ಬೇಸಿಸ್ ಪಾಯಿಂಟ್ ಎಂದರೇನು ?
ನಾವುಗಳು ಅವಾಗವಾಗ ಇದನ್ನು ಕೇಳಿರುತ್ತೇವೆ.
೧) "ಅ" ಬೇಂಕ್ ಬೇಸಿಸ್ ಪಾಯಿಂಟುಗಳನ್ನು "ಅವಲಕಿ"ಯಷ್ಟು ಕಡಿಮೆ ಮಾಡಿದೆ. ಅದರಿಂದಾಗಿ ಬಡ್ಡಿದರ ಕಡಿಮೆಯಾಗುತ್ತೆ.
೨) ಎಲ್ಲಾ ಬೇಂಕುಗಳು, ಮನೆಸಾಲದ ಬೇಸಿಸ್ ಪಾಯಿಂಟುಗಳನ್ನು "ಪವಲಕಿ"ಯಷ್ಟು ಹೆಚ್ಚುಮಾಡಿದೆ. ಮನೆಸಾಲದ ಮೇಲೆ ಹೆಚ್ಚುಬಡ್ಡಿಯನ್ನು ತೆರಲು ರೆಡಿಯಾಗಿ.
ಹಾಗೆಯೇ, ಈ ಬೇಸಿಸ್ ಪಾಯಿಂಟುಗಳ ಮಾತು ಬಂದಾಗ, ಆರ್.ಬಿ.ಐನ ಹೆಸರು ಕೇಳಿ ಬಂದೇ ಬರುತ್ತದೆ.
ಆದ್ದರಿಂದ, ಬೇಸಿಸ್ ಪಾಯಿಂಟುಗಳಿಗೂ ಮತ್ತು ಸಾಲ (ವಿಶೇಷವಾಗಿ ಮನೆಸಾಲ)ಕ್ಕೂ ಏನು ನಂಟು ಎಂಬುದನ್ನು ಯಾರಾದರೂ ಸಂಪದಿಗರಿಗೆ ತಿಳಿಸಿಕೊಡುತ್ತೀರಾ ?

- Login or register to post comments
- 337 hits
- Email this forum





RSS:
ಉ: ಬೇಸಿಸ್ ಪಾಯಿಂಟ್ ಎಂದರೇನು ?
ಪ್ರಿಯ ಸುನಿಲ್,
ಹಣಕಾಸಿನ ವ್ಯವಹಾರಗಳಲ್ಲಿ ಬಡ್ಡಿಯ ದರವನ್ನು “ಪ್ರತಿಶತ” ( ಪರ್ಸೆಂಟ್) ಅನ್ನೋ ಮಾನವನ್ನು ಉಪಯೋಗಿಸುತ್ತೇವೆ ಅಲ್ಲವೇ? ಉದಾಹರಣೆಗೆ ಮನೆ ಸಾಲದ ಬಡ್ಡಿ ದರ ೮ ಪ್ರತಿಶತ ಅಥವಾ ೮ ಪರ್ಸೆಂಟ್ ಅಂದರೆ ನೂರು ರೂಪಾಯಿ ಅಸಲಿಗೆ ಎಂಟು ರೂಪಾಯಿ ವಾರ್ಷಿಕ ಬಡ್ಡಿ ಅನ್ನೋ ಅರ್ಥ. ಈ ಬಡ್ಡಿಯ ದರಗಳಲ್ಲಿ ಇನ್ನೂ ಸೂಕ್ಷ್ಮವಾದ ಬದಲಾವಣೆಗಳನ್ನು ಸೂಚಿಸಲು “ಬೇಸಿಸ್ ಪಾಯಿಂಟ್” ಅನ್ನುವ ಮಾನದಂಡ ಬಳಸಲಾಗುತ್ತೆ.
ಒಂದು ಪರ್ಸೆಂಟ್ = ನೂರು ಬೇಸಿಸ್ ಪಾಯಿಂಟ್‍ಗಳು. ಇದು ವಿಶ್ವಾದ್ಯಂತ ಹಣಕಾಸಿನ ವಹಿವಾಟಿನಲ್ಲಿ ಉಪಯೋಗಿಸುವ ಮಾನ. ಇದು ಬರೀ ನಮ್ಮ ಆರ್. ಬಿ. ಐ ಗೆ ಸೀಮಿತವಲ್ಲ.
ಬಡ್ಡಿಯದರ ೮ ರಿಂದ ೮.೨ ಪರ್ಸೆಂಟ್ ವರೆಗೂ ಹೆಚ್ಚಾದರೆ ಇಪ್ಪತ್ತು ಬೇಸಿಸ್ ಪಾಯಿಂಟ್ಗಳ ವೃಧ್ಧಿ ಅಂತ ಹೇಳುವ ವಾಡಿಕೆ. ಇದನ್ನೇ ೦.೨ ಪರ್ಸೆಂಟ್ ವೃಧ್ಧಿ ಅಂತಲೂ ಹೇಳಬಹುದು. ಹೆಚ್ಚಿನ ಮಾಹಿತಿಗೆ ಕೆಳಕಂಡ ಕೊಂಡಿಗಳನ್ನು ಉಪಯೋಗಿಸಿ ನೋಡಿ.
http://en.wikipedia.org/wiki/Basis_point
http://www.investopedia.com/ask/answers/05/basispoint.asp
- ನವರತ್ನ ಸುಧೀರ್
ಉ: ಬೇಸಿಸ್ ಪಾಯಿಂಟ್ ಎಂದರೇನು ?
ಬೇಸಿಸ್ ಪಾಯಿಂಟ್‍ಗಳ ಬಗ್ಗೆ ಆಗಲೇ ಹೇಳಿದ್ದಾರೆ. ಆದರೆ ಬೇಸಿಸ್ ಪಾಯಿಂಟ್ ಬಗ್ಗೆ ಮಾತಾಡುವಾಗಲೆಲ್ಲ ಆರ್.ಬಿ.ಐ. ಹೆಸರು ಯಾಕೆ ಬರುತ್ತದೆ ಎಂಬುದಕ್ಕೆ ಕಾರಣ:
ಆರ್.ಬಿ. ಐ ತನ್ನ ಬಡ್ಡಿದರವನ್ನು ಏರಿಳಿಸಿದಾಗ ಬೇಸಿಸ್ ಪಾಯಿಂಟ್ ಗಳ ಮೂಲಕ ಅದನ್ನು ವ್ಯಕ್ತಪಡಿಸುತ್ತದೆ. ಭಾರತದಲ್ಲಿ ತಮ್ಮ ಬ್ಯಾಂಕಿನ ಸಾಲಗಳ ಬಡ್ಡಿ ದರವನ್ನು ಹೆಚ್ಚಿಸುವುದು, ಕಡಿತಗೊಳಿಸುವುದು ಯಾವ ಬ್ಯಾಂಕಾದರೂ ಮಾಡಬಹುದು. ಆದರೆ ಭಾರತದ ಎಲ್ಲಾ ಬ್ಯಾಂಕ್‍ಗಳು ಆರ್.ಬಿ.ಐ ಜೊತೆ ನಿಕಟವಾದ ಆರ್ಥಿಕ ಸಂಬಂಧಗಳಿರುವುದರಿಂದ ಎಲ್ಲಾ ಬ್ಯಾಂಕ್‍ಗಳ ಬಡ್ಡಿದರಗಳು ಆರ್.ಬಿ.ಐ ನ ಬಡ್ಡಿದರದ ಮೇಲೆ ಅವಲಂಬಿತವಾಗಿರುತ್ತದೆ.
ಆರ್.ಬಿ.ಐ. ಕೂಡ ಸುಮ್ಮ ಸುಮ್ಮನೆ ಬಡ್ಡಿದರದ ಏರಿಳಿತ ಮಾಡುವುದಿಲ್ಲ. ಹಣದುಬ್ಬರ ಹೆಚ್ಚಾಗುವ ಲಕ್ಷಣಗಳಿದ್ದರೆ, ದೇಶ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೆ ಅಥವ economy 'overheat' ಆಗುವ ಲಕ್ಷಣವಿದ್ದರೆ ಮಾತ್ರ ಆರ್.ಬಿ.ಐ. ಈ ದರಗಳನ್ನು ಬದಲಾಯಿಸುತ್ತದೆ. ಹೀಗಾಗಿ ಬೇಸಿಸ್ ಪಾಯಿಂಟ್‍ಗಳು ನೇರವಾಗಿಯಲ್ಲದಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅದರಲ್ಲಿ ಆರ್.ಬಿ.ಐ. ನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ಬೇಸಿಸ್ ಪಾಯಿಂಟ್ ಎಂದರೇನು ?
ಒಂದು ಶೇಕಡಾದಲ್ಲಿ ನೂರು ಬೇಸಿಸ್ ಪಾಯಿಂಟ್ ಇದೆ. ಕಾಲು ಶೇಕಡಾ ಬಡ್ಡಿ ದರ ಇಳಿಯಿತು ಅನ್ನುವುದನ್ನು ಇಪ್ಪತ್ತೈದು ಬೇಸಿಸ್ ಪಾಯಿಂಟ್ ಇಳಿಯಿತು ಅನ್ನಬಹುದು.
*ಅಶೋಕ್
ಉ: ಬೇಸಿಸ್ ಪಾಯಿಂಟ್ ಎಂದರೇನು ?
ನವರತ್ನ ಸುಧೀರ್ ಮತ್ತು ಅಶೋಕ್, ಸವಿಯೊದಗು. ಬೇಸಿಸ್ ಪಾಯಿಂಟುಗಳೆಂದೇನೆಂಬುದು ಈಗ ನನಗೆ ತಿಳಿಯಿತು. ಮತ್ತೊಮ್ಮೆ ನನ್ನಿ.