~
ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಎಂ.ಎಫ್.ಹುಸೇನ್‌ನ ಕಲೆಯಲ್ಲಿ ಹಿಂದೂ ಧರ್ಮದ ಕೊಲೆ ನಡೆದಿರುವುದರ ಬಗ್ಗೆ ಯಾರ ಆಕ್ಷೇಪಣೆಯೂ ಇಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಅಪರಾಧಕ್ಕಾಗಿ ಆತನ ನ್ಯಾಯಾಲಗಳು ಕೊರಳ ಪಟ್ಟಿ ಹಿಡಿದಿವೆ. ಆತ ಈ ದೇಶವನ್ನೇ ಬಿಟ್ಟು ಪಲಾಯನ ಮಾಡಿದ್ದಾಗಿದೆ.
ಹೀಗಿರುವಾಗ ಎನ್ ಡಿ ಟಿ ವಿ ಭಾರತ ರತ್ನಕ್ಕೆ ಹುಸೇನ್ ಹೆಸರನ್ನೇಕೆ ಸೇರಿಸಬಾರದು ಎಂದು ಹೇಳಿ ತಮ್ಮ ಮೂರ್ಖತನವನ್ನು, ನಿರ್ಭವುಕತೆಯನ್ನು ತೋರ್ಪಡಿಸಿದೆ. ಅದನ್ನು ಖಂಡಿಸಬೇಕಾದ್ದು ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಕೆಲಸ ಹಾಗೂ ಜವಾಬ್ದಾರಿ. ಆದರೆ ಇದನ್ನೇ ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿರುವ ಶ್ರೀಯುತ ಪ್ರತಾಪ್ ಸಿಂಹರು (http://thatskannada.oneindia.in/column/pratap/2008/0502-hussain-and-free...) ಬರೆದಿರುವುದನ್ನು ಓದಿದರೆ ಹುಸೇನ್ ಮತಾಂಧತೆಗಿಂದ ಇವರ ಮಂದಿಮತಿಯ ಬಗ್ಗೆ ಕರುಣೆ ಹುಟ್ಟುತ್ತದೆ.
ಹುಸೇನ್ ನ್ಯಾಯಾಲಗಳಿಗೆ ಬೇಕಾದ ವ್ಯಕ್ತಿ, ಸರಿ. ಆತನನ್ನು ದೇಶದ್ರೋಹಿ ದಾವುದ್ ಇಬ್ರಾಹಿಮ್ ನಂತೇಯೇ ಅಂತಲೂ ಅಂದುಕೊಳ್ಳೋಣ. ಒಂದು ವೇಳೆ ದಾವುದ್ ಇಬ್ರಾಹಿಂಗೆ ಆ ಚಾನಲ್ ಭಾರತ ರತ್ನ ಕೊಡಬೇಕು ಎಂದು ಹೇಳಿದ್ದರೆ ಪ್ರತಾಪರಾದಿಯಾಗಿ ಎಲ್ಲರೂ ಚಾನಲ್‌ನವರ ಮೂರ್ಖತನವನ್ನು ಟೀಕಿಸುತ್ತಿದ್ದರು. ಹಾಗೆ ಮಾಡದೆ ಹುಸೇನ್ ಭಾರತ ಮಾತೆಯನ್ನು ಬೆತ್ತಲಾಗಿ ಚಿತ್ರಿಸಿದ್ದಾನೆ ಅವನ ತಾಯಿಯನ್ನು ಪೂರ್ತಿ ಬಟ್ಟೆ ಹಾಕಿ ಚಿತ್ರಿಸಿದ್ದಾನೆ. ಸರಸ್ವತಿ, ಲಕ್ಷ್ಮಿಯರನ್ನು ನಗ್ನವಾಗಿ ಚಿತ್ರಿಸಿದ್ದರೆ ತನ್ನ ಮಗಳಿಗೆ ಪೂರ್ತಿ ಬಟ್ಟೆ ತೊಡಿಸಿದ್ದಾನೆ ಎನ್ನುತ್ತಾರೆ. ಇವರ ತಕರಾರಿರುವುದು ಎಲ್ಲಿ ಎಂಬುದೇ ಅರ್ಥವಾಗಿವುದಿಲ್ಲ, ಭಾರತ ಮಾತೆಯನ್ನು, ಸರಸ್ವತಿ, ಗಣೇಶರನ್ನು ಬೆತ್ತಲಾಗಿ ಚಿತ್ರಿಸಿರುವುದಕ್ಕೋ ಅಥವಾ ಆತನ ತಾಯಿ, ಮಗಳನ್ನು ಬೆತ್ತಲಾಗಿ ಚಿತ್ರಿಸಿರದಿದ್ದಕ್ಕೋ! ಒಂದು ವೇಳೆ ಆತ ಅವರನ್ನೂ ಬೆತ್ತಲೆಯಾಗಿ ಚಿತ್ರಿಸಿದ್ದರೆ ಅವನನ್ನು ಕಲಾವಿದ ಅಂತ ಒಪ್ಪಿಕೊಳ್ಳಬಹುದಿತ್ತು ಎನ್ನುವ ಪ್ರತಾಪರ ಕೀಳು ಮಟ್ಟದ ಮನಸ್ಥಿತಿಗೆ ಏನನ್ನಬೇಕು?

- Login or register to post comments
- 1225 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಮಂಧಮತಿ,ಮಂದಿಮತಿ ಅಲ್ಲ.ಮಂದಮತಿ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಕ್ಷಮಿಸಿ,
ಅಂಧ ಮತಿ ಎಂದು ಟೈಪಿಸುವಾಗ ಕಣ್ತಪ್ಪಿನಿಂದ ಹೀಗಾಗಿದೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
-----------ಒಂದು ವೇಳೆ ಆತ ಅವರನ್ನೂ ಬೆತ್ತಲೆಯಾಗಿ ಚಿತ್ರಿಸಿದ್ದರೆ ಅವನನ್ನು ಕಲಾವಿದ ಅಂತ ಒಪ್ಪಿಕೊಳ್ಳಬಹುದಿತ್ತು -------
ಊಹುಂ, ಅವರು ಹಾಗೆ ಹೇಳಿಲ್ಲ. ಅವರ(ಹುಸೇನ್) ತಾಯಿಯನ್ನೂ, ಮಗಳನ್ನೂ ಹೇಗೆ ಬೆತ್ತಲೆ ಮಾಡುವುದು ಆತನಿಗೆ ಬೇಡವೋ ಹಾಗೆಯೇ ಭಾರತ ಮಾತೆಯನ್ನೂ, ಹಿಂದೂ ದೇವತೆಗಳನ್ನೂ ಬೆತ್ತಲೆ ಮಾಡುವುದು ನಮಗೆ (ಭಾರತೀಯರಿಗೆ) ಬೇಡ ಎಂದು ಹೇಳಿರುವುದು ಅಷ್ಟೆ .
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹಾಗಂತ ಹುಸೇನರ ತಾಯಿ, ಮಗಳನ್ನು ಬೆತ್ತಲೆ ಮಾಡಿದರೆ ನಮಗೇನು ತೊಂದರೆಯಿಲ್ಲ ಅಂತ ಅಲ್ಲ. ಅದೂ ಕೂಡ ಬೇಡವೆಂದೇ ಭಾರತೀಯರ ಮನಸ್ಸು ಹೇಳುತ್ತದೆ. ಅದರ ಜೊತೆಗೇ ಹಾಗೆ ಮಾಡುವ ವಿಕೃತ ಕಲಾವಿದರು ಭಾರತ ದೇಶಕ್ಕೂ ಬೇಡ, ಅವರಿಗೆ ಭಾರತ ರತ್ನ ಕೊಡುವಂತೆ ಕೇಳುವ ವಿಕೃತ ಮನಸ್ಸಿನ ಜನರೂ ಮಾಧ್ಯಮಗಳೂ ಬೇಡ ಎಂಬುದು ಭಾರತೀಯರ ವಿರೋಧ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ದಿಟ..
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
first,
i am not able to type in Kannada. tried to follow font help. but could not get any assistance. there is nothing on how to use kannada unicode in windows-xp. will some one help me in this regard?
about uniquesupri's thoughts and responses to him:
how many writers, artists andsculpters of our past can you ban just because they have described, painted and sculpted Hindu Gods and Godesses in nudity? Religious and political sychophancy indulges in mass-provocatiing statments and sermons to achieve their hidden agenda.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಎಂ ಎಫ್ ಹುಸೇನ್ ಚಿತ್ರಗಳ ಕುರಿತು ಸಂಘಪರಿವಾರದವರು ಮಾಡುತ್ತಿರುವ ಟೀಕೆ ಮತ್ತು ಯೂನಿಕ್ಸುಪ್ರಿಯವರ ಅಭಿಪ್ರಾಯದ ನಡುವೆ ನನಗೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ನಗ್ನವಾಗಿರುವುದಕ್ಕೂ ಅಶ್ಲೀಲವಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ. ನಗ್ನ ಚಿತ್ರವೊಂದು ಅಶ್ಲೀಲವಾಗಬೇಕಿಲ್ಲ. ಹಾಗೆಯೇ ನಗ್ನವಾದ ಬಿಂಬಗಳು ಪೂಜಿಸುವ ಬಿಂಬವಲ್ಲ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಹುಸೇನ್ ಪ್ರಕರಣದಲ್ಲಿ ಇರುವುದು ಪಕ್ಕಾ ರಾಜಕಾರಣ. ಭಾರತಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದು ತಪ್ಪು ಎನ್ನುವವರಿಗೆ ನನ್ನದೊಂದು ಪ್ರಶ್ನೆ ಇದೆ. ಭಾರತಮಾತೆಯ ನಿಜ ಬಿಂಬ ಯಾವುದು?
ಕಲಾವಿದ ತನ್ನ ಕಲ್ಪನೆಯನ್ನು ಚಿತ್ರಿಸುತ್ತಾನೆ. ಅದನ್ನು ಸಹೃದಯ ಸ್ವೀಕರಿಸದೇ ಇರಬಹುದೇ ಹೊರತು ಕಲಾವಿದನ ಅಭಿವ್ಯಕ್ತಿಗೆ ತಡೆಯೊಡ್ಡುವುದು ಇಲ್ಲವೇ ಅವನ ಜೀವಕ್ಕೆ ಬೆದರಿಕೆಯೊಡ್ಡುವುದನ್ನು ಸರಿ ಎನ್ನಲು ಸಾಧ್ಯವಿಲ್ಲ. ನಗ್ನದೇವತೆಗಳ ಚಿತ್ರವೆಲ್ಲಾ ಅಶ್ಲೀಲ ಎಂದಾದರೆ ತಾಂತ್ರಿಕರ ಪೂಜೆಗೆ ಬಿಂಬಗಳೇ ಸಿಗುವುದಿಲ್ಲ. ಅಷ್ಟೇಕೆ ಬೇಲೂರು ಹಳೇಬೀಡು ದೇವಾಲಯಗಳೂ ಸೇರಿದಂತೆ ಅನೇಕ ದೇವಾಲಯಗಳಲ್ಲಿರುವ ಶಿಲ್ಪಗಳನ್ನೇನು ಮಾಡಬೇಕು?
ಹುಸೇನ್ ಮುಸ್ಲಿಮನಾಗಿರುವುದರಿಂದ ಆತನ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವುದರಿಂದ ರಾಜಕೀಯ ಲಾಭದ ನಿರೀಕ್ಷೆಯಲ್ಲಿರುವವರಿಗೆ ಮಾತ್ರ ಹುಸೇನ್ ಚಿತ್ರದಲ್ಲಿರುವ ನಗ್ನತೆ ಮಾತ್ರ ಕಾಣಿಸುತ್ತದೆ ಎಂಬ ಅಂಶವನ್ನು ನಾವು ಚರ್ಚೆಯಲ್ಲಿ ಮರೆತು ಬಿಡುತ್ತಿದ್ದೇವೆ. ನಗ್ನರಾಗಿಯೇ ತಿರುಗಾಡುವ ನಾಗಾ ಸಾಧುಗಳು, ಜೈನ ಮುನಿಗಳಿಗೆ ನಮ್ಮಲ್ಲಿ ಸ್ಥಾನವಿದೆ. ಇದನ್ನು ನಾವು ಅಶ್ಲೀಲ ಎಂದುಕೊಳ್ಳುವುದಿಲ್ಲ. ಚಿತ್ರವೊಂದನ್ನು ನೋಡಬೇಕಾದುದೂ ಹೀಗೆಯೇ ಅನ್ನಿಸುತ್ತದೆ. ಹುಸೇನ್ ನ ಭಾರತ ಮಾತೆಯ ಚಿತ್ರದಲ್ಲಿ ಯಾರಲ್ಲಾದರೂ ಅಶ್ಲೀಲ ಭಾವನೆಯನ್ನು ಹುಟ್ಟಿಸುತ್ತಿದ್ದರೆ ಅದು ಅವರ ದೋಷ. ನಗ್ನವಾದುದೆಲ್ಲವನ್ನೂ ಅಶ್ಲೀಲ ಭಾವನೆಯಿಂದಲೇ ಗ್ರಹಿಸುವ ಆ ಮನಸ್ಸುಗಳಿಗೆ ಚಿಕಿತ್ಸೆಯ ಅಗತ್ಯವಿದೆ.
-ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನನ್ನ ಅಭಿಪ್ರಾಯವನ್ನು ಸಂಘ ಪರಿವಾರದ ಅಭಿಪ್ರಾಯಕ್ಕೆ ಸಮನಾದುದು ಎಂದು ವ್ಯಾಖ್ಯಾನಿಸಿದ್ದ ವಿಷಾದನೀಯ. ನನಗೆ ನಿಮ್ಮ ದೃಷ್ಟಿಕೋನದ ವಸ್ತುನಿಷ್ಠತೆಯ ಬಗ್ಗೆಯೇ ಸಂಶಯ ಮೂಡುತ್ತಿದೆ.
ಅಶ್ಲೀಲತೆ ಹಾಗೂ ಕಲೆಯಲ್ಲಿನ ನಗ್ನತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಯಾವ ತಕರಾರೂ ಇಲ್ಲದೆ ಒಪ್ಪುತ್ತೇನೆ. ಆದರೆ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂಬ ವಾಕ್ಯದ ಅರ್ಥವನ್ನು ತಿಳಿಸಬಲ್ಲಿರಾ? ಸಂವಿಧಾನದಲ್ಲಿ ಪ್ರತಿಯೊಬ್ಬನಿಗೂ ನೀಡಿರುವ ಈ ಹಕ್ಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಿಂದು ಧರ್ಮದ ನಂಬಿಕೆಗಳನ್ನು ಘಾಸಿಗೊಳಿಸುವಂತೆ ಕಲೆಯ ಯಾವುದೇ ಪ್ರಕಾರದಲ್ಲಾದರೂ ಬಿಂಬಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲಾ ಧರ್ಮೀಯರಿಗೂ ಇದೆಯಲ್ಲವೇ?
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನನ್ನ ಅಭಿಪ್ರಾಯವನ್ನು ಸಂಘ ಪರಿವಾರದ ಅಭಿಪ್ರಾಯಕ್ಕೆ ಸಮನಾದುದು ಎಂದು ವ್ಯಾಖ್ಯಾನಿಸಿದ್ದ ವಿಷಾದನೀಯ. ನನಗೆ ನಿಮ್ಮ ದೃಷ್ಟಿಕೋನದ ವಸ್ತುನಿಷ್ಠತೆಯ ಬಗ್ಗೆಯೇ ಸಂಶಯ ಮೂಡುತ್ತಿದೆ.
ಅಶ್ಲೀಲತೆ ಹಾಗೂ ಕಲೆಯಲ್ಲಿನ ನಗ್ನತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಯಾವ ತಕರಾರೂ ಇಲ್ಲದೆ ಒಪ್ಪುತ್ತೇನೆ. ಆದರೆ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂಬ ವಾಕ್ಯದ ಅರ್ಥವನ್ನು ತಿಳಿಸಬಲ್ಲಿರಾ? ಸಂವಿಧಾನದಲ್ಲಿ ಪ್ರತಿಯೊಬ್ಬನಿಗೂ ನೀಡಿರುವ ಈ ಹಕ್ಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಿಂದು ಧರ್ಮದ ನಂಬಿಕೆಗಳನ್ನು ಘಾಸಿಗೊಳಿಸುವಂತೆ ಕಲೆಯ ಯಾವುದೇ ಪ್ರಕಾರದಲ್ಲಾದರೂ ಬಿಂಬಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲಾ ಧರ್ಮೀಯರಿಗೂ ಇದೆಯಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ರಮೇಶ್,
ನಿಮ್ಮ ಪ್ರತಿಕ್ರಿಯ ಆಯ್ದ ಭಾಗವನ್ನು ನಾನು ನನ್ನ ಬ್ಲಾಗಿನ ಪ್ರತಿಕ್ರಿಯೆಗೆ ಬಳಸಿಕೊಂಡಿದ್ದೆ ಅಲ್ಲಿ ಬಂದ ಒಂದು ಪ್ರತಿಕ್ರಿಯೆ ನಿಮ್ಮ ಅವಗಾಹನೆಗಾಗಿ:
ಯಾರು ಯಾರನ್ನು ಯಾವ ಭಾವದಿಂದ ಬೆತ್ತಲಾಗಿಸ್ತಾರೆ ಅನ್ನೋದರ ಮೇಲೆ ಆ ಬೆತ್ತಲನ್ನ ನೋಡುವ ಭಾವ ಡಿಪೆಂಡ್ ಆಗಿರುತ್ತೆ.
ಅಕ್ಕ ಬೆತ್ತಲಾಗಿ ನಡೆದಾಡಿದ್ದಕ್ಕೂ, ಪ್ರೊತಿಮಾಬೇಡಿ ಬೆತ್ತಲಾಗಿ ಬೀಚಿನುದ್ದಕ್ಕೆ ಓಡಿದ್ದಕ್ಕೂ ವ್ಯತ್ಯಾಸವಿದೆ.
ಜೈನ ಮುನಿಗಳು ಬೆತ್ತಲೆ ನಡೆದರೆ ಹೆಣ್ಣುಗಳು ನಾಚುವುದಿಲ್ಲ. ಸಲ್ಮಾನ್ ಬರೀ ಶರಟು ತೆಗೆದರೆ ಸಾಕು, ಉಸಿರು ಬಿಗಿ ಹಿಡಿಯುತ್ತಾರೆ! ಗೋಮಟೇಶ್ವರನ ಬೆತ್ತಲೆ ಮೂರ್ತಿ ಸೆಕ್ಸ್ ಸಿಂಬಲ್ ಅಲ್ಲ. ಯಾಕೆಂದರೆ ಅದನ್ನ ಪೂಜ್ಯ ಭಾವನೆಯಿಂದ ಪೂಜಿಸುವ ಜನಗಳೆ ನಿರ್ಮಿಸಿದ್ದು.
ಹುಸೇನ್ ಗೆ ಭಾರತ ಮಾತೆಯ ಬಗ್ಗೆ ಪೂಜ್ಯ ಭಾವನೆ ಇಲ್ಲ. ಮಗುವಿನ ಮುಗ್ಧತೆಗೆ ತನ್ನ ಅಮ್ಮನನ್ನು ಬೆತ್ತಲೆ ನೋಡುವ ಅಧಿಕಾರ ಇದೆ ಹೊರತು, ಪಕ್ಕದ ಮನೆ ಗಂಡಸಿಗಲ್ಲ.
ಬೆತ್ತಲೆ ಅನ್ನೋದು ಅಶ್ಲೀಲವಲ್ಲ ಅನ್ನೋದನ್ನ ಭಾರತೀಯರಿಗೆ ಹೇಳಿಕೊಡಬೇಕಾ? ಹಾಗೆ ಬತ್ತಲಾಗುವವರ, ಆಗಿಸುವವರ ಮನಸ್ಥಿತಿ ಎಂಥದೆನ್ನುವುದರ ಮೇಲೆ ಆ ಬತ್ತಲನ್ನು ಹೇಗೆ ಸ್ವೀಕರಿಸಬೇಕು ಅನ್ನೋದು ನಿರ್ಧಾರವಾಗುತ್ತೆ.
ಡಾಕ್ಟರ್ ಬಳಿ ಚಿಕಿತ್ಸೆಗೆ ಹೋಗುವ ಹೆಣ್ಣು ಕೆಲವು ಸಾರ್ತಿ ಬಹಳ ಮಟ್ಟಿಗೆ ಬೆತ್ತಲಾಗುತ್ತಾಳೆ. ಆಗ ಯಾವ ಮುಜುಗರವೂ ಇರದು. ಅದೆ ಡಾಕ್ಟರು ಹೊರಗೆಲ್ಲೋ ಸಿಕ್ಕಾಗ ಸೆರಗು ಜಾರಿಸು ಅಂದರೆ ಸುಮ್ಮನಿರಲು ಸಾಧ್ಯವೇ?
ಮಗು ಕೆವಲ ಮುಗ್ಧತೆಯಿಂದ ಅಮ್ಮನ ಬಳಿ ಬಂದು, “ಹಾಲು ಕೊಡು” ಅಂದರೆ ಅದನ್ನು ಯಾರೂ ಅಶ್ಲೀಲವೆನ್ನುವುದಿಲ್ಲ. ಅದೇ, ಮುಗ್ಧತೆ ಕಳೆದ ನಂತರ, ಮಗನೇ ಆದರೂ ವಯಸ್ಸು ಮೀರಿದ ನಂತರ ಅಮ್ಮನ ಎದೆಗೆ ಕೈ ಇಡುವುದನ್ನು ಅಶ್ಲೀಲ ಎಂದು ಪರಿಗಣಿಸದಿರಲು ಸಾಧ್ಯವೇ?
ಹುಸೇನ್, ಮುಗ್ಧರಲ್ಲ, ಅವರಿಗೆ ಯಾವ ವಾಂಛಲ್ಯವೂ ಇಲ್ಲವೆಂಬುದು ಅವರ ಮಾತುಗಳಲ್ಲೆ ಸುಸ್ಪಷ್ಟ. ಖಂಡಿತ್ವಾಗಿಯೂ ಅವರ ಕೃತ್ಯ ಎಷ್ಟೂ ಸಮರ್ಥನೀಯವಲ್ಲ.
ಮತ್ತು, ಹೀಗೆ ಹೇಳುತ್ತಿರುವ ನಾನು, ಯಾವ ರಾಜಕೀಯ ಪಕ್ಷಗಳನ್ನೂ ಬೆಂಬಲಿಸುವವಳಲ್ಲ. ಅದರಲ್ಲೂ ಹಿಂದುತ್ವದ ಹೆಸರಲ್ಲಿ ಗಬ್ಬೆಬ್ಬಿಸುತ್ತಿರುವ ಬಿಜೆಪಿಯ ಸಮರ್ಥಕಳಂತೂ ಅಲ್ಲವೇ ಅಲ್ಲ.
ದಯವಿಟ್ಟು ಈ ಪ್ರತಿಕ್ರಿಯೆಯನ್ನು ನಿಮ್ಮ ಸಂಪದದ ಕಮೆಂಟುದಾರರಿಗೆ ವರ್ಗಾಯಿಸಿ.
-Chetana Teerthahalli
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಚೇತನಾ ಹುಸೇನ್ ಗೆ ಭಾರತದ ಬಗ್ಗೆ ಪೂಜ್ಯ ಭಾವನೆ ಇಲ್ಲ ಎಂಬ ಪೂರ್ವ ಗ್ರಹದೊಂದಿಗೆ ಬರೆದಿದ್ದಾರೆ. ಅದು ಹೇಗೆ ಅವರು ತೀರ್ಮಾನಕ್ಕೆ ಬಂದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಪ್ರಶ್ನೆಗೆ ಇರುವ ಉತ್ತರ ಒಂದೇ. ಯಾವ ಕಲಾಸೃಷ್ಟಿಯೂ ಸಾಧ್ಯವಿಲ್ಲ. ಸೃಜನಶೀಲತೆ ಎಂಬ ಪದವನ್ನು ಪದಕೋಶಗಳಿಂದ ಕಿತ್ತುಹಾಕಬೇಕು ಅಷ್ಟೇ.
ನಮ್ಮ ಪ್ರತೀ ಕ್ರಿಯೆಯೂ ಜಗತ್ತಿನ ಯಾವುದೋ ಒಂದು ಧರ್ಮದ ದೃಷ್ಟಿಯಲ್ಲಿ ತಪ್ಪೇ ಆಗಿಬಿಡುತ್ತದೆ. ಹುಸೇನ್ ಪ್ರಕರಣದಲ್ಲಿ ನಡೆಯುತ್ತಿರುವುದು ಪಕ್ಕಾ ರಾಜಕಾರಣ. ಹುಸೇನ್ ರಚಿಸಿದ ಆ ಕಲಾಕೃತಿಗಳಿಗೆ ಎಷ್ಟೆಷ್ಟು ವರ್ಷಗಳಾದವು. ಕಳೆದ ಐದಾರು ವರ್ಷದಿಂದ ಅವು ಧಾರ್ಮಿಕ ಭಾವನೆಯನ್ನು ಕೆಣಕಿದ್ದು ಹೇಗೇ? ಯಾವುದನ್ನು ಬೇಕಾದರೂ ವಿರೋಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಭಾರತದ ಎಲ್ಲ ಪ್ರಜೆಗಳಿಗೂ ಹಕ್ಕಿದೆ. ಹುಸೇನ್ ಮನೆಯ ಮೇಲೆ, ಕಲಾಕೃತಿಗಳ ಪ್ರದರ್ಶನ ನಡೆಯುವ ಸ್ಥಳಗಳ ಮೇಲೆ ದಾಳಿ ನಡೆಸುವುದು ಯಾವ ಸೀಮೆಯ ಪ್ರಜಾಪ್ರಭುತ್ವ.
ಚೇತನಾ ತಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವಳಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ಹುಸೇನ್ ಕುರಿತು ಅವರಿಗಿರುವ ಪೂರ್ವಗ್ರಹವೇ ಅವರ ಚಿಂತನೆ ಯಾವುದರಿಂದ ಪ್ರೇರಿತವಾಗಿದೆ ಎಂಬುದನ್ನು ಸೂಚಿಸುತ್ತಿದೆ. ಹುಸೇನ್ ಗೆ ಭಾರತ ಮಾತನೆಯ ಕುರಿತು ಪೂಜ್ಯ ಭಾವನೆಯಿಲ್ಲ ಎನ್ನುವುದರ ಮೂಲಕ ಚೇತನಾ ಏನು ಹೇಳಲು ಬಯಸುತ್ತಿದ್ದಾರೆ?
-ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹಾಗಾದರೆ ನಮ್ಮ ಮನೆಯವರ ಬಗ್ಗೆ ಕೂಡ ಯಾರಾದರು ಕೆಟ್ಟದಾಗಿ ಚಿತ್ರಿಸಿದರೆ ನಾವು ಅದನ್ನು ಕಲಾಕ್ರುತಿ ಯಂತೆ ನೋಡಿ ಆನಂದಿಸಬೇಕು ಅನ್ನುತಿದ್ದೀರಿ. ಹುಸೇನನ ಮೇಲೆ ಯೆಸ್ಟು, ಯೆಲ್ಲಿ ಹಾಗು ಯಾವಾಗಲೆಲ್ಲ ಕೇಸು ದಾಕಲಾಗಿದೆ ಗೊತ್ತಿದೆಯೊ? ಆತ ಶ್ವೇತ ಸುಂದರಿ ಅನ್ನುವ ಒಂದು ಕಲಾ ಪ್ರದರ್ಶನಮಾಡಿ ಕಲ್ಕತ್ತಾ ದ ಬುದ್ದಿವಂತರಿಗೆ ಮಂಗ ಮಾಡಿರುವುದು ಓದಿರುವಿರೊ?.. ಬಿಡಿ ನಿಮ್ಮಂತವರಿ ಗಾಗಿ ತಾನೆ ನಮ್ಮಲ್ಲಿ ಸ್ವಾತಂತ್ರ್ಯ ಇರುವುದು..
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹುಸೇನ್ ನಿಮ್ಮಷ್ಟೇ, ನನ್ನಷ್ಟೇ ನಮ್ಮ ಮನೆಯವರಲ್ಲ ಎಂದು ಕೊಂಡು ನೀವು ಯೋಚಿಸುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸುತ್ತಿದೆ. ಕೆಟ್ಟದಾಗಿ ಚಿತ್ರಿಸುವುದು ಎಂಬುದರ ಬಗ್ಗೆಯೂ ನಿಮ್ಮ ನಿಲುವು ಸ್ಪಷ್ಟವಾಗುತ್ತಿಲ್ಲ. ನಗ್ನತೆ ಮತ್ತು ಅಶ್ಲೀಲತೆಯ ಕುರಿತು ಈ ಹಿಂದಿನ ಪ್ರತಿಕ್ರಿಯೆಯಲ್ಲಿಯೇ ನಾನು ಬರೆದಿದ್ದೇನೆ. ನಗ್ನವಾಗಿರುವುದು ಅಶ್ಲೀಲ ಎಂದುಕೊಂಡ ನಿಮ್ಮ ಪೂರ್ವಗ್ರಹದ ಸಮಸ್ಯೆ ಅದು.
ನಗ್ನವಾಗಿರುವುದು ಅಶ್ಲೀಲ ಎಂದಾದರೆ ನಮ್ಮ ದೇವಸ್ಥಾನಗಳೆಲ್ಲಾ ಏನಾಗಬೇಕು? ಅದರ ಬಗ್ಗೆ ತಮ್ಮ ಅಭಿಪ್ರಾಯವೇಕಿಲ್ಲ. ಕಮಲಾಕುಚ ಚೂಚುಕ ಎಂದು ಶೃಂಗಾರಮಯ ವರ್ಣನೆಯಲ್ಲೇ ನಾವು ದಿನವನ್ನು ಆರಂಭಿಸುತ್ತೇವೆ ಎಂಬುದೂ ತಮಗೆ ನೆನಪಿರಬೇಕು. ಇದನ್ನೆಲ್ಲಾ ನಾವು ಅಶ್ಲೀಲ ಎಂದುಕೊಂಡಿದ್ದೇವೆಯೇ? ಇಷ್ಟಕ್ಕೂ ನೀವು ಅಶ್ಲೀಲವೆಂದು ಹೇಳಲು ನಿಮ್ಮನ್ನು ಪ್ರೇರೇಪಿಸುತ್ತಿರುವ ಮೌಲ್ಯಗಳೆಲ್ಲಾ ಕ್ರಿಸ್ತೀಯ ಮೌಲ್ಯಗಳು ಎಂಬುದಾದರೂ ತಮಗೆ ಗೊತ್ತೇ?
-ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹೌದು ದಾವುದ್ ಕೂಡ ನಮ್ಮ ಮನೆಯವನೆ.. ಇಲ್ಲಿ ನಡೆಯುವಯೆಲ್ಲಾ ತೊಂದರೆಗಳು ನಮ್ಮ ಮನಸಿನ ಪೂರ್ವಾಗ್ರಹ ದಿಂದ ಆಗಿರುವುದು. ಹಿಂದುಗಳ ಬಾವನೆ ಯನ್ನು ಯಾರು ಬೇಕಾದರು ಹಾಳು ಮಾಡಬಹುದು ಯಾಕೆಂದರೆ ಅಶ್ಲೀಲದ ಬಗ್ಗೆ ನಿಮ್ಮ ವ್ಯಾಕ್ಯಾನ ಬಾರಿ ಚೆನ್ನಾಗಿದೆ. ಹನುಮಂತ ಸೀತಾದೇವಿ ಮುಂದೆ ನಗ್ನವಾಗಿ ನಿಂತಿರುವುದನ್ನು ಚಿತ್ರಿಸಲು ನಿಮ್ಮಂತ ಮತ್ತು ನಿಮ್ಮ ಮನೆಯವನಾದ ಹುಸೇನಂತವರಿಂದ ಮಾತ್ರ ಸಾದ್ಯ. ಇದೇ ವಿರೊದವನ್ನು ನೀವುಗಳು ಮುಸ್ಲಿಮರು ಒಂದು ವ್ಯಂಗ್ಯ ಚಿತ್ರದ ಬಗ್ಗೆ ತಗಾದೆ ತೆಗಿಯುವಾಗ ಮಾಡುವುದಿಲ್ಲ. ಯಾಕೆಂದರೆ ನಿಮಗೆ ಪೂರ್ವಾಗ್ರಹ ವಿಲ್ಲವಲ್ಲ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹಿಂದೂಗಳೆಂದರೆ ಯಾರು? ಹಿಂದೂಗಳ ಭಾವನೆ ಎಂದರೆ ಏನು? ಈ ಪ್ರಶ್ನೆಗೆ ಮೊದಲು ಉತ್ತರ ಕೊಡಿ. ಇಷ್ಟರ ಮೇಲೆ ನಿಮಗೆ ಆದರ್ಶ ಯಾರು ಅಂತಲೂ ಹೇಳಿ. ನೀನಲ್ಲದಿದ್ದರೆ ನಿನ್ನಜ್ಜ ತಪ್ಪು ಮಾಡಿದ್ದ ಎಂಬ ಲೆಕ್ಕಾಚಾರಗಳಲ್ಲಿ ಮಾತನಾಡುತ್ತಾ ಹೋದರೆ ಹಿಂದೂ ಭಾವನೆಗಳ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಎತ್ತಬೇತಾದೀತು. ಹರಿಯಾಣದಿಂದ ಕರ್ನಾಟಕದವರೆಗೂ ದಲಿತರನ್ನು ಕೊಂದಾಗ ನೋವಾಗದ, ಕೆರಳದ ಹಿಂದೂ ಮನಸ್ಸು ಒಂದು ಚಿತ್ರದಿಂದ ಹೇಗೆ ಕೆರಳಿತು ಎಂಬ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?
ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ರಮೇಶ್ ನಿಮ್ಮ ಚಿಂತನೆಯ ಬಹುತೇಕ ಅಂಶಗಳನ್ನು ನಾನು ಬೆಂಬಲಿಸುತ್ತೇನೆ.
ಆದರೆ ನನ್ನ ತಕರಾರಿರುವುದು ಒಂದೇ ವಿಚಾರದಲ್ಲಿ. ನಿಮ್ಮ ಇಷ್ಟು ಮುಕ್ತವಾದ ಹಾಗೂ ಕ್ರಾಂತಿಕಾರಕ, ವಾಸ್ತವಿಕ ಚಿಂತನೆಗಳು ಕೇವಲ ಒಂದೇ ಧರ್ಮದ ವಿಚಾರವಾಗಿ ಏಕಿರುತ್ತವೆ. ನೀವು ಇಷ್ಟೇ ಮುಕ್ತವಾಗಿ ಹಾಗೂ ಯಾವ ಹಿಂಜರಿಕೆಯೂ ಇಲ್ಲದೆ ಇತರ ಧರ್ಮಗಳ ಬಗ್ಗೆಯೂ ಮಾತನಾಡಬಹುದಲ್ಲವೇ? ಹುಸೇನ್ ಮೇಲಿನ ಜನರ ದೋಷಾರೋಪಣೆ ಹಾಗೂ ಆರೋಪಗಳ ಹಿಂದಿನ ಮನಸ್ಥಿತಿಯನ್ನು ಪ್ರಶ್ನಿಸುವ ನೀವು ಭಯೋತ್ಪಾದನೆ ಹಾಗೂ ಅದನ್ನು ಗಟ್ಟಿ ಧ್ವನಿಯಿಂದ ಪ್ರತಿಭಟಿಸಿದ ಧಾರ್ಮಿಕ ಜನರ ಮನಸ್ಥಿತಿಯ ಬಗ್ಗೆ ಏಕೆ ಪ್ರಶ್ನೆ ಎತ್ತುವುದೇ ಇಲ್ಲ?
ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಮೇಲ್ಜಾತಿಯ ಬಗ್ಗೆ ನಿಮಗಿರುವ ತಿರಸ್ಕಾರ ಹಾಗೂ ಕೋಪ ನಿಮಗೆ ದೇಶದ ನೆಮ್ಮದಿಯನ್ನು ಹಾಳು ಮಾಡಲು ಧರ್ಮವನ್ನು ಬಳಸಿಕೊಳ್ಳುವವರ ಮೇಲೇಕೆ ಬರುವುದಿಲ್ಲ? ಇದನ್ನೆಲ್ಲಾ ಗಮನಿಸಿದರೆ ನಿಮ್ಮ ಚಿಂತನೆ ಹಾಗೂ ಚಿಂತನ ಕ್ರಮವೂ ಸಹ ಅನುಮಾನಾಸ್ಪದ prejudiceಗಳಿಗೆ ಈಡಾಗಿದೆ ಎಂದು ಭಾವಿಸಬಹುದಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನಾನು ಮತ್ತು ನನ್ನ ಮನೆಯವರೆಲ್ಲಾ ಹಿಂದುಗಳು!! ನಿಮಗೆ ಹಿಂದುಗಳು ಯಾರು ಯೆನ್ನುವುದೇ ಗೊತ್ತಿಲದ ಮೇಲೆ ಅವರ ಬಾವನೆ ಹೇಗೆ ಗೊತ್ತಾಗಬೇಕು?. ದಲಿತರ ಮೇಲಿನ ದಬ್ಬಾಳಿಕೆ ಹಿಂದುಗಳಿಂದ ಆಗಿದೆಯೇ? ಅಥವ ಮೇಲ್ಜಾತಿ ಅಂತ ನೀವುಗಳು ಹೇಳುವವರಿಂದ ಆಗಿದೆಯೇ?. ದಲಿತರ ಯೆಲ್ಲಾ ಕಸ್ಟಗಳಿಗೆ ಹಿಂದುಗಳೆ( ನೀವು ಬ್ರಾಹಮಣರು ಮಾತ್ರ ಹಿಂದು ಗಳೆಂದು ತಿಳಿದು ಕೊಂಡಿರುವಂತಿದೆ)ಕಾರಣರು ಅನ್ನುವವರ ಗುಂಪಿಗೆ ಸೇರಿದ್ದೀರಿ. ನಾನು ಒಳ್ಳೆಯ ಬ್ರಾಹ್ಮಣರನ್ನು ನೊಡಿದ್ದೇನೆ ಕೆಟ್ಟ ಬ್ರಾಹಮಣರನ್ನು(ಜಾತಿಯಿಂದ) ನೊಡಿದ್ದೇನೆ. ಹಾಗೆಯೆ ಒಳ್ಳೆ ದಲಿತರು ಹಾಗು ಮುಸಲ್ಮಾನರನ್ನು ನೋಡಿದ್ದೇನೆ. ಜಾತಿಯಿಂದಾಗಿ ನಾನು ಯಾರನ್ನು ದ್ವೇಷಿಸುತ್ತಿಲ್ಲ. ಹುಸೇನ ಅಲ್ಲ ಅದನ್ನು ಮಾಡಿದವ ಹಿಂದು ಆಗಿದ್ದರೂ ನಾನು ಕಂಡಿಸುತ್ತಿದ್ದೆ. ನಿಮ್ಮ ಸಮಸ್ಯೆ ಬೇರೆ ಯೆಂಬುದು ಈಗ ಅರ್ಥ ಆಯಿತು.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನಾನೆಲ್ಲೂ ಬ್ರಾಹ್ಮಣರು ಮಾತ್ರ ಹಿಂದೂಗಳು ಎಂದಿಲ್ಲ. ನೀವೇಕೆ ಕುಂಬಳಕಾಯಿ ಕಳ್ಳನಂತೆ ಹೆಗಲು ಮುಟ್ಟಿಕೊಂಡಿರಿ ಎಂದು ಅರ್ಥವಾಗುತ್ತಿಲ್ಲ. ಹಿಂದೂ ಧರ್ಮ ಎಂಬುದೊಂದಿದೆಯೇ? ನನಗೆ ಗೊತ್ತಿರುವಂತೆ ಸನಾತನ ಧರ್ಮಕ್ಕೆ ಬ್ರಿಟಿಷರು ಕೊಟ್ಟ ಹೆಸರು ಅದು. ಅವರೇ ಒಂದು ಹಿಂದೂ ಸಕ್ಸೆಷನ್ ಆಕ್ಟ್ ಕೂಡಾ ಮಾಡಿದ್ದರು. ಇನ್ನು ದಲಿತರ ಮೇಲಿನ ದಬ್ಬಾಳಿಕೆ ಮಾಡಿದ್ದು ನೀವು ಹೇಳುತ್ತಿರುವ ಹಿಂದೂಗಳೇ ಹೊರತು ಬೇರಾರೂ ಅಲ್ಲ. ಆ ಶೋಷಣೆಗಳು ಈಗಲೂ ಮುಂದುವರಿದಿವೆ. ಅವುಗಳನ್ನು ನಾನು ಮತ್ತೊಮ್ಮೆ ಪಟ್ಟಿ ಮಾಡುವ ಅಗತ್ಯವಿಲ್ಲ ಒಮ್ಮೆ ಗೂಗ್ಲ್ ಸರ್ಚ್ ಮಾಡಿ ನೋಡಿ. ಇನ್ನು ದಲಿತರನ್ನು ಸನಾತನ ಧರ್ಮ ಅಥವಾ ನೀವು ಹೇಳುವ ಹಿಂದೂ ಧರ್ಮದೊಳಗೆ ಅದು ಹೇಗೇ ಸೇರಿಸಿಕೊಳ್ಳುತ್ತೀರಿ ಎಂಬುದೂ ನನಗೆ ಅರ್ಥವಾಗುವುದಿಲ್ಲ. ಇನ್ನು ಒಳ್ಳೆಯ ದಲಿತರು, ಒಳ್ಳೆಯ ಬ್ರಾಹ್ಮಣರು, ಒಳ್ಳೆಯ ಮುಸಲ್ಮಾನರು ಎಂಬ ಪ್ರಯೋಗಗಳೇ ನಿಮ್ಮ ಚಿಂತನೆ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತಿದೆ. ನೀವು ಮತ್ತು ನಿಮ್ಮ ಮನೆಯವರೆಲ್ಲರೂ ಹಿಂದೂಗಳಾಗಿದ್ದೀರಿ ಎಂದು ಭಾರತ ದೇಶವನ್ನು ದೇಶಪ್ರೇಮವನ್ನೂ ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವುದು ಸರಿಯಲ್ಲ. ದೇಶಪ್ರೇಮವೆಂದರೆ ಭೂಪಟವನ್ನು ಪೂಜಿಸುವುದಲ್ಲ. ಆ ದೇಶದ ಜನಗಳನ್ನೂ ಸಂಸ್ಕೃತಿಯನ್ನೂ ಪ್ರೀತಿಸುವುದು. ನಿಮ್ಮ ಮಾತುಗಳಲ್ಲಿ ಕಾಣಿಸುತ್ತಿರುವುದು ಭಾರತವೆಂಬ ದೇಶದ ಬಹುಸಂಸ್ಕೃತಿಯ ಪರಂಪರೆಯನ್ನು ನಿರಾಕರಿಸುವ ಮಾತುಗಳು.
ಯೂನಿಕ್ ಸುಪ್ರಿಯವರೇ ನೀವು ಎತ್ತಿರುವ ಪ್ರಶ್ನೆ ಸರಿಯಾಗಿಯೇ ಇದೆ. ಆದರೆ ಈ ಥ್ರೆಡ್ ನಲ್ಲಿ ನಡೆಯುತ್ತಿರುವುದು ಹುಸೇನ್ ಚಿತ್ರಗಳ ಅಶ್ಲೀಲತೆಯ ಕುರಿತಾದ ಚರ್ಚೆ. ಧರ್ಮವನ್ನು ಬಳಸಿಕೊಂಡು ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿರುವುದು ಈಗ ಜಾಗತಿಕ ವಿದ್ಯಮಾನ. ಇದರಲ್ಲಿ ಲಾಡೆನ್, ಬುಷ್, ಮುಷರಫ್, ಮೋದಿ, ಸಿಂಘಾಲ್, ತೊಗಾಡಿಯಾಗಳೆಲ್ಲರ ಪಾತ್ರವಿದೆ. ಎಲ್ಲರೂ ತಮ್ಮ ತಮ್ಮ ಮಿತಿಯಲ್ಲಿ ಮುಗ್ಧರನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ. ಮತ್ತೊಂದು ಥ್ರೆಡ್ ಆರಂಭಿಸಿ ಅದರಲ್ಲಿ ಈ ವಿಷಯ ಚರ್ಚಿಸೋಣ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಹಿಂದುಗಳು ಯಾರು ಯೆನ್ನುವುದು ನಿಮಗೆ ಯೆಸ್ಟು ಗೊತ್ತು ಅಂತ ಇಲ್ಲಿ ತಿಳಿಸಿದೀರಿ. ಬ್ರಿಟಿಷರು ಬರುವ ಮುಂಚಿನನವರೆಲ್ಲಾ ಯೇನಾಗಿದ್ದರು ಅನ್ನುವುದು ತಿಳಿಸಿ. ನಾನು ಬ್ರಾಹಮಣನಲ್ಲ ಹಾಗಾಗಿ ಹೆಲುಮುಟಿದ ಹಾಗೆ ನಿಮಗೆ ಹೇಗಾಯಿತೊ ಆ ದೇವರೆ ಬಲ್ಲ.ಮತ್ತು ದಲಿತರ ಉದ್ದಾರ ಬೇರೆಯವ್ರಿಂದಲೇ ಆಗಬೇಕು ಅಂತ ಕಾಯುತಿರುವರಲ್ಲಿ ನೀವು ಒಬ್ಬರು ಅನ್ನುವುದು ಗೊತ್ತಾಯಿತು. ದೇಶಪ್ರೇಮದ ಗುತ್ತಿಗೆ ನಿಮ್ಮಕೈನಲ್ಲಿ ಇದೆ ಅನ್ನುವುದು ಗೊತ್ತಿರಲಿಲ್ಲ, ಅದಕ್ಕೆ ಕರ್ನಾಟಕದಲ್ಲಿ ಕೂಡ ಈಗ ಲಷ್ಕರ್ ನವರು ಬಂದು ಸೇರೌವಂತಾಗಿರುವುದು. ದೇಶದ ಜನರನ್ನು ಪ್ರೀತಿಸುವುದು ಯೆಂದರೆ ಅವರ ಬಾವನೆಗಳಿಗೆ ಘಾಸಿ ಮಾಡುವುದೊ?
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ದಲಿತರ ಉದ್ದಾರ ಬೇರೆಯವರಿಂದ ಆಗಬೇಕೆಂದು ಯಾವ ದಲಿತನೂ ಬಯಸಿಲ್ಲ. ಅವರ ಬಯಸುತ್ತಿರುವುದು ಪ್ರಜಾಸತ್ತಾತ್ಮಕ ಬದುಕುವ ಹಕ್ಕು. ಹಿಂದೂಗಳೆನಿಸಿಕೊಂಡವರು ದಲಿತರಿಗೇನು ಕೊಟ್ಟಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂದು ಆಗಲೇ ಹೇಳಿದೆ. ಒಮ್ಮೆ ಗೂಗಲಿಸಿದರೆ ಎಲ್ಲವೂ ಸಿಗುತ್ತದೆ. ನಾನು ಬ್ರಾಹ್ಮಣರು ಕೆಟ್ಟವರು ಎಂದು ಎಲ್ಲಿಯೂ ಹೇಳಲಿಲ್ಲ. ಅದನ್ನೂ ನೀವೇ ಹೇಳಿದ್ದು. ಆದುದರಿಂದ ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.
ಇನ್ನು ನಿಮ್ಮ ಹಿಂದೂವನ್ನು ಒಂದಾಗಿಸುವ ಉತ್ಸಾಹ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡುವುದರಲ್ಲಿ, ದಲಿತರ ಜತೆ ವೈವಾಹಿಕ ಸಂಬಂಧಗಳನ್ನು ಬೆಳೆಸುವುದರಲ್ಲಿ ಏಕೆ ಕಾಣಿಸುವುದಿಲ್ಲ. ಮೇಲ್ಜಾತಿಯ ಹುಡುಗಿಯರನ್ನು ಪ್ರೀತಿಸದ್ದಕ್ಕಾಗಿ ಕೊಲೆಯಾದ ದಲಿತರ ಯುವಕರ ಸಂಖ್ಯೆ ಅದೆಷ್ಟಿಲ್ಲ. ಅದೆಷ್ಟು ದಲಿತ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿಲ್ಲ. ಕರ್ನಾಟದಲ್ಲೇ ಇಂಥ ಹತ್ತೆಂಟು ಪ್ರಕರಣಗಳಿವೆ. ಇವೆಲ್ಲವೂ ಹಿಂದೂ ಮನಸ್ಸನ್ನು ಕಾಡುವುದಿಲ್ಲ ಎಂದಾದರೆ ಆ ಮನಸ್ಸನ್ನು ಏನೆಂದು ಕರೆಯಬೇಕು? ನಾನು ಹೇಳಿದ ಈ ಪ್ರಕರಣಗಳಲ್ಲಿ ಯಾವುದಕ್ಕಾದರೂ ಯಾವ ರೀತಿಯಲ್ಲಾದರೂ ದಲಿತರು ಕಾರಣರೇ?
ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಅರೆ ದಲಿತರನ್ನು ಒಳಗೆ ಸೇರಿಸದಂತಹಾ ದೇವಸ್ಥಾನಗಳಿಗೆ ದಲಿತರು ಯಾಕೆ ಸ್ವಾಮಿ ಹೊಗಬೇಕು? ದಲಿತರೆ ದೇವಸ್ಥಾನ ಮಾಡಿ ಇತರರನ್ನು ಬರಲು ಬಿಡಬೇಡಿ.. ಮತ್ತೆ ವೈವಾಹಿಕ ಸಂಬಂದಗಳು ಬೇರೆ ಯಾವ ಜಾತಿಯೊಂದಿಗೆ ಬೇಳಿತಿದೆ? ಯಾಕೆ ಬೇರೆಯವರನ್ನು ಆಗಬೇಕು ದಲಿತರೇ ಬೆಳೆಯ ಬಹುದಲ್ಲವೆ? ಮತ್ತು ಹಿಂದುಳಿದ ಜಾತಿಗೆ ಸೇರಿದ ಕೆಲವರು ದಲಿತರನ್ನು ಕೆಟ್ಟದಾಗಿ ನಡೆಸಿ ಕೊಂಡಿರುವುದನ್ನು ನಾನು ನೊಡಿದ್ದೇನೆ. ಹಾಗೆಯೆ ಮುಸ್ಲಿಮರು ಕೂಡ ದಲಿತರನ್ನು ಥಮ್ಮ ಮನೆ ಕಕ್ಕಸು ತೊಳೆಯಲು ಇತ್ತಿರುವುದನ್ನು ನೊಡಿದ್ದೇನೆ. ನಮ್ಮ ಊರಿನ ದಲಿತ ಕೇರಿಗೆ ಇಸ್ಟರ ತನಕ ಯಾವ ಒಬ್ಬ ದಲಿತ ನಾಯಕ ಕೂಡ ಬಂದು ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ, ಅವರಿಗೆ ಸಿಗುವ ಸವಲತುಗಳ ಬಗ್ಗೆ ಅಲ್ಲಿಯವರಿಗೆ ತಿಳಿಸಿಲ್ಲ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಈಗ ನೀವು ನಿಮ್ಮದೇ ಆದ ಮಾತುಗಳನ್ನು ಆಡುತ್ತಿದ್ದೀರಿ.
"ದಲಿತರು ಏಕೆ ದೇವಸ್ಥಾನಕ್ಕೆ ಹೋಗಬೇಕು? ದಲಿತರೇಕೆ 'ಬೇರೆಯವರನ್ನು' ಮದುವೆಯಾಗಬೇಕು?"
ಈ ಪ್ರಶ್ನೆಗಳಲ್ಲೇ ನಾನು ಈವರೆಗೂ ಮಂಡಿಸಿದ ವಾದದ ತಳಹದಿ ಇದೆಯಲ್ಲವೇ? ಸ್ವಲ್ಪ ಯೋಚಿಸಿ
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನೀವು ಹೇಳುತ್ತಿರುವ ಹಿಂದೂ ಧರ್ಮದಲ್ಲಿ ಎಲ್ಲರೂ ಒಂದಾಗಲು ಸಾಧ್ಯವಿಲ್ಲ ಎಂಬುದನ್ನು ನೀವೇ ಒಪ್ಪಿಕೊಂಡಂತೆ ಆಯಿತು. ಅಂದರೆ ಈ ಹಿಂದೂಗಳೆಂದರೆ ಯಾರೂ ಎಂಬುದೂ ಸ್ಪಷ್ಟವಾಗುತ್ತದೆಯಲ್ಲವೇ?
ಭಾರತ ದೇಶದಲ್ಲಿ ನೀವು ಹೇಳುತ್ತಿರುವ ಹಿಂದೂಗಳನ್ನು ಅಂದರೆ ವರ್ಣಾಶ್ರಮ ಧರ್ಮದ ಪ್ರಕಾರ ಎರಡು ಬಾರಿ ಜನಿಸುವ ಮೂರು ವರ್ಗಗಳನ್ನು ಹೊರಗಿಟ್ಟರೆ ಉಳಿಯವವರ ಸಂಖ್ಯೆಯೇ ಹೆಚ್ಚು ಸ್ವಾಮಿ. ಅವರಿಗೆ ದೇಶವೆಂದರೆ ಭೂಪಟವೂ ಅಲ್ಲ, ಯಾರೋ ಚಿತ್ರಕಾರ ಚಿತ್ರಿಸಿದ ಚಿತ್ರವೂ ಅಲ್ಲ. ಅವರಿಗೆ ದೇಶವೆಂದರೆ ಮನುಷ್ಯರು, ಭೂಮಿ, ಅಲ್ಲಿರುವ ಉಳಿದೆಲ್ಲಾ ಜೀವಿಗಳು, ಸಸ್ಯಗಳು, ನದಿ, ಸಾಗರವೂ ಸೇರಿದ ಒಟ್ಟು ಪ್ರಕೃತಿ. ಅವರಾರಿಗೂ ಅಥವಾ ಈ ಮೌನಿ ಬಹುಜನರಿಗೆ ನಿಮ್ಮ 'ದೇಶಪ್ರೇಮ' ಎಷ್ಟು ಪೊಳ್ಳು ಎಂಬುದು ಗೊತ್ತು.
ಇನ್ನು ದಲಿತ ನಾಯಕರ ವಿಚಾರ. ಯಾವ ನಿರ್ಧಿಷ್ಟ ನಾಯಕನ ಬಗ್ಗೆ ನಿಮ್ಮ ಪ್ರಶ್ನೆ ಇದೆ ಎಂಬುದು ನನಗೆ ಅರ್ಥವಾಗಲಿಲ್ಲ. ನನಗೆ ಗೊತ್ತಿರುವ ಎಲ್ಲ ದಲಿತ ನಾಯಕರೂ ನನ್ನಂತೆಯೇ ಹೊಲಗೇರಿಯಲ್ಲೂ, ಮಾದಿಗರ ಕೇರಿಯಲ್ಲೂ ಹುಟ್ಟಿ ಬೆಳೆದವರೇ. ಅವರಿಂದಾಗಿಯೇ ಇಂದು ನನ್ನಂಥವನು ನಿಮ್ಮಂಥವರ ಜತೆ ಅಂತರ್ಜಾಲದಲ್ಲಿ ಚರ್ಚಿಸಲು ಸಾಧ್ಯವಾಗಿರುವುದು. ಇದಕ್ಕಿಂತ ಹೆಚ್ಚಿನ ಉತ್ತರ ಈ ಪ್ರಶ್ನೆಗೆ ಅಗತ್ಯವಿಲ್ಲ ಎನಿಸುತ್ತದೆ.
-ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ದೇವಸ್ತಾನಕ್ಕೆ ಯಾಕೆ ಹೊಗಬೇಕು, ಮದುವೆ ಯಾಕೆ ಆಗಬೇಕು ಅಂತ ಹೇಳಿದ್ದು ಅವರಿಗೆ ಅದಿಕಾರ ಇಲ್ಲ ಅಂತ ಅಲ್ಲ ಸ್ವಾಮಿ.. ಅವರನ್ನು ದೂರ ಇಟರೆ ಅಂತವರನ್ನು ನಿರ್ಲಕ್ಷಿಸಿ ಅಂತ..ಯೆಲ್ಲಾ ನಿಮ್ಮ ಮೂಗಿನ ನೇರಕ್ಕೆ ಚಿಂತಿಸಿದರೆ ಯೇನು ಮಾಡಲು ಸಾಧ್ಯ?
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಮೂಗಿನ ನೇರಕ್ಕೆ ನಾನಂತೂ ಚಿಂತಿಸುತ್ತಿಲ್ಲ. ಅದನ್ನು ಮಾಡಿದ್ದು ತಾವು ಎಂದು ನಾನಿಲ್ಲಿ ವಿನಯಪೂರ್ವಕವಾಗಿಯೇ ಸೂಚಿಸಲು ಬಯಸುತ್ತೇನೆ. ಭಾರತದ ಇನ್ಕ್ಲೂಸಿವ್ ಆಗಿರುವ ಬಹುಸಂಸ್ಕೃತಿಯನ್ನು ದಲಿತರೆಂದೂ ಮರೆತಿಲ್ಲ. ಹಾಗೊಂದು ವೇಳೆ ಮರೆತಿದ್ದರೆ ಈ ದೇಶದಲ್ಲಿ ಎಂದೋ ಸಿವಿಲ್ ವಾರ್ ಆರಂಭವಾಗಬೇಕಿತ್ತು. ಅಷ್ಟೊಂದು ಶೋಷಣೆಯನ್ನು ಅವರು ಸಹಿಸಿಕೊಂಡಿದ್ದಾರೆ ಮತ್ತು ಆ ಸಹನೆಯನ್ನೂ ಈಗಲೂ ಮುಂದುವರಿಸಿದ್ದಾರೆ.
ರಮೇಶ್ ಸಮಗಾರ
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಅಣ್ಣಾ ,
ನೀನು ಹೇಳಿದ್ದು ಒಪ್ಪುತ್ತೇನೆ ! ನಿನ್ನೆ ಸತ್ಯ ನಾರಾಯಣ ಭಟ್ಟರು (Bio Diversity Board Head) ಒ೦ದು ವರ್ಕ್ ಷಾಪ್ (ಜನಪದ ಔಷದಿಗಳ) ಮಾಡಿದರು. ಅದರಲ್ಲಿ ಆಯುರ್ವೇದ / ಜನಪದ ಔಷದಿಗಳು ("ದಲಿತರ ಔಷದಿ" )/ ವೈದಿಕ ಧರ್ಮದ ಸಸ್ಯಗಳು ಇತ್ಯಾದಿ ನೋಡಿದರೆ - ಇವೆಲ್ಲಾ ವನ್ನು ಕುರಿತು ಮಾತ್ಡಬೇಕಾದರೆ ಉದ್ವೇಗಕ್ಕೆ ಒಳಾಗಾಗಬಾರದು.
ಆಯುರ್ವೇದದಲ್ಲಿ ಸುಮಾರು 800 ಜಾತಿಯ ಗಿಡ ಮೂಲಿಕೆಗಳಿವೆ, ಅದೇ ಜನಪದದಲ್ಲಿ 4000 ಕ್ಕೂ ಹೆಚ್ಚಾಗಿದೆ.
ಸತ್ಯ ನಾರಾಯಣ ಭಟ್ಟರು ಇವೆಲ್ಲಾ ಡಾಕ್ಯುಮೆ೦ಟ್ ಆಗಿಲ್ಲಾ ಅ೦ತಾ ಎಲ್ಲಾ ಡಾಕ್ಯುಮೆ೦ಟ್ ಮಾಡಿಸ್ತಾಯಿದ್ದಾರೆ.
ಈಗ ಬೇಕಾಗಿರೋದು ಇ೦ತಹ ಸಮನ್ವಯ ! ಸುಮ್ಕೇ ಒ೦ದು ಪದ್ದತಿಯನ್ನೇ ಸದಾ ಠೀಕಿಸುತ್ತಾ ಹಿ೦ದೂ ಧರ್ಮ ವನ್ನು ಶಪಿಸುತ್ತಾ
ಕುಳಿತು ಕೊಳ್ಳುವುದಕಿನ್ನಾ ಪೂರಕವಾಗಿ ಕೆಲ್ಸಾ ಮಾಡ್ಬೇಕು. ಎರಡರಲ್ಲೂ ಒಳ್ಳೇದು ಕೆಟ್ಟದು ಇವೆ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ರಮೇಶ್ ನಿಮ್ಮ ಸಲಹೆಯಂತೆಯೇ ನಾನು ಹೊಸ ಚರ್ಚೆಯನ್ನು ಪ್ರಾರಂಭಿಸಿರುವೆ.
ಲಿಂಕ್ ಇಲ್ಲಿದೆ: http://www.sampada.net/forum/7490
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಎಂತದು ಮಾರಾಯ. ಕರ್ಮ. ಆ ಚಿತ್ರಗಳು ನೋಡ್ಲಿಕ್ಕೆ ಆಗ್ತದ ?
ಇದೇ ರೀತಿ ಅವರ ಮತೀಯರ ಹೆಣ್ಣು ಮಕ್ಕಳನ್ನು ಚಿತ್ರಿಸಿನೋಡು ಅಂತಹೇಳಿ ನಮ್ಮ ಹುಸೇನಿ ಮಿಯರವರಿಗೆ. ಅದೇಕೆ ಅವರು ದೇವಿದೇವತೆಗಳನ್ನು ಚಿತ್ರಿಸುವುದು ? ಅದಕ್ಕೆ ಪೂರ್ವ ಸಿದ್ಧತೆ, ಹಾಗೂ ಇತಿಹಾಸಪ್ರಜ್ಞೆ ಬೇಕಲ್ಲವೆ ? ಯಾಕೆ ನಮ್ಮ ’ಹುಸೇನ್ ಭಾಯಿ,’ ತಲೆಕೆಡಿಸ್ಕೊತಿದಾರೊ ಗೊತ್ತಿಲ್ಲ. ಮಲ್ಲಿಕಾ ಶೆರಾವತ್, ಭೀಭತ್ಸ ಬಾಶು, ಕರೀನಾ ಕಪೂರ್ , ಇವ್ರೆಲ್ಲ ಇದಾರಲ್ಲಾ. ಅವ್ರೇನ್ ಪೋಸ್ ಕೇಳಿದ್ರು ಅವ್ರು ಕೊಡ್ತಾರೆ. ತೊಗೊಳ್ಲಿ ಅವ್ರನ.
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
http://www.bhashaindia.com/Developers/Tutorial/EnablingKannada.aspx
http://vishvakannada.com/node/48
http://vishvakannada.com/node/49
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಒಮ್ಮೆ ಹುಸೇನನ ಚಿತ್ರಗಳನ್ನು ನೋಡಿ ಪ್ರತಿಕ್ರೀಯಿಸಿ..
http://www.hindujagruti.org/activities/campaigns/national/mfhussain-camp...
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
http://www.hindujagruti.org/activities/campaigns/national/mfhussain-camp...
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನೋಡಿದೆ...
:(ಇಂತಹ ಕಲಾವಿದನಿಗೆ ಭಾರತ ರತ್ನ? ಮೆಚ್ಚಬೇಕು ಯವರ ಧೈರ್ಯ..
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ನೋಡಿದೆ... :(ಇಂತಹ ಕಲಾವಿದನಿಗೆ ಭಾರತ ರತ್ನ? ಮೆಚ್ಚಬೇಕು ndtvಯವರ ಧೈರ್ಯ..
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
' ERROR - This page is no longer available'
ಲಿಂಕ್ ಸಿಗ್ತಾಯಿಲ್ಲ..
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಗುರುರಾಜ ಕೊಡ್ಕಣಿ
ಭಾರತಮಾತೆಯ ವಿಷಯದಿ೦ದ ಶುರುವಾದ ಈ ಚರ್ಚೆ ,ಜಾತಿಗಳ ವಿಷಯಕ್ಕೆ ಹೊಯಿತಲ್ಲ? ಹುಸ್ಸೇನ ಆಗಲಿ,ಇನ್ನ್ಯಾರೇ ಆಗಲಿ ಭಾರತಮಾತೆಯನ್ನು ಬೆತ್ತಲಾಗಿ ಚಿತ್ರಿಸುವುದು ತಪ್ಪು.ಭಾರತಮಾತೆಗೆ ನಿಜವಾದ ಬಿ೦ಬವಿಲ್ಲ ನಿಜ,ಆದರೇ ಅದು ದೇಶದ ಪ್ರತೀಕ.ದಲಿತ ಹೆಣ್ಣು ಮಕ್ಕಳನ್ನು ಬೆತ್ತಲೆ ಓಡಿಸಿದರು ಎ೦ದು ಮೇಲಿನ ಪ್ರತಿಕ್ರಿಯೆಯಲ್ಲಿ ಯಾರೋ ಹೇಳಿದ ನೆನಪು.ಇದು ಕೂಡಾ ಹಾಗೆಯೇ ಸ್ವಾಮಿ,ದೇಶವನ್ನು ಬೆತ್ತಲುಗೊಳಿಸಿದ೦ತೆ.
ಜಾತಿಯ ವಿಷಯ ತೆಗೆದುಕೊಡರೆ ಹೌದು,ಹಿ೦ದೆ ಬ್ರಾಹ್ಮಣರಿ೦ದ, ಮೇಲ್ವರ್ಗದವರಿ೦ದ ದಲಿತರ ಮೇಲೆ ಅನ್ಯಾಯವಾಯಿತು.ಅದಕ್ಕಾಗಿಯೇ ಅವರಿಗೆ ’ಮೀಸಲಾತಿ’ಎನ್ನುವುದನ್ನು ಕೊಡಲಾಯಿತು.ವಿಪರ್ಯಾಸವೆ೦ದರೇ ಇದೇ ಮೀಸಲಾತಿ ಇ೦ದು ಸಾಮಾಜಿಕ ಅಸಮಾನತೆಯ ಹೆಚ್ಚುವಿಕೆಗೆ ಕಾರಣವಾಗುತ್ತಿದೆ.ಒ೦ದು ಚಿಕ್ಕ ಉದಾಹರಣೆ ತೆಗೆದುಕೊಳ್ಳಿ. ಒಬ್ಬ ಪ್ರತಿಭಾವ೦ತ ಸಾಮಾನ್ಯ ವರ್ಗದ ವಿದ್ಯಾರ್ಥಿ ಒ೦ದು ಅಭ್ಯ೦ತರಿಕೆಯ (engineering)ಪದವಿ ಮುಗಿಸಲು ಸುಮಾರು ೩ ರಿ೦ದ ೪ ಲಕ್ಶ ತೆಗೆದುಕೊಳ್ಳುತ್ತಾನೆ.ಅದೇ ಒಬ್ಬ ಮೀಸಲಾತಿಯ ಅಭ್ಯರ್ಥಿ ಅದನ್ನು ಸ೦ಪೂರ್ಣ ಉಚಿತವಾಗಿ ಮುಗಿಸುತ್ತಾನೆ(ತನ್ನ ವಯಕ್ತಿಕ ಖರ್ಚುಗಳನ್ನು ಹೊರತುಪಡಿಸಿ).ಮೆಲ್ವರ್ಗದ್ದ ಬಡ ಬುದ್ದಿವ೦ತ ವಿಧ್ಯಾರ್ಥಿಯೊಬ್ಬ ಇದನ್ನು ಕಲಿಯಲು ಸಾಧ್ಯವೇ?.ಆದರೆ ದಲಿತವರ್ಗದ ಒಬ್ಬ ಶ್ರೀಮ೦ತ ವಿಧ್ಯಾರ್ಥಿ ಕೂಡಾ ಉಚಿತವಾಗಿ ಇದನ್ನು ಮಾಡಲು ಸಾಧ್ಯ!.ಇದರಿ೦ದ ಸಮಾಜದ್ದಲ್ಲಿ ಅಸಮಾನತೆ ಹೆಚ್ಚಿದ೦ತಾಗುವುದಿಲ್ಲವೇ?
ಇದರಿ೦ದ ಇನ್ನೂ ಒ೦ದು ಅಪಾಯಕಾರಿ ಬೆಳವಣಿಗೆ ಇದೆ.ಬಡ ಮೇಲ್ವರ್ಗದವರ ಅಸಹಾಯಕತೆ ,ಸಿಟ್ಟಾಗಿ ತಿರುಗಿ ದಲಿತ ವರ್ಗದವರ ಮೇಲೆ ತಿರುಗುತ್ತದೆ.ಅನಗತ್ಯ ಜಾತಿಗಲಭೆಗಳಿಗೆ ತಿರುಗುತ್ತದೆ.ಇಷ್ಟಲ್ಲದೆ ದಲಿತವರ್ಗದವರಲ್ಲಿ ಕಷ್ಟಪಡದಿದ್ದರೂ ಸಿಗುತ್ತದೆ ಎನ್ನುವ ಭಾವ ಬೆಳೆಸುತ್ತದೆ.
(ಈ ಮೇಲಿನ ಉದಾಹರಣೆ ಮತ್ತು ಜಾತಿಗಲಭೆಗಳ ವಿಷಯ ಕಣ್ಣಾರೇ ಕ೦ಡದ್ದು). ಅಲ್ಲದೇ ಮಾತುಮಾತಿಗೆ "ಜಾತಿಯ ಮೇಲೆ ಬೈದ ಎ೦ದು ಒಳಗೆ ಹಾಕಿಸ್ಟೀನಿ" ಎನ್ನುವವರು ಎಷ್ಟಿಲ್ಲ? ಹಾಗಾಗಿ ಬಡತನದ ಆಧಾರದ ಮೇಲೆ ಮೀಸಲಾತಿ ಕೊಡುವುದು ಉತ್ತಮ.
ಹಿ೦ದೂ ಎನ್ನುವುದು ಸನಾತನ ಧರ್ಮ ಎನ್ನುವುದರ ಸಮನಾರ್ಥಕ ರೂಪವಷ್ಟೇ.ಹಿ೦ದೂ ಧರ್ಮವೆನ್ನುವುದೇ ಇಲ್ಲ ಎನ್ನುವುದು ಹಾಸ್ಯಾಸ್ಪದ.