ಕನ್ನಡದ ನಾರೀಮಣಿಗಳೆಲ್ಲಿ??
ನಾನು ಇತ್ತೀಚೆಗಷ್ಟೆ ಸಂಪದದ ಲೇಖನಗಳನ್ನು/ಅಭಿಪ್ರಾಯಗಳನ್ನೂ ಓದುತ್ತಾ, ಸ್ವಲ್ಪ ಮಟ್ಟಿಗೆ ಬರೆಯುತ್ತಾ ಇದ್ದೇನೆ...ಆದರೆ..
ಒಂದು ಅಂಶ ಗಮನಿಸಿದೆ...ಎಲ್ಲೂ...ಮಹಿಳೆಯರಿಂದ ಬರೆದಂತಹ ಲೇಖನಗಳಾಗಲೀ... ಅಭಿಪ್ರಾಯಗಳಾಗಲೀ.. ಕಾಣಲಿಲ್ಲ...
ಕಾರಣ ಏನು??
ಮಹಿಳೆಯರಿಗೆ ಸಂಪದದಲ್ಲಿ ಪ್ರವೇಶವಿಲ್ಲವೋ???
ಕನ್ನಡದ ಮಹಿಳಾಮಣಿಗಳಿಗೆ ಸಂಪದಕ್ಕೆ ಸೇರುವ/ಬರೆಯುವಷ್ಟು ಪುರಸೊತ್ತಿಲ್ಲವೋ..???
ಅಥವಾ... ನಾನೇ ಇನ್ನೂ ಸಂಪದವನ್ನು ಸರಿಯಾಗಿ ಹೊಳಹೊಕ್ಕು ನೋಡಿಲ್ಲವೋ??
ಇದು ಕೇವಲ ಕುತೂಹಲಕ್ಕಷ್ಟೆ...
ಹಿರಿಯ ಸದಸ್ಯರು ದಯವಿಟ್ಟು ತಿಳಿಸಿ....
ಚಿ.ರಂ.ಶಿ.

- Login or register to post comments
- 449 hits
- Email this forum





RSS:
ಉ: ಕನ್ನಡದ ನಾರೀಮಣಿಗಳೆಲ್ಲಿ??
> ಅಥವಾ... ನಾನೇ ಇನ್ನೂ ಸಂಪದವನ್ನು ಸರಿಯಾಗಿ ಹೊಳಹೊಕ್ಕು ನೋಡಿಲ್ಲವೋ??
ಇದು ಸರಿಯಾದುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡದ ನಾರೀಮಣಿಗಳೆಲ್ಲಿ??
ಕನ್ನಡ ಮಹಿಳೆಯರ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ಶಸ್ತ್ರಾಸ್ತ್ರ ಹಿಡಿಯುವಷ್ಟೇನಿಲ್ಲ ಸ್ವಾಮಿ, ನಾವೂ ಇಲ್ಲಿದ್ದೀವಿ
ಗಂಡಸರಷ್ಟು ನಿಯಮಿತವಾಗಿ ಬರೆಯುತ್ತಿಲ್ಲ ಮತ್ತು ಅವರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಾವಿಲ್ಲ ಅನ್ನುವುದಂತೂ ನಿಜ. ಅದನ್ನು ಸರಿಪಡಿಸಬೇಕು. ನೀವೂ ನಿಮ್ಮ ಪರಿಚಯದ ಮಹಿಳೆಯರಿಗೆ ಸಂಪದದ ಬಗ್ಗೆ ತಿಳಿಸಿ, ಸೇರಲು ಹೇಳಿ.
ಮತ್ತೆ ಸಿಗೋಣ,
ಕಲ್ಪನ
ಉ: ಕನ್ನಡದ ನಾರೀಮಣಿಗಳೆಲ್ಲಿ??
ಕಲ್ಪನಾರವರೇ.. ನಿಮ್ಮ ಇರುವಿಕೆಯನ್ನು ಸಾದರಪಡಿಸಿದ್ದಕ್ಕೆ ಧನ್ಯವಾದಗಳು...ನಿಮ್ಮ ಚಿತ್ರ ನನಗೆ ಬಹಳ ಮೆಚ್ಚುಗೆಯಾಯಿತು. ಕೆಲವೊಮ್ಮೆ ಗಮನಿಸಿರುವಂತೆ.. ನಮ್ಮ ಅಜ್ಜಿ/ತಾತಂದಿರಿಗಿರುವ ಉತ್ಸಾಹ ನಮ್ಮಲ್ಲಿರುವುದಿಲ್ಲ.
ಶಸ್ತ್ರಾಸ್ತ್ರ ಹಿಡಿಯುವಸ್ಟೇನಿಲ್ಲ ಅಂತೀರಲ್ಲ.. ಕೆಲ ತಿಂಗಳ ಹಿಂದೆ ಬೆಂಗಳೂರಲ್ಲಿ ಮಹಿಳೆಯರ (ಗೃಹಿಣಿಯರ) ಕ್ರಿಕೆಟ್ ಮ್ಯಾಚ್ ನೋಡಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ.
ಹಾಗೂ ಸುತ್ತಲಿನ ಮಹಿಳೆಯರಿಗೆ ಸಂಪದದ ಪರಿಚಯ ಮಾಡಿಸು ಎಂದಿದ್ದೀರಿ. ಅಂದರೆ..ನಾನು ನನ್ನ ಅರ್ಧಾಂಗಿಯಿಂದಲೇ ಶುರು ಮಾಡಬೇಕು. ಆಕೆ ಸಹ ಲೇಖನ / ಸಾಹಿತ್ಯದಲ್ಲಿ ಆಸಕ್ತಿ ಇರುವವಳೇ.. ಆದರೆ..ನಾನು ಆಕೆಯ ಕನ್ನಡ ಟೈಪಿಸ್ಟ್ ಆಗಬೇಕಾಗಿ ಬರಬಹುದೇನೋ ಎಂಬ ಭಯ...
ಚಿ.ರಂ.ಶಿ.
------------------------------------------------------
ನಾವು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???
ಉ: ಕನ್ನಡದ ನಾರೀಮಣಿಗಳೆಲ್ಲಿ??
ಚಿ.ರಂ.ಶಿ ಯವರೆ..
ನಾನೂ ಇದ್ದೀನಪ್ಪಾ ಇಲ್ಲೆ ಸೈಡ್ ವಿಂಗಲ್ಲೆ...
ಆದ್ರೆ ಮಣಿಯೇನಲ್ಲ ಬಿಡಿ...
ಆಫೀಸು ಮನೆ ಎರಡರ ಮಧ್ಯ ಬ್ಯಾಲನ್ಸ್ ಮಾಡುತ್ತಾ ದಿನವೂ ನೆಟ್ ಅಪ್ಡೇಟ್ ಮಾಡೋದು ಸ್ವಲ್ಪ ಕಷ್ಟ. ಹಾಗಾಗಿ ನನಗಂತೂ ನಿಯಮಿತವಾಗಿ ಬರೆಯಲು, ಪ್ರತಿಕ್ರಿಯೆ ಹಾಕಲು ಆಗುತ್ತಲೇ ಇಲ್ಲ. ಇದ್ದಷ್ಟರಲ್ಲೇ ಸಮಯ ಮಾಡಿಕೊಂಡು ಓದುತ್ತಿರುವುದೇ ದೊಡ್ಡ ಸೌಭಾಗ್ಯವಾಗಿದೆ.
ಏನೇ ಇರಲಿ, ನಮ್ಮನ್ನು ಮಾತನಾಡುವಂತೆ ಮಾಡಿದ್ದಕ್ಕಾಗಿ ಧನ್ಯವಾದ.
ಇನ್ನು ನಿಮ್ಮ ಪತ್ನಿಗೆ ಸಂಪದವನ್ನು ಪರಿಚಯಿಸುವ ಬಗ್ಗೆ.. ಇರಲಿ.. ನಿಮ್ಮ ಎಲ್ಲ ಅಗತ್ಯಗಳನ್ನೂ ಬಹುಪಾತ್ರಗಳಲ್ಲಿ ನಿರ್ವಹಿಸುವ ಆಕೆಗೆ ನೀವು ಆಗ ಈಗ ಕನ್ನಡ ಟೈಪಿಸ್ಟ್ ಆಗುವದರಲ್ಲಿ ತೊಂದರೆಯೇನಿಲ್ಲ ಅಲ್ಲವಾ?
ಪ್ರೀತಿಯಿಂದ
ಸಿಂಧು
ಉ: ಕನ್ನಡದ ನಾರೀಮಣಿಗಳೆಲ್ಲಿ??
ಏನ್ರಿ ಕಲ್ಪ್ನನಾ ಅವರೆ
ನನ್ನನ್ನ ಮರೆತೇಬಿಟ್ಟಿರೋ ಹಾಗಿದೆ
ರೂಪ
ಉ: ಕನ್ನಡದ ನಾರೀಮಣಿಗಳೆಲ್ಲಿ??
ನೀವು ಹೀಗೆ ಬಂದು ಹೇಳ್ತೀರಾಂತ ಗೊತ್ತಿತ್ತು
ನಿಮ್ಮನ್ನು ಮರೆಯೋದಕ್ಕೆ ಸಾಧ್ಯನೇನ್ರಿ? ನಾರೀಮಣಿ ಅಂದ ತಕ್ಷಣ "ಹಾಂ, ಎಲ್ಲಿ, ಏನು, ಎತ್ತ" ಅಂತ ಒನಕೆ ಹಿಡಿದು ಬರುವವರಲ್ಲಿ ನೀವೇ ಮೊದಲಿಗರು ತಾನೇ? 
ಉ: ಕನ್ನಡದ ನಾರೀಮಣಿಗಳೆಲ್ಲಿ??
ನಾರಿಯರು ಅಂದ್ರೆ ಸಾಲದೇ?
ನಾರಿಮಣಿ ಅಂದ್ರೇನು! ನಾವ್ ಗಂಡಸರು ಮಣಿಗಳಲ್ವೋ, ಬೆಲೆ ಇಲ್ಲ ಗಂಡು ಜಾತಿಗೆ ;(
ಹೆಚ್ಚು ದೊರೆಯುವುದಕ್ಕೆ ಬೆಲೆ ಕಡಮೆ
ಈಗ ನಾವ್
ಗಂಡು ಗಂಡೆಂದೇತಕೇ ಬೆಲೆ ಕಳೆವರೂ
ಹೆಣ್ಣು ಕಾಣದ ಗಾವಿಳರೋ!!
ಎಂದು ಹಾಡು ಬರೆಯಬೇಕು!
=====================================
ಮಾಯ್ಸ!
ಉ: ಕನ್ನಡದ ನಾರೀಮಣಿಗಳೆಲ್ಲಿ??
ಹ ಹ ಹ್ಹ!
ಗಂಡಸರಿಗೂ ಗಂಡುಗಲಿ ಅಂತನೋ ಏನೋ ಒಂದು ಹೆಸರಿದೆಯಲ್ರಿ. ಗಂಡುಗಲಿಯೇಕೆ? ಗಲ್ಲಿ ಗಲ್ಲಿಗೂ ಸಿಗುತ್ತೀರಂತನೋ?
ಉ: ಕನ್ನಡದ ನಾರೀಮಣಿಗಳೆಲ್ಲಿ??
ಗ೦ಡ್ಸು ಅನ್ನೋ ಪ್ರಾಣಿ ...ಪ್ರಾಣಿ ಅ೦ದರೆ ನೆ ಸರಿಯೋ ಇಲ್ಲಾ ದಣಿ ಅ೦ದರೆ ಸರಿಯೋ ಗೊತ್ತಿಲ್ಲಾ.. ಆದರೆ ಹೆ೦ಗಸರು ಹೇಳಿದ ಹಾಗೆ
ಕುಣಿ ಅ೦ತಾ ಬ್ರಹ್ಮ ನ ಬರಹ ಅನ್ಸತ್ತೆ ! ನಿನ್ನೆ ಅಪ್ಪಿ ತಪಿ ನಮ್ಮ ನೆರೆ ಹೊರೆಯ ಆ೦ಟಿ ಮನೆಯ ಮಹಡೀ ಮೇಲೆ ವಾಕಿ೦ಗ್
ಮಾಡೋ ದೃಶ್ಯ ನೋಡಿದೆ. ಅಲ್ಲಿ ಆ೦ಟಿ ಮು೦ದೆ ಹೋಗ್ತಾ ಇದ್ದರೆ ಗ೦ಡ ಅವಳ ಸೆರಗು ಹಿಡಿದು ಹಿ೦ದೆ ಹಿ೦ದೆ ಹೋಗ್ತಾ ಇದ್ದಾ.
ಅವರಿಬ್ಬರೂ ಸುಮಾರು ಅರ್ಧ ಘ೦ಟೆ ಈ ರೀತಿ ಮನೆಯ ಮಹಡೀ ಮೇಲೆ ವಾಕಿ೦ಗ್ ಮಾಡ್ತಾ ಯಿದದ್ದು ನೋಡಿ ಇದಪ್ಪಾ ಅನ್ಯೋನ್ಯತೆ ಅ೦ದರೆ ಅ೦ತಾ ಅನ್ನಿಸ್ತು.
ಉ: ಕನ್ನಡದ ನಾರೀಮಣಿಗಳೆಲ್ಲಿ??
ರೀ ಹಾಗೆಲ್ಲ ತಪ್ಪುಅರಿವು ಮಾಡ್‌ಕೋ ಬಾರ್‍ದು..
ಹೆಂಗಸರೂ ಯಾವಾಗಲೂ ಸರಿ ಎಂದು ನಟಿಸೋದ್ರಲ್ಲೇ ಗಂಡಸಿನ ಒಳಿತು!!
ಅಲ್ಲಿ ಅಂಕಲ್ಗೆ ಕಣ್‌ಕಾಣಿಸಲ್ಲ.. ಅದಕ್ಕೆ ಆಂಟಿ ಸೆರಗೊಡ್ಡಿ ದಾರಿ ತೋರಿಸ್ತಾ ಇದ್ದಾರೆ ಎಂದು, ಆಂಟಿಯ ಒಳ್ಳೇತನವಂನ ಹೊಗಳಿ..
=====================================
ಮಾಯ್ಸ!
ಉ: ಕನ್ನಡದ ನಾರೀಮಣಿಗಳೆಲ್ಲಿ??
ಅಂತೂ ಇಂತೂ ನನ್ನ 2 ವಾಕ್ಯ ವ್ಯರ್ಥ ಆಗ್ಲಿಲ್ಲ ಬಿಡ್ರಿ.. ಇದರಿಂದ...ನಮ್ಮ ಸುತ್ತಾ ಮುತ್ತಾ ಇರೋ ಮತ್ತೊಂದು ಜಾತಿಯವರು (ಮನುಷ್ಯನಲ್ಲಿ ಎರಡೇ ಜಾತಿ) ಮನಬಿಚ್ಚಿ ಮಾತಾಡೊ ಹಾಗಾಯ್ತು...
ಗಂಡುಗಲಿಗಳೋ.. ಅಥವಾ ನಾರೀಮಣಿಗಳೋ.... ಎಲ್ಲರೂ ನಗುನಗುತ್ತಾ ಒಟ್ಟಾಗಿದ್ದರೆ ಅದೇ ಸ್ವರ್ಗ ಅಲ್ವೇನ್ರೀ??????
ಜೈ ಕರ್ನಾಟಕ....
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???