ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

ಉತ್ಪ್ರೇಕ್ಷೆಯಲ್ಲ. ಹೊಟ್ಟೆ ಉರಿಯತ್ತೆ ಕಣ್ರೀ. ಒಂದು ಕಲಾದೇಗುಲವನ್ನು "ಊರಾಚೆಯ ಬಚ್ಚಲುಮನೆಯನ್ನಾಗಿ" ಮಾಡುವ ಹೀನಪ್ರವೃತ್ತಿಗೆ ಒಂದು ವಿಕೃತ ಸೆಲ್ಯೂಟ್.

ಈ ಪಾಪೆಗಳಲ್ಲಿರುವ ಟೈಲುಗಳು ಕಕ್ಕಸುಗುಂಡಿಯನ್ನು ನೆನಪಿಸಿದರೆ ದಯವಿಟ್ಟು ನನ್ನನ್ನು ಬಯ್ಯಬೇಡಿ.

(ಪಾಪೆಗಳನ್ನು ದೊಡ್ಡದಾಗಿ ನೋಡಲು, ಅವುಗಳ ಮೇಲೆ ಚಿಟುಕಿ)

ಕಳೆದ ವರ್ಷ ಇದೇ ಹೊತ್ತಿನಲ್ಲಿ ಕರ್ನಾಟಕದ ದೇವಸ್ಥಾನಗಳ ತಂಜಾವೂರೀಕರಣವಾಗುತ್ತಿರುವುದನ್ನು ಇಸ್ಮಾಯಿಲ್ ಅವರು ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿ ಎನ್ನುವ ಎಳೆಯಲ್ಲಿ ವಿವರಿಸಿದ್ದರು. ಈಗ್ಗೆ ಎರಡು ವಾರದ ಹಿಂದೆ ಮುರುಡೇಶ್ವಕ್ಕೆ ಹೋದಾಗ ನಿಜಕ್ಕೂ "ಮುರುಡೇಶ್ವರಕ್ಕೆ" ಬಂದೆನೇ ಅಥವಾ "ಕಕ್ಕಸುಗುಂಡಿ" ಹೊಕ್ಕೆನೇ ತಿಳಿಯದಾಯಿತು.

ಹಾಗೆಯೇ, ಕರ್ನಾಟಕದ ಹೊಯ್ಸಳ ಶೈಲಿಯ ಕಲೆಯನ್ನು ತಂಜಾವೂರು ಶೈಲಿ ನುಂಗಿ ನೀರು ಕುಡಿಯುತ್ತಿರುವ ದೃಶ್ಯ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

Yamini's picture

ದೇವಸ್ಥಾನಗಳ ಸ್ವರೂಪ ಹೀಗೆ ಬದಲಾಗುತ್ತಿರುವುದರ ಹಿಂದೆ ಭಕ್ತಿಯ ಆಧುನಿಕ ಸ್ವರೂಪವಿದೆ. ಈ 'ಭಕ್ತಿ'ಯನ್ನು ಭಕ್ತಿಯೆಂದೇ ಕರೆಯಬಹುದೇ ಎಂಬುದರ ಬಗ್ಗೆಯೂ ನನಗೆ ಅನುಮಾನವಿದೆ. ನೀವು ಮುರುಡೇಶ್ವರದ ಉದಾಹರಣೆಯನ್ನು ತೆಗೆದುಕೊಂಡಿದ್ದೀರಿ. ಮುರುಡೇಶ್ವರದ ದೇವಸ್ಥಾನ ಪ್ರಖ್ಯಾತವಾಗುವ ಮೊದಲೇ ಈ ಪ್ರಕ್ರಿಯೆ ಇಡೀ ಕರಾವಳಿಯಲ್ಲಿ ಆರಂಭವಾಗಿತ್ತು. ನಮ್ಮ ಭೂತದ ಗುಡಿಗಳ್ಯಾವೂ ಈಗ ಗುಡಿಗಳಾಗಿ ಉಳಿದಿಲ್ಲ. ದೇವಸ್ಥಾನಗಳ ಜೀರ್ಣೋದ್ಧಾರದ ನಂತರ ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯಕ್ರಮವೊಂದನ್ನು ನೋಡಿದರೆ ನಮ್ಮ ಭಕ್ತಿಯ ಸ್ವರೂಪ ಅರ್ಥವಾಗಿಬಿಡುತ್ತದೆ. ಈ ಕಾರ್ಯಕ್ರಮದ ಅತಿಥಿಗಳಿಂದ ಆರಂಭಿಸಿ ಅದರ ವೇದಿಕೆಯ ತನಕ ಎಲ್ಲವೂ ಹಣವಂತ ಭಕ್ತರಿಂದ ತುಂಬಿರುತ್ತದೆ. ಈ ಹಣವಂತರಿಗೆ ಭಕ್ತಿ ಬಂದದ್ದು ಭಯದಿಂದ. ಅಂದರೆ ತಾವು ಗಳಿಸಿದ ಹಾದಿಯ ಕುರಿತ ಭಯ, ಗಳಿಸಿದ್ದನ್ನು ಉಳಿಸಿಕೊಳ್ಳುವ ಭಯಗಳಿಂದ ತುಂಬಿದ ಭಕ್ತಿ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೊಡುವ ಭಾರೀ ಮೊತ್ತಗಳ ಹಿಂದೆ ಕೆಲಸ ಮಾಡುವುದೂ ಈ ಮನಸ್ಥಿತಿಯೇ?

ದುಡ್ಡು ಕೊಡುವವರ ಮನಸ್ಥಿತಿ ಹೇಗಿದ್ದರೂ ಅದನ್ನು ಬಳಸುವವರು ಸರಿಯಾಗಿದ್ದರೆ ಪರಿಸ್ಥಿತಿ ಇಷ್ಟೊಂದು ಕೆಡುತ್ತಿರಲಿಲ್ಲ. ಬಳಸುವವರಿಗೆ ನಮ್ಮ ವಾಸ್ತುಶಿಲ್ಪದ ಒರಿಜಿನಾಲಿಟಿಗಿಂತ ನವೀಕರಣ ಕಣ್ಣಿಗೆ ಬೀಳಬೇಕೆಂಬ ಆಸೆ ಇರುತ್ತದೆ. ಹಳೆಯ ದೇವಾಲಯವನ್ನು ಹಳೆಯ ಸ್ವರೂಪದಲ್ಲೇ ಉಳಿಸುವುದಾದರೆ ಜೀರ್ಣೋದ್ಧಾರ ಮಾಡುವುದಾದರೂ ಯಾಕೆ ಎಂದು ಬಹಿರಂಗವಾಗಿ ಕೇಳಿದವರೂ ನಮ್ಮೂರಿನಲ್ಲಿ ಇದ್ದಾರೆ. ಈ ಮನಸ್ಥಿತಿಯನ್ನು ಬದಲಾಯಿಸುವುದು ಹೇಗೆ?

-ಯಾಮಿ

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

ಸಂಗನಗೌಡ's picture

ಬದಲಾಯಿಸೋದು ಹ್ಯಾಗೆ ಅಂದ್ರಾ ಏನಿಲ್ಲ ಸಿಂಪಲ್, ಚಾನ್ಸ್ ಸಿಕ್ಕಾಗೆಲ್ಲ ಅದರ ಬಗ್ಗೆ ಬರೀರಿ.

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

ರಾಮಕುಮಾರ್'s picture

ನೀವು ಭೂತದ ಗುಡಿಯ ಬಗ್ಗೆ ಬರೆದಿದ್ದೀರಿ..ನನಗಂತೂ ಅವುಗಳಿಗೆ ಒದಗಿರುವ ಗತಿಯನ್ನ ನೆನೆದರೆ ವ್ಯಥೆಯಾಗುತ್ತೆ.ಈಗಲೂ ಮಲೆನಾಡಿನ ಅಥವಾ ಕರಾವಳಿಯ ಸಣ್ಣ ಪಟ್ಟಣವೊಂದರ ಮಧ್ಯದಲ್ಲಿ ಒಂದು ದಟ್ಟ ಕಾಡಿನ ತೆರದಲಿ ಮರಗಳ ಗುಂಪು ಇದ್ದಲ್ಲಿ ಅದೊಂದು ಬೂತದ ಬನವೋ , ನಾಗನ ಬನವೋ ಎಂದು ಊಹೆ ಮಾಡಲು ಅಡ್ಡಿಯಿಲ್ಲ(ಮೇಲಾಗಿ ಮಲೆನಾಡಿನಲ್ಲೂ ಈಗೀಗ ಬೂರುಗ, ತಾರೆ, ಬೋಗಿ ಜಾತಿಯ ಭೀಮಗಾತ್ರದ ಮಹಾವೃಕ್ಷಗಳು ಹೆಚ್ಚಾಗಿ ಉಳಿದಿರುವುದು ನಾಗನ ಬನ, ಚೌಡಿ ಬನಗಳಲ್ಲಿ ಮಾತ್ರ )
ಈಗೀಗ ಭಕ್ತರ ಆಧುನೀಕರಣದ ಗೀಳಿಗೆ ಬಲಿಯಾಗಿ ಇಲ್ಲೆಲ್ಲ ಕಾಂಕ್ರೀಟ್ ಕಟ್ಟಡದ ದೇವಸ್ಥಾನ ಮೇಲೆದ್ದು ಅಲ್ಲಿದ್ದ ಗಿಡಮರಗಳೆಲ್ಲ ನಾಮಾವಶೇಷವಾಗುತ್ತಿವೆ.ನಿಜದ ಅರ್ಥದಲ್ಲಿ ಹಾವುಗಳ ಆವಾಸ ಸ್ಥಾನವಾಗಿದ್ದ ನಾಗಬನಗಳು ಬಟಾಬಯಲಾಗಿವೆ.
ಈ ಭಕ್ತರಿಗೆಲ್ಲ ಭೂತರಾಯ ಸದ್ಬುದ್ಧಿಯನ್ನ ಕೊಡಲೆಂದು ಹಾರೈಸುತ್ತೇನೆ!

ಉ: ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ?

uniquesupri's picture

ದೇವಸ್ಥಾನಗಳೂ ಈಗ ವ್ಯಾಪಾರಿ ಸಂಸ್ಥೆಗಳಾಗುತ್ತಿವೆ ಕಾರ್ಪೋರೇಟ್ ಸಂಸ್ಕೃತಿಯನ್ನು ಮೈಗೂಡಿದಿಕೊಳ್ಳುವಲ್ಲಿ ದಾಪುಗಾಲು ಹಾಕುತ್ತಿವೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...