ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ನಾನಂತೂ ಇಂತಹ ಪದ್ಯ ಕಂಡಿರಲಿಲ್ಲ, ಕೇಳಿರಲಿಲ್ಲ. ಅಲ್ಲ, ಜನ ಹೇಗೇಗೆಲ್ಲಾ ಆಟ ಆಡ್ತಾರೆ ನೋಡಿ. ಸರಿ ಇಲ್ಲಿ, ನಾನು ಒಂದಷ್ಟು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಇದ್ದೀನಿ. ಗೆದ್ದವರಿಗೆ ಒಳ್ಳೆಯ ಬಹುಮಾನ ನೀಡಲಾಗುವುದು ಅಳ(ಗ್ಯಾರೆಂಟಿ).
ಸ್ಪರ್ಧೆ ೧. ಇದರ ಅರ್ಥ ಬಿಡಿಸಬೇಕು
ಜಡೆಯಿಡುಕುಱೆಡೆಯೆಡೆಯೊಳಡಿಯಿಡುವ ಕಡಲತಡಿ
ವಿಡಿದುಡುಗಡಣದೊಡೆಯನೊಡಲೊಡಕು ನಡನಡುಗಿ
ಬಡಕರಿಸಿ ಮಿಡುಮಿಡುಕಲಡಿಗಡಿಗೆ ಜಡಿಜಡಿದು ಪಡಪಡಿಪ ನಡುನಯನದ
ಮಡುವಿಡುವ ಜಲಧಿಯಂ ಕಡೆವ ಕಡೆಯೊಳ್ ಮೂಡಿ
ಘುಡುಘುಡಿಸಿ ಪಡೆಯ ಪಡಲಿಡೆ ಕೆಡಪುವುದ ತುಡುಕಿ
ಪಿಡಿದೊಡನೆ ಪೊಸೆದು ಕೊರಳೆಡೆ ತೊಡೆದ ಹಂಪೆಯ ಮೃಡಂ ಬಿಡದೆ ಸಲಹುಗೆಮ್ಮ
ಸ್ಪರ್ಧೆ ೨. ಈ ಪದ್ಯ ಇರುವ ಕೃತಿ ಗಮಕಿಗಳ ಕೈಗೆ ಸಿಕ್ಕು, ಕರ್ನಾಟಕದ ಮೂಲೆ ಮೂಲೆಗೆ ಹರಡಿಬಿಡ್ತಂತೆ. ಸಂಪದದಲ್ಲಿ ಗಮಕಿಗಳು ಯಾರಾದರು ಇದ್ದರೆ ತಮ್ಮ ನೈಪುಣ್ಯವನ್ನು ತೋರ್ಪಡಿಸಲು ಉತ್ತಮ ಅವಕಾಶ.
ಸ್ಪರ್ಧೆ ೩. ಇದನ್ನು ಬೇರೆ ನುಡಿಗೆ ಅನುವಾದ ಮಾಡಬೇಕು. ಮುಖ್ಯವಾಗಿ ಇಂಗ್ಲೀಷಿಗೆ. ಸಾಧ್ಯವೋ.
ಕೊಸರು
೧. ಇಷ್ಟೆಲ್ಲ ಆದಮೇಲೆ ಇದು ಯಾವ ಪದ್ಯ ಹೇಳಬೇಕಲ್ಲವೇ. ಊಹುಂ!! ಸ್ವಲ್ಪ ಕಷ್ಟಪಡಿ.
೨. ಇದಕ್ಕೆ ಒಂದು ಮ್ಯೂಸಿಕ್ ಟ್ಯೂನ್ ಮಾಡಬೇಕು. ಸಂಗೀತ ಬಲ್ಲವರು ಸ್ವಲ್ಪ ಇತ್ತಕಡೆ ಗಮನ ಹರಿಸಿ.

- Login or register to post comments
- 451 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಗಮಕ ನಂಗೆ ಬರಬೋದು ತುಸು..
ಅದಿರಲಿ...
ಆ ಪದ್ಯವನ್ನ ಸರಿಯಾಗಿ ಬರೆದಿದ್ದೀಯಾ? ಸ್ಪೇಸ್ ಗಳನ್ನು ಸರಿಯಾಗಿ ಬಿಟ್ಟಿದ್ದೀರ ನೋಡು...
ಬಿಡಿಸೋ ಜತನ ಮಾಡ್ತಿದ್ದೀನಿ!!
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಮಹೇಶ ನಿನ್ನ ಜತನಕ್ಕೆ ಗೆಲ್ಗೆ. ಸ್ಪೇಸುಗಳನ್ನು ಸರಿಯಾಗಿ ಬಿಟ್ಟಿದ್ದಾರೆ!!!
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಮಹೇಶ, ಬಿಡ್ಸಿದ್ಯಾ ಈ ಪದ್ಯಾನಾ ?
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಬಿಡಿಸಿದ್ದರೆ ಹಾಕ್ತಿರ್‍ಲಿಲ್ವ
=====================================
ಮಾಯ್ಸ!
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಹಂಪಿ ವಿರೂಪಾಕ್ಷನನ್ನು ಸ್ತುತಿಸುವ ಪದ್ಯ ಅನ್ನೋದೇನೋ ನಿಚ್ಚಳ. ಕೆಲವು ವಿವರಣೆಗಳು ಗೊತ್ತಾದುವು. ಉದಾ:- ಸಾಗರ ಮಂಥನದಲ್ಲಿ ಹೊಮ್ಮಿದ ವಿಷವನ್ನು ಕುಡಿದವ, ಅಂತಹ ವಿಷವನ್ನು ಕಾರುವ ಹಾವನ್ನು ಹಾರವಾಗಿ ಮಾಡಿಕೊಂಡವ, ಮೂರನೇ ಕಣ್ಣನ್ನು ಹೊಂದಿದವ, ಗಂಗೆಯನ್ನು ಜಡೆಯಲ್ಲಿ ಧರಿಸಿದವ ಇತ್ಯಾದಿ. ಆದರೆ ಇವೆಲ್ಲವನ್ನು ಅವು ಬಂದಿರುವ ಕ್ರಮಲ್ಲಿ ಸೇರಿಸಲಾಗ್ತಿಲ್ಲ. ಇನ್ನೊಮ್ಮೆ ಪ್ರಯತ್ನಿಸಿ ನೋಡ್ತೇನೆ.
ಉ: ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
ಹ್ಮ್. ಪ್ರಯತ್ನ ಯಶಸ್ವಿಯಾಗಲಿ.