ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಓಂಶಿವ ಮತ್ತು ಹರಿ ಫೈರ್ಫಾಕ್ಸ್ ೩ರಲ್ಲಿ ಚೆನ್ನಾಗಿ ಕನ್ನಡ ಕಾಣಿಸುತ್ತದೆ ಎಂದಮೇಲೆ, ನೋಡೋಣ ಅಂತ ನೆನ್ನೆ ನನ್ನ ಸಿಸ್ಟಮಿನಲ್ಲಿ ಕೂರಿಸಿದೆ. ಆದರೆ ಏನಾಯಿತೆಂದರೆ, ಇಷ್ಟು ದಿನ ಫೈರ್ಫಾಕ್ಸ್ ೨ರಲ್ಲಿ ಚೆನ್ನಾಗಿಯೇ ಮೂಡುತ್ತಿದ್ದ ಅಕ್ಷರಗಳಿಗೆ ಬದಲಾಗಿ ದಪ್ಪದಪ್ಪವಾದ ಅಕ್ಷರಗಳು ಮೂಡಲು ಶುರುವಾಯಿತು. ಅದರ ಒಂದು ಸಾಂಪಲ್ ಇಲ್ಲಿ ಹಾಕುತ್ತಿದ್ದೇನೆ. ಇದು ನಿಮಗೆ ಯಾರಿಗಾದರೂ ಗಮನಕ್ಕೆ ಬಂದಿದೆಯೇ ?
ಫೈರ್ಫಾಕ್ಸ್ ೩ಕ್ಕಿಂತ ೨ರಲ್ಲಿಯೇ ಚೆನ್ನಾಗಿ ಕನ್ನಡ ಅಕ್ಷರಗಳು ಮೂಡುತ್ತಿದ್ದವಾದ್ದರಿಂದ ಸದ್ಯಕ್ಕೆ ಫೈರ್ಫಾಕ್ಸ್ ೩ಅನ್ನು ಮೂಲೆಗೆ ತಳ್ಳಿದ್ದೇನೆ.
- Login or register to post comments
- 797 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಏನಿಲ್ಲ ಫಾಂಟ್ಸ್ ಬದಲಾಗಿವೆ ಅಷ್ಟೇ! (ಇದನ್ನು firefoxನಲ್ಲಿ Tools -> Options -> Content -> Fonts & Colorsನಲ್ಲಿ ಸರಿಯಾಗಿ configure ಮಾಡಿ ಸರಿಪಡಿಸಬಹುದು).
ಜೊತೆಗೆ anti-alias ಆಗಿವೆ ಅಕ್ಷರಗಳು! ನಿನ್ನ ಲ್ಯಾಪ್ ಟಾಪ್ ಅಥವ ಎಲ್ ಸಿ ಡಿ ಯಲ್ಲಿ clear-type tuner ಬಳಸಿ ಸರಿಮಾಡ್ಕೊ ಸುನೀಲ. ಇದು ಫೈರ್ ಫಾಕ್ಸ್ ತೊಂದರೆಯಲ್ಲ :-)
firefox 3 betaನಲ್ಲಿ ಆಗಿರುವುದು ಏನಂದ್ರೆ - ಈಗ ವಿಸ್ತ ಅಥವ ವಿಂಡೋಸ್ ಎಕ್ಸ್ ಪಿ ಯಲ್ಲಿರುವ ಯೂನಿಸ್ಕ್ರೈಬ್ API ಗಳನ್ನು ಬಳಸತ್ತೆ. ಮುಂಚೆ ತನ್ನದೇ ಕೋಡ್ ಬಳಸುತ್ತಿತ್ತು. ನಿಮಗಿದು ಗೊತ್ತಲ್ಲ ಸಾರ್! ನೀವೂ ಅದನ್ನ follow ಮಾಡ್ತಾ ಇದ್ರಲ್ಲ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ನೋಡು, ಎಲ್ಲ ಸರಿಯಾಗಿಯೇ ಇದೆ. ವಿಂಡೋಸ್ ಎಕ್ಸ್ ಪಿಯಲ್ಲಿ ಈಗ ತಾನೆ ತೆಗೆದ screenshots ಇಲ್ಲಿವೆ:
http://sampada.net/f...
http://sampada.net/f...
:)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಇವಾವುದೂ ನನಗೆ ಅರ್ಥವಾಗವು. ಆದರೆ ನಾನು ಇತ್ತೀಚಿನವರೆಗೂ ಬಳಸುತ್ತಿದ್ದ IE ಗಿಂತಲೂ firefox 3 ಚೆನ್ನಾಗಿದೆ. ನಲವತ್ನಾಲ್ಕು ಆಯ್ತಲ್ಲ, ಅದಕ್ಕೇ ನನ್ನ ಕಣ್ಣಿಗೆ ಈ ಅಕ್ಷರಗಳು ಹಿತವೆನಿಸುತ್ತವೆ. ಅಲ್ಲದೆ ಇವು ಸಂಪದಕ್ಕೆ ಹೇಳಿ ಮಾಡಿಸಿದಂತಿವೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಯಪ್ಪಾ, ನಲವತ್ನಾಲ್ಕು!!! ಒಂದು ಎರಡು ಆಗೋದೇ ಕಷ್ಟ ಈ ಜಗತ್ನಲ್ಲಿ, ಅಂಥದ್ರಲ್ಲಿ ;) <ಸುಮ್ಮನೆ ಕಾಲೆಳೆದೆ>
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಹರಿ, ಮಜ್ಜಾ ಏನು ಗೊತ್ತಾ. ಫೈರ್ಫಾಕ್ಸ್೩ ಇನಿಸಟಾಲ್ ಮಾಡಿದಾಕ್ಷಣ ಸಂಪದ ನೋಡಿದೆ. "ಸಂಪದ" ಸಖತ್ತಾಗಿ ಬರ್ತಾ ಇತ್ತು. ಜೀಮೇಯ್ಲಿನಿಂದ ಒಂದು ಮೇಯ್ಲ್ ಕಳಿಸೋಣ ಅಂತ ಜಿಮೇಯ್ಲ್ ತೆಗೆದಾಗ ಆಶ್ಚರ್ಯ ಆಯ್ತು. ಕನ್ನಡದ ಅಕ್ಷರಗಳು ಕೊಚ್ಚಂಬಿಚ್ಚಿ ಆಗಿತ್ತು. ಇದು ಫೈರ್ಫಾಕ್ಸ್ ಸಮಸ್ಯೆ ಅಲ್ಲ ಅಂತ ತಿಳಿದಿತ್ತಾದರೂ, "ಈ ತರಹದ ಸಮಸ್ಯೆ ಎದುರಿಸಿದವರು ಫೈರ್ಫಾಕ್ಸಿನಲ್ಲಿ ಏನೋ ತೊಂದರೆ ಇದೆ", ಅಂದುಕೊಂಡುಬಿಡಬಹುದು ಅಂತ ನಾನೇ ಸುಮ್ಮನೆ ಒಂದು ಬ್ಲಾಗ್ ಮಾಡಿ, ಚಮಕ್ ನೀಡಿದೆ. ಅಷ್ಟೇ.
ಉ: ಫೈರ್ಫಾಕ್ಸ್ ಬ್ರೌಸರಿನಲ್ಲಿ ಕನ್ನಡ ಅಕ್ಷರಗಳು
ಲೋ.. ಇದೇನೊ ಹಿಂಗಂತೀಯ..
ನನ್ ಗೆಳೆಯನ ವಿಸ್ತದಾಗೆ ಅಯ್.ಈಲಿ ಕನ್ನಡ ಟಯಿಪಕ್ಕೆ ಆಯ್ತಿರಲಿಲ್ಲ.. ಆದ್ರೆ ಈ ಬೆಂಕಿನರಿ-ಮೂರು-ಬೀಟಾದಾಗೆ ಆಯ್ತಯ್ತೆ....
ಹೆಂಗೆ ಸೂಪರಲ್ವ!