ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕಣ್ಣಿಗೆವೆಯಂದದಲಿ ಕೈ ಮೈ |

February 7, 2008 - 11:15am — mahesha

ಇದೋ ನೋಡ್ರಿ, ಜಗನ್ನಾಥದಾಸರ ಇನ್ನೊಂದು ಪದ್ಯ:

ಕಣ್ಣಿಗೆವೆಯಂದದಲಿ ಕೈ ಮೈ |
ತಿಣ್ಣಿಗೊದಗುವ ತೆರದಿ ಫಲ್ಗಳು |
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ |
ಪುಣ್ಯ ಫಲವೀವಂದದಲಿ ನುಡಿ|
ವೆಣ್ಣಿ ನಾನ್ಮಾಂಡದೊಳು ಲಕ್ಷ್ಮಣ |
ನಣ್ಣ ನೊದಗುವ ಭಕ್ತರವಸರಕಮರಗಣ ಸಹಿತ ||

ಯಾರಾದ್ರೂ ಅರ್ಥ ಬಿಡಿಸ್ರೀ..

ಮಾಧವ ಅವರು ಹಾಕಿದ್ದು..

ನನ್ನ ಮೊಗಸು!

ಬಿಡಿಸಿಕೆ :

ಕಣ್ಣಿಗೆ ಎವೆಯ ಅಂದದಲಿ ಕೈ ಮೈ
ತಿಣ್ಣಿಗೆ ಒದಗುವ ತೆರದಿ ಪಲ್ಗಳು( ಫಲ್ಗಳು ಅಲ್ಲ ಅನ್ನಿಸ್ತದೆ, ಪಲ್ಗಳು = ಹಲ್ಲುಗಳು )
ಪಣ್ಣು ಫಲಗಳನು ಅಗಿದು ಜಿಹ್ವೆಗೆ ರಸವನು ಈವಂತೆ ( ಇಲ್ಲಿ ಪಣ್ಣು ಫಲ ಅಂತ ಒಂದೇ ಅರ್ಥ ಇದೆ. ಮೋಸ್ಟ್ಲಿ ಅದು ಪಣ್ಣು ಪಾಲ್ಗಳನು ಅಂತ ಇರಬೋದು )
ಪುಣ್ಯ ಫಲವ ಈವ ಅಂದದಲಿ ನುಡಿ-
ಹೆಣ್ಣಿನ ಆಣ್ಮಾಂಡದೊಳು ಲಕ್ಷ್ಮಣನ
ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ

ಹುರುಳು:

ಕಣ್ಣಿನ ಎವೆಯ( Ka. ime, eme, eve eyelash, eyelid ) ಹಾಗೆ ಕೈ ಮತ್ತು ಮೈ
ತಿಣ್ಣಿ/ತಿನ್ನಿಗೆ ( tiṉṉi, tinni glutton, one who eats indiscriminately in all places )
ತಿನ್ನಿಗೆ ತಕ್ಕ ಹಲ್ಲುಗಳು ಹಣ್ಣು ಹಾಲುಗಳ ಸವಿಯನ್ನು ನಾಲಗೆಗೆ ಕೊಡವ ಹಾಗೆ
ಪುಣ್ಯದ ಫಲವನ್ನು ಕೊಡುವಂತಹ
ಶಾರದೆಯ ಗಂಡನಾದ ಬ್ರಹ್ಮನ ಆಂಡ ಅಂದ್ರೆ ಬ್ರಹ್ಮಾಂಡದಲ್ಲಿ
ಲಕ್ಷ್ಮಣನ ಅಣ್ಣ ಶ್ರೀರಾಮಚಂದ್ರನಿಗೆ ಸೇರುವ ಒಕ್ಕಲರ/ಬಕುತ ಹುರುಪಿಗೆ/ಭಕ್ತಿಗೆ/ಅವಸರಕ್ಕೆ
ಅಮರಗಣ/ದೇವತೆಗಳ ಗುಂಪು/ಕಡವಳರ ತಿಣಿ ಜೊತೆಗೆ

‹ ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ. ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 298 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 7, 2008 - 11:31am — ವೈಭವ

ಉ: ಕಣ್ಣಿಗೆವೆಯಂದದಲಿ ಕೈ ಮೈ |

ವೈಭವ's picture

ಯಾರಪ್ಪ ಈ ಜಗನ್ನಾಥದಾಸರು....ಇವರ ನೆಗೞ್ಚಿನ ಬಗ್ಗೆ ಹೆಚ್ಚಾಗಿ ಯರಾದರು ತಿಳಿಸ್ಕೊಡಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 11:44am — hamsanandi

ಉ: ಕಣ್ಣಿಗೆವೆಯಂದದಲಿ ಕೈ ಮೈ |

hamsanandi's picture

ಮಹೇಶರೆ,

"ಪಣ್ಣು ಫ್ಹಲಗಳನೆ" ಅಂತ ಒಂದೆ ಅರ್ಥ ಬರುವ ಹಾಗಿದೆ - ಪಣ್ಣು ಪಾಲ್ಗಳನೆ ಇರಬಹುದು ಎಂದಿರಿ.

ಅದಾಗದು - ಛಂದಸ್ಸು ಕೆಡುವುದಲ್ಲವೆ?

ಪಣ್ಣು ಫಲ ಎನ್ನುವ ದ್ವಿರುಕ್ತಿ ಬಹಳ ಕೇಳಿರುವುದೇ; ಹಣ್ಣು-ಹಂಪಲು ಅನ್ನುವಾಗ ಹಂಪಲು = ಹಣ್ಣು+ಫಲ ದಿಂದಲೇ ಬಂದಿದೆ.

ಹಾಗಾಗಿ ಹಣ್ಣು ಹಂಪಲು ಎನ್ನುವುದು ತ್ರಿರುಕ್ತಿ Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 11:45am — hamsanandi

ಉ: ಕಣ್ಣಿಗೆವೆಯಂದದಲಿ ಕೈ ಮೈ |

hamsanandi's picture

ಅರ್ಥ ಚೆನ್ನಾಗಿ ಬಿಡಿಸಿ ಹೇಳಿದ್ದೀರಿ ಎಂದು ಹೇಳುವುದನ್ನೇ ಮರೆತೆ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 12:20pm — mahesha

ಉ: ಕಣ್ಣಿಗೆವೆಯಂದದಲಿ ಕೈ ಮೈ |

mahesha's picture

ಹಿರಿನನ್ನಿ( ಚನ್ನಾಗಿ ಬಿಡಿಸಿದೆ ಎಂದು ಹೇಳಿದಕ್ಕೆ.. Smiling )

ಹಂಪಲು ಇದು ಹಣ್ + ಫಲ ಅಲ್ಲ..

ಹಂಪಲು ಇದು ದ್ರಾವಿಡ ಒರೆ. ಇಲ್ಲಿ ನೋಡಿ. ( ಪಂಪ => ಹಂಪ ; ದೊಡ್ಡದು )

pampal expanse, spaciousness, luxuriance,

ಹಣ್ಣು ಚಿಕ್ಕದು, ಹಂಪಲು ದೊಡ್ಡದು( ಮೋಸ್ಟ್ಲಿ ದೊಡ್ಡ ಕಲ್ಲಂಗಡಿ Smiling )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 12:45pm — hamsanandi

ಉ: ಕಣ್ಣಿಗೆವೆಯಂದದಲಿ ಕೈ ಮೈ |

hamsanandi's picture

ಇದು ನನಗೆ ತಿಳಿದಿರಲಿಲ್ಲ - ಹೀಗೂ ಇರಬಹುದು.

ಆದರೆ, ಕವಿ ಪಂಪನ ಹೆಸರು ಮಾತ್ರ ಹಿಂಗೆ ಬಂದದ್ದಲ್ಲ .

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 12:59pm — mahesha

ಉ: ಕಣ್ಣಿಗೆವೆಯಂದದಲಿ ಕೈ ಮೈ |

mahesha's picture

ಪಂಪನ ಹೆಸರು ಹೇಗೆ ಬಂದಿದೆ? ಕುತುಕ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2008 - 1:21am — hamsanandi

ಉ: ಕಣ್ಣಿಗೆವೆಯಂದದಲಿ ಕೈ ಮೈ |

hamsanandi's picture

ಪಂಪ ಕವಿಯ ಹೆಸರು ಪದ್ಮಪಯ್ಯ

ಪದ್ಮಪಯ್ಯ -> ಪಂಪಯ್ಯ -> ಪಂಪ

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2008 - 10:44am — mahesha

ಉ: ಕಣ್ಣಿಗೆವೆಯಂದದಲಿ ಕೈ ಮೈ |

mahesha's picture

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2008 - 6:52am — aniljoshi

ಉ: ಕಣ್ಣಿಗೆವೆಯಂದದಲಿ ಕೈ ಮೈ |

aniljoshi's picture

ಮಾಧವ,
ಪದ್ಯ ಹಾಕಿದ್ದಕ್ಕೆ ಧನ್ಯವಾದಗಳು ನಿಮಗೆ.

ಮಹೇಶ,
ಚಂದಾಗಿ ಬಿಡಿಸಿದ್ದೀರಿ. ಒಂದೆರಡು ತಿದ್ದುಪಡಿ ಇದೆ, ಇಲ್ಲಿ ಕೆಳಗೆ ನೋಡಿ.

ಅರ್ಥ :
ಕಣ್ಣಿಗೆವೆಯಂದದಲಿ => ಕಣ್ಣಿಗೆ ರೆಪ್ಪೆಯಿದ್ದಂತೆ
ಕೈ ಮೈ ತಿಣ್ಣಿಗೊದಗುವ ತೆರದಿ => ಕೈ ಮೈಯ ತುರಿಕೆ (ತಿಣ್ಣಿ, ತಿನಿಸು, ತುರಿಕೆ)ಗೆ ಒದಗುವಂತೆ
ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ => ಹಲ್ಲುಗಳು ಹಣ್ಣು-ಕಾಯಿಗಳನ್ನು** ಅಗಿದು ನಾಲಿಗೆಗೆ ರಸ ಕೊಡುವಂತೆ
ಪುಣ್ಯಫಲವೀವಂದದಲಿ => ಮಾಡಿದ ಪುಣ್ಯ ಫಲವನ್ನು ಕೊಡುವಂತೆ
ನುಡಿವೆಣ್ಣಿನಾಣ್ಮಾಂಡದೊಳು => ಬ್ರಹ್ಮಾಂಡದೊಳಗೆ
ಲಕ್ಷ್ಮಣನಣ್ಣನೊದಗುವ ಭಕ್ತರವಸರಕಮರಗಣ ಸಹಿತ => ಲಕ್ಷ್ಮಣನ ಅಣ್ಣ, ಅಂದರೆ ಶ್ರೀರಾಮ, ಭಕ್ತರ ಅವಸರಕ್ಕೆ/ಅವಶ್ಯಕತೆಗೆ ದೇವತೆಗಳ ಗುಂಪನ್ನ ಕರಕೊಂಡು ಒದಗ್ತಾನಂತೆ

(ಪ್ರಭಂಜನಾಚಾರ್ಯರ ಹರಿಕಥಾಮೃತಸಾರದ ಅರ್ಥ ಪುಸ್ತಕದಲ್ಲಿ ಓದಿದ್ದು, ಟೈಪಿಸಿದ್ದೇನೆ)

**ಜಿ ವೆಂಕಟಸುಬ್ಬಯ್ಯನವರ ನಿಘಂಟಿನಿಂದ,
೨. ಪಣ್ಣು2 (ದೇ) (ನಾ) ಮಾಗಿದ ಫಲ, ಹಣ್ಣು
೪. ಹಣ್ಣು (<ದೇ. ಪಣ್ಣು) (ನಾ) ೧ ಪಕ್ವವಾದ ಫಲ, ಮಾಗಿದ ಫಲ ೨ ಸಫಲತೆ, ಗೆಲುವು ೩ ಮುಪ್ಪು, ವೃದ್ಧಾಪ್ಯ
ಫಲ ಎಂದರೆ ಇನ್ನೂ ಮಾಗದೆ ಇದ್ದದ್ದು ಅನ್ನೋ ಅರ್ಥ ಇದೆ ಅಂತ ನನಗೆ ಗೊತ್ತಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 8, 2008 - 10:54am — mahesha

ಉ: ಕಣ್ಣಿಗೆವೆಯಂದದಲಿ ಕೈ ಮೈ |

mahesha's picture

ಪಣ್ಣು ಒಂದು ಚನ್ನಾದ ಒರೆ.

ಪಣ್ = to produce
ಪಣ್ಣು/ಪಂಡು = product.

Ka. paṇṇu to make ready, prepare, equip, decorate; paṇṇika, paṇṇige, paṇṇuge arranging, making ready, equipping.

Ka. paṇ to be produced (ripe fruit); n. (also paṇṇu) ripe fruit, ripeness.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾಪ-ಪುಣ್ಯ
  • ನನ್ನ ಚೆಲುವೆ.
  • ನಮ್ಮ ಕನ್ನಡವ್ಯಾಕೆ ಹಿಂಗೆ?
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ವಿಶಿಷ್ಟ ಆಟೋ ನುಡಿ - ೬, ೭
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator