~
ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ನಮ್ಮ ಕನ್ನಡದಲ್ಲಿ ನೋಡಿ ಚಿಕ್ಕಪುಟ್ಟ ಅಂಶಗಳಿಗೆ ಸರಳವಾದ ಮತ್ತು ಹೆಚ್ಚು ಅರ್ತವತ್ತಾದ ಒರೆಗಳಿವೆ. ಈ ಎತ್ತು/ಗೂಳಿ ಯ ಬೆನ್ನ ಮೇಲೆ ಉಬ್ಬಿರುವುದನ್ನ ನಾವು ನೋಡಿರುತ್ತೇವೆ. ಹಸುಗಳಿಗೆ ಇದು ಇರುವುದಿಲ್ಲ.
ಹಿಣಿ = ಎತ್ತಿನ ಹೆಗಲು
ಹಿಣಿನಿ=ಹಿಳಿಲು=ಹಿಳಿಲ್=ಹಿಳಲು=ಹಿಣಿಲ್ = ಗೂಳಿಯ ಹಿಣಿಲು (ವೃಷಾಂಕ), ಇದಕ್ಕೆ ಇರಬಹುದು ಸಕ್ಕದದಲ್ಲಿ ಎತ್ತನ್ನ 'ವೃಷಭ' ಅನ್ನುವುದು ಅನ್ಸುತ್ತೆ.
ಇದಕ್ಕೆ ನಂಟಾದೆ ಒರೆಗಳಿವೆ
೧) ಹಿಣ್ಟೆ=ಹಿಂಟೆ . ಮಾದರಿ: ಮಣ್ಣ ಹಿಂಟೆ ಎಂಬುದು ಬಳಕೆಯಲ್ಲಿದೆ.
೨) ಹಿಣ್ಡು= ಹಿಂಡು = ಗುಂಪು

- Login or register to post comments
- 839 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ನನ್ನಿ
=====================================
ಮಾಯ್ಸ!
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ಡುಬ್ಬ ಎನ್ನುವ ಪದ ಬಳಕೆಯಲ್ಲಿದೆ,ಅಲ್ವಾ?ಹಿಂಟೆ ಎಂಬ ಪದವಿದೆಯೆ?ಹೆಂಟೆ ಬಳಕೆಯಲ್ಲಿದೆ.
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ನಾವು ಬಳಸುವುದು ’ಡುಬ್ಬ’ ಎನ್ನುವ ಪದ .
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ಇದು ಹೆಚ್ಚು ಬಳಸದ ಕಾರಣ.. ಇಂತಿಷ್ಟೆ ಎಮ್ದು ಹೇಳಲಾಗದು... ಆದರೆ.. ಡುಬ್ಬ ನಾವೆಲ್ಲರೂ ಉಪಯೋಗಿಸೊದು... ಕೆಲವೊಮ್ಮೆ.. ಹೆಗಲು ಅಂತಾನೂ ಕರೀತಾರೆ..(ಅದರೆ ಹೆಗಲಲ್ಲ)
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ರೀ ಹೆಗಡೆ,
ಒಂಟೆ ಹೆಗಲ ಮೇಲಿರುತ್ತಲ್ಲ ಅದಕ್ಕೆ 'ಡುಬ್ಬ' ಅನ್ನೋದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ಒಂಟೆಗೂ ನಮಗೂ ಜಾಸ್ತಿ ಬಳಕೆ ಇಲ್ಲ. ಆದ್ದರಿಂದ ಎತ್ತಿನದನ್ನು ಡುಬ್ಬ ಎನ್ನುತ್ತೇವೆ. ಆದರೆ ಒಂಟೆ ಬಗ್ಗೆ ಮಾತಾಡುವಾಗ ಅದಕ್ಕೂ ಡುಬ್ಬ ಎನ್ನುತ್ತೇವೆ.
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ಕೊಳಂಬೆಯವರ ಅಚ್ಚಗನ್ನಡ ನುಡಿಗಂಟಿನಿಂದ (ಪುಟ ೨೬೧)
ಡುಬರಿ= (ಡುಬ್ಬ,ಡುಬ್ಬು). ಒಂಟೆಯ ಬೆನ್ನ ಮೇಲಣ ಡುಬ್ಬ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ?
ಡುಬ್ಬ