Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಕನ್ನಡದಲ್ಲಿ ಞ ಮತ್ತು ಙ

February 7, 2008 - 12:24pm — mahesha

"ಞ ಮತ್ತು ಙ ಹವ್ಯಕಕನ್ನಡದಲ್ಲೂ ಇದೆ, ತುಳುವಿನಲ್ಲೂ ಇದೆ. ಕಯ್ಯಾರ ಕಿಞ್ಞಣ್ಣ ರೈ ಎಮ್ಬುದನ್ನು ಕಿಂನಣ್ಣ ಅಥವ ಕಿನ್ನಣ್ಣ ಎನ್ದು ಬರೆಯಲಾಗುವುದಿಲ್ಲ. ಡಿ ಎನ್ ಶಙ್ಕರ ಭಟ್ಟರು ಅನುಸ್ವಾರದ ಬಳಕೆಯನ್ನು ವಿರೋಧಿಸುತ್ತರೆ.ಹಾಗಾದರೆ 'ಸಂಗೀತ'ವನ್ನು ಸಙ್ಗೀತ ಎನ್ದು ಬರೆಯಬೇಕಲ್ಲವೇ?"

ಇದಕ್ಕೆ ಉತ್ತರದ ಪ್ರಯತ್ನ :

ಞ ಮತ್ತು ಙ ಬಗ್ಗೆ "ಕನ್ನಡ ನುಡಿ ನಡೆದು ಬಂದ ದಾರಿ"ಯಲ್ಲಿ ಚನ್ನಾಗಿ ಹೇಳಿದ್ದಾರೆ. ಪ್ಲೀಸ್ ಓದಿ.

ಕನ್ನಡದ ಯಾವುದೇ ಪದ ಇವೆರಡರಿಂದ ಮೊದಲಾಗಲ್ಲ.. ಓಸುಗರ

೧) ಮೂಲದ್ರಾವಿಡದಲ್ಲಿ ’ಞ’ ಇಂದ ಮೊದಲಾಗುತ್ತಿದ್ದ ಒರೆಗಳು ಕನ್ನಡದಲ್ಲಿ ಞ ಇಂದ ಮೊದಲಾಗುವುವು.
ಮಾದರಿ
ಞೇಯಿರ => ನೇಸರ
೨) ’ಕಿಞ್ಞಣ್ಣ’ ಈ ಒಂದು ಒರೆಯನ್ನು ಬಿಟ್ಟು ಕನ್ನಡದಲ್ಲಿ ಎಲ್ಲೂ ಞ ಮತ್ತು ಙ ಮೂಗುಲಿಗಳು ಇಡಿಯಕ್ಕರ(ಪೂರ್ಣವ್ಯಂಜನ/ವ್ಯಂಜನ+ಸ್ವರ) ಆಗಿ ಬರುವುದೇ ಇಲ್ಲ.

ಮಾದರಿ, ಆನೆ, ಹಣ, ಆಮೆ, ಅಣತಿ ಹಾಗೆ ಆಞೆ ಹಙ, ಅಞತಿ ಇಂತ ಒರೆಗಳಿಲ್ಲ.

೩) ಇನ್ನು ಮೂಗುಲಿಗಳು ಅರೆವ್ಯಂಜನ( ಸ್ವರವಿಲ್ಲದ್ದು ) ಆಗಿ ಒರೆಯ ನುಡುವೆ ಬರುವೆಡೆ ನಾವು ಕನ್ನಡದಲ್ಲಿ ’೦’ರ ಬಳಕೆ ಮಾಡುವೆವು.
ಮಾದರಿಗಳು
ಅನ್ದ => ಅಂದ
ಅಣ್ಟು => ಅಂಟು
ಅಞ್ಚೆ => ಅಂಚೆ
ಅಙ್ಕೆ => ಅಂಕೆ
ಅಮ್ಬು => ಅಂಬು
ಸಞ್ಗೀತ => ಸಂಗೀತ (ಸಞ್ಗೀತ ಅಂತ ಬರೆಯೋದು ತಮಿಳು ಪದ್ದತಿ. ಏಕೆಂದರೆ ತಮಿಳಲ್ಲಿ ೦ ಇಲ್ಲ )
ಶಙ್ಕರ ಅಂತ ಯಾವ ಕನ್ನಡಿಗನೂ ಬರೆಯಲ್ಲ ಅದು ಎಂದಿನಿಂದಲೂ ಶಂಕರವೇ.

೪) ಞ್ ಮತ್ತು ಙ್ ಇಂದ ಕನ್ನಡದ ಯಾವ ಒರೆಯೂ ಕೊನೆಯಾಗಲ್ಲ.

ಇದು ಞ ಮತ್ತು ಙ ಎಂಬ ಲಿಪಿಅಕ್ಷರ/ಬರೆಗುರುತುಗಳು ಮಾಮೂಲಿ ಬಳಕೆಯ ಕನ್ನಡಕ್ಕೆ ಹೇಗೆ ಅನವಶ್ಯಕ/ಬೇಡವಾದುದು ಎಂದು ತೋರಲು ಶಂಕರಭಟ್ಟರು ನೀಡಿರುವ ಅಂಶಗಳು. ಇದರಲ್ಲಿ ಯಾವ ಕೊರತೆಯಾಗಲಿ ತಪ್ಪು ಇಲ್ಲ.

ಅವರ ಬರಹಗಳಲ್ಲಿ ನಿಚ್ಚಳವಾಗಿ ಪಂಡಿತರಿಗಾಗಿ ಇಂದು ೫೩ ಅಕ್ಕರದ ದೊಡ್ಡ ವರ್ಣಮಾಲೆಯನ್ನು ಮತ್ತು ಮಾಮೂಲಿ ಮಂದಿಗಾಗಿ ೨೬ ಅಕ್ಕರದ ಒಂದು ಚೊಕ್ಕಟವಾದ ವರ್ಣಮಾಲೆಯನ್ನು ಪ್ರಸ್ತಾಪಿಸಿದ್ದಾರೆ( ತಮಿಳಿನಲ್ಲಿರುವ ಗ್ರಂಥ ಮತ್ತು ತಮಿಳು ಲಿಪಿಯಂತೆ ) ಹೊರತು, ಪಂಡಿತರೂ, ಸಂಸ್ಕೃತವನ್ನು ಕನ್ನಡ ಲಿಪಿಯಲ್ಲಿ ಬರೆಯುವವರು ಕೂಡ ಈ ಅಕ್ಕರಗಳನ್ನು ಬಿಡಿ ಎಂದಿಲ್ಲ.

ಮತ್ತೆ ಅವರ ಬರಹಗಳನ್ನು ಓದಿ.. ಇದು ಸುಸ್ಪಷ್ಟ.
================

ಇನ್ನು ಲಿಪಿ ಅಕ್ಷರಗಳ ಸಂಗತಿ ಆಯಿತು. ಇನ್ನು ಕನ್ನಡಿಗರು ಈ ಞ ಮತ್ತು ಙಗಳನ್ನು ಸ್ವಾಭಾವಿಕವಾಗಿ ಉಲಿಯಬಲ್ಲರೆ? ಎಂಬ ಪ್ರಶ್ನೆಗೆ ಉತ್ತರ
೧) ಒರೆಯ ಮೊದಲಲ್ಲಿ ಉಲಿಯಲಾರರು. ಅಂದ್ರೆ ಮಳಯಾಳಿಗಳಂತೆ ಞೇಯರ ಅನ್ನು ನಾವು(ಕನ್ನಡಿಗರು ಅತಿಹೆಚ್ಚು ಮಂದಿ) ನೇಯರ ಅಂತ ಉಲಿಯುವೆವು ಸ್ವಾಭಾವಿಕವಾಗಿ
೨)ಒರೆಯ ಕೊನೆಯಲ್ಲೂ ಇದೆ.
೩)ಞ ಮತ್ತು ಙಗಳಿಗೆ ಸ್ವರ ಸೇರಿಸಿ ಉಲಿಯಲಾರರು( ಸ್ವಾಭಾವಿಕವಾಗಿ ).

ಇದಕ್ಕೆಲ್ಲ ಆಧಾರ ಪುರಾವೆಗಳಾಗಿ ನಡೆಸಿರುವ ಆರಯ್ಯಗಳ ಬಗ್ಗೆ ಅವರ ಬರಹದಲ್ಲೇ ಓದಿ.

ಆದುದರಿಂದ ಕನ್ನಡಿಗರು ಙ ಮತ್ತು ಞಗಳನ್ನು ಸರಿಯಾಗಿ ಉಲಿಯ ಸಂದರ್ಭ ಒಂದೇ ಒಂದು, ಅದು ಒರೆಯ ನಡುವೆ ಬರುವ ಅರೆವ್ಯಂಜನ ರೂಪ. ಮಾದರಿ ಅಂಕೆ, ಅಂಚೆ

"ಕಯ್ಯಾರ ಕಿಞ್ಞಣ್ಣ" ದಯವಿಟ್ಟು ಇದನ್ನು ಸರಿಯಾಗಿ perfect ಹೇಗೆ ಉಲಿಯುವುದು ಹೇಗೆ ಎಂದು ಒಬ್ಬರು ಆಡಿಯೋ ಹಾಕಿರಿ. ೯೦% ಕನ್ನಡಿಗರು ’ಕಿಞ್ಞಣ್ಣ’ ಸ್ವಾಭಾವಿಕವಾಗಿ ಕಷ್ಟಪಡದೇ ಉಲಿಯಲಾರರು. ( ಇದೆ ವಾದವನ್ನು ಋ ಮತ್ತು ಷಗಳಿಗೂ ಅನ್ವಯ ಮಾಡಬೋದು )

ಕಷ್ಟಪಟ್ಟರೆ, ತರಬೇತಿ ನೀಡಿದರೆ Russian ಅನ್ನು ಕೂಡ ಉಲಿಸಬೋದು. ಆದರೆ ಸಂಗತಿ ಅದಲ್ಲ.
=================

‹ ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು ಕನ್ನಡದಲ್ಲಿನ ಒತ್ತಕ್ಷರಗಳು ›
  • ವ್ಯಾಕರಣ
Ornamental seperator
  • Login or register to post comments
  • 404 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 7, 2008 - 12:39pm — hamsanandi

ಉ: ಕನ್ನಡದಲ್ಲಿ ಞ ಮತ್ತು ಙ

hamsanandi's picture

ಞ ಮತ್ತು ಙ ಗಳನ್ನು ಅನುಸ್ಬಾರ ದಿಂದ ಸೂಚಿಸುವ ಪದ್ಧತಿ ಕನ್ನಡದಲ್ಲಿ ಬಹಳ ಹಳೆಯದೇ - (ಯಾವುದೋ ಶಾಸನದಲ್ಲೂ ನೋಡಿದ ನೆನಪು)
ಆ ಅಕ್ಷರಗಳು ಪದದ ಮೊದಲಲ್ಲಿ ಕನ್ನಡದಲ್ಲಿ ಬರುವುದೇ ಇಲ್ಲವಲ್ಲ!

’ಕಿಞ್ಞಣ್ಣ’ ಮೊದಲಾದ ಪದಗಳೂ ತುಳುನಾಡಿನ ಕಡೆಯಲ್ಲಿ ಮಾತ್ರ ಇವೆಯೆಂದು ನನ್ನೆಣಿಕೆ.

ಆದರೆ ಪದದ ನಡುವೆ ಆ ಸದ್ದನ್ನು ಸರಿಯಾಗೇ ಹೊರಡಿಸುತ್ತೇವೆ Smiling ( ಓಂಕಾರ - ಇಂಚರ ಮೊದಲಾದ ಪದಗಳಲ್ಲಿ ಬರುವಾಗ)

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
February 7, 2008 - 12:58pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

"ಪದದ ನಡುವೆ ಆ ಸದ್ದನ್ನು ಸರಿಯಾಗೇ ಹೊರಡಿಸುತ್ತೇವೆ ( ಓಂಕಾರ - ಇಂಚರ ಮೊದಲಾದ ಪದಗಳಲ್ಲಿ ಬರುವಾಗ)"
ಎರಡು ಒಂದೆ ಅರಿತ ಸಾಲುಗಳು
"ಕನ್ನಡಿಗರು ಙ ಮತ್ತು ಞಗಳನ್ನು ಸರಿಯಾಗಿ ಉಲಿಯುವ ಸಂದರ್ಭ ಒಂದೇ ಒಂದು, ಅದು ಒರೆಯ ನಡುವೆ ಬರುವ ಅರೆವ್ಯಂಜನ ರೂಪ. ಮಾದರಿ ಅಂಕೆ, ಅಂಚೆ"

  • Login or register to post comments
  • link
  • Email this ಪ್ರತಿಕ್ರಿಯೆ
February 7, 2008 - 10:31pm — Sunil Jayaprakash

ಉ: ಕನ್ನಡದಲ್ಲಿ ಞ ಮತ್ತು ಙ

Sunil Jayaprakash's picture

ಬೊಳಂಬು wrote:
ಕನ್ನಡಕ್ಕೆ ಅನುಸ್ವಾರ ಬೇಡ' ಎನ್ದವರೂ 'Sಅಙ್ಕರ' ಭಟ್ಟರೇ('ಕನ್ನಡ ಬರಹವನ್ನು ಸರಿಪಡೀಸೋಣ'). ಯಾಕೆನ್ದರೆ ಅದರಿಂದ ಪದೇ ಪದೇ ^ ಒತ್ತಬೇಕಾಗುತ್ತದನ್ತೆ. ಕನ್ನಡದಲ್ಲಿ ಅನುಸ್ವಾರ ಬಳಕೆಯಲ್ಲಿರುವ ವಿಚಾರ ನನಗೂ ಗೊತ್ತು. ಅದು ಹಾಗಿದ್ದರೇ ಚೆನ್ನು. ಅನುಸ್ವಾರ ಬೇಡವೆನ್ದವರು ಞ ಮತ್ತು ಙ ಕನ್ನಡದಲ್ಲಿ ಇದೆ ಅನ್ತ ಒಪ್ಪಲೇ ಬೇಕು. ಅಲ್ಲದೆ 'ಕಿಞಣ್ಣ' ಕನ್ನಡ ಶಬ್ದವಲ್ಲ. ತುಳುವಿನಲ್ಲಿ 'ಕಿಞ' ಎನ್ದರೆ 'ಚಿಕ್ಕ' ಎನ್ದು ಅರ್ಥ. ಅದು 'ಸಞ್ಗೀತ' ಅಲ್ಲ 'ಸಙ್ಗೀತ'. ಅವರ ವ್ಯಾಪ್ತಿಗೆ Sಅಕಟರೇಫ ಮತ್ತು ರಳ ಬರುವುದೇ ಇಲ್ಲ. 'ಕನ್ನಡ ಬರಹವನ್ನು ಸರಿಪಡೀಸೋಣ' ಮತ್ತು 'ಭಾಷೆಯ ಬಗೆಗೆ ನೀವೇನು ಬಲ್ಲಿರಿ' ಓದಿ ಆದಮೇಲೆ ಅವರ ಇತರ ಹೆಬ್ಬೊತ್ತಗೆಗಳ ಮೇಲೆ ಆಸಕ್ತಿ ಉಳಿಯಲಿಲ್ಲ.

ಬೊಳಂಬು, ನಾನು ಶಂಕರ ಭಟ್ಟರ, "ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂಥಹುದು" ಪುಸ್ತಕವನ್ನು ಬಿಟ್ಟರೆ ಅವರ ಯಾವ ಪುಸ್ತಕವನ್ನೂ ಓದಿಲ್ಲ. ಆದರೆ ಅವರು ಮಂಡಿಸಿರುವ ವಿಷಯಗಳನ್ನು ಇಂಟರ್ನೆಟ್, ಹಾಗು ಗೆಳೆಯರೊಡನೆ ಮಾಡಿದ ಚರ್ಚೆಗಳ ಮೂಲಕ ತಿಳಿದಿದ್ದೇನಷ್ಟೇ. ಹಾಗಾಗಿ, ಇದನ್ನು ಧೃಡಪಡಿಸಿಕೊಳ್ಳಲು ಕೇಳುತ್ತಿದ್ದೇನೆ. ನಿಮ್ಮ ಮೇಲಿನ ಅನುಮಾನದಿಂದಲ್ಲ.

ನಿಜಕ್ಕೂ ಶಂಕರಭಟ್ಟರು ಅನುಸ್ವಾರ(ಅಂ) ಅನ್ನು ಬೇಡವೆಂದಿದ್ದಾರೆಯೇ ? ಅನುಸ್ವಾರ ಬೇಡವೆಂದರೆ, ನೀವು ಹೇಳುವಂತೆ ಞ ಮತ್ತು ಙಗಳು ಇರಬೇಕೆಂಬ ಎಂಬ ವಾದವನ್ನು ನಾನೂ ಒಪ್ಪುತ್ತೇನೆ. 'ಕಿಞಣ್ಣ' ಎಂಬ ತುಳು ಪದ ಬಿಡಿ, ಕನ್ನಡದ್ದೇ ಎಷ್ಟೋ ಪದಗಳನ್ನು ಬರೆಯೋಕ್ಕೆ ತೊಂದರೆಯಾಗತ್ತೆ. ಉದಾ:- ಮಂಕ, ಮಂಚ. ದಯವಿಟ್ಟು ಶಂಕರ ಭಟ್ಟರು ಅನುಸ್ವಾರದ ಬಗ್ಗೆ ಏನು ಹೇಳಿದ್ದಾರೆ. ದಯವಿಟ್ಟು ಯಾರಾದರು ಅನುಸ್ವಾರದ ಬಗ್ಗೆ ಶಂಕರಭಟ್ಟರು ಏನು ಹೇಳಿದ್ದಾರೆ ಎಂಬುದಾಗಿ, ಸಂಪದದಲ್ಲಿ ಹಾಕಿ.

ಕೊಕೊ - "ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂಥಹುದು" ಪುಸ್ತಕದಲ್ಲಿ ಬೇರೆಯವರು ತಿಳಿದುಕೊಂಡಿರುವ ಹಾಗೆ, ಸಂಸ್ಕೃತದ ಮೇಲೆ ಶಂಕರ ಭಟ್ಟರು ಯಾವ ಹಗೆಯನ್ನೂ ಸಾಧಿಸಿಲ್ಲ. ಬದಲಾಗಿ, ಸಂಸ್ಕೃತ-ಕನ್ನಡ ಮತ್ತು ಕೆಲವೆಡೆ ಗ್ರೀಕ್-ಲ್ಯಾಟಿನ್ನು ನುಡಿಗಳ ವ್ಯಾಕರಣ ಸೂಕ್ಷ್ಮವನ್ನು ವಿಶ್ಲೇಷಿಸಿದ್ದಾರೆ. ಸಂಸ್ಕೃತದಲ್ಲಿ "ಎ, ಒ"ಗಳು ಏಕಿಲ್ಲ ಎಂಬುದು ಇದರಲ್ಲಿ ಒಂದು.

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 10:51am — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

ಶಂಕರ ಭಟ್ಟರು ಅನುಸ್ವರ ಬೇಡ ಅಂದಿಲ್ಲ..

ಬೊಳುಂಬು ಗೊಂದಲಗೊಂಡಿದ್ದಾರೆ.

೦(ಅನುಸ್ವರ) ಬೇಕೇ ಬೇಕು.. ಆದ್ರೆ ಞ ಮತ್ತು ಙ ಯಾಕೆ ಬೇಡ ಅಂತ ವಿವರಿಸಾಗಿದೆ.

ಶಂಕರ ಭಟ್ಟರು ಬೇಡ ಅಂದಿರುವುದು ವಿಸರ್ಗ ’:’ ಇದನ್ನು
ಪ್ರಾತಃ ಇದನ್ನು ನಾವು ಪ್ರಾತಹ/ಪ್ರಾತಹ್ ಎಂದೇ ಹೇಳೋದು..

ಒಟ್ಟಿನಲ್ಲಿ ಆಡಿದಂತೆ ಬರೆಯುವುದು. ಕನ್ನಡಿಗರ ಸ್ವಾಭಾಬಿಕ ಸದ್ದುಗಳನ್ನು(phones) ಗುರುತಿಸಿ ಅಶ್ಟಕ್ಕೆ ತಕ್ಕಶ್ಟು ಅಕ್ಶರಗಳನ್ನು ಇಟ್ಟುಕೊಳ್ಳುವುದು ಅವರ ಬರಹದ ಹಿಂದಿನ ಗುರಿ..

ಈ ಸಂಗತಿಯನ್ನು ಜಗದ ಎಲ್ಲ ನುಡಿಗಳು ಮಾಡಿಕೊಳ್ಳಬೇಕು. ಮುಂದಿವರಿದ ನುಡಿಗಳಾದ ಪ್ರೆಂಚು, ಜರ್ಮನ್ ಮುಂತಾದವು ಮಾಡಿಕೊಂಡಿವೆ.

ಜರ್ಮನ್ ಅಲ್ಲಿ f ಮತ್ತು v ಗೆ ಬೇರೆತನವಿಲ್ಲವಂತೆ
ಪೀನಿಶ್ ಅಲ್ಲಿ ಕ/ಗ, ಚ/ಜ ತಮಿಳಂತೆ voiced/unvoicedಗಳ ನಡುವೆ ಬೇರೆತನ ಇಲ್ಲ. ( ಇಂತಿಯ = India )

ಹೆಚ್ಚುವರಿ ಅಕ್ಕರಗಳಿಂದ ತೊಂದರೆ.. ಅದರಲ್ಲು ಕನ್ನಡಕ್ಕೆ ೨೪ ಹೆಚ್ಚುಬರಿ ಅಕ್ಶರಗಳಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 12:25pm — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

'ಕನ್ನಡ ಬರಹವನ್ನು ಸರಿಪಡಿಸೋಣ' ಪುಸ್ತಕದಲ್ಲಿ ಅನುಸ್ವಾರ ಬೇಡ ಎನ್ದಿದ್ದಾರೆ. ಅದಕ್ಕೆ ಪದೇ ಪದೇ ಶಿಫ್ಟ್ ಒತ್ತಬೇಕಾಗುತ್ತದೆ ಎಮ್ಬ ಕಾರಣವನ್ನೂ ಶಙ್ಕರ ಭಟ್ಟರು ನೀಡಿದ್ದಾರೆ.

ಇತರ ಪುಸ್ತಕಗಳು ಬರೆಯುವ ವೇಳೆಗೆ ಅವರ ನಿಲುವುಗಳು ಮಾರ್ಪುಗೊಣ್ಡಿರಬಹುದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 1:08pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

:ಕನ್ನಡ ಬರಹವನ್ನು ಸರಿಪಡಿಸೋಣ' ಪುಸ್ತಕದಲ್ಲಿ ಅನುಸ್ವಾರ ಬೇಡ ಎನ್ದಿದ್ದಾರ"

ಇನ್ನೊಮ್ಮೆ ನೋಡಿ... ನಾನೂ ನೋಡುವೆನು..

ಶಂಕರ ಬಟ್ರ ವರ್ಣ ಮಾಲೆಯಲ್ಲಿ ೦( ಅನುಸ್ವರ) ಇರೋದು ನನಗೆ ನಿಕ್ಕುವ...
ಅವರು ಬೇಡ ಅಂದಿರೋದು ವಿಸರ್ಗವನ್ನು (Smiling, ಮಹಾಪ್ರಾಣಗಳನ್ನು ಮತ್ತು ಷ, ಞ, ಙ, ಋ ಗಳನ್ನು....

ಇರಿ.. ಅವರ ಇಡೀ ಅಕ್ಕರಪಟ್ಟಿ ಇಲ್ಲೇ ಬರೀತೀನಿ

ಇ ಎ ಉ ಒ ಅ ( ಉದ್ದು ಸ್ವರಗಳಿಗೆ ಒಂದು ದೀರ್ಗ(P) ಚಿನ್ನೆ ಸಾಕು ) = ೫

ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ = ೧೩

ಯ ರ ಲ ವ ಶ ಸ ಹ ಳ = ೮

೫ + ೧೩ + ೮ = ೨೬/26 ಇಪ್ಪತ್ತಾರು...


ಹೀಗೆ ಒಂದು ಹಾಳೆಯಲ್ಲಿ ಅವರ ಹೊತ್ತಗೆಯಲ್ಲಿದೆ!!!

ಶಂಕರ ಬಟ್ರ ಅಕ್ಕರಪಟ್ಟಿಯಲ್ಲಿ ಇಪ್ಪತ್ತಾರು ಅಕ್ಕರ ಇರೋದು ನಿಕ್ಕುವ...( ನೋಡಿ ಇದನ್ನು ಹಲವ ಸರತಿ ಹೇಳಿದ್ದೀನಿ )

ಇನ್ನು ೦ ಸೇರಿಸಿದರೆ ೨೭ ಗುರುತುಗಳು.

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 1:09pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

ವಿಸರ್ಗವನ್ನು (Smiling

ಅಲ್ಲ ಅದು ವಿಸರ್ಗವನ್ನು ( : )

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 6:35pm — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

ಎರಡೂ ಒಂದೇ ಅಲ್ಲವೇ
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 11, 2008 - 11:41am — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

ರೀ ಬೊಳುಂಬು

ಅಲ್ಲ. ಎರಡು ಬೇರೆ ಬೇರೆ.. ನೀವ್ ಸಕ್ಕತ್ ಗೊಂದಲ ಮಾಡಿಕೊಂಡ್ ಇದ್ದೀರ..

ಅಂ ಅನುಸ್ವರ
ಅಃ ವಿಸರ್ಗ

ಇವೆರಡು ಒಂದೇಯೇ?

ಏನ್ರಿ ನೀವು! Sad

ಹೋಗಲಿ.. ಮೊನ್ನೆ ನಾಯಿನೆರಳು ನೋಡ್ತಿದ್ದೆ... ಹವ್ಯಕ ಕೆಲವು ಬಳಕೆ ನನ್ನ ಗಮನಸೆಳೆದವು.. ಹೇಗು ನೀವು ಹವ್ಯಕ ಮಾತಾಡೋರು. ಅದರ ಕೆಲವ ನಿಬ್ಬರದ ಬಳಕಗೆಳು( ವಿಶೇಶ ಪ್ರಯೋಗಗಳು): ಮಾದರಿ ಮಾಡಡ( ಮಾಡಬೇಡ). ಮಾಡ್ಚು(ಮಾಡ್ತು) ಇವುಗಳ ಬಗ್ಗೆ ಬರೇರಿ...

ನಮಗೆ ಈ ಹವ್ಯಕ ಬಲು ದೂರ ಆಗೋಗದೆ.. ಅದರ ಗಂದಗಾಳಿ ಇಲ್ಲ!

  • Login or register to post comments
  • link
  • Email this ಪ್ರತಿಕ್ರಿಯೆ
February 11, 2008 - 11:57am — ವೈಭವ

ಉ: ಕನ್ನಡದಲ್ಲಿ ಞ ಮತ್ತು ಙ

ವೈಭವ's picture

'ಕನ್ನಡ ನುಡಿ ನಡೆದು ಬಂದ ದಾರಿ' ಯಲ್ಲಿ ಶಂಕರಬಟ್ತರು ಹವ್ಯಕದ ಬಗ್ಗೆ ಹೆಚ್ಚು ಒಲವು ತೋರಿ ಅದರ ಬಗ್ಗೆ ತುಂಬ ವಿಶ್ಯಗಳನ್ನ ತಿಳಿಸಿಕೊಟ್ಟಿದ್ದಾರೆ.
ಇವತ್ತಿಗೂ ಹವ್ಯಕದಲ್ಲಿ ಹಳೆಗನ್ನಡದ ಪಳೆಯುಳಿಕೆಗಳು ಸಿಕ್ಕಾಪಟ್ಟೆ ಇದಿಯಂತೆ ( ಮಾದರಿ: ಆಮ್, ನಾಮ್ )
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 1:12pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

Smiling

ಬೊಳುಮ್ಬು Smiling

"ಎಮ್ಬ ಕಾರಣವನ್ನೂ ಶಙ್ಕರ "

ಅವರು ಹೊಸಬರಹದಲ್ಲಿ ಬರೆದಿರು "ಕನ್ನಡ ನುಡಿ ನಡೆದು ಬಂದ ದಾರಿ" ನೋಡಿ.. ಅಲ್ಲಿ ಎಂಬ, ಶಂಕರ ಅಂತವೇ ಇರೋದು....

ಹೊತ್ತಗೆ ಹೆಸರು "ಕನ್ನಡ ನುಡಿ ನಡೆದು ಬನ್ದ ದಾರಿ" ಅಲ್ಲ "ಕನ್ನಡ ನುಡಿ ನಡೆದು ಬಂದ ದಾರಿ" ( ಇಡೀ ಹೊತ್ತಗೆ ಅವರು ಹೇಳಿದ್ದ ಬರಹ, ಅಕ್ಕರಪಟ್ಟಿಯಲ್ಲೇ ಬರೆದಿದ್ದಾರೆ )

ಇನ್ನು ಅವರು ಅನುಸ್ವರ(೦) ಬೇಡ ಅಂದಿಲ್ಲ ಅನ್ನೋದು ನಿಕ್ಕುವ ಆಯ್ತು!! Smiling

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 6:41pm — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

ಸರಿಯಾಗಿ ಗಮನಿಸದೆ ನೀಡುತ್ತಿರುವ ಪ್ರತಿಕ್ರಿಯೆ "ಪದೇ ಪದೇ ಶಿಫ್ಟ್ ಒತ್ತಬೇಕಾಗುತ್ತದೆ ಎಮ್ಬ ಕಾರಣವನ್ನೂ ಶಙ್ಕರ ಭಟ್ಟರು ನೀಡಿದ್ದಾರೆ." ಇದು ಇರುವುದು 'ಕನ್ನಡ ಬರಹವನ್ನು ಸರಿಪಡಿಸೋಣ' ಪುಸ್ತಕದಲ್ಲಿ. ಹೇಗೆ ಬರೆಯಬೇಕೆನ್ದು ಅವರು ನಿರೀಕ್ಶಿಸುತ್ತಾರೋ ಹಾಗೇ ಬರೆದಿದ್ದೇನೆ. ಇದು ಇಲ್ಲಿನ ಪ್ರತಿಕ್ರಿಯೆಗಳಿಗೆ ಮಾತ್ರ ಸೀಮಿತ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 9, 2008 - 12:23pm — ವೈಭವ

ಉ: ಕನ್ನಡದಲ್ಲಿ ಞ ಮತ್ತು ಙ

ವೈಭವ's picture

ಬೊಳುಂಬು,
'ಕನ್ನಡ ಬರಹ ಸರಿಪಡಿಸೋಣ' (ಮೊದಲನೆ ಮುದ್ರಣ ೨೦೦೫) ದಲ್ಲಿ ಶಂಕರ ಬಟ್ಟರು ತೀರ ತಿಳಿಯಾಗಿ ಪುಟ ೧೦೫ ರಲ್ಲಿ ಹೇಳಿದ್ದಾರೆ. ಇನ್ನೊಂದು ಸಲ ಓದಿ

ಅವರು ಹೇಳಿರುವುದು ಹೀಗೆ
"ಎರಡು ಸಾವಿರ ವರ್ಶಗಳಿಂದ ಕನ್ನಡಿಗರಲ್ಲಿ ಬಳಕೆಯಲ್ಲಿರುವ ಮಹಾಪ್ರಾಣಾಕ್ಷರಗಳು, ಷ ಕಾರ, ಋಕಾರ, ವಿಸರ್ಗ, ಙ್, ಞ್ ಕಾರ ಮೊದಲಾದುವನ್ನು ಕನ್ನಡ ಬರಹದಿಂದ ಸಂಪೂರ್ಣವಾಗಿ ತೆಗೆದು ಹಾಕಬೇಕೆಂದೇನೂ ಇಲ್ಲಿ ವಾದಿಸುತ್ತಿಲ್ಲ. ಅವನ್ನು ಬಳಸಲೇಬೇಕು, ಬಳಸದಿರುವುದು ತಪ್ಪು, ಬಳಸದಿದ್ದಲ್ಲಿ ಅದು ಬರಹಗಾರನ ಅಙ್ಞಾನವನ್ನು ಸೂಚಿಸುತ್ತದೆ ಎಂಬ 'ನಿಯಮ'ವನ್ನು ತೆಗೆದುಹಾಕಬೇಕಿಂದಿಷ್ಟೆ ಇಲ್ಲಿ ವಾದಿಸಲಾಗಿದೆ."

ನೀವು ಶಂಕರಬಟ್ಟರ ವಾದವನ್ನು ಸರಿಯಾಗಿ ತಿಳಿದುಕೊಳ್ಳದೆ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ.

ಮತ್ತೆ ಅವರು ಹೇಳಿರುವುದು ಮಹಾಪ್ರಾಣ, ಷ, ಋ, ವಿಸರ್ಗ(ಅಃ), ಙ್, ಞ್ ಇವುಗಳನ್ನು ಬಳಸುವ ಅತವ ಬಳಸದೇ ಇರುವುದು ಬರಹಗಾರನಿಗೆ ಬಿಟ್ಟಿದ್ದು(optional). ಬಳಸದಿದ್ದರೆ ಬರಹಗಾರನನ್ನು 'ಅಸಂಸ್ಕ್ರುತ' ಎಂದು ಹೇಳಬಾರದು ಎಂದು ಅವರು ಹೇಳಿರುವುದು.

ಗಮನಿಸಿ. ಅನುಸ್ವರ(ಅಂ) ನ್ನು ಬರಹಗಾರನಿಗೆ ಬಿಟ್ಟಿದ್ದಲ್ಲ. ಅದು optional ಅಲ್ಲ.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 11, 2008 - 12:11pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

ಹಿರಿನನ್ನಿ!

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 6:43pm — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

'ಮಲೆಯಾಳ'ವನ್ನೂ ಉಲಿಯಲಾರೆವೋ? ಅದು ಹೇಗೆ 'ಮಳಯಾಳಂ'?

__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 1:47pm — mahesha

ಉ: ಕನ್ನಡದಲ್ಲಿ ಞ ಮತ್ತು ಙ

mahesha's picture

http://sampada.net/blog/mahesha/12/04/2007/3686

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 6:49pm — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

ನಿಮ್ಮೊಡನೆ ಕೇಳಿದ ಪ್ರಶ್ನೆಗಳಿಗೆ ನೀವು ಬದಲು ಹೇಳಲಿಲ್ಲ.
1. ತಮಿಳರು ದಡ್ಡರು ಎನ್ದವರು ಯಾರು? ಪಿ ಚಿದಮ್ಬರಮ್ ದಡ್ಡರು ಎನ್ದು ಯರೂ ಹೇಳಿದನ್ತಿರಲಿಲ್ಲ.
2. ಕಯ್ಯಾರ ಕಿಞಣ್ಣ ರೈ ಎನ್ದರೆ ಯಾರು ಅಂತ ಈಗ ತಿಳಿಯಿತೋ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 9, 2008 - 11:58am — kpbolumbu

ಉ: ಕನ್ನಡದಲ್ಲಿ ಞ ಮತ್ತು ಙ

kpbolumbu's picture

ನಾನು ಓದಿರೋದು ಅದರ 'ತೃತೀಯ ಪರಿಷ್ಕೃತ ಮುದ್ರಣ'ವನ್ನ. ಬದಿಯಲ್ಲೇ ಇನ್ನೊಂದು ಮುದ್ರಣವೂ ಇತ್ತು. ಅದು 'ತಿದ್ದಿ ದೊಡ್ಡದು ಮಾಡಿದ ಎರಡನೇ ಮುದ್ರಣ'. 'ತಿದ್ದಿ ಹಿಗ್ಗಿಸಿದ ಎರಡನೇ ಅಚ್ಚು' ಎನ್ದೇಕೆ ಅವರು ಹಾಕಿಸಲಿಲ್ಲ? ದೊಡ್ಡದು ಮಾಡಿದ ಎನ್ನುವುದಕ್ಕಿನ್ತ ಒಳ್ಳೆಯ ಪ್ರಯೋಗ 'ಹಿಗ್ಗಿಸಿದ' ಎಮ್ಬುದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
February 9, 2008 - 12:38pm — ವೈಭವ

ಉ: ಕನ್ನಡದಲ್ಲಿ ಞ ಮತ್ತು ಙ

ವೈಭವ's picture

ಚನ್ನೀಲ,
ಕನ್ನಡ ಬರಹ ಸರಿಪಡಿಸೋಣ ದ ಪುಟ ೯೮ ರಲ್ಲಿ ಶಂಕರಬಟ್ಟರು ಇದನ್ನ ತಿಳಿಗೊಳಿಸಿದ್ದಾರೆ.
ಮಾದರಿ: ಅಂಕೆ, ಅಂಜಿಕೆ, ಅಂದ, ಗಂಡ, ನಂಬಿಕೆ
ಇವುಗಳ ಉಲಿಯುವಿಕೆ ಹೀಗಿದೆ
ಅಙ್ಕೆ, ಅಞ್ಜಿಕೆ, ಅನ್ದ, ಗಣ್ಡ, ನಮ್ಬಿಕೆ.....

ಆದರೆ ಇವುಗಳ ಬದಲು ನಾವು ಬರೀ ಅನುಸ್ವಾರ(ಅಂ) ವನ್ನು ಬಳಸುತ್ತಿದ್ದೇವೆ(ಸರಳಗೊಳಿಸಿದ್ದೇವೆ). ಅದನ್ನ ಮುಂದುವರಿಸಿ, ಹೀಗೆ ಅವರು ಹೇಳಿರುವುದು. ಹೀಗಿದ್ದಾಗ ಅವರು ಅನುಸ್ವಾರ (ಅಂ) ಬೇಡ ಎಂದು ಹೇಗೆ ಹೇಳಲು ಸಾದ್ಯ.?

ಅದೇ ರೀತಿ ಕನ್ನಡ ಬರಹಗಳಲ್ಲಿ ಬರುವ ಙ್ ಕಾರ ಮತ್ತು ಞ್ ಕಾರಗಳು ಬಹಳ ಅಪ್ರೂಪಾವಾಗಿ ಬರುವ ವಾಙ್ಮಯ, ಜ್ಞಾನ, ಜ್ಞಾತಿ ಮೊದಲಾದ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಇವನ್ನು ಕಾಣಬಹುದು. ಆದರೆ ಈ ಪದಗಳಲ್ಲಿ ಬರುವ ಮೊದಲ ಒತ್ತಕ್ಕರವನ್ನು ಹಲವು ಮಂದಿ 'ಗ್ನ' ಎಂಬುದಾಗಿ ಉಲಿಯುತ್ತಾರೆ. ಅದನ್ನ ಹಾಗೆ ಬರೆಯುವುದರಿಂದ ಯಾವ ತೊಂದರೆಯಿಲ್ಲ. ಅಂದರೆ ವಾಗ್ಮಯ, ಗ್ನಾನ, ಗ್ನಾತಿ ಹೀಗೆ ಬರೆದರೆ ಯಾವ ತೊಂದರೆಯೂ ಆಗುವುದಿಲ್ಲ.

ಅದೇ ರೀತಿ ಹಿಂದಿ ಬಾಶೆಯಲ್ಲಿ 'ಜ್ಞಾನ' ವನ್ನು 'ಗ್ಯಾನ' ಎಂದು ಉಲಿದು/ಬರೆಯಲಾಗುತ್ತಿದೆ.
ಮಾದರಿ: ಟಿ.ವಿಯಲ್ಲಿ ಬರುವ 'ಜ್ಞಾನ ದರ್ಶನ' ಎಂಬುದನ್ನು ಇಂಗಲೀಸಿನಲ್ಲಿ ಸೂಚಿಸಬೇಕಾದಾಗ gyan darshan ಎಂಬುದಾಗಿ ಬರೆಯಲಾಗುತ್ತದೆ.

ಕನ್ನಡದ ಸೊಗಡಿಗೆ 'ಗ್ನಾನ' ವೇ ಒಪ್ಪುತ್ತದೆ. 'ಜ್ಞಾನ' ಅಶ್ಟು ಒಪ್ಪಲ್ಲ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 8, 2008 - 6:13pm — ಸಂಗನಗೌಡ

ಉ: ಕನ್ನಡದಲ್ಲಿ ಞ ಮತ್ತು ಙ

ಸಂಗನಗೌಡ's picture

ಞ್ ಮತ್ತು ಙ್ ಗಳ ಬಗ್ಗೆ ತುಂಬಾ ಗೊಂದಲ ಉಂಟಾಗಿದೆ, ಆದರೆ ಇವುಗಳ ತೆಗೆದು ಹಾಕೋದು ಸರಿ ಅಲ್ಲ ಅನ್‍ಸುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಬಗ್ಗೆ ಹತ್ತು ಕಣಸುಗಳು
  • ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???
  • fa ಮತ್ತು za
  • ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
  • ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು

ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator