ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
ಇದೊಂದು ವಿಷಯ ನನಗೇ ಚಿಕ್ಕಂದಿಂದ ತಲೇಲಿ ಕೊರೀತಾ ಇದೆ. ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ಸ್ಕೂಲಲ್ಲಿ ನಮ್ಮ ನಾಗರಾಜ ಮೇಷ್ಟ್ರು, ವಿದ್ಯಾವಂತರೇಲ್ಲಾ ದೇಶ ಬಿಟ್ಟು ಹೋಗ್ತಾ ಇದ್ದಾರೆ, ಇದರಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಅಂತ ಹೇಳ್ತಾ ಇದ್ದದ್ದು ಇಂದಿಗೂ ನನ್ನ ತಲೇಲಿ ಆಗಾಗ ಬಂದು ಹೋಗ್ತಿರತ್ತೆ. ದೇಶ ಬಿಟ್ಟು ಬಂದಮೇಲೂ!!!
ಆದರೆ ಇದು ಎಷ್ಟು ಸತ್ಯ?? ನಾನು ಹೊರಗೆ ಬಂದಿದ್ದರಿಂದ ತಾನೇ, ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು? (ನಾನು ಐಟಿ ಉದ್ಯಮದವನಲ್ಲ). ವಿದೇಶಗಳಲ್ಲಿರುವ ಎಲ್ಲ ಭಾರತೀಯರು ಭಾರತದಲ್ಲೆ ಇದ್ದಿದ್ದರೆ?? ಖಂಡಿತ ನಮ್ಮ ದೇಶ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿರುತ್ತಿತ್ತು ಅಂತ ನನಗನ್ನಿಸೋಲ್ಲ.
ಸ್ನೇಹಿತರೇ.. ನೀವೇನಂತೀರಾ????
-ಚಿ ರಂ ಶಿ

- Login or register to post comments
- 392 hits
- Email this forum





RSS:
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
I believe it is perfectly fine to make your life anywhere your like. As long as you are clear about priorities and recognize that you have to give up something to get some other thing, you will be happy whether you are in India or elsewhere.
'Brain drain is better than brain in the drain.'
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
ಯೆಬ್ಬರಾಮ್, ಸಂಪದದಲ್ಲಿ, ಕನ್ನಡದಲ್ಲಿ ಮಾತ್ರವೇ ಬರೆಯಬೇಕು ಎಂಬ ನಿಯಮವಿದೆ. ನಿಮ್ಮ ಅನಿಸಿಕೆ ಏನೇ ಇರಲಿ, ಕನ್ನಡದಲ್ಲಿಯೇ ಮೂಡಿಬರಲಿ.
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
ಅದು ಸರೀ ರೀ ಯಬ್ಬರಾಮ್, ನಮಗೇನೂ ನಷ್ಟ ಇಲ್ಲ.. ಆದರೆ ಇದಕ್ಕೂ ದೇಶದ ಏಳಿಗೆಗೂ ಏನಾದ್ರೂ ಸಂಬಂಧ ಇದ್ಯಾ ಅಂತ?????
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
ಇದು ಬರಿ ಉದ್ಯೋಗದ ಪ್ರಶ್ನೆ ಅಲ್ಲ. ದೇಶದಲ್ಲಿರುವ ಪ್ರತಿಭೆಗಳು ಹೊರದೇಶಕ್ಕೆ ಹೋದರೆ ಇಲ್ಲಿ ಅಗತ್ಯಕ್ಕೆ ತಕ್ಕಷ್ಟು skilled, semiskilled ಮತ್ತು unskilled ಮಾನವ ಸಂಪನ್ಮೂಲ ಸಿಗದೆ ದೇಶದ ವಿವಿಧ ರಂಗಗಳಲ್ಲಿ ಅಭಿವೃದ್ದಿ ಕಾರ್ಯಗಳು ಕಡಿಮೆಯಾಗುತ್ತವೆ. ಅಂದರೆ ದೇಶದ ಏಳಿಗೆ ಕಡಿಮೆಯಾಗುತ್ತದೆ.
ಉ: ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?
>>>ನಾನು ಹೊರಗೆ ಬಂದಿದ್ದರಿಂದ ತಾನೇ,ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು?
-ನಿಮ್ಮ ಈ ಯೋಚನೆ ನಮ್ಮ ನೆಚ್ಚಿನ ರಾಜಕಾರಣಿಗಳಿಗೆ ಬಂದಿರುತ್ತಿದ್ದರೆ....ಖಂಡಿತ ನಮ್ಮ ದೇಶ ನಂ.೧ ಆಗುತಿತ್ತು.
ಕಡೇ ಪಕ್ಷ ನಮ್ಮ ಕರ್ನಾಟಕದ ರಾಜಕಾರಣಿಗಳನ್ನಾದ್ರೂ ನೀವಿರುವಲ್ಲಿಗೆ ಕರೆಸಿಕೊಳ್ಳಿ... ಪ್ಲೀಸ್.
-ಗಣೇಶ.