ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

April 22, 2008 - 2:26pm — nandakishore_bhat

ಬಿಝಿ.

ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ?
ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.

‹ ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ? ಎರಡು ಹೊಸ ಕನ್ನಡ ಸಮಾನಾರ್ಥಕಗಳು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 742 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 22, 2008 - 4:39pm — girish.rajanal

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

girish.rajanal's picture

ಗಡಿಬಿಡಿ, ಬಿಡುವಿಲ್ಲ ಈ ಥರದ ಅಪ್ಪಟ ಕನ್ನಡ ಅರ್ಥಗಳು.
ನಮ್ಮ ಕಡೆ ಅಂತೂ ನಾವು ಮಾತಾಡುವಾಗ ’ನಾನು ಸ್ವಲ್ಪ ಗಡಿಬಿಡಿಯೊಳಗದೀನಿ ಆಮೇಲೆ ಸಿಗತೀನಿ’ ಅಂತ ಹೇಳತೀವಿ.
ಅಥವಾ ನನಗೀಗ ಬಿಡುವಿಲ್ಲ ಅಂತ ಹೇಳತೀವಿ.
ಇನ್ನೊಂದು ತಿಳಕೋರಿ ಏನಂದ್ರ ’ಆಂಗ್ಲ ಭಾಷೆ ಪದಗಳಿಗಷ್ಟೆ ಒಂದು ಶಬ್ದಕ್ಕೆ ಎರಡು ಅಥವಾ ಹೆಚ್ಚು ಅರ್ಥ ಅದಾವು ಅಂತ ತಿಳಕೊಂಡೀರಿ. ಅದೇಥರ ಕನ್ನಡದಾಗೂ ಅದಾವು’ ಅವುನ್ನ ನೀವು ಎಲ್ಲಿಯೂ ಬಳಸಂಗಿಲ್ಲ ಅಂತ ಕಾಣಿಸುತ್ತ.
ಅಂದಂಗ ’ಕ್ಯಾರೆಟ್’ಗೆ ಕನ್ನಡದಾಗ ಏನಂತೀರಿ..
ನಿಮ್ಮ ಕನ್ನಡ ಶಬ್ದ ಸಂಗ್ರಹ ಜಾಸ್ತಿ ಮಾಡಕೋರಿ.

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 22, 2008 - 5:59pm — mahesha

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

mahesha's picture

ತರ; ಥರ ಅಲ್ಲ

ಥರ ಅಂದ್ರೆ ನಡುಗೋದು
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 22, 2008 - 5:35pm — rameshbalaganchi

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

rameshbalaganchi's picture

"ಬಿಡುವಿಲ್ಲದ"- ಅಂದ್ರೆ ಹೇಗೆ?

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 23, 2008 - 10:16am — Sunil Jayaprakash

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

Sunil Jayaprakash's picture

Busy -> ಬಿಸಿ ಅಂತ ಇಟ್ಕೊಳಿ Eye-wink ನನ್ನ ಗೂಗಲ್ ಚಾಟಿನಲ್ಲಿ ಈ ರೀತಿ ಹಾಕಿಕೊಂಡಿದ್ದಾಗ, ಬೇಗ ತಣ್ಣಗೆ ಮಾಡ್ಕೊಳಪ್ಪಾ ಅನ್ನೋ ಮೆಸೇಜುಗಳನ್ನ ಗೆಳೆಯರು ಕಳಿಸ್ತಾ ಇರ್ತಾರೆ.

ಹೇಗಿದ್ದರೂ, ನಾವು Busy ಆಗಿದ್ದಾಗ ಮಂಡೆ(ತಲೆ) ಬಿಸಿಯಾಗಿರತ್ತೆ, ಹಾಗಾಗಿ Busyಯ ತದ್ಭವ 'ಬಿಸಿ' ಬಳಸಿದರೆ ತಪ್ಪೇನು ಇಲ್ಲ ಅಂತ ನನ್ನನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 23, 2008 - 10:43am — mahesha

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

mahesha's picture

ಬಿಜಿ ಅಶ್ಟೇ

ಬಿಡುವಿಲ್ಲ.. ಎಂಬುದು ಇನ್ನೋ ಚನ್ನು

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 23, 2008 - 10:56am — mahesha

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

mahesha's picture

ಬಿಜಿ ಅಶ್ಟೇ

ಬಿಡುವಿಲ್ಲ.. ಎಂಬುದು ಇನ್ನೋ ಚನ್ನು

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2008 - 7:41pm — nandakishore_bhat

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

nandakishore_bhat's picture

ಸುನಿಲ.
’ಬಿಸಿ’ ಅನ್ನುವುದು ಇಷ್ಟವಾಯಿತು. ’ಬಿಜಿ’ ಕೂಡ ಪರವಾಗಿಲ್ಲ Smiling

"ಬಿಡುವಿಲ್ಲ" ಅನ್ನುವುದು busy ಇದರಷ್ಟು ಚುಟುಕಾಗಿಲ್ಲ, ಅಲ್ಲದೇ ಅದು ಒಂದೊರೆ (single word) ಅಲ್ಲ. ’ಅಬಿಡುವು’ ಅಂತ ಇದ್ದಿದ್ರೆ ಚೆನ್ನಾಗಿತ್ತೇನೋ Smiling ಇದನ್ನು ಇನ್ನೊಂದು ಸರಣಿಯಲ್ಲಿ ಚರ್ಚಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2008 - 7:54pm — rameshbalaganchi

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

rameshbalaganchi's picture

"ಅಬಿಡುವು"
ಇದು ತೀರಾ ಕೆಟ್ಟ alternative. ಇದಕ್ಕಿಂತ ತತ್ಸಮ ಪದ ಬಳಸಿ 'ನಿರತ' ಅಥವಾ 'ವ್ಯಸ್ತ' ಅನ್ನುವುವೇ ವಾಸಿ ಅನ್ನಿಸುತ್ತದೆ.
ಕನ್ನಡ ಪದಗಳನ್ನು ಸ್ವಂತಿಕೆ ಮತ್ತು ಸ್ವತಂತ್ರವಾಗಿ ಬೆಳಿಸಹೊರಟವರು ಇಂಥ ಅತ್ತ ಸಂಸ್ಕೃತವೂ ಅಲ್ಲ ಇತ್ತ ಕನ್ನಡವೂ ಅಲ್ಲದ ಎಡಬಿಡಂಗಿ ಪದಗಳನ್ನು ಕಟ್ಟಬಾರದಲ್ಲವೆ!!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2008 - 9:00pm — mahesha

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

mahesha's picture

ಹವುದು ಅಬಿಡುವು ಅಸರಿ ಮತ್ತು ಅಕನ್ನಡ ಅಪಪ್ರಯೋಗ Smiling

ಸರ್‍ ಪಾಪಾ ನನ್ ಹಾಗೆ ಚಿಕ್ಕ ಹುಡುಗ.. ತಿಳಿ ಹೇಳಿ.. ಸರಿಪಡಿಸಿದಕ್ಕೆ ನನ್ನಿ...

ನಿರತ ಒಪ್ಪಬೋದು.. ವ್ಯಸ್ತ ಸಲ್ಲದು...!ವ್ಯ ಕನ್ನಡ ಪ್ರಯೋಗವಲ್ಲ.. ಬರೀ ಸಂಸ್ಕೃತದ್ದು.. ಆದ್ರೂ ಇವೆರಡು ಕನ್ನಡಿಗರಿಗೆ ಗ್ರಾಹ್ಯದುರ್ಗಮ ಯಥಾಪ್ರಕಾರ ಸಂಸ್ಕೃತಪದಗಳ ಕ್ಲಿಷ್ಟಸ್ವಭಾವದಿಂದ Smiling ( ನನಗೆ ನಿಮಗೆ ಬಿಡಿ.. ಸಂಸ್ಕೃತ ಕಲಿತು ತಲೆಬಲಿತಿದೆ ಎಂಬ ಭ್ರಾಂತರು Smiling )

ರತ ಅಂದ್ರೂ ಬಿಜಿ, ನಿರತ ಅಲ್ಲಿ ’ನಿ’ ರತದ ಅರ್ಥ ಹೇಗೆ ಬದಲಿಸಿತು? ಯಾರಿಗೆ ಗೊತ್ತು.. ಉಪಸರ್ಗದ ಎಡವಟ್ಟು ಸಂಸ್ಕೃತಕ್ಕೆ ಭಾದೆ.
ಇಲ್ಲ ವ್ಯಸ್ತ = ವಿ + ಅಸ್ತ? ನನಗೆ ಉಪಸರ್ಗ ಇರೋ ಒರೆಗಳೇ ಹಿಡಿಸಲ್ಲ.. ಎಡವಟ್ಟೋ ಎಡವಟ್ಟು... ಆಹಾರಪ್ರಹಾರಪ್ರತ್ಯಾಹಾರ ಯಪ್ಪ!

ಬಿಜಿ ಇದೇ ಎಲ್ಲದಕ್ಕಿಂತ ಮೇಲು.. ನನಗೆ ನಾನು ’ಬಿಸಿ’(I am hot) ಅಂತ ಹೇಳಿಕೊಳ್ಳಕ್ಕೆ ಕುಶಿ ಆದ್ರೆ, ಸೊಲ್ಪ ಮುಜುಗರ! Smiling

ಬಿಡುವಿಲ್ಲ.. ಅನ್ನೋದೇ ಅಪಟ್ಟ ಕನ್ನಡ ಒರೆ. ಅದು ಪ್ರೀ ಇಲ್ಲ ಅನ್ನೊದಕ್ಕೆ ಸಮವಾಗಿ ಬಿಜಿ ಎಂದೇ ಅರ್ತಕೊಡುವುದು.....

ನಾನು ಬಿಡುವಿಲ್ಲ ಎಂದು ಹೇಳಕ್ಕೆ ಇಶ್ಟಪಡ್ತೀನಿ... ಇದು ಒಂದೇ ಒರೆ ಕೂಡ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2008 - 9:12pm — rameshbalaganchi

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

rameshbalaganchi's picture

"ನನಗೆ ನಿಮಗೆ ಬಿಡಿ.. ಸಂಸ್ಕೃತ ಕಲಿತು ತಲೆಬಲಿತಿದೆ ಎಂಬ ಭ್ರಾಂತರು "
ಆದ್ರೂ ಭಾಳ ಜಾಣ್ರು, ನಿಮ್ಮ ನೆಪ ಮಾಡ್ಕೊಂಡು ನನ್ನ ಸೋಟೆನೂ ತಿವಿದ್ರಿ.
ನೀವು ಗಮನಿಸಿದ್ರೋ ಇಲ್ವೋ ನಾನು ನಿರತ ಮತ್ತು ವ್ಯಸ್ತ ಅನ್ನೋ ಬದಲಿ ಪದಗಳನ್ನು ಕೊಟ್ಟಿದ್ದು ಅಬಿಡುವು ಅನ್ನುವುದು ಸರಿಯಲ್ಲ ಅನ್ನುವ ಸಂದರ್ಭದಲ್ಲಿ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2008 - 8:37pm — ವೈಭವ

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

ವೈಭವ's picture

'ಅ' 'ಅನ್' ಬಳಸಿ ನಿಶೇದಾರ್ತಕ ಪದ ಮಾಡುವುದು ಇಂಡೊ-ಯೂರೋಪಿಯನ್ ನುಡಿಗಳ ಗುಣ. ಕನ್ನಡಕ್ಕೆ ಹೊಂದುವುದಿಲ್ಲ.
ಸಕ್ಕದ :
ಧರ್ಮ x ಅಧರ್ಮ, ಸುರ x ಅಸುರ

ಇಂಗಲೀಸ್:
able x unable, interesting x unintereseting

ದಯವಿಟ್ಟು 'ಅಬಿಡುವು' ಎಂಬ ಪದಗಳನ್ನು ಮಾಡಬೇಡಿ. Sad
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:58pm — kannadakanda

ಉ: Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

kannadakanda's picture

ತೊಡಕುಳ್ಳ ಅಥವಾ ತೊಡಗಿದ ಎಂದರೆ ಸರಿ ಹೋಗಬಹುದೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
  • ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ
  • ನನ್ನ ತಮ್ಮ.
  • ಕನ್ನಡದಲ್ಲಿ ನಞ್ ತತ್ಪುರುಷ?
  • ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ?
Syndicate content

ಲೇಖಕರು

nandakishore_bhat's picture

ಪರಿಚಯ

ಊರು ಉಡುಪಿ. ಪ್ರಸ್ತುತ ಮೈಸೂರಿನಲ್ಲಿ ತಂತ್ರಾಂಶತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ. ಸಾಹಿತ್ಯ, ಭಾಷೆ, ಸಂಗೀತಗಳಲ್ಲಿ ಆಸಕ್ತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
    July 4, 2008 - 12:16pm
  • mahesha
    ಉ: ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
    July 4, 2008 - 12:16pm
  • mahesha
    ಉ: ದನಿಯಱಿವು
    July 4, 2008 - 12:13pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:11pm
  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator