ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
ನಂಗೆ
ಅಡ್ರೆಸ್ ಬಾರ್‌ನಲ್ಲಿ
ಸಂಪದ.ನೆಟ್ ಅಂತ ಕೀಲಿಸಿದರೆ ಸಂಪದಕ್ಕೆ ಬರಬೇಕು ಎಂದು ಆಸೆ . ಅದು ಹೇಗೆ ಅಂತ ಹೇಳ್ತೀರಾ ಬಲ್ಲವರು?
ರೂಪ

- Login or register to post comments
- 471 hits
- Email this forum



ನಂಗೆ
ಅಡ್ರೆಸ್ ಬಾರ್‌ನಲ್ಲಿ
ಸಂಪದ.ನೆಟ್ ಅಂತ ಕೀಲಿಸಿದರೆ ಸಂಪದಕ್ಕೆ ಬರಬೇಕು ಎಂದು ಆಸೆ . ಅದು ಹೇಗೆ ಅಂತ ಹೇಳ್ತೀರಾ ಬಲ್ಲವರು?
ರೂಪ




ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
ಸದ್ಯಕ್ಕೆ ಒಂದು ರೀತಿಯಲ್ಲಿ ಸಾಧ್ಯ ಇದು: ಫೈರ್ ಫಾಕ್ಸ್ ೩ ಬೀಟ ಡೌನ್ಲೋಡ್ ಮಾಡಿಕೊಳ್ಳಿ.
ಮೊದಲನೆಯ ಸಾರಿ ನೀವು sampada.net ಎಂದೇ ಟೈಪ್ ಮಾಡಬೇಕು. ತದನಂತರ "ಸ... ಎಂದು ಟೈಪ್ ಮಾಡುತ್ತಿದ್ದಂತೆಯೇ ಸಂಪದ ಆಯ್ಕೆ ತೋರಿಸುತ್ತದೆ. ಸೆಲೆಕ್ಟ್ ಮಾಡಿ ಎಂಟರ್ ಪ್ರೆಸ್ ಮಾಡಬಹುದು ಸುಲಭವಾಗಿ.
ಇದಲ್ಲದೆ ಇಷ್ಟು ದಿನ %E%F%A3 ಎಂದೆಲ್ಲ ಬರುತ್ತಿತ್ತಲ್ಲ ಅಡ್ರೆಸ್ ಬಾರ್ ನಲ್ಲಿ (ವಿಕಿಪೀಡಿಯ ಲೇಖನಗಳನ್ನು ನೋಡಿದವರಿಗೆ ಗೊತ್ತಿರತ್ತೆ), ಅದು ಈಗ ಕನ್ನಡದಲ್ಲೇ ಕಾಣಸಿಗುವುದು!
ಇನ್ನು ನೇರ ಕನ್ನಡದಲ್ಲಿಯೇ ಡೊಮೈನ್ ಹೆಸರುಗಳು (URLs) ಬರುವ ದಿನ ಸ್ವಲ್ಪ ದೂರವಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
ಸಂಪದವನ್ನು ನಿಮ್ಮ ಬುಕ್-ಮಾರ್ಕ್ ಪಟ್ಟಿಯಲ್ಲಿ ಸೇರಿಸಿ. ನಂತರ bookmark ಮೆನುವಿನಲ್ಲಿ ಸಂಪದ ಪುಟದ ಮೇಲೆ right click ಮಾಡಿ->properties ಹೋಗಿ. keyword ಅಂತ ಒಂದು ಅವಕಾಶ ಸಿಗುತ್ತೆ. ಅಲ್ಲಿ ಸಂಪದ ಅಂತ ಬರೀರಿ. ಮುಂದೆ ನೀವು ಸಂಪದ ಅಂತ ಬರೆದ್ರೆ sampada.netಗೆ ಹೋಗುತ್ತೆ.
ಉ: ಅಡ್ರೆಸ್ ಬಾರ್‌ನಲ್ಲಿ ಕನ್ನಡ ಕೀಲಿಸುವುದು ಹೇಗೆ?
ಒಳ್ಳೇ ಅಯ್ಡಿಯ ರಮ್ಯ...
ನನ್ನಿ..
ಆದ್ರೆ ರೂಪ ಕೇಳಿದ್ದು.. ಎಲ್ಲ ಬ್ರವ್ಸರ್ ಅಲ್ಲೂ ’ಸಂಪದ.ನೆಟ್’ ಅಂತ ಟಯಿಪಿದ್ರೆ ಹೆಂಗೆ ಅಂತ.. ಅದಕ್ಕೆ ಹರಿ ಹೇಳಿದ ಕನ್ನಡದಲ್ಲಿ ಡೊಮಯಿನ್-ನೇಮ್ ಸಂಗತಿ.