ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರು ಸರಿಯೇ?
ಅತ್ಯಂತ ಹೆಚ್ಚಿನ ಬರವಸೆಯೊಂದಿಗೆ ಶೇರು ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಪವರ್ ಶೇರುಗಳು ಮೊದಲದಿನವೇ ಮುಗ್ಗರಿಸಿ ಮೂಗು ಜಜ್ಜಿಸಿಕೊಂಡದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ರೀತಿಯಲ್ಲಿ ಹೂಡಿಕೆದಾರರು ಅನುಭವಿಸುತ್ತಿರುವ ನಷ್ಟವನ್ನು ತುಂಬಿಕೊಡಲು ರಿಲಯನ್ಸ್ ಪವರ್ ಸಂಸ್ಥೆಯು ಬೋನಸ್ ಶೇರು ನೀಡುವ ಘೋಷಣೆ ಮಾಡಿದೆ. ಬೋನಸ್ ಶೇರುಗಳು ಸಾಮಾನ್ಯವಾಗಿ ವ್ಯಾಪಾರಿ ಸಂಸ್ಥೆಗಳು ಗಳಿಸಿಟ್ಟು, ಬೆಳೆಸಿದ ಕಾದಿಟ್ಟ ನಿಧಿಯಿಂದ ನೀಡುವುದು ಸರಿಯಾದ ವ್ಯವಹಾರ. ಆದರೆ, ಶೇರುಗಳು ಮಾರುಕಟ್ಟೆಯಲ್ಲಿ ಮುಗ್ಗರಿಸಿದುದನ್ನು ಸರಿಮಾಡಲು ಬೋನಸ್ ಶೇರುಗಳನ್ನು ನೀಡುವುದು ಎಷ್ಟರಮಟ್ಟಿಗೆ ಸರಿ, ಮತ್ತು ನ್ಯಾಯ ಮಾರ್ಗ? ಇದು ಮುಂದೆ ಇಂತಹದೇ ವಾಮ ಮಾರ್ಗವನ್ನು ಅನುಸರಿಸಲು ಇತರೇ ಕಂಪನಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುವುದಿಲ್ಲವೇ? ಈರೀತಿ ಬೋನಸ್ ಶೇರುಗಳನ್ನು ನೀಡುವುದರಿಂದ ಸಂಸ್ಥೆಯ ಮೂಲನಿಧಿ (ಕ್ಯಾಪಿಟಲ್) ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ? ಸಂಪದದ ಓದುಗರ ಅನಿಸಿಕೆ ಏನು?
ಎ.ವಿ. ನಾಗರಾಜು.

- Login or register to post comments
- 327 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರು ಸರಿಯೇ?
ನಾನು ಓದಿದ ಮಟ್ಟಿಗೆ ಹೇಳುವುದಾದರೆ, ರಿಲಯನ್ಸ್ ಪವರ್ ನವರು ಕೊಡುತ್ತಿರುವ ಬೋನಸ್ ಷೇರುಗಳು "ಪ್ರಮೋಟರ್ಸ್"ನ ಪಾಲಿಗೆ ಬಂದಿರುವಂತ್ತದ್ದು. ಅಂದರೆ ಅವರು "ಹೊಸ" ಷೇರುಗಳನ್ನು ಸೃಷ್ಟಿಸುತ್ತಿಲ್ಲ. ಇದರಿಂದ ಸಂಸ್ಥೆಯ ಮೂಲನಿಧಿ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ. ಅನಿಲ್ ಅಂಬಾನಿಗೆ "%stake in the company" ಕಮ್ಮಿ ಆಗುತ್ತೆ ಅಷ್ಟೆ