ಪಾಮರರ ಅಭಿಪ್ರಾಯವೇನು?
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಡಾ. ಟಿ ಆರ್ ಚಂದ್ರಶೇಖರ್ ರವರ ಕನ್ನಡ ಮಾತು -ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ ಎಂಬ ಲೇಖನಕ್ಕೆ ಪ್ರತಿಕ್ರಿಯುಸುತ್ತಿದ್ದೇನೆ.
ಕನ್ನಡ ಭಾಷೆಯ ಉದ್ಧಾರಕ್ಕೆ ಹೊರಡುವರೆಲ್ಲರೂ ಈ -ಋ -ದಮೇಲೆ ಕ್ರೂರವಾಗಿ ಯಾಕೆ ದಾಳಿಯನ್ನು ಮಾಡುತ್ತಾರೆ? ಕನ್ನಡ ೫೨ ವರ್ಣಗಳಲ್ಲಿ -ಋ - ಅನಿಷ್ಟವೇ? ಭಾರವೇ?
ಮತ್ತೊಂದು ಪಂಥವಿದೆ, ಅದು ಎಲ್ಲದಕ್ಕೂ ಸಂಸ್ಕೃತವನ್ನು ದೂಷಿಸುತ್ತದೆ. ಅದು ಸಂಸ್ಕೃತವನ್ನು ದೂಷಿಸುತ್ತೆದೆಯೋ ಅಥವಾ ಮತ್ಯಾರನ್ನೋ ಲಕ್ಷದಲ್ಲಿಟ್ಟುಕೊಂಡು ಜರಿಯುತ್ತದೆಯೋ ಹೇಳುವುದು ಕಷ್ಟ.
ಎಲ್ಲರೂ ಪೂರ್ವಾಗ್ರಹ ಪೀಡಿತರಾಗಿಯೇ ಮಾತನಾಡುತ್ತಾರೆ. ಅನಂತ ಮೂರ್ತಿಯವರಾಗಿರಬಹುದು ಅವರ ಎದುರಾಳಿ ಶತಾವಧಾನಿ ಗಣೇಶರಾಗಿರಬಹುದು ಅದರ ಜೊತೆಗೆ ಭಾಷಾ ಸೈಧಾಂತಿಕರಾದ ಡಾ. ಟಿ ಆರ್ ಚಂದ್ರಶೀಖರ ರವರಾಗಿರಬಹುದು ಅಥವಾ ಡಾ. ಡಿ ಎನ ಶಂಕರಭಟ್ಟರಾಗಿರಬಹುದು, ಯಾರೂ ತಮ್ಮ ಲಹರಿಯಿಂದ ಹೊರಗೆಬಂದು ಯೋಚಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ.
ಅಕ್ಷರಗಳು ಎಷ್ಟಿರಬೇಕು.?- ಈಗ ಚಾಲತಿಯಲ್ಲಿರುವ QWERTY ಕಂಪ್ಯೂಟರ್ ಕೀ ಮಣೆಯಲ್ಲಿ ಕನ್ನಡದಲ್ಲಿ ರೂಢಿಯಲ್ಲಿರುವ ಎಲ್ಲಾ ಅಕ್ಷರಗಳನ್ನೂ ಮೂಡಿಸಬಹುದು. ಮನುಷ್ಯನು ಜಗತ್ತಿನ ಭಾಷೆಗಳಲ್ಲಿ ಒಟ್ಟೂ ೩೭೦ ದ್ವನಿಗಳನ್ನು ಉಪಯೋಗಿಸುತ್ತಾನೆ ಎಂದು ಎಲ್ಲೋ ಕೇಳಿದ ನೆನಪು. ಹೀಗಾಗಿ ಕಂಪ್ಯೂಟರ್ ಯುಗದಲ್ಲಿ ಈ ಅಕ್ಷರ ಸಂಖ್ಯೆಯನ್ನು ಇನ್ನೂ ಹೆಚ್ಚುಮಾಡಿ ಹೆಚ್ಚಿನ ಸೌಲತ್ತು ಪಡೆಯಬೇಕೇ ವಿನಃ ಕಡಿಮೆ ಮಾಡಿಕೊಳ್ಳುವುದು ಹಿಮ್ಮುಖ ಚಲನೆಯಾಗುತ್ತದೆ. ವಿಷಯವನ್ನು ಕನ್ನಡಿಗರ ಬದುಕು- ಭವಿಷ್ಯದ ನೆಲೆಯಲ್ಲೇ ನಿರ್ಧರಿಸ ಬೇಕೇ ವಿನಃ ಸಂಸ್ಕೃತ ಪ್ರೀತಿ ಅಥವಾ ಕನ್ನಡದ ವ್ಯಾಮೋಹದ ಮೇಲಲ್ಲ. ಒಂದೆರಡು ಹೆಚ್ಚಿನ ವರ್ಣವನ್ನು ತಲೆಯಲ್ಲಿ ಗೃಹಿಸಲಾರದಷ್ಟು ದಡ್ಡರೇ ಕನ್ನಡಿಗರು? ಅಕ್ಷರಗಳನ್ನು ಕಡಿಮೆ ಮಾಡುವುದೆಂದರೆ ಕನ್ನಡಿಗರಿಗೆ ಮಾಡುವ ಅವಮಾನವೇ ಸರಿ.
ಕನ್ನಡದ ಮೇಲೆ ಸವಾರಿ ಯಾರಿಂದ? - ಮನೆಯ ಪಕ್ಕದಲ್ಲಿರುವ ಶುಲ್ಕವೇ ಇಲ್ಲದ ಕನ್ನಡ ಶಾಲೆಗಳನ್ನು ಬಿಟ್ಟು ದೂರದಲ್ಲಿರುವ ಶಾಲೆಗೆ ಸಹಸ್ರಾರು ರೂಪಾಯಿ ಡೊನೇಶನ್ ನೀಡಿ ಇಂಗ್ಲೀಶ್ ಕಲಿಯುವ ಮಕ್ಕಳಿಗೆ ಕನ್ನಡ ಎನ್ನುವುದು ಒಂದು ಹೊರೆ, ಮಕ್ಕಳ ಭವಿಶ್ಯಕ್ಕೆ ಇಂಗ್ಲೀಷೇ ಹೊರತು ಕನ್ನಡ ಅಲ್ಲ ಎಂದು ಪ್ರಾಮಾಣಿಕವಾಗಿ ನಂಬುವ ಪಾಲಕನಿಗೂ ಕನ್ನಡ ಬೇಡ. ೮೦ ಪ್ರತಿಶತ ಇಂಗ್ಲೀಶು ೨೦ ಪ್ರತಿಶತ ಕನ್ನಡದಲ್ಲಿ ಮಾತನಾಡುವ ಎಫ಼್ ಎಂ/ ಟಿ ವಿ ಲಲನೆಯರ ಜನಪ್ರಿಯ ಕಾರ್ಯಕೃಮಗಳನ್ನು ನೋಡಿದಮೇಲೂ ಕನ್ನಡದ ಮೇಲೆ ಸಂಸ್ಕೃತದ ದಬ್ಬಾಳಿಕೆ ಎಂದು ಹಲುಬುವುದು ಅರ್ಥವಿಲ್ಲದ ಮಾತು.
ಸ್ಪೆಲಿಂಗ ಸಮಸ್ಯೆ;- ಇದನ್ನು ಪರಿಹರಿಸಲು ಉಚ್ಚಾರಣೆ ಹೇಗಿರುತ್ತೋ ಬರಹವನ್ನು ಅದೇರೀತಿ ಬದಲಾಯಿಸಿಕೊಳ್ಳುವುದು ಪರಿಹಾರವೆಂಬ ಡಾ. ಡಿ ಎನ್ ಶಂಕರಭಟ್ ರವರ ಹೇಳಿಕೆಯನ್ನು ಯಾವರೀತಿಯಲ್ಲಿ ಅರ್ಥೈಸಿ ಕೊಳ್ಳಬೇಕೋ ಅರ್ಥವಾಗುತ್ತಿಲ್ಲ.
ಪ್ರಾದೇಶಿಕ ಕನ್ನಡದ ಉಚ್ಚಾರಣೆಯ ಬಗೆಗೆ ಯಾರದೂ ವಿರೋಧವಿಲ್ಲ. ಆದರೆ ಅದನ್ನು ಬರೆವಣಿಗೆಗೆ ತಂದಾಗ ಅಭಾಸವಾಗದ ಎಲ್ಲರಿಗೂ ಅರ್ಥವಾಗುವ ಒಂದು ವ್ಯವಸ್ಥೆ ಅಡಿ ಅದು ಇರಲೇ ಬೇಕು. ಹಾಗಿಲ್ಲದಿದ್ದಲ್ಲಿ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಗೆಯಾಗಿ ಪ್ರಜಾವಾಣಿಯಲ್ಲಿ ಪ್ರಕಟವಾದ ತಪ್ಪು ಮಾಹಿತಿ ದಾರಿತಪ್ಪಿಸುವ ಯತ (ಪ್ರ.ವಾ.೧೪-೦೧-೦೮) ಎಂಬುದನ್ನು ನೋಡಬಹುದು . ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಇರುವ ಮಾಹಿತಿ ಯಂತ್ರದಲ್ಲಿ ತಪ್ಪುಗಳ ಆಗರವೇ ಇದೆ ಎಂದು ಆರೋಪಿಸುತ್ತಾ ಕಬ್ಬಿನ ಬೆಳೆ ಎನ್ನುವಲ್ಲಿ ಕಬ್ಬಿಣ ಬೆಳೆ ಎಂದೂ ಸ್ಮಾರಕಗಳು ಎಂದು ಬರೆಯಬೇಕಾದ ಕಡೆಗೆ ಸಮಾರಕಗಳು ಎಂತಲೂ ಇದೆ ಅವು ತಪ್ಪುಕನ್ನಡವಾಗಿದ್ದು ದಾರಿತಪ್ಪಿಸುವ ಮಾಹಿತಿ ಎಂದು ವಿಶ್ಲೇಶಿಸಿದ್ದಾರೆ. ಎಂದಾದರೂ ಬೆಳಗಾವಿ ಪಟ್ಟಣವನ್ನು ಒಮ್ಮೆ ಸುತ್ತಿ ನೋಡಿ. ಅಂಗಡಿಯ ನಾಮ ಫಲಕ ಓದುತ್ತ ಹೋಗಿ. ನಿಮಗೆ ಅಲ್ಲಿ ಹಣಮಂತರಾಯ (ಹನುಮಂತರಾಯ), ಪರಭಾಕರ (ಪ್ರಭಾಕರ), ಪರತಾಪ(ಪ್ರತಾಪ) ಹೆಸರಿನ ಬೋರ್ಡುಗಳೂ ಸಿಗುತ್ತವೆ. ಸ್ಮಶಾನದಲ್ಲಿ ಪುಣ್ಯವಂತರ ಸಮಾರಕ(ಸ್ಮಾರಕ) ಗಳೂ ಸಿಗಬಹುದು. ಸುತ್ತಿ ಸುತ್ತಿ ಸುಸ್ತಾದಾಗ ಯಾರನ್ನಾದರೂ ವಿಚಾರಿಸಿ -‘ಇಲ್ಲಿ ಕಬ್ಭಿಣ ಹಾಲು ಎಲ್ಲಿ ಸಿಗುತ್ತದೆ?’ ಆತ ನಿಮಗೆ ಖಂಡಿತ ಕುಲುಮೆಗೆ ದಾರಿತೋರಿಸದೇ ಒಂದು ರಸವಂತಿಗೆ ದಾರಿತೋರಿಸುತ್ತಾನೆ. ಅದು ಬೆಳಗಾವಿಯ ಸ್ಥಾನಿಕ ಕನ್ನಡ.
ಮೇಲಾಧಿಕಾರಿ ಬರೆದ ಕರಡು ಪತ್ರದಲ್ಲಿರುವ ಕಾಗುಣಿತದ ತಪ್ಪುಗಳನ್ನು ಸರಿಪಡಿಸಿ ಸರಿಯಾಗಿ ಟೈಪ್ ಮಾಡುವುದು ಲಿಪಿಕರ ಕರ್ತವ್ಯ. ನನ್ನ ಬೆಳಗಾವಿ ಕಛೇರಿಯಲ್ಲಿ ನಮ್ಮ ಟೈಪಿಸ್ಟರೂ ಇದನ್ನೇ ಪ್ರಾಮಾಣಿಕವಾಗಿ ಮಾಡುತ್ತಾರೆ. ನನ್ನ ಕರಡು ಪ್ರತಿ ಶುದ್ಧಪ್ರತಿಯಾಗಿ ನನ್ನ ಬಳಿ ಬಂದಾಗ ಅದರಲಿರುವ ಎಲ್ಲಾ ‘ನ’ ಕಾರಗಳಿಗೆ ಬದಲಾಗಿ ‘ಣ’ ಕಾರವೇ ಇರುತ್ತದೆ. ವಿಧ್ವಾಂಸರು ಇಷ್ಟಪಡುವ ಕನ್ನಡ ಲಿಪಿ ಇದೇ ಏನು? ಉಚ್ಚಾರಣೆಯಲ್ಲಿ ಅಲ್ಲವಾದರೂ ಬರವಣಿಗೆಯಲ್ಲಾದರೂ ಇಡೀ ಕರ್ನಾಟಕಕ್ಕೆ ಒಂದು ಸಾಮಾನ್ಯ ಲಿಪಿ ಬೇಡವೆ?
ವರ್ಣಗಳು ಯಾಕೆ ಬೇಡವೇ ಭೇಡ? ;- ಋ ಙ ಞ ವರ್ಣಗಳು ಬೇಡ ಎಂಬುದನ್ನು ಅರೆಮನಸ್ಸಿನಿಂದ ಒಪ್ಪಬಹುದು. ಇಂದು ಕನ್ನಡದ ಅನುನಾಸಿಕಗಳಿಗೆ ‘೦’ ಒಂದನ್ನೇ ಬಳಸಲಾಗುತ್ತದೆ. ನಾವು ಅದನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ. ಏಕೆಂದರೆ ಮೌಖಿಖವಾಗಿ ಸಾಗಿಬರಬೇಕಾದ ಅನುನಾಸಿಕಗಳ ಮೂಲ ಧ್ವನಿಯನ್ನು ನಮ್ಮ ಹಿರಿಯರು ನಮ್ಮ ತನಕ ದಾಟಿಸಲೇಇಲ್ಲ. ನಮ್ಮ ಹಿಂದಿನ ಸುಧಾರಣಾ ವಾದಿಗಳು ಅದನ್ನು ಬಿಟ್ಟಿದ್ದು ನಮ್ಮ ದುರ್ದೈವ. ಬಿಡುವಂತಃ ಅನಿವಾರ್ಯತೆ ಏನಿತ್ತು? (ಹವ್ಯಕ ಭಾಷೆಯಲ್ಲಿ ಙ ಹಗೂ ಞ ಗಳದೇ ಕಾರುಬಾರು) ಈಗ ಖ ಛ ಠ ಥ ಫ ಹಾಗೂ ಘ ಝ ಢ ಧ ಭ ಗಳಿಗೆ ಕೊಕ್ ಕೋಡಲು ಪಂಡಿತರ ಹುನ್ನಾರ ನಡೆದಿದೆ. ಕೈ ಬಿಡುವುದರಿಂದ ಕನ್ನಡಿಗರಿಗೆ ಏನು ಲಾಭವಾಗುತ್ತದೆ- ಪಂಡಿತರಿಗೇ ಗೊತ್ತು. ಹಳೆಯ ಪುಸ್ಥಕಗಳನ್ನೆಲ್ಲ ಒಲೆಗೆ ಹಾಕೋಣವೇ?
ಕಬ್ಬಿಣದ ಕಡಲೆ ಕನ್ನಡಕ್ಕೆ ಮಾರಕವೇ? ಶತಾವಧಾನಿ ಗಣೇಶರ ಸಂಸ್ಕೃತ ಭೂಯಿಷ್ಠ ಅಂಕಣಗಳನ್ನು ಚಾಚೂ ತಪ್ಪದೆ ಓದಿ ಒಂದಕ್ಷರವೂ ಅರ್ಥವಾಗದೆ ತಲೆ ಅಲ್ಲಾಡಿಸಿದವರಲ್ಲಿ ನಾನೂ ಒಬ್ಬ. ಕಳೆದ ತಿಂಗಳು ಒಂದು ಸಂಸ್ಕೃತ ಸಮ್ಮೇಳನಕ್ಕೆ ಹೋಗೆದ್ದೆ. ಭಾಶಾಂತರಿಸದೆ ಶುದ್ಧ ಸಂಸ್ಕೃತದಲ್ಲಿ ಭಾಷಣ ಮಾಡಿದರು. ಮೂರುತಾಸು ನಡೆದ ಸಭೆಯಲ್ಲಿ ನನಗೆ ಹಾಗೂ ನನ್ನ ಹೆಂಡತಿಗೆ ಅರ್ಥವಾಗದ ಒಂದೇ ಒಂದು ಪದ ಎಂದರೆ ಕಂಪಿಲ್ಲಕ ಎಂಬ ಶಬ್ಧ ಮಾತ್ರ. ಭಾಷಣಕಾರರು ಅದರ ಅರ್ಥವನ್ನು ಮಾತ್ರ ಹೇಳಿದರು. ಹೀಗಾಗಿ ಅಲ್ಲಿ ಕೇಳಿದ ನೂರಕ್ಕೆ ನೂರು ಸಂಸ್ಕೃತ ಪದಗಳಲ್ಲಿ ಒಂದೂ ನನಗೆ ಕಠಿಣ ಪದ ಎನ್ನಿಸಲಿಲ್ಲ. ಇದರರ್ಥ ಸಂಸ್ಕೃತವು ಸರಳವೂ ಅಲ್ಲ ಕಠಿಣವು ಆಲ್ಲ. ಪಂಡಿತರ ಕೈಗೆ ಸಿಕ್ಕಿದರೆ ಕಠಿಣ ಭಾಷೆ. ಪಾಮರರ ಕೈಗೆ ಸಿಕ್ಕಿದರೆ ಸರಳ ಭಾಷೆ.
ಸಂಸ್ಕೃತವು ಸಾಮಜಿಕ ಅಸಮಾನತೆ ತರುತ್ತದೆಯೆ? ಸಂಸ್ಕೃತದಲ್ಲಿರುವ ಸಾಹಿತ್ಯಗಳು ಸಾಮಾಜಿಕ ಅಸಮಾನತೆಗಳನ್ನು ಬೋಧಿಸುತ್ತವೆ ಎಂಬುದರಬಗ್ಗೆ ನನಗೂ ಸಹಮತವಿದೆ. ಆದರೆ ಆ ಸಾಹಿತ್ಯದಲ್ಲಿ ಸಾಮಾಜಿಕ ಸಮಾನತೆಯನ್ನು ಸಾರಿ ಸಾರಿ ಹೇಳುವ ಸಾಹಿತ್ಯಗಳೂ ಇವೆ. ಸಂಸ್ಕೃತದ ಪರ ವಿರೋದಿಗಳಿಗೂ ಇದು ಗೊತ್ತಿಲ್ಲದ ವಿಷಯವೇನಲ್ಲ. ಸಂಸ್ಕೃತ ಸಾಹಿತ್ಯವು ಸಾಮಾಜಿಕ ಅಸಮಾನತೆಯನ್ನು ಬೋಧಿಸಿದ ಮಾತ್ರಕ್ಕೆ ಸಂಸ್ಕೃತ ಭಾಷೆಯನ್ನು ಅಪರಾಧಿ ಸ್ಥಾನದಲ್ಲಿ ಏಕೆ ನಿಲ್ಲಿಸಬೇಕು?
ಕನ್ನಡಿಗನ ಗೃಹಣ ಶಕ್ತಿಗೆ ಕುಂದುಂಟೇ? ಕನ್ನಡದ ಒಂದು ಮಗು ಕನ್ನಡದ ೫೨, ಹಿಂದಿಯ ೫೨, ಹಾಗೂ ಇಂಗ್ಲೀಶಿನ ೨೬ ಅಕ್ಷರಗಳನ್ನು ಜೊತೆಗ ಮೂರು ಭಾಷೆಗಳ ತಲಾ ಹತ್ತು ಸಂಖ್ಯೆಯನ್ನು, ಅಂಕಗಣಿತ ಜೊಮೆಟ್ರಿಗಳ ಸಂಕೇತಗಳನ್ನು, ರೋಮನ ಅಂಕೆಗಳನ್ನು, ಟ್ರಾಪಿಕ್ ಸೈನ್ ಗಳನ್ನು ತೊಂದರೆ ಇಲ್ಲದೇ ಕಲಿಯುತ್ತಿರುವಾಗ ಈ ಮೂರು ಆಕ್ಷರಗಳು ಅವರಿಗೆ ಹೊರೆ ಆಗುತ್ತದೆಯೇ? ಇದರೊಂದಿಗೆ ಕರ್ನಾಟಕದಲ್ಲಿ ಉರ್ದು ಮಾಧ್ಯಮದಲ್ಲಿ ಓದುವ ವಿದ್ದ್ಯಾರ್ಥಿ ಸುಮಾರು ೪೭ ಉರ್ದು ಅಕ್ಷರವನ್ನೂ ೧೦ ಅಂಕೆಗಳನ್ನೂ ಕಲಿಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಕೆಲವು ದಶಕಗಳ ಹಿಂದಾಗಿದ್ದರೆ ಹೆಚ್ಚಿನ ಅಕ್ಷರಗಳು ಹೊರೆ ಇಳಿಸುವುದರಲ್ಲಿ ಅರ್ಥವಿತ್ತೋ ಏನೋ. ಏಕೆಂದರೆ ದಲಿತ, ಹಿಂದುಳಿದ ವರ್ಗದವರಿಂದ ಕೆಲವು ಧ್ವನಿಗಳನ್ನು ಹೊರಡಿಸುವುದು ಕಷ್ಟ ಸಾಧ್ಯವಾಗಿತ್ತು. ಈಗ ಹಾಗಿಲ್ಲ, ಅವರೆಲ್ಲಾ ವಿದ್ಯಾವಂತರಾಗಿದ್ದಾರೆ. ಈಗ ಯಾರ ಬಾಯಿಯಲ್ಲಿ ಬೇಕಾದರೂ ಕಾಕುತ್ಸ್ಥ ಎಂದು ಹೇಳಿಸಬಹುದಾಗಿದೆ.
ಇದು ತರ್ಕಬದ್ಧವೇ?;- ಋ ಙ ಞ ಅಕ್ಷರ ತೆಗೆಯಲು ನೀಡುತ್ತಿರುವ ಕಾರಣಗಳಲ್ಲಿ ಋ ವನ್ನು ರು ಅಕ್ಷರದಿಂದ ಸಾಧಿಸಬಹು,ಅನುನಾಸಿಕಗಳನ್ನು ಸೊನ್ನೆಯಿಂದ ಸಾಧಿಸಬಹುದು. ಆದರಿಂದ ಎರಡು ಅಕ್ಷರಗಳ ಹೊರೆ ಬೇಡ. ಹಾಗಿದ್ದಲ್ಲಿ ಇಂಗ್ಲೀಶಿನಲ್ಲಿ c ಅಥವಾ k ಹಾಗೂ I ಅಥವಾY ಅಕ್ಷರಗಳಲ್ಲಿ ಒಂದನ್ನು ಉಳಿಸಿಕೊಂಡು ಹಗುರಮಾಡಿಕೊಳ್ಳಲಿಲ್ಲ ಏಕೆ? C ಹಾಗೂ Sಳಲ್ಲಿ ಒಂದನ್ನೇ ಇಟ್ಟುಕೊಳ್ಳಬಹುದಲ್ಲವೇ? ಉರ್ದುವಿನಲ್ಲಿ ೩ ತರಹದ ಕ ಕಾರಗಳಿವೆ.
ಕೇಳಲು ಒಂದೇ ರೀತಿಯಲ್ಲಿದೆ ಇದೆ. ಅದ್ದರಿಂದ ಎರಡು ಅಕ್ಷರ ಕನ್ನಡದಲ್ಲಿ ಬೇಡ ಎಂದಾದರೆ- ಮೈಸೂರಿಗ ಎಷ್ಟೇ ಸಾರಿ ಕಷ್ಟಪಟ್ಟು ‘ ನಾನು ಕೃತಜ್ಞ ನಾಗಿದ್ದೇನೆ’ ಎಂದು ನನಗೆ ಅರ್ಥಮಾಡಿಸಲು ತಿಣಿಕಿದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ಅದು ‘ನಾನು ಕೃತಘ್ನ ನಾಗಿದ್ದೇನೆ’ ಎಂದೇ ಕೇಳಿಸುತ್ತದೆ . ನಾನು ಶೊರ್ಟ್ ಹಾಂಡನಲ್ಲಿ ಬರೆದುಕೊಳ್ಳುತ್ತಿದ್ದಲ್ಲಿ ಕೃತಘ್ನ ಎಂದೇ ಬರೆದುಕೊಳ್ಳುತ್ತಿದ್ದೆನೆನೋ. ಗಮನಿಸಿ ಕೃತಜ್ಞ ಪದವು ಋ ಮತ್ತು ಞ ವನ್ನು ಒಳಗೊಂಡಿದೆ.
ಮತ್ತೂ ಒಂದು- ಕನ್ನಡಿಗರೆಲ್ಲಾ ಕಞಾರ ಕಿಞಣ್ಣ ರೈ ರವರನ್ನು ಮರೆತೇಬಿಟ್ಟು ಕೃತಘ್ನರಾಗಬೇಕೇ? ನಾನು ನೋಡಿದಂತೆ ಮೈಸೂರು ಭಾಗದ ಜನತೆ ಅ ಹಾಗೂ ಆ ಎರಡರ ಉಚ್ಚಾರಣೆಯನ್ನು ಒಂದೇ ರೀತಿ ಮಾಡುತ್ತದೆ. ಅ ಕ್ಕೆ ಸಣ್ಣ ಆ ಎಂತಲೂ ಆ ಕ್ಕೆ ದೊಡ್ಡ ಆ ಎಂತಲೂ ಬಿಡಿಸಿ ಹೇಳುತ್ತಾರೆ. ಉದಾ- ಅಕಬರ ಅಲಿ ಎಂದು ಬರೆದು ಆಕಬರ ಆಲಿ ಎಂದು ಓದುವುದನ್ನು ಗಮನಿಸಿ. ನಂತರದಲ್ಲಿ ಯಾರಾದರೂ ಪಂಡಿತರು ಆ ಒಂದೇ ಸಾಕು ಎಂದು ವಾದ ಮುಂದಿಡಬಹುದು. ಎಲ್ಲಕ್ಕಿಂತ ಅಭಾಸ ಎಂದರೆ ಒಬ್ಬರು ತಮ್ಮ ಮನೆಮುಂದು ತಮ್ಮ ಹೆಸರನ್ನು ಪುಷ್ಪವತಿ ಎಂದು ಬರೆದುಕೊಂಡಿರುತ್ತಾರೆ . ಪುಷ್ಬವತಿ ಎಂದರೆ ಋತುಮತಿಯಾದ ಹೆಣ್ನು ಎಂದರ್ಥ!! ನಿಜವಾಗಿ ಅವರು ಪುಷ್ಪಾವತಿ ಎಂದು ಬರೆದುಕೊಳ್ಳಬೇಕಾಗಿತ್ತು. ಅರಸೀಕೆರೆ ಹಾಸನಗಳ ಅ ಕಾರ ಹ ಕಾರಗಳ ಬಗ್ಗೆ ಇರುವ ನಗೆಹನಿಯನ್ನು ನೆನಪಿಸಿಕೊಂಡು ನಕ್ಕುಬಿಡಿ. ಅದೇರೀತಿ ಮೈಸೂರು ಭಾಗದ ಜನತೆಯ ಙ ಹಾಗೂ ಞ ಗಳ ಉಚ್ಚಾರ ನನಗೆ ತೃಪ್ತಿನೀಡುತ್ತಿಲ್ಲ.
ಅರ್ಧ್ಮಮಾತ್ರ ಒಪ್ಪಬಹುದಾದ ಮಾತುಗಳು;-
‘ಕನ್ನಡ ಬರೆಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ನಿಲ್ಲಿಸಬೇಕು. ಕನ್ನಡದವೇ ಆದ ಪದಗಳನ್ನು ಬಳಸುವುದನ್ನು ಪ್ರೋತ್ಸಾಹಿಸಬೇಕು’ಎಂದು ಡಾ. ಚಂದ್ರಶೇಖರ ರವರು ಅಭಿಪ್ರಾಯಪಡುತ್ತಾರೆ. ಪದಬಳಕೆಯನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ನಮ್ಮ ಮಕ್ಕಳು/ಮೊಮ್ಮಕ್ಕಳು ಪುನಃ ಆಂಡಯ್ಯನ ಕಾಲಕ್ಕೆ ಹೋಗಲಾರರು.ವೈಫಲ್ಯ ಎಲ್ಲಿ;- ನಮ್ಮ ಮಕ್ಕಳಿಗೆ ಕಟ್ ಬಟ್ ಪುಟ್ ಗಳನ್ನು cut but put ಎಂದು ಬರೆಯಲು ಕಲಿಹಿಸುತ್ತೇವೆ. Conduct ಪದವನ್ನು ಸಮಯ ಸಂಧರ್ಭಗಳನ್ನು ನೋಡಿಕೊಂಡು ಕೊಂಡಕ್ಟ್ ಅಥವಾ ಕಂಡಕ್ಟ್ ಎಂದು ಓದಲು ಕಲಿಸುತ್ತೇವೆ. ಓದಿಗೂ ಬರಹಕ್ಕೂ ಅಜ ಗಜಾಂತರದಲ್ಲಿರುವ ಸಾವಿರಾರು ಇಂಗ್ಲೀಷ್ ಪದವನ್ನು ಸರಿಯಾಗಿ ಓದಲು ಬರೆಯಲು ಕಲಿಸುತ್ತೇವೆ. ಹೀಗಿದ್ದೂ ಕೇವಲ ೧೦ ಮಹಾ ಪ್ರಾಣಗಳನ್ನು ಕಲಿಸಲು ಶಿಕ್ಷಕನಿಂದ ಸಾಧ್ಯವಿಲ್ಲವಾದಲ್ಲಿ ಅದು ಆ ಶಿಕ್ಷಕನನ್ನು ತಯಾರುಮಾಡಿದ ವ್ಯವಶ್ಥೆಯಲ್ಲಿ ಇರಬಹುದಾದ ದೋಷ. ಅದಕ್ಕೆ ಭಾಷೆಯನ್ನು ಏಕೆ ಹೊಣೆಯನ್ನಾಗಿ ಮಾಡಬೇಕು?
ಪಂಡಿತರು ಮಾಡಬೇಕಾದ ಕೆಲಸ;- ಈಗ ಇರುವ ಕನ್ನಡ ಅಕ್ಷರಗಳು ಸಂಪೂರ್ಣವಾಗಿ ಕನ್ನಡವನ್ನು ಧ್ವನಿಸುತ್ತಿಲ್ಲ. ವರ್ಣಗಳು ಕೇವಲ ಶಿಷ್ಟ ಕನ್ನಡವನ್ನು ಮಾತ್ರ ದಾಖಲಿಸುತ್ತವೆ. ಗ್ರಾಮಾತರ ಪ್ರದೇಶದ ನಿರಕ್ಷರ ಕುಕ್ಷಿಯ ಬಾಯಿಂದ ಹೋರಡುವ ದ್ವನಿಯನ್ನು ಕನ್ನಡದ ಲಿಪಿಯು ಬರೆಯಲಾರದು. ಅದರಲ್ಲೂ ಮುಖ್ಯವಾಗಿ ಉತ್ತರಕರ್ನಾಟಕದ ಆಡುಭಾಷೆಯನ್ನು ಅದರ ಧ್ವನಿಯಂತೆ ಬರೆಯಲು ಸಾಧ್ಯವಾಗುತ್ತಿಲ್ಲ. ಉದಾ;- ಬೇಂದ್ರೆ ಯವರ ‘ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯವಾಂ, ವಾರದಾಗೆ ಮೂರುಸಾರೆ ಬಂದ ಹೋಗವಾಂ’. ಬೇದ್ರೆಯವರು ಇಲ್ಲಿssss ಗಳನ್ನು ಬಳಸಿದ್ದಾರೆ, ಆದರೂ ಅದು ಪರಿಪೂರ್ಣ ಮಟ್ಟವನ್ನು ಮುಟ್ಟುತ್ತಿಲ್ಲ. ಓದಿದ ನಂತರ, ಗೊತ್ತಿರುವವರಿಂದ ಹಾಡಿಸಿ ನೋಡಿ ಇಲ್ಲಿ ಯಾಕ/ಹುಬ್ಬಳ್ಳಿಯವಾಂ/ಬಂದ ಹೋಗವಾಂ ಗಳು ಓದಿಗೂ ಹಾಡಿಗೂ ಮೇಳೈಸುವುದಿಲ್ಲ.ಆದ್ದರಿಂದ ವರ್ಣಗಳನ್ನು ಇನ್ನೂ ಹೆಚ್ಚಿಗೆ ಮಾಡುವುದು ಸಾಧ್ಯವೇ ಯೋಚಿಸಿ ನೋಡಿ.
ನನ್ನ ಕನ್ನಡ ಪದ ಸಂಪತ್ತಿನಲ್ಲಿ ಸಂಸ್ಕೃತ ಸಾಹಿತ್ಯದ ಪಾಲು ಅತ್ಯಲ್ಪ, ಹೆಚ್ಚಿನವು ಪ್ರಜಾವಾಣಿ ಮುಂತಾದ ಪತ್ರಿಕೆಗಳ ಮೂಲಕ ಸಂಪಾದಿಸಿದ್ದೇ ಆಗಿದೆ,
ಪಂಡಿತರ ಮಾತನ್ನು ಮೂಲೆಗೆ ಇಟ್ಟು, ಕನ್ನಡಿಗರ ಉಳಿವಿಗಾಗಿ, ಕನ್ನಡದಲ್ಲಿ ಬದುಕುವ ಪಾಮರರ ಅಭಿಪ್ರಾಯ ಸಂಗೃಹವನ್ನು ಪಾಮರರು ಕೈಕೊಳ್ಳಬಹುದಾಗಿದೆ.
ಪಾಮರರ ಅಭಿಪ್ರಾಯವೇನು?
.

- Login or register to post comments
- 971 hits
- Email this forum




ಉ: ಪಾಮರರ ಅಭಿಪ್ರಾಯವೇನು?
Moderator( please moderate this comment ).
ಇದು ಮತ್ತೆ ಒಂದು ಅರೆಬರೆ ತಿಳಿದ ಬರೆದ ಬರಹ. ಬರಹಗಾರ ಹಲವು ಸಂಗತಿಯ ಹಿನ್ನಲೆಯನ್ನು ತಿಳಿದಿಲ್ಲ, ಶಂಕರಭಟ್ಟರ ವಾದವನ್ನು ಸರಿಯಾಗಿ ತಿಳಿದಿಲ್ಲ ಎಂದು ಅನ್ನಿಸವಂತೆ ಮಾತುಗಳಿವೆ.
( ನವರತ್ನ ಸುದೀರಣ್ಣ.. ಮೊದಲೇ ಮನ್ನಿಸಿಬಿಡಿ )
===================================
೧) ಕನ್ನಡದ ಅಕ್ಕರಪಟ್ಟಿ ಬದಲಾಗಬೇಕು ಎಂದು ಶುರು ಮಾಡಿದವರಲ್ಲಿ ಬಿ.ಎಂ.ಶ್ರೀ ಅನ್ನೋ ದೊಡ್ಡ ಕನ್ನಡಿಗರೂ ಒಬ್ರು. ಅವರು ಮೊದಲು ಮಾಡಿದ್ದು ೨೬ ಅಕ್ಕರಪಟ್ಟಿ.
ಬಿ.ಎಂ.ಶ್ರೀ ಅವರು ಯಾವ ಎಡಬಲಪಂಥದವರು ಮತ್ತು ಪೂರ್ವಾಗ್ರಹಪೀಡಿತರು?
೨)ಅಕ್ಕರಗಳು ಎಶ್ಟಿರಬೇಕು? ಅನ್ನೋದಕ್ಕೆ ನುಡಿಬಲ್ಲರು( ಸಂಸ್ಕೃತದ ಪದ ಭಾಷಾಪಂಡಿತರು) ಹೇಳೋದು, ಆ ಆ ನುಡಿಯನ್ನು ಮಾತನಾಡೋ ಮಂದಿ, ಮೂಲಭಾಷಿಕರು ಎಶ್ಟು ಉಲಿಗಳನ್ನು(ಸದ್ದುಗಳನ್ನು) ಸ್ವಾಭಾವಿಕವಾಗಿ ಹೇಳಬಲ್ಲರೋ, ಹೇಳುವರೋ ಅಶ್ಟು..
ಕನ್ನಡದ ಮೂಲಭಾಷಿಕ ಹಲವು ಜನಾಂಗಗಳು( >೭೦%) ಮಹಾಪ್ರಾಣಗಳನ್ನು, ಋ, ಶ, ಷ ಮುಂತಾದವನ್ನು ಸ್ವಾಭಾವಿಕವಾಗಿ ಹೇಳಲಾರರು, ಹೇಳರು.
ಆಸಕ್ತಿ ಇರುವವರು ಹಾಲಕ್ಕಿ, ಗೌಡ, ಕುರುಬ, ಬಡಗ ಮುಂತಾದ ಮೂಲಕನ್ನಡಭಾಷಿಕರು/ಮೂಲಕನ್ನಡಉಲಿಯುವವರು, ಇವರ ಮೇಲೆ ಹಲವು ಮಂದಿ ನಡೆಸಿರುವ ಆರಯ್ಯುಗಳನ್ನು ನೋಡಬೋದು.
ಜಗದಲ್ಲಿರುವ ಹೆಚ್ಚು ನುಡಿಗಳು ತಮಗೆ ಬೇಕಾದಶ್ಟೇ ಅಕ್ಕರಗಳನ್ನು ಇಟ್ಟುಕೊಂಡಿವೆ.!! ಹೆಚ್ಚು ಅಕ್ಕರವಿದ್ದರೆ ಕಂಪ್ಯೂಟರಲ್ಲೂ ತೊಂದ್ರೆ, ಮಾಮೂಲಿ ಮಂದಿಗೂ ತೊಂದ್ರೆ.
( ಮಾದರಿ : ಛ ಅನ್ನು ಬರೆಯುವಾಗ ಕೆಳಗಿನ ಹೊಟ್ಟೆಸುಳಿ ಬಿಟ್ಟು ಹೋದ್ರೆ ಅದು ವ ಅಂತೆ ತೋರುವುದು )
ಈ ಬರಹ ಬರಹಗಾರರು, ಯಾವ ಭಾಷಾವಿಜ್ನಾನ/ನುಡಿವಲ್ಮೆಯ ನೆಲೆಯಲ್ಲಿ ಅಕ್ಕರಗಳು ಇಶ್ಟಿರಬೇಕು ಎಂದು ಹೇಳಿರುವರೋ ತಿಳಿಸಬೇಕು.
"ಕನ್ನಡಿಗನ ಗೃಹಣ ಶಕ್ತಿಗೆ ಕುಂದುಂಟೇ? ಕನ್ನಡದ ಒಂದು ಮಗು ಕನ್ನಡದ ೫೨, ಹಿಂದಿಯ ೫೨, ಹಾಗೂ ಇಂಗ್ಲೀಶಿನ ೨೬ ಅಕ್ಷರಗಳನ್ನು ಜೊತೆಗ ಮೂರು ಭಾಷೆಗಳ ತಲಾ ಹತ್ತು ಸಂಖ್ಯೆಯನ್ನು, ಅಂಕಗಣಿತ ಜೊಮೆಟ್ರಿಗಳ ಸಂಕೇತಗಳನ್ನು, ರೋಮನ ಅಂಕೆಗಳನ್ನು, ಟ್ರಾಪಿಕ್ ಸೈನ್ ಗಳನ್ನು ತೊಂದರೆ ಇಲ್ಲದೇ ಕಲಿಯುತ್ತಿರುವಾಗ ಈ ಮೂರು ಆಕ್ಷರಗಳು ಅವರಿಗೆ ಹೊರೆ ಆಗುತ್ತದೆಯೇ?"
ಈ ವಾದಕ್ಕೆ ಏನು ಹೇಳೋಣ. ಕನ್ನಡ ಮಾಧ್ಯಮದಲ್ಲಿ ಓದಿದೋರು ಉದ್ದಾರ ಆಗ್ತಾ ಇಲ್ಲ, ಅನ್ನೋದು ಎಲ್ಲರ ಮಾತು. ಗ್ರಹಣಶಕ್ತಿ ಅನ್ನೋದನ್ನು ಹೇಗೆ ಅಳೆದಿರಿ?
ಹಾಗಾದ್ರೆ ನಮ್ಮ ಇಂಡಿಯದೇಸದಲ್ಲೇ ಬಲು ಕಡಮೆ ಅಕ್ಕರ ಇಟ್ಟುಕೊಂಡಿರುವ ತಮಿಳರು ದಡ್ಡರೇ? ಪಿ.ಚಿದಂಬರಂ ಎಂಬ ದಡ್ಡ ತಮಿಳಿಗ ನಮ್ಮ ಹಣಕಾಸಿನ ಮಿನಿಸ್ಟರ್..
. ಅಕ್ಕರಗಳ ಸಂಖ್ಯೆಗೂ ಅರಿವಿಗೂ, ಶಕ್ತಿಗೂ ಯಾವ ನಂಟಿಲ್ಲ..
ಕಡಮೆ ಅಕ್ಕರವಿದ್ದರೆ ಬರೆಯೋದನ್ನು ಕಲಿತು, ಬರೆಯೋದು ಸುಲಬ. ಇಂಗ್ಲಿಸಂತೆ.!!
೩)"ಹಳೆಯ ಪುಸ್ಥಕಗಳನ್ನೆಲ್ಲ ಒಲೆಗೆ ಹಾಕೋಣವೇ?"
ನಡುಗನ್ನಡದಲ್ಲಿ ’ೞ, ಱ, ಮತ್ತು ನ್’ ಅನ್ನು ಬಿಟ್ಟರು.. ಹಾಗೆಂದು, ಪಂಪ, ರನ್ನ ಮುಂತಾದವರ ಮತ್ತು ಕವಿರಾಜಮಾರ್ಗದಂತಹ ಕೃತಿಯನ್ನು ಒಲೆ ಹಾಕಿದ್ದಾರ?
ಹಾಗಾದರೆ ಹಳಗನ್ನಡದ ಅಕ್ಕರಗಳು ಮರಳಿ ಬರಬೇಕು... ಹಾಗು
ಕುೞಿತು ಸರಿ, ಮತ್ತು ಕುಳಿತು ದೋಶವಾಗಬೇಕು.
ಕುಱಿತು ಸರಿ, ಮತ್ತು ಕುರಿತು ದೋಶವಾಗಬೇಕು.
೪)"ಕಞಾರ ಕಿಞಣ್ಣ ರ" ಇದು ಯಾರು?
ದಯವಿಟ್ಟು..
ಶಂಕರಬಟ್ರ ಈ ಕೆಳಗಿನ ಹೊತ್ತಗೆಗಳನ್ನು ಓದಿ ನೋಡಿ... ಆಗಲಾದ್ರು ದಿಟದ ಸಂಗತಿ ನಿಮಗೆ ತಿಳಿಯಬೋದು...
೧) ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
೨) ಕನ್ನಡ ಬರಹವನ್ನು ಸರಿಪಡಿಸೋಣ
೩) ಕನ್ನಡ ನುಡಿ ನಡೆದು ಬಂದು ದಾರಿ..
ಶಂಕರಬಟ್ರು ಯಾವ ಹೊಸ ಸಂಗತಿಯನ್ನು ಹೇಳ್ತಿಲ್ಲ. ಹಿಂದೆ ಬಿ.ಎಂ.ಶ್ರೀ ಮುಂತಾದವರು ಹೇಳಿದನ್ನೇ ಈಗ ನುಡಿವಲ್ಮೆ/ಭಾಷಾವಿಜ್ನಾನ ಮೂಲಕ ವೈಜ್ನಾನಿಕವಾಗಿ ಹೇಳ್ತಾ ಇದ್ದಾರೆ.
ಸಂಸ್ಕೃತಪದಗಳು ಕನ್ನಡವನ್ನು ಕ್ಲಿಷ್ಟ ಮಾಡುವುದು ಅಂತ ಹೇಳಿದವರು
೧)ಕವಿರಾಜಮಾರ್ಗ
೨)ಶಬ್ದಮಣಿದರ್ಪಣ
೩)ನಯಸೇನ
೪) ಆಂಡಯ್ಯ
೫) ಬಿ.ಎಂ.ಶ್ರೀ
೭) ಕೊಳಂಬೆ ಪುಟ್ಟಣ್ಣ ಗೌಡ
೮) ಶಂಕರ ಬಟ್ರು
ಇವರೆಲ್ಲ ಏನು ಸಾಮಾನ್ಯರೇ? ಇವರ ವಾದಕ್ಕೆ ಗೌರವ ಮನ್ನಣೆ, ಕೊಡಲೇ ಬೇಕು!! ಸಿಕ್ಕೇ ಸಿಗುವುದು!
ಉ: ಪಾಮರರ ಅಭಿಪ್ರಾಯವೇನು?
ಮಯೇಸ್,
ಮೇಲೆ ನೀವು ಹೇಳಿದವರೆಲ್ಲರೂ ಅಸಾಮಾನ್ಯರೇ ಸೈ.
ಆದರೆ ಅವರಲ್ಲದೇ ಬೇರೆ ಅಸಾಮಾನ್ಯರೂ ಇಲ್ಲವೆ? ಅವರ ವಾದಕ್ಕೂ ಮನ್ನಣೆ ಬೇಡವೆ?
ಮಾತಾಡಿದಂಗೆ ಬರ್ಕೋತಾ ಕೂತ್ರೆ ಹಾಸನದವ್ನು ಬರ್ದಿದ್ದು ಬಿಜಾಪುರದವ್ನಿಗೆ ಗೊತ್ತಾಗೋಲ್ಲ. ಧಾರವಾಡದವ್ನು ಬರ್ದಿದ್ದು ಶಿವಮೊಗ್ಗದವ್ನಿಗೆ ಗೊತ್ತಾಗೊಲ್ಲ. ಕರಾವಳಿಯವ್ರು ಬರ್ದಿದ್ದು ಚಿತ್ರದುರ್ಗದವ್ರಿಗೆ ತಿಳಿಯೋಲ್ಲ. ಅಲ್ಲಿಗೆ ಕರ್ನಾಟಕ ಏಕೀಕರಣಕ್ಕೆ ಬೆಂಕಿ ಬಿತ್ತು. ಕನ್ನಡ ಉದ್ಧಾರ ಆಯಿತು. ಇಂಗ್ಲೀಷಿನ ಹೊಡೆತ ತಾಳಲಾರದೇ/ ಅದನ್ನು ತಪ್ಪಿಸುವ ತಾಕತ್ತಿಲ್ಲದೆ ಸಂಸ್ಕೃತದ ಮೇಲೆ, ಸಂಸ್ಕೃತ ಪಂಡಿತರ ಮೇಲೆ, ೩ % ಜನರ ಮೇಲೆ ಗೂಬೆ ಕೂರಿಸಿ ಕನ್ನಡಾಭಿಮಾನ ಮೆರೆಯುವವರೇ ಉದ್ಧಾರಕರು !
ಉ: ಪಾಮರರ ಅಭಿಪ್ರಾಯವೇನು?
ಹೆಗಡೆಯವರೆ,
ನಿಮಗೆ ಡೆಮಕ್ರಸಿಯಲ್ಲಿ ನಂಬಿಕೆಯಿದಿಯ? ಇದ್ದರೆ ಮುಂದೆ ಓದಿ.
ಈವತ್ತಿಗೂ ಡೆಮಕ್ರಸಿಯಲ್ಲಿ ಹೆಚ್ಚುಗಾರಿಕೆಗೆ ಬೆಲೆ. ಯಾವ ಪಾರ್ಟಿ ಹೆಚ್ಚು ಸೀಟು ಪಡೆಯುತ್ತೆ ಅವರಿಗೆ ಸರಕಾರ ಮಾಡುವುದಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಹಾಗೆಯೆ ಹೆಚ್ಚು ಜನರ ಬಾಯಲ್ಲಿ ಕನ್ನಡ ಹೇಗಿದಿಯೋ ಹಾಗೆ ಬರೆಯುವುದರಲ್ಲಿ ಯಾವ ಕೆಡುಕು.?
ನಾವು(ಕನ್ನಡಿಗ, ಕರ್ನಾಟಕ) ದಿಟವಾಗಲು 'ಏಕೀಕರಣ' ಗೊಂಡಿದ್ದೀವೆಯೆ??. ಬಿಜಾಪುರದವನು ಅವನು ಆಡುನುಡಿಯಲ್ಲಿ ಬರೆದುದನ್ನು ಮಂಡ್ಯದವನು ಓದಿ ಎಂದು ತಿಳಿದುಕೊಳ್ಳುವನೋ ಅಂದಿಗೆ ನಾವು ಒಂದಾಗಿದ್ದೀವಿ ಅಂತ ತಿಳಿದುಕೊಳ್ಳಬಹುದು. ಈ ಹೆಚ್ಚಾದ ಸಕ್ಕದದ ಬಳಕೆಯಿಂದ ನಾವು ದಿಟವಾಗಲೂ ಇನ್ನು ಒಂದಾಗಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಾಮರರ ಅಭಿಪ್ರಾಯವೇನು?
ಡೆಮಾಕ್ರಸಿಯನ್ನು ಪ್ರಭಾಪ್ರಭುತ್ವ ಎನ್ನಲು ಅದು ಸಕ್ಕದದ ಪದ ಎಂಬ ಹಿಂಜರಿಕೆಯೆ ವೈಭವರೆ ?
ಅದೇ ಹೇಳಿದ್ದು, ನಮ್ಮ ಕನ್ನಡೋರಿಗೆ ಇಂಗ್ಲೀಷು ಬೆರೆಸಿದ್ರೆ ಕಷ್ಟ ಆಗಲ್ಲ. ಅರ್ಥಾಗ್ಲಿಲ್ಲ ಅಂದ್ರೂ ತಿಪ್ಪರಲಾಗ ಹೊಡೆದಾದ್ರೂ ಅರ್ಥ ತಿಳ್ಕತವೆ. ಆದ್ರೆ ನೂರಾರು ವರುಷಗಳಿಂದ ಯಾವುದೇ ತೊಂದರೆ ಇಲ್ದೇ ಇರೋ ಕೆಲವು ಸಂಸ್ಕೃತ ಪದಗಳ ಮೇಲೆ ಕೆಂಗಣ್ಣು !
ನನಗೆ ಡೆಮಾಕ್ರಸಿಯಲ್ಲಿ ನಂಬಿಕೆ ಜಾಸ್ತಿ ಇರೋದಕ್ಕೆ ಹೇಳಿದ್ದು .. ಹೆಚ್ಚು ಜನರ ಮಾತೋಡೋ ಭಾಷೆ ಮಾತಿಗೇ ಇರಲಿ. ಅದೇ ರೀತಿ ಹೆಚ್ಚು ಜನರ ಬರೆಯೋ ಭಾಷೆ ಬರವಣಿಗೆಗಿರಲಿ.
ಈಗ ಬರಲಾಯಿಸಕ್ಕೋದ್ರೆ ಇನ್ನೂ ಕಷ್ಟ ಆಗೋಯ್ತದೆ ಸಾರೂ ನಮ್ ಕನ್ನಡ.
ಉ: ಪಾಮರರ ಅಭಿಪ್ರಾಯವೇನು?
ಡೆಮಾಕ್ರಸಿಯನ್ನು ಪ್ರಭಾಪ್ರಭುತ್ವ ಎನ್ನಲು ಅದು ಸಕ್ಕದದ ಪದ ಎಂಬ ಹಿಂಜರಿಕೆಯೆ ವೈಭವರೆ ?
ಅದೇ ಹೇಳಿದ್ದು, ನಮ್ಮ ಕನ್ನಡೋರಿಗೆ ಇಂಗ್ಲೀಷು ಬೆರೆಸಿದ್ರೆ ಕಷ್ಟ ಆಗಲ್ಲ. ಅರ್ಥಾಗ್ಲಿಲ್ಲ ಅಂದ್ರೂ ತಿಪ್ಪರಲಾಗ ಹೊಡೆದಾದ್ರೂ ಅರ್ಥ ತಿಳ್ಕತವೆ. ಆದ್ರೆ ನೂರಾರು ವರುಷಗಳಿಂದ ಯಾವುದೇ ತೊಂದರೆ ಇಲ್ದೇ ಇರೋ ಕೆಲವು ಸಂಸ್ಕೃತ ಪದಗಳ ಮೇಲೆ ಕೆಂಗಣ್ಣು !
ನನಗೆ ಡೆಮಾಕ್ರಸಿಯಲ್ಲಿ ನಂಬಿಕೆ ಜಾಸ್ತಿ ಇರೋದಕ್ಕೆ ಹೇಳಿದ್ದು .. ಹೆಚ್ಚು ಜನರ ಮಾತೋಡೋ ಭಾಷೆ ಮಾತಿಗೇ ಇರಲಿ. ಅದೇ ರೀತಿ ಹೆಚ್ಚು ಜನರ ಬರೆಯೋ ಭಾಷೆ ಬರವಣಿಗೆಗಿರಲಿ.
ಈಗ ಬರಲಾಯಿಸಕ್ಕೋದ್ರೆ ಇನ್ನೂ ಕಷ್ಟ ಆಗೋಯ್ತದೆ ಸಾರೂ ನಮ್ ಕನ್ನಡ.
ಉ: ಪಾಮರರ ಅಭಿಪ್ರಾಯವೇನು?
"...ಡೆಮಾಕ್ರಸಿಯನ್ನು ಪ್ರಭಾಪ್ರಭುತ್ವ ಎನ್ನಲು ಅದು ಸಕ್ಕದದ ಪದ ಎಂಬ ಹಿಂಜರಿಕೆಯೆ ವೈಭವರೆ ..."
..ಅದು ಪ್ರಜಾ ಆಗಿರಬೇಕಿತ್ತು ಅನ್ಸುತ್ತೆ. ನೋಡುದ್ರ ನಾನು ಡೆಮಕ್ರಸಿ ಯಾಕೆ ಬಳಸ್ದೆ ಅನ್ನೋದಕ್ಕೆ ಉತ್ರ ಇಲ್ಲೇ ಇದೆ. 'ಪ್ರಜಾಪ್ರಬುತ್ವ' ಎಳ್ಳಷ್ಟು ಕನ್ನಡದ ಸೊಗಡಿಗೆ ಹೊಂದಿಕೊಳ್ಳುವುದಿಲ್ಲ. ಕನ್ನಡದಲ್ಲಿ ಮೊದಲ ಅಕ್ಕರ ಬೆಂಜನಕ್ಕೆ ಬೆಂಜನ ಒತ್ತಾಗಿ ಬರುವುದಿಲ್ಲ. ಅದರ ಬದಲು 'ಡೆಮಾಕ್ರಸಿ' ನಂಗೆ ಉಲಿಯಲು ಬರೆಯಲು ಸಲೀಸು. ಹಿಂಜರಿಕೆಯಲ್ಲ, ಯಾವುದು ಸಲೀಸು ಮತ್ತು ಹೆಚ್ಚು ಜನರಿಗೆ ಅದು ಅರಿತ ಆಗುತ್ತೆ ಅಂತ ತಿಳಿದು ಅದನ್ನೇ ಬಳಸ್ತಿನಿ.
ಏನಿದು' ಪ್ರಭಾಪ್ರಬುತ್ವ' .?
ಅದೇ ರೀತಿ 'ಪ್ರಾರಂಭ' ಅತ್ವ(ಇದು ಸಕ್ಕದ ಆದ್ರೂ ಬಳಸ್ತಾ ಇದೀನಿ) 'ಸ್ಟಾರ್ಟ್' ಗಿಂತ 'ಸುರು'(ಶುರು) ನಮಗೆ ಸಲೀಸು. ಇಲ್ಲಿ ಯಾಕೆ ನಾನು ಸ್ಟಾರ್ಟ್ ಬಳಸಲಿಲ್ಲ ಅಂತ ಬಿಡಿಸಿ ಹೇಳಬೇಕಿಲ್ಲ.
ನೀವು ಸಕ್ಕದ ಬಗ್ಗೆ ಹೇಳದೆ ಇಂಗಲೀಸ್ ಕಡೆಗೆ ಈ ಮತುಕತೆಗೆ ಎಳೆಯುತ್ತಿದ್ದೀರ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಾಮರರ ಅಭಿಪ್ರಾಯವೇನು?
--------------ಏನಿದು' ಪ್ರಭಾಪ್ರಬುತ್ವ' .? ..ಅದು ಪ್ರಜಾ ಆಗಿರಬೇಕಿತ್ತು ಅನ್ಸುತ್ತೆ. ನೋಡುದ್ರ ನಾನು ಡೆಮಕ್ರಸಿ ಯಾಕೆ ಬಳಸ್ದೆ ಅನ್ನೋದಕ್ಕೆ ಉತ್ರ ಇಲ್ಲೇ ಇದೆ. 'ಪ್ರಜಾಪ್ರಬುತ್ವ' ಎಳ್ಳಷ್ಟು ಕನ್ನಡದ ಸೊಗಡಿಗೆ ಹೊಂದಿಕೊಳ್ಳುವುದಿಲ್ಲ. ಕನ್ನಡದಲ್ಲಿ ಮೊದಲ ಅಕ್ಕರ ಬೆಂಜನಕ್ಕೆ ಬೆಂಜನ ಒತ್ತಾಗಿ ಬರುವುದಿಲ್ಲ. ಅದರ ಬದಲು 'ಡೆಮಾಕ್ರಸಿ' ನಂಗೆ ಉಲಿಯಲು ಬರೆಯಲು ಸಲೀಸು. ಹಿಂಜರಿಕೆಯಲ್ಲ, ಯಾವುದು ಸಲೀಸು ಮತ್ತು ಹೆಚ್ಚು ಜನರಿಗೆ ಅದು ಅರಿತ ಆಗುತ್ತೆ ಅಂತ ತಿಳಿದು ಅದನ್ನೇ ಬಳಸ್ತಿನಿ.--------------
ಹೌದು ಗುರುಗಳೆ, ಅದು ಪ್ರಜಾ ಆಗ್ಬೇಕಿತ್ತು. ಕೀಲಿ ಕುಟ್ಟುವಾಗ ತಪ್ಪು ಆಗಿದೆ. ಆದ್ರೂ ಕಿಲಾಡಿ ನೀವು, ಅದನ್ನೇ ಉತ್ರ ಮಾಡ್ಕೊಂಡು ಬಿಟ್ರಲ್ಲ !! ಆದ್ರೂ ಉತ್ರ ಅದಲ್ಲ ಬಿಡಿ.

ಅದ್ಯಾವುದೋ ಬೆಂಜನ ಅನ್ವಯಿಸಿ ಹೇಳಿ ಅದು ಕನ್ನಡಕ್ಕೆ ಸರಿಹೊಂದೋಲ್ಲ ಅಂತ ಹೇಳ್ತೀರಾ ಒಂದು ಕಡೆ. ಇನ್ನೊಂದು ಕಡೆ ಯಾವುದೇ ವ್ಯಾಕರಣದ ಸಂಬಂಧವೇ ಇಲ್ಲದ ’ಡೆಮಾಕ್ರಸಿ ’ ಬಳಸಿ ಅಂತೀರಾ !!! ಡೆಮಾಕ್ರಸಿ ಕನ್ನಡದ ಸೊಗಡಿಗೆ ಹೊಂದಿಕೊಳ್ತದಾ? ಇದ್ಯಾವ ನ್ಯಾಯ ಸ್ವಾಮಿ !! ಅಂದರೆ ಇಂಗ್ಲೀಷು ಹೆಂಗೆ ಬಳಸಿದರೂ ಒ.ಕೆ. ಕನ್ನಡ ಮಾತಾಡುವಾಗ ಮಾತ್ರ ಹುಷಾರಾಗಿ ನೋಡ್ಕೊಂಡು ಅದು ಕನ್ನಡವಾ, ಸಂಸ್ಕೃತವಾ, ವ್ಯಾಕರಣ ಬದ್ಧವಾ ಎಲ್ಲಾ ನೋಡ್ಕೊಂಡು ಕೊನೆಗೆ ನಾಲಗೆ ಹೊರಳ್ತದೋ ಇಲ್ಲವೋ ನೋಡ್ಕೊಂಡು ಮಾತಾಡಿ ಅಂತಿರಾ!! ನಾಲಗೆ ಹೊರಳಲಿಲ್ಲಾ ಅಂದ್ರೆ ಅದನ್ನ ಕಲಿಯದೇ ಬೇಡ, ಅದೇ ಜಾಗದಲ್ಲಿ ಇಂಗ್ಲೀಷಿಗೆ ನಾಲಗೆ , ಬುದ್ಧಿ ಎರಡನ್ನೂ ಹೊರಳಿಸಿಕೊಂಡು ಬಿಡಿ ಅಂತ ನೀವು ಹೇಳೋದು
ಡೆಮಾಕ್ರಸಿ ಅಂದ್ರೆ ’ಬಹುಜನ’ರಿಗೆ ಅರ್ಥಾಗತ್ತೆ ಅನ್ನೋದು ಒಪ್ಪಕಾಗಲ್ಲ ಸಾರ್. ಬೇಕಾದ್ರೆ ಸಂಪದದಲ್ಲಿ ಹೆಚ್ಚು ಜನರಿಗೆ ಅರ್ತಾಯ್ತದೆ ಅಂತ ಇಟ್ಕಳವ.
ಬಿಡಿ, ಏನೂ ’ಸುರು ’ ಮಾಡ್ಕಳಕ್ಕೋಗಿ ಏನೋ ಆಗೋಯ್ತದೆ ಆಮೇಕೆ.
ಉ: ಪಾಮರರ ಅಭಿಪ್ರಾಯವೇನು?
ಅದ್ಕ್ಕೆ ಹೇಳಿದ್ದು ಸಂಕ್ರ ಬಟ್ರು ಹೊತ್ತಿಗೆ, ಕವಿರಾಜಮಾರ್ಗ ಓದುದ್ರೆ ಗೊತ್ತಾಗುತ್ತೆ ಯಾವುದ್ ಕನ್ನಡಕ್ಕೆ ಹೊಂದ್ಕೊಳ್ಳುತ್ತೆ ಅಂತ. ನೀವು ಓದಿದಿರಾ?
"ಅದ್ಯಾವುದೊ ಬೆಂಜನ" ಅಂದ್ರೇನರ್ತ... ಬೆಂಜನ ಏನೆಂದು ಗೊತ್ತಿಲ್ಲದ ನೀವು ಕನ್ನಡದ ಸೊಗಡಿನ ಬಗ್ಗೆ ಮಾತನಾಡುವುದು ಸರಿಯೇ?
"..’ಡೆಮಾಕ್ರಸಿ ’ ಬಳಸಿ ಅಂತೀರಾ !!! ಡೆಮಾಕ್ರಸಿ ಕನ್ನಡದ ಸೊಗಡಿಗೆ ಹೊಂದಿಕೊಳ್ತದಾ? ಇದ್ಯಾವ ನ್ಯಾಯ ಸ್ವಾಮಿ..."
ಹೌದು...ಸಯ್ಪೇ/ನ್ಯಾಯನೇ...ಅದಕ್ಕೆ ಓಸುಗರಗಳನ್ನು ನೀಡಿದ್ದೀನಿ. ಬೇಕಾದರೆ ಇನ್ನೊಂದು ಸಲ ಓದಿ, ಸುಮ್ನೆ '!!!!' ಇವನ್ನು ಬಳಸಿ ಅದಕ್ಕೆ ಅಚ್ಚರಿ ತೋರಿಸಬೇಕಾಗಿಲ್ಲ.
ಹಾಗೇನೆ ಇಂಗಲೀಸಿನ 'ಸ್ಟಾರ್ಟ್' ಯಾಕೆ ಹೊಂದ್ಕೊಳಲ್ಲ ಅಂತಾನೂ ಬರೆದಿದ್ದೀನಿ. ಇದೇ ತೋರಿಸುತ್ತೆ ನನಗೆ ಯಾವ ನುಡಿಯ ಪರ ಅತ್ವ ಇರೋದ ಇಲ್ಲ ಅಂತ.
ನನಗೆ ಬೇಕಾಗಿರೋದು ಕನ್ನಡದಲ್ಲಿ ಸಿಕ್ಕಿದ್ರೆ ಅದನ್ನೇ ಬಳಸ್ತಿನಿ. ಸಿಗ್ದೇ ಇದ್ದಾಗ ಈ ರೀತಿ ಕನ್ನಡ ಸೊಗಡಿಗೆ ಯಾವುದು ಹೊಂದ್ಕೊಳ್ಳುತ್ತೆ ಅದನ್ನ ಬಳಸ್ತಿನಿ. ನನಗೇನೊ ನಿಮ್ಮ ತರ ಸಕ್ಕದದ ಬಾಲನೇ ಅತ್ವ ಇಂಗಲೀಸ್ ಬಾಲನೇ ಹಿಡ್ಕಬೇಕು ಅಂತ ಇಲ್ಲ
ರೀ ನಿಮ್ಗೆ ಗೊತ್ತು.. ಸುಮ್ನೆ ಮಾತು ಬೆಳೆಸ್ತ ಇದ್ದೀರ.. ಒಂದು ಹೊಸ ಎಳೆ ತೆಗೀರಿ ಕನ್ನಡದ ಸೊಗಡಿಗೆ ಹೊಂದ್ಕೊಳ್ಳುವ ಪದಗಳು ಹೇಗಿರಬೇಕು ಅಂತ. ಅಲ್ಲಿ ಇದರ ಬಗ್ಗೆ ಮಾತಾಡೋಣ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಾಮರರ ಅಭಿಪ್ರಾಯವೇನು?
``ಹಿಂಜರಿಕೆಯಲ್ಲ, ಯಾವುದು ಸಲೀಸು ಮತ್ತು ಹೆಚ್ಚು ಜನರಿಗೆ ಅದು ಅರಿತ ಆಗುತ್ತೆ ಅಂತ ತಿಳಿದು ಅದನ್ನೇ ಬಳಸ್ತಿನ''
ಇದೇ ಮಾಪನವನ್ನು ಇಟ್ಟುಕೊಂಡರೆ ಯಾವ ಪಂಡಿತರ ವಾದಕ್ಕೂ ಅರ್ಥವಿರೋದಿಲ್ಲ ಅಲ್ಲವೇ? ಪ್ರಜಾಪ್ರಭುತ್ವ ಎಂಬ ಪದ ನಿಮಗೆ ಸಲೀಸಲ್ಲ ಎಂಬ ಕಾರಣಕ್ಕೆ ನೀವು ಡೆಮಾಕ್ರಸಿ ಎಂಬ ಪದವನ್ನು ಬಳಸುತ್ತಿದ್ದೀರಿ. ನಮ್ಮ ಮಾಯ್ಸ್ ಅಣ್ಣನ ಒಂದು ಪ್ಯಾರಾವನ್ನು ಓದಲು ಬೇಕಾದ ಸಮಯದಲ್ಲಿ ದಿನಪತ್ರಿಕೆಯನ್ನು ಇಡೀ ಓದಿ ಮುಗಿಸಬಹುದು ಅನ್ನಿಸಿದಾಗ ಯಾವುದು ಸಲೀಸು ಅನ್ನೋ ಪ್ರಶ್ನೆ ಬರುತ್ತದೆ. ಅಲ್ಲವಾ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
ಉನಿಕ್ ಸುಪರಿ..
೧) ನಾನೆಂದೂ ನಾನ್ ಬರೆಯೋದು ಸಲೀಸಾಗಿ ಅರಿಯಬಲ್ಲದೆಂದು ಹೇಳಿಕೊಂಡಿಲ್ಲ.. ನಾನ್ ಬರೆದವನ್ನು ನೀವ್ ಅಶ್ಟೊಂದ್ ಕಶ್ಟ್-ಪಟ್ ಓದ್ಬೇಕಾ? ಓದಿ ಅದಕ್ಕೆ ಮಾರುಲಿಬೇಕಾ? ಬಿಟ್ಟುಬಿಡಬೋದಲ್ಲ.
೨) ಕನ್ನಡದ ಈಗೀನ ಸುದ್ದಿಯೋಲೆಗಳ ನುಡಿಯ ಬಗ್ಗೆ ಹೇಳೋದೇ ಬೇಡ.. ಅವೆಲ್ಲ ಸಕ್ಕತ್ ಶ್ರೇಷ್‌ಷ್‌ಠ.. ಅದಕ್ಕೆ ೪-೬ ಕೋಟಿ ಕನ್ನಡಿಗರು ಇರೋ ನೆಲದಲ್ಲಿ, ಬರೀ ೨೦-೩೦ ಲಕ್ಶ ಆ ಪೇಪರ್ ಓದೋದು..
ಅಂದ್ರೆ ಡೆಮಾಕ್ರಸಿ ಅಂತೆ ಕನ್ನಡ-ಪೇಪರ್ ಓದದೇ ಇರೋರೇ ಹೆಚ್-ಅದಾರೆ. ಅವರ್ ಓದದೇ ಇರೋಕ್ಕೆ ಓಸುಗರ.. ವರ್ತಮಾನ-ದಿನ-ಪತ್ರಿಕೆಯ ಹೆಚ್ಚ ಮೂಲ ಕನ್ನಡಿಗರಿಗೆ ಭರಿತಸಸಂಸ್ಕೃತಕ್ಲಿಷ್ಟೋಚ್ಚರಣಾಸಾಧ್ಯಗ್ರಾಹ್ಯದುರ್ಗಮಭಾಷಾಪ್ರಯೋಗೋತ್ಕರ್ಷವಾದ ಬರೆವಣಿಗೆ. ಇದು ಉತ್ಪ್ರೇಕ್ಷೆ ಎಂದು ಅನ್ನಿಸಿದರು, ಹಲವು ಕನ್ನಡಿಗರಿಗೆ ಅದು ಅಂತೇ.
.....
ಕೆಳಗಿನ ಮಾತುಗಳನ್ನು ಜಾತಿಹಗೆ, ಹಾರುವ-ಹಗೆ ಎಂದು ಅಂದುಕೊಳ್ಳುವವರು... ಹಾಗೆ ಅಂದುಕೊಳ್ಳಬೇಡಿ
.. ಇದು ಒಂದು ಅನಿಸಿಕೆಯಲ್ಲ, ದೊಡ್ಡ ದೊಡ್ಡ ಮಂದಿ ಹೇಳಿರುವ ದಿಟ.
ಬಲು ಹಿಂದೆ ನಮ್ಮ ನಾಡಿನಲ್ಲಿ ಹಾರುವ/ಬ್ರಾಹ್ಮಣರು ಮತ್ತು ಜಯ್ನರು, ಬರೀ ಈ ಎರಡು ಪಂಗಡದವರು ಓದಿ-ಬರೆದು ಮಾಡುತ್ತಿದ್ದರೂ. ಹಾರುವರು ಸಂಸ್ಕೃತಾಭಿಮಾನಿಗಳು, ಅವರಿಗೆ ಅದೊಂದೇ ಎಂದೂ ಮೇಲ್ಮಟ್ಟದ ದೇವಭಾಷೆ. ಜಯ್ನರು ಪ್ರಾಕೃತಾಭಿಮಾನಿಗಳು.
ಇದು ಹೞಗನ್ನಡದ ಕಾಲ. ಆ ಕಾಲದ ಕನ್ನಡ-ಸಾಹಿತ್ಯ ಅದಕ್ಕೇ ಸಿಕ್ಕಾಪಟ್ಟೆ ಸಂಸ್ಕೃತ-ಪ್ರಾಕೃತದಿಂದ ಬರೆತುಕೊಂಡಿದೆ. ಹಾಗೂ ಅಂತಹ ಸಾಹಿತ್ಯಕ್ಕೇ ರಾಜಾಶ್ರಯ ಸಿಕ್ಕಿದೆ
ಬಳಿಕ ಸಮಾನತೆಗಾಗಿ ಹೋರಾಟ, ಬಸವಣ್ಣರ ಕಾಲ. ಓದು ಬರಹ ಹಾರುವ, ಜಯ್ನರಲ್ಲದೇ ಬೇರೆಯವರೂ ಆದ ಲಿಂಗಾಯತ-ವೀರಶಯ್ವರು+, ಮಾಡತೊಡಗಿದ ಕಾಲ. ಅದಕ್ಕೆ ನಡುಗನ್ನಡದಲ್ಲಿ ಅಚ್ಚಗನ್ನಡದ ಪದಗಳು, ತದ್ಭವಗಳು ಹೆಚ್ಚು. ಇಲ್ಲೇ ದಿಟವಾದ ಸಾಮನ್ಯ ಮಂದಿ/ಜನರ ಬಾಯಿತಲುಪಿಸ ಸಾಹಿತ್ಯ ಹುಟ್ಟಿಕೊಂಡ ಕಾಲ. ( ದಾಸ ಸಾಹಿತ್ಯ ಕೂಡ ಸರಳವಾದ ಕನ್ನಡ )
ಆಮೇಲೆ.. ಬ್ರಿಟೀಶರ ಮತ್ತು ಒಡೆಯರ ಆಳ್ವಿಕೆ. ಇಲ್ಲಿ ಮತ್ತೆ ಹಾರುವರು ಪ್ರಧಾನ್ಯತೆ ಪಡೆದ ಕಾಲ. ಮತ್ತೆ ಹೞಗನ್ನಡದಂತೆ ಸಂಸ್ಕೃತದಿಂದ ತುಂಬಿದ ಕನ್ನಡಪ್ರಯೋಗದ ಕಾಲ. ಈ ಕಾಲದಲ್ಲೇ ಹುಟ್ಟಿಕೊಂಡವು ಈಗಿನ ದಿನಪತ್ರಿಕೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಇತ್ಯಾದಿ, ಇತ್ಯಾದಿ. [ ಕುವೆಂಪೂ ಕೂಡ ಈ ಕಾಲದವರೇ, ಅದಕ್ಕೆ ಅವರ ಬರವಣಿಗೆಯೂ ಆ ಶಯ್ಲಿಯಲ್ಲಿದೆ. ಅವರ ಕಾಲಕ್ಕೆ ಆ ಭಾಷಾಶಯ್ಲಿ. ಇದಕ್ಕೆ ಕುವೆಂಪು ಅವರನ್ನು ದೂಷಿಲಾರದು; ಹಾಗೆಂದು ಅದೇ ಶಯ್ಲಿ ಇರಲೇ ಬೇಕೆನ್ನಲಾರದು ]
ಈ ಕಾಲದ ಹೆಚ್ಚು-ಸಿನಿಮಗಳಲ್ಲೂ ಕೂಡ ಪವ್ರಾಣಿಕ ಇಲ್ಲವೇ ಹಾರುವ ಸಂಪ್ರದಾಯ ತೋರುವವು. ( ಕುಜದೋಷದ ’ಸಾಕ್ಷಾತ್ಕಾರ’ ಸೂಪರ್ ಹಿಟ್ : ) )
ಈ ಕಾಲದ ಮುಂದಿನ ಈಗಿನ ಕಾಲ, ಅದು ಏನು ಅಂತ ನಮ್ಮ ಸಿನಿಮ ತೋರಿಸಿಕೊಡುತ್ತಿವೆ.
ನೀವಿನ್ನೂ ’ಸಾಕ್ಷಾತ್ಕಾರ’ದ ಕಾಲದಲ್ಲಿದ್ದೀರಿ, ಇಲ್ವೇ ನಿಮ್ಮ comport zone ಆ ಬಗ್ಗೆಯ ವಾತಾವರಣದಲ್ಲಿದೆ. ಇದು ನಿಮ್ಮ ವಯ್ಯಕ್ತಿಕ ಒಳ composition. ನೀವು ನಿಮ್ಮ ಆ ಒಳ-ಚವ್ಕಟ್ಟನ್ನಲ್ಲೇ ಇರಲು ಬಯಸುವಿರಿ, ಆ ಕಾರಣದಿಂದ ನಿಮ್ಮ ಅಭಿಮಾನ, ನೀವು ಹೊಂದಿಕೊಂಡಿರುವ ಸಂಸ್ಕೃತ-ಬರೆತ ಕನ್ನಡದ ಮೇಲೆ.
ಇಂಗ್ಲೀಶಲ್ಲಿ ಹೇಳಿದ್ರೆ "I am very comfortable and happy with it, let it be so. I don't care what others have with it ".
ಕೊನೆ ಮಾತು.. ನೀವು ’ಸಾಕ್ಷಾತ್ಕಾರ’ದ set-up ಮೆಚ್ಚುವವರು, ನಾನ್ 'ದುನಿಯಾ”ಮುಂಗಾರು ಮಳೆ’’ಗಾಳಿಪಟ”ಇಂತಿ ನಿನ್ನ ಪ್ರೀತಿಯ’ setup ಅಲ್ಲಿ ಬಳೆದವನು, ಮೆಚ್ಚುವವನು, ಪಾಡು ಹೀಗಿರುವಾಗ, ನಾನು ನಿಮಗೆ, ನೀವು ನನಗೆ ಹಿಡಿಸದೇ ಹೋಗುವುದರಲ್ಲಿ ಯಾವ ನಿಬ್ಬರ ಅಚ್ಚರಿ ಇಲ್ಲ..
ವಿಚಾರವಿಭನ್ನತೆಗೆ ಸಹಿಷ್ಣುತೆ ಇರಲಿ/ಇರಬೇಕು.
ಅದು ಸಿಕ್ಕಾಪಟ್ಟೆ ’ಧರ್ಮ’ ಎಂಬ ಹೆಸರಿನ ಅಚಾರದ ಕಟ್ಟಳೆಗೆ ಅಂಟಿಕೊಂಡವರಲ್ಲಿ ಕಡಮೆ. ನಿಮ್ಮ ಬರಹಗಳನ್ನು ಓದಿದರೆ ನೀವು ಅಂತಹವರೇ ಎಂದು ನನಗೆ ಅನ್ನಿಸಿದೆ.
......
ಅದೆಲ್ಲ ಸರಿ.. ಈ ’ಪಾಮರರ’ ಚರ್ಚೆ ಎಬ್ಬಿಸಿದ ಶಾಸ್ತ್ತಿಗಳು ನಾಪತ್ತೆ! ಅವರು ಶಂಕರಭಟ್ಟರ ಹೊತ್ತೆಗೆಗಳನ್ನು ಓದುತ್ತಿದ್ದರೆ, ನನಗೆ ಸಕ್ಕತ್ ನಲಿವು.. ಕಾಲಕ್ಷೇಪಕ್ಕೆ ಮತ್ತೊಂದು ಸಂಸ್ಕೃತ-ಸಮ್ಮೇಳನಕ್ಕೆ ಹೋಗಿದ್ದರೆ, ಸಿಕ್ಕಾಪಟ್ಟೆ ನಗು..
ಗೆಲ್ಗೆ ಕನ್ನಡಂ, ಜಯತು ಸಂಸ್ಕೃತಂ...
ಆದರೆ ’ಸಂಸ್ಕೃತಂ ಮಾ ಜಯತು ಕನ್ನಡಂ !!":)
ಉ: ಪಾಮರರ ಅಭಿಪ್ರಾಯವೇನು?
೧. ಮೊದಲಿಗೆ, ನಾನು ಪ್ರತಿಕ್ರಿಯಿಸಿರುವುದು ವೈಭವರಿಗೆ. ನಾನೆಲ್ಲೂ ನಾನು ನೀವು ಬರೆದದ್ದನ್ನು ಕಷ್ಟ ಪಟ್ಟು ಓದಿ ಮಾರುತ್ತರ ಕೊಟ್ಟಿಲ್ಲ.
೨. ಪಕ್ಕದ ತಮಿಳ್ ನಾಡಿನಲ್ಲಿ ಪೇಪರ್ ಓದುವ ಸಂಖ್ಯೆ ಎಷ್ಟಿದೆಯೋ! ಇದೆಂಥಾ ಸ್ಟ್ರಾ ಮನ್!
೩. ನಿಮ್ಮ ಸಂಸ್ಕೃತ ಹಗೆ ಯಾವ ಜಾತಿ ಹಗೆಗಿಂತ ಕಡಿಮೆ ಹರಿತವಾದುದಲ್ಲ ಎನ್ನುವುದು ನನ್ನ ಭಾವನೆ. ಕನ್ನಡದಲ್ಲಿ ಬರೆಯುವ ಎಷ್ಟೋ ಮಂದಿ ತಾವು ಬಳಸುತ್ತಿರುವುದು ಸಂಸ್ಕೃತದ ಪದಗಳೋ, ಅಚ್ಚ ಕನ್ನಡದ ಪದಗಳೋ ಎಂಬ ರಗಳೆಯಿಲ್ಲದೆ ನೆಮ್ಮದಿಯಿಂದ ಬರೆಯುತ್ತಿದ್ದಾರೆ ಓದುಗರು ಓದಿಕೊಳ್ಳುತ್ತಿದ್ದಾರೆ. ಅವರಿಗೆ ಅದು ಸಲೀಸು ಅನ್ನಿಸುತ್ತಿದೆ. ಹೀಗಿರುವಾಗ ಕೇವಲ ಒಂದು ಅಭಿಪ್ರಾಯವಾಗಿರುವ, ಮೂಲ ಕನ್ನಡದ ಪದಗಳ ಬಳಕೆ ಬಗೆಗಿನ ಚರ್ಚೆಯನ್ನೇ ಸರ್ವಸ್ವವಾಗಿಸಿಕೊಂಡಿರುವುದು ಪಂಡಿತರ ‘ಜಾತೀ’ಯತೆಯಾಗಿ ಕಾಣಿಸುತ್ತಿದೆ. ಅದಕ್ಕಾಗಿಯೇ ಈ ಟಾಪಿಕ್ ಆರಂಭಿಸಿದವರು ‘ಪಾಮರ’ರ ಅಭಿಪ್ರಾಯವನ್ನು ಕೇಳಿರುವುದು.
೪. ಭಾಷೆ ಸಂವಹನ ಮಾಧ್ಯಮ. ಸಂವಹಿಸುವ ವಿಚಾರಗಳು ಮುಖ್ಯವಾದವು. ಮಾಧ್ಯಮದ ಬಗ್ಗೆ ಆರೋಗ್ಯಕರವಾದ ಚರ್ಚೆ ಇರಬೇಕಾದ್ದೇ, ಆದರೆ ವಿಪರೀತಕ್ಕೆ ಹೋಗಿ ಅಂಧ ಅಭಿಮಾನಿಯಾಗಿ ಮಾತನಾಡುವುದು ಎಷ್ಟು ಶ್ರೇಯಸ್ಕರ? ಅದೇನೋ ಹೇಳಿದಿರಲ್ಲ ವಿಚಾರ ಭಿನ್ನತೆಗೆ ಸಹಿಷ್ಣುತೆ ಇರಲಿ ಅಂತ, ನೀವು ತೋರಿಸುತ್ತಿರುವ ಸಹಿಷ್ಣುತೆ ಅದಕ್ಕೆ ಮಾದರಿಯಾ? “ಕಾಲಕ್ಷೇಪಕ್ಕೆ ಮತ್ತೊಂದು ಸಂಸ್ಕೃತ-ಸಮ್ಮೇಳನಕ್ಕೆ ಹೋಗಿದ್ದರೆ, ಸಿಕ್ಕಾಪಟ್ಟೆ ನಗು.. ”
೫. “ನೀವು ’ಸಾಕ್ಷಾತ್ಕಾರ’ದ set-up ಮೆಚ್ಚುವವರು, ನಾನ್ 'ದುನಿಯಾ”ಮುಂಗಾರು ಮಳೆ’’ಗಾಳಿಪಟ”ಇಂತಿ ನಿನ್ನ ಪ್ರೀತಿಯ’ setup ಅಲ್ಲಿ ಬಳೆದವನು, ಮೆಚ್ಚುವವನು, ಪಾಡು ಹೀಗಿರುವಾಗ, ನಾನು ನಿಮಗೆ, ನೀವು ನನಗೆ ಹಿಡಿಸದೇ ಹೋಗುವುದರಲ್ಲಿ ಯಾವ ನಿಬ್ಬರ ಅಚ್ಚರಿ ಇಲ್ಲ..” ಇನ್ನೊಬ್ಬರ ವಿಚಾರವನ್ನು ಸಮಗ್ರವಾಗಿ, ಸಂಯಮಯುತವಾಗಿ ಕೇಳಿಸಿಕೊಳ್ಳುವ ತಾಳ್ಮೆಯಿಲ್ಲದವರು ಮಾತ್ರ ಇನ್ನೊಬ್ಬರ ಬಗ್ಗೆ ಈ ಬಗೆಯ ತೀರ್ಮಾನಗಳಿಗೆ ಬರಬಹುದು. ನಿಮ್ಮ ಮಾಹಿತಿಗಾಗಿ: ‘ಸಾಕ್ಷಾತ್ಕಾರ’ದ ಕಾಲದಲ್ಲಿ ನಾನು ಹುಟ್ಟಿಯೇ ಇರಲಿಲ್ಲ. ಅಸಲಿಗೆ ಆ ಸಿನೆಮಾವನ್ನು ನಾನು ನೋಡಿಯೇ ಇಲ್ಲ. ಇನ್ನೊಬ್ಬರನ್ನು ನಿಮ್ಮ ಕಚ್ಚಾ ಮಾಪನಗಳಿಂದ ಅನಲೈಸ್ ಮಾಡುವ ಶ್ರಮ ತೆಗೆದುಕೊಳ್ಳಬೇಡಿ.
೬. “ಅದು ಸಿಕ್ಕಾಪಟ್ಟೆ ’ಧರ್ಮ’ ಎಂಬ ಹೆಸರಿನ ಅಚಾರದ ಕಟ್ಟಳೆಗೆ ಅಂಟಿಕೊಂಡವರಲ್ಲಿ ಕಡಮೆ. ನಿಮ್ಮ ಬರಹಗಳನ್ನು ಓದಿದರೆ ನೀವು ಅಂತಹವರೇ ಎಂದು ನನಗೆ ಅನ್ನಿಸಿದೆ.” ಇದಪ್ಪಾ ವರಸೆ... ಮಾಯ್ಸ್ ಅಣ್ಣ ಆಗಲೇ ನ್ಯಾಯಾಧೀಶರಾಗಿ ಬಿಟ್ಟರು. ಕೊಡಿ, ನಿಮ್ಮ ತೀರ್ಪುಗಳನ್ನು... ಇದು ನಿಮ್ಮ so called comfort zone ಆಗಿರಬಹುದು.
ಇಂತಿ,
ಒಬ್ಬ ಪಾಮರ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
ಪೂರ ನನ್ನ ಮೇಲೆ ಕಮೆಂಟು..
ಸೂಪರ್..!!!
ನನ್ನ ಓದಲಾರದ ಕನ್ನಡ ಇವರಿಗ ಅರಿತವಾಗ್ತದೆ ಅನ್ನೋದು ನನ್ನ ನಲಿವು.. ಅದಕ್ಕೆ ಅಶ್ಟುದ್ದು ಬರೆ/ಕೊರೆದುದು( ಪಾಪಾ ಓದಕ್ಕೆ ಕಶ್ಟ ಅಂದ್ರು.. )
ಇರಲಿ..
ಈಗ ಚರ್ಚೆಯ ಸರಣಿಯಲ್ಲಿ ಯಾವ ಬದಲಾವಣೆಯಿಲ್ಲ..!!
ಉ: ಪಾಮರರ ಅಭಿಪ್ರಾಯವೇನು?
ಮಾಯ್ಸ್ ಗುರುಗಳೇ
ನಿಮ್ಮ ವ್ಯಂಗ್ಯಕ್ಕೆ ನೀವೇ ನಗಬೇಕಷ್ಟೇ....
ನನಗಿಂತ ಮುಂಚೆ ಅಷ್ಟುದ್ದದ ಕಮೆಂಟನ್ನು ಬರೆದದ್ದು (ನೀವು ಅದನ್ನು ‘ಕೊರೆದದ್ದು’ ಎಂದು ಭಾವಿಸುತ್ತೀರೇನೋ) ಯಾವುದರ ಬಗ್ಗೆ? ಆವಶ್ಯಕತೆಯಿಲ್ಲದೆ ‘ಸಾಕ್ಷಾತ್ಕಾರ’ ಮನಸ್ಥಿತಿಯವರು ಮುಂತಾಗಿ ಬರೆದದ್ದು ಚರ್ಚೆಯ ವ್ಯಾಪ್ತಿಗೆ ಸೇರುತ್ತದೆಯೇ?
ಸಾಕು ಬಿಡಿ ಸುಮ್ಮನೆ ಯಾಕೆ ಮಾತು ಅಲ್ಲವಾ? ನಾನಂತೂ ಇನ್ನೊಂದು ಅಕ್ಷರ ಬರೆಲಾರೆ ಇಲ್ಲಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
"ನಾನಂತೂ ಇನ್ನೊಂದು ಅಕ್ಷರ ಬರೆಲಾರೆ ಇಲ್ಲಿ.."
.....ದೊಡ್ಡ ನನ್ನಿ.. ಅದೇ ನನಗೂ ಬೇಕಾಗಿದ್ದು.. ನೀವು ಇಲ್ಲಿ ಬರೆಯುವದರಿಂದ ಈ ಚರ್ಚೆಗೆ ಯಾವ ಬಾಳಿಕೆ ಇಲ್ಲ ಎಂದೇ ನನ್ನ ಅನಿಸಿಕೆ...
ಈಶ್ವರ ಶಾಸ್ತ್ರಿಗಳೇ!! ( ಯುನಿಕ್ ಸುಪ್ರಿ.. ನಿಮಗಲ್ಲ )
.....ಒಟ್ನಲ್ಲಿ, ನಿಮ್ಮ ನಾವ್ ಏನ್ ಹೇಳಿದ್ವು ಅಂತ ತಿಳಿದಿದೆ ಎಂದು ಅನ್‌ದುಕೊಂಡಿದ್ದೀವಿ..
ಉ: ಪಾಮರರ ಅಭಿಪ್ರಾಯವೇನು?
ರೀ ಯೂನಿಕ್ ಸುಪ್ರಿ,
ನಾನು ಡೆಮಾಕ್ರಸಿ ಯಾಕೆ ನಂಗೆ ಸಲೀಸು ಅಂತ ಹೇಳಿದ್ದೇನೆ. ಅದು ಬಿಟ್ಟು ಮಾಯ್ಸ್ ಅಣ್ಣನ ಇಸ್ಯ ಇಲ್ಲಿ ಯಾಕೆ?
ನೀವು ಡೆಮಾಕ್ರಸಿಗಿಂತ ಪ್ರಜಾಪ್ರಭುತ್ವ ಸಲೀಸು ಅಂತ ತೋರಿಸಿ. ಆಗ ಅದನ್ನೆ ಬಳಸ್ತಿನಿ. ಅದು ಬಿಟ್ಟು ಸುಮ್ನೆ ಮೇಲ್ ಮೇಲೆ ಮಾತಾಡಿದ್ರೆ ಏನೂ ಬಳಕೆಯಿಲ್ಲ.
ನಮ್ ರಾಜ್ಯದ ಮುಕ್ಯಮಂತ್ರಿಯಾಗಿದ್ದ ಕುಮಾರ್ ಸಾಮಿಗೆ ಮಹಾಪ್ರಾಣ ಉಲಿಯಕ್ಕಾಗಲ್ಲ. ಇನ್ನು ಬಡಪಾಯಿಗಳಾದ ನಾವ್ ಯಾವ ಲೆಕ್ಕ
ಕನ್ನಡದ ಪದಗಳ ಮೊದಲಕ್ಕರ ಬೆಂಜನಕ್ಕೆ ಬೆಂಜನ ಒತ್ತಾಗಿ ಬರುವುದಿಲ್ಲ. ಆದ್ದರಿಂದ ಪ್ರಜಾಪ್ರಬುತ್ವ ಕನ್ನಡಕ್ಕೆ ಎಳ್ಳಶ್ಟು ಹೊಂದುವುದಿಲ್ಲ.
ಒಪ್ತಿರಾ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಾಮರರ ಅಭಿಪ್ರಾಯವೇನು?
ವೈಭವ,
ವಸಿ ಕೂಲಾಗಿ.
ನಿಮಗೆ ಪ್ರಜಾಪ್ರಭುತ್ವಕ್ಕಿಂತ ಡೆಮಾಕ್ರಸಿ ಸರಳವೆನಿಸಿದರೆ ಅದನ್ನೇ ಬಳಸಿ ಹಾಗೂ ಹೀಗೆ ಬಳಸಿದರೆ ಸರಳವಲ್ಲವಾ ಎಂದು ಬೇಕಾದರೆ ಶಿಫಾರಸ್ಸು ಮಾಡಿ. ಆದರೆ ಎಲ್ಲರೂ ಇದನ್ನೇ ಬಳಸ್ಬೇಕು ಹಾಗೆ ಬಳಸದಿದ್ದವರು ಸಂಸ್ಕೃತ ಅಭಿಮಾನಿಗಳು ಕನ್ನಡ ವಿರೋಧಿಗಳು ಎಂದು ಮಾತನಾಡುವುದರ ಬಗ್ಗೆ ನನ್ನ ವಿರೋಧವಿದೆ.
ಎಷ್ಟು ಜನ ಕನ್ನಡದಲ್ಲಿ ಬರೆಯುತ್ತಿದ್ದಾರೆ, ಕನ್ನಡ, ಸಂಸ್ಕೃತ ಪದಗಳು ಯಾವ್ಯಾವು ಅಂತ ತಿಳಿಯದೆ, ಹೀಗಿರುವಾಗ ಸುಮ್ಮನೆ ವಾದಕ್ಕೆ ನಿಂತು ಎದುರಾಳಿಗಳನ್ನು ಸೃಷ್ಟಿಸಿಕೊಂಡು ಗಾಳಿಯಲ್ಲಿ ಗುದ್ದುವುದು ಏಕೆ ಎನ್ನುವುದು ನನ್ನ ಭಾವನೆ.
ಮುಖ್ಯಮಂತ್ರಿಗಳು ನಾವು ಬಳಸುವ ಭಾಷೆಗೆ ಯಾವಾಗ ಮಾಪನವಾದರು? ನಮ್ಮ ರಾಜ್ಯಪಾಲರಿಗೇ ಕನ್ನಡ ಕಲಿಯಲು ಇನ್ನೂ ಆಗದಿರುವಾಗ, ಅವರಿಗೆ ಹಿಂದಿಯೇ ಪ್ರಿಯವಾಗಿರುವಾಗ ಬೆಂಗಳೂರಿನಲ್ಲಿರುವ ನಾರ್ಥಿಗಳನ್ನೇಕೆ ಗೋಳುಹೊಯ್ದಿಕೊಳ್ಳಬೇಕು ಎಂದಂತಾಯ್ತು ನಿಮ್ಮ ಮಾತು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
"ಎಷ್ಟು ಜನ ಕನ್ನಡದಲ್ಲಿ ಬರೆಯುತ್ತಿದ್ದಾರೆ, ಕನ್ನಡ, ಸಂಸ್ಕೃತ ಪದಗಳು ಯಾವ್ಯಾವು ಅಂತ ತಿಳಿಯದೆ,"
ಹಾಗೋ..
ಪೇಪರಲ್ಲಿ ಒಂದು ಮಣ ಸಕ್ಕದ ಹಾಕಿಬರೆಯೋರಿಗೆ..[ ಮಾದರಿ: ರಾ ಗಣೇಶರ ಲೇಖ್ಹನಗಳು
], ಹೊಸಹೊಸ ಪದಗಳನ್ನು ಹುಟ್ಟಿಸಿ ಕನ್ನಡಕ್ಕೆ ಸೇರಿಸುವ ಪಂಡಿತೋತ್ತಮರಿಗೆ [ ಮಾದರಿ ಬ್ರಹ್ಮಾಂಡೀಯ, ಕೃತಕ ಗರ್ಭಧಾರಣೆ, ಕುಕ್ಕುಟ ಪಾಲನೆ, ಮಾತೃಭಾಷೆ] ಇವರೆಲ್ಲರಿಗೂ ಕನ್ನಡದೊರೆಯಾವುದು, ಸಕ್ಕದದುದಾವುದೆಂದು ಅರಿತೇ ಇಲ್ಲವೇ?
ಪಾಮರರು ಅನ್ನೊ ಪದ ಬಳಕೆ ಮಾಡಿದ ಜನಕ್ಕೆ, ಪಾಮರರೇ ಪಾಮರ ಅನ್ನೋ ಪದಬಳಕೆ ಮಾಡದೆ ಮಾಮೂಲಿ-ಮಂದಿ, ಸಾಮಾನ್ಯರು ಅಂತಾರೆ ಅಂತ ಗೊತ್ತಿಲ್ವೇ?
ಒಟ್ನನಲ್ಲಿ, ಈ ಚರ್ಚೆಗೆ ನಡುವೆ ತಂದೆಲ್ಲಿ ಅಂತ ಬಂದಂಗಾಯ್ತು ತಾವು..
ವಯ್ಬವ,,
....ಯಾಕ್ರೀ ಚರ್ಚೆಯ ತಿರುಳು ಬಿಟ್ಟುಹೋಯ್ತೀರಿ? [ ಕೆಲವರಿಗೆ ಏನ್ ಎಶ್ಟ ಹೇಳಿದ್ರೂ ಅರಿತವಾಗಲ್ಲ.. ]
ಉ: ಪಾಮರರ ಅಭಿಪ್ರಾಯವೇನು?
ಆಯ್ತು ಮೇಯ್ಸರೇ,
>>>> ಒಟ್ನನಲ್ಲಿ, ಈ ಚರ್ಚೆಗೆ ನಡುವೆ ತಂದೆಲ್ಲಿ ಅಂತ ಬಂದಂಗಾಯ್ತು ತಾವು.. >>>>
ಇದಪ್ಪಾ ವರಸೆ, ಸರಿ ಬಿಡಿ ನಿಮ್ಮ ಚರ್ಚೆ ನೀವೇ ಮುಂದುವರೆಸಿ... (ತಾವು ಮಾಡುತ್ತಿರುವುದನ್ನು ಚರ್ಚೆ ಎಂದು ನೀವು ನಂಬಿಕೊಂಡಿರುವಿರಾದರೆ ಮುಂದುವರೆಯಿರಿ....)
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
ಕಳಚಿಕೊಂಡಿದ್ದಕ್ಕೆ ನನ್ನಿ!
ಅದೇ ವರಸೆ.. ನಿಮ್ಮ ಕಮೆಂಟುಗಳಲ್ಲಿ ಏನಾರ ಲಿಂಗವಿಸ್ಟಿಕ್ ಆದ ಕೊಡುಗೆ ಇದೆಯೇ? ಏನೂಊಊಊ ಇಲ್ಲ.. ಅದಕ್ಕೆ ಅದೊಂದು ಬಿಟ್ಟಿ ಸ್ಕೋಪ್ ಅನ್ನಿಸ್ತು.. ಹೇಳಿದೆ..
ದೊಣ್ಣೆಗೆದರುವ ದಯ್ಯ, ಬಾಯಿಗೆ ಬಗ್ಗಲ್ಲವಂತೆ!
ಉ: ಪಾಮರರ ಅಭಿಪ್ರಾಯವೇನು?
ಮೇಯಿಸಣ್ಣ,
ಲೇಖನ ಬರೆದವರ ಆಶಯವನ್ನು ಹೈಜಾಕ್ ಮಾಡಿ ನಿಮ್ಮ ಪ್ರತಿಕ್ರಿಯೆ ಬರೆಯುವುದರಲ್ಲಿ ತಾವು ಎಕ್ಸ್ ಪರ್ಟ್ ಎಂಬುದನ್ನು ನಾನೇನು ಹೊಸದಾಗೆ ಹೇಳಬೇಕಿಲ್ಲ.
>>>>ಪಂಡಿತರ ಮಾತನ್ನು ಮೂಲೆಗೆ ಇಟ್ಟು, ಕನ್ನಡಿಗರ ಉಳಿವಿಗಾಗಿ, ಕನ್ನಡದಲ್ಲಿ ಬದುಕುವ ಪಾಮರರ ಅಭಿಪ್ರಾಯ ಸಂಗೃಹವನ್ನು ಪಾಮರರು ಕೈಕೊಳ್ಳಬಹುದಾಗಿದೆ.
ಪಾಮರರ ಅಭಿಪ್ರಾಯವೇನು? >>>>
ಹೀಗಂತ ಬರೆದದ್ದು ಈ ಲೇಖನದ ಬರಹಗಾರರು ಅದಕ್ಕಾಗಿ ನಾನು ಪ್ರತಿಕ್ರಿಯೆ ನೀಡಿದ್ದು. ನಿಮ್ಮಂತಹ ಪಂಡಿತರ ಲಿಂಗ್ವಿಸ್ಟಿಕ್ ಕೊಡುಗೆಯ ಸಾಧನೆಗಳ ಪಟ್ಟಿಯನ್ನು ಬೇರೆಲ್ಲಾದರೂ ಪ್ರಕಟಿಸಿ. ಭಾಷೆ ಬಗೆಗಿನ ಚರ್ಚೆಗಳಲ್ಲಿ ನೀವು ಎಬ್ಬಿಸಿರುವ ರಗಳೆ, ಮನಸ್ತಾಪಗಳನ್ನು ಒಮ್ಮೆ ಅವಲೋಕಿಸಿದರೆ ತಮ್ಮ ಸಾಧನೆಯೇನು ಅಂತ ತಿಳಿಯಬಹುದು.
ನಾರಾಯಣಗೌಡ್ರ ಥರ ಆಡ್ಬೇಡಿ...
_____________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪಾಮರರ ಅಭಿಪ್ರಾಯವೇನು?
"ನಾರಾಯಣಗೌಡ್ರ ಥರ ಆಡ್ಬೇಡಿ..."
ನಿಂಗೆ ನಾರಾಯಣ ಗವ್ಡರ ಕಂಡ್ರೆ ಥರಥರವಾ?
ಹೆಹೆ.. ಸಿಲ್ಲಿ!! ಬರೆಯಲಾರೆ ಅಂತ ಪೋಸ್ ಕೊಟ್ಟಿ ಮತ್ತೆ ಬರೆಯೋದೇ.. ವಚನ ಭ್ರಷ್ಟತೆ!
"ಭಾಷೆ ಬಗೆಗಿನ ಚರ್ಚೆಗಳಲ್ಲಿ ನೀವು ಎಬ್ಬಿಸಿರುವ ರಗಳೆ, ಮನಸ್ತಾಪಗಳನ್ನು ಒಮ್ಮೆ ಅವಲೋಕಿಸಿದರೆ ತಮ್ಮ ಸಾಧನೆಯೇನು ಅಂತ ತಿಳಿಯಬಹುದು. "
ವಾರೇ ವಾ.. !! ದೊಡ್ಡ ಮಾತು, ಸಣ್ ಮನ್ಸನಿಂದ!!
ತಾವ್ ತಮ್ ಬೆನ್ ನೋಡಿಕೊಳ್ಳಿ!! 
ಹರಿ.. ಈವಯ್ಯ ನನ್ ಬಗ್ಗೆ ಬರೆಯೋದು ನಿಲ್ಸಕ್ಕೆ ಹೇಳಪ್ಪ.. ಚರ್ಚೇಲಿ ಈವಯ್ಯ ಕಮೆಂಟು ತುಂಬಾ ನಾನೇ ಇದ್ದೀನಿ.. !! ಒಂಥರ ಕ್ರಶ್ಶು
ಉ: ಪಾಮರರ ಅಭಿಪ್ರಾಯವೇನು?
"....ಆದರೆ ಎಲ್ಲರೂ ಇದನ್ನೇ ಬಳಸ್ಬೇಕು ಹಾಗೆ ಬಳಸದಿದ್ದವರು ಸಂಸ್ಕೃತ ಅಭಿಮಾನಿಗಳು ಕನ್ನಡ ವಿರೋಧಿಗಳು ಎಂದು ಮಾತನಾಡುವುದರ ಬಗ್ಗೆ ನನ್ನ ವಿರೋಧವಿದೆ...."
ನಾನು ಬಳಸಿದ್ದನ್ನೆ ಬೇರೆಯವರು ಬಳಸಬೇಕು ಅಂತ ನಾನು ಎಲ್ಲಿ ಹೇಳಿದ್ದೇನೆ.?
"...ಮುಖ್ಯಮಂತ್ರಿಗಳು ನಾವು ಬಳಸುವ ಭಾಷೆಗೆ ಯಾವಾಗ ಮಾಪನವಾದರು..."
ಯಾಕಿಲ್ಲ?. ಮುಕ್ಯಮಂತ್ರಿ ತಾಣ/ಸ್ತಾನಕ್ಕೆ ಬೆಲೆಯಿದ್ದೇ ಇದೆ(ಅದರ ಮೇಲ್ ಯಾರ್ ಕೂತಿದಾರೆ ಅವರ ಬಗ್ಗೆ ಅಲ್ಲ). ಇಲ್ಲಾಂದ್ರೆ ಡೆಮಾಕ್ರಸಿಗೆ/ಮಂದಿಗೆ ಅವಮಾನ ಮಾಡಿದ ಹಾಗೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಾಮರರ ಅಭಿಪ್ರಾಯವೇನು?
ಉ: ಪಾಮರರ ಅಭಿಪ್ರಾಯವೇನು?
ಎಗಡೆ...
ಹಿಂದಿಯಲ್ಲೂ, ತಮಿಳಲ್ಲೂ, ಪ್ರೆಂಚಲ್ಲೂ, ಇಂಗ್ಲೀಸಲ್ಲೂ, ಚೀಣೀಯಲ್ಲೂ ಈ ಸಮಸ್ಯೆ ಐತಣ್ಣ..
ಅದಕ್ಕೆ ಪರಿಆರ ಅಂತ ಅವರ ಸಕ್ಕದ ಬೆರೆಸಲ್ಲ.. ಬದಲಿಗೆ ಒಬ್ಬರ ಕಿರುನುಡಿ ಒಬ್ರು ಅರ್ತ ಮಾಡಿಕೋತಾರೆ..
ಹಂಗಾರೆ..
ಮಂಡ್ಯಬಾಸೆಯಿರುವ ’ಜೋಗಿ’ ಉತ್ರ ಕರ್ನಾಟಕದಲ್ಲಿ ಓಡ್ಲಿಲ್ವೇ?
ಹಂಗೆ ನಾಗಮಂಡಲ ಈ ಕಡೆಯವರಿಗೆ ಅರ್ತ ಆಗಕ್ಕಿಲ್ವೇ?
ಬೈರಪ್ಪನವರು ಅಪ್ಪಟ ಆಸನ ಬಾಸೆಯಲ್ಲೆ ಬರೆಯೋದು, ಅದು ತಿಳಿಯತ್ತಲ್ಲ.. ಅವರ ಗೃಹಭಂಗ ಅಲ್ಲಿ ಅದೆಶ್ಟ ಸಕ್ಕದ ಐತೆ?
ಹಂಗೆ ಶಿವರಾಮ ಕಾರಂತರ ಚೋಮನದುಡಿ, ಮೈಮನಗಳ ಸುಳಿಯಲ್ಲಿ ಎಶ್ಟ ಐತೆ?
ಇನ್ನು ನಿಂಗೆ ಹೇಳಕ್ಕಿಲ್ಲ. ಗೊತ್ತಿದ್ದು ಸುಮ್ನೆ ಮಾತಾಡ್ತಿಯ!!
ಉ: ಪಾಮರರ ಅಭಿಪ್ರಾಯವೇನು?
ಕರೆಕ್ಟು ಕಣೋ ಮಹೇಶ. ಆದರೆ ಕರ್ನಾಟಕದಲ್ಲಿ ಮಾತ್ರ, 'ಕರ್ನಾಟಕದ ಏಕೀಕರಣ ಸಂಸ್ಕೃತದಿಂದ ಮಾತ್ರವೇ ಸಾಧ್ಯ" ಅಂತ ಬಡ್ಕೋತಾರೆ. ಜನರು ತಾವೇತಾವಾಗಿ ಬೇರೆ ಬೇರೆ ಸೀಮೆಯ ಪದಗಳನ್ನ ಕೊಟ್ಟುತಂದು ಮಾಡಿಕೊಂಡರೆ, ಹೊಟ್ಟೆವುರಿಯಿಂದ ಅವರನ್ನು "ಸಂಸ್ಕೃತ ದ್ವೇಷಿಗಳು" ಅಂತ ಹಣೆಪಟ್ಟಿಕಟ್ತಾರೆ.
ಉ: ಪಾಮರರ ಅಭಿಪ್ರಾಯವೇನು?
ಯಮ್ಮೋ..
ಸುನಿಲಂಗೂ ಈ ಪಾಟಿ ಕಂಡಾಪಟ್ಟಿ ಮುನಿಸ್ ಬತ್ತದಾ ಸಿವ!!
ನಿನ್ನ ಮಾತು ಪುಲ್ ದಿಟ ಮಗ..
ಈಗ ’ನನ್ನಿ’ ಯಾ ಸೀಮೇದು?
ಪಂಪ ಬನವಾಸಿಯವನು ಅಂತ ಮೈಸೂರೋದು ಅವನು ಬರೆದ್ನ ಓದಲ್ವೇ? ಹಂಗೆ ಬೈರಪ್ನೋರು ಬರೆದೋದನ್ನ ಬಡಗಣದೋರು ಓದಲ್ವೇ!!
ನನ್ನ ಬಳ್ಳಾರಿ ಗೆಳೆಯ ’ಕೋನೇರು’ ಅಂತ ನಾವು ಕರೆಯೋ ’ಪುಶ್ಕರಣಿ’ಗೆ ಒಂದ ದಪ ಹೇಳ್ದಾ, ಅವತ್ತಿನಿಂದ ನಮ್ಮನೆಯಲ್ಲಿ ’ಕೋನೇರು’ ಅಂತ ಎಲ್ರೂ ಹೇಳ್ತೀವಿ..
ನಮ್ಮಮ್ಮ ಕೂಡ ’ನದೀಂ ದೀಮ್ ತನ’ ಹಾಡು ಬಂದ್ರೆ, ’ಮೇಲ್ಕೋಟೆ ದೊಡ್ಡ ಕೋನೇರು’ ಅಂತಾರೆ..
ಎಲ್ಲಾ ಆಯ್ತದೆ!
ಕೆಲವ್ರಿಗೆ ಶಂಕದ ನೀರೇ ತೀರ್ತವಂತೆ!!
ಉ: ಪಾಮರರ ಅಭಿಪ್ರಾಯವೇನು?
----------------ಮಂಡ್ಯಬಾಸೆಯಿರುವ ’ಜೋಗಿ’ ಉತ್ರ ಕರ್ನಾಟಕದಲ್ಲಿ ಓಡ್ಲಿಲ್ವೇ?
ಹಂಗೆ ನಾಗಮಂಡಲ ಈ ಕಡೆಯವರಿಗೆ ಅರ್ತ ಆಗಕ್ಕಿಲ್ವೇ?
ಬೈರಪ್ಪನವರು ಅಪ್ಪಟ ಆಸನ ಬಾಸೆಯಲ್ಲೆ ಬರೆಯೋದು, ಅದು ತಿಳಿಯತ್ತಲ್ಲ.. ಅವರ ಗೃಹಭಂಗ ಅಲ್ಲಿ ಅದೆಶ್ಟ ಸಕ್ಕದ ಐತೆ? ಹಂಗೆ ಶಿವರಾಮ ಕಾರಂತರ ಚೋಮನದುಡಿ, ಮೈಮನಗಳ ಸುಳಿಯಲ್ಲಿ ಎಶ್ಟ ಐತೆ?----------------
ಅದೇ ಏಳಿದ್ದು ಚಿಗಪ್ಪಾ , ಮಾತಾಡೋದು ಅರ್ತಾಯ್ತದೆ. ಬರ್ದಿದ್ದು ಅರ್ತಾಗಕ್ಕಿಲ್ಲ ಅಷ್ಟೆಲ್ಲವ ಅಂತ. ಭೈರಪ್ಪ ಬರೀ ಆಸನ್ ಬಾಸೆಲ್ಲಿ ಬರ್ದಿದ್ದು ನಾಕಾಣೆ. ಮದ್ಯ ಮದ್ಯ ಆಸನ ಬಾಸೆಲ್ಲಿ ಮಾತುಗಳಿರ್ತವಸ್ಟೆಯ. ಸಕ್ಕದ ಇದ್ರೆನೆ ಅರ್ತಾಗೋದು ಅಂತ ನಾ ಏಳ್ತಾ ಇಲ್ಲ. ಅದು ಇದ್ರೆ ಮಾಮೂಲಾಗಿ ಎಲ್ಲಾರ್ಗೂ ಗೊತ್ತಾಯ್ತದೆ ಅಂದಿದ್ದು. ಭೈರಪ್ಪ, ಕಾರಂತ್ರು ಅವರೆಲ್ಲ ಫುಲ್ ಫೇಮಸ್ ಇರದಕ್ಕೆ ಓದ್ತಾರೆ ಎಲ್ರೂವ. ಬೇರೆ ಯಾರ್ದಾರೂ ಓದಿದಿಯಾ ? ಉತ್ರ ಕರ್ನಾಟಕದ್ ಬಾಸೆಲ್ಲಿರೋ ಎಸ್ಟು ಪಿಚ್ಚರ್ ಓಡ್ಸೀಯಾ ನಮ್ ಆಸನ್ ದಾಗೆ?