ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||
ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.
ಸಂಪದದಲ್ಲಿ...
ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಇದರ ಕುಱಿತು ಬರೀಬೇಕಿಂದಿದ್ದೆ.. ಇವೊತ್ತು ಹಾಕಿದ್ದೀನಿ.....
ನಮ್ ಬರವಣಿಗೇ ಕನ್ನಡಕ್ಕೂ, ಮಾತಿನ ಕನ್ನಡಕ್ಕೂ ಬಲು ಬೇರೆತನವಿದೆ..
ಇಂತವನ್ನು ಪಟ್ಟಿ ಮಾಡಬೇಕು...
೧) ’ಉ’ ಕೊನೆ......
ಬರವಣಿಗೇಲಿ ’ಉ’ ಇಂದ ಕೊನೆಗೊಳ್ಳೊವು, ಸಾಲಿನ ನುಡಿವೆ ಬಂದರೆ, ಅವು ಹಾಗೆ ಆಗಲ್ಲ..
ಮಾದರಿ:
ಬ: ನೀರು ಬೇಕು ( ಬರಹ )
ಮಾ: ನೀರ್ ಬೇಕು ( ಮಾತು )
ಬ : ಬೇಕಾ ನೀರು
ಮಾ : ಬೇಕಾ ನೀರು
ಬ: ಅದು ಬಂತು
ಮಾ : ಅದ್ ಬಂತು
ಬ : ಬಂತು ಅದು.
ಮಾ : ಬಂತ್ ಅದು.
ಹೀಗೆ ನಾವ್ ’ಉ’ ಇಂದ ಸಾಮಾನ್ಯ ಬರೀ ಸಾಲಿನ ಕೊನೇಲಿ ಹೇಳ್ತೀವಿ.. ಹೀಗಿ ’ಉ’ಇಂದ ಕೊನೆ ಕನ್ನಡದಲ್ಲಿ ’full stop, comma' ತೆರ ಕೆಲಸ ಮಾಡ್ತದೆ.
ಹೀಗೆ ’ಅ’ ಕೂಡ ಹಲವು ಕಡೆ
ಮಾದರಿ :
ಬ : ನಮ್ಮ ಮನೆ
ಮಾ : ನಮ್ ಮನೆ
ಬ : ನನ್ನ ಕೈ
ಮಾ : ನನ್ ಕೈ/ನಂಗೈ
ಬ: ನಾವು ಕನ್ನಡಿಗರು
ಮಾ : ನಾವ್ ಕನ್ನಡಿಗರು
ಬ: ಕನ್ನಡಿಗರು ನಾವು
ಮಾ: ಕನ್ನಡಿಗರ್ ನಾವು
ನೀವೇನ್ ಹೇಳ್ತೀರಿ?
- Login or register to post comments
- 835 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ತಿದ್ದು
’ಸಾಲಿನ ನುಡಿವೆ ಬಂದರೆ, ಅವು ಹಾಗೆ ಆಗಲ್ಲ’ = ’ಸಾಲಿನ ನಡುವೆ ಬಂದರೆ, ಅವು ಉ ಇಂದ ಕೊನೆಯಾಗಲ್ಲ’
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಮಹೇಶ, ಒಳ್ಳೆಯ ವಿಷಯವನ್ನು ಮುಂದಿಟ್ಟಿದ್ದೀಯಾ. ಕನ್ನಡದ ಬಗ್ಗೆ ಇರುವ ಅಪಪ್ರಚಾರಗಳಲ್ಲಿ ' "ಉ" ಸೇರಿಸಿದರೆ ಕನ್ನಡ ಆಗತ್ತೆ ಎಂಬುದೂ ಒಂದು' ಅಂತ ನನ್ನ ಅನಿಸಿಕೆ. "ಉ" ಸೇರಿಸುವುದು ಬಿಡುವುದು ಪಡೆನುಡಿಗಳಿಗೆ ಅನ್ವಯವಾಗದೆ ಕನ್ನಡದ ನಾಮಪದಗಳಿಗೂ ಅನ್ವಯಿಸುತ್ತದೆ ಎಂಬುದು ನನ್ನ ಅನಿಸಿಕೆ.
ಮೇಲಿನ ಉದಾಹರಣೆಗಳಲ್ಲಿ ಕನ್ನಡ ಪದಗಳ ಪಟ್ಟಿಮಾಡಿದ್ದೀಯಾ. ಇದೇ ರೀತಿ ಪಡೆನುಡಿಗಳ ಬಗ್ಗೆಯೂ ಸ್ವಲ್ಪ ಬರಿ.
ಈಗ ಇಂಗ್ಲೀಷಿನ, ಟೇಬಲ್, ಚೇರ್, ಸೋಪ್ ಇವುಗಳನ್ನು ಮಾತಿನಲ್ಲಿ ಬಳಸುವಾಗಲೂ ಕೂಡ ನಾವು "ಟೇಬಲು", "ಚೇರು", "ಸೋಪು" ಅಂತ ಬಳಸಲ್ಲ, ಅಲ್ವಾ. ಕೆಳಗಿನ ಉದಾಹರಣೆಗಳೆಲ್ಲವೂ ಮಾತಿನ ರೂಪದವು.
೧.೧ ಟೇಬಲ್ ಎಲ್ಲಿ ? ಇಲ್ಲಿ ಪಡೆನುಡಿಗೆ 'ಉ' ಸೇರಿಸಲ್ಲ.
೧.೨ ಇದು ನಾನ್ ಮಾಡಿಸಿಕೊಟ್ಟಿದ್ ಟೇಬಲ್ಲು ? ಇಲ್ಲಿ ಪಡೆನುಡಿಗೆ 'ಉ' ಸೇರಿಸಿದ್ದೇವೆ.
೨.೧ ಚೇರ್ ತೊಗೊಂಡ್ ಬಾ - ಇಲ್ಲಿ ಪಡೆನುಡಿಗೆ 'ಉ' ಸೇರಿಸಲ್ಲ.
೨.೨ ಇದು ಅವನ ಚೇರು - ಇಲ್ಲಿ ಪಡೆನುಡಿಗೆ 'ಉ' ಸೇರಿಸಿದ್ದೇವೆ.
ಹೀಗಿರುವಾಗ, ಯಾವುದೇ ಒಂದು ನಾಮಪದ ವಾಕ್ಯದ ಕೊನೆಯಲ್ಲಿ ಬರುವುದಾದರೇ ಮಾತ್ರವೇ ನಾವು "ಉ" ಬಳಸುತ್ತೀವೆಯೇ ? ಎಂಬುದಕ್ಕೆ ಉತ್ತರ ಕಂಡುಹಿಡಿದುಕೊಳ್ಳಬೇಕು. ಚರ್ಚೆ ಮುಂದೆ ಸಾಗಲಿ.
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
"ಹೀಗಿರುವಾಗ, ಯಾವುದೇ ಒಂದು ನಾಮಪದ ವಾಕ್ಯದ ಕೊನೆಯಲ್ಲಿ ಬರುವುದಾದರೇ ಮಾತ್ರವೇ ನಾವು "ಉ" ಬಳಸುತ್ತೀವೆಯೇ ? ಎಂಬುದಕ್ಕೆ ಉತ್ತರ ಕಂಡುಹಿಡಿದುಕೊಳ್ಳಬೇಕು. ಚರ್ಚೆ ಮುಂದೆ ಸಾಗಲಿ.'
ಭಲಾ!!
ಹೊಸಕನ್ನಡದಲ್ ಹಲವ್ ಕ್ರಿಯಾಪದ/ಕ್ರಿಯಾರೂಪಗಳ್ ಅರೆವ್ಯಂಜನದಿಂದ ಕೊನೆಯಾಗ್ತವೋ.. ( ಬಂದಾನ್, ಹೋದಾನ್, ಬರೊನ್/ಬರುವನ್, ಬಂದಾಳ್, ಬಂದಳ್.. )
ಹೞಗನ್ನಡದಲ್ ಇದ್ ಹಾಗೆ ಇಲ್ಲು ಇದೆ ( ನಂಗೆ ಅನ್ನಿಸ್ತದೆ )
ನಾನ್ ಮುಂದಿಟ್ಟುರುವ ಸಂಗತಿ.. ಕನ್ನಡದ ನುಡಿ-ಒಳ-ಮಾಟದಲ್ಲೇ, ಅಂದ್ರೆ ಸಾಲ್-ರಚನೆ ಮಾಡಿದಾಗಲೇ ಪದಗಳಿಗೆ ’ಉ’ ಸೇರಿಸಿ, ಸೇರಿಸದೇ ನಾವ್ punctuation/ಬರಹ ಗುರುತುಗಳನ್ ತೋರಿಸ್ತೀವಿ/ಹೇಳ್ತೀವಿ..
ಮಾದರಿ:
ಅವನಾ ಬಲ್ ಗಾಟಿ ಹುಡುಗ = ಅವನಾ!? ಬಲ್ ಗಾಟಿ ಹುಡುಗ. ( ಇದನ್ ಕುರುಡಾಗಿ ಇಂಗ್ಲೀಸ್ಗೆ ತಂದ್ರೆ,,, he is a very tough guy ಅಂತ )
ನಾನ್ ಬಂದ್ ಮಲಗಿ ಪೇಟೆಗೆ ಹೋಗ್ ವ/ಬಂದೆ = ನಾನು ಬಂದು, ಮಲಗಿ, ಪೇಟಿಗೆ ಹೋಗಿ ಬಂದೆನು.
ಅಂದ್ರೆ, ಹಲವ್ ಸರತಿ ಕನ್ನಡದಾಗೆ punctuation ಗುರುತುಗಳ್ ಇರ್ದಿದ್ರೂ ನಡೇತದೆ. ನಾವ್ ಪದಗಳ್ ರಚನೆ/ಒಳವು ಅದರ ಕೊನೆ ನೋಡಿಕೊಂಡ್ ಎಲ್ಲಿ comma, ಎಲ್ಲಿ full stop ಎಂದು ಹಲವ್ ಸರತಿ ಪತ್ತೆ ಹಚ್-ಬೋದು.
ಇವುಗಳ ಬಗ್ಗೆ ಒಸಿ ಆರಯ್ ಹೆಚ್-ನಡೇಬೇಕು
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಮಹೇಸ್ ... ನಮ್ ಬಡಗಣ ಕರ್ನಾಡಿನ್ಯಾಗ್ ನಾವ್.. ’ಉ’ಯಿಂದ ಕೊನೆ ಮಾಡೂದs ಇಲ್.
ನೀವ್ ಕೊಟ್ಟಿರೋ ಮಾದರಿಗಳನ್ನs ತುಗೊಂಡ್ರ.. ಅವ್ ಹಿಂಗ್ ಆಗ್ತಾವ್...
ಬ: ನೀರು ಬೇಕು
ಮಾ: ನೀರ್ ಬೇಕ್
ಬ: ಬೇಕಾ ನೀರು
ಮಾ: ಬೇಕನ್ ನೀರ್ (ಬೇಕನ್ = ಬೇಕೇನು)
ಬ: ಅದು ಬಂತು
ಮಾ: ಆದ್ ಬತ್
ಬ: ಬಂತು ಅದು
ಮಾ: ಬತ್ ಆದ್
ನಮ್ ಮನಿ
ನನ್ ಕೈ
ನಾವ್ ಕನ್ನಾಡಿಗ್ರ್
ಕನ್ನಾಡಿಗ್ರ್ ನಾವ್
’ಉ’ಯಿಂದ ಕೊನಿ ಮಾಡಿದ್ರುಪ್ಲೆ ಕನ್ನಡ ಆಗಿ ಬಿಡ್ತೈತಿ ಅನ್ನುದ್ ಯಾಕೋ ಸರಿ ಅನ್ಸುದಿಲ್...
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಹುಂ...
ಒಂದ್ ಸಂಗತಿ ಇದೆ ಇಲ್ಲಿ ಬಡಗುಗನ್ನಡದ ಬಗ್ಗೆ... ಅದನ್ ಬೇರೆಯಾಗೇ ತಗೊಳ್ಳುಮ..( ’ಕನ್ನಡ ನುಡಿ ನಡೆದು ಬಂದ ದಾರಿ’ ಈ ಹೊತ್ತಗೆಯಲ್ ಇದೆ. ನೋಡಿ ಬರೇತೀನಿ )
ನೀವೂ ಕೂಡ ಒಂದ್ ಬಗೆಯ ಉ ಇಂದಲೇ ಕೊನೆ ಮಾಡೋದು. ಆ ’ಉ’ ತೆಂಕುಗನ್ನಡಿಗರ ಉಗಿಂತ ತುಸು ಬೇರೆ..!! ಆ ಹೊತ್ತೆಗೆಯಲ್ಲಿದೆ. ಬಡಗುಗನ್ನಡಿರು ಎರಡು ’ಅ’ಗಳನ್ ಉಲಿತಾರ. ಕತ್ತಿ(ಕತ್ತೆ) ಮತ್ತು ಕತ್ತಿ/ಕತ್ತಿ ಈ ಎರಡ್ ಒರೆಗಳನ್ ನೀವ್ ಉಲಿದಾಗ ಕ ಅಲ್ಲಿರೊ ’ಅ’ ಬೇರೆ ಬೇರೆ...
ನಿಮ್ accent ಅಲ್ಲಿ ಹಲ-ನಿಬ್ಬರ/ವಿಶೇಶತೆಗಳ್ ಇವೆ... ಅದನ್ ನೀವ್ ಸರಿಯಾಗಿ ಗುರುತ್ ಮಾಡ್-ಬೇಕು.!
ತೆಂಕುಗನ್ನಡಿಗರ accent ಅಲ್ಲಿ ನಿಮ್ accent ಅಶ್ಟ್ ಹೆಚ್-ಸೊರ/vowelಗಳಿಲ್ಲ...!!
ಸಂಗನ...
ಸಂಗತಿ ಹಿಂಗಪ್ಪ...
ಸಾಮಾನ್ಯ ದ್ರಾವಿಡನುಡಿಗಾರರ್ ಮಾತಾಡೊವಾಗ ಮಾತಿನ ಕೊನೆಯನ್ನು ಒಂದು ಸೊರ/vowel( ತಮಿಳೂ ಕೂಡ, ಅವರೂ ಒಂದ್ ಬೇರೆ ಬಗೆಯ ಉ ಉಲಿತಾರ ) ಇಂದ ಇಲ್ವೇ ಅಂ/ಅನುಸ್ವರದಿಂದ ಮಾಡ್ತಾರೆ. ತೆಲುಗಲ್ಲಂತೂ ಇದ್ ಇನ್ನೋ ಹೆಚ್ಚಂತೆ.. ಅದಕ್ಕೆ ಅದು Italian of east.
ನನಗೆ ತಿಳಿದಂತೆ ಹೆಚ್ ಕನ್ನಡದೋರ್ ಕೂಡ ಮಾತಿನ ಕೊನೆ ಸೊರದಿಂದಲೇ ಮಾಡ್ತಾರೆ...
ಎಲ್ಲ ಕಡೆ ಉ-ಇಂದ ಕೊನೆ ಮಾಡಿದ್ರೆ ಕನ್ನಡ ಅಲ್ಲ ಅಂತ ತೋರೋದೇ ಈ ಚರ್ಚೆಯ ಗುರಿ, ಸಂಗನ...!
ನನ್ನಿ.. !
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಬಳಾ ಚಾಂಗ್... ಒಪ್ಪಿದೆ... :)
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಹೌದ್ ಹೌದ್ ಮಯೇಸ,
ಎಲ್ಲ ಕಡೆ 'ಉ' ಹಾಕದ್ರೆ ಕನ್ನಡ ಆಗಲ್ಲ.
ಶಂಕರಬಟ್ರ 'ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು" ಹೊತ್ತಿಗೆಯಲ್ಲಿ ಹೇಳಿರೊ ಹಾಗೆ ಹಳೆಗನ್ನಡ(ಅಲ್ಲ ಹಿರಿಗನ್ನಡ)ದಲ್ಲಿ ಸೊರಗಳಿಂದ ಕೊನೆಗಳ್ಳುವ ಪದಗಳೇ ಇರಲಿಲ್ಲ ಅಂದಿದಾರೆ. ಅದಕ್ಕೆ ಹಳೆಗನ್ನಡದಲ್ಲಿ ಬರೀ ಆದೇಶ ಸೇರಿಕೆ ಆಗೋದು. ಬಿಟ್ಟು ಹೋಗುವ(ಲೋಪ), ಹೊಸದಾಗಿ ಬರುವ(ಆಗಮ) ಸೇರಿಕೆ ಹಿರಿಗನ್ನಡದಲ್ಲಿ ಇಲ್ಲ ಅಲ್ವ?
ನಮ್ಮ ಆಡುಮಾತು(ಅದ್ರಲ್ಲೂ ಹಳ್ಳಿಗಳ ಆಡುಮಾತು) ಇನ್ನು ಹೆಚ್ಚು ಹಿರಿಗನ್ನಡಕ್ಕೆ ಹತ್ತಿರವಿದೆ.
-----
ಕನ್ನಡದ ನೋಂಪಿಗೆ ನಾ ಮುಡಿಪು
ನೋಂಪು= ವ್ರತ
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಹವುದು... ನೀವ್ ಹೇಳೋದ್ ಸರಿ....
ಆದ್ರೆ ನಾನ್ ಹೇಳ್ತಾ ಇರೋದೂ, ಪದಗಳ ಕೊನೆಯ ಕುರಿತಲ್ಲ, ಸಾಲ್ಗಳ ಕೊನೆಯ ಬಗ್ಗೆ.
ನಾವ್ ಸಾಲು/ವಾಕ್ಯವನ್ನು ಸೊರದಿಂದಲೇ ಕೊನೆಮಾಡೋದು..( ಕನ್ನಡದಾಗೆ ೦ ಅನುಸ್ವರದಿಂದ ಕೊನೆಯಾಗೋದ್ ಬಲು ಕಡಮೆ ಆಗೋದಿದೆ ಅಲ್ವ)
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ನಿಜವಾಗಿ ಪ್ರಥಮಾ ವಿಭಕ್ತಿ ಪ್ರತ್ಯಯವೇ ಇಲ್ಲ. ವ್ಯಂಜನಾಂತ ಶಬ್ದಗಳನ್ನು ’ಉ’ ನಿಂದ ಕೊನೆಗೊಳಿಸುವುದಱಿಂದ ’ಉ’ ಪ್ರತ್ಯಯವೆಂದು ಕನ್ನಡಿಗರು ಭಾವಿಸುತ್ತಾರೆ.
ಅವನ್-> ಅವನು (ಬರೆಹದ ಹೊಸಗನ್ನಡ) ಆಡು ಭಾಷೆಯಲ್ಲಿ ಹಾಗೂ ಹೞಗನ್ನಡದಲ್ಲಿ ಅವಂ(ನ್). ಆಡುಭಾಷೆಯಲ್ಲಿ ಅವ ರೂಪ ಕೂಡ ಇದೆ.
ಅದೇ ರೀತಿ ಅಕಾರಾಂತ ಪುಲ್ಲಿಂಗ ರಾಮಂ(ನ್) ಆಡುಭಾಷೆ ರಾಮ ಉದಾ:- ರಾಮ ಬಂದ.
ಅಕಾರಾಂತ ನಪುಂಸಕಲಿಂಗದಲ್ಲಿ ಮ್ ಪುರಂ ಕಂಡುದು. ಹೊಸಗನ್ನಡದಲ್ಲಿ ಮಕಾರವೆಲ್ಲ ’ವ’ ಕಾರವಾಗುವುದಱಿಂದ ಹಾಗೂ ’ವ್’ ಕಾರವನ್ನು ವ್ಯಂಜನಾಂತ ಹೇೞಬಾರದುದಱಿಂದ ಪುರಂ(ಮ್)->ಪುರವ್->ಪುರವು ಕಂಡುದು (ಪುರ ಕಂಡುದು ರೂಪ ಕೂಡ ಇದೆ)ಹೊಸಗನ್ನಡ ರೂಪ. ನಿಜವಾಗಿ ’ಉ’ ಪ್ರಥಮಾವಿಭಕ್ತಿ ಪ್ರತ್ಯಯವಲ್ಲ.
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಧನ್ಯವಾದ
-ಮಹೇಶ
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ಇನ್ನೊಂದು ವಿಚಾರ, ಪದದ ಕೊನೆಯಲ್ಲಿ ಯ್, ರ್, ಲ್, ಳ್, ೞ್, ಱ್, ನ್, ಣ್ ಇದ್ದಾಗ ’ಉ’ ಸೇರಿಸಬೇಕಿಲ್ಲ. ಉದಾಹರಣೆಗೆ, ತಾಯ್, ಬಾಯ್, ನಾಯ್, ನೀರ್, ಮಾರ್, ಮೂಱ್, ಬಸಿಱ್, ಬಾೞ್, ಸೂೞ್, ಬೆರಲ್, ಕಲ್, ಹೊನ್, ಹೆಣ್. ಆದರೆ ಕಾಡು, ನಾಡು, ನೊಣವು, ಕೆಸವು, ಬಾವು, ತೋಪು ಇತ್ಯಾದಿ ಇಲ್ಲೆಲ್ಲ ’ಉ’ ಸೇರಿಸಲೇಬೇಕು. ಇದು ವ್ಯಾಕರಣದ ನಿಯಮ.
ಉ: ಆಡುಗನ್ನಡ ವ್ಯಾಕರಣ - ’ಉ’ ಕೊನೆ
ನನ್ನಿ
-ಮಾಯ್ಸ