ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
ದ್ರಾವಿಡ ಎಂದರೆ ತಮಿೞ್. ತಮಿೞಿಗೆ ಸಂಸ್ಕೃತದಲ್ಲಿ ದ್ರಮಿಡ ಎಂದರು. ಅದೇ ದ್ರವಿಡ ಆಯ್ತು. ದ್ರವಿಡ ಸಂಬಂಧಿ ದ್ರಾವಿಡ ಅಷ್ಟೇ. ಕನ್ನಡಕ್ಕೆ ಸಂಸ್ಕೃತದಲ್ಲಿ ಕರ್ಣಾಟ ಅಂದರು. ಕರ್ಣಾಟಕ (ಗಮನಿಸಿ ಕರ್ನಾಟಕ ಅಲ್ಲ. ಅದು ಸಂಸ್ಕೃತದ ಪ್ರಕಾರ ತಪ್ಪು) ಕನ್ನಡ ಮಾತಾಡುವವರ ಪ್ರದೇಶ. ತೆಲುಗಿಗೆ ಆಂಧ್ರ. ಕೇರಳ ಅಥವಾ ಕೇರಲ ಅಂದರೆ ನಾರಿಕೇರ(ಲ) (ರಲಯೋರಭೇದ:)ಅಂದರೆ ತೆಂಗಿನಕಾಯಿ ಹೆಚ್ಚು ಬೆಳೆಯುವ ಪ್ರದೇಶ. ಆದ್ದರಿಂದ ಅದು ಕೇರಳ. ಈ ವಿಚಾರಕ್ಕೆ ಯಾರದ್ದಾದರೂ ಆಕ್ಷೇಪವಿದ್ದರೆ kannadamaga@gmail.com ಗೆ ತಮ್ಮ ವಿಚಾರವನ್ನು ತಿಳಿಸಿ.

- Login or register to post comments
- 358 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
ಹವುದು.
ನೀವ್ ಅರುಹಿದ್ದು ಸರಿಯೇ.
ದ್ರಾವಿಡ ಎಂದರೆ ಬಱೀ ತಮಿೞ್.
ಆದರೆ..
೧)ದ್ರಾವಿಡ-ನುಡಿ-ಕೂಟಕ್ಕೆ ಒಂದು ಹೆಸರು ಬೇಕು.. ದ್ರಾವಿಡ-ನುಡಿಗಳೆಂದು ಹೆಸರು ಮಡಗಿದಾಗ ನಮ್ಮ ಕನ್ನಡಬಲ್ಲರು ಸುಮ್ಮನ್ನಿದ್ದುದೇ ಆದ ತೊಂದರೆ ಎಮಗೆ. ಈ ನುಡಿಕೂಟಕ್ಕೊಂದು ತಕ್ಕ ಹೆಸರು ಬೇಕು.
೨)ತಮಿೞರ್, ಕನ್ನಡರ್, ತೆಲುಗುರ್/ತೆನುಗರ್, ಮಳಯಾಳಿಗಳ್, ಹೀಗೆ ಮುಂತಾದವರು ಮೂಲ ಒಂದೇ ಜನಾಂಗದವರು ಎಂಬುದು ಅಯ್ಬಿಲ್ಲದ ಸಂಗತಿ..
ಹೇಗೆ ಮೂಲ-ದ್ರಾವಿಡ ನುಡಿ ಕವಲಾಯ್ತು ಎಂಬುದಕ್ಕೆ ನಾನು ಹಿಂದೆ ಬರೆದ ಈ ಬರಹವನ್ನು ನೋಡಿ.
ಆ ಮೂಲ ಜನಾಂಗಕ್ಕೂ ಒಂದು ಹೆಸರು ಬೇಕು....
ಈಗ ದ್ರಾವಿಡ ಅಂದ್ರೆ ಇಡೀ ದ್ರಾವಿಡ-ನುಡಿ-ಮಂದಿ-ಕೂಟ.. ತಮಿೞ್ ಅಂದ್ರೆ ಬರೀ ತಮಿೞ್ ಎಂದು ಬೞಕೆಯಲ್ಲಿದೆ.
--------------
ಇನ್ನು ಕರ್ನಾಟಕ/ಕರ್ಣಾಟಕದ ಬಗ್ಗೆ.. ನಮಗೆ ದೊರೆತಿರುವ ಬಲು ಹೞೆಯ ಕನ್ನಡ ಬರೆವಣಿಗೆ ಕವಿರಾಜಮಾರ್ಗ. ಅದಱಲ್ಲಿ ತಿಳಿಯಾಗಿ ’ಕನ್ನಡ’ ಎಂಬ ಒರೆಯ ಬೞಕೆ ನೆಲ/ದೇಶ/ನಾಡು, ನುಡಿ, ನುಡಿಗರು, ನಡೆ ಎಲ್ಲದಕ್ಕೂ ಸೇರಿಸಿ ಬೞಸಿದ್ದಾರೆ.
ಅಂದರೆ... ಕನ್ನಡ = ಕನ್ನಡ ದೇಶ, ಕನ್ನಡ ನುಡಿ, ಕನ್ನಡಕ್ಕೆ ನೆಂಟಾದುದು
ಕನ್ನಡನ್ = ಕನ್ನಡ ನುಡಿಗಾರ, ಕನ್ನಡ ನುಡಿಯಾಡುವವ
ಕನ್ನಡರ್ = ಕನ್ನಡಿಗರು
ಆದುದರಿಂದ, ನಾವು ಕನ್ನಡಿಗರು ನಮ್ಮ ನೆಲ ಹೆಸರು ’ಕನ್ನಡ’ ಎಂದೇ ಇಟ್ಟುಕೊಂಡು, ಬೞಸಿಕೊಂಡು, ಹೋಗುವುದು ಲೇಸು.. ಈ ಕರ್ಣಾಟಕ/ಕರ್ನಾಟಕ ಎಱಡೂ ಸಕ್ಕದದ ಎರವಲು.
=====================================
ಮಾಯ್ಸ!
ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
ಎಱಡು ಅಲ್ಲ ಸ್ವಾಮಿ. ಎರಡು. ’ರ್’ ಮತ್ತು ’ಱ್’ ನಮ್ಮ ಮನಸ್ಸಿಗೆ ಬಂದ ಹಾಗೆ ಬೞಸಬಹುದೆಂದು ಭಾವಿಸಬೇಡಿ ಸ್ವಾಮಿ.
ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
ನಾನು ಎಱಡು ಎಂದು ಉಚ್ಚರಿಸಬಲ್ಲೆ
[ ಕನ್ನಡ ಕಂದ ದಾಟಿ ]
=====================================
ಮಾಯ್ಸ!
ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
ಉಚ್ಚರಿಸಲಾಱಿರೆಂದಲ್ಲ. ಆದರೆ ಆ ಶಬ್ದ ಎರಡು ಎಂದಷ್ಟೆ. ಹಾಗೆಯೇ ಬರ(ಕ್ಷಾಮ) ಬರವಲ್ಲ. ಅದು ಬಱ.