namaskara
namaskara ella sadysarige. sampada kannadigarige ondu adbutha seva sallisthaa idde. antharjaaladalli kannadavannu raraji sutidhe

- Login or register to post comments
- 1015 hits
- Email this forum



namaskara ella sadysarige. sampada kannadigarige ondu adbutha seva sallisthaa idde. antharjaaladalli kannadavannu raraji sutidhe




ಕನ್ನಡ ಕನ್ನಡ!
ವತ್ಸ ಅವರೇ, ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿ. ಸಂಪದದ ವಿಶೇಷತೆಯೇ ಕನ್ನಡದಲ್ಲಿ ಬರೆಯುವುದು. ನೀವು ಬರೆದಿರುವುದನ್ನು ಕನ್ನಡೀಕರಿಸಿದರೆ ಹೇಗೆ ಕಾಣುವುದು ಗೊತ್ತೇ?
ನಮಸ್ಕರ ಎಲ್ಲ ಸದ್ಯ್ಸರಿಗೆ. ಸಮ್ಪದ ಕನ್ನದಿಗರಿಗೆ ಒನ್ದು ಅದ್ಬುಥ ಸೆವ ಸಲ್ಲಿಸ್ಥಾ ಇದ್ದೆ. ಅನ್ಥರ್ಜಾಲದಲ್ಲಿ ಕನ್ನದವನ್ನು ರರಜಿ ಸುತಿಧೆ
ಯೂನಿಕೋಡ್ ಬಳಕೆಯ ಮೂಲಕ ಕನ್ನಡದಲ್ಲಿ ಹೇಗೆ ಬರೆಯಬಹುದು ಎಂಬುದರ ಬಗ್ಗೆ ಮುಖಪುಟದಲ್ಲಿ ತಿಳಿಸಿದೆ. ಪ್ರಯತ್ನಿಸಿ.
ಮೊದಲ ಪ್ರಯತ್ನದಲ್ಲೇ ತಪ್ಪು ಕಂಡು ಹಿಡಿಯುತಿದ್ದಾರೆ ಎಂದು ಎದೆಗುಂದಬೇಡಿ. ಇಲ್ಲಿರುವವರೆಲ್ಲರೂ ಒಂದೇ ಬಳಗಕ್ಕೆ, ಕುಟುಂಬಕ್ಕೆ ಸೇರಿರುವವರು. ನೀವೂ ನಮ್ಮವರೇ. ಹೆಚ್ಚಿನ ಸಹಾಯ ಬೇಕಿದ್ದರೆ ಸಂಪರ್ಕಿಸಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಕನ್ನಡ ಇನ್ಪುಟ್ ಪ್ಲಗಿನ್
ಎಲ್ಲೀವರೆಗೂ ಸಂಪದದಲ್ಲಿ ಕನ್ನಡ ಇನ್ಪುಟ್ ಪ್ಲಗಿನ್ ಅಳವಡಿಸಲ್ಪಡುವುದಿಲ್ಲವೋ ಅಲ್ಲಿಯವರೆಗೂ ಈ ಗೋಜಲು ಇದ್ದದ್ದೇ.... ಈ ವಿಷಯದಲ್ಲಿ ಮರಾಠಿಗರು ನಮಗಿಂತ ಮುಂದಿದ್ದಾರೆ. ಅವರ www.manogat.com ಸಂಪದ ಮಾದರಿ ಸೈಟು ನೋಡಿ. ಅವರು ಈ ರೀತಿ ಸೌಲಭ್ಯವನ್ನು ಈಗಾಗಲೇ ಒದಗಿಸಿದ್ದಾರೆ...
ಕನ್ನಡ ಇನ್ಪುಟ್ ಪ್ಲಗಿನ್
ದೇವನಾಗರಿ ಲಿಪಿಗೆ ಈಗಾಗಲೇ ಜಾವಾಸ್ಕ್ರಿಪ್ಟ್ input method ಇರೋದ್ರಿಂದ ಅವರ ಕೆಲಸ ಸುಲಭ, ಆದ್ದರಿಂದಲೇ ಮರಾಠಿಗೆ ಈಗಾಗಲೇ ಅಂಥದ್ದು ಲಭ್ಯ.
'ಸಂಪದ'ಕ್ಕೂ ಒಂದು ಇದೇ ರೀತಿಯ ಪ್ಲಗಿನ್ ಬರೆದಿರುವೆ. ಆದರೆ ಅದರಲ್ಲಿ WX (ಐ ಐ ಟಿಯವರು ರೂಪಿಸಿದ) input method ಲಭ್ಯವಿರುವುದು. ನಮ್ಮ ಕನ್ನಡಿಗರು ನೋಡಿದ್ರೆ ಬರಹ ಶೈಲಿಯ input methodಗೆ ಚೆನ್ನಾಗಿ ಒಗ್ಗಿಕೊಂಡುಬಿಟ್ಟಿದ್ದಾರೆ (ಬರಹ ಸಂಪೂರ್ಣ ಐಟ್ರಾನ್ಸ್ ಕೂಡ ಅಲ್ಲ). WX ರೀತಿಯದ್ದನ್ನು ಬರಹ ಶೈಲಿಗೆ ಕನ್ವರ್ಟ್ ಮಾಡುವುದು ಸುಲಭದ ಅದೂ ಜಾವಾಸ್ಕ್ರಿಪ್ಟ್ ನಲ್ಲಿ ಸುಲಭದ ಕೆಲಸವೇನಲ್ಲ. ಆದ್ದರಿಂದ ಸ್ವಲ್ಪ ದಿನ ಹಿಡಿದೇ ಹಿಡಿಯುವುದು.
ಜೊತೆಗೆ ಈ ಜಾವಾಸ್ಕ್ರಿಪ್ಟ್ ಇನ್ಪುಟ್ ಮೆಥಡ್ ಗಳ ತೊಂದರೆಯೇನೆಂದರೆ ಟಾಗಲ್ ಮಾಡುವ ಸೌಲಭ್ಯ ಕಷ್ಟ - ಟಾಗಲ್ ಮಾಡೋದಕ್ಕೆ ಯಾವುದಾದರೂ accelerator ಬಳಸಿದ್ರೆ ಅದೇ ಶಾರ್ಟ್ ಕಟ್ ಬ್ರೌಸರಿನ ಯಾವುದಾದರೂ ಒಂದು ಶಾರ್ಟ್ ಕಟ್ ಜೊತೆ conflict ಆಗುತ್ತದೆ. ಜಾವಾಸ್ಕ್ರಿಪ್ಟ್ ಉಪಯೋಗಿಸಿ ಇಂಥದ್ದೊಂದು ಹಾಕುವುದರಿಂದ ಉಳಿದವರಿಗೂ ತೊಂದರೆಯಾಗಬಾರದು, ಅಲ್ವೆ? ಕೊನೆಗೊಂದು ದಿನ ನಿಮ್ಮ ಕಂಪ್ಯೂಟರಿನಲ್ಲಿಯೇ IME ಅಳವಡಿಸಿಕೊಳ್ಳಬೇಕೇ ವಿನಹ ಈ ಜಾವಾಸ್ಕ್ರಿಪ್ಟ್ arrangementಗೆ ಸದಸ್ಯರು ಒಗ್ಗಿಕೊಂಡು ಬಿಟ್ಟರೆ ಇನ್ನಷ್ಟು ಕಷ್ಟ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸ್ವಾಗತ
ಶ್ರೀನಿವಾಸ್ ಅವರೇ,
ಸ್ವಲ್ಪ ಅತಿಯಾಯಿತು ಅನ್ನಿಸುತ್ತಿದೆ. ಅವರು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದಾರಲ್ಲ, ಅದನ್ನು ಮೆಚ್ಚಿಕೊಳ್ಳೋಣ. ನಿಧಾನವಾಗಿ ಬರೆಯಲು ಕಲಿಯುತ್ತಾರೆ. ಸಂಪದದಲ್ಲಿ ಬಹುತೇಕ ಎಲ್ಲರೂ ಶುದ್ಧ ಕನ್ನಡದಲ್ಲೇ ಬರೆಯುತ್ತಿರುವುದನ್ನು ನೋಡಿ ಅವರಿಗೂ ತಾವು ಹಾಗೆ ಬರೆಯಬೇಕು ಅಂತ ಈಗಾಗಲೇ ಅನ್ನಿಸಿರಬಹುದು.
ಅಲ್ವ ವತ್ಸ ಅವರೇ?
ನಿಮಗೆ ಸ್ವಾಗತ.
-ಸುರೇಶ್
ಖಂಡಿತ ಅತಿಯಾಗಲಿಲ್ಲ
ಖಂಡಿತ ಅತಿಯಾಗಲಿಲ್ಲ. ಈಗ ಬಹುತೇಕ ಎಲ್ಲ ಕಾರ್ಯ ವಿಧಾನಗಳಲ್ಲಿ ಕನ್ನಡ ಕುಟ್ಟಿಸಬಹುದಾಗಿದೆ. ಪ್ರಯತ್ನ ಪಡಬೇಕು ಅಷ್ಟೆ.
ವತ್ಸ ಅವರೆ, ಎದೆಗುಂದಬೇಡಿ, ¬ಮ್ಮೆ ಪ್ರಯತ್ನಿಸಿ.
ಸರಿ
ನನಗೇನೋ ಹೀಗೆ ಹೇಳುವುದರಲ್ಲಿ ತಪ್ಪೇನೂ ಇಲ್ಲ ಅನ್ಸತ್ತೆ. ಇರಲಿ, ಎಲ್ಲರೂ ಸೇರಿ ಅವರನ್ನು ಮೇಲೆತ್ತೋಣ. ವತ್ಸ ಅವರೇ ನಿಮಗೇನೂ ಬೇಜಾರಿಲ್ಲ ತಾನೆ. ನಿಮಗೇನು ಸಹಾಯ ಬೇಕಿದ್ದರೂ ನನ್ನನ್ನು ಸಂಪರ್ಕಿಸಿ. ಸಂಪದ ಇರೋದೇ ಒಬ್ಬರಿಂದೊಬ್ಬರು ಕಲಿಯಲು, ಕಲಿತು ಕಲಿಸಲು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net