Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಕನ್ನಡದಾಗೆ adverb/adjective

February 25, 2008 - 10:51am — mahesha

ಮೊನ್ನೆ ಒಂದು ಚರ್ಚೆಯಾಗೆ ನವರತ್ನ ಸುದೀರರು ಎತ್ತಿದ ಸಂಗತಿ ಇದೆ.. ಇದರ ಕುರಿತು ಕೊಂಚ ತಲೆಗೆಡಿಸಿಕೊಂಡೆ. ಆಗ ನಮ್ಮ ಅಚ್ಚಾದ ಕನ್ನಡ ವ್ಯಾಕರಣಗಳಲ್ಲಿ ಈ ಸಂಗತಿ ಇಲ್ಲದೇ ಇರೋದು ತುಂಬ ಬೇಸರ ತಂತು.

ದಿಟವಾಗಲೂ ಕನ್ನಡ adverb ಮತ್ತು adjective ಎಂಬ ಎರಡು ಗ್ರಾಮರ್ರು‍-ಸಂಗತಿಗಳು ಬೇಕು.. ಅಂತ ಬಲವಾಗಿ ಅನ್ನಿಸ್ತಿದೆ.

ಮಾದರಿಯಾಗಿ ಈ ಕೆಳಗಿನ ಬಳಕೆಗಳನ್ನು ಗಮನಿಸೋಣ

ಬೆಚ್ಚಗೆ ಮಾಡು : ಮಾಡು ಕ್ರಿಯೆಯ ಗುಣವನ್ನು ತಿಳಿಸ್ತಾ ಇದೆ, ಅದಕ್ಕೆ ಬೆಚ್ಚಗೆ ಒಂದು adverb
ಬೆಚ್ಚನೆ ಹಾಲು : ಹಾಲಿನ ಗುಣ ಹೇಳ್ತಾ ಇದೆ, ಅದಕ್ಕೆ ಬೆಚ್ಚನೆ ಒಂದು adjective..

ಇಲ್ಲಿ ’ಬೆಚ್ಚನೆ ಮಾಡು’, ಮತ್ತು ’ಬೆಚ್ಚಗೆ ಹಾಲು’ ಎಂಬ ಬಳಕೆಗಳು ಸರಿ ಬರೋದಿಲ್ಲ ಅಲ್ವ?

ಹಾಗೇ...

ಮೆಲ್ಲಗೆ ಬಾ, ಮೆಲ್ಲನೆ ಗಾಳಿ,
ಕೆಂಪಗೆ ಆಯಿತು, ಕೆಂಪು ಹೂ

ಇದರ ಕುರಿತು ನಿಮ್ಮ ಅನಿಸಿಕೆ ತಿಳಿಸಿರಿ..!!

‹ ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು? ವ್ಯಾಕರಣ : ಕೆಂದೆಳನೀರು ›
  • ವ್ಯಾಕರಣ
Ornamental seperator
  • Login or register to post comments
  • 364 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 27, 2008 - 7:41pm — vikashegde

ಉ: ಕನ್ನಡದಾಗೆ adverb/adjective

vikashegde's picture

ಗುರುಗಳೇ, ಸಂಸ್ಕೃತದಲ್ಲಿ ಇದೆಯಾ ಇದರ ಬಗ್ಗೆ?? ಕನ್ನಡದಲ್ಲೇಕೆ ಕೊರತೆ ಹಾಗಿದ್ರೆ!

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 6:20am — srivathsajoshi

ಉ: ಕನ್ನಡದಾಗೆ adverb/adjective

srivathsajoshi's picture

Adverb - ಕ್ರಿಯಾ ವಿಶೇಷಣ;
Adjective - ನಾಮ ವಿಶೇಷಣ;

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 10:40am — mahesha

ಉ: ಕನ್ನಡದಾಗೆ adverb/adjective

mahesha's picture

ಜೋಶಿಗಳೇ..

ವಿಶೇಷಣಕ್ಕೂ ಮತ್ತು ಗುಣವಾಚಕಗಳಿಗೂ ದೊಡ್ಡ ಬೇರೆತನವಿದೆ..

ಸಕ್ಕದಲ್ಲಿ ವಿಶೇಶಣಗಳಿದೆ, ಆದ್ರೆ ಗುಣವಾಚಕಗಳಿಲ್ಲ.. ಶಂಕರಬಟ್ಟರ ಹೊತ್ತಗೆಗಳಲ್ಲಿ ಇದರ ಬಗ್ಗೆ ಬಿಡಿಸಿ ಬಿಡಿಸಿ ಹೇಳಿದೆ.

ಸಕ್ಕದದ ವಿಶೇಶಣಗಳಿಗೆ ವಿಬಕ್ತಿ ಒಟ್ಟು/ಪ್ರತ್ಯಯಗಳನ್ನು ಹತ್ತಿಸಬವುದು. ಆದ್ರೆ ಕನ್ನಡದ ಗುಣವಾಚಕಗಳಿಗೆ ಆಗಲ್ಲ.

ಕೃಷ್ಣಸರ್ಪಃ = ಕೃಷ್ಣಃ ಸರ್ಪಃ
ಕೃಷ್ಣಸರ್ಪೇಣ = ಕೃಷ್ಣೇಣ ಸರ್ಪೇಣ

ಆದ್ರೆ ಕನ್ನಡದಲ್ಲಿ
ಕರಿಹಾವು = ಕರಿಯ ಹಾವು ( ಅದರೆ ಕರಿಯ ಅನ್ನೋದು ನಾಮಪದವಲ್ಲ. ಅದು ಮೊದಲನೆ ವಿಬಕ್ತಿಯಲ್ಲಿ ಇಲ್ಲ. ಬದಲಿಗೆ ಆರನೇ ’ಅ’ ವಿಬಕ್ತಿ ಒಟ್ಟು ಹೊಂದಿದೆ )

ಕರಿಹಾವಿಂದ != ಕರಿಯದಿಂದ ಹಾವಿಂದ( ಇದು ಕನ್ನಡದೊಳು ಆರದು ).

ಸಕ್ಕದದಲ್ಲಿ ಒಟ್ಟಾಗಿ ಹೇಳಿದ್ರೆ ನಾಮಪದ( ಇದರಲ್ಲೇ ವಿಶೇಷಣ, ಸರ್ವನಾಮ ಕೂಡ ಸೇರುವುದು ), ಅವ್ಯಯ ಮತ್ತು ಕ್ರಿಯಾಪದ.
ಅಂದ್ರೆ
೧) ವಿಬಕ್ರಿ ಒಟ್ಟು ಸೇರಿಸಿಕೊಳ್ಳುವ, ರಾಮ, ಕೃಷ್ಣ, ಶ್ವೇತ, ಜೀವತ್, ಧಾವತ್, ಕರ್ವನ್, ಸಃ
೨) ಬಿಡಿಯಾಗಿ ಬದಲಿಲ್ಲದೇ ಬಳಕೆಯಾಗುವ, = ಅಲಂ, ವಾ, ಯಾ ತತ್ರ
೩ ಮತ್ತು ಕೆಲಸ ತೋರುವ ಒರೆ/ಪದ-ಬಗೆಗಳು. ( ಯಾವುದಾದ್ರು ಬಿಟ್ಟಿದ್ರೆ ಹೇಳಿ.. ಅದು ಈ ಚರ್ಚೆ ನಂಟಾಗಿಲ್ಲ ಎಂದು ತೋರುವುದು ) ಕೃತ್ವಾ, ಕರೋತಿ, ಶ್ರಾವಂ ಶ್ರಾವಂ, ಕರ್ಯಾತ್

ಕನ್ನಡದಲ್ಲಿ..
೧) ನಾಮಪದ ( ವಿಬಕ್ತಿ ಒಟ್ಟು ಹತ್ತಿಸಿಕೊಳ್ಳುವ ); ಹನುಮ, ಬಸವ, ದನ, ಅವನು
೨) ಗುಣತೋರುವ; ಹಗುರ, ತೂಕ, ಬಿಳಿ, ಕರಿ ( ಗಮನ, ಹಗುರದ ಮಾತು, ತೂಕದ ಮಾತು, ಬಿಳಿಯ ಹೂ, ಕರಿಯ ಆನೆ, ಎಲ್ಲ ಗುಣ ತೋರುವಾಗ ಆರನೇ ವಿಬಕ್ತಿ ಹತ್ತಿಸಿಕೊಳ್ಳುವುದು ಬಿಟ್ಟು, ಬೇರಾವ ವಿಬಕ್ತಿ ಒಟ್ಟನ್ನಲ್ಲ )
೩) ಬಿಡಿಯೊರೆ/ಅವ್ಯಯ ; ಹಾಗೂ ಹೀಗೂ, ಹೇಗೋ, ಎಲ್ಲಿ, ಅಲ್ಲಿ,
೪) ಕ್ರಿಯಾಪದ ; ಓಡಿ, ಓಡಲು, ಓಡುವನು, ಓಡೇ.

ಆದುರಿಂದ ಕ್ರಿಯಾವಿಶೇಶಣ ಮತ್ತು ನಾಮ ವಿಶೇಶಣ ಎರಡೂ ನಾಮಪದಗಳೇ ಅಲ್ವ!!

ಮರೆವಿಂದ ಕೆಲವು ತಪ್ಪುಗಳಾಗಿರಬವುದಿಲ್ಲಿ.

ಹುರುಳಿಶ್ಟೇ ಕನ್ನಡದಲ್ಲಿ ಗುಣವಾಚಕ ಅನ್ನೋದಕ್ಕೂ ಸಕ್ಕದದ ವಿಶೇಶಣಕ್ಕೂ ಸಿಕ್ಕಾಪಟ್ಟೆ ಬೇರೆತನ ಇದೆ.

ಆದೂ ಅಲ್ಲದೇ.. ಈ ಚರ್ಚೆಯ ಸಂಗತಿ ಬೇರೆ.. ಇಲ್ಲಿ ನಾಮಗುಣವಾಚಕ ಮತ್ತು ಕ್ರಿಯಾಗುಣವಾಚಕ( ಹೆಸರು ಏನೇ ಇದ್ದರೂ ), ಕನ್ನಡದಲ್ಲಿ ಹೇಗೆ ರೂಪಗಳನ್ನು ಪಡೆಯುವುವು ಎಂದು..

ವಿಶಯ ಬದಲು ಬೇಡ!

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 5:30pm — srivathsajoshi

ಉ: ಕನ್ನಡದಾಗೆ adverb/adjective

srivathsajoshi's picture

ಮಹೇಶ,

ವಿಷಯ ಬದಲಾವಣೆಗೆ ಪ್ರಯತ್ನಿಸಿದ್ದಲ್ಲ.

Adverb ಗೆ ಕ್ರಿಯಾವಿಶೇಷಣವೂ, Adjectiveಗೆ ನಾಮ ವಿಶೇಷಣವೂ ಹತ್ತಿರವಾದುವು ಎಂದಷ್ಟೇ ಅನಿಸಿಕೆ. ಬೇಕಂತಲೇ ಸಮಚಿಹ್ನೆ (=) ಬಳಸಿಲ್ಲ.

ಸಂಸ್ಕೃತಕ್ಕೂ ಕನ್ನಡಕ್ಕೂ ಲಿಂಗ ವಚನಗಳಲ್ಲಿ ಮತ್ತು ನೀವೆಂದಂತೆ ವಿಭಕ್ತಿಗಳ ಬಳಕೆಯಲ್ಲಿ ವ್ಯತ್ಯಾಸಗಳು ತುಂಬ ಇವೆ.

ಗುಣವಾಚಕಗಳ ಬಗ್ಗೆ ನಿಮ್ಮ ವಿವರಣೆ ಸೊಗಸಾಗಿದೆ, ಸಮಂಜಸವಾಗಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 5:58pm — mahesha

ಉ: ಕನ್ನಡದಾಗೆ adverb/adjective

mahesha's picture

Adverb ಮತ್ತು Adjectiveಗಳು ಕನ್ನಡದ ಗುಣವಾಚಕಗಳಿಗೆ ಹೆಚ್ಚು ಹತ್ತಿರವಾದವು.. ಹೊರತು..
ಕನ್ನಡದಂತೆ ಇಂಗ್ಲೀಸಲ್ಲೂ adverb/adjective ಗಳು noun-formಗಳಲ್ಲ ಸಂಸ್ಕೃತದಂತೆ.

ಆದುದರಿಂದ...
ವಿಶೇಷಣ ಮತ್ತು ಕ್ರಿಯಾ-ವಿಶೇಷಣಗಳನ್ನು ನಾವು ತುಸು ಇವುಗಳಿಗೆ ದೂರವಾಗೇ ನೋಡಬೇಕು..

ನನ್ನ ಹೇಳಿಕೆಯ ಗುರಿ, ಈ ಚರ್ಚೆ

ನಾವು ಕನ್ನಡದಲ್ಲಿ ಹೇಗೆ adverb/adjective ರೂಪಗಳಿವೆ( ಮಾದರಿ, ಬೆಚ್ಚಗೆ/ಬೆಚ್ಚನೆ) ಎಂಬುದನ್ನು ಚರ್ಚೆ ಮಾಡೋಣ ಹೊರತು...
ಕನ್ನಡದ ಗುಣವಾಚಕಗಳಿಗೂ, ಸಂಸ್ಕೃತ ವ್ಯಾಕರಣದ ಸಂಗತಿಯಾದ ವಿಶೇಷಣ ಮತ್ತು ಕ್ರಿಯಾವಿಶೇಷಣಗಳಿಗೂ ಹೊಲಿಕೆ/ಬೇರತನ ತೋರುವುದಾಗಬಾರದೆಂಬುದಾಗಿದೆ.

ಅದಕ್ಕಾಗಿಯೇ ನಾನು adverb/adjectiveಗಳಿಗೆ ಬೇರೆಯ ಪದ ಬಳಸದೇ, ಅದನ್ನೇ ಬಳಸಿದ್ದೀನಿ...

ನನ್ನಿ!

terminologyಯಲ್ಲಿ ವಿಶಯ ಕಳೆದು ಹೋಗೊ ಹೆದರಿಕೆ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 10:48am — mahesha

ಉ: ಕನ್ನಡದಾಗೆ adverb/adjective

mahesha's picture

ಜೋಶಿಗಳೇ..

ವಿಶೇಷಣಕ್ಕೂ ಮತ್ತು ಗುಣವಾಚಕಗಳಿಗೂ ದೊಡ್ಡ ಬೇರೆತನವಿದೆ..

ಸಕ್ಕದಲ್ಲಿ ವಿಶೇಶಣಗಳಿದೆ, ಆದ್ರೆ ಗುಣವಾಚಕಗಳಿಲ್ಲ.. ಶಂಕರಬಟ್ಟರ ಹೊತ್ತಗೆಗಳಲ್ಲಿ ಇದರ ಬಗ್ಗೆ ಬಿಡಿಸಿ ಬಿಡಿಸಿ ಹೇಳಿದೆ.

ಸಕ್ಕದದ ವಿಶೇಶಣಗಳಿಗೆ ವಿಬಕ್ತಿ ಒಟ್ಟು/ಪ್ರತ್ಯಯಗಳನ್ನು ಹತ್ತಿಸಬವುದು. ಆದ್ರೆ ಕನ್ನಡದ ಗುಣವಾಚಕಗಳಿಗೆ ಆಗಲ್ಲ.

ಕೃಷ್ಣಸರ್ಪಃ = ಕೃಷ್ಣಃ ಸರ್ಪಃ
ಕೃಷ್ಣಸರ್ಪೇಣ = ಕೃಷ್ಣೇಣ ಸರ್ಪೇಣ

ಆದ್ರೆ ಕನ್ನಡದಲ್ಲಿ
ಕರಿಹಾವು = ಕರಿಯ ಹಾವು ( ಅದರೆ ಕರಿಯ ಅನ್ನೋದು ನಾಮಪದವಲ್ಲ. ಅದು ಮೊದಲನೆ ವಿಬಕ್ತಿಯಲ್ಲಿ ಇಲ್ಲ. ಬದಲಿಗೆ ಆರನೇ ’ಅ’ ವಿಬಕ್ತಿ ಒಟ್ಟು ಹೊಂದಿದೆ )

ಕರಿಹಾವಿಂದ != ಕರಿಯದಿಂದ ಹಾವಿಂದ( ಇದು ಕನ್ನಡದೊಳು ಆರದು ).

ಸಕ್ಕದದಲ್ಲಿ ಒಟ್ಟಾಗಿ ಹೇಳಿದ್ರೆ ನಾಮಪದ( ಇದರಲ್ಲೇ ವಿಶೇಷಣ, ಸರ್ವನಾಮ ಕೂಡ ಸೇರುವುದು ), ಅವ್ಯಯ ಮತ್ತು ಕ್ರಿಯಾಪದ.
ಅಂದ್ರೆ
೧) ವಿಬಕ್ರಿ ಒಟ್ಟು ಸೇರಿಸಿಕೊಳ್ಳುವ, ರಾಮ, ಕೃಷ್ಣ, ಶ್ವೇತ, ಜೀವತ್, ಧಾವತ್, ಕರ್ವನ್, ಸಃ
೨) ಬಿಡಿಯಾಗಿ ಬದಲಿಲ್ಲದೇ ಬಳಕೆಯಾಗುವ, = ಅಲಂ, ವಾ, ಯಾ ತತ್ರ
೩ ಮತ್ತು ಕೆಲಸ ತೋರುವ ಒರೆ/ಪದ-ಬಗೆಗಳು. ( ಯಾವುದಾದ್ರು ಬಿಟ್ಟಿದ್ರೆ ಹೇಳಿ.. ಅದು ಈ ಚರ್ಚೆ ನಂಟಾಗಿಲ್ಲ ಎಂದು ತೋರುವುದು ) ಕೃತ್ವಾ, ಕರೋತಿ, ಶ್ರಾವಂ ಶ್ರಾವಂ, ಕರ್ಯಾತ್

ಕನ್ನಡದಲ್ಲಿ..
೧) ನಾಮಪದ ( ವಿಬಕ್ತಿ ಒಟ್ಟು ಹತ್ತಿಸಿಕೊಳ್ಳುವ ); ಹನುಮ, ಬಸವ, ದನ, ಅವನು
೨) ಗುಣತೋರುವ; ಹಗುರ, ತೂಕ, ಬಿಳಿ, ಕರಿ ( ಗಮನ, ಹಗುರದ ಮಾತು, ತೂಕದ ಮಾತು, ಬಿಳಿಯ ಹೂ, ಕರಿಯ ಆನೆ, ಎಲ್ಲ ಗುಣ ತೋರುವಾಗ ಆರನೇ ವಿಬಕ್ತಿ ಹತ್ತಿಸಿಕೊಳ್ಳುವುದು ಬಿಟ್ಟು, ಬೇರಾವ ವಿಬಕ್ತಿ ಒಟ್ಟನ್ನಲ್ಲ )
೩) ಬಿಡಿಯೊರೆ/ಅವ್ಯಯ ; ಹಾಗೂ ಹೀಗೂ, ಹೇಗೋ, ಎಲ್ಲಿ, ಅಲ್ಲಿ,
೪) ಕ್ರಿಯಾಪದ ; ಓಡಿ, ಓಡಲು, ಓಡುವನು, ಓಡೇ.

ಆದುರಿಂದ ಕ್ರಿಯಾವಿಶೇಶಣ ಮತ್ತು ನಾಮ ವಿಶೇಶಣ ಎರಡೂ ನಾಮಪದಗಳೇ ಅಲ್ವ!!

ಮರೆವಿಂದ ಕೆಲವು ತಪ್ಪುಗಳಾಗಿರಬವುದಿಲ್ಲಿ.

ಹುರುಳಿಶ್ಟೇ ಕನ್ನಡದಲ್ಲಿ ಗುಣವಾಚಕ ಅನ್ನೋದಕ್ಕೂ ಸಕ್ಕದದ ವಿಶೇಶಣಕ್ಕೂ ಸಿಕ್ಕಾಪಟ್ಟೆ ಬೇರೆತನ ಇದೆ.

ಆದೂ ಅಲ್ಲದೇ.. ಈ ಚರ್ಚೆಯ ಸಂಗತಿ ಬೇರೆ.. ಇಲ್ಲಿ ನಾಮಗುಣವಾಚಕ ಮತ್ತು ಕ್ರಿಯಾಗುಣವಾಚಕ( ಹೆಸರು ಏನೇ ಇದ್ದರೂ ), ಕನ್ನಡದಲ್ಲಿ ಹೇಗೆ ರೂಪಗಳನ್ನು ಪಡೆಯುವುವು ಎಂದು..

ವಿಶಯ ಬದಲು ಬೇಡ!

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 10:54am — mahesha

ಉ: ಕನ್ನಡದಾಗೆ adverb/adjective

mahesha's picture

adverb/(ಕೆಲಸದ ಗುಣ) - adjective(ಸರಕಿನ ಗುಣ)
ಬೆಚ್ಚಗೆ ಮಾಡು - ಬೆಚ್ಚನೆ ಹಾಲು
ಮೆಲ್ಲಗೆ ಹೋಗು - ಮೆಲ್ಲನೆ ಉಸಿರು
ಬೆಳ್ಳಗೆ ಮಾಡು - ಬೆಳ್ಳನೆ ಕೋಳಿ
ಕಪ್ಪಗೆ ಕರೆ - ಕಪ್ಪನೆ ಹಾವು
ದಪ್ಪಗೆ ಆಗು - ದಪ್ಪನೆ ದೊಣ್ಣೆ
ಸಣ್ಣಗೆ ಹೊಸೆ - ಸಣ್ಣನೆ ಅಕ್ಕಿ

ಬೆಚ್ಚಗೆ ಮಾಡು, ’ಉಷ್ಣಂ ಕುರು’ ಅಂದಾಗ ಉಷ್ಣಂ ನಪುಂಸಕಲಿಂಗ, ಏಕವಚನ, ಪ್ರಥಮ/ದ್ವಿತಿಯ ವಿಭಕ್ತಿ! ಆದರೆ ’ಬೆಚ್ಚಗೆ’ಗೆ ಲಿಂಗ, ವಿಭಕ್ತಿ, ವಚನ ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 8:45pm — ವೈಭವ

ಉ: ಕನ್ನಡದಾಗೆ adverb/adjective

ವೈಭವ's picture

ಮಾಯ್ಸ,
ಶಂಕರಬಟ್ತರು ಇದನ್ನೆ ಅವರ 'ಕನ್ನಡ ನುಡಿ ನಡೆದು ಬಂದ ದಾರಿ'ಯಲ್ಲಿ ಹೇಳಿದ್ದಾರೆ
ಅವರು ಹೇಳಿರುವುದು
ನಾಮ-ಗುಣಪದ (adjective)
ಕ್ರಿಯಾ-ಗುಣಪದ (adverb)

ಅವರು ಹೇಳಿರುವುದರ ತಿರುಳು:
ಮೂಲದ್ರಾವಿಡದಲ್ಲಿ ನಾಮಪದಗಳ ಗುಣಗಳನ್ನು ಸೂಚಿಸುವವು ಮತ್ತು ಕ್ರಿಯಾಪದಗಳ ಗುಣಗಳನ್ನು ಸೂಚಿಸುವವು ಎಂಬುದಾಗಿ ಎರಡು ತರದ ಗುಣಪದಗಳಿದ್ದಿರಬೇಕು. ಕನ್ನಡದಲ್ಲೂ ಇಂತಹ ಎರಡು ತೆರದ ಗುಣಪದಗಳು ಬಳಕೆಯಲ್ಲಿವೆ.
ಇವುಗಳಲ್ಲಿ ನಾಮ-ಗುಣಪದಗಳು ಬೇರಿನ ರೂಪದಲ್ಲೂ ಬಳಕೆಯಾಗಬಲ್ಲುವು. ಆದರೆ ಕ್ರಿಯಾ-ಗುಣಪದಗಳು ನಾಮ-ಗುಣಪದ್ಗಳಿಂದ ಇಲ್ಲವೇ ನಾಮಪದಗಳಿಂದ(ಮತ್ತು ಕ್ರಿಯಾಪದಗಳಿಂದ) ತಯಾರಾಗುತ್ತವೆ.
ಮಾದರಿ : ಬೆಚ್ಚನೆ -> ನಾಮ-ಗುಣಪದ, ಬೆಚ್ಚಗೆ ->ಕ್ರಿಯಾ-ಗುಣಪದ
ಇವೆಲ್ಲ ಬಿಸಿ (ಬಿಸಿ+ಇಗೆ) ಎಂಬ ಗುಣಪದದಿಂದ ಆಗಿವೆ.

ಕ್ರಿಯಾ-ಗುಣಪದಗಳು ಬೇರಿನ ರೂಪದಲ್ಲಿ ಬರುವುದಿಲ್ಲ.
ಮಾದರಿ: 'ನಾನು ಕೆಂ ಹೂವನ್ನು ಕಂಡೆ' ಅಂತ ಹೇಳಕ್ಕೆ ಬರಲ್ಲ. (ಇಲ್ಲಿ 'ಕೆಂ' ಬೇರಿನ ರೂಪ)
'ನಾನು ಕೆಂಪಗೆ ಇರುವ ಹೂವನ್ನು ಕಂಡೆ' ಹೇಳ್ಬೋದು ( ಕೆಂ+ಅಗೆ)

ಆದರೆ ನಾಮ-ಗುಣಪದಗಳು ಬೇರಿನ ರೂಪದಲ್ಲಿ ಬರಬಲ್ಲವು.
ಮಾದರಿ: 'ನಿನ್ನ ಕೆಂದುಟಿ ತುಂಬಾ ಚೆನ್ನು' (ಇಲಿ ಕೆಂ ಬೇರಿನ ರೂಪ . ಕೆಂ+ತುಟಿ, ಅದರೆ ಇಲ್ಲಿ ಅನೆ,ಇಗೆ ಒಟ್ಟುಗಳನ್ನು ಸೇರಿಸಿಲ್ಲ)
ಕೆಲವು ತೋರುಗ(3rd person) ಪದಗಳೂ ಕ್ರಿಯಾ-ಗುಣಪದಗಳಾಗಿ ಬರಬಲ್ಲುವು.

ಕೊ.ಕೊ: ಇದರ ಬಗ್ಗೆ ಹೆಚ್ಚಿನ ಅರಯ್ಯು ನಡೆಸಬೇಕೆಂದು ಶಂಕರಬಟ್ಟರು ಹೇಳಿದ್ದಾರೆ.
ನೋಡು ಮಾಯ್ಸ ಇದರ ಬಗ್ಗೆ ಒಂದು ಅರಯ್ಯು ಮಾಡೋಣ..ಒಳ್ಳೆ ಅವಕಾಸ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 29, 2008 - 12:21pm — mahesha

ಉ: ಕನ್ನಡದಾಗೆ adverb/adjective

mahesha's picture

ಹು..

ಇದರ ಬಗ್ಗೆಯೇ ನಾನು ಹೇಳಿ ಹತ್ತಿದ್ದು..

ಈ ಪಟ್ಟಿಯನ್ನು ಮತ್ತೆ ನೋಡ್ಮ.

ಮೆಲ್ಲಗೆ ಹೋಗು != ಮೆಲು ಹೋಗು - ಮೆಲ್ಲನೆ ಉಸಿರು = ಮೆಲ್ಲುಸಿರು ( ಮೆಲ್ ಬೇರು )
ಸಣ್ಣಗೆ ಹೊಸೆ != ಸಣ್ಣ ಹೊಸೆ - ಸಣ್ಣನೆ ಅಕ್ಕಿ = ಸಣ್ಣಕ್ಕಿ ( ಸಣ್ ಬೇರು )

ಹಾಗೆ
ಕೆಮ್ಮನೆ ತಾವರೆ - ಕೆಂದಾವರೆ
ಬೆಳ್ಳನೆ ಹಕ್ಕಿ - ಬೆಳ್ವಕ್ಕಿ
ತೆಳ್ಳನೆ ಅಂಗಿ - ತೆಳ್ಳಂಗಿ
ದಪ್ಪನೆ ಅಕ್ಕಿ - ದಪ್ಪಕ್ಕಿ
ಹೊನ್ನಗೆ ಬಣ್ಣ - ಹೊಂಬಣ್ಣ
ಚನ್ನಗೆ ತುಡಿ - ಚಂದುಟಿ
ಹುಚ್ಚನೆ ಆಟ - ಹುಚ್ಚಾಟ

ಹುಚ್ಚಗೆ ಆಡಬೇಡ, ಹುಚ್ಚನೆ ಆಟ ಅವನದು
ಕಂಪಗೆ ಇರುವ ಹೂ, ಕಂಪನೆ ಹೂ ಅದು

ನನ್ನಿ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಳಿಯ Vs ಬಿಳಿಯದು
  • 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
  • ರುಜುವಾತು ಮತ್ತು ಋಜುವಾತು
  • ಅಪ್ರೈಸಲ್
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator