ಇದನ್ನು ಸ್ವಲ್ಪ ಬಿಡಿಸಿ ಹೇಳಬೇಕು. "hack ಮಾಡಲು" ಅಂದರೆ ಲಿನಕ್ಸ್ ಉಪಯೋಗಿಸಿ ಬೇರೆ systemಗಳನ್ನು hack ಮಾಡಲು ಸುಲಭವೋ ಅಥವಾ ಲಿನಕ್ಸನ್ನೇ hack ಮಾಡುವುದು ಸುಲಭ ಅಂತ ನಿಮ್ಮ ಅಭಿಪ್ರಾಯವೋ - ದಯವಿಟ್ಟು ತಿಳಿಸಿ. ನಾನು ಇಲ್ಲಿಯವರೆಗೆ ಓದಿ ತಿಳಿದ ಪ್ರಕಾರ ಲಿನಕ್ಸ್ ಅನ್ನು hack ಮಾಡುವುದು ಸುಲಭವಲ್ಲ - ಆದರೆ ನಾನು ಪರಿಣಿತನೂ ಅಲ್ಲ. ತಪ್ಪಿದ್ದರೆ ಸರಿ ಪಡಿಸಿಕೊಳ್ಳಬೇಕು. ಉಳಿದ ಲಿನಕ್ಸ್ ಪರಿಣಿತರು ಏನನ್ನುತ್ತಾರೆ?
ಮೂರ್ತಿಯವರೇ,
ನೀವು ಅಂದುಕೊಂಡಿರುವ 'hack' ಗೂ, hack ನ ನಿಜವಾದ ಅರ್ಥಕ್ಕೂ ವ್ಯತ್ಯಾಸ ಇದೆ. hack ಅಂದರೆ ಬೇಗ (ಅಷ್ಟೇನೂ ಚೆನ್ನಾಗಿಲ್ಲದ) code ಬರೆಯುವುದು / ಮಾರ್ಪಾಡು ಮಾಡುವುದು. ಬೇರೆ ಸಿಸ್ಟಂಗಳನ್ನು ಹಾಳುಮಾಡುವುದು ಹ್ಯಾಕಿಂಗ್ ಅಲ್ಲ. ಅದಕ್ಕೆ cracking ಅಂತಾರೆ.
ಪವನ್ ಅವರು ಕೊಟ್ಟ ಲಿಂಕ್ ಓದಿ!!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಶ್ರೀನಿಧಿಯವರ ವಿವರಣೆಗೆ ನನ್ನಿ. ಆದರೆ ಈ ಲೇಖನದ ಮೂಲವಾದ PCWorldನ ಲೇಖನದಲ್ಲಿ ಇದ್ದದ್ದು ನಾನು "ಅಂದುಕೊಂಡ" hack ಅಂತಲೇ ನನಗೆ ಅನ್ನಿಸುತ್ತೆ. "hacking into windows' ಅಂದರೆ ವಿಂಡೋಸ್‌ನ ಏನೋ ಒಂದು ಬಲಹೀನತೆಯ ಮುಖಾಂತರ ಆ computerನ್ನು (ಅಥವಾ ಆ OS ಅನ್ನು) ಹಿಡಿತಕ್ಕೆ ತೆಗೆದುಕೊಳ್ಳುವುದು ಅಂತ ನನಗೆ ತಿಳಿದ ಅರ್ಥ. (ಅಂತರ್ಜಾಲದ ಮುಖಾಂತರ ಬರುವ) spyware, trojan ಇವೆಲ್ಲಾ hack ಮಾಡಿಯೇ ಬರುವುದು ಅಂತ ನಾನು ತಿಳಿದಿದ್ದೇನೆ. softwareನ ಕೀ, ಪಾಸ್‌ವರ್ಡ್ ಇಲ್ಲದೇ ಕದ್ದು ಉಪಯೋಗಿಸಲು ಅಣಿ ಮಾಡುವುದು ಇವೆಲ್ಲಾ crackನ ವ್ಯಾಪ್ತಿಗೆ ಬರುತ್ತವೆ ಅಂದುಕೊಂಡಿದ್ದೆ. ಜನಬಳಕೆ (ಸಾಮಾನ್ಯರು - ಕಂಪ್ಯೂಟರ್ ತಜ್ಞರಲ್ಲ) ಯಲ್ಲಿ ಹೀಗೇ ಇದೆ ಅನ್ನಿಸುತ್ತೆ - ತಿಳಿದವರು ಏನಂತೀರಾ?
ನೀವು ಅಂದುಕೊಂಡಿದ್ದ ಹಾಗೆ PC world ನಲ್ಲಿ ಇರುವುದು ನಿಜ. ಆದ್ರೆ hack ಪದದ ಸರಿಯಾದ ಅರ್ಥ ಅದಲ್ಲ. hack ಪದ ಮೊದಲ ಬಳಕೆ ಜಾಣ್ಮೆಯ, ಬುದ್ಧಿವಂತಿಕೆಯ ಕೆಲಸಗಳಿಗೆ ಉಪಯೋಗಿಸುತ್ತಿದ್ದರು. ಆದ್ರೆ ಮಾಧ್ಯಮದವರು ಅದನ್ನು "ಗಣಕ ಯಂತ್ರದ ಬಲಹೀನತೆಯ ದುರುಪಯೋಗ " ಎನ್ನುವ ಅರ್ಥ ಬರುವಂತೆ ಬಳಸುತ್ತಿದ್ದಾರೆ. ಒಬ್ಬ ನಿಜವಾದ hacker (cracker ಅಲ್ಲ ) ಈ ಅರ್ಥವನ್ನು ಸಹಿಸಲಾರ.
ನಮ್ಮ ಸಂಪದ ಸದಸ್ಯ ವಿನಯ್ ರಾಘವನ್ ಅವರು ಆಗಾಗ hacker ಪದದ ತಪ್ಪು ಬಳಕೆಯ ಬಗ್ಗೆ TOI ಪತ್ರಿಕೆಗೆ e-mail ಕಳಿಸುತ್ತಲೇ ಇರುತ್ತಾರೆ, ಆದರೆ ಅವರ ಪ್ರತಿಕ್ರಿಯೆ ಮಾತ್ರ ಜಪ್ರಿಯ ಅರ್ಥವೇ ಸರಿ ಎನ್ನುವ ಹಾಗೆ ಇರುತ್ತದೆ.
ಹಾಗಿದ್ದರೆ ಸರಿಯಾದ ಅರ್ಥದ ಪ್ರಕಾರ hack ಮಾಡಲು ಲಿನಕ್ಸ್ ಉತ್ತಮ ಅಂದರೆ ಲಿನಕ್ಸ್ ಒಳ್ಳೆಯ OS ಅಂತ ಆಯ್ತಾ, ಇಲ್ಲ ವಿಂಡೋಸ್ಗಿಂತ ಕಳಪೆ ಅಂತ ಆಗುತ್ತಾ ನನಗೆ ಅರ್ಥ ಆಗ್ತಾ ಇಲ್ಲ :-(. ದಯವಿಟ್ಟು ಯಾರಾದರೂ ಬಿಡಿಸಿ ಹೇಳುತ್ತೀರಾ?
ನೀವು ಹ್ಯಾಕಿಂಗ್ ಗೂ, OS security ಗೂ ವ್ಯತ್ಯಾಸ ಗುರುತಿಸುತ್ತಿಲ್ಲ. security ವಿಷಯದಲ್ಲಿ ಲಿನಕ್ಸ್ ಸಾಕಷ್ಟು ಮುಂದು. ಇದರ ಬಗ್ಗೆ ಬರೆದರೆ ಇನ್ನೂ ಗೊಂದಲ ಆಗುತ್ತೇನೋ ಅಂತ ಯೋಚನೆ ನನಗೆ. ನೀವೇ ಕೆಳಗಿನ ಲಿಂಕ್ ಓದಿ.
http://www.stallman....
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ನನಗೇನೋ ವಿಷಯ ಸ್ಪಷ್ಟವಾದಂತೆ ಕಾಣುತ್ತೆ. ಇದರಲ್ಲಿ confusion ಇದ್ದದ್ದು hack ಅನ್ನುವುದರ ನಿಜವಾದ ಅರ್ಥ ಮತ್ತು ಜನಬಳಕೆಯಲ್ಲಿರುವ ಅರ್ಥಗಳ ಬಗ್ಗೆ. ಆದರೆ ನಾನು ಹೇಳಹೊರಟದ್ದು ಲಿನಕ್ಸ್ ಒಂದು (ಹೆಚ್ಚು) 'secure' OS ಅಂತ (ವಿಂಡೋಸ್‌ಗಿಂತಲೂ ಭಧ್ರ). ಆ ಹೇಳಿಕೆಗೆ ಏನೂ ವಿರೋಧವಿಲ್ಲವಲ್ಲಾ? PC World ನ ಆ ಲೇಖನದಲ್ಲೂ ಅದೇ ಅರ್ಥ ನನಗೆ ಕಂಡಿತು. :-)
ಬೇಸರಿಸದೆ ವಿಷಯವನ್ನು ಇಷ್ಟೊಂದು ವಿವರಿಸಿದ್ದಕ್ಕೆ ನನ್ನಿ.
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್
ಉ: hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್