'ಗಡಿ’ ಮೀರುವ ಭಾಷೆಗಳ ಪ್ರಭಾವ - ಎಂಬ ವಿಕದ ಎಡವಟ್ಟಿನ ಅಂಕಣ
ಡೇಟ್ ಶನಿವಾರ ೨೨ ಮಾರ್‍ಚಿ ೨೦೦೮, ಪೇಜ್ ೯, ವಿಜಯ ಕರ್ನಾಟಕದಲ್ಲೊಂದು 'ಗಡಿ’ ಮೀರುವ ಭಾಷೆಗಳ ಪ್ರಬಾವ ಎಂಬ ಕಿರುಬರಹ ಬಂದಿದೆ.
ಅದರಲ್ಲಿ ಬರೀ ಎಡವಟ್ಟುಗಳೇ ಇವೆ..
ಬರಹದ ತಿರುಳು
೧) ಮೊದಲು ಪಂಚದ್ರಾವಿಡ-ಬಾಶೆಗಳೆಂದು ತಮಿಳು, ಮಳಯಾಳಿ, ತೆಲುಗು, ಕನ್ನಡ ಮತ್ತು ತುಳುವನ್ನು ಪಟ್ಟಿ ಮಾಡಿರುವುದು
೨) ದ್ರಾವಿಡರು ಆರ್ಯರ ದಾಳಿಗೆ ಒಳಗಾಗಿ ಬಡಗಿನಿಂತ ತೆಂಕಿಗೆ ವಲಸೆ ಬಂದು ಗುಂಪುಗಾದವು
೩) ದ್ರಾವಿಡ ಗುಂಪಿನಲ್ಲಿ ಒಟ್ಟು ೭೨ ಬಾಶೆಗಳು. ೩೧ ಸೊತಂತ್ರ ಮತ್ತು ೪೨ ಉಪ.
೪) ತೆಲುಗು ಬಾಶೆಯಿಂದ ಕನ್ನಡದ ಮೇಲೆ ಪ್ರಬಾವಕ್ಕೆ ಒತ್ತು.. ಅದನ್ನು ತೋರಿಸಲು ಗಡಿನೆಲದಲ್ಲಿ ಬಳಕೆಯಿರುವ ದೋಸಕಾಯಿ(ಸವ್ತೇಕಾಯಿ), ಉರ್‍ಲಗಡ್ಡಲು(ಆಲೂಗಡ್ಡೆ), ಚೇಪೇಕಾಯಿ(ಸೀಬೇಕಾಯಿ), ಎಮುಕೆ(ಮೂಳೆ), ಟೆಂಕಕಾಯಿ(ತೆಂಗಿನಕಾಯಿ), ತಿರುಗ ಬರ್‍ತೀನಿ(ತಿರುಗಿವಸ್ತಾನು) ಹೀಗೆ ಕೆಲಬಳಕೆಗಳು ಪಟ್ಟಿ. ಆದುದರಿಂದ ಕನ್ನಡವು ತೆಲುಗಿನಿಂದ ಸಿಕ್ಕಾಪಟ್ಟೆ ಪ್ರಬಾವಗೊಂಡಿದೆ ಎಂದು ತೋರಿ, ಅದನ್ನೇ ಗಡಿ ಮೀರುವುದೆಂದು ಹೇಳಿರುವುದು.
ಎಡವಟ್ಟುಗಳು
೧) ಪಂಚದ್ರಾವಿಡಬಾಶೆ(ಅಯ್ದು ನುಡಿಗಳು) ಎಂಬುದು ತಪ್ಪುತಿಳಿವಳಿಕೆ. ಅದು ಸಕ್ಕದ ಪಂಡಿತರ ಕಲ್ಪನೆ. ಇದಕ್ಕೆ ಪಾಯಿಂಟ್ ೨ರಲ್ಲಿ ಹೇಳಿರುವಂತೆ ಒಟ್ಟು ೭೨ ದ್ರಾವಿಡನುಡಿಗಳು ಎಂಬುದು ವಿರೋದ.
ಕನ್ನಡ, ಮಳಯಾಳಿ, ತಮಿಳು, ಕೊಡವ ಮುಂತಾದವು south-Dravidian ಆದರೆ
ತೆಲುಗು, ಗೊಂಡ - central Dravidian.
ತುಳು ಬಗ್ಗೆ ದೊಡ್ಡ ಗೊಂದಲ, ಅದು south ಮತ್ತು central ಎರಡರ ಗುಣಗಳನ್ನು ಹೊಂದಿದ್ದು, ’ತುಳು’ ಮಂದಿ ತಡವಾಗಿ ತೆಂಕಣಕ್ಕೆ ಬಂದರು ಮಾತಿಗೆ ಕಾರಣವಾಗಿದೆ(ಊಹೆ.. ದಿಟವೆಂದಲ್ಲ).
೨)ಆರ್ಯರ ದಾಳಿ, ದ್ರಾವಿಡ-ಆರ್ಯ ಜನಾಂಗ ಈ ತಿಯರಿ, ಬಿದ್ದು ಹೋಗಿ ಯಾವ ರಾಯನ ಕಾಲವಾಗಿದೆ. ಈ ರೇಸ್-ವಾದ ಇಂದು ಒಪ್ಪುವರು ಬಲು ಕಡಮೆ. ಬೆನಕರು ಇದನ್ನೇ ಬಲವಾಗಿ ವಿರೋದ ಮಾಡಿ ಬರಹಗಳನ್ನು, ಕಮೆಂಟುಗಳನ್ನು ಬರೆದಿದ್ದಾರೆ.
೩) ಇದು ಮೊದಲನೆ ಅಂಶಕ್ಕೆ ಎದುರು
೪) ಇನ್ನು ಪದಗಳ ಎರವಲು.. ಹೆಸರುಗಳು ಎಂದೂ ಎರವಲು ಆಗೇ ಆಗುವವು.. ಕನ್ನಡದಲ್ಲಿ ಇಂಗ್ಲೀಸ್ ಬಸ್ಸು, ಕಾರು ಇದೆ ಅಂತ ಕನ್ನಡ ಇಂಗ್ಲೀಸ್ ಜೊತೆ ಪ್ರಬಾವದಿಂದ, ಇಲ್ಲವೇ ಗಡಿ ಮೀರಿದ ಸಾಮರಸ್ಯದಿಂದಿದೆ ಎಂದಲ್ಲ...
ಅದೂ ಅಲ್ಲದೆ ದ್ರಾವಿಡಪದಗಳು ಎಲ್ಲಾ ದ್ರಾವಿಡನುಡಿಗಳಿಗೆ ಸೇರಿದವು.. ತಡಗುಣಿ ಕಾಳು ( ಮಂಡ್ಯದಲ್ಲಿ ) ಅಲಸಂದೆ ಹೆಚ್ಚಿನೆಡೆ, ಅಂದ ಕೂಡಲೆ, ತಡಗುಣಿ ಬೇರೆ ನುಡಿಯದು ಎಂದಲ್ಲ...
ಮಾದರಿ: ’ಕುಡಿ’ ತಮಿಳಲ್ಲೂ, ಕನ್ನಡದಲ್ಲೂ ಎರಡರಲ್ಲೂ ಒಂದೇ ಕುಡಿತ. ಅದಕ್ಕೆ ಆ ಒರೆ ಎರಡು ನುಡಿಗೂ, ಹಾಗು ಬೇರೆ ದ್ರಾವಿಡನುಡಿಗಳಿಗೂ ಸೇರಿದುದು. ಇಲ್ಲಿ ತಮಿಳಿನ ಪ್ರಬಾವ ಕನ್ನಡ ಮೇಲೂ, ಕನ್ನಡದ ಪ್ರಬಾವ ತಮಿಳ ಮೇಲಿದೆ ಅನ್ನೋದು ತಪ್ಪು.
ಆಲೂ ಇದು ಕನ್ನಡದ ಪದವಲ್ಲ....
ಹಾಗೆ ಎಶ್ಟೋ ಪದಗಳ ಬಗ್ಗೆ ತಪ್ಪು ಅರಿಕೆ ಇವೆ.
ಎಮುಕೆ
839 Ta. elumpu, eṉpu
839 Ta. elumpu, eṉpu bone; eṟpu-ccaṭṭakam body (lit. cage made of bones). Ma. ellu, elumpu, eluṅku, eluvu, elpu bone. Ko. elv id. To. e&lstroketod;f id.; kïṯ e&lstroketod;f ankle (for kïṯ- small, see 1594); pïḏ-es̱p heel (pïḏ- behind, 4205). Ka. elu, eluvu, elubu, iluvu, emike, emake, (PBh.) elvu bone; (Hav.) elugu id. Koḍ. elïmbï id. Tu. elu id. Kor. (M.) elkaḷi, (T.) elkade id. Te. emmu, emmuka, emuka id.; makkelu bones. / Cf. Skt. eḍū˘ka-, BHS eluka- monument containing the ashes or bones of a dead person. DED(S) 714.
ಎಮುಕ, ಕನ್ನಡದಲ್ಲಿ ಎಲು/ಎಲುವು/ಎಲುಬು/ಇಲುವು/ಎಮಿಕೆ/ಎಮಕೆ ರೂಪದಲ್ಲಿದೆ.. ಇಲ್ಲಿ ಎಮುಕೆ ಬರೀ ತೆಲುಗಿನದು ಹೇಗಾಯ್ತು...
ಇನ್ನು ತಿರುಗಿ ಬರ್ತೀನಿ ಹೆಚ್ಚು ಕನ್ನಡಿಗರು ಬಳಸುವರು... ವಸ್ತಾನು, ರಂಡಿ ಅಂತ ಕ್ರಿಯಾರೂಪಗಳು ಮಾತ್ರ ತೆಲುಗಿನದು ಎಂದು ಹೇಳಬೋದು ಹೊರತು, ವಸ್ತಾನು, ರಂಡಿಯ ಬೇರಾದ ’ವರ್/ಬರ್’ ಅನ್ನು ಅಲ್ಲ...!!
ಈ ಬರಹದಲ್ಲಿ ಆರಯ್ಯುವಿನ ಕೊರತೆ ಎದ್ದು ಕಾಣುವುದು..
ವಿಕ ಯಾಕೆ ಇಂತಹ ಬರಹಗಳನ್ನು ಹೊರತರುವುದೋ ತಿಳಿಯದು. ಹೊಣೆ!!!$!!

- Login or register to post comments
- 479 hits
- Email this forum





RSS:
ಉ: 'ಗಡಿ’ ಮೀರುವ ಭಾಷೆಗಳ ಪ್ರಭಾವ - ಎಂಬ ವಿಕದ ಎಡವಟ್ಟಿನ ಅಂಕಣ
ನಾನೆಲ್ಲೋ ತುಂಬಾ ಹಿಂದುಳಿದು ಬಿಟ್ಟಿದ್ದೀನಿ. ಒಂದೆರಡು ಒಳ್ಳೆಯ ನಂಬಬಹುದಾದ ಲಿಂಕ್ ಹಾಕಿರಿ... ಓದಿ ಎಚ್ಚೆತ್ತುಕೊಳ್ತೀನಿ. ನಿಮಗೂ ಒಳ್ಳೆಯದಾಗತ್ತೆ.
ಉ: 'ಗಡಿ’ ಮೀರುವ ಭಾಷೆಗಳ ಪ್ರಭಾವ - ಎಂಬ ವಿಕದ ಎಡವಟ್ಟಿನ ಅಂಕಣ
ಇದ್ಯಾವ್ದು ಲೇಖನ, ಒಂದು ಜೆಪೆಗ್ ಅಥವಾ ಕೊಂಡಿ ಹಾಕಿ ಸ್ವಾಮೀ? ಒಂದು ಸಲ ಓದೋಣ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: 'ಗಡಿ’ ಮೀರುವ ಭಾಷೆಗಳ ಪ್ರಭಾವ - ಎಂಬ ವಿಕದ ಎಡವಟ್ಟಿನ ಅಂಕಣ
ಮನ್ನಿಸಿರಿ...
ಪೇಜು ೧೫ರಲ್ಲಿ ಆ ಬರಹ