ಸರಿಯಾದ ಕನ್ನಡ ಪದ ತಿಳಿಸಿ
ಸಂಪದಿಗರೆ,
"Look and Feel" ಗೆ ಸರಿಹೊಂದುವ ಕನ್ನಡ ಪದ ಸಮುಚ್ಚಯವನ್ನು ತಿಳಿಸುತ್ತೀರಾ!?
ಬಳಕೆ: ಗಣಕದ "Look and Feel" (http://en.wikipedia.org/wiki/Look_and_feel)

- Login or register to post comments
- 616 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಂಪದಿಗರೆ,
"Look and Feel" ಗೆ ಸರಿಹೊಂದುವ ಕನ್ನಡ ಪದ ಸಮುಚ್ಚಯವನ್ನು ತಿಳಿಸುತ್ತೀರಾ!?
ಬಳಕೆ: ಗಣಕದ "Look and Feel" (http://en.wikipedia.org/wiki/Look_and_feel)




ಉ: ಸರಿಯಾದ ಕನ್ನಡ ಪದ ತಿಳಿಸಿ
'ನೋಟ ಮತ್ತು ಅನಿಸು' ಆಗುತ್ತ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸರಿಯಾದ ಕನ್ನಡ ಪದ ತಿಳಿಸಿ
"ನೋಡೋಕೆ ಮತ್ತು ಅನಿಸೋಕೆ" ಅಂದರಾದೇತೆ?
how is look and feel?
ನೋಡೋಕೆ ಮತ್ತು ಅನಿಸೋಕೆ ಹೇಗಿದೆ?
ಉ: ಸರಿಯಾದ ಕನ್ನಡ ಪದ ತಿಳಿಸಿ
ಸಂಗನ, ಇಲ್ಲಿ Look and Feel, ಎರಡು ಬೇರೆ ಬೇರೆ ನಾಮಪದವಲ್ಲ, ಮಾರಾಯ. ಒನ್ ಸಿಂಗಲ್ ಎಂಟಿಟಿ. ಅದನ್ನ ಬಿಡಿಸಕ್ಕೆ ಆಗಲ್ಲ. ಮಹೇಶ ಹೇಳಿದ, "ಸಮಂತು" ಚೆನ್ನಾಗಿದೆ.
How is Look and Feel of Mac OS?
ಇಲ್ಲಿ Look and Feel = ಒಂದೇ ನಾಮಪದ
ಕನ್ನಡವನ್ನ ನಾವು ಬೆಳೆಸಬೇಕಾದರೆ, ನಮಗೆ ತಿಳಿದಿರದ ಧಾತುಗಳನ್ನ ಅಭ್ಯಾಸ ಮಾಡಬೇಕು. "ನೋಡೋಕೆ ಮತ್ತು ಅನಿಸೋಕೆ" ಸರಿಹೊಂದಲ್ಲ. ಬೇಕಿದ್ದರೆ, ನೋಡು(ನೋಳ್) + ಪು = ನೋಳ್ಪು -> ನೊಳ್ಪು = ನೊಂಪು ಎನ್ನುವ ಪದ ಬಳಸಬಹುದು.
ಉ: ಸರಿಯಾದ ಕನ್ನಡ ಪದ ತಿಳಿಸಿ
ಸುನೀಲ,
ಸಮಂತು ಎಶ್ಟು ಮಂದಿಗೆ ಗೊತ್ತು?
ನೋಟ ಮತ್ತು ಅನಿಸು ಎಲ್ಲರಿಗೂ ಗೊತ್ತೆ ಇರೋದು ...ಅಲ್ವ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸರಿಯಾದ ಕನ್ನಡ ಪದ ತಿಳಿಸಿ
ನಾನು ಹೇಳಿದಿಶ್ಟೇ ’ಸಮಂತು’ ಎಂದು ಹಿಂದೊಮ್ಮೆ ಸುನಿಲ ಹೇಳಿದ್ದ ಅಂತ.. ಎಶ್ಟು ಮಂದಿಗೆ ಗೊತ್ತು ಗೊತ್ತಿಲ್ಲ.. ಸಮಂತು ಕನ್ನಡ ಒರೆ ಅಂತ ಗೊತ್ತು.!!
ಉ: ಸರಿಯಾದ ಕನ್ನಡ ಪದ ತಿಳಿಸಿ
ಸುನಿಲ್,
ನೋಂಪು ಅಚ್ಚಕನ್ನಡದ ಪದವೇನೋ ಸರಿ ಆದರೆ ಅದನ್ನು ಜನಸಾಮನ್ಯರ ಬಳಕೆಗಾಗಿ ಗಣಕದಲ್ಲಿ ಬಳಸಿದರೆ (ಉದಾ, ಮ್ಯಾಕ್ ಓಎಸ್‍ನ ನೋಂಪು) ಎಷ್ಟು ಜನಕ್ಕೆ ಅರ್ಥವಾದೀತು?
http://bhaavajeevi.blogspot.com/
ಉ:
ಶಂಕರ ಮತ್ತು ವೈಭವ, ನಿಜ. ಸಮಂತು ಆಗಲೀ ನೋಂಪು ಆಗಲೀ ಹೆಚ್ಚು ಜನಕ್ಕೆ ತಿಳಿದಿಲ್ಲ. ನೋಂಪು ಕೆಲವು ಸೀಮೆಯವರಿಗೆ ತಿಳಿದಿರತ್ತೆ. ಇಂಪು, ಕಂಪು, ನೋಂಪು, ಸೊಂಪು ತರಹ. ಇರಲಿ. ಒಂದು ಉಪಾಯ ಏನೆಂದರೆ
How is Look and Feel of Mac OS ?
ಮ್ಯಾಕ್ ಓ.ಎಸ್ಸಿನ "ನೋಂಪು (Look and Feel)" ಹೇಗಿದೆ ?
ಹೀಗೆ, ಬ್ರಾಕೆಟ್ಟಿನಲ್ಲಿ ಇಂಗ್ಲೀಷಿನ ಅರ್ಥವನ್ನೂ ಸೇರಿಸಿ ಹೇಳಬಹುದು. ಆಗ ಇಂಗ್ಲೀಷ್ ಅರ್ಥವನ್ನೂ ಹೇಳಿದ ಹಾಗೆ ಆಗತ್ತೆ. ಕನ್ನಡದ ಪ್ರಚಾರಾನೂ ಆಗತ್ತೆ. ಏನಂತೀರಿ ನೀವೆಲ್ಲ ?
ಉ:
ಸುನೀಲ್... ಎಲ್ಲಾ ಸಲಾನೂ ಹೊಸ ಒರೆ, ಇಲ್ಲಾ... ಹೆಚ್ಚಿನವರಿಗೆ ಗೊತ್ತಿಲ್ಲದ ಒರೆಗಳನ್ನು ತೋರಿಸೋದಕಿಂತ.. ಸದ್ಯಕ್ಕೆ ಇರುವ ಒರೆಗಳನ್ನು ಬಳಸಿ ಹೇಳೋಕೆ ನೋಡೋದು ಹೆಚ್ಚು ಒಳ್ಳೇದು ಅನಿಸುತ್ತೆ. ಈಗ ವೈಬವರು ಹೇಳಿದ ’ನೋಟ ಮತ್ತು ಅನಿಸು’ ಗೆ ಏನಾಗಿದೆ? ತುಸು ಉದ್ದ ಆದರೂ ಎಲ್ಲರಿಗೂ ತಿಳಿಯುತ್ತಲ್ಲ... ಅದು ಅಗ್ಗಳ(ಮುಕ್ಯ)....
ಉ:
ಹ್ಮ್. ಯೋಚಿಸತಕ್ಕ ವಿಚಾರವೇ. "ನೋಟ ಮತ್ತು ಅನಿಸು" ->
೧. "ಮತ್ತು" ಪದ ಹೇಳೋದು ಬೇಕಾಗಿಲ್ಲ, ಅಂದುಕೋತೀನಿ.
೨. ನೋಟ -> ನಾಮಪದ, ಅನಿಸು -> ಕ್ರಿಯೆ. ಅನಿಸಿಕೆ ಹೇಳಬೇಕು.
ಹೇಯ್, ಒಂದು ನಿಮಿಷ,
೩. ನೋಟದ + ಅನಿಸಿಕೆ -> ನೋಟದನಿಸಿಕೆ, ಅರೆ ಹೌದು. "ನೋಟದನಿಸಿಕೆ" ಹೇಳುಬಹುದಲ್ವಾ ???
ಉ:
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ:
ಸುನಿಲ್,
Look and Feel ನಲ್ಲಿ Look ಹಾಗು Feel ಎರಡು ಬೇರೆ ಬೇರೆ ನಾಮಪದಗಳಾಗಿ ಬಳಸಲ್ಪಟ್ಟಿವೆ, ಆದರೆ ನೀವು ಸೂಚಿಸಿದ 'ನೋಟದನಿಸಿಕೆ'ಯಲ್ಲಿ ಎರಡನೆ ಭಾಗವು ಕ್ರಿಯಾಪದವಾಗಿದೆಯಲ್ಲ..ಎರಡನ್ನೂ ಬಿಡಿ ಬಿಡಿಯಾಗಿ ಬಳಸಿದರೆ ಹೇಗೆ.. ?
http://bhaavajeevi.blogspot.com/
ಉ:
ಪ್ರಸಾದ್, 'ನೋಟ' ಮತ್ತು 'ಅನಿಸಿಕೆ' ಎರಡು ಪದಗಳು ಕೂಡ ನಾಮಪದಗಳೇ. ನೋಂಪು ಗೀಂಪು, ಸಮಂತು ಗಿಮಂತು ಎಲ್ಲವನ್ನು ಬಿಟ್ಟು, Look and feel ="ನೋಟ ಮತ್ತು ಅನಿಸಿಕೆ" ಅಂತ ಇಟ್ಟುಕೊಳ್ಳೋಣವೇ ?
ಪ್ರೊ.ಜಿ.ವಿ ನಿಘಂಟು ತಡಕಾಡಿದಾಗ, ಇಷ್ಟು ಸಿಕ್ಕಿತು.
ಅನಿಸಿಕೆ (ದೇ) (ನಾ) ಭಾವನೆ, ಎಣಿಕೆ
ಉ:
ಆಗಲ್ಲ!
ಇಲ್ಲಿ look ಅಂದ್ರೆ ಕಾಣಿಸಿಕೋ.
you look sick ಅಂದ್ರೆ ನೀನು ಬೇನೆ ನೋಡು ಅಂತ ಅಲ್ಲ.. ನೀನು ಬೇನೆಯಿರುವನಂತೆ ಕಾಣಿಸಿಕೊಳ್ತಾ ಇದ್ದೀಯ..
ಅದಕ್ಕೆ ಇಲ್ಲಿ look != ನೋಡು... ಹಿಯರ್ look == ಕಾಣ್ಪು...
ಇನ್ನು feel != ಭಾವನೆ, ಅನಿಸಿಕೆ, feeling
feel = ಅನುಭವಿಸು, ಇಂದ್ರಿಯಾನುಭವವನ್ನು ಪಡೆ
look and feel = ’ಲುಕ್ಕು ಮತ್ತು ಪೀಲು’ ಅಂತಾನೆ ಇರಲಿ!
ಉ:
ಸುನಿಲ,
ನನ್ನ ಪ್ರೊಪೋಸಲ್..
"ದೃಶ್ಯಾನುಭಾವ" ಯಾವ ಅಡ್ಡಿಯಿಲ್ಲ... !
ನಿನ್ನ ನೋಂಪು ನಾನು ಒಪ್ಪಲ್ಲ!
look and feel = ನೋಡಿ ಮಜಾ ಮಾಡು
ಮಸ್ತ್!
ಉ:
ಸುನಿಲ್,
Look and Feel ನಲ್ಲಿ Look ಹಾಗು Feel ಎರಡು ಬೇರೆ ಬೇರೆ ನಾಮಪದಗಳಾಗಿ ಬಳಸಲ್ಪಟ್ಟಿವೆ, ಆದರೆ ನೀವು ಸೂಚಿಸಿದ 'ನೋಟದನಿಸಿಕೆ'ಯಲ್ಲಿ ಎರಡನೆ ಭಾಗವು ಕ್ರಿಯಾಪದವಾಗಿದೆಯಲ್ಲ..ಎರಡನ್ನೂ ಬಿಡಿ ಬಿಡಿಯಾಗಿ ಬಳಸಿದರೆ ಹೇಗೆ.. ?
http://bhaavajeevi.blogspot.com/
ಉ: ಸರಿಯಾದ ಕನ್ನಡ ಪದ ತಿಳಿಸಿ
ನೊಂಪು ಎಂಬ ಬಳಕೆ ಈಗಾಗಲೇ ಇದೆ.
ನುಣುಪು->ನುಣ್ಪು->ನುಂಪು->ನೊಂಪು
ತಣ್ಪು->ತಂಪು
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಸರಿಯಾದ ಕನ್ನಡ ಪದ ತಿಳಿಸಿ
ಇದಕ್ಕೆ ಹಿಂದ ಸುನಿಲ ಸಮಂತು ಎಂಬ ಒರೆಯನ್ನು ಹೇಳಿದ್ದ...
ಸುನಿಲ.. ನೋಡೋ!
ಉ: ಸರಿಯಾದ ಕನ್ನಡ ಪದ ತಿಳಿಸಿ
ಈ ಮುಂಚಿನ ಚರ್ಚೆಯ ನಂತರ ಇಷ್ಟನ್ನು ಎಲ್ಲರ ಮುಂದಿಡಬಹುದು ಎಂದುಕೊಳ್ಳುವೆ.
೧. ನೋಟದನಿಸಿಕೆ
೨. ನೋಟ ಮತ್ತು ಅನಿಸಿಕೆ
೩. ನೋಟ ಮತ್ತು ಭಾವ
೪. ನೋಟ ಅನಿಸಿಕೆ
ಉ: ಸರಿಯಾದ ಕನ್ನಡ ಪದ ತಿಳಿಸಿ
ನನಗೆ ಈ ಕೆಳಗಿನ ಮೂರರಲ್ಲಿ ಯಾವುದಾದರೂ ಅಡ್ಡಿ ಇಲ್ಲ...
೧. ನೋಟ ಮತ್ತು ಅನಿಸಿಕೆ
೨. ನೋಟ ಮತ್ತು ಭಾವ
೩. ನೋಟ ಅನಿಸಿಕೆ
ಆದರೆ ಮೊದಲಿನ ಎರಡು ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ!
ತಾವುಗಳೆಲ್ಲಾ ಏನಂತೀರ?
http://bhaavajeevi.blogspot.com/
ಉ: ಸರಿಯಾದ ಕನ್ನಡ ಪದ ತಿಳಿಸಿ
ಗೆಳೆಯರೇ, ನಂಗೊಂದು ಚೇಶ್ಟೆ ಹೊಳೀತಾ ಇದೆ. ನಾವೇಕೆ "Look and Feel" ಎಂಬುದನ್ನ "ನೋಟ ಮತ್ತು ಮಾಟ" ಅಂತ ಇಟ್ಟುಕೊಳ್ಳಬಾರದು. ಪ್ರಾಸ ಇರುವುದರಿಂದ ಕೇಳಕ್ಕೆ ಚೆನ್ನಾಗಿದೆ.
ಮಾಟ - māṭa making, doing, work, business, performance, undertaking, manner, way, state of being nicely made, well-finished state, handsomeness, beauty, elegance,trickery, jugglery, deceit, magic, sorcery
"ನೋಟ ಮತ್ತು ಅನಿಸಿಕೆ"ಯ ಡೈರೆಕ್ಟ್ ಅನುವಾದಕ್ಕಿಂತ "ನೋಟ ಮತ್ತು ಮಾಟ" ಭಾವಾನುವಾದ ಚೆನ್ನಾಗಿದೆ, ಅಂತ ನನಗೆ ಅನ್ನಿಸಿತು.
ಉ: ಸರಿಯಾದ ಕನ್ನಡ ಪದ ತಿಳಿಸಿ
ಮಯ್‌ಮಾಟ ಅಂತ ಸುಮ್ನೆ ಕನ್ನಡದ ಒರೆ ಇರೋದ!
ಲೋ ನೋಟ ಸರಿಯಲ್ಲ, ಕಾಣ್ಪು ಸರಿ... ದಯಮಾಡಿ ಗಮನಿಸು...
ನೋಡೋದು, ಕಾಣೋದು ಬೇರೆ. ಅಲ್ಲಿ ಕಾಣಿಸೋದು, ನೋಡಿಸೋದಲ್ಲ.
ಉ: ಸರಿಯಾದ ಕನ್ನಡ ಪದ ತಿಳಿಸಿ
ಮಹೇಶ, ಪ್ರೋ.ಜಿ.ವಿ.ನಿಘಂಟಿನಿಂದ
look (ನಾ) 1) ನೋಟ, ದೃಷ್ಟಿ 2) ಮುಖಭಾವ, ಮುಖಮುದ್ರೆ, ಮುಖಲಕ್ಷಣ 3) (ಬ.ವ.) ಅಂದ, ಚೆಲುವು, ಸೌಂದರ್ಯ
appearance (ನಾ) 1) ನೋಟ, ಕಾಣ್ಕೆ, ಗೋಚರಿಸುವುದು, ಆವಿಷ್ಕರಣ, ಆವಿರ್ಭಾವ, ದರ್ಶನ 2) ಬರುವಿಕೆ, ಹಾಜರಿ 3) ಸೋಗು, ವೇಷ 4) ಪ್ರಕಾಶನ 5) ಉದಯ 6) ಚಹರೆ, ರೂಪ 7) ಪಾತ್ರವಹಿಸುವುದು.
ಹಾಗಾಗಿ, ನೋಟ ಇಲ್ಲಿ ಸರಿಯಾಗಿಯೇ ಹೊಂದತ್ತೆ, ಅಲ್ವೇನೋ ?
ಉ: ಸರಿಯಾದ ಕನ್ನಡ ಪದ ತಿಳಿಸಿ
ನೋಟ ಮಾಟ ಚೆನ್ನಾಗಿದೆ. ಆಗಬೋದು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸರಿಯಾದ ಕನ್ನಡ ಪದ ತಿಳಿಸಿ
ನೋಡಪ್ಪ...
ಇಲ್ಲಿ ನಾವು "appearance" ಬಗ್ಗೆ ಮಾತಾಡ್ತಾ ಇರೋದು..
ಕನ್ನಡದಲ್ಲಿ appear = ಕಾಣಿಸಿಕೋ, appearance = ಕಾಣಿಸಿಕೊಳ್ಳುವಿಕೆ, ಕಾಣ್ಪು..
How does it appear/look?
ಇದು ಹೇಗೆ ಕಾಣ್ತದೆ? ಅಂತೀವಿ ಹೊರತು "ಇದು ಹೇಗೆ ನೋಡಿಸಿಕೊಳ್ತದೆ?" ಅನ್ನಲ್ಲ.!!
ಬೇಕಾದ್ರೆ Burrow, ನೋಡ್ಕೋ..!!
ಉ: ಸರಿಯಾದ ಕನ್ನಡ ಪದ ತಿಳಿಸಿ
How does it appear/look ? ಇಲ್ಲಿ appear/look ಕ್ರಿಯಾಪದ ಕಣೋ. ನಾಮಪದ ಅಲ್ಲ. ಅದಕ್ಕೆ ಅಲ್ಲಿ ನೋಟ ಸರಿ ಹೊಂದಲ್ಲ. ಆದರೆ ಈ ವಾಕ್ಯ ಗಮನಿಸು. ದೇವಸ್ಥಾನದ ನೋಟ ಬಲ್ ಬೊಂಬಾಟಾಗಿದೆ. ಇಲ್ಲಿ appearance/looks ಅನ್ನೋ ಅರ್ಥ ಬರತ್ತೆ.
ಉ: ಸರಿಯಾದ ಕನ್ನಡ ಪದ ತಿಳಿಸಿ
ಸರಿ.. ನೋಟ, ಮಾಟ ಓಕೆ..!
ನೋಡುಮ!! ಅಲ್ಲ ಕಾಣ್ಮ... ಅಲ್ಲ ಏನೋ ಒಂದು
ಉ: ಸರಿಯಾದ ಕನ್ನಡ ಪದ ತಿಳಿಸಿ
"ನೋಟ ಮಾಟ" ಸಣ್ಣದಾದ ಎರಡು ನಾಮಪದಗಳಿಂದ ಕೂಡಿರುವ ಸರಳ ಪದ ಅಂತ ನನ್ನ ಅನಿಸಿಕೆ.
ಉ: ಸರಿಯಾದ ಕನ್ನಡ ಪದ ತಿಳಿಸಿ
ಸುನಿಲ್,
ನಿಮ್ಮ 'ನೋಟ ಹಾಗು ಮಾಟ' ನನಗೂ ಒಪ್ಪಿಗೆ [;)]
ಉತ್ತಮವಾದ ಹಾಗು ಸೆಕ್ಸಿಯಾದ ಕನ್ನಡ ಪದವನ್ನೇ ಹುಡುಕಿದ್ದೀರಾ ಬಿಡಿ!!
ಅಂದಹಾಗೆ ಇದಕ್ಕೆ ಯಾರ ಮಾಟ ಸ್ಪೂರ್ತಿ ಅಂತಾ ಗೊತ್ತಾಗ್ಲಿಲ್ವಲ್ಲಾ!! [;)]
http://bhaavajeevi.blogspot.com/
ಉ: ಸರಿಯಾದ ಕನ್ನಡ ಪದ ತಿಳಿಸಿ
ಸದ್ಯ, "ನೋಟ ಮಾಟ"ದಲ್ಲಿ ಸ್ವಲ್ಪವಾದರೂ ನೆಮ್ಮದಿ ಸಿಕ್ಕಿತಲ್ಲ ಎಲ್ಲರಿಗೂ. ಉಸ್ಸಪ್ಪಾ
(ಸಮಾಜ ಸೇವಕಿ ಲಲಿತಾಂಬ ಶೈಲಿಯಲ್ಲಿ.) ಮಾಟಕ್ಕೆ ಸ್ಪೂರ್ತಿ ಯಾರು ಕೇಳಿದ್ರಾ ? ಆಹಾ!!ಹೀಗೆಲ್ಲ ಓಪನ್ ಫೋರಮ್ಮಲ್ಲಿ ಹೇಳಕ್ಕೆ ಆಗುತ್ತಾ :ಕಣ್ಣುಹೊಡೆಯುತ್ತಾ:
ಉ: ಸರಿಯಾದ ಕನ್ನಡ ಪದ ತಿಳಿಸಿ
"ನೋಡಿ ಅನುಭವಿಸು" ಎಂದು ಆಗುತ್ತದೆಯೇ? ಏಕೆಂದರೆ "Look" ಅಂದರೆ "ನೋಡು" ಮತ್ತು "Feel" ಅಂದರೆ "ಅನುಭವಿಸು" ಎಂದಾಗುತ್ತದೆ...
ಸರಿಯೇ ನನ್ನ ಪ್ರತಿಕ್ರಿಯೆ?
Anil Ramesh.
ಉ: ಸರಿಯಾದ ಕನ್ನಡ ಪದ ತಿಳಿಸಿ
ಅನಿಲ್ ರಮೇಶ್,
ನೀವು ಹೇಳಿದ್ದು ಸರಿಯೆ ಆಗಿದ್ದರೂ, ನನ್ನ ಬಳಕೆಯ ಸಂದರ್ಭಕ್ಕೆ ಅದು ಅಷ್ಟೊಂದು ಸಮಂಜಸವಲ್ಲ ಎಂದು ನನ್ನ ಅನಿಸಿಕೆ.. ನಾನು ಗಣಕತೆರೆಯ Look and Feel ಗೆ ಸರಿಯಾದ ಪದಗಳನ್ನು ಹುಡುಕ್ತಾ ಇದ್ದೆ(ನಾನು ಒದಗಿಸಿದ ಕೊಂಡಿಯನ್ನು ಗಮನಿಸಿ).. ಇಲ್ಲಿ ಬಳಕೆಯಾದ Feel ನಾಮಪದವಾಗಿದೆಯೆ ಹೊರತು ಕ್ರಿಯಾಪದವಲ್ಲ ಆದ್ದರಿಂದ "ಅನುಭವಿಸು" ಸೂಕ್ತವಾಗುವುದಿಲ್ಲ...
http://bhaavajeevi.blogspot.com/
ಉ: ಸರಿಯಾದ ಕನ್ನಡ ಪದ ತಿಳಿಸಿ
ನೋಟ-ಮಾಟ ಚೆನ್ನಾಗಿದೆ.
ನೋಟ-ಅನಿಸಿಕೆ, ಪದ ಪದದ ಅರ್ಥ ಹಿಡಿದು ಜಗ್ಗಾಡಿದಂತಿದೆ
ಈಗಾಗಲೇ ಬಳಕೆಯಲ್ಲಿರುವ ಪದ "ರೂಪು-ರೇಖೆ" ಎಂದರೆ ಹೇಗೆ ?
ಉ: ಸರಿಯಾದ ಕನ್ನಡ ಪದ ತಿಳಿಸಿ
ಪೂರ್ಣಿಮಾ ಅವರೆ, ರೂಪು-ರೇಷೆ ಅಥವಾ ರೂಪು-ರೇಖೆ, ಈ ಪದಗಳ ವ್ಯಾಪ್ತಿ ತುಂಬಾ ದೊಡ್ಡದು. ಈಗ ನೋಡಿ, ದೇವನಹಳ್ಳಿ ವಿಮಾನನಿಲ್ದಾಣದ ರೂಪು-ರೇಷೆ ಸಿದ್ಧಾವಾಗಿದೆ ಎಂದರೆ ಅದು "Look and feel" ಗಿಂತ ದೊಡ್ಡ ಪ್ಲಾನ್ನಿಂಗು.
ಅದಕ್ಕೆ ನನ್ನ ಓಟು, "ನೋಟ-ಮಾಟ" ಪದಕ್ಕೆ :ಕಣ್ಣುಹೊಡೆಯುತ್ತಾ:
ಉ: ಸರಿಯಾದ ಕನ್ನಡ ಪದ ತಿಳಿಸಿ
ಹಾಂ ಸುನಿಲ್,.. ನನಗೂ ಹಾಗೆ ಅನ್ನಿಸ್ತು.. ಇಲ್ಲಿನ ಬಳಕೆಗೆ ರೂಪು-ರೇಷೆ ಅಥವರೂಪು-ರೇಖೆ ಬಹಳ ಭಾರದ ಪದವಾಗಿ ಬಿಡುತ್ತೆ.. Look and Feel of the Computer ವನ್ನು ಗಣಕದ ರೂಪು-ರೇಷೆ ಎಂದು ಹೇಳಿದಾಗು ಅದು ಇಡೀ ಗಣಕದರೂಪ-ರೇಷೆಗಳು ಎಂದು ಅರ್ಥೈಸಿಕೊಂಡು ಬಿಡುವ ಭಯವಿರುತ್ತದೆ!!
http://bhaavajeevi.blogspot.com/