Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
Rainbow ಗೆ ಕನ್ನಡದ ಸರಿಯಾದ ಪದ ಯಾವುದು?
ಕೆಲವರು ಮಳೆ ಬಿಲ್ಲು ಅಂತ ಇಂಗ್ಲೀಷಿನವರ ತರ ಆಡ್ತಾರೆ ಬಿಡಿ!
"ಕಾಮನ ಬಿಲ್ಲು" ಸರೀನೋ ? "ಕಮಾನು ಬಿಲ್ಲು" ಸರೀನೋ?

- Login or register to post comments
- 528 hits
- Email this forum

Rainbow ಗೆ ಕನ್ನಡದ ಸರಿಯಾದ ಪದ ಯಾವುದು?
ಕೆಲವರು ಮಳೆ ಬಿಲ್ಲು ಅಂತ ಇಂಗ್ಲೀಷಿನವರ ತರ ಆಡ್ತಾರೆ ಬಿಡಿ!
"ಕಾಮನ ಬಿಲ್ಲು" ಸರೀನೋ ? "ಕಮಾನು ಬಿಲ್ಲು" ಸರೀನೋ?

ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಕಾಮನಬಿಲ್ಲು
ಆಧಾರ : ಪ್ರೊ ಜಿ ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟು
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಕಾಮನ ಬಿಲ್ಲು ಸರಿಯಿಲ್ಲ.. ಏಕೆಂದ್ರೆ.. ಇಲ್ಲಿ ಕಾಮ ಯಾರು.. ಕಾಮ ಅನ್ನೋದು ಸಕ್ಕದ ಅಂತ.. ಅದೂ ಅಲ್ಲದೇ ಕಾಮನ ಬಿಲ್ಲು ಹೇಗೆ ಅನ್ನೋ ಪುರಾಣಗಳು ಬೇರೆ...
ಕನ್ನಡದಲ್ಲಿ ಮಳೆಬಿಲ್ಲು, ಇಲ್ವೇ ಕಮಾನು ಬಿಲ್ಲು ಸರಿ..
ಮಳೆಬಿಲ್ಲು ಅಂತ ಒಂದು ಸೀರಿಯಲ್ ಬರ್ತಾ ಇದೆ ಅಲ್ವ!
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಬಿಲ್ಲೇ ಕಮಾನು ಆಕಾರದಲ್ಲಿರುವಾಗ, ಕಮಾನು ಬಿಲ್ಲು ಅಂತ ಹೇಳುವ ಅಗತ್ಯವಿದೆಯೇ?
ಮಳೆ ಬಿಲ್ಲು ಅನ್ನುವ ಪ್ರಯೋಗ ಕೇಳಿದ್ದೇನೆ ( ಈಚೆಗೆ ) - ಈ ಹೆಸರಿನ ಟಿ.ವಿ. ಧಾರಾವಾಹಿಯೂ ಬರುತ್ತಿತ್ತು ಎಂದು ಕೇಳಿದೆ. ಅರ್ಥ, ಪ್ರಯೋಗ ಎರಡೂ ಚೆನ್ನಾಗಿದೆ ಅನ್ನಿಸಿತು. ಹಿಂದಿನವರು ಯಾರಾದರೂ ಇದನ್ನು ಪ್ರಯೋಗಿಸಿರುವರೇ? ಕುಮಾರವ್ಯಾಸನಂಥ ಕವಿ ಇಂತಹ ಪದದ ಉಪಯೋಗ ಮಾಡಿರಬಹುದೇನೋ.
ತಮಿಳಿನಲ್ಲಿ, ಇದಕ್ಕೆ ’ವಾನವಿಲ್’ ಎನ್ನುತ್ತಾರೆ - ಅದೇ ರೀತಿಯಲ್ಲಿ, ಬಾನಬಿಲ್ಲು ಅನ್ನುವುದೂ ಕನ್ನಡಕ್ಕೆ ಹೊಂದುವ ರೂಪವೇ ಎನ್ನಿಸುತ್ತೆ. ಈ ಪ್ರಯೋಗ ಇನ್ನಾರಾದರೂ ಮಾಡಿರುವರೇ? ನನಗಂತೂ ತಿಳಿದಿಲ್ಲ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಅಯ್ಯೋ
ಕಮಾನು, ಬಿಲು ಎರಡು ಒಂದೇ.. ಹೊಳೀಲೇ ಇಲ್ಲ.. ಕಮಾನುಬಂಡಿ
ಬಾನಬಿಲ್ಲು/ಬಾಂಬಿಲ್ಲು ಸೂಪರ್...
ಚನ್ನಾಗಿದೆ.. ಇನ್ಮಂದೆ ಬಾಂಬಿಲ್ಲು
....................................
ಮೂಡುವ ನೇಸರನೊಡಲಿಗೆ
ಹೂಡಲು ಆಸೆಯಿಂದೆಳೆದು
ಬಾಂಬಿಲ್ಲಿಗಾವಂಬು ಅಮ್ಮಾ?
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಸಮಾಜಘಾತುಕೋತ್ತಮನೇ, ಪ್ರೇಮಿಗಳ ಹೃದಯದಲ್ಲಿ ಸುಮಧುರ ಭಾವನೆಗಳನ್ನು ಉಂಟುಮಾಡುತ್ತದೆಯಾದ್ದರಿಂದ ಅದು ಕಾಮನ ಬಿಲ್ಲು. ನೀನೋ ಅದೆಲ್ಲ ಬಿಟ್ಟು ಬಾಂಬು, ಗೀಂಬು ಅಂತೆಲ್ಲ ಅಂದ್ರೆ, ಬಿನ್ ಲಾಡೆನ್....
ಹಾ!!ಆದರೆ ಪದ್ಯ ಚೆನ್ನಿದೆ.
ಉ: Rainbow = ಕಮಾನು ಬಿಲ್ಲು? = ಕಾಮನ ಬಿಲ್ಲು?
ಲೋ
ಅದು ಕಾಮನ ಕಬ್ಬಿನ ಬಿಲ್ಲು ಹೂಬಾಣ...
ಇದು ಕಾಮನ ಬಿಲ್ಲು ಬೇರೆ........