"ಮೌಲ್ಯ ವರ್ಧಿತ" ಸರಿಯೆ!?
Value-added ಅನ್ನೋದಿಕ್ಕೆ "ಮೌಲ್ಯ ವರ್ಧಿತ" ಎಂದು ಇಂದಿನ ಹೆಚ್ಚಿನ ಮೊಬೈಲ್ ಕಂಪನಿಗಳು ಬಳಸುತ್ತವೆ. ಇದು ಸರಿಯೆ!?
ಇಲ್ಲಿ ನನಗೆ "ವರ್ಧಿತ" ಎನ್ನುವುದು ವಿಶೇಷಣವಾಗಿ ಕೇಳಿಸದೆ, ಒಂದು ಕ್ರಿಯಾಪದವಾಗಿ ತೋರುತ್ತಿದೆ, ನೀವೇನಂತೀರಾ,ಸಂಪದಿಗರೆ!?

- Login or register to post comments
- 357 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: "ಮೌಲ್ಯ ವರ್ಧಿತ" ಸರಿಯೆ!?
ಸರ್ಕಾರವೇ "Value Added Tax'ಗೆ "ಮೌಲ್ಯ ವರ್ಧಿತ ತೆರಿಗೆ' ಅಂತ ಹೆಸರಿಟ್ಟು ಅವರಿಗೆ ಹೇಳಿಕೊಟ್ಟಿದೆ.
ಉ: "ಮೌಲ್ಯ ವರ್ಧಿತ" ಸರಿಯೆ!?
ಮೌಲ್ಯ = ಬೆಲೆ
ವರ್ಧಿತ = ಹೆಚ್ಚಾದ, ಬೆಳೆದ, ಇದು ಸೇರಿಸಿದ, ಕೂಡಿದ ಎಂಬ ಅರಿತ ಕೊಡಲ್ಲ ಅಂತ ನನ್ನ ಅನಿಸು
ಯೋಚಿಸು = ಕೂಡಿಸು, ಸೇರಿಸು
value addedಗೆ ಮೌಲ್ಯ ವರ್ಧಿತ ಅನ್ನೋದು ಸಮ ಅಲ್ಲದಿದ್ರೂ ಅದು ವಿಶೇಷಣವೇ..ನಾಮಪದವೂ ಕೂಡ! ಕ್ರಿಯಾಪದವಲ್ಲ!!
Value added = ಮೌಲ್ಯ ಸೇರಿಸಿದ, ಬೆಲೆ ಸೇರಿಸಿದ ಎಂಬುದು ಸರಿಯಾಗಬೋದು
ನಿಮ್ಮ ಪ್ರೆಶ್ನೆಗೆ ಉತ್ತರ, ಹಾಗಲ್ಲ.. ವರ್ಧಿತ ವಿಶೇಷಣವೇ!!
ಉ: "ಮೌಲ್ಯ ವರ್ಧಿತ" ಸರಿಯೆ!?
ಅದು ಯೋಚಿಸು ಅಲ್ಲ ಯೋಜಿಸು
ಉ: "ಮೌಲ್ಯ ವರ್ಧಿತ" ಸರಿಯೆ!?
ಕರಿಹೈದ, ಮಹೇಶ್!

ಮೌಲ್ಯ ವರ್ಧಿತ ಧನ್ಯವಾದಗಳು!
ಬಹುಷಃ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿರಬೇಕು!!
ಉ: "ಮೌಲ್ಯ ವರ್ಧಿತ" ಸರಿಯೆ!?
ಬಹುಶಃ ಇದನ್ನ ನಾವು ಬೋಶ ಅಂತ ಉಲಿಯೋದು!
ಇನ್ನೂ ಗಲಿಬಿಲಿ ಇರ್ಲಿಕ್ಕಿಲ್ಲ ಅಂತ ಎಣಿಸಿರುವೆವು