ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
ಬೇಕೇ ಬೇಕು. ಈ ಎರಡು ಅಕ್ಷರಗಳು ದ್ರಾವಿಡ ಭಾಷೆಗೆ ವಿಶೇಷವಾದ ಅಕ್ಷರಗಳು. ಇವುಗಳನ್ನು ಕೇವಲ ಸಂಕೇತಗಳನ್ನಾಗಿ ಬೞಸದೆ ’ರ’ ಮತ್ತು ’ಱ’ ನಡುವಿನ ಉಚ್ಚಾರ ವ್ಯತ್ಯಾಸ ಹಾಗೆಯೆ ’ಳ’ ಮತ್ತು ’ೞ’ ನಡುವಿನ ಉಚ್ಚಾರ ವ್ಯತ್ಯಾಸಗಳು ಕೂಡ ಮುಖ್ಯ. ಸಿರಿಗನ್ನಡಂ ಬಾಳ್ಗೆ ಎಂದರೆ ಸಿರಿಗನ್ನಡ ಕತ್ತಿಗೆ ಅಂದರೆ ಸಿರಿಗನ್ನಡ ಕತ್ತಿಗೆ ಬಲಿಯಾಗಲಿ ಎಂದೂ ಆಗುತ್ತದೆ. ಆದರೆ ಸಿರಿಗನ್ನಡಂ ಬಾೞ್ಗೆ ಎಂದರೆ ಸಿರಿಗನ್ನಡ ಬಾೞಲಿ ಅರ್ಥಾತ್ ಸಿರಿಗನ್ನಡ ಬದುಕಲಿ ಎಂದಾಗುತ್ತದೆ.

- Login or register to post comments
- 423 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
ಹೌದು, ಬೇಕು. ಆದರೆ ನಮ್ಮ ಕನ್ನಡದ ಸೊಗಡಿಗೆ ಬೇಕಾದ ಅಂಶಗಳನ್ನು ಉಳಿಸಿಕೊಳ್ಳುವುದರಲ್ಲಿ ನಾವು ಹೆಚ್ಚು ಹುರುಪು ತೋರಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
ಹುವುದು ಕನ್ನಡಕ್ಕೆ ಬೇಕೇ ಬೇಕು...
ಅರಿ = ರುಬ್ಬು
ಅರಿದು = ರುಬ್ಬಿ
ಅಱಿ = ತಿಳಿ
ಅಱಿತು = ತಿಳಿದು ( ನೋಡಿ ಇಲ್ಲ ’ತು’ ಬರಲು ಱ ಓಸುಗರ/ಕಾರಣ )
ಹಾಗೆ ಕುೞಿತು, ಕೊೞೆತು, ಮಱೆತು, ಬೆಱೆತು, ಕೞಿತು
ಕುಱಿ = ಗುಱಿ ಮಾಡು
ಕುರಿ = ಶೀಪ್
ಮತ್ತೆ ಹಲವು ಇಂಗ್ಲೀಸ್ ಒರೆಗಳು
ಱೋಡ್ ( ಇಲ್ಲ ನಾವು ಱ ಎಂದು ಸರಿಯಾಗಿ ಉಲಿಯುವೆವು )
=====================================
ಮಾಯ್ಸ!
ಉ: ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
ಈ ಕುರಿ (sheep) ಕೂಡ ಕುಱಿಯೇ.