ಕುವೆಂಪುರವರು ಹುಟ್ಟಿದ ಊರು ಯಾವ ಜಿಲ್ಲೆಗೆ ಸೇರಿದ್ದು?
ವಿಕಿಪೀಡಿಯದಲ್ಲಿರುವ ಕುವೆಂಪುರವರ ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು. ಈಗ್ಗೆ ಕನ್ನಡದಲ್ಲಿ ಚಿಕ್ಕಮಗಳೂರು ಎಂದು ಬರೆಯಲಾಗಿದೆ. ಇದರ ಬಗ್ಗೆ ತಿಳಿದವರು ಯಾವ ಜಿಲ್ಲೆಯೆಂಬುದನ್ನು ತಿಳಿಸಬೇಕಾಗಿ ವಿನಂತಿ.

- Login or register to post comments
- 696 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಚಿಕ್ಕಮಗಳೂರು
ಕುವೆಂಪುರವರು ಹುಟ್ಟಿದ್ದು ಅವರ ತಾಯಿಯ ತವರುಮನೆಯಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ 'ಹಿರೇಕೊಡಿಗೆ'ಯಲ್ಲಿ. ಅವರ ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮತ್ತೂರು ಹೋಬಳಿಯ 'ಕುಪ್ಪಳಿ'ಯಲ್ಲಿ ಅವರ ಬಾಲ್ಯ ಕಳೆದದ್ದು. ಎರಡೂ ಗ್ರಾಮಗಳೂ ಆಯಾ ಜಿಲ್ಲೆಗಳ ಗಡಿಗೆ ಅತಿ ಸಮೀಪದ ಗ್ರಾಮಗಳು. ಈಗ ಗೊಂದಲ ಪರಿಹಾರವಾಗಿದೆಯೆಂದು ನಂಬುತ್ತೇನೆ.
ಕುಪ್ಪಳಿಯಲ್ಲಿ ಕವಿಶೈಲ ಹಾಗೂ ಕವಿಮನೆಗಳಿದ್ದರೆ, ಹಿರೇಕೊಡಿಗೆಯಲ್ಲಿ ಕುವೆಂಪು ಸಂದೇಶ ಭವನವಿದೆ. ಕುಪ್ಪಳಿಯಿಂದ ಒಂದು ಮೈಲಿ ದೂರದಲ್ಲಿದೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿ. ಆ ಊರಿನ ಹೆಸರೂ 'ಗಡಿಕಲ್ಲು'!
ಒಳ್ಳೆಯ ಮಾಹಿತಿ
ಒಳ್ಳೆಯ ಮಾಹಿತಿ, ರೋಹಿತ್. ನಿಮಗೆ ತಿಳಿದಿರುವಷ್ಟು ಮಾಹಿತಿ ಸಾಧ್ಯವಾದಲ್ಲಿ ವಿಕಿಪೀಡಿಯದಲ್ಲಿ ಸೇರಿಸಬೇಕಲ್ಲ!, ಸೇರಿಸುವಿರ? ಗೊತ್ತಿಲ್ಲದವರಿಗೆ ಬಹಳ ಉಪಯೋಗವಾಗುವುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ವೀಕಿಪೀಡಿಯ
ವೀಕಿಪೀಡಿಯಾದಲ್ಲಿ ಕುವೆಂಪುರವರ ಬಗ್ಗಿನ ಈ ವಿವರವನ್ನು ತಿದ್ದಿದ್ದು ನಾನು. ಈ ಬಗ್ಗೆ ರೋಹಿತರವರು ನೀಡಿರುವ ಮಾಹಿತಿ ಪರಿಪೂಣ೯ವಾದುದು. ನಾಡಿಗರ ಸಲಹೆಯಂತೆ ಇದನ್ನು ವೀಕಿಪೀಡಿಯಾದಲ್ಲಿ ಅಳವಡಿಸತಕ್ಕದ್ದು.