ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಚಿಂತಕರ selective criticism

February 14, 2008 - 10:09am — uniquesupri

ನನಗೆ ಇದಕ್ಕಿಂತ ಉತ್ತಮವಾದ ಪದಪುಂಜವನ್ನು ಬಳಸಲಿಕ್ಕೆ ಸಾಧ್ಯವಾಗಲಿಲ್ಲ. ಚಿಂತಕರು, ಸಮಾಜದ elite ಹಣೆಪಟ್ಟಿಯನ್ನು ಕಟ್ಟಿಕೊಂಡಿರುವವರಿಗೆ ತಮ್ಮ ಚಿಂತನೆಯಲ್ಲಿರುವ ಮುಕ್ತತೆ, ಚೌಕಟ್ಟುಗಳನ್ನು ಮೀರಿ ಚಿಂತಿಸುವ ಧೈರ್ಯ ಸಾಹಸ ಮನೋಭಾವನೆ ಸಮಾಜದ ವಾಸ್ತವಗಳನ್ನು ಎದುರಿಸುವ ಸಮಯ ಬಂದಾಗ ಕಾಣೆಯಾಗಿಬಿಡುತ್ತದಾ?

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಧರ್ಮದ ಬಗ್ಗೆ ಅವರು ಮಾಡುವ ಟೀಕೆ ಟಿಪ್ಪಣಿಗಳು. ಉದಾಹರಣೆಗೆ ಹಿಂದೂ ಧರ್ಮದ ಬಗ್ಗೆ, ಅದರ ಆಚರಣೆಗಳ ಬಗ್ಗೆ, ಹಿಂದೂ ಧರ್ಮದ ಪ್ರತಿಪಾದಕರ ಬಗ್ಗೆ, ಹಿಂದೂ ಧರ್ಮದ ಕುಂದುಗಳ ಬಗ್ಗೆ ತುಂಬಾ ಮುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ತಮ್ಮ ಚಿಂತನಗಳನ್ನು ಅಭಿಪ್ರಾಯಗಳನ್ನು ತಿಳಿಸಲ್ಪಡುವ ಈ ಬುದ್ಧಿಜೀವಿಗಳು ನಿಜಕ್ಕೂ ಆ ಮಟ್ಟಿಗಿನ ಧೈರ್ಯವನ್ನು ತೆಗೆದುಕೊಳ್ಳಲು ತಮ್ಮ ಎದುರಾಳಿಯ ಪ್ರತಿಸ್ಪಂದನೆಯ ಸ್ವರೂಪವನ್ನೂ ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೇನೊ! ಟೀಕೆಗಳು ಮಾಡಿದಾಗ ಎಲ್ಲಿ ಕೇವಲ ಬಾಯಿ ಮಾತಿನ ಚರ್ಚೆಗಳು, ವಾಗ್ವಾದಗಳು, ಪತ್ರ ಸಮರ ನಡೆಯುತ್ತವೆಯೋ ಅಲ್ಲಿ ಯಾವ ಹಿಂಜರಿಕೆಯೂ ಇಲ್ಲದ ಹಾಗೆ ಮಾತನಾಡುವುದು. ಎಲ್ಲಿ ಜನರು ಯಾವುದೇ ಬಗೆಯ ಟೀಕೆಗಳಿಗೆ ಹಿಂಸೆಯಿಂದಲೇ ಪ್ರತಿಕ್ರಿಯೆ ಕೊಡುತ್ತಾರೋ ಅಲ್ಲಿ ನಯವಾದ, ಹಾರಿಕಿಯ ಮಾತು ಬಹುತೇಕ ಸಮಯದಲ್ಲಿ ಜಾಣ ಮೌನ. ಇದು ಯಾವ ಬಗೆಯ ಬೌದ್ಧಿಕ ನಿಷ್ಪಕ್ಷಪಾತವಾದ ಹಾಗಾಗುತ್ತೆ?

ಈ ಬಗೆಯ ಮನೋಭಾವದಿಂದಾಗಿ ಕೇವಲ ಮಾತಿನ ಮಟ್ಟದಲ್ಲಿ ಪ್ರತಿಕ್ರಿಯೆ ನೀಡುವ ಸಹನೆಯಿರುವ ಜನರಿಗೂ ಸಹ ಅನ್ಯರು ಬಳಸುವ ದಂಡನಾ ಕ್ರಮವೇ ಸೂಕ್ತ ಎಂದು ಅನ್ನಿಸಿದರೆ ಅದಕ್ಕಿಂತ ಹೆಚ್ಚಿನ ದುರಂತ ಯಾವುದಿದೆ?

ಹಿಂದಿನ ಚರ್ಚೆಯೊಂದರಲ್ಲಿ ಈ ಬಗ್ಗೆ ಒಂದು ಕಮೆಂಟು ಹಾಕಿದ್ದೆ ಅದು ಆ ಚರ್ಚೆಯ ಚೌಕಟ್ಟಿನಲ್ಲಿ ಚರ್ಚಿಸಲು ಯೋಗ್ಯವಾಗಿರದ ಕಾರಣ ಇಲ್ಲಿ ಪ್ರತ್ಯೇಕ ಚರ್ಚೆಯನ್ನು ಪ್ರಾರಂಭಿಸಿರುವೆ.

ಅಲ್ಲಿನ ಕಮೆಂಟು ಹೀಗಿದೆ:

Quote:
ರಮೇಶ್ ನಿಮ್ಮ ಚಿಂತನೆಯ ಬಹುತೇಕ ಅಂಶಗಳನ್ನು ನಾನು ಬೆಂಬಲಿಸುತ್ತೇನೆ.
ಆದರೆ ನನ್ನ ತಕರಾರಿರುವುದು ಒಂದೇ ವಿಚಾರದಲ್ಲಿ. ನಿಮ್ಮ ಇಷ್ಟು ಮುಕ್ತವಾದ ಹಾಗೂ ಕ್ರಾಂತಿಕಾರಕ, ವಾಸ್ತವಿಕ ಚಿಂತನೆಗಳು ಕೇವಲ ಒಂದೇ ಧರ್ಮದ ವಿಚಾರವಾಗಿ ಏಕಿರುತ್ತವೆ. ನೀವು ಇಷ್ಟೇ ಮುಕ್ತವಾಗಿ ಹಾಗೂ ಯಾವ ಹಿಂಜರಿಕೆಯೂ ಇಲ್ಲದೆ ಇತರ ಧರ್ಮಗಳ ಬಗ್ಗೆಯೂ ಮಾತನಾಡಬಹುದಲ್ಲವೇ? ಹುಸೇನ್ ಮೇಲಿನ ಜನರ ದೋಷಾರೋಪಣೆ ಹಾಗೂ ಆರೋಪಗಳ ಹಿಂದಿನ ಮನಸ್ಥಿತಿಯನ್ನು ಪ್ರಶ್ನಿಸುವ ನೀವು ಭಯೋತ್ಪಾದನೆ ಹಾಗೂ ಅದನ್ನು ಗಟ್ಟಿ ಧ್ವನಿಯಿಂದ ಪ್ರತಿಭಟಿಸಿದ ಧಾರ್ಮಿಕ ಜನರ ಮನಸ್ಥಿತಿಯ ಬಗ್ಗೆ ಏಕೆ ಪ್ರಶ್ನೆ ಎತ್ತುವುದೇ ಇಲ್ಲ?
ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಮೇಲ್ಜಾತಿಯ ಬಗ್ಗೆ ನಿಮಗಿರುವ ತಿರಸ್ಕಾರ ಹಾಗೂ ಕೋಪ ನಿಮಗೆ ದೇಶದ ನೆಮ್ಮದಿಯನ್ನು ಹಾಳು ಮಾಡಲು ಧರ್ಮವನ್ನು ಬಳಸಿಕೊಳ್ಳುವವರ ಮೇಲೇಕೆ ಬರುವುದಿಲ್ಲ? ಇದನ್ನೆಲ್ಲಾ ಗಮನಿಸಿದರೆ ನಿಮ್ಮ ಚಿಂತನೆ ಹಾಗೂ ಚಿಂತನ ಕ್ರಮವೂ ಸಹ ಅನುಮಾನಾಸ್ಪದ prejudiceಗಳಿಗೆ ಈಡಾಗಿದೆ ಎಂದು ಭಾವಿಸಬಹುದಲ್ಲವೇ?        

‹ ವಾರಗಳ ಹೆಸರಿನ ಮಹತ್ವವೇನು? ಬಿಸಿಲಿನ ಬೇಗೆ ›
  • ಸಮಾಜ
~.~
  • Login or register to post comments
  • 376 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 14, 2008 - 11:29am — ramesh-m

ಉ: ಚಿಂತಕರ selective criticism

ramesh-m's picture

ಕಳೆದ ಹದಿನೈದು ವರ್ಷಗಳಲ್ಲಿ ಸೃಷ್ಟಿಯಾದ 'ಸಿದ್ಧ ಮಾದರಿ'ಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ 'ಹಿಂದೂ ಧರ್ಮದ ಕುಂದುಗಳ ಬಗ್ಗೆ ಬುದ್ಧಿಜೀವಿಗಳು ಮಾತನಾಡುತ್ತಾರೆ' ಎಂಬುದು. ಒಂದು ಸೂಕ್ಷ್ಮ ಪರಿಶೀಲನೆಗೆ ಹೊರಟರೆ ಇದೆಷ್ಟು ಸುಳ್ಳು ಎಂಬುದು ಅರ್ಥವಾಗುತ್ತದೆ. ಹಿಂಸೆಯನ್ನೂ ಕೋಮುವಾದವನ್ನೂ ಖಂಡಿಸುತ್ತಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಂಬಲಿಸುತ್ತಿರುತ್ತಾರೆ. ಇದನ್ನು ಹೇಳುವ ಬದಲಿಗೆ ಅವರು ಹಿಂದೂಗಳನ್ನು ಟೀಕಿಸುತ್ತಾರೆ ಎಂಬ ಜಾಣವಾದವನ್ನು ಮುಂದಿಡುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಇಂಥ ವಾದಗಳ ಅತಿ ಮುಖ್ಯ ಲಕ್ಷಣ ಏನು ಎಂದರೆ ನಿರ್ಧಿಷ್ಟ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳದೆ ಸಾಮಾನ್ಯೀಕೃತ ವಾದಗಳನ್ನು ಮುಂದಿಡುವುದು. ಯೂನಿಕ್ ಸುಪ್ರಿಯವರೇ ತಾವೂ ಅದೇ ಕೆಲಸವನ್ನು ಮಾಡಿದ್ದೀರಿ ಎಂದು ಹೇಳುವುದಕ್ಕೆ ನನಗೆ ವಿಷಾಧವಾಗುತ್ತಿದೆ. ನಿಮ್ಮ ವಾದವನ್ನು ಒಂದು ನಿರ್ಧಿಷ್ಟ ವಿಷಯಕ್ಕೆ ಅನ್ವಯಿಸಿ ಮುಂದಿಡಿ. ಅದರ ಕುರಿತು ಚರ್ಚಿಸುವುದಕ್ಕೆ ಒಂದು ಅರ್ಥವೂ ಇರುತ್ತದೆ.

ಈಗ ನೀವು ಯಾವುದೇ ಆಧಾರಗಳನ್ನು ನೀಡದೆ ಹಿಂದುತ್ವವಾದೀ ಪ್ರೊಪಗ್ಯಾಂಡಿಸ್ಟ್ ಗಳು ಸೃಷ್ಟಿಸಿದ ಸ್ಟೀರಿಯೋ ಟೈಪ್ ಒಂದನ್ನು ಆಧಾರವಾಗಿಟ್ಟುಕೊಂಡ ಸಾಮಾನ್ಯೀಕೃತ ವಾದವನ್ನು ಮುಂದಿಟ್ಟಿದ್ದೀರಿ. ಈ ರೀತಿಯ ಸಾಮಾನ್ಯೀಕರಣಗಳಿಂದಲೇ ಜನಸಾಮಾನ್ಯರ ಮನಸ್ಸುಗಳಿಗೂ ಕೋಮು ವಿಷ ಹರಡಿದೆ ಎಂಬ ಅಂಶವನ್ನು ಮರೆಯಲು ಸಾಧ್ಯವಿಲ್ಲ. ಚರ್ಚೆಯನ್ನು ಹೆಚ್ಚು ಫೋಕಸ್ ಆಗಿಸಲು ಸಾಧ್ಯವಿರುವಂತೆ ನಿಮ್ಮ ವಾದವನ್ನು ಒಂದು ವಿಷಯಕ್ಕೆ ಅನ್ವಯಿಸಿ ಮಂಡಿಸಿ.

ನೀವು ಮಂಡಿಸುತ್ತಿರುವ ವಾದದಲ್ಲಿ ಮತ್ತೊಂದು ತಮಾಷೆಯೂ ಇರುವುದನ್ನು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಪ್ರತಿಯೊಂದು ವಿಷಯಕ್ಕೆ ಪ್ರತಿಕ್ರಿಯಿಸುವಾಗಲೂ ಪೊಲಿಟಿಕಲೀ ಕರೆಕ್ಟ್ ಆಗಿರಬೇಕು ಎಂದು ನೀವು ಒತ್ತಾಯಿಸುತ್ತಿರುವಂತೆ ಕಾಣಿಸುತ್ತದೆ. ಅಂದರೆ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸುವ ಮೊದಲು ಇನ್ನೂ ಯಾವ ಯಾವುದೋ ದೌರ್ಜನ್ಯಗಳನ್ನು ಖಂಡಿಸಿರಬೇಕು ಎಂಬ ಷರತ್ತುಗಳನ್ನು ಒಡ್ಡುತ್ತಿರುವಂತೆ ನಿಮ್ಮ ವಾದವಿದೆಯಲ್ಲವೇ?

ಇನ್ನು ಹಿಂದೂ ಧರ್ಮ ಎಂಬ ಪದ ಬಳಕೆಯ ಬಗ್ಗೆಯೇ ನನಗೆ ಆಕ್ಷೇಪವಿದೆ. ಸನಾತನ ಧರ್ಮ ಅಥವಾ ವೈದಿಕ ಧರ್ಮ ಎಂದರೆ ಹೆಚ್ಚು ಸರಿ ಎಂಬುದು ನನ್ನ ಅನಿಸಿಕೆ. ಹಿಂದೂ ಧರ್ಮ ಎಂಬುದು ಬಹಳ ಮಿಸ್ ಲೀಡಿಂಗ್ ಟರ್ಮ್. ಈ ಪದ ಬಳಕೆಯಾದ ಕೂಡಲೇ ಅನಗತ್ಯ ಜನರಲೈಸೇಶನ್ ಆರಂಭವಾಗುತ್ತದೆ. ಆದುದರಿಂದ ಹೆಚ್ಚು ನಿರ್ಧಿಷ್ಟವಾಗಿರುವ ಸನಾತನ ಧರ್ಮ ಅಥವಾ ವೈದಿಕ ಧರ್ಮವನ್ನೇ ಬಳಸೋಣ.

ರಮೇಶ್ ಸಮಗಾರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 1:41pm — uniquesupri

ಉ: ಚಿಂತಕರ selective criticism

uniquesupri's picture

ರಮೇಶ್,
ನನ್ನ ತಿಳುವಳಿಕೆಯ ಕೊರತೆಯನ್ನು ನಾನು ಒಪ್ಪಿಕೊಳ್ಳುತ್ತೇನೆ, ನನ್ನನ್ನು ತಿದ್ದುವ ಜವಾಬ್ದಾರಿ ನಿಮ್ಮದು.
ಇನ್ನು ಚರ್ಚೆಯನ್ನು ಸ್ಪೆಸಿಫಿಕ್ ಮಾಡುವ ಬಗ್ಗೆ. ಪ್ರತಾಪ್ ಎತ್ತಿದ್ದ ಒಂದು ಸಂಗತಿಯನ್ನೇ ಬಳಸಿಕೊಳ್ಳುವೆ. ಎನ್.ಡಿ.ಟಿ.ವಿ ಎಂಬ ಸುದ್ದಿ ಮಾಧ್ಯಮ ಎಂ.ಎಫ್.ಹುಸೇನ್ ಹಾಗೂ ಭಾರತದಲ್ಲಿ ಭಾರತ ಮಾತೆಯ ಬಗ್ಗೆ ಪೂಜ್ಯವಾದ ಭಾವನೆಯನ್ನಿರಿಸಿಕೊಂಡವರ ನಡುವಿನ ಸಂಬಂಧದ ಬಗ್ಗೆ ತಿಳಿಯದಿಲ್ಲ. ಹೀಗಿರುವಾಗ ಭಾರತ ರತ್ನದ ಪಟ್ಟಿಯಲ್ಲಿ ಹುಸೇನ್ ಹೆಸರನ್ನು ಸೇರಿಸಿ ಪೋಲ್ ಕಂಡಕ್ಟ್ ಮಾಡಿತು. ಅವರ ಅಭಿಪ್ರಾಯದಲ್ಲಿ ಹುಸೇನ್ ನಿಜಕ್ಕೂ ಭಾರತ ರತ್ನಕ್ಕೆ ಅರ್ಹವಾದ ವ್ಯಕ್ತಿಯಾಗಿರಬಹುದು. ಅದು ಅವರ ಬೌದ್ಧಿಕ ಪ್ರಾಮಾಣಿಕತೆಯ ಪ್ರತೀಕ ಎಂದು ಕೊಳ್ಳಬಹುದು. ಆದರೆ ಅವರು ಇದೇ ಬಗೆಯ ಪ್ರಾಮಾಣಿಕತೆಯನ್ನು ತಸ್ಲೀಮಾ ನಸ್ರಿನ್‌ಗೆ ಪದ್ಮ ಶ್ರೀ ಕೊಡಬಹುದೇ, ಸಲ್ಮಾನ್ ರಶ್ದಿಗೆ ಭಾರತ ರತ್ನ ಕೊಡಬಹುದೇ ಎನ್ನುವ ಕಡೆಗೆ ಹರಿಸಲು ಸಾಧ್ಯವೇ? ಅವರ ಪ್ರಾಮಾಣಿಕತೆ, ಬದ್ಧತೆ ಕೂಡ ಯಾವುದೋ ಒಂದು ಬಗೆಯ ಹೆದರಿಕೆ, ಹೇಡಿತನದ ನೆರಳಿನಲ್ಲಿದೆಯಾ? ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆ ಒಂದು ವರ್ಗದ ಮೇಲಷ್ಟೇ ನಡೆಯುತ್ತಿದೆಯಾ?
ಇಲ್ಲಿನ ಸೂಕ್ಷ್ಮವನ್ನು ಗಮನಿಸಿ. ಹೀಗೆ ಚಿಂತಕರು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆದಾರರು ತಮ್ಮ ಸ್ವಾತಂತ್ರ್ಯವನ್ನು ಕೇವಲ ‘ಹಾನಿ ಮಾಡದ’ ಜನರ ಮೇಲೆ ಬಳಸಿಕೊಳ್ಳಲು ಮುಂದುವರೆಸಿದರೆ ಅವರಿಗೂ ಎಂದಾದರೊಮ್ಮೆ ಹಿಂಸಾತ್ಮಕ ಹಾದಿ ತುಳಿಯುವ ಮನಸ್ಸಾಗದೇ?
ಇಂಥ ವಾದಗಳನ್ನು ಮಾಡುವಾಗ ಪೊಲಿಟಿಕಲ್ ಕರಕ್ಟ್ ಆಗಬೇಕು ಎಂದು ನಿರೀಕ್ಷಿಸುವ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ... ನಿಮ್ಮಿಂದ ತಳಿಯುವುದು ಬಹಳ ಇದೆ... ಚರ್ಚೆ ಮುಂದುವರೆಯಲಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 1:33am — ramesh-m

ಉ: ಚಿಂತಕರ selective criticism

ramesh-m's picture

ಎನ್ ಡಿ ಟಿ ವಿಯ ಅಭಿಪ್ರಾಯ ಸಂಗ್ರಹದ ವಿಷಯಕ್ಕೇ ಬರುವುದಾದರೆ ನೀವೇ ಹೇಳಿದಂತೆ ಅದು ಅವರ ಬೌದ್ಧಿಕ ಪ್ರಬುದ್ಧತೆಯ ಲಕ್ಷಣ ಎಂಬುದು ನಿಜ. ಇನ್ನು ಹುಸೇನ್ ರಚಿಸಿದ ಭಾರತ ಮಾತೆಯ ಚಿತ್ರ ಯಾರಿಗೆ ನೋವುಂಟು ಮಾಡಿದ್ದು? ನಿರ್ದಿಷ್ಟ ರಾಜಕೀಯ ಐಡಿಯಾಲಜಿಯೊಂದರಿಂದ ಪ್ರೇರಿತರಾದವರನ್ನು ಮಾತ್ರ ಎಂಬುದನ್ನು ನಾವು ಮರೆಯುವಂತೆ ಇಲ್ಲ. ಈ ಬಗೆಯ ರಾಜಕೀಯ ಅಜೆಂಡಾ ಇಲ್ಲದವರನ್ನು ಇಂಥ ವಿಷಯಗಳು ಕಾಡುವುದಿಲ್ಲ. ಇಲ್ಲಿ ಗೌರವ, ಪೂಜನೀಯ ಭಾವನೆ ಎಂಬ ಪದಗಳ ದುರ್ಬಳಕೆಯಷ್ಟೇ ಆಗಿದೆ. ಹುಸೇನ್ ಈ ಚಿತ್ರ ಬರೆದು ಎಷ್ಟೋ ವರ್ಷಗಳಾದ ನಂತರ ಇದ್ದಕ್ಕಿದ್ದಂತೇ ಅಥವಾ ಸಂಘಪರಿವಾರದ ರಾಜಕೀಯ ಶಕ್ತಿ ಹೆಚ್ಚಾದ ತಕ್ಷಣ ಮಾತ್ರ 'ಭಾವನೆಗಳಿಗೆ ನೋವು' ಉಂಟಾದದ್ದು ಹೇಗೆ.

ಹೀಗೆ ಭಾವನೆಗಳಿಗೆ ನೋವುಂಟಾಗುವುದಾದರೆ ನಮ್ಮ ದೇವಾನುದೇವತೆಗಳನ್ನೆಲ್ಲಾ ಹೊಗಳುವಾಗಲೂ ಈ ಶೃಂಗಾರ ಭಾವನೆಯೇ ಇದೆಯಲ್ಲವೇ. ಶಂಕಾರಾಚಾರ್ಯರ ಸೌಂದರ್ಯ ಲಹರಿ, ಜಯದೇವನ ಗೀತಗೋವಿಂದ, ಅಷ್ಟೇಕೆ ರಾಮಾಯಣದಲ್ಲೂ ಈ ಬಗೆಯ ವರ್ಣನೆಗಳೇ ಇವೆಯಲ್ಲವೇ? ಶಂಕರಾಚಾರ್ಯರು ದೇವರನ್ನು ಕಾಮಿಸಿದರು ಎಂದು ಹೇಳಲು ಸಾಧ್ಯವೇ?

ಪೂಜನೀಯ ಭಾವನೆಯನ್ನು ಹೊಂದಿದ್ದ ಅನೇಕರು ಈಗಾಗಲೇ ಕೇಸು ದಾಖಲಿಸಿದ್ದಾರೆ. ಅದರ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ. ಅದನ್ನು ಯಾರೂ ನೀವೇ ಹೇಳುವ ಒಂದು ಧರ್ಮವನ್ನು ಮಾತ್ರ ಟೀಕಿಸುತ್ತಿರುವವರೂ ಟೀಕಿಸಿಲ್ಲ. ಎಲ್ಲರೂ ಟೀಕಿಸುತ್ತಿರುವುದು ಹುಸೇನ್ ಚಿತ್ರ ಪ್ರದರ್ಶನಗಳ ಮೇಲೆ ದಾಳಿ ನಡೆಸುವುದನ್ನು. ಎನ್ ಡಿ ಟಿ ವಿಯ ಮೇಲೆ ದಾಳಿ ನಡೆಸುವುದನ್ನು.

ತಸ್ಲೀಮಾ ಹಾಗೂ ರಶ್ದೀ ಇಬ್ಬರೂ ಭಾರತೀಯರಲ್ಲ. ಭಾರತೀಯರಲ್ಲದವರಿಗೆ ಭಾರತ ರತ್ನ ಅಥವಾ ಭಾರತದ ಯಾವುದೇ ನಾಗರಿಕ ಪ್ರಶಸ್ತಿಗಳನ್ನು ಕೊಡಬೇಕಾದಾಗ ಅನುಸರಿಸುವ ಮಾನದಂಡಗಳೇ ಬೇರೆ. ಈ ದೃಷ್ಟಿಯಲ್ಲಿ ಅವರಿಗಿಂತ ಮುಖ್ಯರಾದ ಇನ್ನೂ ಅನೇಕರು ಜಗತ್ತಿನಲ್ಲಿದ್ದಾರೆ. ಹಾಗಾಗಿ ಅವರಿಗೆ ಭಾರತದ ಪ್ರಮುಖ ನಾಗರಿಕ ಪ್ರಶಸ್ತಿಗಳನ್ನು ನೀಡುವ ಚರ್ಚೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಅಂಥದ್ದೊಂದು ಚರ್ಚೆ ಬಂದಿದ್ದರೂ ಏನೂ ಆಗುತ್ತಿರಲಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಹೊರ ಬಂದ ಎಸ್ ಎಲ್ ಭೈರಪ್ಪನವರ ಕಾದಂಬರಿ 'ಆವರಣದ' ಕುರಿತಂತೆ ಯಾವ ಮುಸ್ಲಿಮ್ ಸಂಘಟನೆಯೂ ಪ್ರತಿಕ್ರಿಯಿಸಲಿಲ್ಲ. ತಸ್ಲೀಮಾ ಮತ್ತು ರಶ್ದೀಯ ಕುರಿತಂತೆ ಬಂದ ಪ್ರತಿಕ್ರಿಯೆಗಳ ಹಿಂದೆಯೂ ರಾಜಕೀಯ ಅಜೆಂಡಾಗಳೇ ಕೆಲಸ ಮಾಡಿದ್ದವು. ಇವಕ್ಕೂ ಸಂಘಪರಿವಾರ ಕೈಗೆತ್ತಿಕೊಳ್ಳುವ 'ಹೋರಾಟ'ಗಳ ಮಧ್ಯೆ ರಚನಾತ್ಮಕ ವ್ಯತ್ಯಾಸವೇನೂ ಇರುವುದಿಲ್ಲ.

ರಶ್ದೀ ಮತ್ತು ತಸ್ಲೀಮಾರಿಗೆ ಬೇರೆ ಎಲ್ಲರಿಗಿಂತಲೂ ಹೆಚ್ಚು ಬೆಂಬಲಿಸಿದ್ದು ಭಾರತದ ಸಂವೇದನಾಶೀಲ ಬುದ್ಧಿಜೀವಿಗಳು. ಇವರು ಸಂಘಪರಿವಾರವನ್ನೂ ವಿರೋಧಿಸುತ್ತಾರೆ. ತಮಾಷೆಯೆಂದರೆ ಸಂಘಪರಿವಾರವನ್ನು ಇವರು ವಿರೋಧಿಸುವುದನ್ನು ಮಾತ್ರ ನೀವು ಗಮನಿಸುತ್ತೀರಿ. ತಸ್ಲೀಮಾ ಮತ್ತು ರಶ್ದೀಗೆ ಬೆಂಬಲ ನೀಡಿದ್ದನ್ನು ಮರೆತು 'ಹಾನಿ ಮಾಡದವರನ್ನು ಮಾತ್ರ ವಿರೋಧಿಸುತ್ತಾರೆ' ಎನ್ನುತ್ತೀರಿ.

ರಮೇಶ್ ಸಮಗಾರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 16, 2008 - 10:33am — kpbolumbu

ಉ: ಚಿಂತಕರ selective criticism

kpbolumbu's picture

ಗೀತಗೋವಿಂದದಲ್ಲಿ, ಸೌಂದರ್ಯ ಲಹರಿಯಲ್ಲಿ ಶೃಂಗಾರದ ವರ್ಣನೆ ಇರುವುದೇನೋ ನಿಜ, ಆದರೆ ಅವರು ಯಾರೂ 'ನನಗೆ ನಗ್ನತೆಯೆಂಬುದು ಮುಗ್ಧತೆ ಮತ್ತು ಪ್ರಬುದ್ಧತೆಯನ್ನು ಸೂಚಿಸುತ್ತದೆ'(http://living.oneindia.in/insync/mf-hussain.html) ಎಂದಿಲ್ಲ. ಈ ಮುಗ್ಧತೆ ಮತ್ತು ಪ್ರಬುದ್ಧತೆ ಹಿಟ್ಲರನ ವಿಷಯದಲ್ಲೂ ನಿಜವೇ? ಹಾಗಿದ್ದರೆ ಹಿಟ್ಲರನನ್ನು ನಗ್ನವಾಗಿ ಚಿತ್ರಿಸಿದ್ದೇಕೆ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
  • ಭಾಷೆ ಮತ್ತು ಧರ್ಮಗಳ ಸಂಬಂಧ
  • ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
  • ಸ್ತ್ರೀವಾದಿ ಏಕಾಗಬಾರದು?
  • ಹೊಸ ಸದಸ್ಯರ ಪರಿಚಯ...
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
    July 4, 2008 - 12:16pm
  • mahesha
    ಉ: ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
    July 4, 2008 - 12:16pm
  • mahesha
    ಉ: ದನಿಯಱಿವು
    July 4, 2008 - 12:13pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
ಇನ್ನಷ್ಟು


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator