ನಾನು ನೋಡಿದ ನಾಟಕ ಭೈರವಿ.
ಇದು ಸುಮಾರು ವರ್ಷಗಳ ಹಿಂದಿನ ಸಿನಿಮಾ "ಹಂಸಗೀತೆ"ಯ ನಾಟಕ ರೂಪ.ಆದರೆ ನೀವೇನೇ ಹೇಳಿ ನಾಟಕದ ಗಮ್ಮತ್ತೇ ಬೇರೆ.
ಈ ನಾಟಕ ಚಿತ್ರದುರ್ಗದ ಸುತ್ತಮುತ್ತ ಹೆಣೆದುಕೊಂಡಿದೆ. ಈ ನಾಟಕದಲ್ಲಿ ಸಂಗೀತವಿದೆ, ನೃತ್ಯವಿದೆ, ದೇವರ ಜೊತೆಗೆ ಯುದ್ಧವಿದೆ, ಪಶ್ಚಾತ್ತಾಪವಿದೆ, ಕಲಾವಿದನೋಬ್ಬನ ಕೆಚ್ಚಿನ ನುಡಿಗಳಿವೆ, ಆತ್ಮವಿಶ್ವಾಸವಿದೆ.
ಆದರೆ ಒಂದೇ ಕೊರತೆ, ಆ ದಿನ ಜನರು ಹೆಚ್ಚಿರಲಿಲ್ಲ. ಆದರೆ ಸಿಂಹನ ವಾಕ್ಝರಿ ಆಹಾ ಅದನ್ನ ಸವಿದ ನನಗೇ ಗೊತ್ತು. ಅವರ ಉತ್ಸಾಹ ಆ ದಿನ ಇಮ್ಮಡಿಯಾಗಿತ್ತು.
ಕಲಾವಿದನೊಬ್ಬ (ಆಸ್ಥಾನ ಪಂಡಿತ) ಇನ್ನೊಬ್ಬ ಕಲಾವಿದನ ಕಲೆಯನ್ನ ನೋಡಿ ಅಸೂಯೆ ಪಡುತ್ತಾನೆ. ನನಗೂ ಅಂಥ ಸಂಗೀತವನ್ನ ದಯಪಾಲಿಸು ಅಂತ ಕೇಳುತ್ತಾನೆ. ಆದರೆ ಅವನಿಗೆ ಒಲಿಯುವುದಿಲ್ಲ.
ಆಗ ಪ್ರಾರಂಭವಾಗುತ್ತದೆ ನೋಡಿ ಅವನಲ್ಲಿ ಅಸೂಯೆಯ ಜ್ವಾಲೆ .ಕೊನೆಗೆ ಅವನ ಅಸೂಯೆ ಚಿತ್ರದುರ್ಗ ಟಿಪ್ಪುವಿನ ಪಾಲಾಗುವಂತೆ ಮಾಡುತ್ತದೆ.
ಟಿಪ್ಪುವಿನಿಂದ ಚಿತ್ರದುರ್ಗವನ್ನ ಪಾರುಮಾಡುವ ಶಕ್ತಿ ಭೈರವಿ ರಾಗ ಮಾಡುವ ವೆಂಟಕ ಸುಬ್ಬಯ್ಯ ನಿಗೆ ಮಾತ್ರ ಇರುತ್ತದೆ. ಹೇಗೆಂದರೆ ಟಿಪ್ಪುಗೆ ವೆಂಕಣ್ಣನ ಹಾಡು ಇಷ್ಟ. ವೆಂಕಣ್ಣ ಹಾಡಿದರೆ ತಾನು ಮದಕರಿ ನಾಯಕನ ಜೊತೆಗೆ ಸ್ನೇಹ ಬೆಳೆಸುತ್ತೇನೆ ಎಂದು ಹೇಳುತ್ತಾನೆ. ಆದರೆ ಈ ವಿಷಯವನ್ನ ಆಸ್ಥಾನ ಪಂಡಿತ ತಿರುಚಿ ವೆಂಕಣ್ಣನಿಗೆ ಹೇಳುತ್ತಾನೆ. ಆಗ ವೆಂಕಣ್ಣನ್ನಾಡು ಮಾತು ದೇಶಪ್ರೇಮವನ್ನ ಎತ್ತಿ ಹಿಡಿಯುತ್ತದೆ. ವೆಂಕಣ್ಣ ತನ್ನ ನಾಲಗೆ ಕತ್ತರಿಸಿಕೊಳ್ಳತ್ತಾನೆ. ಚಿತ್ರದುರ್ಗ ಟಿಪ್ಪುವಿನ ಪಾಲಾಗುತ್ತದೆ.
ತಂಡ - ವೇದಿಕೆ.
ರಚನೆ ನಿರ್ದೇಶನ - ಸಿ ಆರ್ ಸಿಂಹ
ಸ್ಥಳ - ಹೆಚ್ . ಎನ್. ಕಲಾಕ್ಷೇತ್ರ , ನ್ಯಾಷನಲ್ ಕಾಲೇಜು ಜಯನಗರ
ದಿನಾಂಕ - ೫/೧೨/೨೦೦೫

- Login or register to post comments
- 839 hits
- Email this forum





RSS: