ಚದುರ ದೇವೇಗೌಡರು
ಯಾರ್ ಏನೇ ಪುಂಗಲಿ, ನಮ್ ದೇವರ್ ಸತ್ಯ ನಮಗೆ ಗೊತ್ತಿಲ್ವೇ ಅನ್ನೋ ಹಂಗೆ... ದೇವೇಗೌಡರ ಕೆಲಸಗಳು ಹೇಮಾವತಿ-ಕಾವೇರಿ ಸೀಮೆಯ ಮಂದಿಗೆ ಗೊತ್ತೇ ಗೊತ್ತು..
ಹಾಸನದಲ್ಲಿ ಹೇಮಾವತಿಗೆ ಗೊರೂರು ಅಣೆಯಿಂದ ಏಶಿಯದಲ್ಲೇ ದೊಡ್ಡ aquaduct/ಮೇಲ್ಗಾಲುವೆಗಳನ್ನ ಕಟ್ಟಿಸಿ ನಾಗಮಂಗಲ-ತುಮಕೂರು ಕಡೆಗೆ ನೀರಿ ಹರಿಸಿದ್ದು.. ಇವೆಲ್ಲ ಗೊತ್ತಿರೋದೆ..
ಆದ್ರೆ.. ದೇವೇಗೌಡರು ಪ್ರಯಿಮ್ ಮಿನಿಸ್ಸರ್ ಆದಾಗ, ರಾಜಕುಮಾರರಿಗೆ ಪಾಲ್ಕೆ ಪ್ರಶಸ್ತಿ ಬಂತು... ಏನೇನೆಲ್ಲ ಮಾಡಿದ್ರು.. ಅಂತವೂ ಗೊತ್ತು..
ಈಗ ರಟ್ಟಾಗಿರೋ ಗುಟ್ಟು ಏನೂ ಅಂದ್ರೆ.. ಬೆಂಗಳೂರಿಗೆ ಕಾವೇರಿ ನೀರಿನ ಕುಡಿಯೋ ನೀರು ಯೋಜನೆಗೆ ಒಪ್ಪಿಗೆ ಕೊಟ್ಟು, ಹೊಗೇನಕಲ್ಗೆ ಕಲ್ ಹಾಕಿದ್ರಂತೆ.. ಚದುರರು... ![]()
ನೋಡಿ, ಬೆಂಗಳೂರಿನ ವಿದ್ಯಾರಣ್ಯಪುರಕ್ಕೂ ಕಾವೇರಿ ಹರಿತಾಳೆ..!!
ನಮ್ ಗೌಡರ ಬುದ್ದಿಯೋ ಬುದ್ದಿ.. ಇವರ ಅನ್ನೋಕ್ಕೆ ಇರೋ ಹುಟ್ಟಿರೋ ಪಡೆ, ಅವರ ಮಗನಿಂದಲೇ ಮೊದಲು ನಮ್ ರಾಜ್ಯ ಆಳೋ ಕನಸು ಕಂಡಿತು.. ಸದ್ಯ.. ಗೌಡರೂ ಅಲ್ಲೂ ಸರಿಯಾದ ಹೊತ್ತಿಗೆ ಕಲ್ ಹಾಕಿ, ನಮ್ಮ ಕರ್ನಾಟಕ ಉತ್ತರಪ್ರದೇಶ, ಮದ್ಯಪ್ರದೇಶ, ಬಿಹಾರ ಆಗೋದ್ರಿಂದ ತಪ್ಪಿಸಿದ್ರು..!! ![]()
ಹೊಗೇನಕಲ್ ಮೇಲೇ ಇನ್ನೂ ಕನ್ನಡಿಗ ಮಾತು ನಡೆಯೋ ಹಾಗೆ ಮಾಡಿದಕ್ಕೆ ಇವರಿಗೆ ನನ್ನಿ!! ![]()

- Login or register to post comments
- 224 hits
- Email this forum





RSS:
ಉ: ಚದುರ ದೇವೇಗೌಡರು
ಸದ್ಯ! ನೀವು ಚದುರರ ’ಇತರೆ’ ಚಟುವಟಿಕೆಗಳ ಬಗ್ಗೆ ಹೇಳಿಲ್ಲ
:) ಹೇಮಾವತಿ ಸೀಮೆಯವರಿಗೆ, ಅದೂ ಗೊತ್ತಿರುವುದೇ! 
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಚದುರ ದೇವೇಗೌಡರು
ಹಂಸಾನಂದಿಗಳೆ...
ಅವರು ಚದುರ ಅನ್ನೋದು ನೀವ್ ಒಪ್ತೀರ...
ಅವರ ಇತರೆ.. ಸಂಗತಿ ಬೇರೆಯದು.. ಸದ್ಯಕ್ಕೆ ಅವರ ಚದುರತನದಿಂದ ನಮಗೇನು ಬಂತು ಬಾಗ್ಯ ಅಂತ ಬರೆದಿದ್ದೀನಿ...
ನಾನ್ ಗೌಡರ ದೊಡ್ಡ ಹಿನ್ನಾಳು ಅಂದು ತಿಳೀಬೇಡಿ...
ಹೊಗೇನಕಲ್ ಸಂಗತಿಯಲ್ಲಿ ಗೌಡರು ಕಲ್ಲು ಹಾಕಿದ್ದು ನಮಗೆ ಒಳ್ಳೇದೇ ಆಯ್ತಲ್ಲ.. ಮಿಕ್ಕ ಸಂಗತಿ ಹೇಮಾವತಿ ಸೀಮೆಯವರಿಗೇನು, ಎಲ್ರುಗೂ ಹೊತ್ತಿರುವ ರಟ್ಟಾದ ಗುಟ್ಟು.. ಅದರ ಬಗ್ಗೆ ಬರೆಯಕ್ಕೆ ಸಾವಿರ ಮಂದಿ ಅವ್ರೆ !
ನಾನ್ ಹುಟ್ಟಿದ್ದು ಹೊಳೆನರಸೀಪುರದಾಗೆ.. ನಮ್ ಊರೋರು.. ಅಂತ ತುಸು ನಮ್ಮೆ( ನಮ್ಮದು ಎಂಬ ತನ) ಇರಬೋದು ಅಶ್ಟೆ!~