ಹೊಗೇನಕಲ್ನ ಸಡಿಲಿಸಿದ ತ.ನಾ
http://thatskannada.oneindia.in/news/2008/04/05/hogenakal-project-stoppe...
ಈ ಸುದ್ದಿ ನೋಡಿ, ತುಸು ನಲಿವಾದುದೇನೋ ದಿಟ...
ಆದ್ರೆ.. ಏನೀದರ ಹಿಂದಿನ ಹುನ್ನಾರ................?
ಬರವ ಆಳ್ವಿಕೆಗಾರರಿಗೆ ಕಾದಿರುವ ಸವಾಲು.....
ಇದೇ ಸೆಂಟಿಮೆಂಟು ಮುಂದುವರೆದು ಕನ್ನಡಿಗರೂ ಪ್ರದೇಶಿಕ ಪಕ್ಷವನ್ನು ಆರಿಸಿ ಬಿಡುವರೆಂಬ ಹೆದರ್ಕೆ?
ಹೊಸ ನೆಲದ ಪಕ್ಷದ ಉದಯಕ್ಕೆ ನೆರವಾಗ್ತಿದ್ದೀವಿ ಎಂಬ ಗುಮಾನಿ?
ಇಶ್ಟೆಲ್ಲ ತಿಳಿದಿದ್ರೆ.. ಈ ಸಂಗತಿ ಕೆದಕಿದ್ದೇಕೆ?
ಏನಿದು ಕಣ್ಣಡಿ ಹಿಂದಿನ ಗುಟ್ಟು!! ?

- Login or register to post comments
- 305 hits
- Email this forum





RSS:
ಉ: ಹೊಗೇನಕಲ್ನ ಸಡಿಲಿಸಿದ ತ.ನಾ
ಇನ್ನೊಂದು ವಿಚಾರ. ಇಷ್ಟು ದಿನ "ಆ ರಜನಿಕಾಂತ್ ನಮ್ಮವನು", ಹಾಗೆ ಹೀಗೆ ಅಂತೆಲ್ಲಾ, ತಲೆಮೇಲೆ ಹೊತ್ತು ತಿರುಗುತ್ತಿದ್ದ ಕನ್ನಡಿಗರಿಗೆ ತಕ್ಕ ಮರ್ಯಾದೆ ಕೊಟ್ಟಿದ್ದಾನೆ ಅವನು. ಅವನು "ಕನ್ನಡಿಗರನ್ನು ಒದೀಬೇಕು" ಅಂತ ಬಯ್ದರಿವುದು ಈ ದಿನದ ನ್ಯೂಸ್ ಚಾನೆಲ್ಲುಗಳಲ್ಲೆಲ್ಲ ಬಿತ್ತರವಾಗ್ತಾ ಇದೆ. ಇನ್ನೇನು ಕಾದಿದೆಯೋ ಕಾಣೆ.
ಉ: ಹೊಗೇನಕಲ್ನ ಸಡಿಲಿಸಿದ ತ.ನಾ
ಇದನ್ನೇ ತಮ್ ಕಾಲ್ಗೆ ತಾವ್ ಕೊಡಲೀಲಿ ಹೊಡೆಯೋದು ಅನ್ನೋದು...
ರಜನಿ ಸಿನಿಮಗಳು ಬೆಂಗಳೂರು ಕರ್ನಾಟಕದಾಗೆ ಹೇಗೆ ಓಡ್ತವೆ.. ಇನ್ ಮುಂದೆ ಅವೆಲ್ಲ ಬಂದ್..!!
ರಜನಿಗೆ ದೊಡ್ಡ ನುಕಸಾನು.. ಒಂದ್ ರೀತಿ ಅವನಿಂದ ’ಕನ್ನಡಿಗರನ್ನು ಒದೀರಿ’ ಅಂತ ಹೇಳಿಸಿದ್ದೂ ಕನ್ನಡಿಗರ ಗೆಲುವು.. ಕರವೇ ದಾರಿ ಸಲೀಸಾಯ್ತು...
ಈಗ ತಾಕತ್ತಿದ್ರೆ ಮತ್ತೊಂದು ಶಿವಾಜಿ ಬಿಡುಗಡೆ ಮಾಡಿ ಓಡಿಸಲಿ!
ಇನ್ ಮುಂದೆ ಪ್ರಕಾಶ್ ರಾಜ್, ಕಮಲ ಹಾಸನ್, ಮುರುಳಿ, ಅರ್ಜುನ್ ಸರ್ಜಾ ಸಿನಿಮಗಳನ್ನು ತಡೆಯೋಕೆ ಕನ್ನಡ ಪಡೆಗೆ ಒಳ್ಳೇ ದಾರಿ..!!
ಇಶ್ಟಿಲ್ದೇ ಕರಾಮಾ ಕನ್ನಡಿಗರನ್ನ ಚದುರರ್.. ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಅಂದಿರೋದು..? ಇದೂ ಒಂದು ಕಾವ್ಯವೇ ಅಲ್ವ!!
ಹೊಗೇನಕಲ್ನಿಂದ ಹೊಗೆ ಹಾಕಿಸಿಕೊಂಡ್ರು!!
ಉ: ಹೊಗೇನಕಲ್ನ ಸಡಿಲಿಸಿದ ತ.ನಾ
ನಮ್ಮ ಗೌಡರಿಗಿಂತರೂ ಚತುರರು ಕರುಣಾನಿಧಿ. ಈಗ ಈ ಪ್ರಾಜೆಕ್ಟನ್ನು ನಿಲ್ಲಿಸಿ ಎಲ್ಲರಿಗೂ ಒಳ್ಳೆಯವರಾದರು. ಕನ್ನಿಮೊಳಿ ಕೇಂದ್ರದಲ್ಲಿ ಮಂತ್ರಿ (ವಿವರಗಳಿಗೆ ಇಂದಿನ ಕೇಂದ್ರ ಸಂಪುಟ ವಿಸ್ತರಣೆ ವೀಕ್ಷಿಸಿ) ಆಗುತಿದ್ದಾರೆ. ಇದೆಲ್ಲ ತಿಳಿಯದೆ ಜನರು ಮಂಗಗಳಾಗುತ್ತಿದ್ದಾರೆ.