'ದೇವರು' ದೇವರಲ್ಲ !!
'ದೇವರು'ದೇವರಲ್ಲ !!!!!!
ದೇವರ ಮೇಲೆ ಇರುವ ನಂಬಿಕೆಯೇ ದೇವರು
ಇದನ್ನ ಒಪ್ಪಬಹುದೇ?
- Login or register to post comments
- 682 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!
— ಕುವೆಂಪು
'ದೇವರು'ದೇವರಲ್ಲ !!!!!!
ದೇವರ ಮೇಲೆ ಇರುವ ನಂಬಿಕೆಯೇ ದೇವರು
ಇದನ್ನ ಒಪ್ಪಬಹುದೇ?
ಪೂರ್ಣ ಹೆಸರು
ಬರತ್ ಕುಮಾರ್
ಪರಿಚಯ
ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಉ: 'ದೇವರು' ದೇವರಲ್ಲ !!
`ದೇವರು’ ದೇವರಲ್ಲದಿದ್ದರೆ ದೇವರ ಮೇಲಿನ ನಂಬಿಕೆ ಹೇಗೆ ದೇವರಾಗಲು ಸಾಧ್ಯ? ಇದು paradox ಅಲ್ಲವೇ?
ದೇವರು = ದೇವರು ಅಲ್ಲ
ದೇವರ ಮೇಲಿನ ನಂಬಿಕೆ = ದೇವರು ಆದರೆ
ನಂಬಿಕೆ= ನಂಬಿಕೆ ಇಲ್ಲ
ಇವೆಲ್ಲಾ ಪದಗಳೊಂದಿಗಿನ ಆಟವಷ್ಟೇ ಬಿಡಿ ದೇವರು ಎಂಬುದು ನಮ್ಮೆದುರು ನಾವೇ ಇಟ್ಟುಕೊಂಡ ಏಣಿ ಅಷ್ಟೇ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...
ಉ: 'ದೇವರು' ದೇವರಲ್ಲ !!
ಸುಪ್ರಿ,
ಈ ವಚನ ಕೇಳಿದ್ದೀರಾ? " ಎನಗಿಂತ ಕಿರಿಯರಿಲ್ಲ, ಶಿವಬಕ್ತರಿಗಿಂತ ಹಿರಿಯರಿಲ್ಲ" ಅಂತ. ಇಲ್ಲಿ ಶಿವಬಕ್ತರಿಗೆ ಯಾಕೆ ಬೆಲೆ/ಹಿರಿಯರ ಪಟ್ಟ. ಶಿವನಿಗೆ ಯಾಕಿ ಇಲ್ಲ ? ಇದು ನನ್ನ ಕೇಳ್ಮೆ.
ದೇವರಿಂದ ಒಳ್ಳೇದಾಗುತ್ತೊ ಇಲ್ವೊ ಗೊತ್ತಿಲ್ಲ. ಆದರೆ ದೇವರ ಮೇಲಿನ ನಂಬಿಕೆಯಿಂದ ನಾವು/ಮಂದಿ ಹಲವು ಒಳ್ಳೆ ಕೆಲಸಗಳನ್ನು ಮಾಡುತ್ತೇವೆ.
ಮಾದರಿ: ರಾಮ ಸೇವ ಮಂಡಳಿಯವರು ಹಲವು ಹತ್ತು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ದೇವರು' ದೇವರಲ್ಲ !!
ಶಿವ ಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮಾತಿನಲ್ಲಿ ಶಿವಭಕ್ತರು ಶಿವನಿಗಿಂತ ದೊಡ್ಡವರು ಎಂಬ ಭಾವವಿದೆಯೇ? ಗೊತ್ತಿಲ್ಲ.
ಇನ್ನು ದೇವರು ಇದ್ದಾನೋ ಇಲ್ಲವೋ, ಆದರೆ ದೇವರ ಮೇಲಿನ ನಂಬಿಕೆಯಿಂದಾಗಿ ಜನರು ಎಷ್ಟೆಲ್ಲಾ ಒಳ್ಳೆ ಕೆಲಸ ಮಾಡುತ್ತಾರಲ್ಲವಾ? ಎಷ್ಟು ದತ್ತಿ ಸಂಸ್ಥೆಗಳು ದೇವರ ಹೆಸರಿನಲ್ಲಿ ನಡೆಯುತ್ತಿವೆ, ಶಾಲಾ ಕಾಲೇಜು, ಆಸ್ಪತ್ರೆಗಳು ನಡೆಯುತ್ತಿವೆ ಎನ್ನುವ ವಾದಕ್ಕೆ ಪ್ರತಿಯಾಗಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಯುದ್ಧಗಳು, ಮುಗ್ಧರ ಕಗ್ಗೊಲೆಗಳು, ದಯಾಮಯನೆಂದುಕೊಂಡ ದೇವರನ್ನು ನಂಬಿದ ಜನರು ಇತರೆ ಧರ್ಮದವರ ರಕ್ತಕ್ಕಾಗಿ ಪೀಪಾಸುಗಳ ಹಾಗೆ ಕಾತರಿಸುವುದನ್ನು ಕಂಡರೆ ದೇವರಿಗಿಂತಾ ದೇವರನ್ನು ನಂಬುವವರೇ ದೊಡ್ಡವರು ಎಂದು ಹೇಳಬಹುದು!
ಮನುಷ್ಯನ ಅವಲಂಬನೆಗೆ ದೇವರು ಎಂಬುದು ಒಂದು ಸಂಗತಿ ಅಷ್ಟೇ. ಅಕಸ್ಮಾತ್ ಮನುಷ್ಯನ ಸ್ಮೃತಿಕೋಶದಿಂದಲೇ ದೇವರು ಎಂಬ ಸಂಗತಿಯನ್ನು ತೆಗೆದುಹಾಕಿದರೂ ಸಹ ಮನುಷ್ಯ ತನ್ನ ದಾನ, ಧರ್ಮ, ಪುಣ್ಯ, ಪಾಪ, ಧರ್ಮ ಯುದ್ಧ, ಹುತಾತ್ಮ ಮುಂತಾದ ವ್ಯವಹಾರಗಳನ್ನು ಬಿಡುವುದಿಲ್ಲ. ಆಗ ಅವಕ್ಕೆ ನೈತಿಕತೆ, ಆದರ್ಶ, ಎಡ-ಬಲ ಪಂಥೀಯತೆಗಳು ಅವಲಂಬನೆಯ ಸಂಗತಿಯಾಗುತ್ತವೆ. ದೇವರು, ಪಂಥ ಯಾವುದೂ ಮೂಲ ಸಮಸ್ಯೆಯಲ್ಲ ಮೂಲ ಸಮಸ್ಯೆಯಿರುವುದೇ ಮನುಷ್ಯನಲ್ಲಿ... ಎಂಬುದು ನನ್ನ ಅಭಿಪ್ರಾಯ. ನೀವೇನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.w...
http://kalaravapatri...
http://ekshanadasaty...