'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಟೀ ಕಾಯಿಸು,
ನೀರ್ ಕಾಯಿಸು,
ಮಯ್ ಕಾಯಿಸು
ಕಾಪಿ ಬಿಸಿ ಮಾಡು,
ನೀರ್ ಬಿಸಿ ಮಾಡು,
ಮಯ್ ಬಿಸಿ ಮಾಡು
ಹೀಗೆಲ್ಲ ನಾವು ಇವುಗಳನ್ನು ಬಳಸುತ್ತೇವೆ. ಕಾಯ್ಸು ಮತ್ತು ಬಿಸಿ ಮಾಡು ಎರಡೂ ಒಂದೇ ಅರಿತ ಕೊಡುತ್ತ. ಅತ್ವ ವಸಿ ಅವುಗಳಲ್ಲಿ ಬೇರೆತನವಿದಿಯ?

- Login or register to post comments
- 582 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
heat ಮತ್ತು warmಗಳ ನಡುವಿನ ಬೇರೆತನ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಅಣ್ಣ,
ಬಿಸಿ ಅಂದ್ರೆ warm ಅಲ್ಲ hot ಅಂತ, ( ಸಕ್ಕತ್ ಹಾಟ್ ಮಗ ಬೇರೆ
)
ಬೆಚ್ಚಗೆ ಅಂದ್ರೆ warm
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಕಾಯಿಸು, ಮತ್ತು ಬಿಸಿ ಮಾಡು ಪದಗಳಿಗೆ ಸ್ವಲ್ಪ ವ್ಯತ್ಯಾಸವಿದೆ.
ನಾವು ಟೀ ಅನ್ನು ತಯಾರು ಮಾಡುವಾಗ ( from scratch) ...ಟೀ ಕಾಸು ಅಂತ ಹೇಳ್ತೀವಿ. ಟೀ ಬಿಸಿ ಮಾಡು ಅಂತ ಹೇಳಲ್ಲ. ಆದ್ರೆ ಒಮ್ಮೆ ತಯಾರಾದ ಟೀ ಅನ್ನು ಮತ್ತೊಮ್ಮೆ ಕುಡಿಯಲು ಯೋಗ್ಯವಾಗಿ ಮಾಡಲು ಬಿಸಿ ಮಾಡುತ್ತೇವೆ. ಈಗ ಟೀ ಕಾಸು (ಕಾಯ್ಸು) ಅಂತ ಹೇಳಲ್ಲ.
ನಾವು ಮೈ ಕಾಯುಸ್ತೀವಿ. ಆದ್ರೆ ಮೈ ಬಿಸಿ ಮಾಡಿಕೊಳ್ಳಲ್ಲ!.
ಮೇಲಿನ ಉದಾಹರನೆಯನ್ನಿ ನೀರಿನ ಕೇಸ್ ಗೆ ಹೋಲಿಸುವುದು ಸ್ವಲ್ಪ ಕಷ್ಟ.
continuos ಆಗಿ ಕಾಯಿಸುವದನ್ನು ಮರಳಿಸು ( ಮಳ್ಸು) ಅಂತ ಅನ್ನ್ತೀವಿ.
ಮಳ್ಸು = ಚೆನ್ನಾಗಿ ಕುದಿಸುವಿದು.
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಚನ್ ವಿವರಣೆ..!!
ಸಕ್ಕತ್..!
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ನನ್ನೀ!
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ನನ್ನಿ,
ಈಗ ನನಗೂ ವಸಿ ಹೊಳೆಯಿತು.
ಕಡಲಲ್ಲಿ ಮುಳುಗಿ ಬೀಚಲ್ಲಿ ಕೂತ್ಕಂಡ್ ಮಯ್ ಕಾಯ್ಸಿಕೊಳ್ತೀವಿ ಆದರೆ ಜರ ಬಂದಾಗ ಮಯ್ ಬಿಸಿಯಾಗಿ ಹೋಗಿರುತ್ತೆ. (ಕಾದು ಹೋಗಿರಲ್ಲ
)
ನಾವು ಕುದಿತಾ ಇದೆ ಅನ್ನಲ್ಲ.... ನೀರು ಮಳ್ತಾ(ಮರಳು) ಅಯ್ತೆ ಅಂತಾನೆ ಹೇಳದು.
ನಿಮಗೂ ಮಳ್ಸು ಗೊತ್ತಾ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
>>ನಿಮಗೂ ಮಳ್ಸು ಗೊತ್ತಾ
ವೈಭವ .. ನಾನು ಸಹಾ ಬಡಪಾಯಿ ಕನ್ನಡಿಗ!
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಸಾರ್,
ಹಾಗಲ್ಲ. ನೀವು ಬಡಗು ಕನ್ನಡನಾಡಿನವರಲ್ಲವ?.... ಅದ್ದರಿಂದ ಅಲ್ಲಿ ಬೇರೆ ತರ ಪದ ಬಳಸಬೋದು ಅಂತ ಅನ್ಕೊಂಡಿದ್ದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಹೇ .. ವೈಭವ್......
ನಾನು ಸುಮ್ನೆ ತಮಾಷೆಗೆ ಆ ತರ ಉತ್ರ ಕೊಟ್ಟೆ... ನೀವು ಅದನ್ನು ಸೀರಿಯಸ್ಸಾಗಿ ತಗೊಂಡು ರಿಪ್ಲೈ ಮಾಡಿದ್ರಿ. ಹೋಗ್ಲಿ ಬಿಡಿ.
ಅಂದ ಹಾಗೆ... ನಾನು ಚಿಕ್ಕಮಗಳೂರಿನವ. ಬಡಗು ಕರ್ನಾಟಕದವನಲ್ಲ. ನಾನು ಹಿಂದೆ JP ನಗರದಲ್ಲಿ ಇದ್ದಾಗ ನನ್ನ ರೂಮ್ ಮೇಟ್ಸ್ ಹಾಸನ-ಮಂಡ್ಯದವರೇ ಹಾಗಿದ್ದರು. ಹಾಗಾಗಿ ಅಲ್ಲಿನ ಭಾಷೆಯ ಪರಿಚಯ ನಂಗೆ ಸ್ವಲ್ಪ ಇದೆ. ಈ ಎರಡೂ ಭಾಷೆಗಳಲ್ಲಿ ಅಜ ಗಜಾಂತರ ವ್ಯತ್ಯಾಸವೇನಿಲ್ಲ. ಮಂಡ್ಯದ ಭಾಷೆ ನಮ್ಮ ಭಾಷೆಗಿಂತ ಸ್ವಲ್ಪ ಹೆಚ್ಚು ಗ್ರಾಮ್ಯ ಭಾಷೆ ( ಅಚ್ಚ ಕನ್ನಡ?!).
ಹಾ. ... ನೀವು ಸಾರ್ ಅನ್ನೋ ಪದ ಬಳಸಿದಿರಿ. ತುಂಬಾ ದೊಡ್ಡ ಪದ ಅದು ನನ್ನ ಪಾಲಿಗೆ!!! ನನಗೆ ಅನ್ನಿಸಿರುವ ಮಟ್ಟಿಗೆ ನಮ್ಮೆಲ್ಲರ ವಯಸ್ಸು ಹೆಚ್ಚು ಕಡಿಮೆ ಒಂದೇ ಇರುವಂತಿದೆ ( ಒಂದೆರಡು ವರ್ಷ ಹೆಚ್ಚು ಕಡಿಮೆ ಇರಬಹುದು!). ಹಾಗಾಗಿ.. ಹೆಸರು ಹಿಡಿದು ಸಂಬೋದಿಸಿದರೆ ಚೆನ್ನ... ಸ್ವಲ್ಪ ಮುಜುಗರ(!) ತಪ್ಪುತ್ತೆ. ಏಕವಚನವೂ ಓಕೆ.
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ನೀವು ’ಸವಿತ್ರು’ ಅಲ್ಲವಾ, ಒಳ್ಳೇ ಸವಿ ಸವಿ ಉತ್ರ ಕೊಡ್ತೀರಾ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಗೌಡ್ರಿಗೆ ಶರಣು . ಅಡ್ಡ ಅಡ್ಡ ಬಿದ್ದೆ !!
ಹ ಹಾ.. ... ಸವಿ ಸವಿ ಉತ್ರ ಕೊಡೋಕ್ಕೆ ನೀವೆಲ್ಲ ಇದೀರಲ್ವ... ನಾವೇನಿದ್ರೂ ನಿಮ್ಮನ್ತವ್ರು ಬರೆದಿದ್ದನ್ನು ಓದೋವ್ರು!.
ಸವಿ ಸವಿ ಅನ್ನೋ ಪದಕ್ಕೆ ನೀವು ಬಂದಿದ್ದಕೆ ಈ ಮಾತು...
ಇಡೀ ಜಗತ್ತನ್ನು ಯಾರು ಮತ್ತೆ ಮತ್ತೆ(?) "ಪ್ರಸವಿಸುತ್ತಾನೋ" ಅವ್ನು ಸವಿತೃ . ನನ್ನ ಪ್ರಕಾರ ಶಿವನೇ ಸವಿತೃ. ಹಲವರ ಪ್ರಕಾರ ಸವಿತೃ ಅಂದ್ರೆ ಸೂರ್ಯ.
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಆತಪ್ಪ ಸವಿತ್ರು . ಇರಲಿ. ಇನ್ಮೇಲೆ ನಿನಗೆ ಏಕವಚನನೇ ಗತಿ ನನ್ನ ಕಡೆಯಿಂದ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
you are welcome !!.
ನಾವು ಎಲ್ಲರನ್ನೂ ಏಕವಚನದಿಂದ ಕರೆಯಲ್ಲ ಅಲ್ವ?
ನನ್ನ ಪ್ರಕಾರ ಏಕವಚನ ಒಂದು ರೀತಿಯಲ್ಲಿ ಗೌರವ!
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಮೈ ಬಿಸಿ ಮಾಡ್ಕೊಳ್ಳೋದು ಅಂದ್ರೆ? ....
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಕಾಯಿಸು ಮತ್ತು ಬಿಸಿ ಮಾಡು ಅನ್ನೋದನ್ನ ಇನ್ನೊಂದು ತರಹ ನೋಡಬಹುದಲ್ಲವೇ?
ಇಂಗ್ಲೀಷ್ನಲ್ಲಿ verb ಮತ್ತು adverb ಅಂತ ಇದೆಯಲ್ಲವೇ.
Verbs – show action or state of being.
Adverbs – modify verbs, adjectives, and other verbs and tell how, when, and how much.
ಅಂತೆಯೇ ಕಾಯಿಸು - ಒಂದು ಕ್ರಿಯೆ . – verb
ಎಷ್ಟು ಅಂತ ಕೇಳಬೇಕಾಗುತ್ತೆ. ಸ್ವಲ್ಪವೋ ಅಥವಾ ಜಾಸ್ತಿಯೋ?
ಕಾಯಿಸಿದರೇನೆ ಯಾವ ವಸ್ತುವೂ ಬಿಸಿಯಾಗೋದು. ( ನಿಮ್ಮನ್ನು ನೋಡಲು ಬಂದವರನ್ನು ಹೊರಗಡೆ ಬಹಳಷ್ಟು ಸಮಯ “ಕಾಯಿಸಿ” ಕೂಡಿಸಿ, ಅವರು ತಾಳ್ಮೆ ಕಳೆದುಕೊಂಡು ಅವರ ಮಂಡೆ “ಬಿಸಿ”ಯಾಗೋಲ್ಲವೇ?)
ಇಲ್ಲಿ ಕಾಯಿಸುವುದು - ಕಾರಣ (Cause) ಮತ್ತು ಬಿಸಿ - ಪರಿಣಾಮ ( effect).
ಬಿಸಿ ಮಾಡು - adverb
ಅಂದರೆ ಎಷ್ಟು ಕಾಯಿಸುವುದು ಅಂತ - ಒಂದು ಪ್ರಕ್ರಿಯೆ?
ಹೆಚ್ಚು ಕಾಯಿಸಿದರೆ ಹೆಚ್ಚು ಬಿಸಿ. ಸ್ವಲ್ಪ ಕಾಯಿಸಿದರೆ ಉಗುರು ಬೆಚ್ಚಾಗುತ್ತೆ ಅಷ್ಟೆ?
ಕನ್ನಡ ವ್ಯಾಕರಣ ಪಂಡಿತರು ತಿಳಿಹೇಳಬೇಕು. Verb – adverb ಅನ್ನು ಕ್ರಿಯೆ - ಪ್ರಕ್ರಿಯೆ ಅಂತ ಭಾಷಾಂತರಿಸಿ ಹೇಳಬಹುದೇ?
-ನವರತ್ನ ಸುಧೀರ್
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ನಿಮ್ಮ ನೋಟ ತುಂಬಾ ಚೆನ್ನಾಗಿದೆ. ನಿಮ್ಮ ರಿಪ್ಲೈ ನೋಡಿದ ಮೇಲೆ ನನಗೆ ಈ ಯೋಚನೆಗಳು ಬಂದವು.
ಕಾಯ್ಸು = ಕಾಯಿಸು = ಕಾವು + ಇಸು (ಯಕಾರಾಗಮ ಸಂಧಿ?)
ಕಾವು ಕೊಡಬೇಕು.
ಬಿಸಿ ಮಾಡಬೇಕು.
ಕಾವು = ಬಿಸಿ ? .... ಸರಿಯಲ್ಲ ಅಂತ ನನಗೆ ಅನ್ನಿಸುತ್ತದೆ.
ಕಾಯಿಸು = ಕಾವು ಕೊಡು? = ಬಿಸಿ ಮಾಡು?
>>ಇಲ್ಲಿ ಕಾಯಿಸುವುದು - ಕಾರಣ (Cause) ಮತ್ತು ಬಿಸಿ - ಪರಿಣಾಮ ( effect).
ಕಾವು ಸಹಾ ಪರಿಣಾಮವೇ!
ನಮ್ಮೊಳಗೆ ಒಂದು ಬಗೆಯ heat ಇದೆಯಲ್ವ ಅದು ಕಾವು ಆಗಬಹುದು . ಅಂದರೆ inherent energy. ಅಂದರೆ ಜೀವನಾವಶ್ಯಕ ಶಕ್ತಿ?. ಯಾಕೆ ಹೀಗೆ ಹೇಳ್ತೀನಿ ಅಂದ್ರೆ .. ಮೊಟ್ಟೆಗೆ ಕಾವು ಕೊಡೋದು ಅಂದ್ರೆ heat ಮಾಡೋದು ಅಂತ ಅಲ್ಲ! ...ಮೊಟ್ಟೆಯಲ್ಲಿ ಇರೋ ಕಾವು ಹೊರಬರೋದು ಅಂತ!. ತುಂಬಾ ಸಖೆಯಿಂದ ಒಂದು ರೀತಿಯ heat ನಮ್ಮಲ್ಲಿ ಉತ್ಪತ್ತಿಯಾಗುತ್ತದಲ್ವ.. ಅದು ಕಾವು ಆಗಬಹುದು. ಇದು ಬಿಸಿ ಅಲ್ಲ ಅಲ್ವ?!
ಆದ್ರೆ ಈ ಬಿಸಿ ಮೇಲೆ ಹೇಳಿದ inherent energy ಆಗಿರಬೇಕಿಲ್ಲ?
ಏನೋ ಈ ತಗಡು ತಲೆಗೆ ಈ ಕ್ಷಣಕ್ಕೆ ಹೊಳೆದಿದ್ದು ಬರೆದೆ. ತಪ್ಪು ಅನ್ನಿಸಿದ್ರೆ ಹೊಟ್ಟಿಗೆ ಹಾಕ್ಕಂಡು ಬಿಡಿ!
ಸವಿತೃ
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಕಾವು ಅನ್ನೋದು inherent energy ಅನ್ನೋದು ಸರಿಯಲ್ಲ.
ಮೊದಲೇ ಹೇಳಿದಂತೆ ಕಾವು ಕೊಡುವುದು ಅಥ್ವಾ “ಕಾಯಿಸುವುದು= ಉಷ್ಣ ವಿನಿಮಯ = ಶಾಖ ತಲುಪಿಸುವುದು” ಒಂದು ಪ್ರಕ್ರಿಯೆ (process). ಹಾಗೆಯೇ “ಕಾಯಿಸು= heat” ಅನ್ನೋದು ಒಂದು ಕ್ರಿಯೆ.
To heat = ಕಾಯಿಸು ಅನ್ನೋದು ಒಂದು ರೀತಿಯ “ಜೆನೆರಿಕ್” (generic) ಬಳಕೆ. ಎಷ್ಟು ಮಟ್ಟಿಗೆ ಉಷ್ಣ ವಿನಿಮಯ ಆಗುತ್ತೆ ಅಂತ ಖಚಿತವಾಗಿ ತಿಳಿಯೋಲ್ಲ.
ಆದರೆ, ಇದನ್ನು ಮತ್ತಷ್ಟು qualiy ಮಾಡೋಕೆ ಕೆಳಗಿನ ಪದಗಳನ್ನು ಉಪಯೋಗಿಸುತ್ತಾರೆ ಅಂತ ನನ್ನ ಅಭಿಪ್ರಾಯ.
To warm = ಬಿಸಿ ಮಾಡು - ಜಾಸ್ತಿಯಾಗಿ ಕಾಯಿಸುವುದಲ್ಲ. ಕಡಿಮೆ ಉಷ್ಣ ವಿನಿಮಯ
To Boil = ಕುದಿಸು; ಮರಳಿಸು - ಅದರ boiling point ವರೆಗೂ ಕಾಯಿಸಬೇಕು.- ಹೆಚ್ಚು ಉಷ್ಣ ವಿನಿಮಯ
To evaporate = ಆವಿಯಾಗಿಸು; ಇಂಗಿಸು - ಅತಿ ಹೆಚು ಉಷ್ಣ ವಿನಿಮಯ ( latent heat of evaporationಗೆ ಬೇಕಾದ ಉಷ್ಣವನ್ನು ದೊರಕಿಸಬೇಕಾಗುತ್ತೆ.)
ಇನ್ನು ಮೊಟ್ಟೆಯ ವಿಚಾರಕ್ಕೆ ಬಂದರೆ, ಅಲ್ಲಿಯೂ ಶಾಖ “ಕೊಡೋದು’ ಅಂತ ಅರ್ಥ. ಒಳಗಿನ ಶಕ್ತಿಯನ್ನು ತೆಗೆಯುವುದು ಅಂತ ಅರ್ಥವಲ್ಲ.. ಇಲ್ಲಿ ಕಾಯಿಸುವುದೇ ಪ್ರಕ್ರಿಯೆ ಆದರೆ ಬಹಳ ಕಡಿಮೆ ( ಬಿಸಿ ಮಾಡೋದಕ್ಕಿಂತ ಕಡಿಮೆ) ಉಷ್ಣ ವಿನಿಮಯ ಆಗುತ್ತೆ.
So it is all a matter of scale ಅಂತಾರಲ್ಲಾ ಹಾಗೆ
ತುಂಬಾ ಸೆಖೆಯಿಂದ ನಿಮಗೆ ದೇಹದಲ್ಲಿ ಯಾವ heat ಕೂಡ ಉತ್ಪತ್ತಿಯಾಗೋಲ್ಲ. ನಿಮಗೆ ಚರ್ಮದ ಮೇಲಣ ಬೆವರು ಆವಿಯಾಗದೆ, ಮೈ ಬಿಸಿಯಾದ ಅನುಭವ ಆಗುತ್ತೆ ಅಷ್ಟೆ.
- ನವರತ್ನ ಸುಧೀರ್
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
ಸುದೀರಣ್ಣ,
ನಿಮ್ಮ cause, effect ಮಾತು ಚನ್ನಾಗಿದೆ. 'ಕಾವು', 'ಬಿಸಿ' ಬೇರೆತನ ಅರಿತ ಮಾಡ್ಕೊಳ್ಳಕೆ ಇದಕ್ಕಿಂತ ಒಳ್ಳೆ ವಿವರಣೆ ಸಿಗಲಾರದು ಅನ್ಸುತ್ತೆ.
ನಮ್ಮ ಹಿರಿಯರು ಸಕ್ಕತ್, ಈ ಕಾವು, ಬಿಸಿ ಅಂತ ಎರಡು ಪದ ಮಾಡ್ಕಂಡ್ ಅದ್ರೊಳಗೆ ಇಂತ ತುಂಬ ಬಿನ್ನಣಿಗವಾದ ಸಂಗತಿಯನ್ನ ಮುಚ್ಚಿಟ್ಟಿದ್ದಾರೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
^^^ ನನ್ನ ಒಪ್ಪುಗೆ...
ಬಿಸಿ ಮಾಡು.. ಬಿಸಿಯನ್ನು ಮಾಡು.. ಇಲ್ಲಿ ಬಿಸಿ adverb / ಕ್ರಿಯೆಯ ಗುಣ ಹೇಳುವುದು.. !!
verb = ಕ್ರಿಯಾಪದ
adverb = ಕ್ರಿಯಾಗುಣ ( ಬಿಸಿ ಮಾಡು )
adjective = ನಾಮಗುಣಪದ ( ಬೊಂಬಾಟ್ ಹುಡುಗಿ )
ಕನ್ನಡದಲ್ಲಿ adverb ಮತ್ತು adjective ನಡುವೆ ಬೇರೆತನ ಬೇಡ/ಬೇಕು ?
ನನಗೆ ಯಾಕೋ ನಮಗೂ adverb ಮತ್ತು adjective ಎಂಬ ಎರಡು ಸಂಗತಿ ಕನ್ನಡದೊಳ್ ಬೇಕಂನಿಸ್ತಾ ಇದೆ..