Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

April 26, 2008 - 4:40am — kannadakanda

ಹೞಗನ್ನಡದಲ್ಲಿ ಬೞಸುವ ರ, ಱ, ಳ, ೞ ಇವುಗಳಲ್ಲಿ ಉಚ್ಚಾರವ್ಯತ್ಯಾಸ ಬಹಳಷ್ಟು ಕನ್ನಡಿಗರಿಗೆ ತಿಳಿದಿಲ್ಲ. ಆದ್ದರಿಂದ ಪಕ್ಕದ ತಮಿೞರು ಹಾಗೂ ಮಲಯಾಳಿಗಳು ಈ ಎರಡು ಅಕ್ಷರಗಳು ತಮ್ಮ ಭಾಷೆಯಲ್ಲಿ ಮಾತ್ರ ಇವೆಯೆಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಅಚ್ಚಕನ್ನಡಿಗನಾದ ನಾನು ಈ ಅಕ್ಷರಗಳ ನಡುವಿನ ವ್ಯತ್ಯಾಸ ತಿಳಿಸುತ್ತೇನೆ.

ರ: ಮಾಮೂಲಿನಂತೆ ದಂತಮೂಲ(ಹಲ್ಲಿನ ಬುಡ)ದಲ್ಲಿ ಹೊರಡುವ ವ್ಯಂಜನ. ಇದು ತಾಡಿತ. ಅಂದರೆ ನಾಲಿಗೆ ದಂತಮೂಲವನ್ನು ಹೊಡೆಯುತ್ತದೆ.

ಱ: ಇದು ದಂತಮೂಲೀಯ ಕಂಪಿತ. ಅಂದರೆ ಈ ಅಕ್ಷರ ’ರ’ ದ ಉಚ್ಚಾರಕ್ಕಿಂತ ಸ್ವಲ್ಪ ಕೆೞಗೆ ಇದ್ದು ಉಚ್ಚರಿಸುವಾಗ ನಾಲಿಗೆ ಕಂಪಿಸಬೇಕು. ಉದಾಹರೆಣೆಗೆ ಕನ್ನಡಿಗರು ಒಬ್ಬ ವ್ಯಕ್ತಿ ತೀರಾ ಕಪ್ಪಗಿದ್ದಾನೆಂದು ಹೇೞುವಾಗ ’ಆತ ಕಱಿಯ’ ಎಂದು ಸರಿಯಾಗಿ ನಾಲಿಗೆ ಕಂಪಿಸಿ ಉಚ್ಚರಿಸುತ್ತಾರೆ. ಹಾಗೆಯೇ ’ಬಱಿ ತಲೆಹಱಟೆ’ ಎನ್ನುವಾಗ ಕೂಡ ನೀವು ಗಮನಿಸಬಹುದು.

ಳ: ಮಾಮೂಲಿನಂತೆ ಮೂರ್ಧನ್ಯವಾಗಿದ್ದು ಟ ಠ ಡ ಢ ಣ ಉಚ್ಚರಿಸುವ ಸ್ಥಳದಲ್ಲೇ ಉಚ್ಚರಿಸುತ್ತೇವೆ. ಳ ಪ್ರತಿವೇಷ್ಟಿತ ಅಂದರೆ ನಾಲಿಗೆ ಮೇಲ್ಮುಖವಾಗಿ ಸುರುೞಿಗೊಳ್ಳುತ್ತದೆ.
ೞ: ಇದು ತಾಲವ್ಯವಾಗಿದ್ದು ಚ ಛ ಜ ಝ ಞ ಉಚ್ಚರಿಸುವ ಸ್ಥಳದಲ್ಲೇ ಉಚ್ಚರಿಸಲ್ಪಡುತ್ತದೆ. ಇದು ಈಷತ್ಪ್ರತಿವೇಷ್ಟಿತ ಅಂದರೆ ’ಳ’ ಕ್ಕಿಂತ ’ೞ’ ಉಚ್ಚರಿಸುವಾಗ ತುಸುವೇ ನಾಲಿಗೆ ಸುರುೞಿಗೊಳ್ಳುತ್ತದೆ. ಇದನ್ನು ಆಕ್ಷೇಪಿಸುವುದು ಅಥವಾ ಹೆಚ್ಚಿನ ವಿಚಾರವನ್ನು ತಿಳಿಸುವುದಾದರೆ kannadamaga@gmail.com ಗೆ ದಯವಿಟ್ಟು ಪತ್ರ ಬರೆಯಿರಿ.

‹ ಕನ್ನಡದಲ್ಲಿ ನಞ್ ತತ್ಪುರುಷ? `ಓವಿ ' ಪದದ ಅರ್ಥವೇನು? ›
  • ವ್ಯಾಕರಣ
Ornamental seperator
  • Login or register to post comments
  • 315 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 26, 2008 - 10:17am — hamsanandi

ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

hamsanandi's picture

ಕನ್ನಡಕಂದರೆ,

>>>ತಮಿೞರು ಹಾಗೂ ಮಲಯಾಳಿಗಳು ಈ ಎರಡು ಅಕ್ಷರಗಳು ತಮ್ಮ ಭಾಷೆಯಲ್ಲಿ ಮಾತ್ರ ಇವೆಯೆಂದು ಬೆನ್ನು ತಟ್ಟಿಕೊಳ್ಳುತ್ತಾರೆ.

ಈ ಅಕ್ಷರಗಳು ಇರುವುದಾಗಲೀ, ಇರದೇ ಇರುವುದಾಗಲಿ, ಯಾವುದೇ ನುಡಿಯನ್ನು ಹಿರಿದು ಅಥವಾ ಕಿರಿದಿ ಮಾಡುವುದಿಲ್ಲ. ಅವರ ಮಾತಿಗೆ ಆ ಸೊಲ್ಲು ಬೇಕಾದರೆ ಇಟ್ಟುಕೊಳ್ಳಲಿ. ಸಂತೋಷ. ಅದರಲ್ಲಿ ಬೆನ್ನು ತಟ್ಟಿಕೊಳ್ಳುವ ಅಂಶ ಏನಿದೆ? ಅಲ್ಲವೇ?

>>>ಇದನ್ನು ಆಕ್ಷೇಪಿಸುವುದು ಅಥವಾ ಹೆಚ್ಚಿನ ವಿಚಾರವನ್ನು ತಿಳಿಸುವುದಾದರೆ

ಇದು ಆಕ್ಷೇಪಣೆಯೇ? ಗೊತ್ತಿಲ್ಲ. ಆದರೆ, ಇಂದು ನಾವು ಕನ್ನಡದಲ್ಲಿ ಆಡುವ ಯಾವ ಮಾತಿನಲ್ಲೂ ರ ಮತ್ತು ಱ ಗಳ ನಡುವೆ, ಹಾಗೇ, ಳ ಮತ್ತು ೞ ಗಳ ನಡುವೆ ವ್ಯತ್ಯಾಸ ಕಂಡುಬರದು ಅನ್ನುವುದು ನನ್ನ ನಂಬುಗೆ. ಇದು ಈ ಅಕ್ಷರಗಳ ಮೂಲ ಉಚ್ಚಾರಣೆಯನ್ನು ನಾನು ಅರಿತಿರುವುದರಿಂದ (ನಾನು ತಮಿಳನ್ನು, ಕ್ಷಮಿಸಿ, ತಮಿೞನ್ನು ಚೆನ್ನಾಗಿಯೇ ಮಾತಾಡಬಲ್ಲೆ) ಹೇಳುವ ಮಾತು. ಯಾವ ಕನ್ನಡಿಗನೂ ಕೆಳಗೆ ಅನ್ನುವುದನ್ನು ಕೆೞಗೆ ಎಂದು ಹೇಳುವುದನ್ನು ಇಲ್ಲಿಯವರೆಗೂ ನಾನು ಕೇಳಿಲ್ಲ!

ತಮಿಳುನಾಡಿನಲ್ಲೇ ಕೆಲವು ಭಾಗಗಳಲ್ಲಿ ೞ ಮರೆಯಾಗಿ, ಅದರ ಎಡೆಯಲ್ಲಿ ಳ ಉಪಯೋಗಿಸುವ ರೂಢಿಯಿದೆ (ಉದಾಹರಣೆಗೆ ವಾೞಪೞಮ್ ಬದಲು ವಾಳಪಳಂ).

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • Email this ಪ್ರತಿಕ್ರಿಯೆ
April 26, 2008 - 11:56am — mahesha

ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

mahesha's picture

ಹಂಸಾನಂದಿಗಳ ಮಾತಿಗ ನನ್ನ ಪೂರ್ಣ ಒಪ್ಪಿಗೆ ಇದೆ.

ಕನ್ನಡದ ಕಂದ ನಿಮ್ಮ ಕನ್ನಡದ ಕುರಿತ ಹುರುಪಿಗೆ ಮೆಚ್ಚುಗೆ ಇದೆ....

ಆದ್ರೆ ಕನ್ನಡದ ಸೊಗಡು ಇರುವುದು ಱ ಮತ್ತು ೞ ಗಳಿಂದ ಅಲ್ಲ...

ಕನ್ನಡದ ದಿಟವಾಗದ ಸೊಬಗು ಅರಿಯಲು ಶಂಕರ ಬಟ್ಟರ ಹೊತ್ತಗೆಗಳನ್ನು ಓದಿ......

ಒಂದು ಮಾದರಿ ಅಂತ ಈ ಎಳೆ
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 26, 2008 - 11:35pm — ವೈಭವ

ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

ವೈಭವ's picture

ಮಾಯ್ಸ, ಹಂಸಾನಂದಿಗಳೆ,
ಶಂಕರಬಟ್ಟರು ಇದನ್ನೇ ಒಂದು ಕಡೆ ಹೇಳಿದ್ದಾರೆ. ಬರ್ತ ಬರ್ತ ಕನ್ನಡಿಗರು 'ಳ' -'ೞ', 'ರ'-'ಱ' ಇವುಗಳ ಬೇರೆತನವನ್ನು ಮಾತಿನಲ್ಲಿ ತೋರಿಸುತ್ತಿಲ್ಲವಾದರಿಂದ ಅದನ್ನು ಬರಹದಲ್ಲು ತೋರಿಸುವುದನ್ನು ನಿಲ್ಲಿಸಲಾಯಿತು.
ಆದರೆ ಕನ್ನಡನಾಡಿನ ಎಲ್ಲ ಬಾಗಗಳಲ್ಲೂ ಈ ಮಾರ್ಪು ಆಯಿತೆ? ಅನ್ನುವುದು ನನ್ನ ಅಯ್ಬು ಅತವ ಕೆಲವು ಕಡೆ ಈ ಮಾರ್ಪು ಆಗಿ ಅದನ್ನೇ ಎಲ್ಲರೂ ಕುರುಡಾಗಿ ಪಾಲಿಸುತ್ತಾ ಬಂದರೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
April 28, 2008 - 12:04am — mahesha

ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

mahesha's picture

ನನ್ನಂತೆ ನಾವು ತೆಂಕಣಗನ್ನಡಿಗರಲ್ಲಿ ಕೆಲವರಿಗೆ ಳ/ೞ ಮತ್ತು ರ/ಱ ಬೇರೆಬೇರೆಯಾಗುಲಿಯಲು ನೇಚುರಲ್ಲಾಗಿ ಬರುವುದು..

ರಾಘವಾಂಕ, ಹರಿಹರರು ಮೊದಲು ಱ=ರ ಮತ್ತು ೞ=ಳ ಎಂದು ಎಣಿಸಿದ್ದೆಂದು ಓದಿದ್ದೀನಿ.. ಇವರು ತೆಲುಗು ಮೂಲದವರಂತೆ. ತೆಲುಗಲ್ಲಿ ಬಡಗಣ ನುಡಿಗಳ ನೆರಳಿಂದ ಈ ಬೇರತನ ಕನ್ನಡಕ್ಕಿಂತ ಹಿಂದೇ ಹೊರಟು ಹೋಗಿತ್ತಂತೆ.....

ಈಗ ಇವನ್ನು ಮರಳಿ ಬಳಕೆಗೆ ತಂದರೆ, ಹೆಚ್ಚು ಬಾಳಿಗೆ ಅಂತ ನನಗೆ ಅನ್ನಿಸುವುದಿಲ್ಲ.. ಆದ್ರೆ ಬಳಸುವವರಿಗೆ ಅಡ್ಡಿ ಇರಬಾರದು. ಅವರ ವಿಶ್!
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
April 28, 2008 - 12:17am — mahesha

ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

mahesha's picture

ಕನ್ನಡದ ಕಂದ. ನಿಮ್ಮ ಬರಹವನ್ನು ನಾನು ಸರಿಯಾಗಿ ಓದಿಲ್ಲ ಎಂದು ಅನ್ನಿಸ್ತದೆ..

ನಿಮ್ಮಂತೆ ಹೆಚ್ಚು ಮಂದಿ ರ/ಱ ಮತ್ತು ೞ/ಳ ಬೇರೆ ಬೇರೆಯಾಗಿ ಉಲಿಯ ಬಲ್ಲರು ಎಂದು ತೀರ್‍ ಆದರೆ, ಅವನ್ನು ಮರಳಿ ಸೇರಿಸಲೇಬೇಕು.

ನಿಮ್ಮ ಮಾದರಿಗಳು/ಉದಾಹರಣೆಗಳು ಹಿಡಿಸಿದವು..

"ಬಱೀ ಹಱಟೆ" ಹವುದಲ್ಲ ನಾವು ಸರಿಯಾಗೇ ’ಱ’ ಉಲೀತೀವಲ್ಲ ಎಂದು ಅನ್ನಿಸಿತು..

ನಿಮಗೊಂದು ಹೊಮ್..ವರ್ಕ Smiling ನನಗೆ ಎಲ್ಲಿ ರ/ಱ ಇದೆ, ಎಲ್ಲಿ ಳ/ೞ ಇದೆ ಎಂದು ನೆನೆಪಿಟ್ಟುಕೊಳ್ಳಲು ಎಡಱು( ಸರಿಯಾ? )...

ಅದಕ್ಕೇ ಏನಾರ ಱೂಲು ಕಂಡು ಹಿಡಿಯುವಿರಾ?

ನನ್ನದೊಂದು ಱೂಲು.. ಮೊದಲನೆಯ ಱೂಲು
ಅರಿತು ಅಲ್ಲ ಅಱಿತು ( ತು ಇಂದ ಹೇಳಬೋದು )ಹಾಗೆ ಬಱೆತು, ಕುೞಿತು, ಕೞಿತು, ಕೊೞೆತು, ಹೞತು, ನಱೆತು, ....
ಹಾಗೆ
ಕುೞ್ತು/ಕುತ್ತು, ಹೆಱ್ತು/ಹೆತ್ತು, ಕೀೞ್ತು/ಕಿತ್ತು, ಉೞ್ತು/ಉತ್ತು ಸರಿಯಾ?

ಆದೇ
ಏಳ್ದು/ಎದ್ದು, ಬೀಳ್ದು/ಬಿದ್ದು,

ರ ಇಂದ ಮೊದಲಗಾಗುವುದು
ಱೆಕ್ಕೆ, ಱೊಡು, ಱೊಕ್ಕ, ಱೊಟ್ಟಿ....

ಹಾಗೆ ಮೂಗಿನ ಯರಲವ( ನಾಸಿಕ ಯರಲವ)ಗಳ ಬಗ್ಗೆ ತುಸು ಬರೆಯುರಿ..

ಕಲೆತು.. ಇಲ್ಲೆ ಲ ನಾಸಿಕ ಅಲ್ವ! ಕೊಲ್ದು
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!
  • ಇಂದ್ರೀಯಗಳಿಗೆ ಮನವಿ
  • ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ
  • ಅವನಿವನುವನ್
  • ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator