ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

March 11, 2008 - 8:11pm — ವೈಭವ

ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ.

ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ
ಬರಹಗಾರ: ಡಿ.ಆರ್. ನಾಗರಾಜ್
ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ

ಇದರಾಗೆ ಅವರು ಹಲವು ತಲೆಮೆಯ ವಿಶ್ಯಗಳನ್ನು ಎತ್ತಿದ್ದಾರೆ. ಅದರಲ್ಲಿ ಒಂದನ್ನು ಇಲ್ಲಿ ಚರ್ಚೆ ಮಾಡಬಹುದು.
ಡಿ.ಆರ್.ನಾಗರಾಜ್ ಬರೆಯುತ್ತ
"...ಸುರೇಂದ್ರನಾತದಾಸಗುಪ್ತ ಇಂಡಿಯಾದ ತತ್ವಶಾಸ್ತ್ರದಲ್ಲಿ ದೊಡ್ಡ ಹೆಸರು. ಆದರೆ ಅವರ ಈ ಮಾತು ಸಿಟ್ಟು ತರಿಸುವಂತಹುದು.
'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ'..."

ಬೇರೆ ದ್ರಾವಿಡ ನುಡಿಗಳು ಹಾಗಿರಲಿ. ಬರೀ ಕನ್ನಡದ ನಿಬ್ಬರದ/ವಿಶೇಶತೆ ಬಗ್ಗೆ ನೋಡುಮ:-
೧) ಕವಿರಾಜಮಾರ್ಗದಲ್ಲಿ ಕನ್ನಡದ್ದೇ ಆದ ಸಾಹಿತ್ಯದ ಗುಣಗಳನ್ನು ಎತ್ತಿ ಹಿಡಿಯಲಾಗಿದೆ. ಮಾದರಿ: ದ್ವನ್ಯಾಲಂಕಾರ ಕನ್ನಡದ್ದೇ
೨) ಕನ್ನಡದಲ್ಲಿರುವ ವಚನಗಳ ತೆರದಿ ಸಕ್ಕದದಲ್ಲಿ ಸಾಹಿತ್ಯ ಸಿಗುತ್ತಾ?
೩) ಕನ್ನಡದಲ್ಲಿ ಹೇರಳಾವಾಗಿರುವ ಜನಪದ ಸಾಹಿತ್ಯ ಏನ್ ಕಡಿಮೇನ. ಅವಕ್ಕೆ ಅದರದೇ ಆದ ನಿಬ್ಬರವಿಲ್ಲವೆ?
...
...

ನಾಗರಾಜ್ ರವರು ಹೇಳುವ ಹಾಗೆ ಈ ಪಂಡಿತರು ಕನ್ನಡ ಸಾಹಿತ್ಯವನ್ನು ಸಂಸ್ಕ್ರುತಕ್ಕೊ ಅತ್ವ ಇಂಗಲೀಸ್ ಗೊ ಇಳಿಸಿ ಆಮೇಲೆ ಅಬ್ಯಾಸ ಮಾಡಿದ್ದಾರೆ. ಆದ್ದರಿಂದ ಅವರಿಗೆ ಕನ್ನಡ ಸಾಹಿತ್ಯದ ನಿಬ್ಬರವನ್ನು ಕಂಡುಹಿಡಿಯಲಾಗುವುದಿಲ್ಲ.
ಕನ್ನಡಿಗರಲ್ಲದವರು ಕನ್ನಡದ ಬಗ್ಗೆ ಅರಯ್ಯು ಮಾಡುವಾಗ ಕನ್ನಡದಲ್ಲೆ ಸಾಹಿತ್ಯವನ್ನು ಓದಿ ಅರಯ್ಯು ಮಾಡಿದರೆ ಒಳಿತು.

‹ ಕನ್ನಡಿಗರಿಗೆ ಕಷ್ಟವಾದ ಕನ್ನಡ!! 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 635 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 12, 2008 - 7:28am — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

Smiling

ಯಾವೋನೋ ತಲೆಕೆಟ್ಟ ಸಂಸ್ಕ್ರುತ ಐಲು ನೆತ್ತಿಗೇಸಿಕೊಂಡವನು ಹೇಳಿರ್ತಾನ ಹಂಗೆ.....

ಇರ್ಲಿ ಬಿಡ್ರೀ... ನಾಳಿಂನಾಳು ಸಂಸ್ಕ್ರುತ ಕಣ್ಮರೆ ಆಗ್ತೀರೋದೇ ಇಂತೋರಿಂದ...

ಜಯತು ಸಂಸ್ಕೃತಂ, ಗೆಲ್ಗೆ ಕನ್ನಡಂ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 12, 2008 - 9:35pm — ವೈಭವ

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ವೈಭವ's picture

ಮಾಯ್ಸ,
ಯಾರೊ ತಲೆಕೆಟ್ಟವರು ಹೇಳಿದ್ದರೆ ಅರಿಯಮಿಸಬಹುದಿತ್ತು. ಆದರೆ ಈವಯ್ಯ ಇಂಡಿಯಾದ ತತ್ವಶಾಸ್ತ್ರವನ್ನು ಅರೆದು ಕುಡಿದಿದ್ದಾನಂತೆ.
ಇವನು ಹೇಳಿರುವುದನ್ನು ದಿಟ ಅಂತ ಏಸ್ ಮಂದಿ ನಂಬ್ಕೊಂಡಿದ್ದಾರೊ ಯಾರಿಗೆ ಗೊತ್ತು. ಸಿಟ್ಟು ಬರಲ್ವ? Sad
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 13, 2008 - 8:35am — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

ಹಿ ಹಿ..

ನೋಡಪ್ಪ...

ಈ ಮಂದಿಯೇ ಹಿಂಗೆ...

ಬರೀ ಒಂದ್ ಬಗೆಯ ಹೊತ್ತಗೆ ಓದ್-ಬಿಟ್ ತಾವೆಲ್ಲಾ ತಿಳಿದಿದ್ದೀವಿ ಅಂತ ಅಯ್ಲಾಡ್ತಾರೆ.. ಇವರ್ಗೆ ಅಂತ ಒಂದ್ ಕುರುಡ್-ಪೆದ್-ಗುಂಪ್ ಇದ್ದೇ ಇರ್ತದೆ. ಇವರ್ಗೆ ದುಡ್ಡೂ ಕೂಡ ಸಿಗ್ತದೆ. ಇದೊಂತರ ತೆವಲು....

ಯಾರ್‍ ಏನಾರ ಅನ್‌ಲಿ. ನಾವ್ ಕನ್ನಡದೋರ್ಗೆ ಗೊತ್-ಇರ್‍ಬೇಕು, ನಮ್ ಕನ್ನಡದಾಗೆ ಏನ್‌-ಅಯ್ತೆ ಇಲ್ಲ ಅಂತಾವ!

ಹಿಂಗೆ ಗೊತ್ತಿರೊ ಮಂದಿ ತುಟಿಕ್-ಪಿಟಿಕ್ ಅನ್ನದೇ ಸುಮ್ಕಿರಬಾರ್ದು.. ನೀನ್ ಎಲ್ರು ಮುಂದೆ "ನೋಡೀ ಈವಯ್ಯ ಸುಳ್ ಹೇಳಿ, ನಮ್ ಕನ್ನಡದ ಕಬ್ಬ-ತಲೆಮಾರು/ಕಾವ್ಯಪರಂಪರೆಯಾಗೆ ತನ್ನದೇ ಸೊಂತದ್ದು ಏನೂ ಇಲ್ಲ ಅಂತ ಹುಸಿಯಾಡ್ತವ್ನೆ" ಎಂದ್ ಹೇಳ್ದಂಗೆ ಬಂದ್ ಹೇಳ್‌ಬೇಕು.

ಕನ್ನಡದಾಗೆ ಇರೋ ತತ್ವಪದಗಳೇನು ಕಡಮೆಯೇ!! Smiling ದಾಸ + ವಚನ ಅಬ್ಬಬ್ಬ!!

ಕನ್ನಡಕ್ಕೆ ತುರಿತಾಗಿ ಅದರ ದಿಟದ-ಹುರುಳ್-ತಿರುಳ್ ಏನ್ ಎತ್ತ ಅಂತ ಟಾಮ್-ಟಾಮ್ ಮಾಡಿ ಸಾರೊ ಒಂದು ಪಡೆ ಬೇಕು. ಸಂಸ್ಕ್‌ರುತಕ್ಕೆ ಇರೋ ಹಂಗೆ ದೊಡ್ ಬೊಗಳೆ-ಪಡೆ ಇದ್ರೆ, ಇನ್ನೋ ಚಂದವೇ... Smiling !!

[ಗಮನಿಸಣ್ಣ.. tit-for-tat ತಮಿಳ್-ನೆಲದಾಗೇ ಈ ಸಂಸ್‌ಕ್ರುತದೋರು ತಮಿಳ್ ಬರೀ ಮಕ್ಕಳಾಡೊ ತೊದಲು ಅದರಿಂದ ದೇವರ ಪೂಜೆಯುಂಟೇ ಎಂದ್ ಹೀಯಾಳಿಸದಕ್ಕೆ, ತಮಿಳರು ತಮಿಳಿಗೆ ಇಲ್ಲದೇ ಇರೋ ರೆಕ್ಕೆ-ಪುಕ್ಕ ಕಟ್ಟಿ ಸಂಸ್ಕ್‌ರುತದೋರ ಸಮ ಬೊಗಳೆ ಬಿಟ್ರೂ... ಆ ಬೊಗಳೆಯನ್ನೇ ಹಲತಮಿಳರು ದಿಟ ಅಂತ ತಿಳಿದುಕೊಂಡ್ವರೆ.]

ನಮಗೆ ನಲಿವೇನೆಂದ್ರೆ.... ಸಂಪದದಲ್ಲಾದ್ರೂ ನೀವ್-ಸವಿತ್ರು ಮುಂತಾದವ್ರು ಬಂದು "ಅವಯ್ಯಂದು ಬೊಗಳೆ, ಸಂಸ್ಕ್ರುತದಲ್ ಕನ್ನಡದಲ್ ಇಲ್ಲದೇ ಇರೋದು ಅಂತದ್ದೇನೂ ಇಲ್ಲ; ಬಾವಿಗಪ್ಪೆ ಬುದ್ದಿ!" ಅಂತ ಮುಂದ್ ಬಂದ್ ಹೇಳ್ತೀರಲ್ಲ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 12, 2008 - 3:48pm — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ವೈಭವ,

ದ್ರಾವಿಡ ಸಾಹಿತ್ಯ ಅಂದರೆ ಏನು? ಸಂಸ್ಕೃತದಲ್ಲಿರುವ ಆಗಮ ಸಾಹಿತ್ಯ ದ್ರಾವಿಡ ಸಾಹಿತ್ಯವಲ್ಲವೇ?
ಹಾಗೆಯೇ ಕನ್ನಡದಲ್ಲಿಯೂ ದ್ರಾವಿಡೇತರ ಸಾಹಿತ್ಯವಿದೆ ಅನ್ನುವುದು ಸಹಾ ಸರಿ.

ದ್ರಾವಿಡ ಸಾಹಿತ್ಯ ದ ಬದಲು ದ್ರಾವಿಡ ಭಾಷಾ ಸಾಹಿತ್ಯ / ದ್ರಾವಿಡ ಪ್ರದೇಶದ ಸಾಹಿತ್ಯ ಅನ್ನುವ ಪದ ಹೆಚ್ಚು ಹೊಂದುತ್ತದೆ! ಬಹುಶ ನಿನ್ನ ಬರವಣಿಗೆಯ ಹಿಂದಿನ ಅರ್ಥವೂ ಇದೇ ಇರಬಹುದು.

ಇನ್ನು ಆ ತತ್ವ ಶಾಸ್ತ್ರಜ್ನನಿಗೆ ಅಲ್ಲಮನ ಪರಿಚಯವಿಲ್ಲ ಅನ್ನಿಸುತ್ತದೆ. ಸಂಸ್ಕೃತದ ಅದಾವ ವ್ಯಕ್ತಿ ( ವೇದ- ಉಪನಿಶದ್ ಕಾಲದ ಋಷಿಗಳನ್ನೂ ಸೇರಿಸಿಕೊಂಡು ) ಈ ಅಲ್ಲಮನಿಗಿಂತ ಎತ್ತರಕ್ಕೆ ನಿಲ್ಲುತಾರೋ ( ಕನಿಷ್ಠ ಪಕ್ಷ ಸಮಾನವಾಗಿ ) ನಾ ಕಾಣೆ!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 12, 2008 - 5:17pm — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

>>ಬಹುಶ ನಿನ್ನ ಬರವಣಿಗೆಯ ಹಿಂದಿನ ಅರ್ಥವೂ ಇದೇ ಇರಾಬಹುದು.

ವೈಭವಣ್ಣ!

ಏಕವಚನ ಬಳಸಿದ್ದಕ್ಕೆ ಬೇಜಾರಿಲ್ಲ ತಾನೆ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 12, 2008 - 9:31pm — ವೈಭವ

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ವೈಭವ's picture

ಸವಿತ್ರು,
ಒರ್ವಚನವನ್ನು ದಾರಾಳವಾಗಿ ಬಳಸಪ್ಪ. Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 12, 2008 - 9:41pm — ವೈಭವ

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ವೈಭವ's picture

ಸವಿತ್ರು.
ಹೌದು. ನಾನು ಅನ್ಕೊಂಡಿದ್ದು ಈ ತೆರ: ದ್ರಾವಿಡ ಭಾಷಾ ಸಾಹಿತ್ಯ / ದ್ರಾವಿಡ ಪ್ರದೇಶದ ಸಾಹಿತ್ಯ.
ನನಗೆ ಆಗಮ ಸಾಹಿತ್ಯ ಗೊತ್ತಿಲ್ಲ. ಇದನ್ನು ಬರೆದವರು ಯಾರು?

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 2:14pm — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ವೈಭವ...

ಆಗಮ ಸಾಹಿತ್ಯ ಬಹು ವಿಶಾಲವಾದ ಸಾಹಿತ್ಯ... ವೇದಗಳಿಗಿಂತ ಹೆಚ್ಚು. ಯಾವುದರಿಂದ ಇಹ-ಪರ ಗಳೆರಡರ ಶ್ರೇಯಸ್ಸು ಬರುತ್ತೋ ಅನ್ತಾದ್ದಕ್ಕೆ ಆಗಮ ಅನ್ನಬಹುದು.

ಆಗಮಗಳು ವೇದ ಪರಂಪರೆಗೆ ಪರ್ಯಾಯವಾದ ಪರಂಪರೆ. ಸಾಮಾನ್ಯವಾಗಿ ತಂತ್ರ ಅಂತ ಕರೆಯಬಹುದು. ಈ ವೈದಿಕರು ಆಗಮ ಸಾಹಿತ್ಯದ ಬಗ್ಗೆ ಜನ ಸಮಾನ್ಯರರಲ್ಲಿ ಅಂತ ಒಳ್ಳೆಯ ಅಭಿಪ್ರಾಯ ಹುಟ್ಟುಹಾಕಿಲ್ಲ.

ಶಾಕ್ತ ಆಗಮಗಳು= ೬೭ ( ಹೆಚ್ಚು ಕಡಿಮೆ)
ಶೈವ ಆಗಮಗಳು =೨೮
ವೈಷ್ಣವ ಆಗಮಗಳು = ೭೮
ಪಂಚಾರಾತ್ರ ಆಗಮಗಳು = ೧೦೮
ಅಲ್ಲದೆ ಸೌರ ಮತ್ತು ಗಾಣಪತ್ಯ ಆಗಮಗಳೂ ಇವೆ.

ಶೈವ ಆಗಮಗಳು ಶಿವನ ೫ನೆ ( ಈಶಾನ) ಮುಖದಿಂದ ಉದ್ಭವವಾದವು ಅನ್ನೋ ನಂಬಿಕೆ ಇದೆ. ( ಇಳಿದ ೪ ಮುಖಗಳಿಂದ ನಾಲ್ಕು ವೇದಗಳು.). ಅಲ್ಲದೆ ಇವು ವೇದ ಸಮ್ಮತ ವಾಗಿವೆ ಅನ್ನುತ್ತಾರೆ.

ನಂಗೆ ಬೇಜಾರು ಏನು ಅಂದ್ರೆ ನಮ್ಮ ಎಲ್ಲ ಸಾಹಿತ್ಯವನ್ನೂ... ವೇದ ಸಾಹಿತ್ಯದ ಕೆಳಗಿಟ್ಟು ನೋಡುವ ವಿಲಕ್ಷಣ ಗುಣ ನಮ್ಮ ಪಂಡಿತರಲ್ಲಿದೆ. ಪ್ರತಿಯೊನ್ದನ್ನೋ ವೇದ ಸಂಮತವೆ ಅತ್ವ ವೇದ ವಿರೋಧಿಯೇ ಅಂತ ನೋಡುತ್ತಾರೆ. ಪರ್ಯಾಯ ಚಿಂತನೆಯ ಮಾರ್ಗಗಳನ್ನು ತುಳಿದುಹಾಕಿದ್ದಾರೆ.

ಆಸಕ್ತಿ ಇದ್ದರೆ ಸ್ವಲ್ಪ ಹೆಚ್ಚು ಸೇರಿಸಬಲ್ಲೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 3:12pm — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

ಸವಿತ್ರು...

ಆಗಮದ ಬಗ್ಗೆ ಬಿಡಿಸಿ ಬರೆಯಿರಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 11:46am — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ಮಹೇಶ...

ನನಗೇನೂ ಆಗಮಗಳ ಬಗ್ಗೆ ಇಲ್ಲಿ ಉದ್ದುದ್ದವಾಗಿ ಬರೆಯುವಷ್ಟು ಜ್ನಾನವಿಲ್ಲ್ .
ಹೆಚ್ಚೆಂದರೆ ವೀರಾಗಮ ಮತ್ತು ವಾತುಲಾಗಮಗಳ ಬಗ್ಗೆ ( ಶೈವಾಗಮಗಳು) ಸ್ವಲ್ಪ ಸೇರಿಸಬಲ್ಲೆ.
ಒಮ್ಮೆ ಪ್ರಯತ್ನಿಸುತ್ತೇನೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 11:57am — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

ಸರಿ...

ಜತನ ಮಾಡಿ.. ಒಂದು ಬರೆದರೆ, ಇನ್ನೊಂದು ಬರೆಯಕ್ಕೆ ಓದಬೇಕು ಅನ್ನಿಸ್ತದೆ.. ನಿಮಗೆ, ನಿಮ್ಮ ತಲೆಗೇ ಒಳ್ಳೇದು..

Smiling
ಈಗಿನ ನನ್ನ ಪಾಡಿನಲ್ಲಿ, ವೇದಾಂತ ಓದೋದು ನನ್ನ ಹದುಳಕ್ಕೆ ಒಳ್ಳೇದಲ್ಲ, ಹೋಗಿ ’ಇಂತಿ ನಿನ್ನ ಪ್ರೀತಿಯ’, ’ಅವ್ವ’ಗಳನ್ನು ಮರುಮರುವಾಗಿ ನೋಡಲಿ ಅಂತ ಡಾಕ್ಷರ ಹೇಳವ್ರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 14, 2008 - 9:07pm — ವೈಭವ

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ವೈಭವ's picture

ಸವಿತ್ರು,

ನನ್ನಿ, ಇವೆಲ್ಲ ನನಗೆ ಗೊತ್ತಿರಲಿಲ್ಲ. ಹೊಸ ಎಳೆ ತೆಗೆದು ವಿವರವಾಗಿ ಬರೆಯಪ್ಪ

ವೇದ, ಆಗಮ, ಪುರಾಣಗಳ ಬಗ್ಗೆ ಅಲ್ಲಮ ಅಸಡ್ಡೆಯನ್ನು ತೋರಿದ್ದಾನೆ. ಅದನ್ನ ನಗೆಪಾಟಲು ಮಾಡಿದ್ದಾನೆ.

೧) ವೇದಂಗಳೆಂಬವು ಬ್ರಹ್ಮನ ಬೂತಾಟ
ಶಾಸ್ತ್ರಗಳೆಂಬವು ಸರಸ್ವತಿಯ ಗೊಡ್ಡಾಟ
ಆಗಮಗಳೆಂಬವು ರಿಸಿಯ ಮರುಳಾಟ
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ( ಒದ್ದಾಟ)
ಇಂತು ಇವನು ಅರಿದವರ ನೇತಿಗಳೆಂದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚಲಿಂಗೈಕ್ಯನು !

೨) ವೇದವೆಂಬುದು ಓದಿನ ಮಾತು
ಶಾಸ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಶ್ಟಿ, ತರ್ಕವೆಂಬುದು ತಗರ ಹೋರಟೆ
ಬಕುತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿನ ಘನವು

ಅಲ್ಲಮ ಯಾವುದಕ್ಕೂ ಅಂಟಿಕೊಳ್ಳದೆ, ತಾನು ಹೇಳಿದ್ದೇ ಸರಿಯೆನ್ನದೆ ಹಾಗೆ ಉಳಿಯುತ್ತಾನೆ. ಓದುಗರೇ ತಮ್ಮ ಬುದ್ದಿಬಲವನ್ನು ಬಳಸಿ ಸರಿಯೇನೆಂದು ಅರಿತುಕೊಳ್ಳುವ ಸ್ವಾತಂತ್ರ್ಯವಿದೆ. ಅದಕ್ಕೆ ಅಲ್ಲಮ ನಂಗ್ ಬಲ್ ಇಶ್ಟ ಆಗೋದು.

ಕೊ.ಕೊ: ದೇವರು ಬೇರೆ, ನಾನು ಬೇರೆ ಅನ್ನುವಲ್ಲಿ ಬಕುತಿ ಹುಟ್ಟೋದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 11:27am — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ವೈಭವ... ಪ್ರತಿಕ್ರಿಯೆಗೆ ನನ್ನೀ....

ನಾನು ಹೆಚ್ಚೇನೂ ಓದಿಕೊಂದಿಲ್ಲ. ಆದರೂ ಅಲ್ಪ ಸ್ವಲ್ಪ ( ಎಂಟ್ರಿ ಲೆವೆಲ್! ) ಜ್ಞಾನವಿದೆ.

ನನ್ನ ಪ್ರಕಾರ ಯಾರಾದರೂ ವ್ಯಕ್ತಿ ಯಾವ ವರ್ಣ - ಜಾತಿ - ಮತ - ಪಂಥ - ಮಾರ್ಗ - ತತ್ವ - ಧರ್ಮ - religion - ದೇಷ - ಭಾಷೆ ಹೀಗೆ ( ಈಗ ಪ್ರಚಲಿತವಿರುವ) ಸೀಮಿತಗಳಿಗೆ ಅಂಟಿಕೊಳ್ಳದೆ ಎಲ್ಲವನ್ನೂ ಮೀರಿ ನಿಲ್ಲುವ ಮತ್ತು ಅವ್ಗಳನ್ನು ನಿಜವಾದ ಅರ್ಥದಲ್ಲಿ ತಿಳಿದುಕೊಂಡವ, ವೇದಾಂತ ಮನೋಭಾವದವ್ .....ಇದ್ದರೆ .. ಅವನಿಗೆ ಅಲ್ಲಮನ ಪರಿಚಯವಿದ್ದರೆ ...ನಿಜವಾಗ್ಲೂ ಅಲ್ಲಮನಿಗೆ ಅನ್ತಿಕೊಳ್ಳುತಾನೆ.

ಅಂತದರಲ್ಲಿ ನನ್ನ ನಿನ್ನಂತಹ ಪಾಮರರು ಅಂಟಿಕೊಳ್ಳದೆ ಇರುವುದಕ್ಕೆ ಕಾರಣಗಳು ಇಲ್ಲ.

ಅಲ್ಲಮ ನಂಗೂ ಅಷ್ಟೆ ..ಇತಿಹಾಸದಲ್ಲಿ ಇದುವರೆಗೆ ನನ್ನ ಗಮನಕ್ಕೆ ಬಂದ ವ್ಯಕ್ತಿಗಳಲ್ಲಿ ನಾನು ಈತನಿಗೆ ಪ್ರಥಮ ಸ್ಥಾನ ವನ್ನು ಕೊಟ್ಟಿದ್ದೇನೆ. . ಆತನ ಹತ್ತಿರಕ್ಕೂ ಬರುವಷ್ಟು ವ್ಯಕ್ತಿಗಳು ನನ್ನ ಗಮನಕ್ಕಂತೂ ಬಂದಿಲ್ಲ.

ಪಾಪ ಅಲ್ಲಮನನ್ನು ಓದಿಕೊಳ್ಳದೆ ವೇದಾಂತದ ಬಗ್ಗೆ ಮಾತನಾಡುವವರನ್ನು ಕಂಡರೆ ನಂಗೆ ನಗು ಬರುತ್ತೆ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 11:52am — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

ಹಯ್ಟ್ ಲಗಾ...

ಹೋಲ್ ಸೇಲ್ ಆಗಿ ವೇದ-ಶಾಸ್ತ್ರ-ಆಗಮ ಎಲ್ಲ ಕಚಡ ಅಂನೋದೆ..!!

ಇದು ಕೂಡ ಒಂದು ಬಗೆಯಲ್ಲಿ ಬಾವಿಗಪ್ಪೆ - ಸಂಸ್‌ಕ್ರುತ ಪಂಡಿತದ ನಡೆಯಂತೆ ಆಯ್ತು! ನಾನ್ ಬಾವೀಲ್ ಕುಂತೀನಿ, ಬಾವೀಂದಾಚೆಗೆ ಏನಿಲ್ಲ.. ಅಂದಂಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 2:01pm — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ಮಹೇಶ

ಈ ವಚನಗಳ ಪೂರ್ವ - ಪರಗಳನ್ನು ವೈಭವ ಬರೆದಿಲ್ಲ. ತಿಳಿದು ಈ ವಚನಗಳನ್ನು ಓದಿದರೆ ಈ ವಚನಗಳಲ್ಲಿ ಸತ್ಯವಿದೆ ಅನ್ನುವುದು ಅನುಭವಕ್ಕೆ ಬರಬಹುದು.

ನನ್ನ ಇದುವರಿಗಿನ ಓದಿನಲ್ಲಿ ಎಲ್ಲಿಯೂ ಭಾವಿ ಕಪ್ಪೆಯ ತನ ನಂಗೆ ಕಂಡಿಲ್ಲ. ಅಲ್ಲಮನ ವಚನಗಳಿನ್ದಾನೆ ಅವನಲ್ಲಿದ ವೇದ ಜ್ಞಾನ ತಿಳಿಯುತ್ತೆ.

ನಾನು ಯಾರಿಗೂ ಅಲ್ಲಮನನ್ನು ಓದು ಅಂತ ಒತ್ತಾಯ ಮಾಡಲ್ಲ. ಅವರವರ ಆಸಕ್ತಿ. ಆದರೆ ಕೆಲವರು ಅಲ್ಲಮನನ್ನು ಓದದೇ ಶಿವನೇ/ವಿಷ್ಣುವೇ ದೊಡ್ಡವನು ....ದ್ವೈತವೆ / ಅದ್ವೈತವೆ / ವಿಶಿಷ್ಟಾದ್ವೈತವೆ / ಶಕ್ತಿ-ವಿಶಿಷ್ಟಾದ್ವೈತವೆ ಪರಮ ಸತ್ಯ ಅಂತ ವಾದಿಸುತಾರಲ್ಲ... ಅವರ ಕಂಡರೆ ನಂಗೆ ನಿಜಕ್ಕೂ ನಗು ಬರುತ್ತೆ.

ಅಲ್ಲಮನೇನೂ ಹೋಲ್ ಸೇಲ್ ಆಗಿ ವೇದ-ಶಾಸ್ತ್ರ-ಆಗಮ ಎಲ್ಲ ಕಚಡ ಅಂತ ಅಂದಿಲ್ಲ. ಆದರೆ ವೇದಗಳ ಕೆಲಭಾಗಗಳನ್ನು ಟೀಕಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2008 - 8:37am — mahesha

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

mahesha's picture

ಮನ್ನಿಸಿರಿ...!

ನಾನು ಸಂಸ್ಕೃತ-ಪಂಡಿತರ/ಪೀಡಿತರಂತೆ ನಡೆದು ಬಿಟ್ಟೆ! Smiling

ಅಲ್ಲಮನ ಬಗ್ಗೆ ಕಣ್ಮನಗಳರಳಿವೆ.. ಓದುವ ಜತನ ಮಾಡ್ತೀನಿ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2008 - 1:49pm — savithru

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

savithru's picture

ವೈಭವ

ಅಲ್ಲಮನ ಬಗ್ಗೆ ಪೀಠಿಕೆ ಇಲ್ಲದೆ ಹೀಗೆ ಅಲ್ಲಮನ ಒಂದೆರಡು ವಚನಗಳನ್ನು ಉದ್ದರಿಸಿದರೆ ಅಪಾರ್ಥವಾಗುವುದೇ ಹೆಚ್ಚು. ಅಲ್ಲಮನ ಬಗ್ಗೆ ಓದು ಇಲ್ಲದವರು ಈ ವಚನಗಳನ್ನು ತಪ್ಪಾಗಿ ತಿಳಿಯುವುದರಲ್ಲಿ ಸಂದೇಹವೇ ಇಲ್ಲ. ಅಲ್ಲಮ ಯಾವ ಸಂದರ್ಭದಲ್ಲಿ ಹೀಗೆ ಹೇಳಿದ್ದಾನೆ, ಯಾಕೆ ಹೇಳಿದಾನೆ ಅಂತ ಯೋಚಿಸು ಸೇರಿಸಿದರೆ ಒಳ್ಳೆಯದು.

ಸಾಧ್ಯವಾದರೆ ನೀನು ಕೊಂಡ ಪುಸ್ತಕದ ತಿರುಳನ್ನು ನಮ್ಮೊಡನೆ ಹಂಚಿಕೋ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 17, 2008 - 9:00pm — ವೈಭವ

ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ವೈಭವ's picture

ಅಹುದು.
ಸವಿತ್ರು ನೀನು ಸರಿ. ಬರೀ ಈ ಎರಡು ಪದ್ಯ್ಗಳಿಂದ ಅಲ್ಲಮ ಸರಿಯಾಗಿ ಅರಿತವಾಗುವುದಿಲ್ಲ. ಡಿ.ಆರ್. ನಾಗರಾಜ್ ಅವರ ಹೊತ್ತಿಗೆ ಓದುತ್ತಾ ಇನ್ನು ಹೆಚ್ಚು ಸರಿಯಾಗಿ ಅಲ್ಲಮನನ್ನು ಅರಿತ ಮಾಡಿಕೊಳ್ಳಬಹುದು ಅನ್ಸುತ್ತೆ.

ಅದರೂ ಇಲ್ಲಿ ಅಲ್ಲಮ ವೇದ ಆಗಮಗಳು ತಪ್ಪು, ತಾನು ಹೇಳಿದ್ದು ಸರಿ ಅಂತ ಹೇಳಿಕೊಂಡಿಲ್ಲ. ಅದರಲ್ಲಿರುವ ಕೆಲವು ಓರೆಕೋರೆಗಳನ್ನು ತೋರುವ ಕೆಲಸ ಮಾಡಿದ್ದಾನೆ ಅನ್ಸುತ್ತೆ. ಎಶ್ಟೊ ಕಡೆ ತನ್ನನ್ನೆ ತಾನು ನಗೆಪಾಟಲು ಮಾಡಿಕೊಂಡಿದಾನೆ.

ಡಿ.ಆರ್. ನಾಗರಾಜರು ಯಾವುದರ ಪರವಾಗಿ ನಿಲ್ಲದೆ, ಹೆದರಿಕೆಯಿಲ್ಲದೆ ಬರೆದಿದ್ದಾರೆ. ಓದಕ್ಕೆ ನಲಿವಾಗುತ್ತದೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಿಳಿವು ಮಾರ್ಪು-ಅರ್ಥಾಂತರ!
  • ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?
  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
  • ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
  • 'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ಕೀ ರಂ ನಾಗರಾಜ್ - ೨
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator