ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

February 6, 2008 - 9:09pm — ವೈಭವ

ಕನ್ನಡ-ಸಕ್ಕದದ ನಂಟು ಹೇಗಿರಬೇಕು?

ಈಗಾಗಲೇ ಕನ್ನಡ-ಸಕ್ಕದದ ಬಗ್ಗೆ ಹಲವು ಸಾರಿ ಮಾತುಕತೆಗಳಾಗಿವೆ. ಕನ್ನಡ ಮತ್ತು ಸಕ್ಕದದ ನಂಟು ಹೇಗಿರಬೇಕೆಂದು ಈ ಹಾಡಿನ ಮೂಲಕ ತಿಳಿಸಲು ಮೊಗಸುವೆ.
ಇದು ಹೆಸರುವಾಸಿಯಾದ ಬರಹಗಾರ ಜಯಂತ ಕಾಯ್ಕಿಣಿಯವರು ಬರೆದಿರುವ ಹಾಡು, 'ಮಿಲನ' ಸಿನಿಮಾದ್ದು. ನಮ್ಗೆಲ್ಲರಿಗೂ ಗೊತ್ತೇ ಇದೆ ಜಯಂತ್ ಅವರ ಎಲ್ಲ ಹಾಡುಗಳು
ಎರ್ರಾಬಿರ್ರಿ ಮಂದಿಯ ಮನಗೆದ್ದಿವೆ. ಅದನ್ನ ವಸಿ ಹತ್ತಿರದಿಂದ ಗಮನಿಸಿದರೆ ನಮಗೆ ಕನ್ನಡ-ಸಕ್ಕದ ಬಳಕೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಈ ಹಾಡು ಒಳ್ಳೆ ಮಾದರಿ.

ಕಿವಿಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೇಬೇಕೆಂದು
ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೇಬೇಕಿಂದು

ಹಸಿರಾಗಿದೆ ಜೀವವು ನಿನಗಾಗಿ
ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು 'ಬಾ' ಎಂದು
ಸಂತಸದಿಂದ 'ಓ' ಎಂದು ಓಡಲೆ ಬೇಕು ನೀನಿಂದು
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು

ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನೆಯ ಪಾಲಿನ ಸಂಗೀತ ಹಾಡಲೇ ಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನೆಯ ಪಾಲಿನ ಈ ಆಟ ಆಡಲೇ ಬೇಕು ನೀನೀಗ

೧) ಮೇಲಿನ ಹಾಡಿನಲ್ಲಿ ಕನ್ನಡದ್ದೆ ಆದ ಸರಿ ಸುಮಾರು ೭೫ ಪದಗಳಿವೆ, ಮತ್ತು ಸಕ್ಕದದ ೫ ಪದಗಳಿವೆ (ಜೀವ, ಸಂಗೀತ, ಸಮಯ, ನದಿ, ಚಲಿಸು = 5/75 = 6.6% ಸಕ್ಕದ)
೨) ಯಾವುದೇ ಮಹಾಪ್ರಾಣ ಮತ್ತು ಶ,ಷ,ಕ್ಷ ಎಂಬ ಕರ್ಕಶದಿಂದ ಕೂಡಿದ ಪದಗಳನ್ನು ಅವರು ಬಳಸಿಲ್ಲ.
೩) ಮೇಲಿನ ಹಾಡು ಅನಿಸು/ಬಾವದಲ್ಲೂ ಕೂಡ ಕೂಡಲೆ ನಿಮ್ಮ ಮನ ಗೆಲ್ಲುತ್ತದೆ. ಇದೇ ಕನ್ನಡದ ಸೊಗಡಿನ ಹೆಚ್ಚುಗಾರಿಕೆ.

ಇದನ್ನೆ ಶಂಕರಬಟ್ರು, ಸಿರಿವಿಜಯ(ಕವಿರಾಜಮಾರ್ಗ) ಇವರೆಲ್ಲ ಹೇಳಿರುವುದು. ಇದಕ್ಕಿಂತ ಇನ್ನು ಸುಲಬ ತೆರದಲ್ಲಿ ಕನ್ನಡ-ಸಕ್ಕದ ಬಳಕೆ ಹೇಗಿರಬೇಕೆಂದು ಬಿಡಿಸಿ ಹೇಳಕ್ಕೆ ನನಗೆ ಬರಲ್ಲ Sad

‹ ಶುದ್ಧ ಕನ್ನಡ? ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2 ›
  • ಸಾಹಿತ್ಯ, ಭಾಷೆ
~.~
  • Login or register to post comments
  • 550 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 7, 2008 - 1:07pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಕಂಡಾಪಟ್ಟೆ ಸಕ್ಕದ ಬಳಸಿರೋ ಹಾಡುಗಳೂ ಕೂಡ ಬೇಜಾನ್ ಪ್ರಸಿದ್ಧವಾಗಿರೋ ಉದಾಹರಣೆಗಳೂ ಇವೆಯಲ್ಲ ಸಾರ್ !

ಹಾಗಿದ್ದಾಗ ಜನ ಹಾಡು ಇಷ್ಟ ಪಡೋದು ಅದರ ಸಂಗೀತದಿಂದಲೆ ಹೊರತು ಸಾಹಿತ್ಯ ನೋಡಿ ಅಲ್ಲ ಅಂತಾಗಲ್ವೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 1:09pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ಹಾಗಾದ್ರೆ ಕಾಯ್ಕಿಣಿಯವ್ರಿಗೇನ್ ಹುಚ್ಚಾ?.. ಈ ತೆರ ಯಾಕ್ ಬರೆದಿದ್ದಾರೆ... ವಸಿ ಯೋಚಿಸಿ ಮಾನ್ಯ ಹೆಗಡೆಯವರೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 1:33pm — mahesha

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

mahesha's picture

ಹೇ ಅಣ್ಣ...

ಸುಮ್ಕಿರು.. ಸಂಸ್ಕೃತದಿಂದಲೇ ಕರ್ನಾಟಕ ಏಕೀಕರಣ ಆಯ್ತಂತೆ Smiling

ಮಯ್ಸೂರೋರು, ಮಂಗಳೂರೋರು, ದಾರವಾಡ-ಬೆಳಗಾವಿಯೋರು, ಬಳ್ಳಾರಿ-ರಾಯಚೂರೋರು ಒಟ್ಟಾಗಿದ್ದು ಸಂಸ್ಕೃತದ ಆಧಾರದಿಂದ ಅಂತ ಇವಯ್ಯನೇ ಅಲ್ವ ಹೇಳಿದ್ದು.. ಇನ್ನು ಇವನ್ ಕೂಡ ಮಾತು ನಿಂದು ;;; Smiling

ಹುಚ್ಚ ನಿಂಗೆ ಅಂತೀನಿ ನಾನು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 1:45pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

"...ಸುಮ್ಕಿರು.. ಸಂಸ್ಕೃತದಿಂದಲೇ ಕರ್ನಾಟಕ ಏಕೀಕರಣ ಆಯ್ತಂತೆ ..."

ಹೌದಣ್ಣ...ಈ ತೆರ ತಿಳ್ಕಂಡಿರವ್ರ ಜೊತೆ ಏನ್ಮಾತಾಡೋದು.. ತಲೆ ಚಚ್ಕ ಬೇಕು ಆಟೇಯ Sad
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:07pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

------------- ಸಂಸ್ಕೃತದಿಂದಲೇ ಕರ್ನಾಟಕ ಏಕೀಕರಣ ಆಯ್ತಂತೆ ------------------------

ತಮ್ಮದೇ ಹೇಳಿಕೆ... ತಮ್ಮದೇ ಪ್ರತಿವಾದ... ತಮ್ಮದೇ ವ್ಯಂಗ್ಯ .

ಯಾರೂ ಹಾಗೆ ಹೇಳಿಲ್ಲ, ತಿಳ್ಕೊಂಡಿಲ್ಲ. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 1:51pm — Sunil Jayaprakash

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

Sunil Jayaprakash's picture

ಹೇಯ್, ಮಹೇಶ ಮತ್ತು ವೈಭವ, ಸಕ್ಕದದ ಪದಗಳು ಇರೋ ಎಷ್ಟೋ ಹಾಡುಗಳು ಸಿಕ್ಕಾಪಟ್ಟೆ ಹೆಸರುವಾಸಿಯಾಗಿವೆ. ಉದಾ:- ಮಲಯ ಮಾರುತದ ಹಾಡುಗಳು.

೧. ಅಧರಂ, ಮಧುರಂ, ಮಧುರಾಧಿಪತೇ.
೨. ನಟನವಿಶಾರದ ನಟಶೇಖರ.

ಮಹೇಶ ಮತ್ತು ವೈಭವ, ನೀವು ಹೇಳಿದ ಹಾಡುಗಳಲ್ಲಿ ಹಾಗು ಇವುಗಳಲ್ಲಿ ಹ್ರಸ್ವದ ಬಳಕೆಗಳು, ಹಾಗು ಒತ್ತಕ್ಷರವಿಲ್ಲದ ಬಳಕೆಗಳನ್ನು ಹೆಚ್ಚಾಗಿ ಗಮನಿಸಬೇಕು ಅನ್ನಿಸುತ್ತೆ. ಸಮಸ್ಯೆ ಇರೋದು ಕನ್ನಡದಲ್ಲಾಗಲೀ, ಸಂಸ್ಕೃತದಲ್ಲಾಗಲೀ ಅಲ್ಲ. ಅವುಗಳನ್ನು ಸೀಮಿತವಾಗಿ ಬಳಸುತ್ತಿರುವವರ ಮನಸ್ಥಿತಿಯಲ್ಲಿ ಅಲ್ವಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 2:19pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ನೀವು ಹೇಳಿದ ಹಾಡುಗಳು ಎಲ್ಲ ವರ್ಗದವರ ಬಾಯಲ್ಲಿ ನಲಿದಿದೆ ಅಂತ ನೀವು ಹೇಳಬಲ್ಲಿರೋ?

ಕನ್ನಡ ತಿಳಿಯಾಗಿರುವ ಹಾಡುಗಳೆ ಹೆಚ್ಚು ಮಂದಿ ಮನಮುಟ್ಟಿರುವುದು. ಅದಕ್ಕೆ ಜಯಂತ ಕಾಯ್ಕಿಣಿ ಅಂತ ನಂ.1 ಬರಹಗಾರ ಈ ತೆರನಾದ ಹಾಡುಗಳನ್ನು ಬರೆದಿರೋದು.
ಸಕ್ಕದವನ್ನ 'ಸೀಮಿತ'ವಾಗಿ ಬಳಸಿದರೆ ಕನ್ನಡಕ್ಕೆ ಒಳ್ಳೇದು ಅಂತ ನಾವುನೂ ಹೇಳ್ತಾ ಇರೋದು
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:29pm — mahesha

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

mahesha's picture

೧. ಅಧರಂ, ಮಧುರಂ, ಮಧುರಾಧಿಪತೇ.
೨. ನಟನವಿಶಾರದ ನಟಶೇಖರ.
೩. ನಾದ ಮಯ
೪. ಮಾಣಿಕ್ಯವೀಣ
೫. ಮೊನ್ನೆ ಮೊನ್ನೆ ’ನಧೀ ಧೀಂ ತನ’

ಈ ಎಲ್ಲ ಹಾಡುಗಳ ನುಡಿಗಳು ಹೆಚ್ಚು ಮಂದಿ ನೆನೆಪೇ ಇರೋಲ್ಲ! ಹೆಚ್ಚು ಮಂದಿ ಇವನ್ನು ಇಶ್ಟಪಟ್ಟಿಲ್ಲ... ಅದಕ್ಕೆ ಅವು ಹೆಚ್ಚು ರೇಡಿಯೋಗಳಲ್ಲಿ ಕೇಳಿಸಲ್ಲ.. ಮೋಸ್ಟ್ಲಿ ’ಕರ್ನಾಟಕ ಸಂಗೀತದ ನಲ್ಲ’ ನಿಂಗೆ ನಿನ್ನ ಸಂಗಡಕ್ಕೆ ಹಿಡಿಸಿರಬೇಕು.

ಆದೇ

೧) ಜೊತೆಯಲಿ ಜೊತೆಯಲಿ
೨) ನೀನೇ ಸಾಕಿದ ಗಿಳಿ
೩) A ಸಿನಿಮದ ಸಿಂಪಲ್ ಕನ್ನಡ ಹಾಡುಗಳು

ಇನ್ನು ಹಲವಾರು ಇನ್ನು ಜನದ ನೆನೆಪಿನಲ್ಲಿದೆ.

ಈಗೀಗ ಸೂಪರ್‍ ಹಿಟ್ ಆಗ್ತಾ ಇರೋರೋ ಸಿನಿಮಾ ಹಾಡುಗಳಲ್ಲೆಲ್ಲ ಹೆಚ್ಚು ಆಡುಮಾತಿಗೆ ಹತ್ತಿರ ಇರ್ತದೆ. ಅಂದ್ರೆ ಹೆಚ್ಚು ಕನ್ನಡ!

ಒಂದು ಕೆಲಸ ಮಾಡು..
ಆಪ್ತಮಿತ್ರದಿಂದ ಹಿಡಿದು ಹೊಂಗನಸು ತನಕ ಸೂಪರ್‍ ಹಿಟ್ ಆದ ಸಿನಿಮ ಹಾಡುಗಳ ಪಟ್ಟಿ ಮಾಡು.. ನೋಡುಮ..!!

ಈ ಕೆಳಗಿನವು ಹೆಚ್ಚು ಕನ್ನಡದ ಪದ, ಮಹಾಪ್ರಾಣ, ಸಂಸ್ಕೃತದ ದಕ್ಕುವ ಬೆಳವಣಿಗೆಯನ್ನು ತೋರಿಸ್ತಾ ಇದೆ
೧) ಅನಿಸುತ್ತಿದೆ ಯಾಕೋ ಇಂದು
೨) ಮಿಲನ ಹಾಡು
೩) ಮಿಂಚಾಗಿ ನೀನು ಬರಲು
೪) ಗಜ
೫) ದುನಿಯಾ ಹಾಡುಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:41pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ನೀವು 'u2' ನೋಡ್ತ ಇದ್ರೆ ಗೊತ್ತಾಗುತ್ತೆ ಅಲ್ಲಿ ಇದುವರೆಗೆ ಮಂದಿ ತೀರ ಹೆಚ್ಗೆ ಕೇಳಿರೋದು ಯಾವ್ದು ಅಂತ
ನನಗೆ ತಿಳಿದಿರೋ ಮಟ್ಟಿಗೆ

೧) ಜೊತೆಯಲಿ ಜೊತೆಜೊತೆಯಲಿ - ಅತೀ ಹೆಚ್ಚು ಸಾಲ ಮಂದಿ ಬಯಸಿರುವುದು
೨) ಅನಿಸುತಿದೆ ಯಾಕೊ ಇಂದು ( ಈ ಹಾಡು ಹೇಗೆ ಬೆಲ್ಜಿಯಂ ಮನಿಸನಿಗೆ ಕನ್ನಡದ ಹುಚ್ಚು ಹಿಡಿಸಿತು ಅಂತ ಪ್ರ.ವಾ ದಲ್ಲಿ ಬರಹ ಬಂದಿದೆ ನೋಡಿ)

http://prajavani.net/Content/Feb72008/dharshan2008020666160.asp

ಈಗೀಗ
೩) ಮಿಂಚಾಗಿ ನೀನು ಬರಲು

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:41pm — mahesha

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

mahesha's picture

ನೋಡ್ತಿರೀಗ

ವಿಕಾಸ್ ಎಗಡೆ ಬಂದುಬಿಟ್ಟು..

ಗಜ ಮತ್ತು ಮಿಲನ ಏಕೀಕರಣದ ಸಂಸ್ಕೃತ ಸಿನಿಮಗಳು ಅಂತಾನೆ Smiling ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:56pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಹ್ಹ ಹ್ಹ. ಮಯೇಸ್..

ಶತಮಾನಗಳ ಹಿಂದೆ ರಚನೆಯಾದ ದೇವರ ನಾಮಗಳು, ದಶಕಗಳ ಹಿಂದೆ ರಚನೆಯಾದ ಭಾವಗೀತೆ, ಸಿನಿಮಾಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಎಲ್ಲಾ ವರ್ಗದ ಜನರಲ್ಲೂ ಉಳಿದಿವೆ. ಅದರಲ್ಲಿ ಹೇರಳವಾಗಿ ಸಕ್ಕದದ ಪದಗಳಿವೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ ಅಲ್ವೆ?

ಆದ್ರೆ ನಿಮ್ಮ ಗಜ, ದುನಿಯಾ ಎಲ್ಲಾ ಇನ್ನು ೧೦ ವರುಷ ಬಿಟ್ಟರೆ ............

G..A...J...A Gaja....... ಎಷ್ಟಪ್ಪಾ kg ಗೆ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:21pm — Sunil Jayaprakash

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

Sunil Jayaprakash's picture

"ಕರಿಯ ಐ ಲವ್ ಯು, ಕರುನಾಡ ಮೇಲಾಣೆ" ಹಾಡಿಗೆ ತುಂಬಾ ಶಾಸ್ತ್ರೀಯ ಟಚ್ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 5:27pm — shreekant.mishrikoti

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

shreekant.mishrikoti's picture

ಕರಿಯನಿಗೆ ’ ಐ ಲವ್ ಯೂ ’ ಹೇಳಬೇಕಾದರೆ ’ಕರುನಾಡ’ ಮೇಲೆ ಯಾಕೆ ಆಣೆ ಹಾಕಬೇಕೋ ? Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 5:30pm — shreekant.mishrikoti

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

shreekant.mishrikoti's picture

ಈ ಚರ್ಚೆ ಓದುವಾಗ ... ಪಕ್ಕಕ್ಕೆ ಒಂದು ಸುಭಾಷಿತ/ಕೋಟೇಶನ್/ ನಾಣ್ಣುಡಿ ( ಯಾವದು ಬೇಕೋ ಅದನ್ನು ಇಟ್ಟುಕೊಳ್ಳಿ Smiling )
ಕಾಣಿಸ್ತು .. ಅದರಲ್ಲಿ ಏನಿತ್ತು ಗೊತ್ತಾ ?

"ಮಾತನಾದುವ ಹತ್ತು ಜನ ಮಾತನಾಡದ ಹತ್ತು ಸಾವಿರಕ್ಕಿಂತ ಹೆಚ್ಚು ಗದ್ದಲ ಮಾಡ್ತಾರೆ" ಅಂತ ಏನೋ ಇತ್ತು !
Smiling
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:16pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಯೋಳಿದ್ರೆ ಅರ್ತಾಗಕ್ಕಿಲ್ಲ ಸೋಮಿ ಇವ್ಕೆ. ಅದೇನೋ ಅಚ್ಚ ಕನ್ನಡವಂತೆ, ಸಂಸ್ಕೃತ ಪದ ಸೋಸಿ ಸೋಸಿ ಬುಟ್ರೆ ಕನ್ನಡ ಉದ್ದಾರ ಆಗೋಗಿ ಎಲ್ರೂ ಓಡ್ ಓಡ್ ಬಂದೂ ಕನ್ನಡ ಕಲ್ತು ಗುಡ್ಡೆ ಹಾಕ್ಬುಡ್ತಾರಂತೆ. !! ಆದ್ರೆ ಇಂಗ್ಲೀಸ್ ಸೇರ್ಕಂಡಿದ್ರೆ ಮಾತ್ರ ಏನೂ ಕಸ್ಟ ಆಗಕ್ಕಿಲ್ವಂತೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 6:42pm — ಸಂಗನಗೌಡ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ಸಂಗನಗೌಡ's picture

ಅಣ್ಣ, ಅದರಂ ಮದುರಂ ಕೇಳೋಕ್ ಚೆನ್ನಾಗಿದೆ ಆದ್ರೂ, ಅದರ ತಲೆ ಬುಡ ತಿಳಿಯಲ್ಲ. ಮದುರಂ ಅಂದ್ರೆ ಗೊತ್ತು, ಚೆನ್ನಾಗಿರೋದು, ಹಿತವಾಗಿರೋದು, ಅದು ಚೆನ್ನಾಗಿದೆ, ಇದು ಚೆನ್ನಾಗಿದೆ ಅಂತ ಹೇಳ್ತಾ... ಹೋಗ್ತಾರೆ, ಭುಸಿತಂ ಮದುರಂ ಅಂತೆ, ಅದು ಮದುರ ಇದು ಮದುರ ಅದೇನೇನ್ ಮದುರ ಅವರಿಗೇ ಗೊತ್ತು... ( ಓ ತಮಗಸ್ಟ್ ಗೊತ್ತು...)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 8:35pm — hamsanandi

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

hamsanandi's picture

ಅಧರಂ ಮಧುರಂ ವಿಷಯ ಇಲ್ಲಿ ತರಬೇಕಿಲ್ಲ.

೧. ಅದು ಮಲಯಮಾರುತ ಚಿತ್ರಕ್ಕೆಂದು ಬರೆದ ಹಾಡಲ್ಲ
೨. ಅದು 'ಸಂಸ್ಕೃತ' ಸೇರಿಸಿರುವ ಕನ್ನಡ ಹಾಡಲ್ಲ - ಪೂರ್ತಿ ಸಂಸ್ಕೃತವೇ.

ಅದು, ವಲ್ಲಭಾಚಾರ್ಯನ ಮಧುರಾಷ್ಟಕವನ್ನು ಉಪಯೋಗಿಸಿದ್ದಾರೆ ಇಲ್ಲಿ ಅಷ್ಟೇ. ಪುರಂದರ ದಾಸರ, ತ್ಯಾಗರಾಜರ ಕೃತಿಯನ್ನು, ಅಥವಾ ಜಯದೇವನ ಅಷ್ಟಪದಿಯನ್ನು ಸಿನೆಮಾದಲ್ಲಿ ಉಪಯೋಗಿದ ಮಾತ್ರಕ್ಕೆ, ಅದನ್ನು ಆರ್.ಎನ್.ಜಯಗೋಪಾಲರ ಅಥವಾ ಜಯಂತ ಕಾಯ್ಕಿಣಿಯವರ ಗೀತೆಗಳಿಗೆ ಹೋಲಿಸುವುದು ತರವಲ್ಲ. ಏಕೆಂದರೆ ಈ ಎರಡು ಬಗೆಯ ಹಾಡುಗಳನ್ನು ರಚಿಸಿರುವ ಹಿನ್ನೆಲೆಯೇ ಬೇರೆಬೇರೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:49pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಕುವೆಂಪು ಅವರು ಕವನ, ಲೇಖನಗಳಲ್ಲಿ ಸಿಕ್ಕಾಪಟ್ಟೆ ಸಕ್ಕದ ಪದಗಳನ್ನ ಬಳಸಿದ್ದಾರೆ. ನೀವು ಹೇಳುವ ಹಾಗೇನಾದರೂ ಇದ್ದಿದ್ದರೆ ಕುವೆಂಪು ಸಾಹಿತ್ಯ ಯಾವತ್ತೋ ತಿರಸ್ಕೃತಗೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲವಲ್ಲ ! ಇದು ನಮ್ಮ ಎಲ್ಲಾ ಹಿರಿಯ ಸಾಹಿತಿಗಳಿಗೂ ಅನ್ವಯಿಸುತ್ತದೆ. ಏನೋ ನಾಲ್ಕು ಹಾಡುಗಳು ಸಂಗೀತದ ದೆಸೆಯಿಂದ ಪ್ರಸಿದ್ಧಿಯಾದ ತಕ್ಷಣ ಅದನ್ನ ತರ್ಕಕ್ಕೆ ಪುರಾವೆಯಾಗಿ ಬಳಸಿಕೊಳ್ಳುವುದು ಉಚಿತವೆ? ಹಾಗಂತ ಕಾಯ್ಕಿಣಿ ಬರೆದದ್ದು ತಪ್ಪು, ಜನ ಇಷ್ಟ ಪಟ್ಟಿದ್ದು ತಪ್ಪು ಅಂತ ಅಭಿಪ್ರಾಯವಲ್ಲ. ಅದೂ ನಮಗೆ ಖುಷಿಯೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 3:57pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

"...ಏನೋ ನಾಲ್ಕು ಹಾಡುಗಳು ಸಂಗೀತದ ದೆಸೆಯಿಂದ ..."

ಅಬ್ಬ. ಕಾಯ್ಕಿಣಿಯವರಿಗೆ ಅವಮಾನ ಮಾಡ್ತ ಇದ್ದೀರ. ನಿಮಗೆ ಅಶ್ಟು ತಕ್ಕುಮೆ ಉಂಟೆ.... ಅವರ ತರ ಎರಡು ಸಾಲು ಬರೀರೆ ಮತ್ತೆ. Smiling

ನೀವು 'ಎದೆ ತುಂಬಿ ಹಾಡುವೆನು' ಅಂತ ಒಂದು ಕಾರ್ಯಕ್ರಮ ಬರುತ್ತೆ ಅದನ್ನ ನೋಡಿದಿರ. ಅಲ್ಲಿ SPB ಹೇಳೋದು ಸಂಗೀತವು ಯಾವತ್ತು ಸಾಹಿತ್ಯವನ್ನು ಮರೆಮಾಚಬಾರದು. ಅದು ಮಾಡಿದರೆ ಆ ಹಾಡು ಚೆನ್ನಾಗಿ ಬರಲ್ಲ. ಆದ್ದರಿಂದ ಒಳ್ಳೆ ಹಾಡು ಇಲ್ದೇವೋದ್ರೆ ಬರೀ ಸಂಗೀತದಿಂದ ಏನೂ ಆಗಲ್ಲ. ಹೆಚ್ಚು ಮಂದಿನ ತಲುಪಕ್ಕೆ ಆಗಲ್ಲ.

SPB ಗಿಂತ ನಿಮಗೆ ಸಂಗೀತದ/ಇನಿಯ ಬಗ್ಗೆ ಗೊತ್ತಾ?

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:11pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಬರೀ ೫ ಪದಗಳನ್ನು ( ಏನೋ ನಾಲ್ಕು ಹಾಡುಗಳು ಸಂಗೀತದ ದೆಸೆಯಿಂದ) ತೆಗೆದುಕೊಂಡು ಅಭಿಪ್ರಾಯ ಹೇಳ್ತಿದಿರಾ!! Smiling
ಇನ್ನೂ ಬರ್ದಿದೀನಿ ಕಾಣಲಿಲ್ವೇ ಸಾರ್ ? ನಮ್ಗೂ ಖುಷಿನೇ ಅಂತ.

ನೀವು ಕುವೆಂಪು ಅವರಿಗೇ ಅವಮಾನ ಮಾಡ್ತಾ ಇದೀರಾ ಹಾಗಿದ್ರೆ? ಇನ್ನೂ ೫೦ ವರ್ಷ ಜನ ನೆನಪಿಡುವಂತ ೨ ಸಾಲು ಬರೀರಿ ನೋಡವ (ಇದು ನಿಮ್ಮ ರೀತಿ ವಾದ) Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:16pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ಒಂದ್ಕಡೆ ಬರೀ ಸಂಗೀತದಿಂದ ಕಾಯ್ಕಿಣಿ ಹಾಡು ಹೆಸರಾಯಿತು ಅಂತಿರಾ.. ಇನ್ನೊಂದು ಕಡೆ ನಂಗೂ ಕುಸಿನೇ ಅಂತಿರ
ಒಂದ್ಕಡೆ ಮಗುನ್ನ ಚಿವುಟುವುದು, ಇನ್ನೊಂದು ಮಗುನ್ನ ಮುದ್ದು ಮಾಡೋದು... ಅಂಗು ಅಂತಿರಾ? ಇಂಗು ಅಂತಿರಾ... ಇದು ಇಬ್ಬಂದಿತನವಲ್ಲದೇ ಇನ್ನೇನು???

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:25pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಅಂದ್ರೆ ಕಾಯ್ಕಿಣಿ ಸಾಹಿತ್ಯವಾಗಲೀ ಅಥವಾ ಇನ್ಯಾರದ್ದೆ ಆಗಲೀ ನಂಗೂ ಇಷ್ಟವೇ ಅಂತ ಹೇಳಿದ್ದು. ಸಂಗೀತ ಜೊತೆಗಿಲ್ದಿದ್ರೆ ಸಾಹಿತ್ಯಕ್ಕೆ ಇಷ್ಟು ಬೆಲೆ ಬರ್ತಿರ್ಲಿಲ್ಲ ಅಂತ ಹೇಳಿದ್ದು.
ಬರೀ ಕನ್ನಡ ಪದಗಳನ್ನ ಅಥವಾ ಹೆಚ್ಚು ಕನ್ನಡ ಪದಗಳನ್ನ ಬಳಸಿದರೆ ಅದು ತಪ್ಪು ಅಂತ ನನ್ನ ಭಾವನೆ ಅಲ್ಲ ಅಂತ ನಾನು ಹೇಳಿದ್ದು.

ಹಾಗಂತ ಸಕ್ಕದ ಪದಗಳು ಇದ್ದಾಕ್ಷಣ ಅದು ಸರಿಯಲ್ಲ, ಅದು ಕಷ್ಟ ಅಂತ ಏನಿಲ್ಲ ಅಂತ ನಾನು ಹೇಳಿದ್ದು.
ಸಕ್ಕದದಿಂದ ಕನ್ನಡ ಕಷ್ಟವಾಗೋಗಿದೆ ಅನ್ನುವುದು ತಪ್ಪು ಅಂತ ನಾನು ಹೇಳಿದ್ದು. ಕಷ್ಟ ಮಾಡ್ಕಳೋರು ಬರೀ ಕನ್ನಡ ಇದ್ರೂ ಮಾಡ್ಕತಾರೆ, ಏನೂ ಇಲ್ದೇ ಇದ್ರೂ ಮಾಡ್ಕತಾರೆ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 4:43pm — Sunil Jayaprakash

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

Sunil Jayaprakash's picture

ಅಯ್ಯಯ್ಯಯ್ಯಯ್ಯಯ್ಯಯ್ಯಪ್ಪಾ, ಒಂದು ನಿಮಿಷ ತಡೀರಪ್ಪಾ, ಕವಿರಾಜಮಾರ್ಗದ ಪದ್ಯಗಳನ್ನ ಹಾಕ್ತೀನಿ. ಎಂತಹ ಸಂಸ್ಕೃತ ಒಪ್ಪಿಗೆ ಅನ್ನೋದನ್ನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 5:06pm — vikashegde

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

vikashegde's picture

ಹಾಕಿ ಗುರುಗಳೇ ನೀವು. ನಮಗೆ ಕವಿರಾಜಮಾರ್ಗ(ಸಂಸ್ಕೃತ ಪದ !) ದ್ದೂ ಖುಷಿಯೇ, ಮಹೇಶ ಬೋಗಾದಿದೂ ಖುಷೆಯೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 11, 2008 - 11:32am — mahesha

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

mahesha's picture

ಲೋ ಅಡ್ಡಕಸಬಿ( ಇವನಿಗೆ ಅಂದ್ರೆ ಯಾವ ತೊಂದ್ರೆ ಇಲ್ಲ ) ( ಅಡ್ಡಕಸಬಿ ಅಂದ್ರೆ ನೆಟ್ಟಗೆ ಯಾವುದನ್ನು ಮಾಡದೇ ಬರೀ ಅಡ್ಡಡ್ಡ ಮಾಡೋನು )

ಮೊದಲು ಕವಿರಾಜಮಾರ್ಗ ಇವನ್ನಲ್ಲ ಓದು.. ಸುಮ್ನೆ ಯಾಕೆ ಇಲ್ಲಿ.. ಅಡ್ಡಡ್ಡ ಮಾತಾಡ್ತಿಯ?

ಕವಿರಾಜಮಾರ್ಗ ಅನ್ನೋದು ಸಕ್ಕದ ಪದವೇ ಇರಬೋದು.. ಆದ್ರೆ ಅದೊರಳಗೆ ಸಕ್ಕದ ಒಳ್ಳೆ ನಾಯಿನರಿ ಕಿರುಚಿದಂಗೆ ಎಕ್ಕಾಮಕ್ಕ ಕಿರುಚಾಟ ಅಂದವ್ರೆ.. ಅದನ್ನೇ ಇವ್ರು ಹೇಳ್ತಾ ಇರೋದು...

ಒಳ್ಳೇ ಯಾಕೆ ಸುಮ್ನೆ ಮಾತಾಡ್ತಿಯ? ಸಂಗತಿ ಇದ್ಯ?

ಲೋ ಸುನಿಲ, ಬರತ ಇವಯ್ಯಂಗೆ ನೀವ್ ಯಾಕ್ ಉತ್ರ ಬರೀತೀರಿ.. ಒಂದಕ್ಕೊಂದು ಸಂಬಂದ ಇಲ್ದಂಗೆ ಮಾತಾಡ್ತಾನೆ.!!

ಇನ್ನೋ ನಾವ್ಗಳು ಬರೆಯಕ್ಕೆ ಯಾ ಪಾಟಿ ಇವೆ.. ಬೊಳುಮ್ಬು ಕೇಳ್ಮೆಗಳ ಕಡೆ ನೋಡ್ರಪ್ಪ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 9, 2008 - 1:05pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ಸುನೀಲ,

ಅದನ್ನ ನಾನು ಮೊದಲೆ ವಿಕಾಸ ಹೆಗಡೆಯ ಬರಹಕ್ಕೆ ಮರುಲಿಯಾಗಿ ಹಾಕಿದ್ದೇನೆ.
http://sampada.net/blog/vikashegde/02/01/2008/6873

ನಮ್ಮ ಕವಿರಾಜಮಾರ್ಗದ ಸಿರಿವಿಜಯನು ಕೂಡ ಕನ್ನಡ, ಸಕ್ಕದ ಕೂಡಿ ಜೋಡುಪದಗಳನ್ನು( ಸಮಾಸಗಳನ್ನು) ಮಾಡಬಾರದು ಎಂದು ಹೇಳಿದ್ದಾನೆ, ಮಾಡಿದರೆ ಬಿಸಿಹಾಲಿಗೆ ಮಜ್ಜಿಗೆ ಹನಿಗಳನ್ನು ಹಾಕಿದಾಗೆ ಅಂತ ಹೇಳಿದ್ದನೆ.

ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 6:24pm — ಸಂಗನಗೌಡ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ಸಂಗನಗೌಡ's picture

ಬುದ್ಯೋರಾ, ಕುವೆಂಪು ತಮ್ಮಂತ ಸಕ್ಕದ ನಲ್ಲರಿಂದಲೇ ಅಗ್ಗಳ ಆಗಿದ್ದಿರಬೇಕು. ಕನ್ನಡ ಹೊತ್ತಿಗೆಗಳಲ್ಲಿ ಅವರ ಹಲವು ಹಾಡುಗಳನ್ನು ಓದಿದ್ದಿದೆ. ಅವರು ಬರೆದ ಹಾಡೊಂದನ್ನು ಕರುನಾಡಿನ ಹಾಡಾಗಿ ಮಾಡಿರೋದರಿಂದ ಆ ಹಾಡು ಬಾಯಿಪಾಟ ಇದೆ.

ನಾನ್ BE ಓದುತ್ತಿದ್ದಾಗ ’ಬಳೆಗಾರ ಚೆನ್ನಯ್ಯ’ ಹಾಡು ಕೇಳಿದೆ. ತುಂಬಾ ಹಿಡಿಸಿತು, ಆ ತರ ಕುವೆಂಪು, ಬೇಂದ್ರೆ ಹಾಡುಗಳು ಹಿಡಿಸಿಲ್ಲ. ಭೈರಪ್ಪ ಅವರ ಬರಹ ಓದೋಕೆ ತ್ರಾಸು. ಅದೇ ಕೆ.ಪಿ.ಪೂ ಬರಹಗಳು ನೀರು ಕುಡಿದಂಗೆ.

ಮೈಸೂರು ಮಲ್ಲಿಗೆ, ಮತ್ತು ಮಲಯ ಮಾರುತ ಎರಡೂ ಹಿಂಗ್ ಬಂದು ಹಂಗ್ ಹೋದ ಸಿನಿಮಾಗಳು. ಇವೆರಡರಲ್ಲಿ ’ರಾಯರು ಬಂದರು ಮಾವನ ಮನೆಗೆ’ ಹಾಡು ಅಗ್ಗಳಿಕೆ ಪಡೆದೈತೋ ಇಲ್ಲ ’ಅದರಂ ಮದುರಂ’ ಅಂತ ಅದ್ಯಾವುದೋ ಇದೆಯಲ್ಲ ಅದು ಅಗ್ಗಳ ಅನಿಸಿದೇಯೋ ನೀವೇ ಹೇಳ್ ಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 12:50am — uniquesupri

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

uniquesupri's picture

ವೈಭವರೇ,
ಬಹುಶಃ ಈ ಗೀತೆಯನ್ನು ಬರೆಯುವಾಗ ಜಯಂತ್ ಕನ್ನಡ ಸಂಸ್ಕೃತ ಪದಗಳ ಲೆಕ್ಕ ಹಾಕಿ ಬರೆದಿಲ್ಲ ಎಂದು ಭಾವಿಸುತ್ತೇನೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 1:29pm — ವೈಭವ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ವೈಭವ's picture

ಹೌದು ಮಾನ್ಯ ಸುಪ್ರಿಯವರೆ,

ಅದನ್ನೆ ನಾನು ಹೇಳ್ತ ಇರೋದು, ಅವರು ಲೆಕ್ಕಚಾರ ಮಾಡಿ ಬರೆದಿಲ್ಲ. ಆದರೆ ಅವರ ಮನಸ್ಸಿನಲ್ಲಿ ಹೆಚ್ಚು ಮಂದಿ ಮುಟ್ಟುವ ಆಸೆಯಿತ್ತು ಅಂತ ನಾನು ಹೇಳ್ತಾ ಇರೋದು. ಅದಕ್ಕಾಗಿ ಅವರು ಹಾಡು ಬರೆಯುವಾಗ ಸುಲಬ/ಸಲೀಸಾದ ಪದಗಳನ್ನು ಬಳಸಿದ್ದಾರೆ. ತಿಳಿಗನ್ನಡಕ್ಕಿಂತ ಸುಲಬ/ ಸಲೀಸಾಗಿರುವುದು ಯಾವುದಾದರೂ ಇದಿಯ?

ತಿರುಳು: ಹೆಚ್ಚು ಮಂದಿಯ ಮನ ಮುಟ್ಟಬೇಕಾದರೆ ತಿಳಿಗನ್ನಡ ಬಳಸಿ. ಅಶ್ಟೇ. ಆಗ ತಾನಗಿಯೇ ಸಕ್ಕದ ಪಕ್ಕ ಸರಿಯುತ್ತದೆ. . ಅಂದರೆ ಬೇಕು ಅಂತ ಸಕ್ಕದವನ್ನು ಇಳಿಸಬೇಕಾಗಿಲ್ಲ. ತಾನಾಗಿಯೆ ಅದರ ಪ್ರಮಾಣ ಕಮ್ಮಿಯಾಗುತ್ತದೆ. ಇದನ್ನೆ ಜಯಂತ್ ರವರು ಮಾಡಿರುವುದು.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2008 - 2:49pm — ಸಂಗನಗೌಡ

ಉ: ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?

ಸಂಗನಗೌಡ's picture

ಇದನ್ನು ನಾನೂ ಒಪ್ಪುತ್ತೇನೆ. ಮುಂಗಾರು ಮಳೆಯ ’ಅನಿಸುತಿದೆ ..’ ಹಾಡು ಬರುವದಕ್ಕೆ ಮೊದಲು ಕನ್ನಡ ಸಿನಿಮಾಗಳಲ್ಲಿ ಕಂಗ್ಲೀಸ್ ಹಾಡುಗಳದೇ ದರಬಾರು. ಕನ್ನಡದಲ್ಲಿ ಇಂಗಲೀಸು ಬೆರಸಿದರೇನೆ ಮಂದಿ ಇಸ್ಟಪಡ್ತಾರೆ ಅನ್ನುವ ಅನಿಸಿಕೆ ಬೆಳೆದು ಬಿಟ್ಟಿತ್ತು ಸಿನಿಮಾ ಮಂದಿಯಲ್ಲಿ.
ಅದಕ್ಕೇ ಹೆಚ್ಚಿನ ಮಂದಿ ಹಳೆಯ ಹಾಡುಗಳ ಮೊರೆ ಹೋಗುತ್ತಿದ್ದರು.

ಅದೆಲ್ಲಾನೂ ಇಲ್ಲ ಮಾಡಿದ್ದು ಕಾಯ್ಕಿಣಿ. ಕನ್ನಡದಲ್ಲಿ ಕನ್ನಡ ಒರೆಗಳೇ ಹೆಚ್ಚು ಹೊಂದಿಕೆಯಾಗುತ್ತವೆ. ಎಸ್ಪೆಸಿಯಲಿ ಹಾಡುಗಳಲ್ಲಿ. ಈಗ ತಾನೇ ಬಂದಿರೋ ’ಬೆಳದಿಂಗಳಾಗಿ ಬಾ’ ಸಿನಿಮಾದ ’ಮಾರಾ ಬಾ ಮುದ್ದಾಟಕೆ’ ಹಾಡಲ್ಲಿ ’ಬಿಸಿ ಒಡಲು ತಾಗಲು’ ಅಂತ ಒಂದು ಕಡೆ ಬರುತ್ತೆ. ಒಡಲು ಅಂದರೆ ಶರೀರ, ದೇಹ. ಆದರೆ ಬರವಣಿಗೆಯಲ್ಲಿ ನಾವು ದೇಹ, ಶರೀರ ಅಂತಾನೇ ಬಳಸ್ತೀವಿ(ಹಾಗಾಗಿ ಒಡಲು ಅಂದರೆ ದೇಹ ಅಂತ ಎಸ್ಟು ಮಂದಿಗೆ ತಿಳಿಯುತ್ತೆ?), ಇದು ಸರಿ ಅಲ್ಲ. ಕನ್ನಡದ್ದೇ ಒರೆ ಇರೋವಾಗ ಬೇರೊಂದು ನುಡಿಯ ಪದ ಬಳಸೋದು ಸರಿನಾ? ಬರವಣಿಗೆಯು ಮಾತಿಗೆ ಹತ್ತಿರ ಬರಬೇಕಿದೆ. ಅಲ್ಲದೇ ಟೆಕ್ನಿಕಲ್ ಸಂಗತಿಗಳನ್ನು ಕನ್ನಡದಲ್ಲಿ ಹೇಳೋದು ಮತ್ತು ಓದೋದು ತ್ರಾಸು ಅಂತಾನೆ ಹೆಚ್ಚಿನ ಜನರ ಅನಿಸಿಕೆ, ಇದೂ ಕೂಡ ಬಿಡಬೇಕು ಅಂತ ನನ್ನ ಅನಿಸಿಕೆ.

ನನ್ನ ಮಟ್ಟಿಗೆ ಹೇಳುವದಾದರೆ, ನಾನು ಬೇರೆಯವರ ಸಕ್ಕದ ಬೆರೆತ ಬರಹಗಳನ್ನು ಓದಿ, ಏನನ್ನಾದರೂ ಬರೆಯುವಾಗ ಕೆಲವು ಸಲ ಮೊದಲು ಸಕ್ಕದ ಪದವೇ ತಲೆಯಲ್ಲಿ ಸುಳಿದರೂ, ಕನ್ನಡದ್ದೇ ಪದ ತುಸು ಹೊತ್ತು ಹುಡುಕುತ್ತೇನೆ, ಯಾವುದಾದರೂ ಸಿಕ್ಕೇ ಸಿಗುತ್ತೆ, ಅದನ್ನೇ ಬಳಸ್ತೀನಿ.
ಮಾದರಿಗೆ,

ವಿಷಯ/ವಿಚಾರ - ಸಂಗತಿ
ಉಪಯೋಗಿಸು - ಬಳಸು
ಶಬ್ದ - ಒರೆ
ಭಾಷೆ - ನುಡಿ/ಮಾತು
ಲೇಖನ - ಬರಹ
ರಾತ್ರಿ - ಇರುಳು
ಸೂರ್ಯ - ನೇಸರ
ಚಂದ್ರ - ತಿಂಗಳು
ಅರ್ಥವಾಗು - ತಿಳಿ
ದ್ರಿಷ್ಟಿ - ನೋಟ

ಕೆ. ಕಲ್ಯಾಣ್ ಅವರು ಸಕ್ಕದ ಪದಗಳನ್ನು ಗುತ್ತಿಗೆ ಹಿಡಿದಂತೆ ಬಳಸ್ತಾರೆ. ಹಂಸಲೇಕ ಅಡ್ಡಿಯಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ದೂರ
  • ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!
  • ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?
  • 'ಸಹೋದರಿ' ಸರಿಯೇ?
  • ನೋವು ನಲಿವು ...ಹೀಗೆ ಬಾಳು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator