ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಯೇಸುಕ್ರಿಸ್ತ ಎಂಬ ಉಚ್ಚಾರಣೆ

February 21, 2008 - 10:21pm — cmariejoseph

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು.
ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.
ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?

‹ 'ನನ್ನಿ'ಯ ಮೂಲ??? ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 754 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 22, 2008 - 10:31am — mahesha

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

mahesha's picture

ಕನ್ನಡದಲ್ಲಿ ಕಾಮನ್ನಾಗಿ.. ವ ಮತ್ತು ಯ ಇಂದ ಪದಗಳು ಮೊದಲಾಗವು..

ಯಾರು, ಯಾವುವು, ಯಾವುದು ಮುಂತಾದವುಗಳ ಹಳೆಯ ರೂಪ ಆರು, ಎವು, ಎದು ಎಂದಿದೆ.

ವೆಂಕಟ => ಎಂಕಟ
ಯತ್ನ => ಎತ್ನ
ಯಾಕೆ => ಏಕೆ

ಏಸು ಸರಿ..

ಆದ್ರೆ ... ಹಲಗನ್ನಡಿರು ಒ ಮತ್ತು ವ, ಎ ಮತ್ತು ಯ ನಡುವೆ ಬೇರೆತನ ತೋರಲ್ಲ..

ಎಂಟು => ಯಂಟು
ಸ್ವಲ್ಪ => ಸೊಲ್ಪ
ಬೇಡ = ಬ್ಯಾಡ
ಹೋಗು = ಹ್ವಾಗು/ವಾಗು

ನೆರವಾಯ್ತೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 12:22pm — ವೈಭವ

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

ವೈಭವ's picture

ನಮ್ಮಲ್ಲು ಅಶ್ಟೆನೆ 'ಯ' ಯಿಂದ ಸುರುವಾಗೋದನ್ನ 'ಜ' ಯಿಂದ ಸುರು ಮಾಡ್ಕೊತಿವಿ

ಯತ್ನ = ಜತುನ
ಯಾಜ್ಞಿಕ = ಜನ್ನಿಗೆ , ಜನಿವಾರ

'ವ' ಯಿಂದ ಸುರುವಾಗಿದ್ರೆ 'ಬ' ಮಾಡ್ಕೊತಿವಿ

ವೃಷಭ => ಬಸವ
ವಿಜ್ಞಾನ => ಬಿನ್ನಣ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 2:20pm — mahesha

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

mahesha's picture

ಇರು ಬೇರೆ..

ಹೊರನುಡಿ ಪದಗಳವು..

ಯಾಕೆ => ಜಾಕೆ
ಯಾರು => ಜಾರು ಆಗಲ್ಲ...

ವೃಷಭ => ಬಸವ ಇವೆಲ್ಲ ಪ್ರಾಕೃತದ ಪ್ರಭಾವ ಅಂತ ಅನ್ನಿಸ ಹತ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 3:53pm — ವೈಭವ

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

ವೈಭವ's picture

ಯೇಸು(ಗ್ರೀಕ್,ಹಿಬ್ರೂ) ಕನ್ನಡ ಪದವಲ್ಲ... ಅದಕ್ಕೆ ಹಾಗೆ ಹೇಳಿದೆ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 8:30pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

ಯೇಸು ಎನ್ನುವುದು ಮೂಲತಃ ಕನ್ನಡದ ಪದವಲ್ಲ. ಅಲ್ಲದೆ ಅದು ನಾಮಪದವಾಗಿರುವುದರಿಂದ ಅದನ್ನು ಯಥಾವತ್ತಾಗಿ ಬರೆಯಬೇಕಾಗುತ್ತದೆ. ಕೃಷ್ಣ ಎನ್ನುವುದನ್ನು ಕೃಷ್ಣ ಎಂದೇ ಬರೆಯುವುದಿಲ್ಲವೇ ಹಾಗೆ. ಉಚ್ಚರಿಸುವಾಗ ವ್ಯತ್ಯಾಸ ಹೊಂದುವುದು ಬೇರೆ ವಿಷಯ. ಈ ಕೆಳಗಿನ ಎರಡು ವಾಕ್ಯಗಳಲ್ಲಿರುವ ವ್ಯತ್ಯಾಸ ಗಮನಿಸಿ.

ಕಿಸ್ನ! ಸತ್ಯಸಂದನಾದ ಉದಿಷ್ಟಿರನು ಮಾಂಸ ಮಾರ್ತಾನೆ (ಉಚ್ಚಾರ ರೂಪ )
ಕೃಷ್ಣ, ಸತ್ಯಸಂಧನಾದ ಯುಧಿಷ್ಟಿರನು ಮಹಾನ್ ಸಮರ್ಥನೇ? (ಬರಹರೂಪ)

ಕನ್ನಡದಲ್ಲಿ ಎಷ್ಟು ಎನ್ನುವುದಕ್ಕೆ ಏಸು ಎಂಬುದು ಸಂವಾದಿ ಪದವಾಗಿರುವುದರಿಂದ ಯೇಸು ಎಂಬುದೇ Jesus ಎಂಬುದನ್ನು ನಿರ್ದೇಶಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 9:40pm — ವೈಭವ

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

ವೈಭವ's picture

ಕ್ರಿಶ್ಣ ನ ನಾವು 'ಕಿಟ್ಟಿ' ಅಂತಾನೆ ಹೇಳದು
ಶ್ರೀನಿವಾಸನ್ನ 'ಸೀನ' ಅಂತ ಹೇಳ್ತಿವಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 23, 2008 - 10:10am — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

"ಕ್ರಿಶ್ಣ ನ ನಾವು 'ಕಿಟ್ಟಿ' ಅಂತಾನೆ ಹೇಳದು"

ಅಂದ್ರೆ ನೀವ್ ಬ್ಯಾರೆ ನಾವ್ ಬ್ಯಾರೆ ಅಂತ್ಲೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 24, 2008 - 11:55am — ವೈಭವ

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

ವೈಭವ's picture

ಹಾಗಲ್ಲ. ವಯ್ವಿದ್ಯತೆ ಹೇಗೆ ಇರ್ತದೆ ಅಂತ ಹೇಳ್ತಾ ಇದ್ದೆ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 27, 2008 - 11:58am — mahesha

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

mahesha's picture

ಜೋಸೆಪರೇ..

ಸಂಗತಿ ಇಶ್ಟೇ...!!

ಬರೆವಣಿಕಗೆ ಹೇಗೇ ಇದ್ದರೂ, ಮಂದಿ ಹೇಗೆ ಅದನ್ನು ಉಲಿಯುವರು ಎನ್ವುದೇ ಮುಕ್ಯ, ತಾನೆ..

ಈಗ ನಾನೊಮ್ಮ ಪೂಚಂತೆ ಕಾದಂಬರಿಯಾಗೆ ’ಮಾಡಲೆತ್ನಿಸಿದರು’ ಎಂದು ಓದಿ, ’ಮಾಡಲು ಯತ್ನಿಸಿದರು’ ಸರಿಯಲ್ವ ಎಂದು ಅಂದುಕೊಂಡೆ.. ಅದರೆ ಅಲ್ಲಿ ಅದು ಸರಿಯೇ, ಏಕೆಂದರೆ ನಾವು ಉಲಿಯೋದು ಮಾಡಲೆತ್ನಿಸಿದ್ರು ಎಂದೇ ಅಲ್ವ!!

ಹಾಗೆ.
ಯೇಸು, ಏಸು
ಸಾಇ, ಸಾಯಿ
ಯತ್ನ, ಎತ್ನ
ಯಾಕೆ, ಏಕೆ
ವಾಲೆ, ಓಲೆ
ವಾಲಗ, ಓಲಗ
ವಸಿ, ಒಸಿ

ಇದೆಲ್ಲ ಮಂದಿ ಅದಲು-ಬದಲು ಉಲಿತಾರೇ.. ನಾವು ಎರಡು ಉಲಿಕೆಯನ್ನೂ ಬರೆವಣಿಗೆಯಲ್ಲಿ ಸರಿಯೆಂದೇ ಒಪ್ಪಿಕೊಳ್ಳೊದಕ್ಕೆ ಯಾವ ಅಡ್ಡಿಯಿಲ್ಲ.. ಯಾ ಯಾರು ಹೆಂಗ್ ಹೆಂಗ್ ಉಲೀತಾರೋ, ಅವರು ಹಂಗ್ ಹಂಗ್ ಬರೆದುಕೊಳ್ಳಿ..

ಅಂದ್ರೆ ಏಸು ಮತ್ತು ಯೇಸು ಎರಡು ಸರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 5:26pm — agilenag

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

agilenag's picture

ಹೀಗೆಯೇ ಗಮನಿಸುತ್ತಾ ಹೋದರೆ ಭಾರತದಲ್ಲಿಯೂ ಜ ಮತ್ತು ಯ ಗಳ ಹಾಗು ವ ಮತ್ತು ಬ ಗಳ ಪರಸ್ಪರ ಬಳಕೆ ದಟ್ಟವಾಗಿ ಕಾಣುತ್ತದೆ. ಜಸೋದಾ ಬೆಹೆನ್ = ಯಶೋದಾ ಬೆಹೆನ್, ಜಸವಂತ್ ಸಿನ್ಹಾ = ಯಶವಂತ ಸಿನ್ಹಾ, ಜಾತ್ರೆ = ಯಾತ್ರೆ (ಕನ್ನಡದಲ್ಲಿ ಇದು ಬೇರೆ ಬೇರೆ ಅರ್ಥಗಳನ್ನು ಕೊಟ್ಟರೂ, ಹಿಂದಿ, ಗುಜರಾತಿ, ಬೆಂಗಾಲಿ ಭಾಷೆಗಳಲ್ಲಿ ಇವೆರಡಕ್ಕೂ ಒಂದೇ ಅರ್ಥ), ಯುಗ ಯುಗ ಜೀವಿಸು = ಜುಗ್ ಜುಗ್ ಜೀವೊ ಇತ್ಯಾದಿ. ಆದ್ದರಿಂದ ಜೇಸುದಾಸ್ ಏಸುದಾಸ್ ಅಥವಾ ಯೇಸುದಾಸ್ ಆದರೆ ಏನೂ ಆಕ್ಷೇಪಣೆ ಇಲ್ಲ ಅಲ್ಲವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 5:47pm — savithru

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

savithru's picture

ಏಸು ಹೆಸ್ರು ಏಸು ( Jesus) ಅಶ್ಟೆ ಅಲ್ವಾ....ಯೇಸು ಜೊತೆ 'ಕ್ರಿಸ್ತ 'ಹೇಗೆ ಸೇರಿಕೊಳ್ತು? ಕ್ರಿಸ್ತ ( Christ) ಅಂದ್ರೆ ಏನು? ..

( Christ) ಪದಕ್ಕೆ ಕ್ರಿಸ್ತ ಸರಿಯಾದ ಪದವೇ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 22, 2008 - 8:35pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

ಸವಿತೃ ಅಂದರೆ ಸೂರ್ಯ ಅಂತ ತಾನೇ?

"ಯೇಸು ಜೊತೆ 'ಕ್ರಿಸ್ತ 'ಹೇಗೆ ಸೇರಿಕೊಳ್ತು? ಕ್ರಿಸ್ತ ( Christ) ಅಂದ್ರೆ ಏನು? .." ಅಂತ ಕೇಳಿದ್ದೀರಿ.

ಗ್ರೀಕ್ ಭಾಷೆಯಲ್ಲಿ ಕ್ರಿಸ್ತೋಸ್ (ΧΡΙΣΤOΣ)ಎಂದರೆ ದೇವರಿಂದ ಅಭಿಷಿಕ್ತನಾದವನು ಎಂದರ್ಥ. ಯೆಹೂದ್ಯರ ಸಾಧುಸಂತರು (ಯೆಹೂದ್ಯ ಪರಿಭಾಷೆಯಲ್ಲಿ ಪ್ರವಾದಿಗಳು) ದೇವರ ಪ್ರೇರಣೆಯಿಂದ ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿ ಆತನ ತಲೆಯ ಮೇಲೆ ಪವಿತ್ರ ತೈಲ ಹೊಯಿದು ಅಭಿಷೇಕಿಸುತ್ತಿದ್ದರು. ಹೀಗೆ ಅಭಿಷಿಕ್ತನಾದವನು ರಾಜನಾಗಿ ಯೆಹೂದ್ಯ ಪ್ರಜೆಗಳನ್ನು ಆಳುತ್ತಿದ್ದ. ದಾವಿದ, ಸೌಲ, ಸಲೊಮೊನ್ ಮುಂತಾದವರೆಲ್ಲ ಹೀಗೆ ಅಭಿಷಿಕ್ತರಾದವರು, ಅಂದರೆ ಅವರೆಲ್ಲರೂ ಕ್ರಿಸ್ತ ಎನಿಸಿಕೊಂಡವರೇ. ಯೇಸುವು ದೇವರಿಂದಲೇ ನೇರವಾಗಿ ಅಭಿಷಿಕ್ತನಾದವನು ಎಂಬ ನಂಬಿಕೆಯಿಂದ ಅವನಿಗೂ ಕ್ರಿಸ್ತ ಎನ್ನುವ ಪರಿಪಾಠ ಮೊದಲಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 27, 2008 - 10:57am — Sunil Jayaprakash

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

Sunil Jayaprakash's picture

ಅರೆ, ನನಗೆ ಈ ಕ್ರಿಸ್ತ Christ ಎಂಬುದರ ಒಳ ತಿಳಿವು ಗೊತ್ತಿರಲಿಲ್ಲ. ನನ್ನ ಕುತೂಹಲ ಇಮ್ಮಡಿಸಿತು. ಹಾಗಾದರೆ, Christians (ಕ್ರೈಸ್ತರು) ಎಂಬ ಬಳಕೆ ಹೇಗೆ ಬಂತು ? ಇದರ ಬಗ್ಗೆಯೂ ಸ್ವಲ್ಪ ಬೆಳಕು ಚೆಲ್ಲಿ, ಸಾಧ್ಯವಾದಾಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 11, 2008 - 11:04am — Ennares

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

Ennares's picture

ಸುನಿಲ್,

ನಿಮ್ಮ ಕುತೂಹಲ ತಣಿಸಲು ಈ ಕೆಳಗಿನ ಕೊಂಡಿಯಿಂದ ಸಾಧ್ಯವಾಗಬಹುದೇನೋ? ಓದಿ ನೋಡಿ.

http://www.pbs.org/wgbh/pages/frontline/shows/religion/jesus/

- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 11, 2008 - 11:09am — Ennares

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

Ennares's picture

ಸುನಿಲ್,

ಸರಿಯಾದ ಕೊಂಡಿ ಕೆಳಗಿದೆ.

http://www.pbs.org/wgbh/pages/frontline/shows/religion/

Read the synopsys ಮೇಲೆ ಚಿಟುಕಿಸಿದರೆ ಸಿಂಹಾವಲೋಕನ ದೊರೆಯುತ್ತೆ.

- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 12, 2008 - 2:36pm — Sunil Jayaprakash

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

Sunil Jayaprakash's picture

ನನ್ನಿ, ಓದುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 5:41pm — savithru

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

savithru's picture

cmariejoseph ಅವ್ರೇ

ನಿಮ್ಮ ಉತ್ತರಕ್ಕೆ ನನ್ನೀ!

ಒಮ್ಮೆ ( ಕೆಲವು ವರ್ಷಗಳ ಹಿಂದೆ ) ಓಲ್ಡ್ ಟೆಸ್ಟಾಮೆಂಟನ್ನು ಓದಲು ಪ್ರಯತ್ನಿಸಿದ್ದೆ. ಅದರಲ್ಲಿ ಬರುವ ವಂಶಾವಳಿಗಳು ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದವಾದರೂ ಪೂರ್ತಿ ಓದಲು ಆಗಿರಲಿಲ್ಲ. ಆಗ ಅವು ಅರ್ಥವೂ ಆಗಿರಲಿಲ್ಲ.

ಸಾಧ್ಯವಾದರೆ ನಮ್ಮೊಡನೆ ಹಂಚಿಕೊಳ್ಳಿ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 11, 2008 - 10:57am — Ennares

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

Ennares's picture

ಶ್ರೀ ಮರೀಜೋಸೆಫರೇ,

ಈ ಕೆಳಗಿನಕೊಂಡಿಯನ್ನು ಸ್ವಲ್ಪ ನೋಡಿ
http://en.wikipedia.org/wiki/Christ

ಇದರ ಪ್ರಕಾರ ಕ್ರೈಸ್ತರು (Christians) ಏಸುವನ್ನು ದೈವಾಂಶಸಂಭೂತ (anointed) ಅಂದು ತಿಳಿದು ಕ್ರಿಸ್ತ ಅಂತ ನಾಮಾಂಕಿತ ಮಾಡಿದ್ದಾರೆ. ಯಹೂದಿಗಳು ಇದನ್ನು ನಂಬದೇ ಪ್ರವಾದಿ (the messaiah) ಕೇವಲ ಮಾನವ ಮಾತ್ರ ಅಂತ ನಂಬಿ ಇನ್ನೂ ಅವನ ಬರವಿಗಾಗಿ ಕಾದಿದ್ದಾರೆ ಅಂತಲೂ ಹೇಳಿದೆ.

ಶಾಸ್ತ್ರೀಯ ಗ್ರೀಕ್‍ನಲ್ಲಿ ಕ್ರಿಸ್ತೋಸ್ ಅಂದರೆ ’ತೈಲದಿಂದ ಅಭಿಷಿಕ್ತ " (Covered in oil = anointed) ಅನ್ನುವ ಅರ್ಥ ಇದೆ ಎಂದೂ ಬರೆಯಲಾಗಿದೆ.

ಯಾರನ್ನಾದರೂ ಪಟ್ಟಕ್ಕೇರಿಸುವಾಗ ತೈಲ ಅಭ್ಯಂಜನ ಮಾಡಿಸಿ ಪವಿತ್ರಗೊಳಿಸುವ ಪಧ್ಧತಿ ಕೂಡ ಇದಕ್ಕೆ ಕಾರಣವಿರಬಹುದೇನೋ?
( ಬೆಂಗಳೂರಿನಲ್ಲಿ ಪ್ರಚಲಿತ "ಏರಿಸುವ ಎಣ್ಣೆ"ಗೂ ಇದಕ್ಕೂ ಸಂಬಂಧವಿಲ್ಲ ಅಂತ ನನ್ನ ಕುಹಕಿ ಮಿತ್ರ ಎಚ್ಚರಿಸುತ್ತಿದ್ದಾನೆ;-) )

ಹಾಗೆಯೇ ನಾಸ್ಟ್ರೋಡೇಮಸ್‍ನ ಪ್ರಾಫೆಸಿಗಳಲ್ಲಿ ನೆಪೋಲಿಯನ್, ಹಿಟ್ಲರ್ ಮತ್ತು ಸದ್ದಮ್ ಹುಸೇನ್‍ರನ್ನು Anti Christ' ಎಂದೂ ಬಣ್ಣಿಸಲಾಗಿದೆ. ( ಮೂಲ: Orson Welle's Documentary " The Man Who saw Tomorrow"-1992)

ಅಂದರೆ ದೈವಾಂಶ ಸಂಭೂತರು ಅಥವಾ ದೇವರ ಅಶೀರ್ವಾದವುಳ್ಲವರು ಕ್ರಿಸ್ತರು, ಹಾಗೆಯೇ ಶೈತಾನನ (Satan) ಅಂಶ ಉಳ್ಲವರು ಅಂತಿಕ್ರಿಸ್ತರು (Anti Christ) ಅನ್ನಬಹುದೇನೋ.

- ನವರತ್ನ್ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 11, 2008 - 8:54pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

"ಅಂದರೆ ದೈವಾಂಶ ಸಂಭೂತರು ಅಥವಾ ದೇವರ ಅಶೀರ್ವಾದವುಳ್ಲವರು ಕ್ರಿಸ್ತರು, ಹಾಗೆಯೇ ಶೈತಾನನ (Satan) ಅಂಶ ಉಳ್ಲವರು ಅಂತಿಕ್ರಿಸ್ತರು (Anti Christ) ಅನ್ನಬಹುದೇನೋ."

ಒಪ್ಪಿದೆ ಬುದ್ದೀ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2008 - 11:36am — yajamanfrancis

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

yajamanfrancis's picture

"ಕ್ರಿಸ್ತ" ಎಂದರೆ ಯೇಸು ಮಾತ್ರ ಎಂದುಕೊಂಡಿದ್ದೆ. ಈ ವೈವಿದ್ಯತೆ ಗೊತ್ತಿರಲಿಲ್ಲ. ಉಪಯುಕ್ತ ಬರಹ ಮತ್ತು ಚರ್ಚೆ.

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2008 - 12:31pm — kpbolumbu

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

kpbolumbu's picture

ನೀವು ನನ್ನ ಬ್ಲಾಗಿನ ಬಗ್ಗೆ ಹೇಳುತ್ತಿದ್ದೀರೆಂದಾದರೆ ಕನ್ನಡದಲ್ಲಿ 'ಯೇಸು' ಎಂದೇ ಬರೆಯಬೇಕೆಂದು ನನಗೆ ಗೊತ್ತಿತ್ತು, ಆದರೆ ಮೂಲದಲ್ಲಿ 'ಏಕ ಜಾತನಾಮೇಶುವೇ' ಎಂದಿದ್ದುದನ್ನು ಹಾಡಲು ಅನುಕೂಲವಾಗುವಂತೆ 'ಏಕ ಜಾತನೇ ಏಸುವೇ' ಎಂದಿದ್ದೇನೆ. 'ಏಕ ಜಾತನು' ಎಂದರೆ ಒಂದೇ ಸಲ ಹುಟ್ಟಿದವನು ಎಂದಾಗುತ್ತದಲ್ಲವೇ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 5:11pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

ಪ್ರಜಾವಾಣಿಯಲ್ಲಿ ಅಂಕಣಕಾರರಾಗಿರುವ ಹಿರಿಯ ಭಾಷಾತಜ್ಞ ಕೆ ವಿ ನಾರಾಯಣರು ಈ ಬಗ್ಗೆ ಏನು ಹೇಳಿದ್ದಾರೆ ನೋಡುತ್ತೀರಾ? ಹಾಗಿದ್ದರೆ ಈ ಲಿಂಕ್ ಅನ್ನು ಕ್ಲಿಕ್ಕಿಸಿ.

http://www.prajavani.net/Content/Mar92008/weekly2008030870610.asp

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 5:54pm — ಸಂಗನಗೌಡ

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಸಂಗನಗೌಡ's picture

ಹ..ಹ..ಹ..

ಒಂದು ಚೀಜ್(ಸ್ವಾರಸ್ಯ) ಹೇಳ್ತಿನಿ ಕೇಳ್ರಿ... ನಮಗೆ ಸಣ್ಣವರಿದ್ದಾಗ.. ಈ ಕ್ರಿಸ್ತ-ಕ್ರಿಸ್ನ ನಡುವೆ ಯಾವಾಗ್ಲೂ ಗೊಂದಲ.... ಏಸುಕ್ರಿಸ್ನ ಅಂದರೆ ಯೇಸು ಮತ್ತು ಕ್ರಿಸ್ನ ಅಂದರೆ ’ಕ್ರಿಷ್ನ’ ನಮಗೆ... ಹಾಗೇ ನಾರದ ಮತ್ತು ನಾರಯಣರ ನಡುವೆ ಗೊಂದಲ... ಬಹುಶ ಈಗಲೂ ನಮ್ ಕಡೆ ಮಕ್ಳು ನಾರದನನ್ನು ’ನಾರಾಯಣ’ನೆಂದೇ ಕರೀತಾರೆ.. Laughing out loud ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 1:02pm — kannadakanda

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

kannadakanda's picture

ಈ "ಯೇಸು ಕಿಱುಸುತನೇ" Infant Jesus ಇರಬೇಕೆಂದು ನನ್ನನಿಸಿಕೆ. "ಕಿಱುಸುತ=ಚಿಕ್ಕಮಗ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2008 - 10:38pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

ಕನ್ನಡದ ಸಂದರ್ಭದಲ್ಲಿ ಇರಬಹುದೇನೋ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 9:32am — kannadakanda

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

kannadakanda's picture

ನಮ್ಮಭ್ಹಿಪ್ರಾಯವನ್ನು ಒಪ್ಪಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2008 - 5:56pm — cmariejoseph

ಉ: ಯೇಸುಕ್ರಿಸ್ತ ಎಂಬ ಉಚ್ಚಾರಣೆ

cmariejoseph's picture

ಭಾಷಾತಜ್ಞರ ವಿವರಣೆಗೆ ಈ ಕೆಳಗಿನ ಕೊಂಡಿಯನ್ನು ತೆರೆದು ನೋಡಿ.

http://www.prajavani.net/Content/Mar92008/weekly2008030870610.asp

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಸರು ಬರೆಯುವುದು ಹೇಗೆ?
  • ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!
  • ಕನ್ನಡದ ಏತ್ವಗಳು
  • ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
  • ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator