ಐಟಿಗರ ಕೆಲಸಗಳಿಗೆ ಕುತ್ತು
ಯಾಕೋ ಈ ಏಡೂ ಐಟಿಗರಿಗೆ ಚಂದಾಗಿಲ್ಲ. ಸ್ಲೋ ಡವನು.
ನಮ್ ಕಂಪನೀಲಾಗಲೇ ನಮಗೆಲ್ಲಾ ಒಳ್ಳೇ ಇನಕ್ರಿಮೆಂಟಿಲ್ಲ ಅಂತ ನಯವಾಗಿ ಹೇಳ್ತಾ ಇದ್ದಾರೆ.
ಹಲಕಂಪೆನಿಗಳೂ ಹೊಸಬರನ್ನ ತಡವಾಗಿ ಸೇರಕ್ಕೆ ಹೇಳ್ತಿವೆ.
ಇನ್ ಅಮೆರಿಕದ ಎಲೆಕಸನ್ನಾಗೇ ಏನಾರ ಡೆಮೊಕ್ರಾಟ್ ಪಕ್ಶದ ಮಂದಿ ಗೆದ್ರೇ ಅವಟ್-ಸೋರಸು ಕಡಮೆ ಆಗಿ ಐಟಿ ಕೆಲಸಗಳು ಕಡಮೆ ಆಗ್ತವೆ ಅಂತ ಬೇರೆ ಹೇಳ್ತಾವ್ರೆ.
ಏನೋಪ್ಪ.. ನನ್ನಂತೆ ನಾಲ್ಕು ವರ್ಶದಿಂದ ಸೇರಿದ ಮೊದಲ ಕಂಪೆನೀಲೇ ಬಿದ್ದರೋ ಮಂದಿಗೆ ಹೆದರ್ಕೆ. ನಮಗೆಲ್ಲಾ ಇನ್‌ಟರ್‌ವ್‌ಯೂ ಕೊಟ್ ಅಲುವಾಟವೇ ಇಲ್‌ದೇ ಹೋಗಿದೆ. ![]()
ನೋಡುಮ...! ಈಗಲಿಂದಲೇ ಉಳಿತಾಯ ಹೆಚ್ಚಿಸಬೇಕು.!! ಕಾರ್ ಪೆಟ್ರೋಲ್ಗಿರಲಿ, ಆಮೇಲೆ ಬಸ್ ಚಾರ್ಚುಗೂ ಕಶ್ಟ ಆದ್ರೆ ಕಶ್ಟ.!

- Login or register to post comments
- 394 hits
- Email this forum





RSS:
ಉ: ಐಟಿಗರ ಕೆಲಸಗಳಿಗೆ ಕುತ್ತು
ಏನು ಮಾಡೋದು ಮಹೇಶ್, ನಾವು ಅಷ್ಟು ಅವಲಂಬಿಸಿದ್ದೇವೆ ಅವರ ಮೇಲೆ.. ನಮ್ಮಲ್ಲಿ ಇಷ್ಟು ಕಂಪನಿಗಳು ಇದ್ರೂ, ಪ್ರಾಜೆಕ್ಟ್ಸ್ ಎಲ್ಲ ಅವರದ್ದೇ
-ವರುಣ ಭಟ್
ಉ: ಐಟಿಗರ ಕೆಲಸಗಳಿಗೆ ಕುತ್ತು
ಸ್ಸಾರಿ.. ತಪ್ಪು ವಾಕ್ಯ ಬರೆದಿದ್ದಕ್ಕೆ...
"ನಾವು ಅವರನ್ನು ಅವಲಂಬಿಸಿದ್ದೇವೆ" ಅಥವ "ನಾವು ಅವಲಂಬಿತರಾಗಿದ್ದೇವೆ ಅವರ ಮೇಲೆ"
-ವರುಣ ಭಟ್
ಉ: ಐಟಿಗರ ಕೆಲಸಗಳಿಗೆ ಕುತ್ತು
ಹಿಂಗದ್ಬುಟ್ರೆ ಹೆಂಗ್ ಮಹೇಸಣ್ಣ...
ಇವಾಗಾಗ್ಲೆ ದಿಗಿಲ್ಬಿದ್ದಿರೋರ್ ಮೇಲೆ ಸತ್ತ ಹಾವು ಹಾಕ್ತಿದ್ದೀಯಲ್ಲಾ ನೀನು. ಇದೇನ್ ಸರಿ ಅಲ್ಲ ಕಣಣಾ..
http://amerikadimdaravi.blogspot.com/2008/03/blog-post_20.html
ಹೋದ ಸನಿವಾರ ಈ ಲೇಖನ ಬರೀವಾಗ ನನ್ನ ಎದೆ ದಬದಬ ಅಂತ ಒಂದೇ ಸಮ ಬಡ್ಕೊಂತ ಇತ್ತು. ಕಿವಿಗೆ ಹತ್ತಿ ಇಟ್‍ಕಂಡ್ ಬರ್‍ದೆ. ಹಂಗೆ ನಮ್ಮನೆದೇವ್ರು ತಿರುಪತಿ ತಿಮ್ಮಪ್ಪನ್ನ, ಊರ್‍ದೇವ್ರು ಈಸ್ವರನ್ನ ಬಾಳ ನೆನಸ್ಕೊಂಡೆ.
ನಾಲ್ಕೈದು ದಿನ ಆಯ್ತು. ಇನ್ನೇನು ದಿಗಿಲ್ ಬಿಡ್ತು ಅಂದ್ಕೊಂಡೆ. ಅಸ್ಟರಲ್ಲಿ ಮತ್ತೆ ಈವಾಗ ನೀನು ಬರೆದಿರೋದ್ ಓದಿ ಕೈಕಾಲ್ ಎಲ್ಲ ಬಿದ್ದೋಗದೆ. ಬೆರಳ್ ಮಾತ್ರ ಕೀಬೋರ್ಡ್ ಕುಟ್ಟೊ ಅಸ್ಟು ಕೆಲ್ಸ ಮಾಡ್ತಾ ಐತೆ. ಅಲ್ಲ ಹಿಂಗ್ ಮನಸ್‍ಗ್ ದಿಗಿಲಾದರೆ ಮೈಗೇನಾಯ್ತು ಅಂತೀನಿ. ಏನ್ ಮನಸೊ, ಏನ್ ಮೈಯ್ಯೊ, ಹೋಗಪ್ಪ ನಂಗೇನು ಅರ್ಥ ಆಗಲ್ಲ. ಮತ್ತ್ ನಮ್ ಮನೆದೇವ್ರನ್ನ, ಊರ್ದೇವ್ರುನ ನೆನಸ್ಕೊಂಡ್ ಹಂಗೆ ರೆಷ್ಟ್ ತಗೊಂತೀನಿ. ಅದೆನೊ ದ್ಯಾನ ಅಂತಾರಲ್ಲ ಅದಾದ್ರು ಮಾಡ್ಕೊತೀನಿ.
ಉ: ಐಟಿಗರ ಕೆಲಸಗಳಿಗೆ ಕುತ್ತು
ನನ್ ಹೆಸರನ್ನ ಮಯೇಸ/ಮಾಯ್ಸ ಅಂತ ಅನ್ನಿ ದ್ವಾವರು!!...
ನೀವ್ ತಿರುಪತಿ ತಿಮ್ಮಪ್ಪನ್ನ, ಈಸ್ವರನ್ನ, ಆ ದ್ವಾವರನ್ನ, ಈ ದ್ವಾವರನ್ನೆಲ್ಲ ಒಳ್ಳೆ ’ಬಕ್ತ-ರವಿರೆಡ್ಡಿ’ ಸಿನಿಮ ಡಯಿಲಾಗಂಗೆ ಬರೆದೀರಂಡಿ...
ಇರಲಿ... ಆಗೋದು ಒಳ್ಳೇದಕ್ಕೆ ಅಂತ ಇರೋದು ಇಲ್ವೇ ಆಗೋದು, ಇರೋದು, ಬರೋದುಗಳಿಗೆಲ್ಲ ಮೀನಿಂಗಿಲ್ಲ.. ಅಂತ ನಂಬಿರೋನ್ ನಾನು.
ಉ: ಐಟಿಗರ ಕೆಲಸಗಳಿಗೆ ಕುತ್ತು
ಒಂದು ಮಾತು ಹೇಳ್ತೀನಿ ದಯವಿಟ್ಟು ಐಟಿಗರು ತಪ್ಪು ತಿಳಿಯಬೇಡಿ
ಈ ವಿಷಯ ಕೇಳಿ ನನ್ಗೆ ಖುಶಿಯಾಗ್ತಿದೆ. (ನಾನೂ ಐಟಿಯನ್ನೇ ಅವಲಂಬಿಸಿದೇನೆ ಆದರೂ )
ನಮ್ಮ ಕಡೆಯ ಸೈಟ್ ರೇಟ್ ಕಡಿಮೆಯಾಗುತ್ತೆ( ಯಾಕೆಂದರೆ ನಾವ್ ಸೈಟ್ ತಗೊಳೊದು ಕಡಿಮೆ ಮಾಡ್ತೇವೆ (ನಿಲ್ಲಿಸೇ ಬಿಡ್ತೀವಿ))
ಬಾಡಿಗೆ ರೇಟ್ ಕಡಿಮೆಯಾಗುತ್ತೆ (ಈಗ ಐಟಿಗರು ಕೇಳಿದಷ್ಟಕಿಂತ ಜಾಸ್ತಿ ಬಾಡಿಗೆ ಕೊಟ್ಟು ಮನೆಗೆ ಬರ್ತಾರೆ, ಇನ್ನು ಮುಂದೆ?)
ಎಲ್ಲಾ ಜನರ ಜೀವನ ಶೈಲಿ ಏಕ ಮಟ್ಟಕ್ಕೆ ಬರುತ್ತದೆ( ಏಕೆಂದರೆ ನಾವು ಗಾಡಿಗಳನ್ನು ಬಳಸೋದಿಲ್ಲ ಆಗ, ವಿಧವಿಧ ಬಟ್ಟೆ ಧರಿಸಿ ಎಲ್ಲರ ಮುಂದೆ ಮೆರೆಯೋದಿಲ್ಲ)
ಏಕೆಂದರೆ ನಮಗೆ ಐಟಿ ಎಷ್ಟು ಸಹಾಯ ಮಾಡಿದೆಯೋ ಒಂದು ವರ್ಗಕ್ಕೆ ( ಈ ಐಟಿಗೂ ಬರಲಾರದೆ, ತಮ್ಮ ಈಗಿನ ಕೆಲಸದಲ್ಲಿ ಒದ್ದಾಡುವವರಿಗೆ)
ಬಹಳ ತೊಂದರೆಯುಂಟು ಮಾಡಿದೆ. ಅವರಿಗೆ ನೆಮ್ಮದಿಯಿಂದ ಇರಲು ಅವರ ರೇಂಜ್‌ನಲ್ಲಿ ಈಗಿನ ಯಾವದೇ ದಿನನಿತ್ಯದ ಅಗತ್ಯತೆ ಗಳನ್ನು ಪೂರೈಸಿಕೊಳ್ಳಲು ಆಗುತ್ತಿಲ್ಲ.) ಅಟ್ ಲೀಸ್ಟ್ ಇದರಿಂದ ಆದರೂ ಅವರು ಮತ್ತೆ ಸಹಜ ಗತಿಗೆ ಬರಬಹುದು.
ಅಫ್ ಕೊರ್ಸ್ ನಾನು ಮನೆಗೆ ಮಾರಿ ಪರರಿಗೆ ಉಪಕಾರಿ ಏನಲ್ಲ.
ನನಗೂ ಸೆಕ್ಯೂರಿಟಿ ಪ್ಫಿಯರ್ ಇದ್ದೇ ಇದೆ
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ
ಉ: ಐಟಿಗರ ಕೆಲಸಗಳಿಗೆ ಕುತ್ತು
ಇದೊಂದು ರೀತಿ ನಿಜ, ಹೌದು.
ಸಾಫ್ಟ್ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ದೂರದ ದೇಶಗಳಿಗೆ ವಿಮಾನ ಕೆಲಸದ ನಿಮಿತ್ತ ಹತ್ತಿದ್ದು ಕೂಡ ಇಲ್ಲಿ ಮಧ್ಯಮ ವರ್ಗದ ಸಂಸಾರಗಳಲ್ಲಿ ಏನೇನೋ ಆಲೋಚಿಸಿಲ್ಲದ ಬದಲಾವಣೆಗಳನ್ನು ತಂದಿಟ್ಟುಬಿಡುತ್ತೆ.
ಇನ್ನು ಕೆಲವೊಮ್ಮೆ ನನಗೆ ನಾವು ಐ ಟಿ ಯನ್ನು ಅವಲಂಬಿಸಿದ್ದೇವೋ ಅಥವ ಅಮೇರಿಕವನ್ನು ಅವಲಂಬಿಸಿದ್ದೇವೋ ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ. ಇದು ಸ್ಲೋ ಡೌನ್ ಅಲ್ಲ, ಸ್ವಲ್ಪ ನಿಂತು ಅವಲೋಕಿಸಿ ಮುಂದೆ ಹೋಗುವ ಹಾಗೂ ಹೊಸತನ್ನು ಕಂಡುಕೊಳ್ಳುವ ಒಂದು ಅವಕಾಶ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಐಟಿಗರ ಕೆಲಸಗಳಿಗೆ ಕುತ್ತು
ಮಾಯ್ಸ,
:)
ಈ ತೆರ ಆಗ್ತ ಇರೋದು ಇದು ಮೊದಲಲ್ಲ. ಇನ್ನು ಮುಂದೆ ಹೋಗ್ತ ಇವೆಲ್ಲ ಕಾಮನ್ನು. ತಲೆಕೆಡಿಸಿಕೊಳ್ಳಬೇಡ.
ತಮಾಸೆಗೆ,
ಏನಾರ ಎಡವಟ್ಟಾದ್ರೆ, ನಮ್ ಕನ್ನಡ ಸಿನಿಮಾಗಳು ಚೆನ್ನಾಗಿ ಓಡ್ತಾವೆ. ಅಲ್ಲೆ ಹಾಡು-ಗೀಡು ಬರ್ಕಂಡ್ ಹೊಟ್ಟೆಪಾಡು ಮಾಡ್ಕಂಡ್ ಇರ್ಬೋದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು