ ಆಗಬಹುದು ಎಂದು ಯೋಚಿಸಿರಲಿಲ್ಲ. ಅಲ್ಲ, ಜೋಶಿ, "ಚುರುಪು" ದ್ರಾವಿಡ ಪದ ಅಂತ ಯಾರಾದರೂ ಈ ಎಳೆಯಲ್ಲಿ ಪ್ರಸ್ತಾಪಿಸಿದ್ದಾರೆಯೇ. ಅಯ್ಯೋ ದೈವವೇ..

ಈ ಕೆಳಗಿನ ವಿವರ ....... ಕಿರಿಕಿರಿಯೆನಿಸಬಹುದು

"ತಥಾಕಥಿತ ಸಂಸ್ಕೃತದ್ವೇಷಿ" ಅಂದರೇನು ಅಂತ ಅರ್ಥಮಾಡಿಕೊಳ್ಳುವುದಕ್ಕೂ ಮೊದಲು, ಕೆಳಗಿನ ಮೂರು ವಿಷಯಗಳಂತೂ ತುಂಬಾನೇ ಕಿರಿಕಿರಿ ಉಂಟುಮಾಡಿದವು.

೧. "ಸಮಾನಾಂತರ" ಎಂಬ ತಪ್ಪು ತಪ್ಪು ಸಂಸ್ಕೃತದ ಬಳಕೆ. ಅದನ್ನು ಓದಿಯೂ ಕೂಡ ಸಂಸ್ಕೃತದ ಬಗ್ಗೆ ದೊಡ್ಡ ದೊಡ್ಡ ಉಪದೇಶ ನೀಡುವವರಿಗೆ ಏನೂ ಅನಿಸದಿದ್ದುದು.
೨. ಬೇಕೇ ಆಗಿರದಿದ್ದರೂ ಈ ಎಳೆಯಲ್ಲಿ ದ್ರಾವಿಡ v/s ಸಂಸ್ಕೃತದ ಪ್ರಸ್ತಾಪ ಮಾಡಿದ್ದು.
೨. "ಚ ಉವಾಚಿಸಿದ ಚಾಗುಣಿತ"ದ ಈ ಪ್ಯಾರಾ.

ಚರುವಿನ ಸಂಗತಿ ಹಾಗಾದರೆ ‘ಚಾರು’ ಬಗ್ಗೆ ಸಹ ಒಂದೆರಡು ಮಾತು ಹೇಳಬೇಕು. ಇವತ್ತು ಆಸೇತುಹಿಮಾಚಲವಾಗಿ ರಸಂ ಎಂದು ಖ್ಯಾತಿಯಾಗಿರುವುದರ ಮೂಲ ತೆಲುಗು/ತಮಿಳಿನ ಚಾರು. ಅದೇ ಕನ್ನಡಕ್ಕೆ ಬಂದಾಗ ಸಾರು ಆಗಿರುವುದು. ಚಾರು ಶಬ್ದದ ಅರ್ಥ essence ಅಥವಾ juice ಎಂದು. ಹುಣಸೇಹಣ್ಣು, ಕಾಳುಮೆಣಸುಗಳ ಮಿಶ್ರಣದ ಎಸ್ಸೆನ್ಸ್‌ ಅಥವಾ ಸಾರವೇ ಚಾರು. ಪುಳಿಚಾರು ಬ್ರಾಹ್ಮಣ ಅಂತ ವ್ಯಂಗ್ಯಮಾಡುವ ರೂಢಿ ಬರುವುದಕ್ಕೆ ಚಾರೇ ಕಾರಣ

ಕನ್ನಡದಲ್ಲಿ "ಚಾರು" ಇಲ್ಲ ಅಂತ ನಿಮಗೇಕೆ ಅನ್ನಿಸಿತೋ ನನಗೆ ಗೊತ್ತಿಲ್ಲ, ಆದರೆ ತಮಿಳಿನ "ಚಾರಿನಿಂದ" ಕನ್ನಡದ ಸಾರು ಬಂದಿಲ್ಲ. ಅದು ದ್ರಾವಿಡ "ಚಾರು". "ಕನ್ನಡ"ದಲ್ಲಿ "ಚಾರು" ಮತ್ತು "ಸಾರು" ಎರಡೂ ಇದೆ. ಆದರೆ ತಮಿಳಿನಲ್ಲಿ ಚಾರು(ರಸಂ) ಬಳಕೆ ಹೆಚ್ಚು, ಕನ್ನಡದಲ್ಲಿ "ಸಾರು" ಬಳಕೆ ಹೆಚ್ಚು. ಬಳಕೆ ಹೆಚ್ಚಾಗಿದೆ ಎಂಬ ಒಂದೇ ಕಾರಣಕ್ಕೆ, ಕನ್ನಡದಲ್ಲಿ ಚಾರು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ ಬರುವುದು ತಪ್ಪು. ಈಗಲೂ ನಮ್ಮ ನಮ್ಮ ಮನೆಗಳಲ್ಲಿ ಮಕ್ಕಳೊಡನೆ ಮಾತನಾಡುವಾಗ "ಚಾರು"(ಚಾರು ಅನ್ನ) ಅಂತಲೇ ಹೇಳೋದು. ದೊಡ್ಡವರೊಡನೆ ಮಾತನಾಡುವಾಗ "ಸಾರು" ಅನ್ನುತ್ತೇವೆ. ಅಷ್ಟಕ್ಕೂ ಕನ್ನಡದ ಬಗ್ಗೆ ಮಾತನಾಡುವಾಗ ಕನ್ನಡದ ಪ್ರತಿಯೊಂದು ಪದವೂ ಬೇರೆ ಭಾಷೆಯಿಂದಲೇ ಬಂದಿರುವುದು ಎಂದು ಏಕೆ ನಿರೂಪಿಸಲು ಹಪಹಪಿಸಬೇಕೋ ನನಗೆ ತಿಳಿಯುವುದಿಲ್ಲ. ನೀವು ಪ್ರಸ್ತಾಪಿಸಿದ ಕಾಳುಮೆಣಸಿನ ಮಿಶ್ರಣದ ಎಸ್ಸೆನ್ಸ್ ಕನ್ನಡ, ತಮಿಳು ಎರಡರಲ್ಲಿಯೂ ಇದೆ ಎಂಬುದಾಗಿ ಈ ದ್ರಾವಿಡ ನುಡಿಕೋಶ ವಿವರಿಸುತ್ತೆ, ಬಿಡುವಿದ್ದಾಗ ನೋಡಿ.

ಕೊಕೊ(ಕೊನೆಯ ಕೊಸರು) - "ಚ ಉವಾಚಿಸಿದ ಚಾಗುಣಿತ" ಬರಹ ತುಂಬಾನೇ ಚೆನ್ನಾಗಿದೆ. ಇದನ್ನು ಈ ಮುಂಚೆ ಓದಿರಲಿಲ್ಲ. ಆದರೆ ಚೆನ್ನಾಗಿರುವ ಮೊಸರಲ್ಲಿ ಒಂದೆರೆಡು ಹುಳಿ ಹನಿಗಳು ಬಿದ್ದರೆ ಏನಾಗುತ್ತದೆ ಎಂಬುದನ್ನು ತಿಳಿಸಬೇಕಿಲ್ಲವಷ್ಟೇ ?

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 12:23am — hamsanandi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

hamsanandi's picture

ಸುನಿಲರು ಹೀಗೆಂದರು - ಶ್ರೀವತ್ಸರ ಬರಹದ ಬಗ್ಗೆ

ಕನ್ನಡದಲ್ಲಿ "ಚಾರು" ಇಲ್ಲ ಅಂತ ನಿಮಗೇಕೆ ಅನ್ನಿಸಿತೋ ನನಗೆ ಗೊತ್ತಿಲ್ಲ, ಆದರೆ ತಮಿಳಿನ "ಚಾರಿನಿಂದ" ಕನ್ನಡದ ಸಾರು ಬಂದಿಲ್ಲ. ಅದು
ದ್ರಾವಿಡ "ಚಾರು". "ಕನ್ನಡ"ದಲ್ಲಿ "ಚಾರು" ಮತ್ತು "ಸಾರು" ಎರಡೂ ಇದೆ. ಆದರೆ ತಮಿಳಿನಲ್ಲಿ ಚಾರು(ರಸಂ) ಬಳಕೆ ಹೆಚ್ಚು,
ಕನ್ನಡದಲ್ಲಿ "ಸಾರು" ಬಳಕೆ ಹೆಚ್ಚು. ಬಳಕೆ ಹೆಚ್ಚಾಗಿದೆ ಎಂಬ ಒಂದೇ ಕಾರಣಕ್ಕೆ, ಕನ್ನಡದಲ್ಲಿ ಚಾರು ಇಲ್ಲವೇ ಇಲ್ಲ ಎಂಬ ತೀರ್ಮಾನಕ್ಕೆ
ಬರುವುದು ತಪ್ಪು. ಈಗಲೂ ನಮ್ಮ ನಮ್ಮ ಮನೆಗಳಲ್ಲಿ ಮಕ್ಕಳೊಡನೆ ಮಾತನಾಡುವಾಗ "ಚಾರು"(ಚಾರು ಅನ್ನ) ಅಂತಲೇ ಹೇಳೋದು.
ದೊಡ್ಡವರೊಡನೆ ಮಾತನಾಡುವಾಗ "ಸಾರು" ಅನ್ನುತ್ತೇವೆ.

ತಮಿಳುನಾಡಿನಲ್ಲಿ ಕೆಲ ಕಾಲ ಇದ್ದ, ಹಾಗೂ ಹಲವು ತಮಿಳರ ಜೊತೆ ಒಡನಾಡಿರುವ ನನ್ನ ಅನುಭವದಲ್ಲಿ (ಈಗಿನ) ತಮಿಳಲ್ಲಿ ಚಾರು ಎನ್ನುವ ಪ್ರಯೋಗ ಇಲ್ಲವೇ ಇಲ್ಲ ಎನ್ನಬಹುದು. ಅದು ಏನಿದ್ದರೂ ಬರೀ ’ರಸಂ’ ಅಷ್ಟೇ. ಅಲ್ಲದೆ ಪದಾರಂಭದ ’ಚ’ ಸರಿಸುಮಾರಾಗಿ ಯಾವಾಗಲೂ ’ಸ’ ಆಗುವ ಇಂದಿನ ತಮಿಳಲ್ಲಿ (ಸೆಂದಿರನ್, ಸೆಲ್ವಿ, ಸೆನ್ನೈ, ಸೊಲ್ ಮೊದಲಾದ ಪದಗಳನ್ನು ಗಮನಿಸಿ) ಒಂದು ವೇಳೆ ಚಾರು ಇದ್ದರೂ, ಅದು ಸಾರೇ ಆಗಬೇಕು.

ಹಿಂದೆ ತಮಿಳಲ್ಲೂ ಚಾರು ಎನ್ನುವ ಪದವಿತ್ತೇ? ಇಲ್ಲವೇ ? ನನಗೆ ಗೊತ್ತಿಲ್ಲ. ಏಕೆಂದರೆ ತಮಿಳುಮೂಲದ ಮಾತಾಡುವ (ಕರ್ನಾಟಕದ) ಅಯ್ಯಂಗಾರ್ ತಮಿಳಲ್ಲಿ ರಸಂ ಎನ್ನುವ ಪದವೇ ಉಪಯೋಗವಾಗುತ್ತೆ. ಅದೇ, ಅದಕ್ಕಿಂತ ಕನ್ನಡದ ಪ್ರಭಾವ ಹೆಚ್ಚಿರುವ ನನ್ನ ಮನೆಮಾತಿನಲ್ಲಿ ( ಇದೂ ತಮಿಳು/ಮಲೆಯಾಳ ಮೂಲದ್ದೇ) ಚಾರು ಎನ್ನುವ ಪದ ಬಳಕೆಯಲ್ಲಿದೆ. ಹಾಗಾಗಿ ಒಮ್ಮೊಮ್ಮೆ ಇದು ಕನ್ನಡದಿಂದಲೇ (ನಮ್ಮ ಮನೆ ಮಾತಿಗೆ) ಬಂತೇ ಎಂದು ನನಗನ್ನಿಸಿದೆ.

ಸುನಿಲರು ಹೇಳಿದಂತೆ ಅಪ್ಪಟ ಹದಿನಾರಾಣೆ ಕನ್ನಡದವರೂ ಚಾರು ಎನ್ನುವ ಪದವನ್ನು ಮಕ್ಕಳೊಂದಿಗೆ (ಉದಾ: ಚಾರುಮಮ್ಮು ಕೊಡಲಾ?) ಉಪಯೋಗಿಸುವುದನ್ನು ನಾನೂ ಕಂಡಿದ್ದೇನೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 10:54am — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

http://dsal.uchicago.edu/cgi-bin/philologic/getobject.pl?c.0:1:2492.burr...

ಅಣ್ಣಂದಿರ

ಚಾರು/ಸಾರು ನಮ್ಮದೇ.. Smiling

ನಾವು ತಿಳಿಚಾರು ಅನ್ನೋದು.. ತಿಳಿಸಾರು ಅಂತ ಕಡಮೆ..

ಹಂಸಾನಂದಿಗಳೇ.. ನಮ್ಮ ಹಾಸನ ಗಾದೆ ’ಕಿರುಬನಿಗೇನು ಗೊತ್ತು ಮರುಗದ ಗವನ’.. Smiling

ತಂಚೊಡರು = ತಣ್ + ಸೊಡರು

ಹಚ್ಚು ಇದ್ನು ಹಸ್ಸು ಅಂತಾರೆ
ಚಂದಾಗಯ್ತೆ = ಸಂದಾಗಯ್ತೆ

ದ್ರಾವಿಡನುಡಿ ಮಂದಿಯಲ್ಲಿ ಚ ಮತ್ತು ಸ ನಡುವೆ ಬೇರತನ ಕಡಮೆ, ಹಲವರಲ್ಲಿ ಇಲ್ಲವೇ ಇಲ್ಲ..

ಮಾದರಿ :

ಗಾಳಿಪಟದ ಈ ಹಾಡನ್ನು ನನ್ನ ಗೆಳೆಯ ಹಾಡಿದ್ರೆ, ಹೀಗೆ ಕೇಳಿಸ್ತದೆ.

----
ಮಿಂಚಾಗಿ ನೀನು ಬರಲು
ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು
ಕೂತಲ್ಲಿಯೇ ಚಳಿಗಾಲ
--

ಮಿನ್ಸಾಗಿ ನೀನು ಬರಲು ( ಇಲ್ವೇ ಮಿಂತ್ಸಾಗಿ )
ನಿಮ್ಮಲ್ಲಿಯೇ ಮಳ್ಯಗಾಲ
ಬೆಚ್ಸಗೆ ನೀ ಜೊತೆಗಿರಲು( ಬೆಸ್ಸಗೆ ಕೂಡ..)
ಕೂತಲ್ಲಿಯೇ ಸಳಿಗಾಲು ( ಸ = ತ್ಸ = ಚ .. ಯಾವುದ ಅಂತ ಕೆಲವು ಸರತಿ ಗೊತ್ತಾಗಲ್ಲ )

ಈ ಸಂಗತಿಯನ್ನು ಡಿ.ಎನ್.ಶಂಕರ ಬಟ್ರು ತಮ್ಮ ’ಕನ್ನಡ ನುಡಿ ನಡೆದು ಬಂದ ದಾರಿ’ ಹೊತ್ತಗೆಯಲ್ಲಿ ಸಕ್ಕತ್ತಾಗಿ ಬಿಡಿಸಿ ಹೇಳಿದ್ದಾರೆ..

ಮರಾಟಿ ನುಡಿಯಲ್ಲಿ ’ತ್ಸ’ ನಮ್ಮ ಕನ್ನಡದ ಪ್ರಬಾವ.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 10:13am — ವೈಭವ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ವೈಭವ's picture

ಚನ್ನೀಲ,

ನಂಗೆ ಗಾಳಿಪಟ ಹಾಡು ನೆನಪಾಯಿತು ಕಣಪ್ಪ,

"ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿಯೆಂದೆನ್ನಬಹುದೇ?" (ಯೋಗರಾಜ ಬಟ್ ಬರೆದಿರೋದು ಅನ್ಸುತ್ತೆ)

ಅದನ್ನ ಹೀಗನ್ನಬಹುದು ಅನ್ಸುತ್ತೆ

ಕನ್ನಡ ಉಳಿಸೊ ಕಾಯಿಲೆಗೆ 'ಸಕ್ಕದ ದ್ವೇಷಿ' ಗಳೆನ್ನಬಹುದೆ? Smiling ಹ ಹ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 11:35am — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

"ಚರುವಿನ ಸಂಗತಿ ಹಾಗಾದರೆ ‘ಚಾರು’ ಬಗ್ಗೆ ಸಹ ಒಂದೆರಡು ಮಾತು ಹೇಳಬೇಕು. ಇವತ್ತು ಆಸೇತುಹಿಮಾಚಲವಾಗಿ ರಸಂ ಎಂದು ಖ್ಯಾತಿಯಾಗಿರುವುದರ ಮೂಲ ತೆಲುಗು/ತಮಿಳಿನ ಚಾರು. ಅದೇ ಕನ್ನಡಕ್ಕೆ ಬಂದಾಗ ಸಾರು ಆಗಿರುವುದು. ಚಾರು ಶಬ್ದದ ಅರ್ಥ essence ಅಥವಾ juice ಎಂದು. ಹುಣಸೇಹಣ್ಣು, ಕಾಳುಮೆಣಸುಗಳ ಮಿಶ್ರಣದ ಎಸ್ಸೆನ್ಸ್‌ ಅಥವಾ ಸಾರವೇ ಚಾರು. ಪುಳಿಚಾರು ಬ್ರಾಹ್ಮಣ ಅಂತ ವ್ಯಂಗ್ಯಮಾಡುವ ರೂಢಿ ಬರುವುದಕ್ಕೆ ಚಾರೇ ಕಾರಣ"

ಸುನಿಲ..

ಇದೆಲ್ಲ ಪ್ರಿಂಟಾಗಿದ್ಯ?

ಎಂತಹ ವಿದ್ವತ್ತು! Smiling

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 6:04pm — ವೈಭವ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ವೈಭವ's picture

ಹೆ ಚನ್ನೀಲ, ಮಾಯ್ಸ

ಈ ಪುಳ್ಚಾರ್ ಅನ್ನೋರು ರೌಡಿಗಳಂತೆ.. ಸುಸಂಸ್ಕೃತರಲ್ಲ... ಹಂಗೆಲ್ಲ ಅನ್ಬೇಡಿ Sad

ಸುಸಂಸ್ಕೃತರಾಗ್ರಪ್ಪ Smiling :)

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 1:56pm — thiligola

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

thiligola's picture

ಸಂಸ್ಕೃತದ ಪೂಜೆಗೆ ಕನ್ನಡದ ಚರಪು ಹಳೇ ಕತೆ ತಾನೆ? Smiling

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 2:05pm — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

"ಸಂಸ್ಕೃತದ ಪೂಜೆಗೆ"

ಹಿಂಗಂದ್ರೆ..

ಪೂಜೆ ನಡೆತಾ ಇರೋದು ಸಂಸ್ಕ್ರುತಕ್ಕೆ ಅಂತ ಅರಿವು ಬತ್ತದೆ. Smiling

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 10:34am — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ಪ್ರೋ.ಜಿ.ವಿ ಅವರ ನಿಘಂಟು ಚರುಪು ದೇಶ್ಯ ಪದ ಅನ್ನುತ್ತದೆಯಾದರೂ, ಆಪ್ಟೆ ಅವರ ಸಂಸ್ಕೃತ ನಿಘಂಟು, "ಚರುವಿಗೆ" ಈ ರೀತಿಯ ವಿವರಣೆ ನೀಡುತ್ತದೆ.

m.{u-stem}
1.an oblation of rice or barley boiled for presentation to the gods and the manes;
2.a kind of vessel in which an oblation is prepared;
3.a cloud

ಹಾಗೆಯೇ ಇನ್ನೊಂದು ಮಾತು. ಪ್ರತಿಯೊಂದಕ್ಕೂ ಸಂಸ್ಕೃತವನ್ನು ಧಿಕ್ಕರಿಸಿ ದ್ರಾವಿಡ ಪದವನ್ನೇ ಬಳಸಬೇಕು ಎಂಬ "ವಿಕೃತ ಮನಸ್ಥಿತಿ" ಸಂಪದಿಗರಿಗಂತೂ ಇಲ್ಲ. ಆದರೆ ಸಂಸ್ಕೃತ ಪ್ರೇಮಿಗಳು ಕನ್ನಡ ಪದಗಳನ್ನು, "taken for granted" ಅಂತ ಮಾಡಿಕೊಂಡರೆ ಅದನ್ನು ಎಂಥ ಕನ್ನಡಿಗನೇ ಆದರೂ ಅದನ್ನು ಮಟ್ಟಹಾಕಲೇ ಬೇಕಾಗುತ್ತದೆ, ಆಧಾರ ಸಮೇತ.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 11:27am — mahesha

ಉ:

mahesha's picture

"ಸಂಸ್ಕೃತದ ’ಚರು’. ಯಜ್ಞಯಾಗಾದಿಗಳಲ್ಲಿ ದೇವತೆಗಳಿಗೆ ಹೋಮದಲ್ಲಿ ಅರ್ಪಿಸುವ ಹವಿಸ್ಸು ’ಚರು’. ಅನ್ನಕ್ಕೆ ವಿವಿಧ ಪರಿಮಳದ್ರವ್ಯಗಳನ್ನು ಸೇರಿಸಿ ತಯಾರಿಸಿದ್ದು."

ಸಾಮನ್ಯ 'ಚರಪು' ಅಂತ ಕಡಳೆ ಹಿಟ್ಟನ್ನೋ, ಗುಗ್ಗರಿಯನ್ನೋ, ಬಾಳೆ ರಸಾಯನವನ್ನೋ ಕಡೋದು( ಚರಪು ಒರೆ ಬಳಕೆ ಇರುವ ಸೀಮೆಯಲ್ಲಿ Smiling.. ಕಾವೇರಿ-ಹೇಮಾವತಿ ಸೀಮೆಯಲ್ಲಿ, ಕೂಟು ಮಾಡಿ ಸಕ್ಕತ್ತಾಗಿ ತಿಂದು ತೇಗುವವರು ).

ಅನ್ನವನ್ನು ಬಲು ಸಾಮಾನ್ಯ ’ಚರಪು’ ಕೊಡುವ ಪದ್ದತಿ ಇಲ್ಲ, ಇರಲಿಲ್ಲ.. ಅದು ಹುಟ್ಟಿಕೊಂಡಿದ್ದು ’ಸಂಕಶ್ಟ ಗಣಪತಿ’( ಮೂಲದಲ್ಲಿ ಸಂಕಶ್ಟಹರ ಗಣಪತಿ ಅಂತ ಇತ್ತು:) ) ಗುಡಿಗಳಲ್ಲಿ ಹೆಚ್ಚಾದ ಮೇಲೆ..( ಇದನ್ನು ನಾನು ಗಮನಿಸಿದ್ದೀನಿ, ನಮ್ಮ ತಾತನವರು ಹೇಳ್ತಾ ಇದ್ರು)

ಗುಡಿಗಳಲ್ಲಿ ಕೊಡೊ ಅನ್ನಕ್ಕೆ ಮಂದಿ ’ಪ್ರಸಾದ’ ಅಂತಲೇ ಹೇಳೋದು ( ಅಯ್ಯಂಗಾರರ ಗುಡಿಯ ಸಕ್ಕರ/ಚಕ್ಕರ ಪೊಂಗಲು, ಹುಳಿಯನ್ನ/ಪುಳಿಯೊಗರೆ).. ಸಾಮಾನ್ಯ ಬಜನೆ, ಗಣಪತಿ ಉತ್ಸವ ಹಿಂಗೆ ಇಲ್ಲಿ ಹಂಚುವ ಗುಗ್ಗರಿ, ಹಿಟ್ಟು, ಇಂತವನ್ನೇ ಚರಪು ಅನ್ನೋದು (ಬಳಸಿದವರಿಂದಾದ ಅನುಬವ)..

ವೆಂಕಟಸುಬ್ಬಯನವರೇ ಚರಪು ದೇಸಿ ಪದ ಅಂದ ಮೇಲೆ ಈ ತಥಾಕಥಿತ ನಿಶ್ಯುಪ್ತಿ( etymology) ಕುಕಲ್ಪಿತಮಾತ್ರ ಸತ್ಯಕ್ಕೆ ದೂರವೇ ಸರಿ.

ಸಂಸ್ಕೃತಮೂಲವ್ಯಾಧಿಯ ಗುಣಲಕ್ಷಣಗಳಲ್ಲೊಂದು( symptoms )!!

[ಸೂಚನೆ: ನಿರ್ವಾಹಕರಿಂದ ಕಾಮೆಂಟ್ ಮಾಡರೇಟ್ ಮಾಡಲ್ಪಟ್ಟಿದೆ]

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 2:31am — anivaasi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

anivaasi's picture

ಜೋಶಿಯವರೆ,
ಇಷ್ಟೆಲ್ಲಾ "ಉಗ್ರ-ಕಠೋರ" ಮಾತುಕತೆ ನಡೀತಿರೋ ವಿಷಯದ ಹಿನ್ನೆಲೆ ತಿಳಿಯೋಣ ಅಂದರೆ, ನಿಮ್ಮ ಲೇಖನದ ಕೊಂಡಿ ಕೆಲಸಮಾಡುತ್ತಿಲ್ಲವಲ್ಲ? ದಟ್ಸ್-ಕನ್ನಡ ವಿಚಿತ್ರಾನ್ನದ ಪುಟದ ಯಾವ ಕೊಂಡಿಯೂ ಕೆಲಸ ಮಾಡುತ್ತಿಲ್ಲ! ನಿಮ್ಮ ಬರಹ ಬೇರೆಲ್ಲಿ ಓದಬಹುದು ತಿಳಿಸುತ್ತೀರ?

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 10:55pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ತುಂಬಾ ಧನ್ಯವಾದಗಳು..................

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 10:52pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ಸರಿ..."ಸಮಾನಂತರ..ವಾದ ಅಥವಾ ಇನ್ನೊಂದು ಅರ್ಥ ಕೊಡುವ...ಪದ....

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 10:05am — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ಅಶ್ಮ್ಯ ಅವರು ಈಗಾಗಲೇ ಇದಕ್ಕೆ ಉತ್ತರಿಸಿಬಿಟ್ಟಿದ್ದಾರೆ ಆದರೆ ಬೇರೆ ಎಳೆಯಲ್ಲಿ. ಅಶ್ಮಯ ಅವರ ಉತ್ತರ ಹೀಗಿದೆ.

=========================================
ಚರಪು (ದೇ) (ನಾ) ೧ ಆತಿಥ್ಯ, ಸಮಾರಾಧನೆ ೨ ದೇವರ ಪ್ರಸಾದ

೨. ಪನಿಯಾ(ವಾ)ರ (ದೇ) (ನಾ) ೧ ಭಕ್ಷ್ಯ, ತಿಂಡಿ ೨ ಪ್ರಸಾದ, ಚರುಪು, ಪಣ್ಯಾರ

೩. ಪಸಾದ (<ಸಂ. ಪ್ರಸಾದ) (ನಾ) ಅನುಗ್ರಹ, ದಯೆ

೪. ಪಸಾಯ (<ಪ್ರಾ. ಪಸಾಯ / <ಸಂ. ಪ್ರಸಾದ) (ನಾ) ೧ ಉಡುಗೊರೆ, ಬಹುಮಾನ, ಸಂಭಾವನೆ ೨ ಪಸಾದ

೫. ಪ್ರಸಾದ (ಸಂ) (ನಾ) ೧ ಅನುಗ್ರಹ, ಕೃಪೆ ೨ ಶಾಂತಿ, ಸಮಾಧಾನ ೩ ಸ್ಪಷ್ಟಗೊಳಿಸುವುದು ೪ ಪರಿಶುದ್ಧತೆ ೫ ನೈವೇದ್ಯ ಮಾಡಿದ ಪದಾರ್ಥ, ದೇವರಿಗೆ ಅರ್ಪಿಸಿ ಪಡೆದುದು ೬ ರುಚಿಕರವಾದ ಆಹಾರ ೭ ಅನ್ನ ೮ ಹೊಡೆತ, ಪೆಟ್ಟು ೯ ಕಾವ್ಯದಲ್ಲಿರಬೇಕಾದ ಹತ್ತು ಗುಣಗಳಲ್ಲಿ ಒಂದು ಸ್ಫುಟವಾದ ಶೈಲಿ

೬. ಬಂಡಾರ (<ಸಂ. ಭಂಡಾರ) (ನಾ) ೧ ಬೊಕ್ಕಸ, ಖಜಾನೆ ೨ ಪ್ರಸಾದ ರೂಪದ ಅರಿಸಿನ, ಕುಂಕುಮ, ಹೂವು ಮುಂ.ವು

೭. ಶೇಷ (ಸಂ) (ನಾ) ೧ ಉಳಿದುದು, ಮಿಕ್ಕಿದುದು, ಶಿಲ್ಕು ೨ ಪ್ರಸಾದ ೩ ಆದಿಶೇಷ ೪ (ಗಣಿತದಲ್ಲಿ) ಭಾಗಾಕಾರ ಲೆಕ್ಕದಲ್ಲಿ ಭಾಗವಾಗದೇ ಕಡೆಯಲ್ಲಿ ಉಳಿಯುವ ಸಂಖ್ಯೆ

೮. ಹಸಾದ (<ಸಂ. ಪ್ರಸಾದ) (ನಾ) ೧ ಅನುಗ್ರಹ, ದಯೆ ೨ ದೇವರಿಗೆ ಅರ್ಪಿಸಿದ ಹೂವು, ನೈವೇದ್ಯ ಮುಂ.ವು, ಪ್ರಸಾದ ೩ ಹಿರಿಯರ ನುಡಿಗೆ ಒಪ್ಪಿಗೆ ಸೂಚಿಸುವ ಮಾತು
====================================================

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 5:07pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

ಸರಿ, ಎಲ್ಲರ ವಾದಸರಣಿಗಳನ್ನೂ ಓದುತ್ತಿದ್ದೇನೆ. ಚರ್ಚೆ ನಡೆಯುತ್ತಿರುವುದು ಸಂತೋಷದ ಸಂಗತಿ.

ಅಂದಹಾಗೆ ಈ ಚರ್ಚೆ ನಡೆಯುವ ’ಸಂಪದ’ ಹೆಸರು ಮತ್ತು, ಮೊನ್ನೆಯಷ್ಟೇ ಒಂದು ಸಂಸ್ಕೃತ-ಕನ್ನಡ ಚರ್ಚೆ ನಡೆದ ’ಪ್ರಜಾವಾಣಿ’ ಪತ್ರಿಕೆಯ ಹೆಸರು ಸಹ ಕನ್ನಡವಾಗಬಹುದೇ? Smiling

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 5:38pm — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ಶ್ರೀವತ್ಸ ಜೋಶಿ, "ಸಂಪದ"ದ ಬಗ್ಗೆ ಹೇಳುವುದಾದರೆ.

ಸಂಪದ - ಸಂ(ಸಕ್ಕದದ ಉಪಸರ್ಗ)+ಪದ(ಕನ್ನಡ) -> "ಪದ" ಅಂದರೇನು ಅಂತ ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆಯಲ್ಲಿ "ಪದಾರ್ಥ ಚಿಂತಾಮಣಿಯಷ್ಟಲ್ಲದಿದ್ದರೂ" ಸಾಕಷ್ಟು ವಿವರಿಸಿದ್ದೇನೆ. "ಪದ" ಎಂಬ ಪದ ಕನ್ನಡದ್ದೇ ಎಂಬುದಾಗಿ ಆಧಾರ ಸಮೇತ ನಿರೂಪಿಸಿದ್ದೇನೆ. ಸಾಧ್ಯವಾದರೆ ನೀವು ಅದನ್ನು ತಪ್ಪು ಎಂದು ನಿರೂಪಿಸಿ ನೋಡೋಣ Smiling ನೀವು ಸರಿಯಾದ ಪಾಯಿಂಟ್ ಹಾಕಿದರೆ ನಾನು ತಿದ್ದಿಕೊಳ್ಳುವೆ. ಇದರಲ್ಲಿ ಅನುಮಾನ ಬೇಡ.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 5:47pm — ವೈಭವ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ವೈಭವ's picture

ಜೋಶಿಗಳೆ,
ಕನ್ನಡದಲ್ಲಿ ಸಮಱು ಅಂತ ಪದವಿದೆ.

ಸಮಱು= ಚನ್ನಾಗಿಸಿದ, ಒಪ್ಪವಾಗಿಸಿದ ಅಂತ ಅರಿವಿದೆ.

'ಸಮಱು' ಯಿಂದನೇ 'ಸಮ್ಯಕ್' ಯಾಕೆ ಬಂದಿರಬಾರದು. ಸಮ್ಯಕ್ ನಿಂದಲೇ ಸಮ್ಯಕ್+ಕೃತ = ಸಂಸ್ಕೃತ ಯಾಕಾಗಿರಬಾರದು.

ಮೊದಲು ಸಮ್ಯಕ್ ಕೃತವನ್ನ ಕನ್ನಡದ ಬಲೆಯಿಂದ ಬಿಡಿಸಿ ಆಮೇಲೆ 'ಪ್ರಜಾವಾಣಿ'ನ 'ಮಂದಿನುಡಿ' ಮಾಡುವ Smiling

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 6:27pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

’ವೈಭವ’ ಹೇಗೆ ಬಂದಿರಬಹುದೆಂಬ ಕುತೂಹಲ...

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 6:36pm — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

Smiling - Smiling ಪ್ರಸಾದಶೆಟ್ಟಿಯವರ ಬರಹದ ಆಶಯವಂತೂ ಎಕ್ಕುಟ್ಟುಹೋಗಿದೆ. ನೀವು ಬೇರೊಂದು ಎಳೆ ತೆಗೆದು ಅದರಲ್ಲೇಕೆ ನಿಮ್ಮ ಕುತೂಹಲ ತಣಿಸಿಕೊಳ್ಳಲು ಪ್ರಯತ್ನಿಸಬಾರದು ?

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 6:46pm — ವೈಭವ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ವೈಭವ's picture

ತಕಳಪ್ಪ,

ಎತ್ತಿಗೆ ಜರ ಬಂದ್ರೆ ಎಮ್ಮೆಗೆ ಬರೆ ಎಳೆದ್ರಂತೆ Smiling

ಜೋಶಿಗಳೆ,
ಮೊದಲು ತಾವು ಈ ಎಳೆಗೆ ನಂಟಿರುವ 'ಚುರುಪು' ಬಗ್ಗೆ ಮಾತಾಡಿದರೆ ಒಳ್ಳೇದು ಅನ್ಸುತ್ತೆ. ನೀವು ಚುರುಪು ಬಗ್ಗೆಯಿರುವ ಈ ಎಳೆಯಲ್ಲಿ 'ಪ್ರಜಾವಾಣಿ' ಯನ್ನು ಎಳೆತಂದುದು ಸರಿಯೇ?

ಸಂಪದದಲ್ಲಿ ಎಳೆಗೆ ನಂಟಿರುವುದರ ಬಗ್ಗೆ ಮಾತಾಡಿ ಎಂಬ ಕಟ್ಟಳೆಯಿದೆ...ನೀವು ಆ ಕಟ್ಟಳೆಯನ್ನು 'ಉಲ್ಲಂಘಿಸಿದ್ದೀರ' Smiling

ಸಂಪದದ ದೊರೆಗಳೆ ಇತ್ತ ಗಮನ ಹರಿಸಿ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 31, 2008 - 7:35pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

ಇದಾವುದು ’ಚುರುಪು’ ಎಂಬ ಪದ?

ನಾನು ’ಚರುಪು’ ಪದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು. ಈಗಲೂ ನನ್ನದು ಅದೇ ಅಭಿಪ್ರಾಯ (’ಚರುಪು’ ತೆಲುಗು ಪದ ಮತ್ತು ’ಚರು’ ಸಂಸ್ಕೃತ ಪದಗಳ ಸಂಬಂಧ).

’ಚುರುಪು’ ಪದದ ಕುರಿತು ನನಗೆ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ!

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 9:08am — ವೈಭವ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ವೈಭವ's picture

'ಚರುಪು' ...'ಚುರುಪು' ಅಲ್ಲ
ಮನ್ನಿಸಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 9:28am — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ನಾನು ’ಚರುಪು’ ಪದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು

"ಇಷ್ಟೇ ಆಗಿದಿದ್ದರೆ ಇಷ್ಟೊಂದೆಲ್ಲ ವಾದ ಆಗುತ್ತಿರಲಿಲ್ಲ" ಎಂಬುದು ನಿಮಗೆ ತಿಳಿಯದ ವಿಷಯವೇನಲ್ಲ, ಶ್ರೀವತ್ಸ ಜೋಶಿ. ನೀವಾಗಿಯೇ ದ್ರಾವಿಡ-ಸಂಸ್ಕೃತ ಕೊಂಕು ವಾದವನ್ನು ಈ ಎಳೆಯಲ್ಲಿ ವಿಕೃತ ಖುಷಿಗಾಗಿ ತುರುಕಿದ್ದು ಎಂಬುದು ನೆನಪಿರಲಿ. ಕನ್ನಡವಲ್ಲದ ಪದಗಳನ್ನು ಸ್ವೀಕರಿಸಲು ಕನ್ನಡಿಗರಿಗೇನು ಸಂಕುಚಿತ ಮನೋಭಾವವಿಲ್ಲ. ಆದರೆ "ಪದ, ನೀರು, ಪರ್ವ" ಮುಂತಾದವು ಕನ್ನಡ ಪದಗಳು ಎಂದರೆ ಅದನ್ನು ಸ್ವೀಕರಿಸುವ ವೈಶಾಲ್ಯ ಕುರುಡು ಸಂಸ್ಕೃತ ಪ್ರೇಮಿಗಳಲ್ಲಿಲ್ಲ ಎಂಬುದು ಎಂದೋ ಸಾಬೀತಾಗಿದೆ.

ಇರಲಿ, ವೈಯಕ್ತಿಕವಾಗಿ ನನ್ನ ಆಕ್ಷೇಪಣೆಯಿದ್ದದ್ದು, "ಚಾರು" ತಮಿಳು/ತೆಲುಗು ಎಂಬುದಾಗಿ ನೀವು ನಿಮ್ಮ ಲೇಖನದಲ್ಲಿ ಹೇಳಿರುವುದು. ನಾನು ಮತ್ತು ಹಂಸಾನಂದಿಯವರು ವಿವರಣೆ ನೀಡಿದ ಮೇಲೆಯೂ ನಿಮ್ಮದು ಅದೇ ಜಾಳು ಅಭಿಪ್ರಾಯವೇ ಆದರೆ ಅದಕ್ಕೆ ನಾವೇನೂ ಮಾಡಲಿಕ್ಕಾಗುವುದಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 3:52pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

'ಚರುಪು’/’ಚರು’ ಪದದಿಂದ ಚರ್ಚೆ ಶುರುವಾದದ್ದನ್ನು ’ಚಾರು’ ಪದಕ್ಕೆ ವರ್ಗಾಯಿಸಿದ್ದೇಕೆ? ಅಂದರೆ, ಚರ್ಚೆಯ ಎಳೆಯಲ್ಲಿ ನೀವು ಬೇಕಿದ್ದರೆ ಬೇರೆಯದನ್ನು ಉಲ್ಲೇಖಿಸಬಹುದು, ನಾನು ಉಲ್ಲೇಖಿಸಿದರೆ ಸಂಪದ ನಿಯಮ ಉಲ್ಲಂಘಿಸಿದಂತೆ ಆಗುತ್ತದೆಯೆ? Smiling

ಚರುಪು ಎಂಬ ಪದ (ಪ್ರಸಾದ ಅರ್ಥದಲ್ಲಿ) ಸಂಸ್ಕೃತದ ’ಚರು’ (ಹವಿಸ್ಸು, ದೇವರಿಗೆ ಅರ್ಪಿಸುವ ನೈವೇದ್ಯ/ಹವಿಸ್ಸು)ದಿಂದ ಬಂದಿರುವುದು.

ಚರ್ಚೆ ಮುಂದುವರೆಯಲಿ. ಬಹಳ ಸಂತೋಷ!

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 11:07pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ನನ್ನದು ಕೂಡ ಅದೆ ಅಭಿಪ್ರಾಯ....

  • Login or register to post comments
  • link
  • Email this ಪ್ರತಿಕ್ರಿಯೆ
February 3, 2008 - 8:06pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

ಪ್ರಸಾದ್,

ನಮಸ್ಕಾರ.

ಪ್ರಶ್ನೆ ಕೇಳಿದ ನಿಮ್ಮ ಪ್ರತಿಕ್ರಿಯೆ ಇದೀಗ ಬಂದಿರುವುದು ಮತ್ತು ನಿಮ್ಮ ಅಭಿಪ್ರಾಯವೂ ಅದೇ (ಪ್ರಸಾದ/ಚರುಪು ~ ಹವಿಸ್ಸು/ನೈವೇದ್ಯ/ಚರು) ಎನ್ನುವುದು ಸಂತೋಷದ ವಿಚಾರ.

  • Login or register to post comments
  • link
  • Email this ಪ್ರತಿಕ್ರಿಯೆ
February 3, 2008 - 10:32pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ನಿಮಗೆ...ಕೂಡ....ನನ್ನ....ಹ್ರದಯ ತಂಬಿದ....ಧನ್ಯವಾದಳು....

ನನ್ನ ಒಂದು...ವಿಚಾರವೆನೆಂದರೆ....
"ಪ್ರಸಾದ" ಪದಕ್ಕೆ ....
ಅಂದರೆ ಅದರ ವ್ಯಾಪ್ತಿಯಲ್ಲಿ ಬರುವ ಪದಗಳು ಇನ್ನು ಇವೆ....
ಆರತಿ,ಪೂಜಾ,ಭಕ್ತಿ........

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 2:39pm — Ennares

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Ennares's picture

ಮೇಲಿನ ಚರ್ಚೆ ಓದಿದರೆ ಒಟ್ಟಿಗೆ ಆಶ್ಚರ್ಯ, ಸಂತೋಷ ಹಾಗೂ ದುಃಖ ಎಲ್ಲವೂ ಆಗುತ್ತೆ.

ಆಶ್ಚರ್ಯ ಯಾಕೆ ಅಂದರೆ ಚಿಕ್ಕವಯಸ್ಸಿನ ಹುಡುಗರು ಕನ್ನಡದ ಭಾಷೆಯ ಬಗ್ಗೆ ಇಷ್ಟೊಂದು ತಿಳುವಳಿಕೆಯುಳ್ಳವರಾಗಿದ್ದಾರೆ ಅಂತ. ನಲವತ್ತೈದು ವರ್ಷಗಳ ಹಿಂದೆ ಕನ್ನಡವನ್ನು ಸೆಕಂಡ್ ಲ್ಯಾಂಗ್ವೇಜ್ ಆಗಿ ಅಭ್ಯಾಸ ಮಾಡಿದ್ದ ನಮ್ಮ ಪೀಳಿಗೆಯ ಜನರಿಗೂ ಇಷ್ಟೊಂದು ಕನ್ನಡ ಪದ ಮೂಲಗಳ ಜ್ನಾನವಿರುತ್ತಿರಲಿಲ್ಲ. ಅಥವಾ ಇದ್ದರೂ ಅವನ್ನು ವ್ಯಕ್ತ ಪಡಿಸೋ ವೇದಿಕೆಗಳಿರಲಿಲ್ಲ. ವೇದಿಕೆ ಲಭ್ಯವಾಗುತ್ತಿದ್ದರೂ ಇಷ್ಟು ಪ್ರಬುಧ್ಧವಾಗಿ ಉಪಯೋಗಿಸುತ್ತಿದ್ದೆವೋ ಇಲ್ಲವೋ ಅನುಮಾನ.

ಸಂತೋಷ ಯಾಕೆ ಅಂದರೆ, ವಯಸ್ಸಾದವರು ಅಥವಾ ಹಿರಿಯರು ಹೇಳಿದರು ಅಂತ ಸುಮ್ಮನೆ ಗೋಣು ಆಡಿಸಿ ಒಪ್ಪಿಕೊಳ್ಳದೆ ಸವಾಲು ಹಾಕಿ, ಸಾಕ್ಷಿ, ದಾಖಲೆ, ಪುರಾವೆಗಳ ಮೂಲಕ ತಮ್ಮ ವಾದ ಸಮರ್ಥಿಸಿಕೊಳ್ಳುವ ಕೆಚ್ಚು ನಮ್ಮ ಇಂದಿನ ಯುವಕರಲ್ಲಿ ಇದೆಯಲ್ಲ ಅಂತ.

ದುಃಖದ ವಿಷಯ ಏನೆಂದರೆ ತಾವೇ ಸರಿ ಎಂಬ ಧೃಢ ನಂಬಿಕೆ ಮತ್ತು ಅರಿವಿದ್ದಾಗ್ಯೂ , ಅದನ್ನು ಸಾಧಿಸುವ ಆವೇಶದಲ್ಲಿ ಚರ್ಚೆಯನ್ನು ವೈಯುಕ್ತಿಕ ಮಟ್ಟಕ್ಕೆ ಎಳೆದು ಹೀಯಾಳಿಸುವ ಪ್ರವೃತ್ತಿ ತೋರಿಬಂದದ್ದರಿಂದ. ಶ್ರೀಶಾಂತ್ ತರಹ ಕುಣಿದು ಕುಪ್ಪಳಿಸಿ, ವಿಕಾರವಾದ ಮುಖ ಮಾಡಿ ಹಂಗಿಸಿದರೆ ಆ ಕ್ಷಣ ಚೆನ್ನಾಗಿ ಮಾರುತ್ತರ ಕೊಟ್ಟ ಅಂತ ಅನಿಸಿದರೂ ಆಮೇಲೆ ಬೇಸರವಾಗುತ್ತೆ. ನಿಮ್ಮ ತರ್ಕ, ವಾದಗಳು, ದಾಖಲೆ ಪುರಾವೆಗಳು ಎಲ್ಲವೂ ಸರಿಯೇ. ಅತಿಯಾಗಿ ಸ್ಮೈಲಿಗಳ ಉಪಯೋಗ ಮಾಡಿ ಮೊನಚು ಮಾತುಗಳಿಂದ ತಿವಿದಾಡಿದರೆ ಚರ್ಚೆಯ ಘನತೆಗೆ ಪೆಟ್ಟಾಗುತ್ತೆ. ಪ್ರತಿಭೆ ತೋರಿಸಬೇಕು. ವಾದಿಸಬೇಕು. ಚರ್ಚೆ ಗೆಲ್ಲಬೇಕು. ಅದರೆ ಘನತೆಯಿಂದ.

ಮುಕ್ತಚರ್ಚೆಯ ಸಂಪದದಲ್ಲಿ, ಅನೇಕ ಸಾರಿ ಕುಚೋದ್ಯ, ನವಿರಾದ ಹಾಸ್ಯ ದ ಉಪಯೋಗ ಚರ್ಚೆಯನ್ನು “ಲೈವ್ಲಿ” ಆಗಿಸಿದೆ. ಹಾಗೆಯೇ ತಮಾಷೆಗೆ “ಸಂಸ್ಕೃತ ದ್ವೇಷಿಗಳು’ ಅಂದದ್ದನ್ನು ತುಂಬಾ ಸೀರಿಯಸ್ಸಾಗಿ ಪರಿಗಣಿಸಿ , ಜೋಷಿ ಯವರನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದು ಸರಿ ಅನಿಸಲಿಲ್ಲ. ಜೋಷಿಯವರು ಎಲ್ಲ ಬಲ್ಲವರಲ್ಲ. ಆದರೆ ಬಹಳಷ್ಟನ್ನು ಬಲ್ಲವರು. ಅನೇಕ ಮಾಹಿತಿಪೂರ್ಣ, ಸ್ವಾರಸ್ಯಕರ ಲೇಖನಗಳಿಂದ ಹೆಸರು ಮಾಡಿದ್ದಾರೆ. ಅವರ ವಿಷಯ ವ್ಯಾಪ್ತಿ ವಿಸ್ತಾರವಾದದ್ದು.

ದಯವಿಟ್ಟೂ ಇನ್ನು ಮುಂದಾದರೂ ನಮ್ಮ ಬಿಸಿ ರಕ್ತದ ಯುವಕರು ಇಂತಹ ಪ್ರವೃತ್ತಿಯಿಂದ ದೂರವಿರಲಿ ಅಂತ ಆಶಯ.

ನಿಮ್ಮ ಭಾಷಾಜ್ನಾನಕ್ಕೆ , ಪ್ರತಿಭೆಗೆ, ಧೈರ್ಯಕ್ಕೆ ಸ್ವಲ್ಪ ವಿನಯ ಹಾಗೂ ನಮ್ರತೆಯ ಮೆರುಗು ಹಚ್ಚಿದರೆ ನಿಮ್ಮನ್ನು ಮೀರಿಸುವರು ಯಾರು ತಾನೆ ಇದ್ದಾರೆ?

-ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 3:21pm — hpn

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

hpn's picture

ನಿಮ್ಮ ಮಾತು ಬಹಳ appropriate ಆಗಿದೆ. ಚರ್ಚೆ ನಡೆಯಬೇಕು, ಆದರೆ ಅದು ವೈಯಕ್ತಿಕೆ ದೂಷಣೆಗೆ ತಿರುಗಬಾರದು.

ಹೆಚ್ಚಾಗಿ ಭಾಷೆಯ ಬಗೆಗಿನ ಚರ್ಚೆಯಿಂದ ದೂರವುಳಿವ ನನಗೂ ’ಚರುಪು’ ಕುರಿತ ಚರ್ಚೆ ಆಸಕ್ತಿ ಹುಟ್ಟಿಸಿತ್ತು. ಕಾರಣ, ನನ್ನ ಹೆಸರಲ್ಲೂ ಪ್ರಸಾದ್ ಎಂಬುದಿದೆ. ಚರ್ಚೆ ಮುಂದುವರೆಯಲಿ, ಯಾರು ಯಾರನ್ನೂ ದೂಷಿಸುವಂತಾಗದಿರಲಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 6:24pm — ಸಂಗನಗೌಡ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ಸಂಗನಗೌಡ's picture

Laughing out loud ನನ್ನ ಹೆಸರೊಳಗೆ ’ಪ್ರಸಾದ’ ಇಲ್ಲದಿದ್ದರೂ ಇಲ್ಲಿನ ಮಾತುಗಳನ್ನು ಓದಿ ಸಕ್ಕತ್ ಮಜಾ ಬಂತು....

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 3:44pm — Sunil Jayaprakash

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

Sunil Jayaprakash's picture

ನವರತ್ನ ಸುಧೀರ್, ಶ್ರೀವತ್ಸ ಜೋಶಿಯವರನ್ನು ನಾವೆಲ್ಲ ಸಂಪದಿಗರು ಬಲ್ಲವರೇ. ಜೋಶಿಯವರು ಸಂಪದದ ಅನೇಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಹಾಸ್ಯ ತುಣುಕುಗಳನ್ನು ಹರಿಸಿ ನಗಿಸಿದ್ದಾರೆ. ಅವರೊಡನೆ ವಾದ ಮಾಡಿದೆವು ಎಂದ ಮಾತ್ರಕ್ಕೆ ಅವರ ಮೇಲೆ ಗೌರವ ಇಲ್ಲ ಎಂದೆಣಿಸಬೇಕಾಗಿಲ್ಲ. ಇರಲಿ ಬಿಡಿ. ಹಿರಿಯ ಗೆಳೆಯರಲ್ಲಿ, ನನ್ನ ಒಂದು ಮಾತು. ಒಂದು ವೇಳೆ ನೀವು ತಪ್ಪು ಮಾಡಿದರೆ, ಮುಜುಗರವಿಲ್ಲದೆ, ನಿಮ್ಮ ಇಗೋ ಬಿಟ್ಟುಕೊಟ್ಟು, ತಪ್ಪುನ್ನು ತಿದ್ದಿಕೊಂಡು ಕನ್ನಡವನ್ನು ಬೆಳೆಸಿ. ನಾವುಗಳು ಕೂಡ ಎಷ್ಟೋ ಕಡೆ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ನಮ್ಮ ಇಗೋ ಬಿಟ್ಟು ತಿದ್ದಿಕೊಳ್ಳುತ್ತೇವೆ. ತಪ್ಪುಗಳ ಬಗ್ಗೆ ನನ್ನ ಅನಿಸಿಕೆ ಇಲ್ಲಿ ಓದಬಹುದು. ಕನ್ನಡ ಪದಗಳ ವಿಷಯ ಬಂದಾಗ ನಿರಭಿಮಾನಿಗಳಾಗುವ ಮನಸ್ಥಿತಿಯ ಬಗ್ಗೆ ಈಗ್ಗೆ ಒಂದು ವರ್ಷದ ಹಿಂದೆ ಚರ್ಚೆಯಾದ ಕಾಮೆಂಟ್ ಈಗಲೂ ಪ್ರಸ್ತುತವಾಗಿದೆ, ಬಿಡುವಿದ್ದಾಗ ಓದಿ ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 4:09pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

ನವರತ್ನ ಸುಧೀರ್, ಹರಿಪ್ರಸಾದ್ - ಚರ್ಚೆಯಲ್ಲಿ ನಿಮ್ಮ ಪ್ರವೇಶಕ್ಕಾಗಿ ಮತ್ತು ನೀವು ಚರ್ಚೆಯನ್ನು ಇಷ್ಟಪಟ್ಟಿರಿ ಎಂದದ್ದಕ್ಕಾಗಿ ಧನ್ಯವಾದಗಳು. ಹೌದು, ಸ್ನೇಹಿತರಾದ ಸುನೀಲ್, ಮಹೇಶ (ಇವರೊಂದಿಗಂತೂ ನಾನು ಆಗಾಗ ಚಾಟ್ ಮಾಡುವುದೂ ಇದೆ!), ವೈಭವ ಇವರೆಲ್ಲ ಸಜ್ಜನರು. ನಾನು ಅವರನ್ನೆಲ್ಲ ಗೌರವಿಸುತ್ತೇನೆ. ಹಾಗಾಗಿ ಇದು ವೈಯಕ್ತಿಕ ದೋಷಾರೋಪಣೆ ಎಂದೆಲ್ಲ ಗಾಬರಿಯಾಗಬೇಡಿ. ಹರಿಪ್ರಸಾದ್ ಇತ್ತೀಚೆಗೊಮ್ಮೆ ಚಾಟಿಸುತ್ತಿದ್ದಾಗ ’ಸಂಪದದಲ್ಲೇಕೊ ಚಟುವಟಿಕೆ ಕಡಿಮೆಯಾಗುತ್ತಿದೆ...’ ಎಂದಿದ್ದು ನೆನಪಿತ್ತು. ’ಚರುಪು’ ಪದ ಕಾಣಿಸಿಕೊಂಡಾಗ ’ಓಹ್ ಇಲ್ಲಿ ಸ್ವಲ್ಪ ಚಟುಚಟಿಕೆ/ಚುರುಕು ಹುಟ್ಟಿಸಬಹುದು’ ಎಂದು ನನಗನಿಸಿ ಚರ್ಚೆ ಆರಂಭಿಸಿದೆ. ಅಫ್‌ಕೋರ್ಸ್ ಚರ್ಚೆಗೋಸ್ಕರ ಚರ್ಚೆ ಅಲ್ಲ. ಏಕೆಂದರೆ ಚರುಪು ಪದದ ಮೂಲ ಚರು ಎಂಬುದನ್ನು ನಾನು ದೃಢವಾಗಿ ಬಲ್ಲೆ. ’ಚರ್ಚೆಗೋಸ್ಕರ’ ಮಾಡಿದ್ದೆಂದರೆ ಅದನ್ನು ಸ್ವಲ್ಪ ’ಕೆಣಕಿ’ ಪ್ರಸ್ತುತಪಡಿಸಿದ್ದು. ಯಕ್ಷಗಾನದ ಭಾಷೆಯಲ್ಲಿ ಹೇಳುವುದಾದರೆ ಒಂಥರ ’ರಣವೀಳ್ಯ’ ಕೊಟ್ಟದ್ದು. ಆ ಭಾಗವನ್ನು ’ನಾನು ಮಾಡಿದ್ದು ಸರಿ’ ಎನ್ನಲಾರೆ. ಆದರೆ ಚರುಪು-ಚರು ಬಗ್ಗೆ ನನ್ನ ಅಭಿಪ್ರಾಯವನ್ನು ಬದಲಿಸಲಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 4:27pm — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

"ಅದನ್ನು ಸ್ವಲ್ಪ ’ಕೆಣಕಿ’ ಪ್ರಸ್ತುತಪಡಿಸಿದ್ದು. ಯಕ್ಷಗಾನದ ಭಾಷೆಯಲ್ಲಿ ಹೇಳುವುದಾದರೆ ಒಂಥರ ’ರಣವೀಳ್ಯ’ ಕೊಟ್ಟದ್ದು. "

ಕೆಣಕಿದ್ದನ್ನು ಒಪ್ಪಿಕೊಂಡಿದ್ದಕ್ಕೆ ನನ್ನಿ/ದನ್ಯವಾದ!

ಕೆಣಕಬೇಡಿ! ಕೋರಿಕೆ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2008 - 4:25pm — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

ನವರತ್ಮ ಸುದೀರಣ್ಣ..

ನಿಮ್ಮ ಒಲುಮೆಯ ಮಾತುಗಳಿಗೆ ನನ್ನಿ..

ಕೆಲವು ಸಂಗತಿ.. ಪ್ಲೀಸ್ ಸೇರಿಸಿಕೊಳ್ರಿ..

ಹಿರಿಯ ಮೇಲೆ ಒಲುಮೆ ಇದೆ. ಆದ್ರೆ ಅವರ ಎಲ್ಲ ಮಾತುಗಳ ಮೇಲೆ ಗೌರವವಿಲ್ಲ.!!!!


ಅನೇಕ ಸಾರಿ ಕುಚೋದ್ಯ, ನವಿರಾದ ಹಾಸ್ಯ ದ ಉಪಯೋಗ ಚರ್ಚೆಯನ್ನು “ಲೈವ್ಲಿ” ಆಗಿಸಿದೆ. ಹಾಗೆಯೇ ತಮಾಷೆಗೆ “ಸಂಸ್ಕೃತ ದ್ವೇಷಿಗಳು’ ಅಂದದ್ದನ್ನು ತುಂಬಾ ಸೀರಿಯಸ್ಸಾಗಿ ಪರಿಗಣಿಸಿ , ಜೋಷಿ ಯವರನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದು ಸರಿ ಅನಿಸಲಿಲ್ಲ. ಜೋಷಿಯವರು ಎಲ್ಲ ಬಲ್ಲವರಲ್ಲ. ಆದರೆ ಬಹಳಷ್ಟನ್ನು ಬಲ್ಲವರು. ಅನೇಕ ಮಾಹಿತಿಪೂರ್ಣ, ಸ್ವಾರಸ್ಯಕರ ಲೇಖನಗಳಿಂದ ಹೆಸರು ಮಾಡಿದ್ದಾರೆ. ಅವರ ವಿಷಯ ವ್ಯಾಪ್ತಿ ವಿಸ್ತಾರವಾದದ್ದು.

"

ಇಲ್ಲಿ ನೀವು ಜೋಶಿವರು ತಮಾಶೆ ಮಾಡಿದಕ್ಕೆ ನಾವು ಸಿಕ್ಕಾಪಟ್ಟೆ ಸೀರಿಯಸ್ಸಾಗಿ, ಅವರ ಪರ್ಸನಲ್ ಸಂಗತಿ ಎತ್ತಿದ್ದೀವಿ ಅಂತ ಅಂದ್ದೀರಿ..

’ಪರ್ಸಸನಲ್ ಯಾರು ಆದುದು ಹೇಗೆ, ಯಾಕೆ’ ಮತ್ತು ’ಸ್ಮಯ್ಲಿ ಬಳಸಿದ್ದು ಎಲ್ಲಿ ಕಿರಿಕಿರಿ ಮಾಡಿತು’ ಅಂತ ನೋಡಿ..

ಪಾಯಿಂಟಲ್ಲಿ ಹೇಳಿರುವೆನು.
೧)ವಿಶಯ ಇರೋದು ’ಪ್ರಸಾದ’ಕ್ಕೆ ಸಮಪದದ ಬಗ್ಗೆ

ಇದಕ್ಕೆ ಸುನಿಲ
http://sampada.net/forum/7247#comment-15066

ಅಯ್ಯೋ, ಪ್ರಸಾದ್, ಮೊದಲು "ಸಮಾನಾಂತರ" ಅಂದರೇನು ಅಂತ ಹೇಳಿ Eye-wink ಬಹುಶಃ ಸಮಾನಾರ್ಥಕ (ಅದೇ ಅರ್ಥದ) ಪದ ಅಂತ ಹೇಳಬೇಕಿತ್ತು ಅನಿಸತ್ತೆ. ಇರಲಿ, ಪ್ರಸಾದಕ್ಕೆ ಚುರ್ಪು ಅಂತಲೋ ಏನೋ ಹೇಳ್ತಾರೆ. ಮಹೇಶನಿಗೆ ಗೊತ್ತು.

ಇದಕ್ಕೆ ನನ್ನ ಸೇರ್ಪಡೆ
http://sampada.net/forum/7247#comment-15067

ಸಮಾನಾಂತರ = parallel

ಸಮಪದ/ಸಮದೊರೆ

ಪ್ರಸಾದ = ಚರುಪು. ( ಇದು ತೆಲುಗಲ್ಲಿ ಹೆಚ್ಚು ಬಳಕೆ ಇದೆಯಂತೆ )

ಇಲ್ಲಿ ಯಾರು ಪದದ ಮೂಲದ ಮಾತಾಡಿದ್ದರು? ಚರಪು ದ್ರಾವಿಡ ಪದ ಅಂತ ಯಾರು ಹೇಳಿದ್ದರು?

ಇದಕ್ಕೆ ಕೊಂಕಿನ ಕಮೆಂಟು ಬರೆದು ಕಿರಿಕಿರಿ ಎಬ್ಬಿಸಿದವು ಜೋಶಿಗಳು( ಅದು ತಮಶೆ ಅಂತ ಅನ್ನಿಸಿಲ್ಲ )
http://sampada.net/forum/7247#comment-15070

ಚರುಪು’ ತೆಲುಗಿನಲ್ಲಿ ಉಪಯೋಗಿಸುವ ಪದ, ಕನ್ನಡದಲ್ಲೂ ಬಳಸಬಹುದು, ಹಾಗಾಗಿ ’ಪ್ರಸಾದ’ ಪದಕ್ಕೊಂದು ಸಮಾನಾರ್ಥಕ ಪದ ದ್ರಾವಿಡ ಮೂಲದ್ದೇ ಸಿಕ್ಕಿತು ಎಂದುಕೊಂಡಿರಾ?

ಈ ಕೆಳಗಿನ ವಿವರ ತಥಾಕಥಿತ (so called) ಸಂಸ್ಕೃತದ್ವೇಷಿಗಳಿಗೆ ಸ್ವಲ್ಪ ಕಿರಿಕಿರಿಯೆನಿಸಬಹುದು, ಆದರೆ ವಾಸ್ತವವೆಂದರೆ ’ಚರುಪು’ ಪದದ ಮೂಲ, ಸಂಸ್ಕೃತದ ’ಚರು’. ಯಜ್ಞಯಾಗಾದಿಗಳಲ್ಲಿ ದೇವತೆಗಳಿಗೆ ಹೋಮದಲ್ಲಿ ಅರ್ಪಿಸುವ ಹವಿಸ್ಸು ’ಚರು’. ಅನ್ನಕ್ಕೆ ವಿವಿಧ ಪರಿಮಳದ್ರವ್ಯಗಳನ್ನು ಸೇರಿಸಿ ತಯಾರಿಸಿದ್ದು.

’ಚ’ ಅಕ್ಷರದಿಂದ ’ಚರು’ ಅಷ್ಟೇ ಅಲ್ಲದೆ ಇನ್ನೂ ಅದೆಷ್ಟೋ ತಿಂಡಿತಿನಸುಗಳ ಹೆಸರು ಆರಂಭವಾಗುತ್ತದೆ. ವಿವರಗಳಿಗೆ ಓದಿ "ಚ ಉವಾಚಿಸಿದ ಚಾಗುಣಿತ".


ಜೊತೆ ತಮ್ಮ ಬರಹವನ್ನೇ ಮಾದರಿ ಅಂತ ನೀಡಿದವರು ಅವರು.. ಅಲ್ಲೂ ಹಲವು ದೋಶಗಳುಂಟಲ್ಲ.!!

ಇದು ಕುಚೋದ್ಯವೇ ಹೊರತು ತಮಾಶೆಯಲ್ಲ.

೨) ಚಾರು/ಸಾರು ಇದೊಂದು ದುರಂತ..
ಕನ್ನಡ ಮತ್ತು ತಮಿಳ ನುಡಿಗಳ ಒಂದರಿಂದ ಒಂದು ಬಂದಿಲ್ಲ. ಎರಡು ಒಂದೇ ನುಡಿ ಕವಲುಗಳು... ದಯವಿಟ್ಟು Encyclopediaದ ಬರಹ ನೋಡಿ
ಕನ್ನಡದ ಪದಗಳೆಲ್ಲ ತಮಿಳು ಪದಗಳು ಹಾಗೆ ಎಲ್ಲ ತಮಿಳು ಪದಗಳೂ ಕನ್ನಡದವೇ..!!

೩) ಗೌರವಾನ್ವಿತ ಜೋಶಿಯವರ ಈ ಕೆಳಗಿನ ಸಾಲು ತೀಟೆ/ತಂಟೆ/ಕೀಟಲೆ ಎಂದು ನಮ್ಮನ್ನು ರೇಗಿಸಿತು

೧)ಅಂದಹಾಗೆ ಈ ಚರ್ಚೆ ನಡೆಯುವ ’ಸಂಪದ’ ಹೆಸರು ಮತ್ತು, ಮೊನ್ನೆಯಷ್ಟೇ ಒಂದು ಸಂಸ್ಕೃತ-ಕನ್ನಡ ಚರ್ಚೆ ನಡೆದ ’ಪ್ರಜಾವಾಣಿ’ ಪತ್ರಿಕೆಯ ಹೆಸರು ಸಹ ಕನ್ನಡವಾಗಬಹುದೇ? Smiling
೨)’ವೈಭವ’ ಹೇಗೆ ಬಂದಿರಬಹುದೆಂಬ ಕುತೂಹಲ...( ಇದು getting personal )

೩)ಈ ಕೆಳಗಿನ ವಿವರ ತಥಾಕಥಿತ (so called) ಸಂಸ್ಕೃತದ್ವೇಷಿಗಳಿಗೆ ಸ್ವಲ್ಪ ಕಿರಿಕಿರಿಯೆನಿಸಬಹುದು, ಆದರೆ ವಾಸ್ತವವೆಂದರೆ ’ಚರುಪು’ ಪದದ ಮೂಲ, ಸಂಸ್ಕೃತದ ’ಚರು’. ಯಜ್ಞಯಾಗಾದಿಗಳಲ್ಲಿ ದೇವತೆಗಳಿಗೆ ಹೋಮದಲ್ಲಿ ಅರ್ಪಿಸುವ ಹವಿಸ್ಸು ’ಚರು’. ಅನ್ನಕ್ಕೆ ವಿವಿಧ ಪರಿಮಳದ್ರವ್ಯಗಳನ್ನು ಸೇರಿಸಿ ತಯಾರಿಸಿದ್ದು.

’ಚ’ ಅಕ್ಷರದಿಂದ ’ಚರು’ ಅಷ್ಟೇ ಅಲ್ಲದೆ ಇನ್ನೂ ಅದೆಷ್ಟೋ ತಿಂಡಿತಿನಸುಗಳ ಹೆಸರು ಆರಂಭವಾಗುತ್ತದೆ. ವಿವರಗಳಿಗೆ ಓದಿ "ಚ ಉವಾಚಿಸಿದ ಚಾಗುಣಿತ"

...

ಸುದೀರಣ್ಣ..

ಕನ್ನಡ ಅನ್ನೋದು ನಮ್ಮ ಸೊತ್ತು. ಅದು ಯಾವಾಗಲೂ ನಮ್ಮ ಪರ್ಸನಲ್ ವಿಶಯವಾಗೇ ಇರ್ತದೆ, ಆಗೇ ಇರಬೇಕು.. ಕನ್ನಡವನ್ನು ಕೀಳು, ಕನ್ನಡದ ಅಡುಗೆಗಳನ್ನಲ್ಲ, ಒರೆಗಳನ್ನೆಲ್ಲ, ಮತ್ಯಾವುದನ್ನು ಸುಳ್ಳು-ಸುಳ್ಳೇ ಬೇರೆ ಜನಾಂಗದ ಹೆಸರಿಗೆ ಕಟ್ಟುವುದನ್ನು ನಾವು ವಿರೋದಿಸಲೇ ಬೇಕು.!!

ನಾವು ನಮ್ಮ ಕನ್ನಡದ ಪರವಾಗಿ ಮಾತಾಡಿದ್ದು.. !

ದಯವಿಟ್ಟು.. ಚಾರು ತಮಿಳಿಂದೇ ಕನ್ನಡಕ್ಕೆ ಬಂದಿದೆ. ಹಾಗೆ ಚರಪು ದ್ರಾವಿಡಪದ ಅಲ್ಲವೇ ಅಲ್ಲ ಅಂತ ಲಾಜಿಕಲ್ಲಾಗಿ ತೋರಿಸಿಕೊಟ್ಟು ಬಿಟ್ಟಿದ್ರೆ.. ಇವೆಲ್ಲ ಆಗ್ತಿತ್ತ?

’ಚಾರು’ ಸಂಗತಿ ಇಲ್ಲಿ ಪೋಣಿಸಿದ್ದು ಜೋಶಿಯವರೆ.

ಇದು ನಮ್ಮ ಕಡೆ ವಕಾಲತ್ತಲ್ಲ.. " ಧೈರ್ಯಕ್ಕೆ ಸ್ವಲ್ಪ ವಿನಯ ಹಾಗೂ ನಮ್ರತೆಯ ಮೆರುಗು ಹಚ್ಚಿದರೆ" clauseಗೆ ಅಸಮ್ಮತಿ!

ನಾನಂತು ಯಾರ ಕ್ಶಮೆ ಕೇಳಲ್ಲ.. ಕನ್ನಡದ ಸಂಗತಿಯಲ್ಲಿ ನಾವು ಹೀಗೇ ಗಟ್ಟಿಯಾಗಿರಬೇಕು. ನಮ್ಮ ಮೆದುವನ್ನು ಮೆಯ್ಯುತ್ತಿದ್ದಾರೆ!

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 11:00pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ತುಂಬಾ ಧನ್ಯವಾದಗಳೊದಿಗೆ..................
ಆದರೆ..ನಾನು ಹೇಳಿದ್ದು...
ಪ್ರಸಾದ...ಅಂದರೆ ನೆವೇಧ್ಯವು..ಆಗುವುದಿಲ್ಲವೇ................?

  • Login or register to post comments
  • link
  • Email this ಪ್ರತಿಕ್ರಿಯೆ
February 4, 2008 - 10:22am — mahesha

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

mahesha's picture

ನೆವೇಧ್ಯ ಅಲ್ಲ ಅನ್ನಿಸ್ತದೆ...

ನೈವೇದ್ಯ

ನಿವೇದ(ನೆ)

ನಿವೇದ(ನೆ) = ಬೇಡಿಕೆ, ಕೋರಿಕೆ.
ನೈವೇದ್ಯ = ನಿವೇದನೆಗಾಗಿ ಬಳಸಲಾದುದು, ನಿವೇದನೆಗೆ ನಂಟಾದುದು. ನಿವೇದಿಸಬೇಕಾದುದು

ವಿಚಿತ್ರ => ವೈಚಿತ್ರ್‍ಯ ದ ತರ

  • Login or register to post comments
  • link
  • Email this ಪ್ರತಿಕ್ರಿಯೆ
February 2, 2008 - 11:17pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

ಇನ್ನು ಮುಂದುವರಿಯಿರಿ....
ಬೇರೆ...ಯಾವುದಾದರು ಅಪಾರ್ಥ ಮಾಡಿಕೊಳ್ಳಬೇಡಿ.......
...ಪುರಾಣದ ಹಾಳೆಗಳನ್ನು ಇನ್ನೊಮ್ಮೆ...ಮಗಚಿರಿ...........
ಬೇರೆ ಯಾವುದಾದರು ಅರ್ಥಗಳು...ಸಿಗಬಹುದು........................"
ನಿಮ್ಮಲ್ಲರ...."ಪ್ರೀತಿಯ...."
..."ಪ್ರಸಾದ"

  • Login or register to post comments
  • link
  • Email this ಪ್ರತಿಕ್ರಿಯೆ
February 4, 2008 - 10:14am — ASHMYA

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

ASHMYA's picture

ಚರಪು (ದೇ) (ನಾ) ೧ ಆತಿಥ್ಯ, ಸಮಾರಾಧನೆ ೨ ದೇವರ ಪ್ರಸಾದ

೨. ಪನಿಯಾ(ವಾ)ರ (ದೇ) (ನಾ) ೧ ಭಕ್ಷ್ಯ, ತಿಂಡಿ ೨ ಪ್ರಸಾದ, ಚರುಪು, ಪಣ್ಯಾರ

೩. ಪಸಾದ (<ಸಂ. ಪ್ರಸಾದ) (ನಾ) ಅನುಗ್ರಹ, ದಯೆ

೪. ಪಸಾಯ (<ಪ್ರಾ. ಪಸಾಯ / <ಸಂ. ಪ್ರಸಾದ) (ನಾ) ೧ ಉಡುಗೊರೆ, ಬಹುಮಾನ, ಸಂಭಾವನೆ ೨ ಪಸಾದ

೫. ಪ್ರಸಾದ (ಸಂ) (ನಾ) ೧ ಅನುಗ್ರಹ, ಕೃಪೆ ೨ ಶಾಂತಿ, ಸಮಾಧಾನ ೩ ಸ್ಪಷ್ಟಗೊಳಿಸುವುದು ೪ ಪರಿಶುದ್ಧತೆ ೫ ನೈವೇದ್ಯ ಮಾಡಿದ ಪದಾರ್ಥ, ದೇವರಿಗೆ ಅರ್ಪಿಸಿ ಪಡೆದುದು ೬ ರುಚಿಕರವಾದ ಆಹಾರ ೭ ಅನ್ನ ೮ ಹೊಡೆತ, ಪೆಟ್ಟು ೯ ಕಾವ್ಯದಲ್ಲಿರಬೇಕಾದ ಹತ್ತು ಗುಣಗಳಲ್ಲಿ ಒಂದು ಸ್ಫುಟವಾದ ಶೈಲಿ

೬. ಬಂಡಾರ (<ಸಂ. ಭಂಡಾರ) (ನಾ) ೧ ಬೊಕ್ಕಸ, ಖಜಾನೆ ೨ ಪ್ರಸಾದ ರೂಪದ ಅರಿಸಿನ, ಕುಂಕುಮ, ಹೂವು ಮುಂ.ವು

೭. ಶೇಷ (ಸಂ) (ನಾ) ೧ ಉಳಿದುದು, ಮಿಕ್ಕಿದುದು, ಶಿಲ್ಕು ೨ ಪ್ರಸಾದ ೩ ಆದಿಶೇಷ ೪ (ಗಣಿತದಲ್ಲಿ) ಭಾಗಾಕಾರ ಲೆಕ್ಕದಲ್ಲಿ ಭಾಗವಾಗದೇ ಕಡೆಯಲ್ಲಿ ಉಳಿಯುವ ಸಂಖ್ಯೆ

೮. ಹಸಾದ (<ಸಂ. ಪ್ರಸಾದ) (ನಾ) ೧ ಅನುಗ್ರಹ, ದಯೆ ೨ ದೇವರಿಗೆ ಅರ್ಪಿಸಿದ ಹೂವು, ನೈವೇದ್ಯ ಮುಂ.ವು, ಪ್ರಸಾದ ೩ ಹಿರಿಯರ ನುಡಿಗೆ ಒಪ್ಪಿಗೆ ಸೂಚಿಸುವ ಮಾತು

ಬದುಕು ಬರಡಾಗದಿರಲಿ..........

  • Login or register to post comments
  • link
  • Email this ಪ್ರತಿಕ್ರಿಯೆ
March 5, 2008 - 4:39pm — prasadbshetty

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

prasadbshetty's picture

(ನಮ್ಮ ಸಂಪದ' ದಲ್ಲಿರು ಕೆಲವರ ಹೆಸರು)
ಭಾವಜೀವಿ" ಅಂದರೆ ಅರ್ಥ ವೇನು....?
ಪಾವನಜ......?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸರಿಯಾದ ಕನ್ನಡ ಪದ
  • ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್....
  • ಇದು ಏನೆ೦ದು ತಿಳಿಸಿ....
  • ಒಂದು ಸಂದೇಹ.......
  • "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?
Syndicate content

ಲೇಖಕರು